An unconventional News Portal.

ಸುದ್ದಿ ಸಾರ
  ...

  ಸಿರಿಯಾದಲ್ಲಿ ಮುಂದುವರಿದ ಮಾರಣಹೋಮ: ಹರಿಯುತ್ತಿರುವ ನೆತ್ತರಿಗೆ ಕೊನೆಯೆಂದು?

  ಸಿರಿಯಾದ ಡೆಮಾಸ್ಕಸ್‌ ಪ್ರದೇಶದ ಪೂರ್ವಭಾಗವಾದ ಘುಟಾದಲ್ಲಿ ವೈಮಾನಿಕ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 250 ದಾಟಿದ್ದು, 1,200ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಮೃತಪಟ್ಟವರಲ್ಲಿ 50ಕ್ಕೂ ಹೆಚ್ಚು ಜನ ಮಕ್ಕಳು ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ತಿಳಿಸಿವೆ. 2013ರಿಂದಲೇ ಸೈನಿಕ ಕಾರ್ಯಾಚರಣೆಗಳು ನಡೆಯುತ್ತಿರುವ ಈ ಪ್ರದೇಶದಲ್ಲಿ ಕೇವಲ 48 ಗಂಟೆ ಅವಧಿಯೊಳಗೆ ಇಷ್ಟು ಪ್ರಮಾಣದ ಸಾವು ನೋವು ಈ ಹಿಂದೆ ಎಂದೂ ಸಂಭವಿಸಿರಲಿಲ್ಲ. ಸುಮಾರು 3,00,000 ಜನರನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಗಡಿ ಕುರಿತಾಗಿ ಸಿರಿಯಾ […]

  February 21, 2018
  ...

  ಹ್ಯಾರಿಸ್ ಪುತ್ರ ನಲಪಾಡ್‌ ಗೂಂಡಾಗಿರಿ, ಯುವಕನ ಮೇಲೆ ಹಲ್ಲೆ; ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ನಡೆದಿದ್ದೇನು?

  ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಮತ್ತು ಆತನ ಬೆಂಬಲಿಗರು ಶನಿವಾರ ರಾತ್ರಿ ಬೆಂಗಳೂರಿನ ಯುಬಿ ಸಿಟಿಯ ಫರ್ಜಿ ಕೆಫೆ ರೆಸ್ಟೊರಂಟ್‌ನಲ್ಲಿ ಉದ್ಯಮಿ ಲೋಕನಾಥ್‌ ಎಂಬುವರ ಪುತ್ರ 24 ವರ್ಷದ ವಿದ್ವತ್‌ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮುಖ ಮತ್ತು ತಲೆಗೆ ಗಂಭೀರವಾಗಿ ಗಾಯವಾಗಿರುವ ವಿದ್ವತ್‌ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿರುವ ನಲಪಾಡ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಲಪಾಡ್‌ ಮತ್ತು ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್‌ 341, 506, 143, […]

  February 18, 2018
  ...

  ವಿಶ್ವಸಂಸ್ಥೆ ವರದಿ: ಮೇಲ್ಜಾತಿ ಹೆಂಗಸರಿಗೆ ಹೋಲಿಸಿದರೆ ದಲಿತ ಮಹಿಳೆಯರ ಆಯಸ್ಸು ಕಡಿಮೆ

  ಭಾರತದಲ್ಲಿ ದಲಿತ ಮಹಿಳೆಯರು, ಉನ್ನತ ಜಾತಿಯ ಮಹಿಳೆಯರಿಗಿಂತ ಸರಾಸರಿ 14.6 ವರ್ಷ ಕಡಿಮೆ ಬದುಕುತ್ತಾರೆ… ಹಾಗಂತ ವಿಶ್ವಸಂಸ್ಥೆಯ ‘ಟರ್ನಿಂಗ್ ಪ್ರಾಮಿಸಸ್‌ ಇಂಟೂ ಆಕ್ಷನ್: ಜೆಂಡರ್ ಇಕ್ವಾಲಿಟಿ ಇನ 2030 ಅಜೆಂಡಾ’ ಎಂಬ ವರದಿ ಹೇಳಿದೆ. ಬಹುತೇಕ ದಲಿತ ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಇರುತ್ತವೆ. ಬದುಕು ಕಟ್ಟುವ ಸಲುವಾಗಿ ಇಂತಹ ಕುಟುಂಬಗಳ ಹೆಂಗಸರು ಹೆಚ್ಚು ಶ್ರಮ ಪಡುತ್ತಾರೆ. ಪೌಷ್ಠಿಕಾಂಶದ ಕೊರತೆ ಇಲ್ಲಿ ಹೆಚ್ಚು ಕಾಡುತ್ತವೆ. ಈ ಎಲ್ಲಾ ಕಾರಣಗಳಿಗಾಗಿ ದಲಿತ ಮಹಿಳೆಯರ ಆಯಸ್ಸು, ಇತರೆ ಮೇಲ್ಜಾತಿ ಹೆಂಗಸರಿಗೆ […]

  February 17, 2018
  ...

  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆದಾಯ ಮೂಲ ಬಹಿರಂಗ ಕಡ್ಡಾಯ; ಸುಪ್ರೀಂಕೋರ್ಟ್

  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆದಾಯ ಮಾತ್ರವಲ್ಲ, ಅದರ ಮೂಲವನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ. ಅಭ್ಯರ್ಥಿಯ ಪತ್ನಿ ಮತ್ತು ಮಕ್ಕಳ ಆದಾಯ ಮೂಲದ ಮಾಹಿತಿಯನ್ನೂ ನಾಮಪತ್ರದೊಂದಿಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.  ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಆದಾಯದ ಮಾಹಿತಿ ನೀಡುವುದರ ಜತೆಗೆ ಆದಾಯದ ಮೂಲವನ್ನೂ ಬಹಿರಂಗ ಪಡಿಸಬೇಕೆಂದು ಕೋರಿ ‘ಲೋಕ ಪ್ರಹರಿ’ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನೇತೃತ್ವದ ನ್ಯಾಯಪೀಠ ಈ […]

  February 16, 2018
  ...

  ಆರ್‌ಬಿಐ ಪಂಚ್: 195 ದಿನಗಳಲ್ಲಿ ದಿವಾಳಿ ಎದ್ದವರ ಹೊಸ ಪಟ್ಟಿಯನ್ನು ನಿರೀಕ್ಷಿಸಿ…

  ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ಗಳು ನೀಡಿರುವ ಬೃಹತ್ ಸಾಲಗಳ ಮರುಪಾವತಿಗೆ ಸಂಬಂಧಪಟ್ಟ ಹಾಗೆ ಕಠಿಣ ಕ್ರಮಗಳನ್ನು ಮಂಗಳವಾರ ರಾತ್ರಿ ಘೋಷಿಸಿದೆ. ಈ ಸಂಬಂಧ, ಜಾರಿಯಲ್ಲಿದ್ದ ಸಾಲ ಮರುಪಾವತಿ ಯೋಜನೆಗಳನ್ನು ರದ್ದುಗೊಳಿಸಲಾಗಿದೆ. ಅಷ್ಟೆ ಅಲ್ಲ, ಸಾಲ ಮರುಪಾವತಿ ಮಾಡದ ಖಾತೆಗಳನ್ನು ಸುಸ್ಥಿತಿಗೆ ತರಲು 180 ದಿನಗಳ ಗಡುವು ನೀಡಿದೆ. ಈ ಹಿನ್ನೆಲೆಯಲ್ಲಿ, ಹಲವು ದಿನಗಳಿಂದ ಕೆಟ್ಟ ಸಾಲದ ಸುಳಿಯನ್ನು ಸಿಲುಕಿರುವ ದೇಶದ ಆರ್ಥಿಕತೆಯಲ್ಲಿ ಹೊಸ ಸಂಚಲನ ಮೂಡಿದೆ. ಕೇಂದ್ರ ಸರಕಾರ ಆರ್‌ಬಿಐ ಕ್ರಮವನ್ನು ಸ್ವಾಗತಿಸಿದ್ದು, ಸಾಲಗಾರರಿಗೆ ಇದು ‘ವೇಕ್ […]

  February 14, 2018
  ...

  ‘ಮಿರ್ಯಾಕಲ್ ಬೇಬಿ’: ಉಗ್ರರ ಗುಂಡು ತಗುಲಿದರೂ ಮಗುವಿಗೆ ಜನ್ಮ ನೀಡಿದ ಸೈನಿಕನ ಪತ್ನಿ

  ಕಣಿವೆನಾಡು ಎಂದೇ ಕರೆಸಿಕೊಳ್ಳುವ ಜಮ್ಮು-ಕಾಶ್ಮೀರದ ಮಿಲಿಟರಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಹೆಣ್ಣು ಮಗುವೊಂದು ಜನಿಸಿದೆ. ಉಗ್ರರ ದಾಳಿಗೆ ತುತ್ತಾಗಿದ್ದರೂ, 35ವಾರಗಳ ಗರ್ಭಿಣಿಯು ಮಗುವಿಗೆ ಜನನ ನೀಡಿದ್ದನ್ನು ‘ಮಿರಾಕಲ್’ ಎಂದೇ ಹಲವರು ಕರೆದಿದ್ದಾರೆ.   Maj Avijit Singh is recovering well and so are Shazada, wife of Nk. Nazir Ahmad Khan and their little baby girl. Their pictures brought tears of relief to my eyes. Jai Hind […]

  February 12, 2018
  ...

  ‘ಭಿಲ್‌ ಗ್ಯಾಂಗ್‌ ಅಪರಾಧಗಳ ಅಕ್ಷಯಪಾತ್ರೆ’: ಪೊಲೀಸರ ತನಿಖೆಯಲ್ಲಿ ಅಗೆದಷ್ಟೂ ಸಿಗುತ್ತಿದೆ ‘ಚಿನ್ನ’!

  ಬೆಂಗಳೂರು ಪೊಲೀಸರು ಭಿಲ್‌ ಗ್ಯಾಂಗ್‌ನ ಐವರನ್ನು ಬಂಧಿಸಿದ ಬಗ್ಗೆ ಪೊಲೀಸ್‌ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಅಷ್ಟಕ್ಕೇ ಪ್ರಕರಣದ ತನಿಖೆ ಮುಗಿದಿಲ್ಲ. ಮಧ್ಯಪ್ರದೇಶದಲ್ಲೇ ಬೀಡು ಬಿಟ್ಟಿರುವ ಬೆಂಗಳೂರು ಪೊಲೀಸರಿಗೆ ಭಿಲ್‌ ಗ್ಯಾಂಗ್‌ನ ಅಪರಾಧದ ಅಕ್ಷಯಪಾತ್ರೆ ಸಿಕ್ಕಿದೆ. ಕೈ ಹಾಕಿದಷ್ಟು ಮನೆಗಳ್ಳತನ ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗ್‌ನ ಪಾತ್ರ ಸಿಗುತ್ತಿದೆ. ಉನ್ನತ ಪೊಲೀಸ್‌ ಮೂಲಗಳ ಮಾಹಿತಿಯ ಪ್ರಕಾರ ಸುಮಾರು 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗ್‌ನ ಸದಸ್ಯರ ಕೈವಾಡ ಇಲ್ಲಿಯವರೆಗಿನ ತನಿಖೆಯಲ್ಲಿ ಪತ್ತೆಯಾಗಿದೆ.  ರಾಜ್ಯದಲ್ಲಿ ನಡೆದ ಹಲವು ಮನೆಗಳ್ಳತನ ಪ್ರಕರಣಗಳಲ್ಲಿ […]

  February 10, 2018
  ...

  ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ಗೆ ಬಿಯರ್ ಕುಡಿಸಿದ ‘ಟ್ವಿಟರ್ ಹುಡುಗಿಯರು’!

  “ಇತ್ತೀಚೆಗೆ ಹುಡುಗಿಯರೂ ಬಿಯರ್ ಕುಡಿಯುತ್ತಿರುವುದನ್ನು ಗಮನಿಸಿದರೆ, ನನಗೆ ಭಯ ಶುರುವಾಗಿದೆ,” ಎಂದಿದ್ದಾರೆ ಗೋವಾ ಸಿಎಂ ಮನೋಹರ್ ಪರಿಕ್ಕರ್. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ಪ್ರತಿಕ್ರಿಯೆ ನೀಡುವ ಮೂಲಕ ಹುಡುಗಿಯರು ಮನೋಹರ್ ಪರಿಕ್ಕರ್ ಅವರ ಕಾಲೆಳೆದಿದ್ದಾರೆ. ಗೋವಾ ರಾಜ್ಯ ಸರಕಾರದ ಶಾಸಕಾಂಗ ಕಚೇರಿ ಆಯೋಜಿಸಿದ್ದ ‘ಯುವ ಜನರ ಸಂಸತ್ತು’ ಕಾರ್ಯಕ್ರಮದಲ್ಲಿ ಪರಿಕ್ಕರ್ ಭಾಗವಹಿಸಿ ಮಾತನಾಡಿದ್ದರು.  “ಗೋವಾ ರಾಜ್ಯವನ್ನು ವ್ಯಸನ ಮುಕ್ತವಾಗಿಸುವ ಅಭಿಯಾನ ಜಾರಿಯಲ್ಲಿದೆ. ಆದರೆ, ಅದು ಮದ್ಯಮುಕ್ತವಾಗಲಿದೆ ಎಂದು ನನಗೆ ನಂಬಿಕೆಯಿಲ್ಲ. ಇತ್ತೀಚೆಗೆ ಹುಡುಗಿಯರೂ ಬಿಯರ್ […]

  February 10, 2018
  ...

  ಅಮೆರಿಕ ಷೇರುಪೇಟೆ, ಉದ್ಯೋಗ ವೃದ್ಧಿ & ‘ವ್ಯತಿರಿಕ್ತ ಪರಿಣಾಮ’: ಒಳ್ಳೆ ಸುದ್ದಿ ಕೆಟ್ಟ ಪ್ರಭಾವ ಬೀರುತ್ತಿದೆ ಎಂದ ಟ್ರಂಪ್

  ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ಉಂಟಾಗಿರುವ ಷೇರುಗಳ ಬೆಲೆ ಕುಸಿತದ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯ ಮೇಲಾಗಿದೆ. ವಾಲ್‌ ಸ್ಟ್ರೀಟ್‌ನ ಈ ಪರಿಣಾಮದಿಂದ ಜಾಗತಿಕ ಷೇರು ಮಾರುಕಟ್ಟೆಯ ಸೂಚ್ಯಂಕದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ. ಷೇರು ವಹಿವಾಟು ಕಳೆದ ವಾರದಿಂದ ಕುಸಿತ ಕಂಡಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಈ ಬೆಳವಣಿಗೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. “ಒಳ್ಳೆಯದೆಲ್ಲವೂ ಈಗ ಕೆಟ್ಟ ಪ್ರಭಾವ ಬೀರುತ್ತಿದೆ” ಎಂಬ ಟ್ರಂಪ್ ಟ್ವೀಟ್‌ನ ಹಿನ್ನೆಲೆ ಮತ್ತು ಷೇರು ಮಾರುಕಟ್ಟೆಯ ಸೂಚ್ಯಂಕ […]

  February 8, 2018
  ...

  ‘ಸಂವಾದ’ ಸಂಸ್ಥೆಯ ಬೆಳ್ಳಿಹಬ್ಬ ‘ಪರಿಸೆ’: ವಿಚಾರ ಸಂಕಿರಣ; ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ

  ಸಂವಾದ ಸಂಸ್ಥೆ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಮಕಾಲೀನ ಭಾರತದಲ್ಲಿ ಉನ್ನತ ಶಿಕ್ಷಣ ಅವಕಾಶ ವಂಚಿತ ಯುವಜನ ಸಮುದಾಯಗಳಿಂದ ದೂರವಾಗುತ್ತಿರುವ ರಾಜಕಾರಣದ ಕುರಿತು ‘ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ’ ಎಂಬ ಶೀರ್ಷಿಕೆಯಡಿಯಲ್ಲಿ ಬೆಂಗಳೂರಿನ ಗಾಂಧಿ ಭವನ, ಕುಮಾರ ಪಾರ್ಕ್‌ನಲ್ಲಿ ಫೆಬ್ರುವರಿ 9ರ ಶುಕ್ರವಾರ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ… ಈ ವಿಚಾರ ಸಂಕಿರಣದಲ್ಲಿ  ಚಿಂತಕ ಮತ್ತು ಲೇಖಕ ಆನಂದ್ ತೇಲ್ತುಂಬ್ಡೆ, ಸಮಾಜ ವಿಜ್ಞಾನಿ  ಡಾ. ಸಿ.ಜಿ. ಲಕ್ಷ್ಮಿಪತಿ, ರಾಜಕೀಯ ಚಿಂತಕ ಹಾಗೂ ಸಮಾಜ […]

  February 8, 2018

Top