An unconventional News Portal.

ಸುದ್ದಿ ಸಾರ
  ...
  cbi spl court-1
  ಸುದ್ದಿ ಸಾರ

  ಕಾಶ್ಮೀರಿ ಯುವಕರಿಗೆ ಗುಂಡೇಟು: ಸೈನಿಕರ ವಿರುದ್ಧ ಸೇನಾ ತನಿಖೆ

  ಕಾಶ್ಮೀರಾದ ಹಂದ್ವಾರದಲ್ಲಿ ಮಿಲಿಟರಿ ಗುಂಡೇಟಿಗೆ ಇಬ್ಬರು ಯುವಕರು ಬಲಿಯಾದ ಪ್ರಕರಣಕ್ಕೆ ಸಂಬಂಧಪ್ಟಂತೆ ಸೇನೆ ತನಿಖೆಗೆ ಆದೇಶಿಸಿದೆ.  ಜಮ್ಮು ಮತ್ತು ಕಾಶ್ಮೀರಾ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೂಡ ಘಟನೆ ಕುರಿತು ವಿಷಾಧ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಸೇನಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉದಂಪುರದ ನಾರ್ತರ್ನ್ ಕಮಾಂಡ್ ಏರಿಯಾದ ಲೆ. ಜನರಲ್ ಡಿ. ಎಸ್. ಹೂಡ, “ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ,” ಎಂದು ತಿಳಿಸಿದ್ದಾರೆ. “ಇಂತಹ ಘಟನೆಗಳು ಜಮ್ಮು ಮತ್ತು ಕಾಶ್ಮೀರಾ ರಾಜ್ಯದಲ್ಲಿ ನಡೆಸುತ್ತಿರುವ ಶಾಂತಿ ಸ್ಥಾಪನಾ ಪ್ರಕ್ರಿಯೆಗಳಿಗೆ..

  April 13, 2016
  ...
  devindar sharma-1
  ಸುದ್ದಿ ಸಾರ

  ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ: ಬೆಂಗಳೂರಿನಲ್ಲಿ ದೇವೆಂದರ್ ಶರ್ಮಾ

  ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರಕಾರ 3 ಲಕ್ಷ ಕೋಟಿ ರೂಪಾಯಿ ಶಾಶ್ವತ ಪ್ಯಾಕೇಜ್ ಘೋಷಿಸಬೇಕು ಎಂದು ಕೃಷಿ ಚಿಂತಕ ದೇವಿಂದರ್ ಶರ್ಮಾ ಬೆಂಗಳೂರಿನಲ್ಲಿ ಒತ್ತಾಯಿಸಿದ್ದಾರೆ. ಇಲ್ಲಿಗೆ ಆಗಮಿಸಿದ್ದ ಅವರು, ಭಾನುವಾರ ಆಯ್ದ ಕೆಲವು ಪತ್ರಕರ್ತರ ಜತೆ  ಮಾತನಾಡಿದರು. “ದೇಶದ ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. 60 ಕೋಟಿ ರೈತರ ಬದುಕು ಅತಂತ್ರ ಸ್ಥಿತಿಗೆ ಬಂದು ತಲುಪಿದೆ. ಈ ಸಮಯದಲ್ಲಿ ಶಾಶ್ವತ ಪರಿಹಾರ ನೀಡುವ ಮೂಲಕ ಕೃಷಿ ಚಟುವಟಿಗೆಗಳಿಗೆ ನೆರವಾಗಲು ಸರಕಾರ 3 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್..

  April 12, 2016
  ...
  cid_bangalore_office_1
  ಸುದ್ದಿ ಸಾರ

  ಸಿಐಡಿ ಪೊಲೀಸರಿಂದ ಜಸ್ಟ್ ಮಿಸ್ಸಾದ ಶಿವಕುಮಾರ ಸ್ವಾಮಿ!

  ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಸಿಐಡಿ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಭಾನುವಾರ ನಡೆದಿದೆ. ಆರೋಪಿ ಶಿವಕುಮಾರ್ ಅಲಿಯಾಸ್ ಶಿವಕುಮಾರ ಸ್ವಾಮಿ, ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ಡಯಗ್ನೋಸಿಸ್ ಸೆಂಟರ್ ಒಂದರಲ್ಲಿ ಎರಡು ದಿನಗಳಿಂದ ಚಿಕಿತ್ಸೆ ನೆಪದಲ್ಲಿ ತಂಗಿದ್ದ ಎಂಬ ಮಾಹಿತಿ ಪೊಲೀಸರಿಗೆ ತಡವಾಗಿ ಲಭ್ಯವಾಗಿತ್ತು. ಸಿಐಡಿಯ ಒಂದು ತಂಡ ಸದರಿ ಡಯಾಗ್ನೋಸಿಸ್ ಸೆಂಟರ್ಗೆ ಭೇಟಿ ನೀಡುವ ಮೊದಲೇ ಆತ ಅಲ್ಲಿಂದ ಪರಾರಿಯಾಗಿದ್ದ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಸದ್ಯ,..

  April 11, 2016
  ...
  max-police-dog-mumbai
  ಸುದ್ದಿ ಸಾರ

  ಮುಂಬೈ ದಾಳಿ ವೇಳೆ ಪ್ರಮುಖ ಪಾತ್ರವಹಿಸಿದ್ದ ‘ಮ್ಯಾಕ್ಸ್’ ಇನ್ನಿಲ್ಲ

  ಮುಂಬೈ ದಾಳಿಯ ಸಂದರ್ಭದಲ್ಲಿ ಸಾವಿರಾರು ಜನರ ಪ್ರಾಣ ಉಳಿಸಲು ಸೇನೆಗೆ ನೆರವಾಗಿದ್ದ ಪೊಲೀಸ್ ನಾಯಿ ಮ್ಯಾಕ್ಸ್ ಶುಕ್ರವಾರ ಮುಂಬೈನಲ್ಲಿ ಮೃತಪಟ್ಟಿದೆ. ನಾಯಿಯ ದೇಹಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ ಗೌರವ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಆದರೆ ಈ ಸಾಹಸಿ ನಾಯಿಯ ಅಂತ್ಯಸಂಸ್ಕಾರಕ್ಕೆ ಪೊಲೀಸ್ ಅಧಿಕಾರಿಗಳು ಗೈರಾಗಿದ್ದರು. ಕೆಲವು ದಿನಗಳಿಂದ ಖಾಯಿಲೆಯಿಂದ ಬಳಲುತ್ತಿದ್ದ ನಾಯಿ ವಿರಾರ್ ವೃದ್ಧಾಶ್ರಮದಲ್ಲಿ ಮೃತಪಟ್ಟಿದ್ದು, ನಾಯಿಗೆ ಪಾಲಕರಾದ ಫಿಝಾ ಷಾ ಮತ್ತು ಸುಭಾಷ್ ಗಾವ್ಡೆ ಸೇರಿದಂತೆ ವೃದ್ಧಾಶ್ರಮದ ಕೆಲವು ಸಿಬ್ಬಂದಿಗಳು ಮಾತ್ರ ಅಂತಿಮ ವಿದಾಯ ಹೇಳಿದರು…

  April 10, 2016
  ...
  nrega-fund-central
  ಸುದ್ದಿ ಸಾರ

  ಸುಪ್ರಿಂ ಗರಂ ಹಿನ್ನೆಲೆ: ನರೇಗಕ್ಕೆ ಕೇಂದ್ರದಿಂದ ಭಾರಿ ಹಣ ಬಿಡುಗಡೆ

  ನರೇಗಾ ಯೋಜನೆಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿಲ್ಲವೆಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಹಲವು ರಾಜ್ಯಗಳಿಗೆ 12, 230 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಯೋಜನೆಗಾಗಿ ಇಷ್ಟೊಂದು ದೊಡ್ಡ ಮೊತ್ತ ಬಿಡುಗಡೆ ಮಾಡಿದ್ದು ಇದೇ ಮೊದಲು ಎಂದು ಸಚಿವಾಲಯದ ಮೂಲಗಳು ಹೇಳಿವೆ. ಈ ಹಣ ಬಿಡುಗಡೆಯು “ಹಿಂದಿನ ವರ್ಷ ರಾಜ್ಯಗಳಿಂದ ಬಾಕಿ ಇರುವ ವೇತನ ಪಾವತಿಗೆ ಮತ್ತು ಹೊಸ ವಿತ್ತೀಯ ವರ್ಷದಲ್ಲಿ ಕಾರ್ಯಕ್ರಮ ನಿರ್ವಹಣೆಗೆ ನೆರವಾಗುತ್ತದೆ,” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಬೀರೇಂದರ್ ಸಿಂಗ್ ತಿಳಿಸಿದ್ದಾರೆ. “ಕಾರ್ಯಕ್ರಮದ ಉದ್ದೇಶಗಳ ಈಡೇರಿಕೆಗೆ..

  April 10, 2016
  ...
  dam-dry-karnataka
  ಸುದ್ದಿ ಸಾರ

  ‘ಡೆಡ್ ಸ್ಟೋರೇಜ್’ ಮಟ್ಟ ತಲುಪಿದ ಅಣೆಕಟ್ಟುಗಳು: ಬೆಂಗಳೂರಿಗೆ ಮಾತ್ರ ಆತಂಕ ಇಲ್ಲ

  ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ‘ಡೆಡ್ ಸ್ಟೋರೇಜ್’ ಮಟ್ಟ ತಲುಪಿದೆ. 13 ಪ್ರಮುಖ ಜಲಾಶಯಗಳಲ್ಲಿ, ಒಟ್ಟು 860 .51 ಟಿಎಂಸಿ ಅಡಿ ನೀರು ಸಂಗ್ರಹಣೆ ಸಾಮರ್ಥ್ಯ ಇದೆ. ಸದ್ಯ 13 ಜಲಾಶಯಗಳಲ್ಲಿ ಉಳಿದಿರುವುದು ಕೇವಲ 191 .01 ಅಡಿ ನೀರು ಮಾತ್ರ. ಲಿಂಗನಮಕ್ಕಿಯ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರಿದ್ದು, ಆತಂಕದ ಪರಿಸ್ಥಿತಿ ಇಲ್ಲ. ಆದರೆ ಹಾರಂಗಿ, ಮಲಪ್ರಭಾ, ತುಂಗಭದ್ರಾ, ಹೇಮಾವತಿ, ಕಬಿನಿ, ವರಾಹ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇದು ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕೃಷಿಯೇತರ..

  April 10, 2016
  ...
  cm siddaramayya-acb-bangalore
  ಸುದ್ದಿ ಸಾರ

  ಸಂಪುಟ ಪುನರಾಚನೆ ಹಿನ್ನೆಲೆ: ದಿಲ್ಲಿಗೆ ಸಿಎಂ ಸಿದ್ದರಾಮಯ್ಯ

  ಸಿಎಂ ಸಿದ್ದರಾಮಯ್ಯ ಏ. 14 ರಂದು ದಿಲ್ಲಿಗೆ ತೆರಳಲಿದ್ದು, ಸಂಪುಟ ಪುನರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸಚಿವ ಸಂಪುಟ ಪುನಾರಚನೆ ಕುರಿತು ಮಹತ್ವದ ತೀರ್ಮಾನಕ್ಕೆ ಬರಲಿದ್ದಾರೆ.ಅಸಮರ್ಥ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಸಂಪುಟ ಪುನಾರಚನೆ ಮಾಡಬೇಕು ಇದರಲ್ಲಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಸಮಾನ ಮನಸ್ಕ ಶಾಸಕರು ಒತ್ತಡ ಹೇರುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆಯಲಿದೆ. ಏಪ್ರಿಲ್ 15ರಂದು ಸೋನಿಯಾ ಗಾಂಧಿ ಸೇರಿದಂತೆ ಇತರೆ..

  April 10, 2016
  ...
  royal-hospital-london
  ಸುದ್ದಿ ಸಾರ

  ಬ್ರಿಟನ್ ಆರೋಗ್ಯ ಸೇವೆಗೆ ಭಾರತದಿಂದ ಮಾನವ ಸಂಪನ್ಮೂಲ ಪೂರೈಕೆ

  ಬ್ರಿಟನ್ ದೇಶದಲ್ಲಿ ವೈದ್ಯರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ಭಾರತೀಯ ಮೂಲದ ಜನರಲ್ ಪ್ರಾಕ್ಟೀಷನಸ್ರ್ಗಳನ್ನು ನೇಮಕ ಮಾಡಿಕೊಳ್ಳಲು ಅಲ್ಲಿನ ಸರಕಾರ ಮುಂದಾಗಿದೆ. 2020ನೇ ಇಸ್ವಿ ವೇಳೆಗೆ 5,000 ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ. ದೇಶದಲ್ಲಿ ಆರೋಗ್ಯ ಸೇವೆ ತರಬೇತಿಯ ಹೊಣೆ ಹೊತ್ತಿರುವ ‘ಹೆಲ್ತ್ ಎಜ್ಯುಕೇಶನ್ ಇಂಗ್ಲೆಂಡ್’ ಈ ಬಗ್ಗೆ ಭಾರತದ ಸರಣಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ‘ಪಲ್ಸ್’ ನಿಯತಕಾಲಿಕ ವರದಿ ಮಾಡಿದೆ. 40 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ, 500 ದಶಲಕ್ಷ ಪೌಂಡ್ ವಹಿವಾಟು ನಡೆಸುತ್ತಿರುವ ಚೆನ್ನೈ..

  April 10, 2016
  ...
  veg capsules
  ಸುದ್ದಿ ಸಾರ

  ಮಾತ್ರೆಗಳಿಗೂ ಸಸ್ಯಾಹಾರದ ಲೇಪನ: ಪರಿಶೀಲನೆಯಲ್ಲಿ ಪ್ರಸ್ತಾವನೆ

  ಫಾರ್ಮಸಿಯಲ್ಲಿ ನೀವು ಶುದ್ಧ ಸಸ್ಯಾಹಾರಿ ಕ್ಯಾಪ್ಸೂಲ್ ಪಡೆಯುವ ದಿನ ದೂರವಿಲ್ಲ. ದೇಶದಲ್ಲಿ ಸಸ್ಯಜನ್ಯ ಸೆಲ್ಯುಲೋಸ್ ಆಧರಿತ ಗುಳಿಗೆಗಳನ್ನು ಪರಿಚಯಿಸುವ ಸಂಬಂಧ ಸಲ್ಲಿಸಲಾಗಿರುವ ಪ್ರಸ್ತಾವನೆ ದೇಶದ ಅತ್ಯುನ್ನತ ಔಷಧ ನಿಯಂತ್ರಕರ ಪರೀಶೀಲನೆಯಲ್ಲಿದೆ. “ಪ್ರಾಣಿಜನ್ಯ ಜೆಲೆಟಿನ್ಗಿಂತ ಇದು ಹೆಚ್ಚು ಸುರಕ್ಷಿತ ಎಂಬ ಅಂಶದ ಬಗ್ಗೆಯೂ ಪರಿಶೀಲನೆ ನಡೆದಿದೆ,” ಎಂದು ಡ್ರಗ್ ಕಂಟ್ರೋಲರ್ ಜನರಲ್ ಜಿ.ಎನ್.ಸಿಂಗ್ ಹೇಳಿದ್ದಾರೆ. ಸದ್ಯ ಜೆಲೆಟಿನ್ ಅನ್ನು ಹಸು, ಹಂದಿ ಮತ್ತಿತರ ಪ್ರಾಣಿಗಳ ಸಂಸ್ಕರಿತ ಮೂಳೆ, ಚರ್ಮ ಹಾಗೂ ಕೋಶಗಳಿಂದ ತಯಾರಿಸುವ ವಿಧಾನ ಜಾರಿಯಲ್ಲಿದೆ. ಈ ಸಂಬಂಧ, “ಔಷಧ ನಿಯಂತ್ರಕರು..

  April 10, 2016
  ...
  bjp-flag-_new
  ಸುದ್ದಿ ಸಾರ

  ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ; ಉತ್ತರ ಪ್ರದೇಶ, ಪಂಜಾಬ್ಗೆ ನೂತನ ರಾಜ್ಯಾಧ್ಯಕ್ಷರ ನೇಮಕ

  ಪ್ರಮುಖ ಮೂರು ರಾಜ್ಯಗಳಿಗೆ  ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನು ನೇಮಿಸಿದೆ. ಕರ್ನಾಟಕ ಬಿಜೆಪಿ ಸಾರಥ್ಯವನ್ನು ಮಾಜಿ ಮುಖ್ಯಮಂತ್ರಿ, ಹಾಲಿ ರಾಷ್ಟ್ರೀಯ ಉಪಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ವಹಿಸಲಾಗಿದೆ. ಇದೇ ವೇಳೆ ಪಂಚಾಬ್ ರಾಜ್ಯಾಧ್ಯಕ್ಷರಾಗಿ ಕೇಶವ್ ಪ್ರಸಾದ್ ಮೌರ್ಯ ನೇಮಕವಾಗಿದ್ದಾರೆ. ಇನ್ನು ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದ ಹೊಣೆಯನ್ನು ಕೇಂದ್ರದ ಸಾಮಾಜಿಕ ನ್ಯಾಯ ರಾಜ್ಯ ಸಚಿವ ವಿಜಯ್ ಸಂಪ್ಲಾಗೆ ವಹಿಸಿಲಾಗಿದೆ.  ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಘೋಷಣೆ ಹೊರಡಿಸಿದ್ದಾರೆ. ಇಲ್ಲಿವರಗೆ..

  April 8, 2016

Top