An unconventional News Portal.

ಸುದ್ದಿ ಸಾಗರ
    ...
    Bike case  2
    ರಾಜ್ಯ

    ಪೊಲೀಸರ ಪ್ರತಿಷ್ಠೆಗೆ ಬೇಸತ್ತು ‘ಬೈಕ್ ದೇಣಿಗೆ’ ಕೊಡಲು ಮುಂದಾದ ಕಾಲೇಜು ವಿದ್ಯಾರ್ಥಿ!

    ಅಣ್ಣ ಮಾಡಿದ ತಪ್ಪಿಗೆ ತಮ್ಮನೊಬ್ಬ ಪೊಲೀಸ್ ಠಾಣೆ ಕಟ್ಟೆ ಕಾದು ಕಾದು ಸಾಕಾಗಿ, ಕೊನೆಗೆ ಬೈಕನ್ನು ‘ನೀವೇ ಇಟ್ಟಿಕೊಳ್ಳಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಎಸ್ಎಂಎಸ್ ಕಳಿಸಿದ ವಿಲಕ್ಷಣ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ತೀರ್ಥಹಳ್ಳಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಕ್ಷೇತ್ರ. ತೀರ್ಥಹಳ್ಳಿಯಿಂದ ಕುಪ್ಪಳ್ಳಿ ಮಾರ್ಗದಲ್ಲಿ ಸಿಗುವ ದೇವಂಗಿ ಸಮೀಪದ ಹಳ್ಳಿಯ ಶಶಾಂಕ್ ಎಂಬಾತ ಈ ಕತೆಯ ಕೇಂದ್ರಬಿಂದು. ಈತನ ಸಹೋದರ ಅಭಿಷೇಕ್ ಭಾರತೀಯ ಸೇನೆಯಲ್ಲಿ ಯೋಧ…

    April 2, 2016
    ...
    tumkur- 2
    ರಾಜ್ಯ

    ಕನ್ನಯ್ಯ ಪರ ಕರಪತ್ರ ಹಂಚಿದ್ದಕ್ಕೆ ಕರ್ನಾಟಕ ಪೊಲೀಸರಿಂದ ‘ರಾಜದ್ರೋಹ’ದ ಪ್ರಕರಣ ದಾಖಲು

    ‘ಆಝಾದಿ’ ಘೋಷಣೆ ಕೂಗಿದ್ದಕ್ಕೆ ಅಲ್ಲಿ ದಿಲ್ಲಿಯಲ್ಲಿ ವಿದ್ಯಾರ್ಥಿ ಕನ್ನಯ್ಯ ವಿರುದ್ಧ ‘ರಾಜದ್ರೋಹ’ ದಾಖಲಿಸಿದ ವಿವಾದಿತ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಕೇಸೊಂದನ್ನು ಗೃಹಸಚಿವ ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ದಾಖಲಿಸಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ವಿದ್ಯೋದಯ ಕಾನೂನು ಶಾಲೆಯ ವಿದ್ಯಾರ್ಥಿನಿ ಜ್ಯೋತಿ ಹಾಗೂ ಸಾಮಾಜಿಕ ಕಾರ್ಯಕರ್ತ ಚಿನ್ನಪ್ಪ ‘ರಾಜ ದ್ರೋಹ’ ಆರೋಪಕ್ಕೆ ಗುರಿಯಾದವರು. ಇವರ ವಿರುದ್ಧ ಮಾ. 31ರಂದು ಮಧ್ಯಾಹ್ನ 12 ಗಂಟೆಗೆ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ಎಂಬ ಶಿಕ್ಷಕರು ದೂರು ದಾಖಲಿಸಿದ್ದರು. ‘ಮಾ. 30ರಂದು..

    April 2, 2016
    ...
    ಕುಪ್ಪಳ್ಳಿಯ 'ಕವಿಮನೆ'. (ಚಿತ್ರ: kishusworld.blogspot.com)
    INVESTIGATION

    ‘ಕವಿಮನೆ ಕಳ್ಳತನ ಪ್ರಕರಣ’: ಆತುರಕ್ಕೆ ಬಿದ್ದ ಶಿವಮೊಗ್ಗ ಪೊಲೀಸರು ತನಿಖೆಯನ್ನು ಹಳ್ಳ ಹಿಡಿಸಿದರಾ?

    ರಾಷ್ಟ್ರಕವಿ ಕುವೆಂಪು ಅವರ ‘ಕವಿ ಮನೆ’ ಕಳ್ಳತನ ಪ್ರಕರಣದಲ್ಲಿ ಆತುರಕ್ಕೆ ಬಿದ್ದ ಪೊಲೀಸರು ತನಿಖೆಯನ್ನು ಅರ್ಧದಲ್ಲಿಯೇ ಹಾದಿ ತಪ್ಪಿಸಿದರಾ? ಹೀಗೊಂದು ಅನುಮಾನ ಈಗ ವ್ಯಕ್ತವಾಗುತ್ತಿವೆ. ಕಳೆದ ನವೆಂಬರ್ 23ನೇ ತಾರೀಖು ರಾತ್ರಿ ವೇಳೆ ಕುಪ್ಪಳ್ಳಿಯ ಮನೆಯಲ್ಲಿ ಕಳ್ಳತನವಾಗಿತ್ತು. ಕುವೆಂಪು ಅವರಿಗೆ ಬಂದಿದ್ದ ಪದ್ಮಭೂಷಣ ಸೇರಿದಂತೆ ನಾಲ್ಕು ಪದಕಗಳನ್ನು ಕದ್ದೊಯ್ಯಲಾಗಿತ್ತು.  ಜತೆಗೆ, ‘ಕವಿಮನೆ’ಯಲ್ಲಿದ್ದ ಹಣ ಪೆಟ್ಟಿಗೆ ಹಾಗೂ ಗಾಜುಗಳನ್ನು ಒಡೆಯಲಾಗಿತ್ತು. ಮಾರನೇ ದಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಅಷ್ಟೇ ವೇಗವಾಗಿ ಕಾರ್ಯಚರಣೆಗೆ ಇಳಿದ ಶಿವಮೊಗ್ಗ ಪೊಲೀಸರು..

    April 2, 2016
    ...
    ಪ್ರಕರಣದ ಎರಡನೇ ಆರೋಪಿ ಆಂಜನಪ್ಪ.
    ರಾಜ್ಯ

    ‘ಅದು ಅನ್ನ ನೀಡುವ ಮನೆ; ಕನ್ನ ಹಾಕುವ ಜಾಗ ಅಲ್ಲ…’: ಆರೋಪಿ ಆಂಜನಪ್ಪ ಹೇಳಿದ್ದೇನು?

    ಮಲೆನಾಡಿನ ಸುಡು ಬಿಸಿಲಿನ ದಿನದ ಒಂದು ಮುಂಜಾನೆ ನಿಧಾನಕ್ಕೆ ತೆರೆದುಕೊಳ್ಳುತ್ತಿತ್ತು. ಬೆಳಗ್ಗೆ 7 ಗಂಟೆಯ ಸಮಯ. ರಾಷ್ಟ್ರಕವಿ ಕುವೆಂಪು ಅವರ ಊರು ಕುಪ್ಪಳ್ಳಿಯಿಂದ ಕೆಲವೇ ಮೀಟರುಗಳ ಅಂತರದಲ್ಲಿರುವ ಗಡಿಕಲ್ಲಿನಲ್ಲಿ ಆಂಜನಪ್ಪ ಎಂದಿನಂತೆ ಅಂಗಡಿಯಿಂದ ಹಾಲು ತೆಗೆದುಕೊಂಡು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದ. ಆತ ಜೈಲಿನಿಂದ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಕೆಲವೇ ದಿನಗಳಾಗಿದ್ದವು…ಭಾರಿ ಸದ್ದು ಮಾಡಿದ್ದ ಮೇರು ಕವಿಯ ಪದಕ ಕಳವು ಪ್ರಕರಣದ ಎರಡನೇ ಆರೋಪಿ ಈತ. ಪರಿಸರದ ಕತೆ ‘ಆಂಜನಪ್ಪ‘! ಆಂಜನಪ್ಪ ಮೂಲತಃ ದಾವಣಗೆರೆಯವನು. ಆದರೆ..

    April 2, 2016
    ...
    Flyover collapses in Kolkata
    ರಾಜ್ಯ

    ಕೋಲ್ಕತ್ತಾದಲ್ಲಿ ಮೇಲ್ಸೇತುವೆ; ಬೆಂಗಳೂರಲ್ಲಿ ಮೆಟ್ರೋ ನಿಲ್ದಾಣ: IVRCL ಎಂಬ ವಂಚಕ ಕಂಪನಿಯ ಹಿಂದೆ ರಾಜಶೇಖರ್ ರೆಡ್ಡಿ ಕುಟುಂಬದ ‘ಕೈ’!

    ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಗುರುವಾರ ಕುಸಿದು ಬೀಳುವ ಮೂಲಕ ‘ಐವಿಆರ್ ಸಿಎಲ್’ ಎಂಬ ಹೈದ್ರಾಬಾದ್ ಮೂಲದ ವಂಚಕ ಕಂಪನಿಯ ವಂಚನೆಗಳು ಒಂದೊಂದಾಗಿ ಹೊರ ಬರತೊಡಗಿವೆ. ಇಲ್ಲಿನ ಬುರ್ರಾ ಬಝಾರ್ ಏರಿಯಾದ ವಿವೇಕಾನಂದ ರಸ್ತೆಯಲ್ಲಿ2.2 ಕಿ. ಮೀ ಮೇಲ್ಸೇತುವೆಯ ನಿರ್ಮಾಣದ ಗುತ್ತಿಗೆಯನ್ನು ಕಂಪನಿ ಪಡೆದಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ 250 ಮೀಟರ್ ಉದ್ದದ ಕಾಂಕ್ರಿಟ್ ಸೇತುವೆ ಕುಸಿದು ಬಿದ್ದು 24 ಜನ ಮೃತಪಟ್ಟರು. ಕಂಪನಿಯು, “ಇದು ದೇವರ ಕೆಲಸ,” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿತ್ತು. ಸದ್ಯ ಪಶ್ಚಿಮ ಬಂಗಾಳದಲ್ಲಿ..

    April 2, 2016
    ...
    cid_bangalore_office_1
    ರಾಜ್ಯ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಬೇಟೆ ಆರಂಭಿಸಿದ ಸಿಐಡಿ

    ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯಲ್ಲಿ ಕೊನೆಗೂ ಸಿಐಡಿ ಪೊಲೀಸರು ಬೇಟೆ ಆರಂಭಿಸಿದ್ದಾರೆ. ‘ಶಿಕ್ಷಣ ಕ್ಷೇತ್ರದ ಮಾಫಿಯಾಗಳ ತವರುಮನೆ’, ಬೆಂಗಳೂರಿನ ರಾಜಾಜಿನಗರದಿಂದ ಇಬ್ಬರು ಉಪನ್ಯಾಸಕರು ಹಾಗೂ ಓಬಳೇಶ್ ಎಂಬಾತನನ್ನು ಶುಕ್ರವಾರ ರಾತ್ರಿ 10. 30ರ ಸುಮಾರಿಗೆ ವಿಚಾರಣೆಗಾಗಿ ಕರೆತಂದಿದ್ದಾರೆ. ಸಿಐಡಿ ಗುರುತಿಸಿರುವ ಆರೋಪಿ ಕಿರಣ್ ಸಹಚರ ಎನ್ನಲಾಗುತ್ತಿರುವ ಓಬಳೇಶ್ ಎಂಬಾತನ್ನು ಸಿಐಡಿ ಕೇಂದ್ರ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ಮುಂದುವರಿದ ವಿಚಾರಣೆ: ರಾಜಾಜಿನಗರದ ಕಿರಣ್ ಎಂಬಾತ ಹಿಂದಿನಿಂದಲೂ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ದಂಧೆ ನಡೆಸುತ್ತಿದ್ದ..

    April 1, 2016
    ...
    amith shah at kolkata
    ದೇಶ

    ಕೋಲ್ಕತ್ತಾ ಪ್ಲೈ ಓವರ್ ಕುಸಿತ: ರಾಜಕೀಯ ಬೇಳೆ ಬೇಯಿಸುವತ್ತ ಎಲ್ಲರ ಚಿತ್ತ!

    ಕೋಲ್ಕತ್ತಾದ ಬುರ್ರಾ ಬಝಾರ್ ಈಗ ರಾಜಕೀಯ ಚದುರಂಗದಾಟದಲ್ಲಿ ಪ್ರಮುಖ ಪಾತ್ರದಾರಿಯಾಗಿ ಬದಲಾಗಿದೆ. ಒಟ್ಟು ಆರು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವಿವೇಕಾನಂದ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿತ ಪ್ರಕರಣ ರಾಜಕೀಯ ಪಕ್ಷಗಳಿಗೆ ಹೊಸ ತಂತ್ರ ಹೆಣೆಯಲು ಅನುವು ಮಾಡಿಕೊಡುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮೇಲ್ಸೇತುವೆ ಕುಸಿತ ಪ್ರಕರಣದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಮೇಲೊಂದು ಪಕ್ಷಿನೋಟಿ ಇಲ್ಲಿದೆ:   ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್..

    April 1, 2016
    ...
    PU-board-exam-paper
    ರಾಜ್ಯ

    ಮತ್ತೆ ಮಿಸ್ ಹೊಡೆದ ಪಿಯು ಬೋರ್ಡ್ ‘ಕೆಮಿಸ್ಟ್ರಿ’; ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಬಹಿರಂಗ

    ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಗುರುವಾರ ಮತ್ತೊಮ್ಮೆ ಸೋರಿಕೆಯಾಗುವ ಮೂಲಕ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಮಾ. 21ರಂದು ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಪಿಯು ಮಂಡಳಿ ಮರು ಪರೀಕ್ಷೆಯನ್ನು ಮಾ. 30ಕ್ಕೆ ಮುಂದೂಡಿತ್ತು. ರಾಜ್ಯಾದ್ಯಂತ ಸುಮಾರು 1. 45 ಲಕ್ಷ ವಿದ್ಯಾರ್ಥಿಗಳು ರಸಾಯನ ಶಾಸ್ತ್ರ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಪರೀಕ್ಷೆ ಆರಂಭಕ್ಕೂ ಮುನ್ನವೇ ಮಧ್ಯರಾತ್ರಿ ಮೂರು ಗಂಟೆ ವೇಳೆಗೆ ಬೆಂಗಳೂರು, ತುಮಕೂರುಗಳಲ್ಲಿ ಕೈ ಬರಹದಲ್ಲಿ ಬರೆದ ಪ್ರಶ್ನೆ ಪತ್ರಿಕೆ ಹರಿದಾಡಲಾರಂಭಿಸಿತು. ಬೆಳಗೆ ನಸಕು ಹರಿಯುವ..

    March 31, 2016
    ...
    ಬುಧವಾರ ಲಾರ್ನಾಕ ನ್ಯಾಯಾಲಯದಿಂದ ಹೊರಬಂದ ಆರೋಪಿ ಮುಸ್ತಫಾ 'ವಿಜಯಿ ಚಿನ್ಹೆ'ಯನ್ನು ಮಾಧ್ಯಮಗಳಿಗೆ ತೋರಿಸಿದ್ದು ಹೀಗೆ...(ಚಿತ್ರ: ಎಪಿ)
    ವಿದೇಶ

    ‘ಹಾರಟ ಶುರುಮಾಡಿದ 15 ನಿಮಿಷಕ್ಕೆ ಆತನ ಹತೋಟಿಯಲ್ಲಿತ್ತು ವಿಮಾನ’: ಹೈಜಾಕರ್ ಮುಸ್ತಫಾನ ಅಸಲಿ ಕತೆ!

    ಮಂಗಳವಾರ ಇಡೀ ಜಗತ್ತನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ‘ಈಜಿಪ್ಟ್ ವಿಮಾನ ಅಪಹರಣ ಪ್ರಕರಣ’ದ ನಿಜಾಂಶ ಇದೀಗ ಬಹಿರಂಗಗೊಂಡಿದೆ. ಆರೋಪಿ ಸೈಫ್ ಎಲ್-ದೀನ್ ಮುಸ್ತಫಾನನ್ನು ಸಿಪ್ರಸ್ ದೇಶದ ಲಾರ್ನಾಕ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಮುಂದಿನ ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವ ನ್ಯಾಯಾಲಯ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವುದಾಗಿ ತಿಳಿಸಿದೆ. ಹೈಜಾಕ್ ಯಾಕೆ?: ಸೈಫ್ ಎಲ್- ದೀನ್ ಮುಸ್ತಫಾ ಮೂಲತಃ ಈಜಿಪ್ಟ್ ದೇಶದ ಪ್ರಜೆ. ಈತನಿಂದ ದೂರವಾದ ಪತ್ನಿ ಹಾಗೂ ಮಕ್ಕಳು..

    March 30, 2016
    ...
    EH1
    ವಿದೇಶ

    ಪತ್ನಿ ಹೃದಯದ ಬದಲು, ವಿಮಾನವನ್ನೇ ಅಪಹರಿಸಿದ ‘ಮುಸ್ತಫಾ’!

    ಈಜಿಪ್ಟ್ ವಿಮಾನ ಅಪಹರಣ ಪ್ರಕರಣ ಮಂಗಳವಾರ ಸಾಮಾಜಿಕ ಜಾಲತಾಣ ಟ್ವಟರ್ನಲ್ಲಿ ತಮಾಷೆಯ ಅಲೆಯನ್ನು ಸೃಷ್ಟಿಸಿತು. ಬೆಳಗ್ಗೆ ಈಜಿಪ್ಟ್ನ ಅಲೆಗ್ಸಾಂಡ್ರಿಯಾದಿಂದ ರಾಜಧಾನಿ ಕೈರೋ ಕಡೆ ಹೊರಟಿದ್ದ ವಿಮಾನ ಅಪಹರಣಕ್ಕೀಡಾದ ಸುದ್ದಿ ಭಿತ್ತರವಾಗುತ್ತಿದ್ದಂತೆ ಸಹಜವಾಗಿಯೇ ಆತಂಕ ಮನೆ ಮಾಡಿತ್ತು. ಇತ್ತೀಚೆಗೆ ಈಜಿಪ್ಟ್ನಲ್ಲಿ ರಷ್ಯಾ ವಿಮಾನವೊಂದು ಪತನಗೊಂಡಿತ್ತು. ಜತೆಗೆ, ಮೂರು ತಿಂಗಳ ಅಂತರದಲ್ಲಿ ನಡೆದ ಪ್ಯಾರಿಸ್ ಹಾಗೂ ಬ್ರೂಸೆಲ್ ಮೇಲೆ ಐಸಿಸ್ ದಾಳಿ ಹಿನ್ನೆಲೆಯಲ್ಲಿ, ಇದೂ ಕೂಡ ಭಯೋತ್ಪಾದಕರ ಕೃತ್ಯ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಆದರೆ, ಅಪಹರಣಕ್ಕೆ ಈಡಾದ ವಿಮಾನ ಈಜಿಪ್ಟ್ ಪಕ್ಕದ ಸಿಪ್ರಸ್ನಲ್ಲಿ..

    March 29, 2016

Top