An unconventional News Portal.

ಸುದ್ದಿ ಸಾಗರ
  ...

  ‘ಉಲ್ಟಾ ಪಲ್ಟಾ’: #ಕನಕ ನಡೆ ಯಾರ ವಿರುದ್ಧವೂ ಅಲ್ಲ; ಚಕ್ರವರ್ತಿ ಸೂಲಿಬೆಲೆ ಸ್ಪಷ್ಟೀಕರಣ!

  ಚಲೋ ಉಡುಪಿ ಸಮಾವೇಶದ ಬೆನ್ನಿಗೇ ಚಕ್ರವರ್ತಿ ಸೂಲಿಬೆಲೆ ನಡೆಸಲು ಹೊರಟಿರುವ ‘ಕನಕ ನಡೆ’ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಕಮ್ಯೂನಿಸ್ಟ್ ವಿರೋಧಿ ನಡಿಗೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ‘ಸಮಾಚಾರ’ದ ಜೊತೆ ಮುಕ್ತವಾಗಿ ‘ಕನಕ ನಡೆ’ ಸಂಘಟಕ, ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ. ‘ಕನಕ ನಡೆ’ ಯಾರ ವಿರುದ್ಧವೂ ಅಲ್ಲ; ಬದಲಿಗೆ ಸ್ವಚ್ಚ ಭಾರತ್ ಅಭಿಯಾನ ಭಾಗವಾಗಿ ಉಡುಪಿಯನ್ನು ಸ್ವಚ್ಚಗೊಳಿಸಲು ಹೊರಟಿರುವುದಾಗಿ ಅವರು ಸ್ಪಷ್ಟೀಕರಣ ನೀಡಿದ್ದಾರೆ. […]

  October 13, 2016
  ...

  ‘ಸಾಮಾನ್ಯ ಜ್ಞಾನ’: ಏನಿದು ಪಂಕ್ತಿ ಭೇದ?; ಊಟದ ಆಚರಣೆಗೆ ಯಾಕಿಷ್ಟು ವಿರೋಧ?

  ದಲಿತ ಹಾಗೂ ದಮನಿತರ ಸ್ವಾಭಿಮಾನಿ ಜಾಥಾದ ಸಮಾರೋಪ ಸಮಾವೇಶ ಉಡುಪಿಯಲ್ಲಿ ಇದೇ ಭಾನುವಾರ ನಡೆಯಿತು. ಈ ಸಂದರ್ಭ ‘ಉಡುಪಿ ಮಠ’ದಲ್ಲಿ ನಡೆಯುತ್ತಿರುವ ‘ಪಂಕ್ತಿ ಭೇದ’ಕ್ಕೆ ಕೊನೆಹಾಡಲು ಗುಜರಾತ್ ಮೂಲದ ಹೋರಾಟಗಾರ ಜಿಗ್ನೇಶ್ ಮೇವಾನಿ ಎರಡು ತಿಂಗಳ ಗಡುವು ನೀಡಿದ್ದರು. ಇದಾದ ಬೆನ್ನಿಗೆ ಈಗ ಪಂಕ್ತಿ ಭೇದದ ಸುತ್ತ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಏನಿದು ‘ಪಂಕ್ತಿ ಭೇದ’? ಮಠ ಮತ್ತು ದೇವಸ್ಥಾನಗಳಲ್ಲಿ ಬ್ರಾಹ್ಮಣರು ಮತ್ತು ಉಳಿದ ಜಾತಿಗಳ ನಡುವೆ ಊಟಕ್ಕಾಗಿ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡುವುದೇ ಪಂಕ್ತಿ (ಊಟದ […]

  October 13, 2016
  ...

  ಅಪೋಲೋದಲ್ಲಿ ಮಲಗಿರುವ ‘ಅಮ್ಮ’; ಈಗ ಸಚಿವಾಧಿಕಾರ ಇಲ್ಲದ ಮುಖ್ಯಮಂತ್ರಿ!

  ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರ ಕೈಲಿದ್ದ ಸಚಿವಾಲಯಗಳಿಗೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆದಿದೆ. ಮಂಗಳವಾರ ನಡೆದ ಪ್ರಮುಖ ಬೆಳವಣಿಗೆಯಲ್ಲಿ, ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ್ ರಾವ್, ತಮಗಿರುವ ಅಧಿಕಾರವನ್ನು ಬಳಸಿಕೊಂಡು ತಮಿಳುನಾಡಿನ ಸಂಪುಟ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದಾರೆ. ಮಖ್ಯಮಂತ್ರಿ ಜಯಲಲಿತಾ ಕೈಲಿದ್ದ ಸಚಿವಾಲಯಗಳನ್ನು ಅವರ ಉತ್ತರಾಧಿಕಾರಿ, ರಾಜ್ಯ ಆರ್ಥಿಕ ಸಚಿವ ಓ. ಪನ್ನೀರ್ ಸೆಲ್ವಂ ಅವರಿಗೆ ಹಸ್ತಾಂತರಿಸಿದ್ದಾರೆ. ಜತೆಗೆ, ಸಂಪುಟ ಸಭೆಗಳನ್ನು ನಡೆಸುವ ಅಧಿಕಾರನ್ನು ಸೆಲ್ವಂ ಅವರಿಗೆ ವಹಿಸಲಾಗಿದೆ. ಈ ನಿರ್ಧಾರ ಜೆ. ಜಯಲಿಲಿತಾ ಆರೋಗ್ಯವನ್ನು ಸುಧಾರಿಸಿಕೊಂಡು ಮತ್ತೆ ಅಧಿಕಾರ ನಡೆಸಲು […]

  October 12, 2016
  ...

  ಮತ್ತೆ ಭಟ್ಕಳದಲ್ಲಿ ‘ಹವಾಲ ಪ್ರಕರಣ’ ಸದ್ದು: ಬೆಕ್ಕಿಗೆ ಗಂಟೆ ಕಟ್ಟುವವರು ಬೇಕಾಗಿದ್ದಾರೆ!

  ಎರಡು ತಿಂಗಳ ಹಿಂದೆ ಭಟ್ಕಳದಲ್ಲಿ ಸದ್ದು ಮಾಡಿದ್ದ ‘ಹವಾಲಾ ಪ್ರಕರಣ’ದ ಒಳಸುಳಿಗಳು ಒಂದೊಂದಾಗಿ ಹೊರ ಬರತೊಡಗಿವೆ. ಪ್ರಕರಣದಲ್ಲಿ ಜೈಲು ಪಾಲಾದ ಆರೋಪಿಗಳು ಹೊರಬಂದಿದ್ದು, ಇದೀಗ ಪೊಲೀಸ್ ಅಧಿಕಾರಿಗಳ ಮೇಲೆಯೇ ನೇರ ಆರೋಪಗಳನ್ನು ಮಾಡುತ್ತಿದ್ದಾರೆ. ದುಬೈನಿಂದ ಬಂದ ಸುಮಾರು 4. 6 ಕೋಟಿ ಹವಾಲಾ ಹಣದಲ್ಲಿ ಪಾಲುಗಳು ಹಂಚಿಕೆಯಾಗಿವೆ ಎಂದು ದೂರುತ್ತಿದ್ದಾರೆ. ಈ ನಡುವೆ ಪ್ರಕರಣದ ತನಿಖೆಯ ಕೇಂದ್ರವಾಗಿದ್ದ ಎಸಿಪಿ ಅನೂಪ್ ಶೆಟ್ಟಿ ವರ್ಗಾವಣೆಯಾಗಿದೆ. ಇದೇ ಪ್ರಕರಣದಲ್ಲಿ ಅಮಾನತ್ತುಗೊಂಡಿದ್ದ ಮಹಿಳಾ ಪಿಎಸ್ಐ ಕಣ್ಮರೆಯಾಗಿದ್ದಾರೆ. ಭಟ್ಕಳದ ಹವಾಲಾ ದಂಧೆಯ ಸುತ್ತ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು, ಪೊಲೀಸ್ […]

  October 10, 2016
  ...

  ಉಡುಪಿ ಪಂಕ್ತಿ ಭೇದಕ್ಕೆ 2 ತಿಂಗಳ ಗಡುವು: #ಚಲೋಉಡುಪಿ ಸಮಾರೋಪದಲ್ಲಿ ಜಿಗ್ನೇಶ್ ಮೇವಾನಿ

  ಉಡುಪಿಗೆ ಹರಿದು ಬಂದ ಜನಸಾಗರ, ಸಂಪೂರ್ಣ ನೀಲಿ ಮಯವಾದ ಕಡಲತಡಿಯ ಜಿಲ್ಲಾ ಕೇಂದ್ರ, ಪಂಕ್ತಿ ಭೇದಕ್ಕೆ ಎರಡು ತಿಂಗಳ ಗಡುವು ನೀಡಿದ ಜಿಗ್ನೇಶ್.. ಭೂಮಿ ಹಾಗೂ ಆಹಾರದ ಹಕ್ಕನ್ನು ಪ್ರತಿಪಾದನೆಗೆ ಸಾಕ್ಷಿಯಾದ ಸಾವಿರಾರು ಜನ…ಇದು ಭಾನುವಾರ ಉಡುಪಿ ಜಿಲ್ಲಾ ಕೇಂದ್ರದಲ್ಲಿ ಸಮಾರೋಪಗೊಂಡ ‘ಚಲೋ ಉಡುಪಿ’ ಸಮಾವೇಶದ ಹೈಲೈಟ್ಸ್. “ಉಡುಪಿ ಮಠದಲ್ಲಿ ನಡೆಯುತ್ತಿರುವ ಪಂಕ್ತಿ ಬೇಧ ನಿಲ್ಲಿಸಲು ನಾವೆಲ್ಲ 2 ತಿಂಗಳ ಗಡುವು ನೀಡೋಣ. ಒಂದೊಮ್ಮೆ ನಿಲ್ಲದಿದ್ದಲ್ಲಿ ನಾವು ಮುತ್ತಿಗೆಯನ್ನು ಹಾಕುತ್ತೇವೆ. ಜೈಲಿಗೆ ಹೋಗುವುದಕ್ಕೂ ಸೈ ಎಂದು,” ‘ಊನಾ […]

  October 10, 2016
  ...

  ‘ಆಪರೇಷನ್ ಜಿಂಜರ್’: 2011ರಲ್ಲೇ ಗಡಿಯಲ್ಲಿ ನಡೆದಿದ್ದವು ಆ 2 ಭೀಕರ ಸರ್ಜಿಕಲ್ ಸ್ಟ್ರೈಕ್ಸ್!

  ‘ಸರ್ಜಿಲ್ ಸ್ಟ್ರೈಕ್’ ಎಂಬ ಪದ ಕಳೆದ ಕೆಲವು ದಿನಗಳಿಂದ ಸುದ್ದಿಕೇಂದ್ರದಲ್ಲಿದೆ. ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ರಾತ್ರೋರಾತ್ರಿ ದಾಳಿ ನಡೆಸಿತು ಎಂಬ ಸುದ್ದಿ ಪರ- ವಿರೋಧದ ಚರ್ಚೆಯನ್ನು ಹುಟ್ಟು ಹಾಕಿದೆ. ಹೀಗಿರುವಾಗಲೇ, ಐದು ವರ್ಷಗಳ ಹಿಂದೆ, ಯುಪಿಎ-2 ಆಡಳಿತಾವಧಿಯಲ್ಲಿ ಭಾರತ- ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಎರದು ಭೀಕರ ‘ನಿರ್ದಿಷ್ಟ ದಾಳಿ’ಗಳು ನಡೆದಿದ್ದವು ಎಂಬ ವಿಚಾರವನ್ನು ‘ದಿ ಹಿಂದೂ’ ಪತ್ರಿಕೆ ಅ. 9ರ ತನ್ನ ವಿಶೇಷ ಲೇಖನದಲ್ಲಿ ಬಯಲಿಗೆಳೆದಿದೆ. ಅದನ್ನು ಪತ್ರಕರ್ತ ಕುಮಾರ್ ಬುರಡಿಕಟ್ಟಿ ಕನ್ನಡಕ್ಕೆ ತಂದಿದ್ದಾರೆ.   2011ರ ಬೇಸಿಗೆಯ […]

  October 9, 2016
  ...

  ‘ಆ 43 ದಿನಗಳು’: ಕೊನೆಕ್ಷಣದಲ್ಲಿ ಗೋಕರ್ಣ ದೇವಾಲಯ ರಾಘವೇಶ್ವರ ಸ್ವಾಮಿ ಪಾಲಾಗಿದ್ದೇಕೆ?

  “ದೇವಸ್ಥಾನವನ್ನು ಸ್ವಾಧೀನಕ್ಕೆ ವಹಿಸಿಕೊಡಿ ಎಂದು ನಾವು ಯಾವತ್ತೂ ಸರ್ಕಾರವನ್ನು ಕೇಳಿಕೊಂಡಿರಲಿಲ್ಲ. ಬದಲಾಗಿ ಎಂಟು ವರ್ಷಗಳ ಹಿಂದೆ ಸರ್ಕಾರವೇ ಗೋಕರ್ಣ ದೇವಾಲಯ, ರಾಮಚಂದ್ರಾಪುರ ಮಠದ್ದು ಎಂದು ನ್ಯಾಯಾಲಯದಲ್ಲಿ ಅಫಿಡೆವಿಟ್‌ ಸಲ್ಲಿಸಿತ್ತು,” ಹೀಗೊಂದು ಹೇಳಿಕೆಯನ್ನು ಇತ್ತೀಚೆಗೆ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಸ್ವಾಮಿ ಹೇಳಿದ್ದರು. ಗೋಕರ್ಣ ದೇವಾಲಯವನ್ನು ಸರ್ಕಾರ ಮರಳಿ ವಶಕ್ಕೆ ಪಡೆಯುತ್ತಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ದೊಡ್ಡದೊಂದು ‘ಹೈ ಡ್ರಾಮ’ ಶುರುವಿಟ್ಟುಕೊಂಡಿದೆ. ಈ ನಡೆಯನ್ನು ‘ಧರ್ಮ ವಿರೋಧಿ’ ಎಂಬಂತೆ ಬಿಂಬಿಸಲಾಗುತ್ತಿದೆ. ರಚ್ಚೆ ಹಿಡಿದ ಮಕ್ಕಳಂತೆ ಮಾಧ್ಯಮಗಳು ರಾಘವೇಶ್ವರ ಸ್ವಾಮಿ ಪರವಾಗಿ ಬ್ಯಾಟಿಂಗ್ […]

  October 8, 2016
  ...

  ಮುಂಬೈ ಟು ಅಮೆರಿಕಾ: ‘ಕಾಲ್ ಸೆಂಟರ್’ ಹೆಸರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವಂಚನೆಯ ಜಾಲ ಬಯಲಿಗೆ!

  ತಂತ್ರಜ್ಞಾನದ ಜತೆಗೆ ವಂಚನೆಯ ದಾರಿಗಳೂ ಕೂಡ ಅಪ್ಡೇಟ್ ಆಗುತ್ತಿವೆ. ಇದಕ್ಕೊಂದು ತಾಜಾ ಉದಾಹರಣೆ ಈ ಪ್ರಕರಣ. ಮುಂಬೈನಲ್ಲಿ ಕುಳಿತುಕೊಂಡು ಅಮೆರಿಕಾ ಪ್ರಜೆಗಳಿಂದ ಹಣ ಪೀಕುತ್ತಿದ್ದ ವಿಚಿತ್ರ ಪ್ರಕರಣವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತೆರಿಗೆ ಅಧಿಕಾರಿಗಳ ಎಂದು ಹೇಳಿಕೊಂಡು ಅಮೆರಿಕಾ ಪ್ರಜೆಗಳಿಂದ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ಮುಂಬೈನ ಕಾಲ್ ಸೆಂಟರ್ಗೆ ಸೇರಿದ ಬರೋಬ್ಬರಿ 772 ಜನರನ್ನು ಬಂಧಿಸಲಾಗಿದೆ. ಬುಧವಾರ ಮುಂಬೈನ ಥಾಣೆಯಲ್ಲಿ 9 ನಕಲಿ ಕಾಲ್ ಸೆಂಟರ್ ಗಳಿಗೆ ದಾಳಿ ನಡೆಸುವ ಮೂಲಕ ಪ್ರಕರಣ ಬಯಲಿಗೆ ಬಂದಿದೆ. ದಾಳಿ ವೇಳೆಯಲ್ಲಿ ಪೊಲೀಸರು 772 […]

  October 7, 2016
  ...

  ‘ಗೋಕರ್ಣ ಹೈಡ್ರಾಮ’: ರಾಮಚಂದ್ರಾಪುರ ಮಠದ ವಕ್ತಾರಿಕೆ ಆರಂಭಿಸಿದವರು; ಮತ್ತವರ ‘ಅರ್ಧ ಸತ್ಯ’ಗಳು!

  ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ರಾಘವೇಶ್ವರ ಸ್ವಾಮಿಯ ರಾಮಚಂದ್ರಾಪುರ ಮಠದಿಂದ ಸರಕಾರ ಮರಳಿ ವಶಕ್ಕೆ ಪಡೆಯಲಿದೆ ಎಂಬ ವಿಚಾರದಲ್ಲಿ ಗುರುವಾರ ‘ಹೈ ಡ್ರಾಮಾ’ವೊಂದು ನಡೆಯಿತು. ‘ಸುವರ್ಣ ನ್ಯೂಸ್’ನಲ್ಲಿ ಕಾವೇರಿದ ಚರ್ಚೆಗೆ ಅದು ನಾಂದಿ ಹಾಡಿತು. ವಾಸ್ತವದಲ್ಲಿ ಏನೂ ಬೆಳವಣಿಗೆ ಕಾಣದ ಸುದ್ದಿಯೊಂದಕ್ಕೆ ರೆಕ್ಕೆಪುಕ್ಕಗಳನ್ನು ಬಿಡಿಸಿ, ರಾಜ್ಯಕ್ಕೆ ಮತ್ತೊಂದು ಮಹಾ ಕಂಟಕ ನಡೆದು ಹೋಗಲಿದೆ ಎಂದು ಬಿಂಬಿಸಿ, ಅಷ್ಟೆ ವೇಗವಾಗಿ ಅದಕ್ಕೊಂದು ‘ಲಾಜಿಕಲ್’ ಆದ ಅಂತಿಮ ತೀರ್ಪನ್ನು ನೀಡುವ ದುಸ್ಸಾಹಸ ನಡೆದಿದ್ದು ಇಡೀ ಪ್ರಹಸನ ಒಟ್ಟು ಹೋರಣ. […]

  October 7, 2016
  ...

  ಕಾವೇರಿ ಕಣದಿಂದ ಜಿ. ಮಾದೇಗೌಡ ಮಾಯ: ಪುತ್ರ ವ್ಯಾಮೋಹಕ್ಕೆ ಬಲಿಯಾದ್ರಾ ‘ಮಂಡ್ಯದ ಗಾಂಧಿ’?

  ಜಿ. ಮಾದೇಗೌಡ ಎಂಬ ಹೆಸರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಕರ್ನಾಟಕ ರಾಜಕೀಯದಲ್ಲಿ ಚಿರಪರಿಚಿತ ಹೆಸರು. ಕಾವೇರಿ ವಿಚಾರ ಬಂದರೆ ಮಂಡ್ಯದ ಬೀದಿಗಳಲ್ಲಿ ಪ್ರತ್ಯಕ್ಷವಾಗುವ ‘ಮಂಡ್ಯದ ಗಾಂಧಿ’, ನೇರ, ನಿಷ್ಟುರ ಪಾರದರ್ಶಕ ಹೋರಾಟಗಾರ ಎಂಬ ಬಿರುದುಗಳ ಭಾರ ಹೊತ್ತವರು ಇವರು. ನಿಜವಾಗಿಯೂ ಮಾದೇಗೌಡ ಪಾರದರ್ಶಕರೇ? ಗಾಂಧಿ ತತ್ವ ಪಾಲಿಸುವವರೇ? ಈ ವಿಚಾರಗಳ ಬೆನ್ನತ್ತಿ ಹೋದರೆ ಸ್ವಂತಕ್ಕಾಗಿ ಈ ‘ಗಾಂಧಿ’ ಮಾಡಿಕೊಂಡಿದ್ದೇನು? ಎಂಬ ಮಾಹಿತಿಗಳು ಸಿಗುತ್ತವೆ. ಕಾವೇರಿ ವಿಚಾರದಲ್ಲಿ ಮಂಡ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಮಾದೇಗೌಡರು ಏಕಾಏಕಿ ತಮ್ಮ ಧರಣಿ ನಿಲ್ಲಿಸಲು ಕಾರಣ ಪುತ್ರ […]

  October 6, 2016

Top