An unconventional News Portal.

ಸುದ್ದಿ ಸಾರ
    ...

    ವಿನಾಯಕ್ ಬಾಳಿಗ ಕೊಲೆ ಪ್ರಕರಣ: ಇಬ್ಬರು ಯುವಕರ ಬಂಧನ

    ಮಂಗಳೂರಿನ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ವಿಶಿತ್ ಮತ್ತು ವಿನೀತ್ ಬಂಧಿತರು. ಸಾವರ್ಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಲಾಬಿಗಳ ವಿರುದ್ಧ ಹೋರಾಡುತ್ತಿದ್ದ ಬಾಳಿಗರನ್ನು ಮಾ. 21ರಂದು ಇರಿದು ಕೊಲೆ ಮಾಡಲಾಗಿತ್ತು. ಅವರು ದಕ್ಷಿಣ ಕನ್ನಡ ಮೂಲದ ಕೆಲವು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ವಿರುದ್ಧವೂ ದನಿ ಎತ್ತಿದ್ದವರು. ಹೀಗಾಗಿ, ಅವರ ಕೊಲೆಯ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಈಗಾಗಲೇ ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ಪೊಲೀಸ್ ಇಲಾಖೆ […]

    March 25, 2016
    ...

    ಸ್ಮಶಾನದ ನಡುವೆ ರಸ್ತೆ ನಿರ್ಮಾಣ: ಬಿಡಿಎ ವಿರುದ್ಧ ಹಳ್ಳಿಗರ ಆಕ್ರೋಶ

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈಗ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಆಕ್ರಮಿಸಿಲು ಹೋಗಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಘಟನೆ ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ವರದಿಯಾಗಿದೆ. ಇಲ್ಲಿನ ಕುಂಬಳಗೋಡು ಗ್ರಾಮದ ವ್ಯಾಪ್ತಿಯಲ್ಲಿ ಕಣಿಮಿಣಕಿ ಗ್ರಾಮಸ್ಥರೀಗ ಬಿಡಿಎ ವಿರುದ್ಧ ತಿರುಗಿ ಬಿದ್ದಿದ್ದಾರೆ. ಊರ ಜನರಿಗಾಗಿ 2004ರಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶವನ್ನು ಸ್ಮಶಾನ ಜಾಗ ಎಂದು ಮಂಜೂರು ಮಾಡಲಾಗಿತ್ತು. ಅದರ ಪಕ್ಕದಲ್ಲಿಯೇ ಬಿಡಿಎ 50 ಎಕರೆ ಪ್ರದೇಶದಲ್ಲಿ ನಿವಾಸಗಳನ್ನು ನಿರ್ಮಿಸುತ್ತಿದೆ. ಇದಕ್ಕಾಗಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ ಎಂಬುದು […]

    March 25, 2016
    ...

    ಜಮ್ಮು ಮತ್ತು ಕಾಶ್ಮೀರಾದ ಮೊದಲ ಮಹಿಳಾ ಮುಖ್ಯಮಂತ್ರಿ; ಮುಫ್ತಿ!

    ಸುಮಾರು ಎರಡು ತಿಂಗಳ ರಾಷ್ಟ್ರಪತಿ ಆಡಳಿತದ ಬಳಿಕ ಮತ್ತೆ ಜಮ್ಮು ಕಾಶ್ಮೀರದಲ್ಲಿ ಹೊಸ ಸರ್ಕಾರ ರಚನೆಗೆ ಮುದ್ರೆ ಬಿದ್ದಿದೆ. ಪಿಡಿಪಿ (ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿ)ಗೆ ಸರ್ಕಾರ ರಚಿಸುವುದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಕೊಂಡಿದೆ. ಈ ಬಗ್ಗೆ ಗುರುವಾರ ದಿಲ್ಲಿಗೆ ಆಗಮಿಸಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಪ್ತಿ ಜತೆಗೆ ಉನ್ನತ ಮಟ್ಟದ ಮಾತುಕತೆ ನಡೆಸಲಾಗಿತ್ತು. ಈ ಮೂಲಕ ಮುಫ್ತಿ ಮುಖ್ಯಮಂತ್ರಿ ಕನಸು ನನಸಾಗುವುದು ನಿಚ್ಚಳವಾಗಿದೆ. ಇಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕ ಸಾತ್ ಶರ್ಮಾ ಈ ವಿಚಾರವನ್ನು ಪತ್ರಿಕಾಗೊಷ್ಟಿ ನಡೆಸಿ ಸ್ಪಷ್ಟಪಡಿಸಿದ್ದಾರೆ. ಈ […]

    March 25, 2016
    ...

    14 ವರ್ಷದ ಯುವತಿಗೆ ತಂದೆಯಿಂದ ಗರ್ಭದಾನ: 10 ಛಡಿಯೇಟಿಗೆ ಪಂಚಾಯ್ತಿ ತೀರ್ಮಾನ!

    ಮಹಾರಾಷ್ಟ್ರ:’ಖಾಪ್ ಪಂಚಾಯತ್’ ಮಾದರಿ ವ್ಯವಸ್ಥೆ ಮಹಾರಾಷ್ಟ್ರದಲ್ಲಿ ತನ್ನ ಭೀಕರ ಶಿಕ್ಷೆಯ ಮೂಲಕ ಸುದ್ದಿಯಾಗಿದೆ. ಇಲ್ಲಿನ ಸತಾರ ಜಿಲ್ಲೆಯ ಗೋಪಾಲ್ ಹಳ್ಳಿಯಲ್ಲಿ 14 ವರ್ಷದ ಯುವತಿಯ ಮೇಲೆ ಪಂಚಾಯ್ತಿ ತನ್ನ ಅಧಿಕಾರವನ್ನು ಶುಕ್ರವಾರ ಚಲಾಯಿಸಿದೆ. ಆಕೆ ತನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಈಡಾಗಿ ಗರ್ಭ ಧರಿಸಿದ್ದಳು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ತಂದೆ ಹಾಗೂ ಮಗಳಿಗೆ ತಲಾ 10 ಛಡಿಯೇಟು ನೀಡುವಂತೆ ಪಂಚಾಯ್ತಿ ಫರ್ಮಾನು ಹೊರಡಿಸಿತ್ತು. ಇಂದು ಗ್ರಾಮಸ್ಥರ ಸಮ್ಮುಖದಲ್ಲಿ ಛಡಿಯೇಟು ನೀಡುವ ಭೀಕರ ಘಟನೆ ನಡೆಯಿತು. ಸ್ಥಳೀಯ ಮಾಹಿತಿ ಹಕ್ಕು […]

    March 4, 2016
    ...

    ಸೇನೆಗೆ ಸೇರ್ಪಡೆಯಾಯ್ತು ಮುಧೋಳದ ನಾಯಿ

    ಉದ್ದನೆ ಸಣಕಲು ದೇಹ. ಆದ್ರೆ ಅತ್ಯಂತ ಚುರುಕು. ಅಷ್ಟೇ ಚಾಣಾಕ್ಷ. ಇದು ಮುಧೋಳ ಎಂಬ ಪಕ್ಕಾ ದೇಸೀ ತಳಿಯ ನಾಯಿಯ ಲಕ್ಷಣಗಳು. ಬೇಟೆಗೆಂದೇ ಹೆಸರಾಗಿರುವ ಈ ತಳಿಯ ನಾಯಿಗಳು ಗಂಟೆಗೆ 50 ಕಿಮೀ ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿಯೇ ವಿದೇಶೀಯ ನಾಯಿಗಳನ್ನು ಮಾತ್ರ ಹೊಂದಿರುತ್ತಿದ್ದ ಸೇನೆಯಲ್ಲಿ ದೇಸೀ ತಳಿಯ ನಾಯಿಗಳಿಗೂ ಕಾಲ ಬಂದಂತಾಗಿದೆ. ಕಳೆದ ಹಲವಾರು ತಿಂಗಳಿಂದ  ಮುಧೋಳ ತಳುಯ ನಾಯಿಗಳನ್ನು ಸೇನೆಗೆ ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆಗಳು ನಡೀತಿತ್ತು. ಆದ್ರೆ ಈಗ  ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ […]

    February 18, 2016
    ...

    ‘ದಂಡ’ ಕೆಳಗಿಳಿಸದ ಪಟಿಯಾಲ ವಕೀಲರು: ನ್ಯಾಯಾಲಯದ ಆವರಣದಲ್ಲೇ ಕನ್ನಯ್ಯ ಮೇಲೆ ಹಲ್ಲೆ

    ದಿಲ್ಲಿಯ ಪಟಿಯಾಲ ಕೋರ್ಟ್ ಆವರಣ ಬುಧವಾರವೂ ವಕೀಲರ ಗೂಂಡಾಗಿರಿಗೆ ಸಾಕ್ಷಿಯಾಯಿತು. ಜವಹರ್ ಲಾಲ್ ನೆಹರೂ ಯೂನಿವರ್ಸಿಟಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿತು. ‘ದೇಶದ್ರೂಹ’ದ ಆರೋಪದ ಮೇಲೆ ವಿದ್ಯಾರ್ಥಿ ನಾಯಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಇಂದು ಅದರ ವಿಚಾರಣೆಗಾಗಿ ಪಟಿಯಾಲ ಕೋರ್ಟ್ ಆವರಣಕ್ಕೆ ಕರೆ ತರುತ್ತಲೇ, ವಕೀಲರ ಗುಂಪೊಂದು ಆರೋಪಿಯ ಮೇಲೆ ಹಲ್ಲೆ ನಡೆಸಿತು. ಜತೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೂ ದಾಳಿ ನಡೆಸಲಾಯಿತು. ನ್ಯಾಯಾಲಯದ ಆವರಣದೊಳಗಿಂದ ಮಾಧ್ಯಮಗಳ ವಾಹನಗಳ ಮೇಲೆ […]

    February 17, 2016
    ...

    ಮೂರು ವರ್ಷದ ನಂತರ ಸೆರೆ ಸಿಕ್ಕ ಸಿಮಿ ಕಾರ್ಯಕರ್ತರು

    ಮೂರು ವರ್ಷಗಳ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ನಾಲ್ವರು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಡ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತರನ್ನು ಬುಧವಾರ ಒರಿಸ್ಸಾದಲ್ಲಿ ಬಂಧಿಸಲಾಗಿದೆ. ಮಹಮದ್ ಖಾಲಿದ್, ಅಮ್ಜದ್ ಖಾನ್, ಝಾಕೀರ್ ಹುಸೇನ್ ಹಾಗೂ ಎಸ್. ಮಹಮದ್ ಸೆರೆ ಸಿಕ್ಕವರು. ನಾಲ್ವರು 2013ರ ಸುಮಾರಿಗೆಮಧ್ಯಪ್ರದೇಶದ ಖಂಡ್ವಾ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡರು. ‘ಬುಧವಾರ ಮುಂಜಾನೆ ರೋರ್ಖೇಲ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಂತರ ಆರೋಪಿಗಳನ್ನು ಒರಿಸ್ಸಾ ಹಾಗೂ ತೆಲಂಗಾಣ ಜಂಟಿ ಪೊಲೀಸ್ ಪಡೆ ವಶಕ್ಕೆ ಪಡೆಯಿತು,’ ಎಂದು ಎನ್ ಡಿ ಟಿವಿ […]

    February 17, 2016
    ...

    ಬಿಜೆಪಿ ಸರಕಾರದ ಯೋಜನೆಗೆ ಅಮೀರ್ ಖಾನ್ ರಾಯಭಾರಿ

    ಮಹಾರಾಷ್ಟ್ರದ ಬಿಜೆಪಿ ಸರಕಾರ ತನ್ನ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ನಟ ಅಮೀರ್ ಖಾನ್ ಅವರನ್ನು ನೇಮಿಸಿಕೊಳ್ಳಲಿದೆ. ಈ ಕುರಿತು ಬುಧವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಮೀರ್ ಖಾನ್ ಅವರನ್ನು ‘ಬರಗಾಲ ಮುಕ್ತ ರಾಜ್ಯ ಯೋಜನೆ’ಯ ರಾಯಭಾರಿಯಾಗಿ ಘೋಷಿಸಲಿದ್ದಾರೆ. ತಿಂಗಳ ಹಿಂದಷ್ಟೆ ನಟ ಅಮೀರ್ ಖಾನ್ ‘ಅಸಹಿಷ್ಣುತೆ’ ಕುರಿತು ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಪರ ಇರುವವರು ನಟನನ್ನು […]

    February 17, 2016

Top