An unconventional News Portal.

ಸುದ್ದಿ ಸಾರ
  ...
  mahesh-sha-gujarath-1
  ಸುದ್ದಿ ಸಾರ

  ‘ಮಹೇಶ್ ಶಾ ಪ್ರಕರಣ’: ನಾಪತ್ತೆಯಾಗಿದ್ದ ಗುಜರಾತ್ ಉದ್ಯಮಿ ಟಿವಿ ಸ್ಟುಡಿಯೋದಲ್ಲಿ ಪ್ರತ್ಯಕ್ಷ

  ಆದಾಯ ತೆರಿಗೆ ಘೋಷಣೆ ಯೋಜನೆ ಅಡಿಯಲ್ಲಿ ತೋರಿಸಿದ್ದ 13, 860 ಕೋಟಿ ರೂಪಾಯಿ ನಗದು ಹಣ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಸೇರಿದ್ದು ಎಂದು ಗುಜರಾತ್ ಮೂಲದ ಉದ್ಯಮಿ ಮಹೇಶ್ ಶಾ ಬಹಿರಂಗಪಡಿಸಿದ್ದಾನೆ. ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಮಹೇಶ್ ಶಾ, ಶನಿವಾರ ಸಂಜೆ ಗುಜರಾತ್ ಈ- ಟಿವಿ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲಿಯೇ ಪ್ರಕರಣದ ಕುರಿತು ಅಸ್ಪಷ್ಟ ಮಾಹಿತಿ ನೀಡಿದ ಆತ, “ಐಟಿ ಅಧಿಕಾರಿಗಳ ಮೇಲೆ ನಂಬಿಕೆ ಇದೆ. ಎಲ್ಲವನ್ನೂ ತಿಳಿಸುತ್ತೇನೆ. ಕಾದು ನೋಡಿ,” ಎಂದಿದ್ದಾನೆ. ನಂತರ ವಾಹಿನಿಯ ಒಳಗಡೆಯೇ ಐಟಿ..

  December 3, 2016
  ...
  nada-syclone-tn-1
  ಸುದ್ದಿ ಸಾರ

  ನಾಡಿಗೆ ಕಾಲಿಟ್ಟ ‘ನಾಡಾ’ ಚಂಡಮಾರುತ: ಸಿಲಿಕಾನ್ ಸಿಟಿಯಲ್ಲೂ ಮಳೆಯ ಸಿಂಚನ

  ದಿನದ ಆರಂಭದಲ್ಲಿಯೇ ಮಳೆಯ ಸಿಂಚನ, ತಂಪಾದ ವಾತಾವರಣ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ, ತಮಿಳುನಾಡು ಮತ್ತುಆಂಧ್ರದಲ್ಲಿ ಭಾರಿ ಮಳೆಯ ಸಾದ್ಯತೆ, ಬೆಂಗಳೂರಿಗೂ ತಟ್ಟಲಿರುವ ಹವಾಮಾನ ಬದಲಾವಣೆಯ ಪರಿಣಾಮಗಳು. ಇದು ಶುಕ್ರವಾರ ಮುಂಜಾನೆಯ ವೆದರ್ ರಿಪೋರ್ಟ್. ಗುರುವಾರ ರಾತ್ರಿ ವೇಳೆಗೆ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನ ಕೆಲವೆಡೆ ತುಂತುರು ಮಳೆ ಬಿದ್ದಿತ್ತು. ಚಳಿಯ ವಾತಾವರಣದಲ್ಲಿ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ‘ನಾಡಾ ಚಂಡಮಾರುತ’. ಶುಕ್ರವಾರ ನಸುಕಿನಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನಾಗಪಟ್ನಂ ಬಂದರಿನ ಸಮೀಪ ನಾಡಾ ಹೆಸರಿನ ಚಂಡಮಾರುತ..

  December 2, 2016
  ...
  plain-crash-dead
  ಸುದ್ದಿ ಸಾರ

  ಕೊಲಂಬಿಯಾ ವಿಮಾನ ಪತನಕ್ಕೆ 76 ಬಲಿ; ಮೃತರಲ್ಲಿ ಬ್ರೆಜಿಲ್ ಫುಟ್ಬಾಲ್ ಆಟಗಾರರು

  ಬ್ರೆಜಿಲ್ ಫುಟ್ಬಾಲ್ ಕ್ಲಬ್ ನ ಆಟಗಾರರೂ ಸೇರಿ 81 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಕೊಲಾಂಬಿಯಾದಲ್ಲಿ ಪತನವಾಗಿದೆ. ವಿಮಾನವು ಬೊಲಿವಿಯಾದಿಂದ ಕೊಲಾಂಬಿಯಾದ ಮೆಡಿಲಿನ್ ನಗರಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ವಿಮಾನದಲ್ಲಿದ್ದ 76 ಪ್ರಯಾಣಿಕರು ಸಾವನ್ನಪ್ಪಿದ್ದು, 5 ಜನ ಬದುಕುಳಿದಿದ್ದಾರೆ ಎಂದು ವರದಿಗಳು ಬರುತ್ತಿವೆ. ‘ಕೋಪಾ ಸೂಡಮೆರಕನ್ ಫುಟ್ಬಾಲ್ ಚಾಂಪಿಯನ್ಶಿಪ್’ನ ಫೈನಲ್ ಪಂದ್ಯದಲ್ಲಿ ಆಟವಾಡಲು ಬ್ರೆಜಿಲ್ನ್ ಶೆಪೆಕೋ ನಗರದ ಶೆಪಕೊಯಿನ್ಸ್ ಕ್ಲಬ್ ತಂಡ ಪ್ರಯಾಣ ಬೆಳೆಸುತ್ತಿತ್ತು. ಮೆಡಿಲಿನ್’ನ ಅಟ್ಲೆಂಟಿಕೊ ನಾಷನಲ್ ತಂಡದ ವಿರುದ್ಧ ಬುಧವಾರ ಫೈನಲ್ ಪಂದ್ಯ ಏರ್ಪಾಡಾಗಿತ್ತು. ಆದರೆ ಅದಕ್ಕೂ..

  November 29, 2016
  ...
  Japana Tsunami
  ಸುದ್ದಿ ಸಾರ

  ‘ಇದು ಜಪಾನ್ ವಿಶೇಷ’: ಭಾರಿ ಭೂಕಂಪ, ಸುನಾಮಿಗೂ ಅಲ್ಲಾಡದ ಪುಟ್ಟ ದೇಶ

  ಮಂಗಳವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ಉತ್ತರ ಜಪಾನಿನಲ್ಲಿ ಸಂಭವಿಸಿದೆ. ಪರಿಣಾಮ ಪೆಸಿಫಿಕ್ ಮಹಾಸಾಗರಕ್ಕೆ ಹೊಂದಿಕೊಂಡ ಕರಾವಳಿಯಲ್ಲಿ 1 ಮೀಟರ್ ಎತ್ತರದ ಸುನಾಮಿ ಅಲೆಗಳು ಎದ್ದಿವೆ. ಹೀಗಿದ್ದರೂ ಯಾವುದೇ ಜೀವಹಾನಿಯ ವರದಿಯಾಗಿಲ್ಲ; ಇದು ಜಪಾನ್ ವಿಶೇಷ. ಮಾರ್ಚ್ 2011ರಲ್ಲಿ ಜಪಾನಿನಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 9 ತೀವ್ರತೆಯ ಭೂಕಂಪಕ್ಕೆ ಭಾರೀ ಸುನಾಮಿ ಅಲೆಗಳು ಎದ್ದು ಅಪಾರ ಜೀವ ಆಸ್ತಿ-ಪಾಸ್ತಿ ಹಾನಿ ಸಂಭವಿಸಿತ್ತು. ಅದೇ ಭೂಕಂಪದ ನಂತರ ನಿರಂತರ ಕಂಪನಗಳು ಜಪಾನಿನಲ್ಲಿ ಸಂಭವಿಸುತ್ತಿವೆ,..

  November 22, 2016
  ...
  vishweshwara-bhat-twitter-grab
  ಸುದ್ದಿ ಸಾರ

  ‘ಆದಾಯ ತೆರಿಗೆ ದಾಳಿ ಗಾಳಿ ಸುದ್ದಿ’: ವಿಶ್ವೇಶ್ವರ ಭಟ್

  ಬೆಂಗಳೂರು ಮೂಲದ ಪತ್ರಕರ್ತರೊಬ್ಬರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಸುದ್ದಿಗೆ ಶನಿವಾರ ಮಧ್ಯಾಹ್ನ ಆಹಾರವಾಯಿತು. ‘ವಿಶ್ವವಾಣಿ ಸಂಪಾದಕ ವಿಶ್ವೇಶ್ವರ್ ಭಟ್ ಮನೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 19 ಕೋಟಿ ನಗದು ಮತ್ತು 119 ಕೋಟಿ ಮೌಲ್ಯದ ಆಸ್ತಿಪಾಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾಟ್ಸಾಪ್ ಗ್ರೂಪುಗಳಲ್ಲಿ ಹರಿದಾಡಿತು. ಇದೇ ಸಮಯದಲ್ಲಿ ಕನ್ನಡದ ಕೆಲವು ಸುದ್ದಿ ವಾಹಿನಿಗಳು ‘ರಾಜರಾಜೇಶ್ವರಿನಗರದ ಪತ್ರಕರ್ತರ ಮನೆ ಮೇಲೆ ದಾಳಿ’ ಎಂದು ಸ್ಕ್ರೋಲಿಂಗ್ ಭಿತ್ತರಿಸಿದವು. ಜತೆಗೆ ಅಪಾರ..

  November 19, 2016
  ...
  police-protest-2
  ಸುದ್ದಿ ಸಾರ

  ಡಿಸೆಂಬರಿನಿಂದ ಆರ್ಡರ್ಲಿ ‘ಸೇವೆ’ ರದ್ದು: ಸಿದ್ಧರಾಮಯ್ಯ

  ರಾಜ್ಯದ ಪೊಲೀಸ್ ಸಿಬ್ಬಂದಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಹಾಗೂ ಆರ್ಡರ್ಲಿ ‘ಸೇವೆ’ಗಳನ್ನು ನಿಲ್ಲಿಸುವ ಮಹತ್ವದ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ. ಪೊಲೀಸ್ ಸಿಬ್ಬಂದಿಗೆ ಹೊಸದಾಗಿ ಸಿಗಲಿರುವ ಸೌಲಭ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಘೋಷಿಸಿದರು. ಪೊಲೀಸರ ವೇತನ ತಾರತಮ್ಯ ನಿವಾರಣೆಯ ಮೊದಲ ಹಂತವಾಗಿ  ಡಿಸೆಂಬರ್ ಒಂದರಿಗೆ ಜಾರಿಗೆ ಬರುವಂತೆ ಹೊಸ ಸೌಲಭ್ಯಗಳನ್ನು ಘೋಷಿಸಿದೆ. ಪೊಲೀಸ್ ಸಿಬ್ಬಂದಿಗೆ ಸರ್ಕಾರ ಹೊಸದಾಗಿ ಘೋಷಿಸಿರುವ ಸೌಲಭ್ಯಗಳು : 1. ಪ್ರತಿ ತಿಂಗಳು..

  November 18, 2016
  ...
  Profile Of Chairman UB Group And Kingfisher Airlines Vijay Mallya
  ಸುದ್ದಿ ಸಾರ

  ‘ಮಲ್ಯ ಖುಷ್ ಹುವಾ’: 63 ಸಾಲಗಾರರ 7, 016 ಕೋಟಿ ರೂಪಾಯಿ ಪರೋಕ್ಷ ಮನ್ನಾ!

  ದೇಶವಾಸಿಗಳು ಸರತಿ ಸಾಲಿನಲ್ಲಿ ನಿಂತು ತಮ್ಮಲ್ಲಿರುವ ಚಿಲ್ಲರೆ ಹಣವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ದೇಶದ ಪ್ರಮುಖ ಸರಕಾರಿ ಸ್ವಾಮ್ಯದ ಬ್ಯಾಂಕ್- ಎಸ್ಬಿಐ (SBI) ಸಾಲಕಟ್ಟಲಾಗದೆ ‘ಉದ್ದೇಶಪೂರ್ವಕವಾಗಿ ಸುಸ್ತಿದಾರ’ರಾಗಿದ್ದ 63 ಜನರಿಂದ ಸಾಲ ವಸೂಲಿ ಮಾಡುವುದರಿಂದ ಹಿಂದೆ ಸರಿದಿದೆ. ಈ ಮೊತ್ತವೇ 7, 016 ಕೋಟಿ ರೂಪಾಯಿಗಳಷ್ಟಿದೆ. ಬುಧವಾರ ‘ಡಿಎನ್ಎ’ ಈ ಕುರಿತು ವರದಿ ಮಾಡಿದ್ದು, ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿದ ಕರ್ನಾಟಕ ಮೂಲದ ಉದ್ಯಮಿ ವಿಜಯ್ ಮಲ್ಯ ಹೆಸರೂ ಕೂಡ ಇದೆ. ಮಲ್ಯ ಮಾಡಿದ ಸಾಲದ..

  November 16, 2016
  ...
  ambedkar-complent-1-copy
  ಸುದ್ದಿ ಸಾರ

  ‘ಸಂವಿಧಾನ ಶಿಲ್ಪಿಗೆ ಅವಹೇಳನ’: ಠಾಣೆಗಳ ಮೆಟ್ಟಿಲೇರುತ್ತಿವೆ ‘ಫೇಸ್ಬುಕ್’ ಕಾಮೆಂಟ್ಸ್!

  ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಫೇಸ್ಬುಕ್ಕಿನಲ್ಲಿ ಅಸಂಬದ್ಧವಾಗಿ ಬರೆದಿದ್ದಾರೆ ಎಂದು ಆರೋಪಿಸಿ ವಿಕ್ರಮ್ ಎಂಕೆ ಕುಂದಾಪುರ್ ಮತ್ತು ರಂಜಿತ್ ರಂಜು ಶೆಟ್ಟಿ ಎಂಬುವವರ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿದೆ. ವಿಕ್ರಮ್ ಎಂಕೆ ಕುಂದಾಪುರ್ “ರೀ ನಮ್ಮ ಮೋದಿನಾ, ಆ ತಿಕ್ಲ ****** ರಿಗೆ ಹೋಲಿಸಬೇಡಿ,” ಎಂದು ಸ್ಟೇಟಸ್ ಒಂದಕ್ಕೆ ಕಮೆಂಟ್ ಮಾಡಿದ್ದರು. ಇದೇ ರೀತಿ ರಂಜಿತ್ ರಂಜು ಶೆಟ್ಟಿ, “ಯಾರ್ರಿ ಸಂವಿಧಾನ ಶಿಲ್ಪಿ… ಯಾವುದು ಕಾನೂನು… ನಮ್ಮ ಮೋದಿನ ಅವನಿಗೆ ಹೋಲಿಸ್ಬೇಡಿ..”..

  November 11, 2016
  ...
  tipu-jayanti-2
  ಸುದ್ದಿ ಸಾರ

  ಯಾವುದೂ ಶಾಶ್ವತವಲ್ಲ: ಟಿಪ್ಪು ಬಗೆಗಿನ ಇವರ ಅಭಿಮಾನ ಕೂಡ!

  “ಟಿಪ್ಪು ಒಬ್ಬ ದೇಶ ಪ್ರೇಮಿಯಾಗಿದ್ದರು. ಇಲ್ಲದಿದ್ದರೆ ಬ್ರಿಟೀಷರ ವಿರುದ್ಧ ನಾಲ್ಕು ಯುದ್ಧ ಮಾಡಬೇಕಾದ ಅಗತ್ಯವೇ ಇರಲಿಲ್ಲ” ಹೀಗಂಥ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಗುರುವಾರ ವಿಧಾನಸೌಧದ ಬಾಂಕ್ವೆಟ್ ಹಾಲಿನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. “ಟಿಪ್ಪು ದೇಶ ಪ್ರೇಮಿಯಾಗದಿದ್ದಲ್ಲಿ ನಾಲ್ಕು ಯುದ್ಧ ಮಾಡಬೇಕಾದ ಅವಶ್ಯಕತೆ ಇರಲಿಲ್ಲ. ದೇಶದಲ್ಲಿದ್ದ ಉಳಿದ ರಾಜರಂತೆ ಅವರಿಗೂ ಬ್ರಿಟಿಷರಿಗೆ ಶರಣಾಗಬಹುದಿತ್ತು. ಆದರೆ ಟಿಪ್ಪು ಹಾಗೆ ಮಾಡಲಿಲ್ಲ,” ಎಂದು ಹೇಳಿದರು. “ಮೊದಲ ಆಂಗ್ಲೋ-ಮೈಸೂರು ಯುದ್ಧ ಹೈದರಾಲಿ ನೇತೃತ್ವದಲ್ಲಿ ಆರಂಭವಾದಾಗ ಟಿಪ್ಪುವಿಗಿನ್ನೂ 15 ವರ್ಷ…

  November 11, 2016
  ...
  doogooru
  ಸುದ್ದಿ ಸಾರ

  ಹೆಗ್ಗೋಡು ಕಾರ್ಯಕ್ರಮ ಮುಗಿಯುತ್ತಿದ್ದಂತೆ ‘ದೂಗೂರು’ ಬಿಡುಗಡೆ: ರಾಘವೇಶ್ವರ ಸಾರ್ಥಕ ಸೇವೆಯಲ್ಲಿ ಸಾಗರ ಪೊಲೀಸರು!

  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಶಾಲೆಯ ಸುವರ್ಣ ಮಹೋತ್ಸವ ಸಮಾರಂಭ ಮುಗಿಯುತ್ತಿದ್ದಂತೆ ದಲಿತ ಸಂಘರ್ಷ ಸಮಿತಿಯ ಶಿವಮೊಗ್ಗ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ರಾಘವೇಶ್ವರ ಸ್ವಾಮಿಗೆ ಸಾಗರ ಪೊಲೀಸರು ತಮ್ಮ ನಿಷ್ಠೆ ಮೆರೆದಿದ್ದಾರೆ. ಶುಕ್ರವಾರ ಹೆಗ್ಗೋಡಿನ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಜನರಿಗಿಂತ ಜಾಸ್ತಿ ಉತ್ಸಾಹದಿಂದ ಪೊಲೀಸರೇ ಬಂದು..

  November 5, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top