An unconventional News Portal.

ಸುದ್ದಿ ಸಾಗರ
    ...

    ನಗರ ಮಾಲಿನ್ಯ ತಡೆಗೆ ಕ್ರಮ: ದಿಲ್ಲಿ ರಸ್ತೆಗಳಿಂದ ಡೀಸೆಲ್ ಟ್ಯಾಕ್ಸಿ ನಿಷೇಧ

    ಹೆಚ್ಚುತ್ತಿರುವ ನಗರ ಮಾಲಿನ್ಯ ತಡೆಗೆ ‘ನೈಸರ್ಗಿಕ ಅನಿಲ'(CNG) ಬಳಕೆಗೆ ಸುಪ್ರಿಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಭಾನುವಾರದಿಂದ ದೇಶದ ರಾಜಧಾನಿ ದಿಲ್ಲಿಯ ರಸ್ತೆಗಳಿಂದ ಡೀಸೆಲ್ ವಾಹನಗಳನ್ನು ಹೊರಗಿಡುವ ಪ್ರಕ್ರಿಯೆ ಆರಂಭವಾಗಿದೆ. ದಿಲ್ಲಿಯಲ್ಲಿ ಸುಮಾರು 27 ಸಾವಿರ ಡೀಸೆಲ್ ಚಾಲಿತ ವಾಹನಗಳು ಬಳಕೆಯಲ್ಲಿದ್ದವು. ಹಿಂದೆಯೇ ಡೀಸೆಲ್ ವಾಹನ ಸಂಚಾರವನ್ನು ನಿಷೇಧಿಸಲು ನ್ಯಾಯಾಲಯ ಹೇಳಿತ್ತಾದರೂ, ಗಡುವು ಮುಂದಕ್ಕೆ ಹಾಕಲು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಗಡುವನ್ನು ಮುಂದುವರಿಸಲು ಸುಪ್ರಿಂ ಕೋರ್ಟ್ ಶನಿವಾರ ನಿರಾಕರಿಸಿದ ಹಿನ್ನೆಲೆಯಲ್ಲಿ, ಡೀಸೆಲ್ ವಾಹನಗಳನ್ನು ರಸ್ತೆಗಳಿಂದ ಹೊರಗಿಡುವ ಪ್ರಕ್ರಿಯೆ ಶುರುವಾಗಲಿದೆ. […]

    May 1, 2016
    ...

    ‘ಸಾಮಾಜಿಕ’ ಅವಹೇಳನ: ‘ಟ್ವಿಟರ್’ಗೆ ಪತ್ರಕರ್ತ ರಾಜ್ದೀಪ್ ಗುಡ್ ಬೈ!

    ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ನಡೆದ ಬೆಳವಣಿಗೆಯೊಂದರಲ್ಲಿ, ‘ಇಂಡಿಯಾ ಟುಡೆ’ ಸಂಪಾದಕೀಯ ವಿಭಾಗದ ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ, ‘ಟ್ವಿಟರ್’ನಿಂದ ಹೊರ ಬಂದಿದ್ದಾರೆ. ದೇಶದ ನೇರ ನುಡಿಯ ಪತ್ರಕರ್ತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ರಾಜ್ದೀಪ್, ನರೇಂದ್ರ ಮೋದಿ ಅಭಿಮಾನಿಗಳಿಂದ ಆಗಾಗ್ಗೆ ಟೀಕೆಗೆ ಒಳಗಾಗುತ್ತಲೇ ಬಂದವರು. ಈ ಹಿಂದೆ, ‘ಟ್ವಿಟರ್ ಮೂಲಕ ವೈಯುಕ್ತಿಕ ಅಭಿಪ್ರಾಯಗಳಿಗೆ ಕೀಳು ಮಟ್ಟದ ಪ್ರತಿಕ್ರಿಯೆ ಮಾಡುತ್ತಿರುವವರು, ದೇಶದ ನಾಯಕ ನರೇಂದ್ರ ಮೋದಿ ಅವರ ಅಭಿಮಾನಿಗಳು’ ಎಂದು ನೇರವಾಗಿಯೇ ಆರೋಪ ಮಾಡಿದ್ದರು. ಇದೀಗ, ಅವರು ಟ್ವಿಟರ್ ಬಳಕೆಯನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. […]

    April 30, 2016
    ...

    ಅಕ್ರಮ ಗಣಿ ಹಗರಣ: ವಿಶೇಷ ನ್ಯಾಯಾಲಯದಲ್ಲಿ ಹೊಸ ದೋಷಾರೋಪ ಪಟ್ಟಿ ಸಲ್ಲಿಕೆ

    ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಬೇಲಿಕೇರಿ ಬಂದರು ಮೂಲಕ ಅಕ್ರಮ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ಇಬ್ಬರು ಶಾಸಕರು ಸೇರಿದಂತೆ 38 ಮಂದಿ ವಿರುದ್ಧ ವಿಶೇಷ ತನಿಖಾದಳ(ಎಸ್‍ಐಟಿ)ಶನಿವಾರ ಚಾರ್ಜ್‍ಶೀಟ್ ಸಲ್ಲಿಸಿದೆ. ವಿಜಯನಗರ ಶಾಸಕ ಆನಂದ್ ಸಿಂಗ್, ಕೂಡ್ಲಗಿ ಶಾಸಕ ನಾಗೇಂದ್ರ, ಮಾಜಿ ಸಚಿವ ಜನಾರ್ಧನ ರೆಡ್ಡಿ ಬಲಗೈ ಬಂಟ ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್, ಶಾಮ್‍ಸಿಂಗ್, ನಂದಾಸಿಂಗ್ ಸೇರಿದಂತೆ ಒಟ್ಟು 38 ಮಂದಿ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹೊಸತಾಗಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ […]

    April 30, 2016
    ...

    ಆಂಧ್ರ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ: ಮನೆಯಲ್ಲಿ ಸಿಕ್ಕಿದ್ದು ಚಿನ್ನಾಭರಣಗಳ ರಾಶಿ!

    ಕಳೆದ ಮೂರು ದಿನಗಳಿಂದ ನೆರೆಯ ರಾಜ್ಯ ಆಂಧ್ರ ಪ್ರದೇಶದಲ್ಲಿ ‘ಭ್ರಷ್ಟಾಚಾರ ನಿಗ್ರಹ ದಳ’ ನಡೆಸುತ್ತಿರುವ ಕಾರ್ಯಾಚರಣೆಗೆ  ಜನ ಬೆಚ್ಚಿ ಬಿದ್ದಿದ್ದಾರೆ. ರಾಜ್ಯ ಕಂಡ ಭ್ರಷ್ಟ ಅಧಿಕಾರಿಯೊಬ್ಬನ ಮನೆಯಲ್ಲಿ ಸಿಕ್ಕ ಅಕ್ರಮ ಆಸ್ತಿ ಪ್ರಮಾಣವೇ ದಂಗುಬಡಿಸುವಂತಿದೆ. ರಾಜ್ಯದ ಸಾರಿಗೆ ಇಲಾಖೆಯ ಉಪ ಆಯುಕ್ತ ಎ. ಮೋಹನ್, ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಕ್ಕಿಬಿದ್ದಾತ. ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕಗಳಲ್ಲಿ ಈತ ಮಾಡಿರುವ ಸ್ಥಿರಾಸ್ತಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಒಟ್ಟು 9 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳಿಗೆ ಲೋಡುಗಟ್ಟಲೆ […]

    April 30, 2016
    ...

    ಐಟಿ ಇಲಾಖೆ ಮಾಹಿತಿ ಬಹಿರಂಗ: ನಮ್ಮಿಂದ ಸಂಗ್ರಹಿಸಿದ್ದೇ 60 ಸಾವಿರ ಕೋಟಿ!

    ಮಹತ್ವದ ಬೆಳವಣಿಗೆಯಲ್ಲಿ ಶುಕ್ರವಾರ ಸಂಜೆ ವೇಳೆಗೆ ಆದಾಯ ತೆರಿಗೆ ಇಲಾಖೆ 16 ವರ್ಷಗಳ ಮಾಹಿತಿಯನ್ನು ಸಾರ್ವಜನಿಕಗೊಳಿಸಿದೆ. ವೈಯುಕ್ತಿಕ ಆದಾಯ ತೆರಿಗೆ ಕಟ್ಟಿದ ವಿವರಗಳೂ ಸೇರಿದಂತೆ, ನಾನಾ ಸರಕಾರಗಳು ಸಂಗ್ರಹಿಸಿದ ತೆರಿಗೆ ಮೊತ್ತದ ಮಾಹಿತಿಯನ್ನು ವರ್ಷವಾರು ಲೆಕ್ಕದಲ್ಲಿ ದಾಖಲೆಗಳು ಒಳಗೊಂಡಿವೆ. ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆಯ ಮಾಹಿತಿ ಹೀಗೆ ಸ್ವ ಇಚ್ಚೆಯಿಂದ ಬಹಿರಂಗವಾಗುತ್ತಿದೆ. ಒಟ್ಟು 84 ಪುಟಗಳ ದಾಖಲೆಯನ್ನು ಮೂರು ಪ್ರತ್ಯೇಕ ವಿಭಾಗಗಳ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆ ತನ್ನ […]

    April 29, 2016
    ...

    ರಾಮಚಂದ್ರಪುರ ಮಠದ ನಿಯಂತ್ರಣಕ್ಕೆ ಅರ್ಜಿ: ಬೇಸಿಗೆ ರಜೆಯ ನಂತರ ವಿಚಾರಣೆ ಶುರು

    ರಾಮಚಂದ್ರಾಪುರ ಮಠದ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದೇ ವಿಚಾರಣೆ ನಡೆಸುವಂತೆ ರಾಘವೇಶ್ವರ ಸ್ವಾಮಿ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ. ಹೊಸನಗರದಲ್ಲಿರುವ ರಾಮಚಂದ್ರಪುರ ಮಠವನ್ನು ಸರಕಾರದ ಸುಪರ್ದಿಗೆ ತರುವಂತೆ ಕೋರಿ ಪಿಐಎಲ್ ಸಲ್ಲಿಸಲಾಗಿತ್ತು. ಇದನ್ನು ತ್ವರಿತವಾಗಿ, ಇಂದೇ ವಿಚಾರಣೆ ನಡೆಸಬೇಕು ಎಂದು ಮಠದ ಪರವಾಗಿ ವಕೀಲರು ನ್ಯಾಯಾಲಯಕ್ಕೆ ಕೋರಿಗೆ ಸಲ್ಲಿಸಿದ್ದರು. ರಾಘವೇಶ್ವರ ಸ್ವಾಮಿ ಮೇಲೆ ಎರಡು ಅತ್ಯಾಚಾರ ಆರೋಪ ಇರುವುದರಿಂದ, ಮಠದ ಆವರಣ ಪ್ರವೇಶಕ್ಕೆ ನಿಷೇಧ ಹೇರುವಂತೆಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಗುರುವಾರದ ವಿಚಾರಣೆಯ ವೇಳೆ […]

    April 29, 2016
    ...

    ಆದರ್ಶ ಹೌಸಿಂಗ್ ಸೊಸೈಟಿ ಹಗರಣ: ಕಟ್ಟಡ ನೆಲಸಮಕ್ಕೆ ನ್ಯಾಯಾಲಯ ಸೂಚನೆ

    ‘ಆದರ್ಶ ಹೌಸಿಂಗ್ ಸೊಸೈಟಿ ಹಗರಣ’ ಸಂಬಂಧಪಟ್ಟಂತೆ ಶುಕ್ರವಾರ ಮುಂಬೈ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಭಾರಿ ಸದ್ದು ಮಾಡಿದ್ದ ಹಗರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಆದರ್ಶ ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸುವಂತೆ ಸೂಚನೆ ನೀಡಿದೆ. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾಗಿದ್ದ ಯೋಧರ ಕುಟುಂಬದವರಿಗೆ ನೀಡುವ ಸಲುವಾಗಿ ಮುಂಬೈನ ಕೊಲಾಬಾದಲ್ಲಿ ಆದರ್ಶ ಬಹುಮಹಡಿ ಕಟ್ಟಡವನ್ನು ಕಟ್ಟಲಾಗಿತ್ತು. ಇದು ಹಸಿರು ನೀತಿ ಮತ್ತಿತರ ಕಾನೂನುಗಳನ್ನು ಗಾಳಿಗೆ ತೂರಿ ನಿರ್ಮಾಣಗೊಂಡಿರುವ ಕಟ್ಟಡವಾಗಿರುವುದರಿಂದ ಇಡೀ ನಿರ್ಮಾಣವನ್ನೇ ನೆಲಸಮ ಮಾಡಿ ಎಂದು ನ್ಯಾಯಾಲಯ ಹೇಳಿದೆ. ಹಿನ್ನೆಲೆ: ರಕ್ಷಣಾ ಸಚಿವಾಲಯ […]

    April 29, 2016
    ...

    ‘ನೀಟ್’ ಆಗಿ ಪರೀಕ್ಷೆ ನಡೆಸಿ: ಕೇಂದ್ರದ ಮನವಿ ತಳ್ಳಿಹಾಕಿದ ಸುಪ್ರಿಂ ಕೋರ್ಟ್

    ಎರಡು ಹಂತಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ನಡೆಸುವ ಆದೇಶದ ಮರು ಪರಿಶೀಲನೆಗೆ ಸಲ್ಲಿಸಿದ್ದ ಕೇಂದ್ರ ಸರಕಾರದ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಶುಕ್ರವಾರ ಸೂಚಿಸಿದೆ. ‘ನೀಟ್’ ಪರೀಕ್ಷೆಯನ್ನು ಒಂದೇ ಹಂತದಲ್ಲಿ ಜು.24ರಂದು ನಡೆಸಬೇಕೆಂಬ ಕೇಂದ್ರ ಸರಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಮಾತ್ರವಲ್ಲ, ಈ ಸಂಬಂಧ ತಾನಿನ್ನು ಯಾವುದೇ ಆದೇಶವನ್ನು ಹೊರಡಿಸುವುದಿಲ್ಲ ಎಂದು ಅದು ಕೇಂದ್ರ ಸರಕಾರಕ್ಕೆ ಸ್ಪಷ್ಟಪಡಿಸಿದೆ. ಎರಡು ಹಂತಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) […]

    April 29, 2016
    ...

    ಮೆಟ್ರೊ ತುಂಡು ಮಾರ್ಗ ಉದ್ಘಾಟನೆ: ಸಂಭ್ರಮ ಪಡಬೇಕೋ? ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕೋ?

    ಕೊನೆಗೂ, ಇತ್ತೀಚಿನ ಆಂತರಿಕ ಬಿಕ್ಕಟ್ಟುಗಳನ್ನು ದಾಟಿ ಬೆಂಗಳೂರು ಮೆಟ್ರೊ ನಿಗಮ ತನ್ನ ಮಾರ್ಗವೊಂದನ್ನು ಸಾರ್ವಜನಿಕ ಸಂಚಾರಕ್ಕೆ ಶುಕ್ರವಾರ ಅಣಿಗೊಳಿಸಿದೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್ ಸಂಪರ್ಕಿಸುವ 18. 1 ಕಿ. ಮೀ ಮಾರ್ಗದಲ್ಲಿ ವಾಣಿಜ್ಯ ಸೇವೆ ಶನಿವಾರದಿಂದ ಆರಂಭವಾಗಲಿದೆ. ಈವರೆಗೆ ಬೈಯಪ್ಪನಗಳ್ಳಿಯಿಂದ ಎಂ. ಜಿ. ರಸ್ತೆವರೆಗೆ ಓಡಾಡುತ್ತಿದ್ದ ಮಾರ್ಗದ ವಿಸ್ತರಣೆ ಇದು ಅಷ್ಟೆ. ಇದಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಿಂದ ಮೆಜೆಸ್ಟಿಕ್ ನಿಲ್ದಾಣದವರೆಗಿನ ಸುರಂಗ ಮಾರ್ಗವೂ ಸೇರಿಕೊಂಡಿರುವುದು ಸಿಲಿಕಾನ್ ಸಿಟಿ ಪಾಲಿಗೆ ಹೊಸ ಅನುಭವವನ್ನು ನೀಡಲಿದೆ. ಆದರೆ, ಈ ಸಮಯದಲ್ಲಿ ಕೊನೆಗೂ ಮೆಟ್ರೊದ […]

    April 29, 2016
    ...

    ಇನ್ಫಿ ನಾರಾಯಣ ಮೂರ್ತಿ ಮಗಳಿಗೆ ಬರೆದ ಪತ್ರ: ಸರ್ವಂ ಸರಳಂ ಸುಂದರಂ!

    ಕನ್ನಡಕ್ಕೆ: ಶಿವಕುಮಾರ್ ಮಾವಲಿ ಡಿಯರ್ ಅಕ್ಷತಾ, ನಾನು ಅಪ್ಪನಾದ ದಿನದಿಂದ ನನ್ನಲ್ಲಿ ಎಂತಹ ಬದಲಾವಣೆಗಳಾದಾವು ಎಂಬುದನ್ನು ನಾನೂ ಆ ಹಿಂದೆ ಯೋಚಿಸಿರಲೂ ಇಲ್ಲ. ‘ಅಪ್ಪ’ ನಾದ ನಂತರ, ನಾನು ಮೊದಲಿನ ಜೀವನಕ್ಕೆ ಹಿಂತಿರುಗಿ ಹೋಗಲು ಸಾಧ್ಯವಾಗಲೇ ಇಲ್ಲ. ನನ್ನ ಜೀವನದಲ್ಲಿ ನಿನ್ನ ಆಗಮನ ಅನೂಹ್ಯವಾದ ಸಂತಸ ಮತ್ತು ಜವಾಬ್ದಾರಿಗಳೆರಡನ್ನೂ ಹೊತ್ತು ತಂದಿತ್ತು. ಆ ದಿನದಿಂದ ನಾನು ಕೇವಲ ಒಬ್ಬ ಪತಿಯಾಗಿರದೆ, ಮಗನಾಗಿರದೆ, ಅಥವಾ ಆಗ ತಾನೆ ಕ್ಟಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದ ಕಂಪನಿಯೊಂದರ ಪ್ರಮುಖ ಉದ್ಯೋಗಿಯಷ್ಟೇ ಆಗಿರದೆ, ಓರ್ವ ಮಗಳ ತಂದೆಯೂ […]

    April 29, 2016

Top