An unconventional News Portal.

ಸುದ್ದಿ ಸಾರ

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ವಿಶ್ವದ ದೊಡ್ಡಣ್ಣನ ಸರಕಾರವೇ ಸ್ಥಗಿತ!

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

    ...
    ಸುದ್ದಿ ಸಾರ

    ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ; ಉತ್ತರ ಪ್ರದೇಶ, ಪಂಜಾಬ್ಗೆ ನೂತನ ರಾಜ್ಯಾಧ್ಯಕ್ಷರ ನೇಮಕ

    ಪ್ರಮುಖ ಮೂರು ರಾಜ್ಯಗಳಿಗೆ  ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನು ನೇಮಿಸಿದೆ. ಕರ್ನಾಟಕ ಬಿಜೆಪಿ ಸಾರಥ್ಯವನ್ನು ಮಾಜಿ ಮುಖ್ಯಮಂತ್ರಿ, ಹಾಲಿ ರಾಷ್ಟ್ರೀಯ ಉಪಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ವಹಿಸಲಾಗಿದೆ. ಇದೇ ವೇಳೆ ಪಂಚಾಬ್ ರಾಜ್ಯಾಧ್ಯಕ್ಷರಾಗಿ ಕೇಶವ್ ಪ್ರಸಾದ್ ಮೌರ್ಯ ನೇಮಕವಾಗಿದ್ದಾರೆ. ಇನ್ನು ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದ ಹೊಣೆಯನ್ನು ಕೇಂದ್ರದ ಸಾಮಾಜಿಕ ನ್ಯಾಯ ರಾಜ್ಯ ಸಚಿವ ವಿಜಯ್ ಸಂಪ್ಲಾಗೆ ವಹಿಸಿಲಾಗಿದೆ.  ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಘೋಷಣೆ ಹೊರಡಿಸಿದ್ದಾರೆ. ಇಲ್ಲಿವರಗೆ..

    April 8, 2016
    ...
    ಸುದ್ದಿ ಸಾರ

    ಜಗತ್ತಿನಾದ್ಯಂತ ಹೆಚ್ಚಿದ ಮರಣ ದಂಡನೆ ಶಿಕ್ಷೆ ಪ್ರಮಾಣ: ಆಮ್ನೆಸ್ಟಿ ಆತಂಕ

    ಕಳೆದ ವರ್ಷದಲ್ಲಿ ಜಗತ್ತಿನಾದ್ಯಂತ ವಿಧಿಸಿರುವ ಮರಣದಂಡನೆ ಶಿಕ್ಷೆ ಪ್ರಮಾಣದಲ್ಲಿ ಶೇ. 50 ರಷ್ಟು ಹೆಚ್ಚಾಗಿದೆ ಎಂದು ಲಂಡನ್ ಮೂಲದ ಮಾನವ ಹಕ್ಕು ಸಂಘಟನೆ ‘ಆಮ್ನೆಸ್ಟಿ ಇಂಟರ್ನ್ಯಾಷನಲ್’ ಬುಧವಾರ ಬಿಡುಗಡೆ ಮಾಡಿರುವ ತನ್ನ ವಾರ್ಷಿಕ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಕಳೆದ ವರ್ಷವೊಂದರಲ್ಲಿಯೇ 1, 634 ಮರಣ ದಂಡನೆ ಶಿಕ್ಷೆಗಳನ್ನು ನೀಡಲಾಗಿದೆ. ಇದು 1989ರ ನಂತರ ದಾಖಲೆಯ ಹೆಚ್ಚಳ ಎಂದು ವರದಿ ದಾಖಲಿಸಿದೆ. ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾದ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಯಾ ಸರಕಾರಗಳು ವಿಧಿಸಿದ ಮರಣದಂಡನೆ ಸಂಖ್ಯೆ..

    April 7, 2016
    ...
    ಸುದ್ದಿ ಸಾರ

    ಬರ ಪರಿಹಾರದಲ್ಲಿ ಕುರುಡುತನ ಬೇಡ: ಕೇಂದ್ರಕ್ಕೆ ಸುಪ್ರಿಂ ಸೂಚನೆ

    ಬರ ಪೀಡಿತ ರಾಜ್ಯಗಳಿಗೆ ಸೂಕ್ತ ನೆರವು ನೀಡುವ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಬುಧವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬರ ಪೀಡಿತ ರಾಜ್ಯಗಳಿಗೆ ಕೇಂದ್ರ ಸರಕಾರ ಸಮರ್ಪಕ ನೆರವು ನೀಡುತ್ತಿಲ್ಲವೆಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ‘ಸ್ವರಾಜ್ ಅಭಿಯಾನ್’ ಸರಕಾರೇತರ ಸಂಸ್ಥೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿಯ ಕುರಿತು ಸುಪ್ರಿಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಮುಂಚಿನ ವಿಚಾರಣೆಗಳಲ್ಲಿ ದೇಶದಲ್ಲಿ ಬರ ಪರಿಸ್ಥಿತಿಯನ್ನು ಪರಿಗಣಿಸಿ ಆಹಾರ ಭದ್ರತೆ ಕಾಯ್ದೆಯನ್ನು ಅನುಷ್ಠಾನಕ್ಕೆ ತರದಿರುವ ರಾಜ್ಯಗಳನ್ನು ಕೋರ್ಟ್ ಟೀಕಿಸಿತ್ತು. ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್ ಬರಪೀಡಿತ..

    April 6, 2016
    ...
    ಸುದ್ದಿ ಸಾರ

    ಮನೆ ಪಾಠದ ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಸೂಚನೆ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಬುಧವಾರ ಇನ್ನಿಬ್ಬರನ್ನು ಬಂಧಿಸಿದೆ. ಸದಾಶಿವ ನಗರದ ಪೂರ್ಣಪ್ರಜ್ಞಾ ಕಾಲೇಜಿನ ದೈಹಿಕ ಶಿಕ್ಷಕ ಅನಿಲ್, ಮತ್ತಿಕೆರೆ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸತೀಶ್ ಬಂಧಿತರು. ಇವರಿಬ್ಬರು, ಪ್ರಶ್ನೆ ಪತ್ರಿಕೆಗಳ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದರು. ಇದರಿಂದ ಕಮಿಷನ್ ಪಡೆಯುತ್ತಿದ್ದರು ಎಂದು ಸಿಐಡಿ ಡಿಐಜಿ ಸೋನಿಯಾ ನಾರಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಸೋರಿಕೆಯಾದ ಪಿಯುಸಿ ರಸಾಯನ ಶಾಸ್ತ್ರ ವಿಭಾಗದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈವರೆಗೆ ಐವರ ಬಂಧನವಾದಂತಾಗಿದೆ. ಮನೆಪಾಠಕ್ಕೆ..

    April 6, 2016
    ...
    ಸುದ್ದಿ ಸಾರ

    ‘ಎನ್ಕೌಂಟರ್ ನಕಲಿ’: 47 ಪೊಲೀಸರಿಗೆ ಜೀವಾವಧಿ ಶಿಕ್ಷೆ

    25 ವರ್ಷಗಳ ಹಿಂದಿನ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಸೋಮವಾರ ತೀರ್ಪು ಪ್ರಕಟಿಸಿರುವ ಸಿಬಿಐ ವಿಶೇಷ ನ್ಯಾಯಾಲಯ 47 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜುಲೈ, 12, 1991ರಲ್ಲಿ ಉತ್ತರ ಪ್ರದೇಶದ ಪಿಲಿಭಿಟ್ ಎಂಬಲ್ಲಿ ಸಿಖ್ ಯಾತ್ರಾರ್ಥಿಗಳನ್ನು ದಾರಿ ನಡುವೆ ತಡೆದ ಪೊಲೀಸರು ಬಸ್ಸಿನಿಂದ ಇಳಿಸಿಕೊಂಡು ಹೋಗಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿಯ ಪ್ರಕಾರ, ಯಾತ್ರಾರ್ಥಿಗಳನ್ನು ಗುಂಪುಗಳಲ್ಲಿ ವಿಭಾಗಿಸಿ, ಕಾಡಿನಲ್ಲಿ ಗುಂಡಿಕ್ಕಿ ಕೊಂದು ಹಾಕಿದ್ದರು.ನಂತರ ಮಾಧ್ಯಮಗಳ ಮುಂದೆ, ಪ್ರಯಾಣಿಸುತ್ತಿದ್ದ ಕೆಲವು ಸಿಖ್ ಯಾತ್ರಾರ್ಥಿಗಳಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಕೆಲವರ ಬಳಿ..

    April 4, 2016
    ...
    ಸುದ್ದಿ ಸಾರ

    ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಬೋನಸ್: ಅಂತಿಮ ಹಂತದಲ್ಲಿ ಪಟ್ಟಿ

    ಖಾಲಿ ಇರುವ 8 ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಹಾಗೂ ಸುಮಾರು 800 ನಿರ್ದೇಶಕ ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪಟ್ಟಿ ಸಿದ್ಧತೆ ಭರದಿಂದ ಸಾಗಿದ್ದು, ಸಿಎಂ ಸಿದ್ದರಾಮಯ್ಯ ಇದಕ್ಕಾಗಿ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮವನ್ನು ರದ್ಧುಗೊಳಿಸಿದ್ದಾರೆ ಎಂದು ಅವು ಹೇಳಿವೆ. ಸಿದ್ದರಾಮಯ್ಯ ‘ಸೌಖ್ಯ ಪ್ರಕೃತಿ ಚಿಕಿತ್ಸಾ ಕೇಂದ್ರ’ಕ್ಕೆ ತೆರಳಿ ಚಿಕಿತ್ಸೆ ಪಡೆಯಲಿದ್ದರು. ಆದರೆ, ನಿಗಮ-ಮಂಡಳಿ ನೇಮಕಾತಿ ಪೂರ್ಣಗೊಳಿಸಬೇಕಾದ ನಿರ್ಧಾರವನ್ನು ಪಕ್ಷ ಕೈಗೊಂಡ ಹಿನ್ನಲೆಯಲ್ಲಿ ಇಂದು ನಿಗಮ – ನೇಮಕಾತಿ ಪಟ್ಟಿ..

    April 4, 2016
    ...
    ಸುದ್ದಿ ಸಾರ

    ಸಿಎಂ, ಸಚಿವರ ಈವರೆಗಿನ ಪ್ರಯಾಣ ಭತ್ಯೆ ಎಷ್ಟು ಗೊತ್ತಾ?

    32 ತಿಂಗಳು; ಅಂದರೆ ಹೆಚ್ಚು ಕಡಿಮೆ 960 ದಿನ, 12 ಜನರ ಓಡಾಟ; ಒಟ್ಟು ಖರ್ಚು 11 ಕೋಟಿ ರೂಪಾಯಿ. ಅಂದಹಾಗೆ, ಹೀಗೆ ಪ್ರತಿ ದಿನ ಸರಾಸರಿ 10 ಸಾವಿರ ರೂಪಾಯಿ ಬರೀ ಪ್ರಯಾಣಕ್ಕಾಗಿ ಖರ್ಷು ಮಾಡಿದವರು ನಮ್ಮ ರಾಜ್ಯ ಸಚಿವರುಗಳು. ಉತ್ತರ ಕರ್ನಾಟಕ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಪಡೆದ ಆರ್ಟಿಐ ಮಾಹಿತಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಸಚಿವರುಗಳಾದ ವಿನಯಕುಮಾರ್ ಸೊರಕೆ – 75.89 ಲಕ್ಷ, ಯು.ಟಿ.ಖಾದರ್ – 70.23 ಲಕ್ಷ, ರಮಾನಾಥ ರೈ..

    April 4, 2016
    ...
    ರಾಜ್ಯ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಚಿವರ ಆಪ್ತ ಸೇರಿ ಮೂವರ ಬಂಧನ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರರಕಣದಲ್ಲಿ ಸಚಿವರ ಆಪ್ತ ಸಹಾಯಕ ಸೇರಿದಂತೆ ಸೋಮವಾರ ಮೂವರ ಬಂಧನವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಈ ಸಂಬಂಧ ಮಧ್ಯಾಹ್ನದ ವೇಳೆಗೆ ಮಾಹಿತಿ ಹೊರಗೆಡವಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಜತೆ ವಿಶೇಷಾಧಿಕಾರಿಯಾಗಿದ್ದ ಓಬಳರಾಜು ಎಂಬಾತನನ್ನು ಬಂಧಿಸಲಾಗಿದೆ.  ವಿಜಯ ನಗರದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ದೈಹಿಕ ಶಿಕ್ಷಕ ಮಂಜುನಾಥ್ ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿ ನಿರ್ವಾಹಕ ರುದ್ರಪ್ಪ ಉಳಿದ ಬಂಧಿತರು. ಶಿಕ್ಷನ ಮಂಜುನಾಥ್ ಮತ್ತೊಬ್ಬ ಆರೋಪಿಯಿಂದ ಪ್ರಶ್ನೆ ಪತ್ರಿಕೆ..

    April 4, 2016
    ...
    ಸುದ್ದಿ ಸಾರ

    ಭಾರತೀಯ ಮಾಧ್ಯಮಗಳ ಹಾದಿ ಹಿಡಿಯಬೇಡಿ ಎಂದ ಪಾಕಿಸ್ತಾನ ಮಾಧ್ಯಮ ಪ್ರಾಧಿಕಾರ!

    ಬ್ರೂಸೆಲ್ಸ್ ದಾಳಿ ನಡೆದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳು ತೋರಿದ ಸಂಯಮವನ್ನು ಪಾಲಿಸಬೇಕೇ ಹೊರತು, ವ್ಯಾಪಾರೀಕರಣದ ಹಿಂದೆ ಬಿದ್ದಿರುವ ಭಾರತದ ಮಾಧ್ಯಮಗಳ ಹೆಜ್ಜೆ ಗುರುತುಗಳನ್ನಲ್ಲ. ಈ ಮಾತನ್ನು ನೀವು ಒಪ್ಪುತ್ತೀರೋ? ಬಿಡುತ್ತೀರೋ, ಅದಕ್ಕೂ ಮೊದಲು ಹೀಗೆ ಹೇಳಿದವರು ಯಾರು ಅಂತ ಕೇಳಿ ಬಿಡಿ. ಹೀಗಂತ ಹೇಳಿರೋದು ಇಸ್ಲಮಾಬಾದ್ ನಲ್ಲಿರುವ ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ. ಇಂಥಹದ್ದೊಂದು ನಿರ್ದೇಶನವನ್ನು ಪ್ರಾಧಿಕಾರ ಪಾಕಿಸ್ತಾನ ಮಾಧ್ಯಮಗಳಿಗೆ ನೀಡಿದೆ. ಲಾಹೋರ್ ದಾಳಿಯಾದ ಬೆನ್ನಿಗೇ ಇಂತಹದ್ದೊಂದು ನಿರ್ದೇಶನ ಹೊರ ಬಿದ್ದಿದೆ. ಲಾಹೋರ್, ಇಸ್ಲಾಮಾಬಾದ್, ಮತ್ತು..

    April 3, 2016
    ...
    ಸುದ್ದಿ ಸಾರ

    ಪತಂಜಲಿ ನೂಡಲ್ಸ್ ಕೂಡ ಬಲು ಡೇಂಜರ್ ಅಂತೆ: ಎಫ್‍ಎಸ್‍ಡಿಎ ವರದಿ

    ಯೋಗ ಗುರು ಬಾಬರಾಮ್ದೇವ್ ಒಡೆತನದ ಪತಾಂಜಲಿ ಅಟಾ ನ್ಯೂಡೆಲ್ಸ್ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಚಾರ ಬಹಿರಂಗವಾಗಿದೆ. ನೆಸ್ಲೆ ಕಂಪನಿಯ ‘ಮ್ಯಾಗಿ’ ಆರೋಗ್ಯ ಹಾನಿಕರ ಎಂಬ ಹಿನ್ನೆಲೆಯಲ್ಲಿ ದೇಶಾದ್ಯಂತ ಇದರ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಇದೀಗ, ಬಾಬಾರಾಮ್‍ದೇವ್ ಒಡೆತನದ ಪತಂಜಲಿ ನ್ಯೂಡೆಲ್ಸ್‍ನಲ್ಲಿ ಮಿಶ್ರಣ ಮಾಡಿರುವ ಬೂದಿ ಹಾಗೂ ಟೇಸ್ಟ್ ಮೇಕರ್(ರುಚಿ ವರ್ಧಕ) ‘ಮ್ಯಾಗಿ ನೂಡ್ಯೆಲ್ಸ್‍’ಗಿಂತಲೂ ಹಾನಿಕಾರಕ ಎಂದು ಉತ್ತರಪ್ರದೇಶದ ಆರೋಗ್ಯ ಸುರಕ್ಷತೆ ಮತ್ತು ಔಷಧ ನಿಯಂತ್ರಣಾಧಿಕಾರ(ಎಫ್‍ಎಸ್‍ಡಿಎ) ಸಂಸ್ಥೆ ಹೇಳಿದೆ. ಪತಾಂಜಲಿ ನ್ಯೂಡೆಲ್ಸ್ ಸೇವನೆಯಿಂದ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ…

    April 3, 2016

FOOT PRINT

Top