An unconventional News Portal.

ಸುದ್ದಿ ಸಾರ
  ...

  ಸೋನಿಯಾ ಬಂಧಿಸಿ: ಬಿಜೆಪಿಗೆ ಕೇಜ್ರಿವಾಲ್ ಸವಾಲು

  ಆಗಸ್ಟಾ ವೆಸ್ಟ್‍ಲ್ಯಾಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಇತರ ನಾಯಕರನ್ನು ಬಂಧಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿಗೆ ಸವಾಲು ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೌನ ಕಾಯ್ದುಕೊಂಡಿರುವುದನ್ನು ಪ್ರಶ್ನಿಸಿರುವ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ  ಕಾಂಗ್ರೆಸ್ ನಾಯಕರ ಕಚೇರಿ ಹಾಗೂ ಮನೆಗಳ ಮೇಲೆ ಯಾಕಿನ್ನೂ ದಾಳಿ ನಡೆಸಿಲ್ಲ ಎಂದು ಪ್ರಶ್ನಿಸಿದ್ದಾರೆ. ‘ಪ್ರಕರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ನಾಯಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಂದು […]

  April 29, 2016
  ...

  ಹಿರಿಯ ಸಂಪಾದಕ ಎಸ್ ವಿ ಜಯಶೀಲರಾವ್ ನಿಧನ

  ಚಿತ್ರಕೃಪೆ ಪ್ರಜಾವಾಣಿ ಕನ್ನಡದ ಅಪರೂಪದ ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಹಲವು ಸಂಸ್ಥೆಗಳಲ್ಲಿ ಪತ್ರಕರ್ತರಾಗಿ, ಮಾಧ್ಯಮ ಸಲಹೆಗಾರರಾಗಿ, ಸಂಯುಕ್ತ ಕರ್ನಾಟಕದ ನಿವೃತ್ತ ಸಂಪಾದಕರಾಗಿದ್ದ ಮೃತರಿಗೆ 87 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನರಾಗಿದ್ದಾರೆ. ಜಯಶೀಲರಾವ್ ಕರ್ನಾಟಕದ ಹೊರಗೆಯೂ ಪರಿಚಿತರಾಗಿದ್ದ ಕೆಲವೇ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಸಂಪೆಮನೆ ಜಯಶೀಲರಾವ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ […]

  April 28, 2016
  ...

  ರಾಘವೇಶ್ವರ ಸ್ವಾಮಿ ಅತ್ಯಾಚಾರ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ಸಿಐಡಿ

  ರಾಮಕಥಾ ಗಾಯಕಿ ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಿಐಡಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ಗುರುವಾರ ಅಂಗೀಕರಿಸಿದೆ. ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾ. ಎ.ವಿ. ಚಂದ್ರಶೇಖರ ನೇತೃತ್ವದ ಏಕಸದಸ್ಯ ಪೀಠ, ರಾಘವೇಶ್ವರ ಸ್ವಾಮಿಗೆ ನೋಟಿಸ್ ಜಾರಿ ಮಾಡಿ ಬೇಸಿಗೆ ರಜೆಯ ನಂತರ ಅರ್ಜಿ ವಿಚಾರಣೆ ಮಾಡುವುದಾಗಿ ತಿಳಿಸಿದೆ. ಏನಿದು ಪ್ರಕರಣ? ತಮ್ಮ ತಾಯಿಯ ಮೇಲೆ ಶ್ರೀಗಳು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಅಂಶುಮತಿ ಶಾಸ್ತ್ರಿ ಗಿರಿನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಐಡಿ ಪೊಲೀಸರು […]

  April 28, 2016
  ...

  ಉತ್ತರಖಾಂಡ್ ಕಾಂಗ್ರೆಸ್ ಶಾಸಕರಿಂದ ‘ಕುದುರೆ ವ್ಯಾಪಾರ’ದ ಆರೋಪ

  ಉತ್ತರಾಖಾಂಡದಲ್ಲಿ ಹೇರಿರುವ ರಾಷ್ಟ್ರಪತಿ ಆಡಳಿತ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ತಮಗೆ ಬಿಜೆಪಿಯಿಂದ 50 ಕೋಟಿ ರೂ. ನೀಡುವ ಆಮಿಷವೊಡ್ಡಲಾಗಿದೆ ಎಂದು ಹೇಳಿರುವುದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಕಾಂಗ್ರೆಸ್ ಶಾಸಕರಾದ ರಾಜೇಂದ್ರ ಭಂಡಾರಿ ಮತ್ತು ಜೀತ್ ರಾಮ್ ಈ ಗಂಭೀರ ಆರೋಪ ಮಾಡಿದ್ದಾರೆ. “ನಮಗೆ 50 ಕೋಟಿ ರೂ. ಜೊತೆಗೆ ಮತ್ತಿತರ ಸೌಲಭ್ಯಗಳನ್ನು ಕೊಡುವ ಭರವಸೆಯನ್ನು ಬಿಜೆಪಿಯಿಂದ ನೀಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್, ಒಬ್ಬರಿಗೆ ರಾಜ್ಯಸಭಾ ಸ್ಥಾನ […]

  April 27, 2016
  ...

  ಎರಡನೇ ದಿನವೂ ನಡೆಯದ ಅಧಿವೇಶನ; ಉತ್ತರಖಾಂಡ್ ವಿಚಾರ ಚರ್ಚೆಗೆ ಆಗ್ರಹ

  ಉತ್ತರಾಖಾಂಡ್ ರಾಜಕೀಯ ಬಿಕ್ಕಟ್ಟಿನ ಮೇಲೆ ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿದ್ದರಿಂದ ಸಂಸತ್ತಿನ ಉಭಯ ಸದನದ ಕಲಾಪ ಬುಧವಾರಕ್ಕೆ ಮುಂದೂಡಲಾಯಿತು. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರು ಎರಡನೇ ದಿನವೂ ಕೋಲಾಹಲ ಸೃಷ್ಟಿಸಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗದೆ ಉಭಯ ಸದನಗಳನ್ನು ಮುಂದುಡುವುದು ಅನಿವಾರ್ಯವಾಯಿತು. ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದೆ ಮತ್ತು ಪ್ರಜಾತಾಂತ್ರಿಕ ಹಕ್ಕುಗಳನ್ನು ಧಮನ […]

  April 26, 2016
  ...

  ಅಮೆರಿಕಾದ ಡ್ರೋಣ್ ದಾಳಿಗೆ ಭಟ್ಕಳ ಮೂಲದ ಐಸಿಸ್ ಯುವಕ ಬಲಿ

  ಸಿರಿಯಾದಲ್ಲಿ ಕೆಲ ದಿನಗಳ ಹಿಂದೆ  ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಕರ್ನಾಟಕದ ಉಗ್ರನೊಬ್ಬ ಹತನಾಗಿದ್ದಾನೆ. ಮೃತ ಉಗ್ರ 26 ವರ್ಷದ ಮಹಮ್ಮದ್ ಶಫಿ ಆರ್ಮರ್ ಕರ್ನಾಟಕದ ಭಟ್ಕಳ ಮೂಲದವನು ಎಂದು ತಿಳಿದುಬಂದಿದೆ. ಈತ ಭಾರತದಲ್ಲಿ ಐಸಿಸ್ ಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಭಟ್ಕಳ ಮೂಲದ 26 ವರ್ಷದ ಆರ್ಮರ್, ಐಸಿಸ್ ಸಂಘಟನೆಯ ಪ್ರಮುಖನಾಗಿದ್ದ ಅಬೂಬಕ್ಕರ್ ಬಾಗ್ದಾದಿಯೊಂದಿಗೆ ಆತ್ಮೀಯನಾಗಿದ್ದ. ಮೊದಲಿಗೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಅರ್ಮರ್, ನಂತರದಲ್ಲಿ ಐಸಿಸ್ ಗೆ ಭಾರತೀಯ ಯುವಕರನ್ನು […]

  April 25, 2016
  ...

  ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಸ್ಲಿಂ ಆರೋಪಿಗಳಿಗೆ ಮುಕ್ತಿ

  2006ರ ಮಾಲೆಂಗಾವ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸೋಮವಾರ ಖುಲಾಸೆಗೊಳಿಸಲಾಗಿದೆ. ಮುಂಬೈನ ವಿಶೇಷ ನ್ಯಾಯಾಲಯದ ನ್ಯಾ. ವಿ. ವಿ. ಪಾಟೀಲ್ ಅವರ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ. ಎಲ್ಲಾ 9 ಮುಸ್ಲಿಂ ಆರೋಪಿಗಳನ್ನೂ ಆರೋಪ ಮುಕ್ತರನ್ನಾಗಿ ಮಾಡಿದ್ದು, ಅವರ ಪೈಕಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. 6 ಮಂದಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಇಬ್ಬರು ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಸಲ್ಮಾನ್ ಫಾರ್ಸಿ, ಶಬೀರ್ ಅಹ್ಮದ್, ನೂರುಲ್‍ಹುದಾ ದೋಹ, ರಾಯಿಸ್ ಅಹಮದ್, ಮೊಹಮ್ಮದ್ ಅಲಿ, ಆಸಿಫ್ […]

  April 25, 2016
  ...

  ಇಸಾಗೆ ನೀಡಿದ್ದ ವೀಸಾ ವಾಪಾಸ್: ಚೀನಾ ವಿರೋಧಕ್ಕೆ ಮಣಿದ ಭಾರತ

  ‘ಜಾಗತಿಕ ಐಘೂರ್ ಕಾಂಗ್ರೆಸ್’ ನಾಯಕ, ಚೀನಾ ವಿರುದ್ಧ ಹೋರಾಟ ನಡೆಸುತ್ತಿರುವ ದೋಲ್ಕನ್ ಇಸಾಗೆ ನೀಡಿದ್ದ ವೀಸಾವನ್ನು ಭಾರತ ಹಿಂತೆಗೆದುಕೊಂಡಿದೆ. ತಿಂಗಳ ಕೊನೆಯಲ್ಲಿ ಧರ್ಮಶಾಲದಲ್ಲಿ ನಡೆಯಲಿರುವ ‘ಪ್ರಜಾಪ್ರಭುತ್ವ ಸ್ಥಾಪನಾ ಸಮ್ಮೇಳನ’ದಲ್ಲಿ ಇಸಾ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಭಾರತ ವೀಸಾ ನೀಡುತ್ತಿದ್ದಂತೆ ನೆರೆಯ ರಾಷ್ಟ್ರ ಚೀನಾ ತನ್ನ ಪ್ರಬಲ ವಿರೋಧವನ್ನು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತ ವೀಸಾ ವಾಪಾಸ್ ಪಡೆದಿದೆ ಎಂದು ಮೂಲಗಳು ಹೇಳಿವೆ. ಈ ಕುರಿತು ಎನ್ಡಿಟಿವಿಗೆ ಮಾತನಾಡಿರುವ ಇದಾ, “ನನ್ನನ್ನು ಭಯೋತ್ಪಾದಕ ಎಂದು ಚೀನಾ ಹಣೆಪಟ್ಟಿ ಕಟ್ಟಿದೆ. ಹೀಗಾಗಿ ಭಾರತ […]

  April 25, 2016
  ...

  ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಪುಂಡಲೀಕ ಹಾಲಂಬಿ ಸ್ಮರಣೆ

  ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಂಬಿಯವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ. ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಪುಂಡಲೀಕ ಹಾಲಂಬಿ ಅವರನ್ನು ಇತ್ತೀಚೆಗಷ್ಟೇ ಬಸವನಗುಡಿ ಬಳಿಯ ಶೇಖರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಭಾನುವಾರ ಹಾಲಂಬಿಯವರು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯ ನಿಮಿತ್ತ ಹಲವು ವರ್ಷಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಹಾಲಂಬಿ ಅವರು, ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ […]

  April 24, 2016
  ...

  ವಿಜಯ್ ಮಲ್ಯ: ಸೂಕ್ತ ಪ್ರಮಾಣ ಪತ್ರವಿಲ್ಲದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ!

  ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಪಾಸ್ಪೋರ್ಟ್ ರದ್ಧುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಸಂಬಂಧ ಭಾನುವಾರ ಟ್ವೀಟ್ ಮಾಡಿರುವ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, “ಮಲ್ಯ ಕಡೆಯಿಂದ ಬಂದ ಪ್ರತಿಕ್ರಿಯೆ, ಅವರ ಮೇಲಿರುವ ಜಾಮೀನು ರಹಿತ ವಾರೆಂಟ್ ಹಾಗೂ ಜಾರಿ ನಿರ್ದೇಶನಾಲಯದ ಮಾಹಿತಿ ಇಟ್ಟುಕೊಂಡು ಕಾನೂನಿನ ಅಡಿಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಈ ಮೂಲಕ, ಸದ್ಯ ಲಂಡನ್ ಹೊರವಲಯದಲ್ಲಿ ನೆಲೆಸಿದ್ದಾರೆ ಎಂದು ನಂಬಿರುವ ವಿಜಯ್ ಮಲ್ಯ ವಿರುದ್ಧ ಕಾನೂನಿನ ಕುಣಿಕೆ ಇನ್ನಷ್ಟು ಬಿಗಿಯಾದಂತಾಗಿದೆ. […]

  April 24, 2016

Top