An unconventional News Portal.

PRISON STORIES
  ...

  ಅಮಾಯಕ ಆದಿವಾಸಿ ಸಿದ್ಧ; ಪೊಲೀಸರು ತೋಡಿದ ಗಾಂಜಾ ಖೆಡ್ಡಾಕ್ಕೆ ಬಿದ್ದ ಕತೆ!

  ಚಾಮರಾಜ ನಗರವೆಂದರೆ ಬೆಟ್ಟಕಾಡಿನಿಂದಾವೃತವಾಗಿರುವ ರಾಜ್ಯದ ಗಡಿ ಜಿಲ್ಲೆ. ಜಾನಪದ ಸಂಪತ್ತು ಅಗಾಧವಿದೆ ಇಲ್ಲಿ. ಆದಿವಾಸಿ ಜನಸಮುದಾಯಗಳು ದೊಡ್ಡ ಸಂಖ್ಯೆಯಲ್ಲಿ ಈ ಜಿಲ್ಲೆಯ ಗಿರಿಜನ ಹಾಡಿಗಳಲ್ಲಿದ್ದಾರೆ. ಆದಿವಾಸಿಗಳಷ್ಟೇ ಅಲ್ಲದೆ ಇತರ ಲಕ್ಷಾಂತರ ಜನಸಮೂಹ ನಡೆದುಕೊಳ್ಳುವ ಮಂಟಯ್ಯ,  ಮಲೆಯ ಮಾದಪ್ಪ, ಸಿದ್ದಪ್ಪಾಜಿ, ನೀಲಗಾರ, ಮೊದಲಾದ ಪರಂಪರೆಗಳ ತವರೂರು ಈ ಜಲ್ಲೆ. ಸಿದ್ದ ಇದೇ ಜಿಲ್ಲೆಯ ಗಿರಿಜನ ಹಾಡಿಯೊಂದರ ವ್ಯಕ್ತಿ. ಮದುವೆಯಾಗಿತ್ತು; ಮಕ್ಕಳಿರಲಿಲ್ಲ. ಮದುವೆಯಾಗಿದ್ದು ಎಲ್ಲರನ್ನೂ ಕಳೆದುಕೊಂಡಿದ್ದ ಒಬ್ಬ ಬಡ ಅನಾಥ ಮದ್ಯವಯಸ್ಕಳನ್ನು. ಇವನ ವಯಸ್ಸೂ ಕೂಡ ನಲವತೈದರ ಆಜೂಬಾಜೂ ಇತ್ತು. […]

  February 15, 2018
  ...

  ಪ್ರೀತಿಯಲ್ಲಿ ಇರೋ ಸುಖ ಜೈಲಿಗೆ ತಂದು ಬಿಟ್ಟಿತು; ಹುಡುಗಿಯ ಬದುಕು ಕಸಿಯಿತು

  ಅಲ್ಲಿ ಜನರ ದೊಡ್ಡ ಗುಂಪು ಸೇರಿತ್ತು. ಅದು ಆ ಊರಿನ ಪಂಚಾಯಿತಿ. ಹೆಚ್ಚುಕಮ್ಮಿ ಎಲ್ಲರೂ ಸೇರಿದ್ದರು. ಸಾಮಾನ್ಯವಾಗಿ ಊರಿನ ಪಂಚಾಯಿತಿಗಳಲ್ಲಿ ಅಷ್ಟೊಂದು ಜನ ಸೇರುತ್ತಿರಲಿಲ್ಲ. ಆದರೆ ಇಲ್ಲಿನ ವಿಷಯ ಹಾಗಿತ್ತು. ಅದೊಂದು ಪ್ರೀತಿ ವಿಚಾರ. ಬರೀ ಪ್ರೀತಿಯೆಂದರೂ ಅಷ್ಟೊಂದು ಜನ ಸೇರುತ್ತಿರಲಿಲ್ಲ. ಒಕ್ಕಲಿಗ ಹುಡುಗ ದಲಿತ ಹುಡುಗಿಯನ್ನು ಪ್ರೀತಿಸಿದ್ದು ಇಲ್ಲಿ ಭಾರಿ ದೊಡ್ಡ ವಿಚಾರವಾಗಿ ಬಿಟ್ಟಿತ್ತು. ಅವರ ಪ್ರೀತಿ ಒಂದೆರಡು ದಿನದ್ದಲ್ಲ. ಸುಮಾರು ಒಂದು ವರ್ಷದ್ದು. ಗುಟ್ಟಾಗಿದ್ದ ಪ್ರೀತಿ ಈಗ ರಟ್ಟಾಗಿ ಬಿಟ್ಟಿತ್ತು. ರಟ್ಟಾಗಿದ್ದಕ್ಕೆ ಕಾರಣ ಹುಡುಗ […]

  February 9, 2018
  ...

  ಬದುಕು ಅರಸಲು ಉದ್ಯೋಗ ಸಾಕಿತ್ತು; ನಿರುದ್ಯೋಗ ಕಂಬಿ ಹಿಂದೆ ತಳ್ಳಿತ್ತು…

  ಹಾವೇರಿ ಈಗ ಕರ್ನಾಟಕದ ಒಂದು ಜಿಲ್ಲೆ. ಈ ಮೊದಲು ಅದು ಧಾರವಾಡದ ಜಿಲ್ಲೆಗೆ ಸೇರಿತ್ತು. 1997ರಲ್ಲಿ ಧಾರವಾಡ ದಕ್ಷಿಣದ ಏಳು ತಾಲ್ಲೂಕುಗಳನ್ನು ಪತ್ಯೇಕಿಸಿ, ಹಾವೇರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು. ಜಿಲ್ಲೆಯ ವಿಸ್ತೀರ್ಣ 4,823 ಚದರ ಕಿ,ಮೀ ಇದೆ. 2011ರ ಜನಗಣತಿ ಜನಗಣತಿ ಪ್ರಕಾರ, ಜಿಲ್ಲೆಯ ಒಟ್ಟು  ಜನಸಂಖ್ಯೆ 15,97,668 ಇದೆ. ಇದು 7 ವರ್ಷಗಳಲ್ಲಿ ಇನ್ನೂ ಹೆಚ್ಚಾಗಿದೆ. ಇಲ್ಲಿ ಮಳೆ ಕಡಿಮೆ. ಒಣ ಭೂಮಿಯೇ ಅಧಿಕ. ಮಳೆಯೇ ಕೃಷಿಗೆ ಆಧಾರವಿಲ್ಲಿ. ವರ್ಷಪೂರ್ತಿಯಂತೂ ಇಲ್ಲಿನ ಜನರಿಗೆ ಉದ್ಯೋಗ ಸಿಗುವುದಿಲ್ಲ. ಹಲವರು ಉದ್ಯೋಗ ಅರಸಿಕೊಂಡು ಬೇರೆ ಬೇರೆ ನಗರಗಳಿಗೆ […]

  February 5, 2018
  ...

  ರಿಪಬ್ಲಿಕ್ ಡೇ ತಂದ ಬಿಡುಗಡೆ ಭಾಗ್ಯ: 16 ವರ್ಷಗಳ ನಂತರ ಸಾಮಾನ್ಯ ಬದುಕಿಗೆ ಮರಳಿದ ಜಯಂತ್ ಕತೆ

  ಇವತ್ತು ಗಣರಾಜ್ಯೋತ್ಸವ; ಜಯಂತ್ ಜೈಲಿನಿಂದ ಬಿಡುಗಡೆಯಾಗುವನು. ಜೈಲುವಾಸ ಮುಗಿಯುತ್ತದೆಂದು, ಸರಕಾರ ಮಾಡುವ ಅಕಾಲಿಕ ಬಿಡುಗಡೆಯ ಪಟ್ಟಿಯಲ್ಲಿ  ತನ್ನ ಹೆಸರು ಸೇರಿದೆ ಎಂದು ಅವನಿಗೆ ಗೊತ್ತಾಗಿತ್ತು. ಆದರೂ ಆತಂಕವಿದೆ ಅವನ ಮುಖದಲ್ಲಿ; ಅದಕ್ಕೆ ಕಾರಣಗಳೂ ಇವೆ. ಬಿಡುಗಡೆ ಎಂದು ಬಟ್ಟೆಗಿಟ್ಟೆ ತಯಾರು ಮಾಡಿಕೊಂಡು ನಿಂತಿದ್ದವರಿಗೆ, ಕೊನೆ ಘಳಿಗೆಯಲ್ಲಿ ಅವರ ಬಿಡುಗಡೆಯನ್ನು ರದ್ದುಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಹತಾಶರಾಗಿ ಕುಸಿದು ಕುಳಿತವರನ್ನು ಬಹಳ ಸಾರಿ ಕಣ್ಣಾರೆ ನೋಡಿದ್ದಾನೆ ಜಯಂತ್. ಅದರಿಂದಲೇ ಇಂದು ಆತಂಕ, ಕಸಿವಿಸಿ, ದುಗುಡಗಳಿಂದ ತುಂಬಾ ದಣಿದವನಂತೆ ಕಾಣುತ್ತಾನೆ. […]

  January 26, 2018
  ...

  ಹಣದಾಸೆಗಾಗಿ ದಾರಿ ತಪ್ಪಿ ರಾಯಚೂರಿನ ಜೈಲಿನಲ್ಲಿ ಬಂಧಿಯಾದ ತೆಲಂಗಾಣದ ಯುವಕನ ಕತೆ

  ಹಿಂದಿನ ಆಂಧ್ರಪ್ರದೇಶದ ತೆಲಂಗಾಣ ಭಾಗ (ಈಗ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿದೆ) ತೀರಾ ಹಿಂದುಳಿದ ಪ್ರದೇಶ. ಕೃಷಿ, ಕೈಗಾರಿಕೆ, ಬೆಳವಣಿಗೆ ಇಲ್ಲ. ಇಲ್ಲಿ ಭೂಹೀನ ರೈತರೇ ಹೆಚ್ಚು. ಕರಾವಳಿ ಆಂಧ್ರ ಹಾಗೂ ರಾಯಲಸೀಮೆ ಆಂಧ್ರಕ್ಕೆ ಹೋಲಿಸಿದರೆ ತೆಲಂಗಾಣ ವಿಚಾರದಲ್ಲಿ ಅತೀ ಹಿಂದುಳಿದಿರುವಿಕೆ ಎದ್ದು ಕಾಣುತ್ತಿತ್ತು. ಈ ಭಾಗದ ಬಡಗಿ ಕುಟುಂಬದ ಹುಡುಗ ರಘು. ಮನೆಕಡೆ ಎರಡೆಕರೆ ಒಣಭೂಮಿ ಇತ್ತು. ಅಪ್ಪ ಮಾಡುತ್ತಿದ್ದ ಬಡಗಿ ಕೆಲಸವೇ ಜೀವನಾಧಾರ. ತಂದೆ ತಾಯಿ ತಂಗಿಯಿರುವ ಕುಟುಂಬ ಈತನದು. ತಂಗಿ ಎಂಟನೇ ತರಗತಿ ಓದುತ್ತಿದ್ದಳು. […]

  January 24, 2018
  ...

  ಮದ್ಯಪಾನ ಆರೋಗ್ಯಕ್ಕೆ ಹಾನಿಕರ; ಎಚ್ಚರ ತಪ್ಪಿದ್ದಕ್ಕೆ ಜೈಲು ಪಾಲಾದ ರಾಮಪ್ಪನ ಕತೆ!

  ಅದೊಂದು ಕೋಣೆ. ಅಲ್ಲಿ ಅರೆಗತ್ತಲಿತ್ತು. ನಲವತ್ತು ವರ್ಷ ಪ್ರಾಯದ ವ್ಯಕ್ತಿಯೊಬ್ಬ ಗೋಡೆ ಬದಿಯಲ್ಲಿ ಕುಳಿತಿದ್ದ. ಇದವನ ಮಾಮೂಲಿ ದಿನಚರಿ. ಆತ ಜೈಲಿಗೆ ಬಂದು ಈಗಾಗಲೇ ಎಂಟು ವರ್ಷಗಳು ಮುಗಿದಿದೆ. ಆದರೂ ಆತ ಹಳೆಯ ಯೋಚನೆಗಳಿಂದ ಹೊರಬರುತ್ತಿಲ್ಲ. ಆ ಕೊಠಡಿಯಲ್ಲಿ ನಲವತೈದು ಜನರಿದ್ದಾರೆ. ಬಹುತೇಕ ಜನರು ರಾತ್ರಿ ಏಳುವರೆ ಒಳಗೆ ಊಟ ಮುಗಿಸಿ ತಮ್ಮ ಹಾಸಿಗೆಗಳಲ್ಲಿ ಮುದುಡಿಕೊಳ್ಳುತ್ತಾರೆ. ಬಹಳ‌ ಜನರಿಗೆ ನಿದ್ರೆ ಬರುವುದಿಲ್ಲ. ಬೀಡಿ ಎಳೆಯುತ್ತಾರೆ ಹಲವರು, ಗಾಂಜಾ ಸೇದುವ ಗುಂಪೂ ಇದೆ. ಅವೆಲ್ಲದರ ಹೊಗೆ ಕೊಠಡಿ ಎಲ್ಲಾ […]

  January 22, 2018
  ...

  ‘ಎಜ್ಯೂಕೇಟೆಡ್ ಫೂಲ್ಸ್’: ಎರಡನೇ ಮದುವೆಯಾಗಿ ಜೈಲೂಟ ಅನುಭವಿಸಿದ ಸಿವಿಲ್ ಎಂಜಿನಿಯರ್ ಕಥೆ!

  ಹೆಸರು ಗಂಗಾಧರ. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳದ ಉದ್ಯೋಗದಲ್ಲಿದ್ದ. ಗ್ರಾಮೀಣ ಹಿನ್ನೆಲೆ ಆತ ಚಾಮರಾಜನಗರ ಕಡೆಯವನು. ಆರೇಳು ಎಕರೆ ಭೂಮಿಯಿತ್ತು. ತಂದೆ-ತಾಯಿ ರೈತಾಪಿ ಹಿನ್ನಲೆಯವರೇ. ಮನೆಗೆ ಇವನೊಬ್ಬನೇ ಗಂಡು ಮಗ ಬೇರೆ. ಈತ ಓದಿನ ಕಾರಣಕ್ಕಾಗಿ ನಗರಗಳಲ್ಲಿಯೇ ಬೆಳೆದಿದ್ದ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಾತ್ರ ಗ್ರಾಮೀಣ ಭಾಗದಲ್ಲಿ ಪಡೆದಿದ್ದ. ಉದ್ಯೋಗ ಸಿಕ್ಕಿದ ಮೇಲೆ ನೆಂಟರಿಷ್ಟರ ಕುಟುಂಬವೊಂದರ ಹುಡುಗಿಯೊಂದಿಗೆ ಮದುವೆ ಮಾಡಿದ್ದರು. ಎರಡು ಮಕ್ಕಳೂ ಆಗಿದ್ದವು. ಈತನ ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿ […]

  January 19, 2018
  ...

  ಕಂಬಿ ಹಿಂದಿನ ಕತೆ- 6: ಕಳುಹಿಸಿದ್ದು ಎಂಎಂಎಸ್‌, ಮರಳಿ ಬಂದಿದ್ದು ಗುಂಡು; ಪ್ರತಿಷ್ಠೆ ಮತ್ತು ಜೈಲೂಟದ ಪಾಠಗಳು!

  ಮಲೆನಾಡು ಜಿಲ್ಲೆ ಚಿಕ್ಕಮಗಳೂರಿನ ಒಂದು ಹಳ್ಳಿ. ಕಾಫಿ ಸೀಮೆ. ಭತ್ತ, ಅಡಿಕೆ, ಏಲಕ್ಕಿ, ಬಾಳೆಗಳು ಈ ಪ್ರದೇಶವನ್ನು ಹಸಿರಾಗಿಟ್ಟಿವೆ. ಟಿವಿ, ಮೊಬೈಲುಗಳು ಈ ಹಳ್ಳಿಯನ್ನು ಹೊಕ್ಕಿ ಬಹಳ ಕಾಲ ಆಗಿದೆ. ಸಹಜವಾಗಿ ಯುವಕ ಯುವತಿಯರ ಕೈಯಲ್ಲಿ ಮೊಬೈಲುಗಳಿವೆ. ಆ ಹಳ್ಳಿಯಲ್ಲಿ ಬಹುತೇಕ ಎಲ್ಲರಿಗೂ ತೋಟ ಗದ್ದೆಗಳಿವೆ. ಕೆಲವರಿಗೆ ಹತ್ತರಿಂದ ಇಪ್ಪತ್ತು, ಹಲವರಿಗೆ ಒಂದರಿಂದ ಐದು ಏಕರೆಗಳವರೆಗೆ ಭೂಮಿಯಿದೆ. ಊರಿನ ಬಹುತೇಕ ಯುವಕ ಯುವತಿಯರು ವಿದ್ಯಾವಂತರು. ಪಿಯುಸಿ, ಪದವಿ ಓದಿದವರು. ಒಕ್ಕಲಿಗರ ಕುಟುಂಬಗಳೇ ಹೆಚ್ಚಿವೆ. ಇಲ್ಲಿ ಕಾಫಿ, ಅಡಿಕೆ […]

  December 28, 2017
  ...

  ಕಂಬಿ ಹಿಂದಿನ ಕತೆ- 5: ಭೂ ಮಾಲೀಕರ ಕೆಂಗಣ್ಣಿಗೆ ಬಿದ್ದ ಟೀನೇಜ್ ಲವ್; ಜೈಲಿನಲ್ಲಿ ಕಮರಿದ ಅಂತರ್ಜಾತಿ ಪ್ರೀತಿ!

  ಅವನ ಪ್ರಾಯ 19 ವರ್ಷಗಳು.ರಾಯಚೂರು ಜಿಲ್ಲೆಯ ಒಂದು ಕುಗ್ರಾಮ ಆತನ ಊರು. ಆ ಹಳ್ಳಿಗೆ ನೇರ ಬಸ್ ಸೌಕರ್ಯವಿಲ್ಲ. ಪಕ್ಕದ ಊರಿನವರೆಗೆ ಬೆಳಿಗ್ಗೆ ಮತ್ತು ಸಂಜೆ ಕೇವಲ ಒಂದು ಬಸ್ ಬಂದು ಹೋಗುತ್ತದೆ. ಅಲ್ಲಿಂದ ಇವನ ಊರಿಗೆ ಮೂರು ಕಿಲೋ ಮೀಟರುಗಳ ದೂರ. ಈತನದು ಬಡ ರೈತ ಕುಟುಂಬ. ಮೂರು ಎಕರೆಯಷ್ಟು ಒಣ ಭೂಮಿ ಈತನ ಕುಟುಂಬಕ್ಕಿದೆ. ಬೆಳೆ ಕೈಗೆ ಬರುವುದು ಅಷ್ಟಕ್ಕಷ್ಟೆ. ದಕ್ಷಿಣ ಕರ್ನಾಟಕದ ಒಣ ಭೂಮಿಗೂ ರಾಯಚೂರು ಭಾಗದ ಒಣಭೂಮಿಗೂ ಅಜಗಜಾಂತರ ವ್ಯತ್ಯಾಸ. ಬೇರೆ […]

  December 25, 2017
  ...

  ಕಂಬಿ ಹಿಂದಿನ ಕತೆ- 4: ಮಾಟಮಂತ್ರದ ಅನುಮಾನ; ಕಾರಾಗೃಹದಲ್ಲಿ ದಲಿತ ಕುಟುಂಬದ ಬದುಕಿನ ಪಯಣ!

  ಅವರದ್ದು ಬಡ ರೈತ ಕುಟುಂಬ. ಜಾತಿ ಹಿನ್ನೆಲೆ ದಲಿತ. ಒಂದೆರಡು ಏಕರೆ ಒಣ ತುಂಡು ಭೂಮಿ ಇದೆ. ಹಾಸನ ಬಾಗದವರು. ಅವರದು ಎರಡು ಹೆಣ್ಣು ಮಕ್ಕಳು ಹಾಗೂ ಮೂರು ಜನ ಗಂಡು ಮಕ್ಕಳ ಕುಟುಂಬ. ಅವರಲ್ಲಿ ಎಲ್ಲರಿಗಿಂತ ಕೊನೆಯ ಮಗ ಮಾತ್ರ ಪಿಯುಸಿವರೆಗೆ ಕಲಿತವ. ಕೂಲಿನಾಲಿಯೇ ಪ್ರಧಾನ ಆದಾಯ. ಒಣ ಭೂಮಿಯಲ್ಲಿ ಕಷ್ಟಪಟ್ಟು ಗೇಯ್ದರೂ ಎಲ್ಲರ ಹೊಟ್ಟೆ ತುಂಬುವುದಿಲ್ಲ. ಇನ್ನು ಹಬ್ಬ, ಹರಿದಿನ, ಜಾತ್ರೆ, ಮದುವೆ, ಬಟ್ಟೆಬರೆ, ರೋಗ ರುಜಿನಗಳ ಕಡೆ ಗಮನ ಕೊಡಬೇಕೆಂದರೆ ಇಕ್ಕಟ್ಟು ಹಾಗೂ […]

  December 19, 2017
 • 1
 • 2

Top