An unconventional News Portal.

ಸುದ್ದಿ ಸಾರ
    ...

    ‘ದಿ ಹಿಂದೂ’ ಪತ್ರಿಕೆಯ ಸಂಪಾದಕರಿಗೆ ದೇವೇಗೌಡರ ಪುತ್ರ ಪತ್ರ ಬರೀತಾರಂತೆ!

    ಹಾಸನ ಜಿಲ್ಲೆಯ ಸಿಗರನಹಳ್ಳಿ ಪ್ರಕರಣದ ಹಿನ್ನೆಲೆಯಲ್ಲಿ ಭಾನುವಾರ ಹಾಸನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಶಾಸಕ ರೇವಣ್ಣ ‘ದಿ ಹಿಂದೂ’ ಪತ್ರಿಕೆ ವಿರುದ್ಧ ತಮ್ಮ ಕೋಪತಾಪವನ್ನು ಹೊರಹಾಕಿದ್ದಾರೆ. ಜೆಡಿಎಸ್ ರಾಷ್ಟ್ರಾದ್ಯಕ್ಷ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಹುಟ್ಟೂರು ಹರದನಹಳ್ಳಿಯಿಂದ ಕೇವಲ 2. ಕಿ.ಮೀ ಅಂತರದಲ್ಲಿರುವ ಸಿಗರನಹಳ್ಳಿ ಗ್ರಾಮ, ಮೇಲ್ವರ್ಗದ ಒಕ್ಕಲಿಗರು ಹಾಗೂ ದಲಿತರ ನಡುವಿನ ಗಲಾಟೆಯಿಂದ ಕೆಳೆದ ಮೂರ್ನಾಲ್ಕು ದಿನಗಳಿಂದ ಸುದ್ದಿ ಕೇಂದ್ರದಲ್ಲಿದೆ. ಗ್ರಾಮದ ಬಸವೇಶ್ವರ ದೇವರ ಜಾತ್ರಿ ವಿಚಾರದಲ್ಲಿ ಏ. 1ರಂದು ಗ್ರಾಮದ ಮೇಲ್ವರ್ಗದ ಜನ ಇಬ್ಬರು ಪತ್ರಕರ್ತರು ಸೇರಿದಂತೆ ಅಧಿಕಾರಿಗಳ […]

    April 3, 2016
    ...

    ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಾದ್ರಿ ಶೀಘ್ರ ಬಿಡುಗಡೆ; ಕರ್ನಾಟಕದಲ್ಲೂ ಸೇವೆ ಸಲ್ಲಿಸಿದ್ದ ಫಾದರ್

    ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಕರ್ನಾಟಕದಲ್ಲೂ ಕಾರ್ಯ ನಿರ್ವಹಿಸಿದ್ದ ಕೇರಳ ಮೂಲದ ಪಾದ್ರಿ ಫಾದರ್ ಟಾಮ್ ಉಳುನ್ನಲಿಲ್ ಶೀಘ್ರ ಬಿಡುಗಡೆಯಾಗುವ ಭರವಸೆ ದೊರೆತಿದೆ. ಹೀಗಂಥ ಕ್ಯಾಥೋಲಿಕ್ ಸಂಘಟನೆ, ವಿದೇಶಾಂಗ ಸಚಿವರ ಮಾತುಗಳನ್ನು ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಇವರು ಕಳೆದ ತಿಂಗಳು ಯೆಮೆನ್ನಲ್ಲಿ ಬಂಧೂಕುದಾರಿಗಳಿಂದ ಅಪಹರಣಕ್ಕೆ ಒಳಗಾಗಿದ್ದರು. ಆದರೆ ಇದರ ಹೊಣೆಯನ್ನು ಯಾರೂ ಹೊತ್ತುಕೊಂಡಿರಲಿಲ್ಲ. ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ಕಳೆದ ತಿಂಗಳು ದಕ್ಷಿಣ ಯೆಮೆನ್ನಿನ ಅಡೆನ್ ಪಟ್ಟದಿಂದ ಬಂಧೂಕುದಾರಿಗಳು ಅಪಹರಿಸಿದ್ದರು. ಉಳುನ್ನಲಿಲ್ ಕಾರ್ಯ್ ನಿರ್ವಹಿಸುತ್ತಿದ್ದ ವೃದ್ಧಾಶ್ರಮದ ಮೇಲೆ ದಾಳಿ ನಡೆಸಿದ ಬಂಧೂಕುದಾರಿಗಳು […]

    April 3, 2016
    ...

    ‘ಭ್ರಷ್ಟಾಚಾರ ನಿಗ್ರಹ ದಳ’ಕ್ಕೆ ಬೋಣಿಗೆ ಮಾಡಿದ ಸಿಎಂ ವಾಚ್ ಪ್ರಕರಣ!

    ಹಠಕ್ಕೆ ಬಿದ್ದವರಂತೆ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ರಚಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಮೊದಲ ಪ್ರಕರಣ ದಾಖಲಾದ ಅಚ್ಚರಿಯ ಬೆಳವಣಿಗೆ ಶನಿವಾರ ನಡೆದಿದೆ. ವಕೀಲ ನಟರಾಜ್ ಶರ್ಮಾ ಎಂಬುವವರು ನೂತನವಾಗಿ ರಚನೆಗೊಂಡ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಸಿಎಂ ವಿವಾದಿತ ವಾಚಿನ ಕುರಿತು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರಿಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಎಸಿಬಿಯ ಬೆಂಗಳೂರು ವಿಭಾಗದ ಎಸಿಪಿ ಅಬ್ದುಲ್ ಖಾದರ್ ಅವರಿಗೆ ದೂರನ್ನು ವರ್ಗಾಯಿಸಿದ್ದಾರೆ. “ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ 70 ಲಕ್ಷ ರೂ. ಮೌಲ್ಯದ ಹ್ಯೂಬ್ಲೋಟ್ […]

    April 2, 2016
    ...

    ‘ಹುಚ್ಚರ ಕೈಗೆ ಅಣ್ವಸ್ತ್ರ ಸಿಗದಂತೆ ಎಚ್ಚರಿಕೆ ವಹಿಸಿ’: ಒಬಾಮ ಕರೆ

    ತಮ್ಮ ಅಧ್ಯಕ್ಷಾವಧಿಯ ಕೊನೆಯ ದಿನಗಳಲ್ಲಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಐಸಿಸ್ ತಹರದ ‘ಹುಚ್ಚು ಜನ’ಗಳ ಕೈಗೆ ಅಣ್ವಸ್ತ್ರ ಸಿಗದಂತೆ ತಡೆಯಬೇಕು ಎಂದು ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಶನಿವಾರ ಮುಕ್ತಾಯಗೊಂಡ ನಾಲ್ಕನೆ ಹಾಗೂ ಕೊನೆಯ ‘ನ್ಯೂಕ್ಲಿಯರ್ ಸೇಫ್ಟಿ ಸಮಿತ್’ನ ಉದ್ದೇಶಿಸಿ ಅವರು ಮಾತನಾಡಿದರು. “ಐಸಿಸ್ ಹಾಗೂ ಅಂತಹ ಮಾನವ ವಿರೋಧಿ ಸಂಘಟನೆಗಳಿಂದ ಅಣ್ವಸ್ತ್ರವನ್ನು ರಕ್ಷಿಸಬೇಕಿದೆ. ಈಗಾಗಲೇ 102 ದೇಶಗಳು ಈ ಕುರಿತು ಒಪ್ಪಂದಕ್ಕೆ ಸಹಿ ಮಾಡಿವೆ,” ಎಂದರು. ಇದರ ಜತೆಗೆ, ಸಭೆಯಲ್ಲಿ ಪಾಲ್ಗೊಂಡ ಭಾರತ ಪ್ರಧಾನಿ ನರೇಂದ್ರ […]

    April 2, 2016
    ...

    ಪತ್ರಕರ್ತರ ಮೇಲೆ ಹಲ್ಲೆ: ಹಾಸನದಲ್ಲಿ ಇಂದು ಪ್ರತಿಭಟನೆ

    ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿಷೇಧಿಸಿದ್ದರ ಬಗ್ಗೆ ವರದಿ ಮಾಡಲು ತೆರಳಿದ್ದ ವರದಿಗಾರರ ಮೇಲೆ ನಡೆದ ಹಲ್ಲೆ ಖಂಡಿಸಿ ಶನಿವಾರ ಸಂಜೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಂಜೆ 5 ಗಂಟೆಗೆ ಕಪ್ಪು ಪಟ್ಟಿ ಧರಿಸಿ ಪತ್ರಕರ್ತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸುವ ಸಾಂಕೇತಿಕ ಪ್ರತಿಭಟನೆಗೆ ಪ್ರಗತಿಪರ ಸಂಘಟನೆಗಳು ಕರೆ ನೀಡಿವೆ. ಘಟನೆಯಲ್ಲಿ ಶಾಸಕ ರೇವಣ್ಣರ ಪಾತ್ರದ ಬಗ್ಗೆಯೂ ಅನುಮಾನಗಳು ಎದ್ದಿದ್ದು, ಅವರ ಕುತಂತ್ರವೇ ಇಷ್ಟಕ್ಕೆಲ್ಲಾ ಕಾರಣ ಎಂದು […]

    April 2, 2016
    ...

    ಅಸ್ಸಾಂ ಅತಂತ್ರ; ಕೇರಳದಲ್ಲಿ ಕೆಂಬಾವುಟ; ತಮಿಳುನಾಡು; ಪ.ಬಂಗಾಳದಲ್ಲಿ ಯಥಾಸ್ಥಿತಿ: ಇಂಡಿಯಾ ಟಿವಿ- ಸಿ ವೋಟರ್ ಸಮೀಕ್ಷೆ

    ಅಸ್ಸಾಂ ಅತಂತ್ರ, ಕೇರಳದಲ್ಲಿ ಎಡಪಕ್ಷಗಳ ಮೈತ್ರಿಕೂಟ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಯಥಾಸ್ಥಿತಿಯ ಮುಂದುವರಿಕೆ… ಇದು ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತದಾನ ಪೂರ್ವ ಸಮೀಕ್ಷೆಯ ಮುಖ್ಯಾಂಶಗಳು. ಇಂಡಿಯಾ ಟಿವಿ- ಸಿ ವೋಟರ್ ಜಂಟಿ ಸಮೀಕ್ಷೆಯ ವರದಿ ಶುಕ್ರವಾರ ರಾತ್ರಿ ಹೊರಬಿದ್ದಿದೆ. ಸದರಿ ರಾಜ್ಯಗಳಲ್ಲಿ ಪಕ್ಷಗಳ ಬಲಾಬಲ ಹೀಗಿದೆ: ಅಸ್ಸಾಂ ಬಿಜೆಪಿ ಮೈತ್ರಿ ಪಕ್ಷಗಳು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿವೆ. 126 ಸದಸ್ಯ ಬಲದ ವಿಧಾನ ಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ+ ಗೆ, 55 ಹಾಗೂ ಕಾಂಗ್ರೆಸ್ […]

    April 1, 2016
    ...

    ಭಯೋತ್ಪಾದಕರಿಂದ ಅಣ್ವಸ್ತ್ರ ರಕ್ಷಣೆಗೆ ಪಣ: ಭಾರತ ಕೂಡ ಅಮೆರಿಕಾ ಬಣ

    ಅಮೆರಿಕಾದ ವಾಷಿಂಗ್ಟನ್ನಲ್ಲಿ ಗುರುವಾರ ಹಾಗೂ ಶುಕ್ರವಾರ ನಡೆದ ನಾಲ್ಕನೇ ಹಾಗೂ ಕೊನೆಯ ನ್ಯೂಕ್ಲಿಯರ್ ಸೇಫ್ಟಿ ಸಮಿಟ್ (ಎನ್ಎಸ್ಎಸ್) ಭಯೋತ್ಪಾದಕರ ಕೈಗೆ ಅಣ್ವರ್ಥ ಹೋಗದಂತೆ ತಡೆಯುವ ಆಶಯವನ್ನು ವ್ಯಕ್ತಪಡಿಸಲಿದೆ. ಒಟ್ಟು 56 ದೇಶಗಳು ಹಾಗೂ 4 ಅಂತರಾಷ್ಟ್ರೀಯ ಸಂಸ್ಥೆಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿವೆ. ಆದರೆ, ಇದರಿಂದ ಹೊರಗೆ ಉಳಿದಿರುವ ರಷ್ಯಾ, ‘ಈಗಿರುವ ಅಣ್ವಸ್ತ್ರ ರಕ್ಷಣಾ ಮಾರ್ಗಗಳೇ ಸಾಕು,’ ಎಂದಿದೆ. ಹೀಗಾಗಿ, ಎನ್ಎಸ್ಎಸ್ನಿಂದ ಹೊರಗುಳಿಯುವುದಾಗಿ ಘೋಷಿಸಿದೆ. ಇತ್ತೀಚೆಗೆ ಉತ್ತರ ಕೋರಿಯಾ ಅಂತರಾಷ್ಟ್ರೀಯ ಅಣ್ವಸ್ತ್ರ ನೀತಿಗಳನ್ನು ಬದಿಗೆ ಸರಿಸಿ ವಿನಾಶಕಾರಿ ಆಯುಧದ ಪ್ರಯೋಗವನ್ನು […]

    March 31, 2016
    ...

    ಟ್ರಾಫಿಕ್ ಜಂಗುಳಿ ಮೇಲೆ ಕುಸಿದು ಬಿದ್ದ ಮೇಲ್ಸೇತುವೆ: 22 ಜನರ ಸಾವು

    ಕೋಲ್ಕತ್ತಾದ ಬುರ್ರಾ ಬಝಾರ್ ಎರಿಯಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದು ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.  ಇಲ್ಲಿನ ವಿವೇಕಾನಂದ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ 2.2 ಕಿ.ಮೀ ಉದ್ದ ಪ್ಲೈ ಓವರ್ ಹಠಾತ್ತನೆ ಟ್ರಾಫಿಕ್ ಜಂಗುಳಿಯ ಮೇಲೆಯೇ ಕುಸಿದು ಬಿತ್ತು. ಘಟನೆಯಲ್ಲಿ ಸುಮಾರು 22 ಜನ ಸಾವಿಗೆ ಈಡಾಗಿದ್ದು, ನೂರಾರು ಜನ ಅಡಿಯಲ್ಲಿ ಸಿಲುಕಿದ್ದಾರೆ. ಘಟನೆ ತಕ್ಷಣ ಸ್ಪಂದಿಸಿದ ಅಗ್ನಿ ಶಾಮಕ ದಳದ ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸೇನೆ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಶುರುಮಾಡಿದರು. ದೃಶ್ಯಾವಳಿಯಲ್ಲಿ ಸೆರೆಯಾಗಿರುವಂತೆ, ಮಧ್ಯಾಹ್ನದ […]

    March 31, 2016
  • ಜಿಲ್ಲಾ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿ ಪ್ರಕಟ

    ಹಲವು ದಿನಗಳಿಂದ ಕಾಯುತ್ತಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಹಲವು ಜಿಲ್ಲೆಗಳಿಂದ ಸದಸ್ಯರ ಆಯ್ಕೆ ಸಂಬಂಧ ಅಧಿಸೂಚನೆ ಹೊರಬರದ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿ ವಿಳಂಬವಾಗಿತ್ತು. ಅಧಿವೇಶನದ ನಂತರವೇ ಪಟ್ಟಿಯನ್ನು ನಿರೀಕ್ಷಿಸಲಾಗಿತ್ತು. ಇದೀಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿ ರೆಡಿಯಾಗಿದ್ದು ವಿವರ ಹೀಗಿದೆ:   (ಜಿಲ್ಲೆ: ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು) ಬೆಂಗಳೂರು ನಗರ: ಓಬಿಸಿ-ಎ(ಮಹಿಳೆ)- ಸಾಮಾನ್ಯ(ಮ) ಬೆಂ.ಗ್ರಾಮಾಂತರ: ಓಬಿಸಿ-ಎ(ಮಹಿಳೆ)- ಸಾಮಾನ್ಯ(ಮ) ಚಿತ್ರದುರ್ಗ: ಹಿಂದುಳಿದ ವರ್ಗ(ಎ)- […]

    March 30, 2016
    ...

    ಗೃಹಬಳಕೆ ವಿದ್ಯುತ್ ದರದಲ್ಲಿ ದಾಖಲೆಯ ಹೆಚ್ಚಳ: ಗ್ರಾಮೀಣ ಕೈಗಾರಿಕೆಗಳಿಗೂ ಶಾಕ್ ಟ್ರೀಟ್ಮೆಂಟ್!

    ಅನಿಯಮಿತ ವಿದ್ಯುತ್ ಪೂರೈಕೆ ನಡುವೆಯೇ ಗೃಹ ಬಳಕೆಯ ವಿದ್ಯುತ್ ದರವನ್ನು ದಾಖಲೆ ಪ್ರಮಾಣದಲ್ಲಿ ಏರಿಸಲಾಗಿದೆ. ಪ್ರತಿ ಯೂನಿಟ್ ಬಳಕೆಗೆ 30ರಿಂದ 50 ಪೈಸೆ ಹೆಚ್ಚಳ ಮಾಡಲು ‘ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ’ (ಕೆಇಆರ್ಸಿ) ಬುಧವಾರ ಒಪ್ಪಿಗೆ ಸೂಚಿಸಿದೆ. ಇದರ ಜತೆಗೆ ‘ಭಾಗ್ಯಜ್ಯೋತಿ’ ಹಾಗೂ ‘ಕುಟೀರ ಜ್ಯೋತಿ’ ಯೋಜನೆಗಳ ಅಡಿ ವಿದ್ಯುತ್ ಬಳಸುತ್ತಿದ್ದ ಗ್ರಾಹಕರಿಗೂ ಈ ಹೆಚ್ಚಳದ ಬಿಸಿ ತಟ್ಟಲಿದೆ. ಪ್ರತಿ ಯೂನಿಟ್ಗೆ 48 ಪೈಸೆ ಹೆಚ್ಚಳ ಮಾಡಲು ಆಯೋಗ ಹಸಿರು ನಿಶಾನೆ ತೋರಿಸಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದರದಲ್ಲಿ […]

    March 30, 2016

Top