An unconventional News Portal.

ಸುದ್ದಿ ಸಾರ
  ...
  Vidhana-Soudha-bangalore-View
  ಸುದ್ದಿ ಸಾರ

  ‘ನಿಧಾನ ಸೌಧ’ದಲ್ಲಿ ಕಡತಗಳನ್ನು ಬಾಕಿ ಉಳಿಸಿಕೊಂಡ ಸಚಿವರು!

  ಕಡತ ವಿಲೇವಾರಿ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಅನೇಕ ಇಲಾಖೆಗಳ ಸಾಧನೆ ಅವಲೋಕಿಸಿದರೆ ಸಿಎಂ ಆದೇಶಕ್ಕೆ ಸಚಿವರ್ಯಾರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ಗುಮಾನಿ ವ್ಯಕ್ತವಾಗುತ್ತದೆ. ಪರಿಣಾಮ ಕಡತ ವಿಲೇವಾರಿಯಲ್ಲಿ ಸಿದ್ದು ಟೀಮ್ ಕಳಪೆ ಸಾಧನೆ ಮಾಡಿದ್ದು, ಕೇವಲ ಶೇ.12 ರಷ್ಟು ಮಾತ್ರ ಕಡತ ವಿಲೇವಾರಿಯಾಗಿದೆ. ಒಂದೆಡೆ ಸಚಿವ ಸಂಪುಟ ಪುನರಚನೆಯ ತೂಗುಕತ್ತಿ ಸಚಿವರ ಮೇಲೆ ಇದ್ರೆ, ಕಡತ ವಿಚಾರದಲ್ಲಿನ ಕಳಪೆ ಸಾಧನೆ..

  April 21, 2016
  ...
  cid_bangalore_office_1
  ಸುದ್ದಿ ಸಾರ

  ಪ್ರಶ್ನೆ ಪತ್ರಿಕೆ ಜಾಲಕ್ಕೆ ‘ಕೋಕಾ’ ಬಿಸಿ: ಅಪರೂಪಕ್ಕೆ ಬಳಸುವ ಈ ಕಾಯ್ದೆ ಏನು- ಎತ್ತ?

  ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ಮೇಲೆ ಸಿಐಡಿ ಪೊಲೀಸರು ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000) ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ತಲೆ ಮರೆಸಿಕೊಂಡಿರುವ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗುವುದು ಕಷ್ಟವಾಗಲಿದೆ. “ದ್ವಿತೀಯ ಪಿಯುಸಿ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಬಂಧಿತ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಸೆಕ್ಷನ್ 3ರ ಅಡಿ ಕೇಸು ದಾಖಲಿಸಲಾಗಿದೆ. ವಿಶೇಷ ಕಾಯ್ದೆ ಅಡಿ ಕೇಸು ದಾಖಲಿಸಿದ ಮಾಹಿತಿಯನ್ನು ಪ್ರಧಾನ ಸಿವಿಲ್ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ,” ಎಂದು ಸಿಐಡಿ ಡಿಜಿಪಿ..

  April 20, 2016
  ...
  Law_Minister_T_B_Jayachandra
  ಸುದ್ದಿ ಸಾರ

  ಬರ ಪರಿಹಾರಕ್ಕೆ ಹಣ, ಮಕ್ಕಳಿಗೆ ರಜೆಯಲ್ಲೂ ಬಿಸಿಊಟ: ಸಂಪುಟ ಸಭೆಯ ತೀರ್ಮಾನಗಳು

  ಬರಪೀಡಿತ ಎಂದು ಘೋಷಿತವಾಗಿರುವ ಎಲ್ಲಾ 137 ತಾಲ್ಲೂಕುಗಳಲ್ಲಿ ಶಾಲಾ ಮಕ್ಕಳಿಗೆ ಬೇಸಿಗೆ ರಜಾ ಅವಧಿಯಲ್ಲೂ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ, “ಬೇಸಿಗೆ ರಜಾ ಅವಧಿಯ ಎಲ್ಲಾ 39 ದಿನಗಳಲ್ಲೂ ಸಂಬಂಧಿತ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಎಲ್ಲಾ..

  April 20, 2016
  ...
  bjp-revenue
  ಸುದ್ದಿ ಸಾರ

  ನಿಜಕ್ಕೂ ಇದು ಬಿಜೆಪಿ ಪಾಲಿಗೆ ‘ಅಚ್ಚೆ ದಿನ್’!

  ದೇಶದಲ್ಲಿ ಪೂರ್ಣ ಪ್ರಮಾಣದ ಬಲದೊಂದಿಗೆ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷದ ಪಾಲಿಗೆ ಮಾತ್ರ ಇದು ‘ಆಚ್ಚೆ ದಿನ್’ ಎಂಬುದರಲ್ಲಿ ಎರಡು ಮಾತಿಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರ ಹಿಡಿದು ಬಂದ ಮೇಲೆ ಪಕ್ಷಕ್ಕೆ ಆದಾಯದ ಹರಿವು ಹೆಚ್ಚಾಗಿದೆ. ವಿವಿಧ ಮೂಲಗಳಿಂದ ಪಕ್ಷಕ್ಕೆ ಹತ್ತಿರ ಹತ್ತಿರ ಸಾವಿರ ಕೋಟಿ ಹಣ ಬಂದು ಬಿದ್ದಿದೆ. ಈ ಅಂಶಗಳು ಬಿಜೆಪಿ ಪಕ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಡಿಟ್ ವಿವರದಲ್ಲಿ ಬಹಿರಂಗವಾಗಿವೆ. 2014 -15 ರಲ್ಲಿ ಬಿಜಿಪಿ ಖಜಾನೆಯಲ್ಲಿ 970.43 ಕೋಟಿ ರೂಪಾಯಿ ಇದೆ..

  April 20, 2016
  ...
  lingayat-survey-1
  ಸುದ್ದಿ ಸಾರ

  ಜಾತಿ ಪ್ರಾಬಲ್ಯ ಮರೆಯಲು ‘ಪ್ರೈವೇಟ್ ಸಮೀಕ್ಷೆ’ಗಳಿದ ವೀರಶೈವ ವೇದಿಕೆ!

  ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಗಣತಿಯ ಮಾಹಿತಿ ಸೋರಿಕೆ ಸುದ್ದಿಯಾದ ಬೆನ್ನಲ್ಲೇ ವೀರಶೈವ ಲಿಂಗಾಯತ ಜಾತಿಯ ಸದಸ್ಯರು ಫೋನ್ ಮೂಲಕ ಜನಗಣತಿ ಶುರುಮಾಡಿದ್ದಾರೆ. “ಜಾತಿ ಜನಗಣತಿ ಎಣಿಕೆಯ ಸಂಖ್ಯೆಯಲ್ಲಿ ಲಿಂಗಾಯಿತರ ಗಮನಾರ್ಹ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ಇದ್ದು, ಅದರಲ್ಲಾಗಿರುವ ತಪ್ಪನ್ನು ಸರಿಮಾಡಲು ಫೋನ್ ಮೂಲಕ ಜಾತಿ ಜನಗಣತಿ ಶುರುಮಾಡಲಾಗಿದೆ,” ಎಂದು ಲಿಂಗಾಯತ ಸಮುದಾಯದ ಸದದ್ಯರು ತಿಳಿಸಿದ್ದಾರೆ. “ರಾಜ್ಯದ ಜನಸಂಖ್ಯೆಯಲ್ಲಿ ಲಿಂಗಾಯತ ವೀರಶೈವ ಸಮುದಾಯದ ಜನಸಂಖ್ಯೆ ಶೇ. 15 ರಿಂದ 20 ಇದ್ದಾರೆ. ಈ ಸಮುದಾಯದಲ್ಲಿ ಎರಡು ಬೇರೆ ವಿಭಾಗಗಳನ್ನು..

  April 20, 2016
  ...
  puc-evaluation
  ಸುದ್ದಿ ಸಾರ

  ಶುರುವಾದ ಪಿಯುಸಿ ಮೌಲ್ಯಮಾಪನ: ಮೇ ಮಧ್ಯದಲ್ಲಿ ಫಲಿತಾಂಶ ನಿರೀಕ್ಷೆ

  ಹಲವು ತೊಡಕುಗಳ ನಡುವೆ ಬುಧವಾರದಿಂದ ರಾಜ್ಯದ ಎಲ್ಲ ಕಡೆ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಮೌಲ್ಯಮಾಪನ ಅಧಿಕೃತವಾಗಿ ಆರಂಭಗೊಂಡಿದೆ. ಮಂಗಳವಾರ ಸಂಜೆ ಉಪನ್ಯಾಸಕರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡು, “ವಿದ್ಯಾರ್ಥಿಗಳ ಹಿತಕ್ಕೋಸ್ಕರ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವುದಾಗಿ,” ಹೇಳಿದ್ದರು. “ಬುಧವಾರ ಬೆಳಗ್ಗೆಯೇ ಬೆಂಗಳೂರು, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಾರಂಭಿಸಲಾಗಿದೆ,” ಎಂದು ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕ ರಾಮೇಗೌಡ ತಿಳಿಸಿದ್ದಾರೆ. “ಮೊದಲ ದಿನ ಪ್ರಶ್ನೆ ಪತ್ರಿಕೆಗಳ ಡಿಕೋಡಿಂಗ್..

  April 20, 2016
  ...
  High_Court_of_Karnataka,_Bangalore
  ಸುದ್ದಿ ಸಾರ

  ಪಿಎಫ್ ಪ್ರತಿಭಟನೆ: ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಕಿಡಿಕಾರಿರುವ ಹೈಕೋರ್ಟ್ ಜನಸಾಮಾನ್ಯರಿಗೆ ರಕ್ಷಣೆ ಕೊಡಲು ಸಾಧ್ಯವಾಗದಿದ್ದರೆ ಸರಕಾರ ಇರಬೇಕೇ ಎಂದು ತರಾಟೆಗೆ ತೆಗೆದುಕೊಂಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ, ಸೋಮವಾರ ಮತ್ತು ಮಂಗಳವಾರ ಪಿಎಫ್ ವಿಷಯಕ್ಕಾಗಿ ಕಾರ್ಮಿಕರು ನಡೆಸಿದ ಪ್ರತಿಭಟನೆ ವೇಳೆ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಸರಕಾರವನ್ನು ಕಠಿಣ ಪದಗಳಲ್ಲಿ ಟೀಕಿಸಿದರು. ಮೈಸೂರು, ಮಂಗಳೂರು ಮತ್ತು ಶಿವಮೊಗ್ಗ ಘಟನೆಗಳು ನಡೆದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಉದಾಸೀನ..

  April 20, 2016
  ...
  5f9a07b1-f5d8-4ab3-a60a-431e22f71a9d
  ಸುದ್ದಿ ಸಾರ

  ಆರ್ಥಿಕ ಮುಗ್ಗಟ್ಟಿನಲ್ಲಿ ಶ್ರೀಮಂತ ಉಗ್ರ ಸಂಘಟನೆ ಐಸಿಲ್!

  ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆ ಎಂದು ಬಿಂಬಿಸಿದ್ದ  ಐಸಿಲ್, ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಐಸಿಲ್ ಆದಾಯ ತೀವ್ರ ಕುಸಿತವಾಗಿದೆ. ಆದಾಯ ಹೆಚ್ಚಿಸಿಕೊಳ್ಳವ ನಿಟ್ಟಿನಲ್ಲಿ ತನ್ನ ನಿಯಂತ್ರಣ ಇರುವ ಪ್ರದೇಶಗಳಲ್ಲಿ ಕಂಡ ಕಂಡಿದ್ದಕ್ಕೆಲ್ಲಾ ಟ್ಯಾಕ್ಸ್ ಹಾಕುವ ಪರಿಪಾಠವನ್ನು ಸಂಘಟನೆ ಆರಂಭಿಸಿದ ಎಂದು ವರದಿಯಾಗಿದೆ. ತಾಲಿಬಾನ್, ಆಲ್ ಕೈದಾ ನಂತರ ಐಸಿಲ್ ಶ್ರೀಮಂತ ಉಗ್ರ ಸಂಘಟನೆಯಾಗಿ ಹೊರ ಹೊಮ್ಮಿತ್ತು. ಅದು ನೀಡುತ್ತಿದ್ದ ಭಾರೀ ವೇತನಕ್ಕಾಗಿಯೇ ಸಂಘಟನೆ ಸೇರುವವರ ಸಂಖ್ಯೆಯೂ ಹೆಚ್ಚಿತ್ತು. ಇರಾಕ್, ಸಿರಿಯಾ ಮೊದಲಾದ ಕಡೆಗಳಲ್ಲಿ ತೈಲೋತ್ಪನ್ನಗಳ ಮೇಲೆ ಹಿಡಿತ ಸಾಧಿಸಿದ್ದ..

  April 20, 2016
  ...
  Profile Of Chairman UB Group And Kingfisher Airlines Vijay Mallya
  ಸುದ್ದಿ ಸಾರ

  ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್

  ಹಣ ದುರ್ಬಳಕೆ ಸಂಬಂಧ ವಿಚಾರಣೆಗಾಗಿ ಸ್ಥಾಪನೆಗೊಂಡಿರುವ ಮುಂಬೈ ವಿಶೇಷ ನ್ಯಾಯಾಲಯ ಸೋಮವಾರ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಇದೇ ವೇಳೆ, ಜಾರಿ ನಿರ್ದೇಶನಾಯಲ ಹೊರಿಸಿದ್ದ ಆರೋಪವನ್ನು ಕೈಬಿಡುವಂತೆ ಮಲ್ಯ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮಲ್ಯಗೆ ಸೇರಿದ್ದ ‘ಕಿಂಗ್ ಫಿಶರ್ ಏರ್‍ಲೈನ್’ ವಿಮಾನಯಾನ ಸಂಸ್ಥೆ ಐಡಿಬಿಐ ಬ್ಯಾಂಕ್‍ನಿಂದ 430 ಕೋಟಿ ಸಾಲ ಪಡೆದು, ವಿದೇಶದಲ್ಲಿ ಹೂಡಿಕೆ ಮಾಡಿದ ಗಂಭೀರ ಆರೋಪವನ್ನು ಜಾರಿ ನಿರ್ದೇಶನಾಲಯ (ಇಡಿ) ಹೊರಿಸಿತ್ತು. ಇದನ್ನು ಅಲ್ಲಗೆಳೆದ..

  April 18, 2016
  ...
  munde-selfi-drought
  ಸುದ್ದಿ ಸಾರ

  ನೀರು ಸಿಕ್ತಾ ಪಂಕಜಾ?: ಬರದಲ್ಲೂ ಸೆಲ್ಫೀ ಹುಚ್ಚಿಗೆ ಬಿದ್ದ ಬಿಜೆಪಿ ಸಚಿವೆ

  ಮಹಾರಾಷ್ಟ್ರದ ಜಲ ಸಂರಕ್ಷಣಾ ಖಾತೆ ಸಚಿವೆ ಪಂಕಜಾ ಮುಂಡೆ ಬರ ಪೀಡಿತ ಸ್ಥಳದಲ್ಲಿ ಸೆಲ್ಫೀ ತೆಗಿಯಲು ಹೋಗಿ ವಿವಾದ ಮೈ ಮೇಲೆಳೆದುಕೊಂಡಿದ್ದಾರೆ. ಕುಡಿಯುವ ನೀರಿಗಾಗಿ ಹಾಹಾಕಾರ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿಯಾಗಿದ್ದ ಮಹರಾಷ್ಟ್ರದ ಲಾಥೋರ್ ಜಿಲ್ಲೆಗೆ ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜ್ ಮುಂಡೆ ಸೋಮವಾರ ಭೇಟಿ ನೀಡಿದರು. ಆದರೆ ಈ ಬರ ಪರಿಶೀಲನೆ ತಮ್ಮ ಮೊಬೈಲ್ನಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. ಸಾಲದ್ದು ಅಂತ ಟ್ವೀಟ್ ಬೇರೆ ಮಾಡಿದ್ದಾರೆ. ಈ ಸೆಲ್ಫಿ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟೀಕೆಗಳಿಗೆ ಗುರಿಯಾಗಿದೆ. ‘ಸೆಲ್ಫಿ ತೆಗೆದುಕೊಳ್ಳಲು..

  April 18, 2016

Top