An unconventional News Portal.

ಸುದ್ದಿ ಸಾಗರ
  ...

  ಐಸಿಲ್ ವಿರುದ್ಧ ನಿರ್ಣಾಯಕ ಯುದ್ಧ: ಬಯಲಾಯ್ತು ಇಸ್ಲಾಮಿಕ್ ಉಗ್ರರ ‘ಸುರಂಗ’ ರಹಸ್ಯ!

  ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವೆನೆಂಟ್’ (ಐಸಿಲ್- ಹಿಂದಿನ ಐಸಿಸ್)ನ ರಹಸ್ಯವೊಂದು ಬಯಲಾಗಿದೆ. ಇರಾಕಿನ ಮೊಸುಲ್ ಪಟ್ಟಣವನ್ನು ಐಸಿಲ್ ಕೈಯಿಂದ ಇರಾಕ್ ಸೇನೆ ಮತ್ತು ‘ಕುರ್ದಿಸ್ತಾನ ಪೆಶ್ಮಾರ್ಗ ಪಡೆ’ಗಳು ವಶಕ್ಕೆ ಪಡೆಯುತ್ತಿದ್ದಂತೆ, ಉಗ್ರ ಸಂಘಟನೆಯ ಕಾರ್ಯಾಚರಣೆಯ ಹಿನ್ನೆಲೆಯಲ್ಲಿದ್ದ ಅಚ್ಚರಿದಾಯಕ ಸಂಗತಿಗಳು ಹೊರಬರುತ್ತಿವೆ. ಅವುಗಳಲ್ಲಿ ಇಸ್ಲಾಮಿಕ್ ಉಗ್ರರ ಸುರಂಗ ಜಾಲವೂ ಒಂದು. ಐಸಿಲ್ ಕಮಾಂಡರ್ ಗಳ ಮನೆ ಅಡಿಯಲ್ಲಿ ಸುರಂಗಗಳಿರುವುದು ಸೇನೆಯ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಈ ಸುರಂಗಗಳ ಜಾಡು ಹಿಡಿದು ಹೊರಟ ಸೇನಾ ಪಡೆ ಅಧಿಕಾರಿಗಳು […]

  October 20, 2016
  ...

  ಕನಕ ನಡೆಗೆ ದಲಿತ- ದಮನಿತರ ‘ಪರ್ಯಾಯ’: ಮತ್ತೊಂದು ಸಂಘರ್ಷಕ್ಕೆ ಸಾಕ್ಷಿಯಾಗಲಿದೆಯಾ ಉಡುಪಿ?

  ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸೈದ್ಧಾಂತಿಕ ಸಂಘರ್ಷಕ್ಕೆ ಉಡುಪಿ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಪ್ರತಿಕ್ರಿಯೆ ರೂಪದಲ್ಲಿ ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಂಡ ನೀಡಿದ್ದ ‘ಕನಕ ನಡೆ’ಗೆ ವಿರುದ್ಧವಾಗಿ ‘ದಲಿತ ಧಮನಿತರ ಹೋರಾಟ ಸಮಿತಿ’ ‘ಸ್ವಾಭಿಮಾನಿ ನಡೆ’ ಮಾಡುವುದಾಗಿ ಬುಧವಾರ ಘೋಷಿಸಿದೆ. ಹೀಗಾಗಿ ಇದೇ 23ನೇ ತಾರೀಖು, ಉಡುಪಿಯಲ್ಲಿ ಸೈದ್ಧಾಂತಿಕ ವಿಚಾರಗಳಲ್ಲಿ ವಿರುದ್ಧ ದ್ರುವಗಳಾಗಿರುವ ಎರಡು ತಂಡಗಳು ಒಟ್ಟಿಗೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ. ಸಹಜವಾಗಿಯೇ, ಇದು ಸಾಮಾಜಿಕ ಜಾಲತಾಣಗಳ ಆಚೆಗೆ, ವಾಸ್ತವದಲ್ಲಿ ಪರ ಮತ್ತು ವಿರೋಧದ […]

  October 20, 2016
  ...

  ಪ್ರತಿಭಟನಾಕಾರರ ಮೇಲೆ ಹರಿದ ವ್ಯಾನ್: ತಲೆ ಕೆಟ್ಟ ಫಿಲಿಪ್ಪೀನ್ಸ್ ಪೊಲೀಸರ ಹಿನ್ನೆಲೆ ಏನು?

  ಫಿಲಿಪ್ಪೀನ್ಸ್ ‘ಮಾದಕ ಲೋಕದಲ್ಲಿ ಮರಣ ಮೃದಂಗ’ವನ್ನು ನುಡಿಸಿದ್ದ ಪೊಲೀಸರು, ಇದೀಗ ಪ್ರತಿಭಟನಾಕಾರರ ಮೇಲೆ ವ್ಯಾನ್ ಹರಿಸಿದ್ದು ಜಾಗತಿಕ ಸುದ್ದಿಗೆ ಗ್ರಾಸವಾಗಿದೆ. ಈ ಮೂಲಕ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆಯ ಪೊಲೀಸರ ನಿರ್ದಯತೆ ಹೇಗಿರುತ್ತದೆ ಎಂಬುದಕ್ಕೆ ಜಗತ್ತು ಮತ್ತೊಮ್ಮೆ ಸಾಕ್ಷಿಯಾಗಿದೆ. ಹಿಂದೆ, ಸ್ಥಳೀಯ ಮಾದಕ ಲೋಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಲ್ಲಿನ ಪೊಲೀಸರು ಸಾಲು ಸಾಲು ಎನ್ ಕೌಂಟರ್ಗಳನ್ನು ನಡೆಸಿದ್ದರು. ಈ ಕುರಿತು ‘ಸಮಾಚಾರ’ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಬುಧವಾರ ದೇಶದ ರಾಜಧಾನಿ ಮನಿಲಾದಲ್ಲಿರುವ ಅಮೆರಿಕಾ ರಾಯಭಾರ ಕಚೇರಿ ಹೊರಗಡೆ ಜನರು […]

  October 19, 2016
  ...

  ದೇವರನಾಡಲ್ಲಿ ‘ರಾಜಕೀಯ ಹತ್ಯೆ’ಗಳು: ಕೇಸರಿ v/s ಕೆಂಬಾವುಟ ನಡುವಿನ ಕದನದ ಅಸಲಿಯತ್ತು ಇದು!

  ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೆ ಹೆಸರಾಗಿದ್ದ ದೇವರ ನಾಡು ಕೇರಳದಲ್ಲೀಗ, ರಾಜಕೀಯ ಕೊಲೆಗಳು ಸದ್ದು ಮಾಡುತ್ತಿವೆ. ಮೇಲಿಂದ ಮೇಲೆ ಬಿಜೆಪಿ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಸಾಮಾನ್ಯ ಕಾರ್ಯಕರ್ತರ ನೆತ್ತರು ಹರಿಯುತ್ತಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮತ್ತು ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯೂನಿಸ್ಟ್ ಪಕ್ಷಗಳ ನಡುವಿನ ಈ ಬೀದಿ ರಂಪಾಟ, ಈಗ ಸಹಜವಾಗಿಯೇ ರಾಷ್ಟ್ರೀಯ ಆಯಾಮವನ್ನು ಪಡೆದುಕೊಂಡಿದೆ. ಮುಖ್ಯವಾಗಿ ಬಿಜೆಪಿ ಇದನ್ನು ಕೇರಳ ರಾಜ್ಯದ ಹೊರಗೆ ‘ಸಾಮಾಜಿಕ ಜಾಗೃತಿ’ಯನ್ನು ಮೂಡಿಸಲು ಪ್ರಯತ್ನ ನಡೆಸುತ್ತಿದೆ. ಕಮ್ಯೂನಿಸ್ಟರನ್ನು ಬೆರಳೆಣಿಕೆಯಲ್ಲಿ ಎಣಿಸಬಹುದಾದ ಕರ್ನಾಟಕದಲ್ಲೂ, ಬಲಪಂಥೀಯ ಚಿಂತನೆಯ ಮಂದಿ ಸೆಮಿನಾರು, […]

  October 19, 2016
  ...

  ನಿವೃತ್ತ ನ್ಯಾಯಾಧೀಶರನ್ನು ಕಟಕಟೆಗೆ ಅಹ್ವಾನಿಸಿದ ಸುಪ್ರಿಂ ಕೋರ್ಟ್: ಯಾರಿವರು ‘ಖಡಕ್ ಮಾತಿನ’ ಖಟ್ಜು?

  ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಮಾರ್ಕಂಡೇಯ ಖಟ್ಜು, ಈಗ ಮತ್ತೊಮ್ಮೆ ‘ಸುದ್ದಿಕೇಂದ್ರ’ಕ್ಕೆ ಬಂದಿದ್ದಾರೆ. ಸುಪ್ರಿಂ ಕೋರ್ಟಿನ ತೀರ್ಪೊಂದನ್ನು ವಿರೋಧಿಸಿ ಖಟ್ಜು ಹಾಕಿದ್ದ ಫೇಸ್ಬಕ್ ಸ್ಟೇಟಸ್; ಈಗ ದೇಶದ ಸರ್ವೋಚ್ಚ ನ್ಯಾಯಾಲಯದ ಕಟೆ ಕಟೆ ಏರಲು ಕಾರಣವಾಗಿದೆ. ಭಾರತದಂತಹ ದೇಶದಲ್ಲಿ ಸಾಮಾಜಿಕ ಜಾಲತಾಣಗಳು ಬಲಗೊಳ್ಳುತ್ತಿರುವ ಈ ದಿನಗಳಲ್ಲಿ, ಈ ಬೆಳವಣಿಗೆ ಸಹಜವಾಗಿಯೇ ಗಮನ ಸೆಳೆದಿದೆ. ಸೌಮ್ಯ ಎಂಬ ಕೇರಳ ಮೂಲದ ಹುಡುಗಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಗಮನಿಸಬೇಕಿದೆ. ಸೌಮ್ಯ ‘ರೇಪ್ ಆ್ಯಂಡ್ ಮರ್ಡರ್ ಪ್ರಕರಣ’ದಲ್ಲಿ ಗೋವಿಂದಚಾಮಿಗೆ […]

  October 18, 2016
  ...

  ಕಾವೇರಿ ತಾಂತ್ರಿಕ ಸಮಿತಿಯಿಂದ ಸುಪ್ರಿಂ ಕೋರ್ಟಿಗೆ ವರದಿ ಸಲ್ಲಿಕೆ; ರಿಪೋರ್ಟಿನಲ್ಲೇನಿದೆ?

  ಕಾವೇರಿ ಉನ್ನತ ಮಟ್ಟದ ತಾಂತ್ರಿಕ ಸಮಿತಿ ತನ್ನ 87 ಪುಟಗಳ ಸುದೀರ್ಘ ಸ್ಥಳ ಪರಿಶೀಲನಾ ವರದಿಯನ್ನು ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ. ಪರ್ಯಾಯ ಬೆಳೆಗಳು ಮತ್ತು ನೀರಾವರಿ ಅಳವಡಿಸಿಕೊಳ್ಳುವುದು; ಈ ಮೂಲಕ ನೀರಿನ ಪೋಲು ತಡೆಗಟ್ಟುವುದು. ಅಟೋಮ್ಯಾಟಿಕ್ ನೀರಿನ ಅಳತೆ ಮಾಪನ ಅಳವಡಿಸಿಕೊಳ್ಳುವುದು. ರಾಜ್ಯದ ಜನರಿಗೆ ಬುದ್ದಿವಾದ ಹೇಳುವುದು ಸೇರಿದಂತೆ ಹಲವು ತೀರ್ಮಾನಗಳನ್ನು ಒಳಗೊಂಡ ವರದಿಯನ್ನು ಸಮಿತಿಯು ಸೋಮವಾರ ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ. ಕಾವೇರಿ ತಾಂತ್ರಿಕ ಸಮಿತಿ ಸಲ್ಲಿಸಿದ ರಿಪೋರ್ಟಿನಲ್ಲಿ ಒಟ್ಟು 6 ವಿಭಾಗಗಳಿದ್ದು ಸವಿವರವಾದ ವರದಿ ಇದಾಗಿದೆ. […]

  October 17, 2016
  ...

  4 ಗುಂಟೆ ಜಾಗಕ್ಕಾಗಿ ‘ಹೈ ಡ್ರಾಮಾ’: ಇಲ್ಲಿ ಪೊಲೀಸ್, ಶಾಸಕ ಮತ್ತು ಮಾಧ್ಯಮವೇ ಪಾತ್ರಧಾರಿಗಳು!

  ಸಿಲಿಕಾನ್ ಸಿಟಿ ಬೆಳೆಯುತ್ತಿದ್ದಂತೆ ನಗರದ ಹೊರವಲಯದ ಕೃಷಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಒಂದು ಕಾಲದಲ್ಲಿ ಬೆಂಗಳೂರಿನಿಂದ ಹೊರಗೆ ಹೋದರೆ ಕಾಣುತ್ತಿದ್ದ ಸಾಮಾನ್ಯ ಕೃಷಿ ಚಟುವಟಿಕೆಗಳು ಇವತ್ತು ಕಣ್ಮರೆಯಾಗಿವೆ. ಆ ಜಾಗದಲ್ಲಿ ಅಧಿಕಾರ ಇರುವವರು, ಅಧಿಕಾರ ಕೇಂದ್ರಕ್ಕೆ ಹತ್ತಿರ ಇರುವವರು ಭೂಮಿಯನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಒಂದೊಂದು ಗುಂಟೆ ಜಾಗಕ್ಕೂ ಬಡಿದಾಟಗಳು ನಡೆಯುತ್ತಿವೆ. ಅದಕ್ಕಾಗಿ ಜನರ ರಕ್ಷಣೆಗಾಗಿ ಇರುವ ಯಂತ್ರಾಂಗವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಪೊಲೀಸ್ ಠಾಣೆಗಳು ‘ರಿಯಲ್ ಎಸ್ಟೇಟ್’ ಮಧ್ಯಸ್ಥಿಕೆ ಕೇಂದ್ರಗಳಾಗಿ ಬದಲಾಗಿವೆ… ಹೀಗೆ, ಕ್ಲೀಷೆಯಂತಾಗಿ ಹೋಗಿರುವ ಸ್ಟೋರಿಯೊಂದರ ‘ನ್ಯೂಸ್ ಪೆಗ್’ ಒಂದು ಶನಿವಾರ […]

  October 15, 2016
  ...

  ದಲಿತ- ದಮನಿತರ ‘ಭೂಮಿ ಹಕ್ಕು’: ಕೊಡುವುದಕ್ಕೆ ಸರಕಾರದ ಬಳಿ ಜಮೀನು ಎಲ್ಲಿದೆ?

  ‘ಆಹಾರ ನಮ್ಮ ಆಯ್ಕೆ; ಭೂಮಿ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಹುಟ್ಟಿಕೊಂಡ ‘ದಲಿತ ದಮನಿತರ’ ಹೋರಾಟ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸದ್ದು ಮಾಡುತ್ತಿದೆ; ಟಿವಿಗಳ ಪ್ರೈಮ್ ಟೈಮನ್ನು ಆವರಿಸಿಕೊಂಡಿದೆ. ಉಡುಪಿ ಮಠದ ಪೇಜಾವರ ಸ್ವಾಮಿಜಿ, ‘ಮಠಕ್ಕೆ ಮುತ್ತಿಗೆ ಹಾಕಿದರೆ’ ಉಪವಾಸ ಮಾಡುವುದಾಗಿ ಪ್ರಕಟಿಸಿದ್ದಾರೆ. ಸಹಜವಾಗಿಯೇ ಚರ್ಚೆಗಳು ಮಠ ಮಾನ್ಯಗಳ ಪಂಕ್ತಿ ಭೇದದ ಸುತ್ತ ನಡೆಯುತ್ತಿವೆ. ಹೀಗೆ ಮುಂದುವರಿದರೆ, ‘ಚಲೋ ಉಡುಪಿ’ ವ್ಯಕ್ತಪಡಿಸಿದ್ದ ‘ಭೂಮಿ ಹಕ್ಕಿನ’ ಸುತ್ತಲಿನ ಹೋರಾಟ ಕಳೆ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹೀಗೊಂದು ಅಭಿಪ್ರಾಯ ಚಲೋ […]

  October 15, 2016
  ...

  ಗುರಿ ತಲುಪದ ಇನ್ಫೋಸಿಸ್ ಲಾಭ: ವಿಶಾಲ್ ಸಿಕ್ಕಾ ಬಂದರೂ ಬದಲಾಗದ ಕಂಪೆನಿ ಹಣೆಬರಹ!

  ದೇಶದ ಎರಡನೇ ಅತೀ ದೊಡ್ಡ ಸಾಫ್ಟ್ ವೇರ್ ರಫ್ತು ಕಂಪೆನಿ ಇನ್ಫೋಸಿಸ್ 2016-17ನೇ ಆರ್ಥಿಕ ವರ್ಷಕ್ಕಾಗಿ ತನ್ನ ‘ವಾರ್ಷಿಕ ವರಮಾನ ಮಾರ್ಗದರ್ಶಕ’ (Annual Revenue Guidelines)ಗಳನ್ನು ಬದಲಿಸಿಕೊಂಡಿದೆ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಾಗುತ್ತಿರುವ ಅನಿರೀಕ್ಷಿತ ಬದಲಾವಣೆಗಳು ಎಂದು ತಿಳಿದು ಬಂದಿದೆ. ಏನಿದು ಮಾರ್ಗದರ್ಶಕ?: ಪ್ರತಿ ಕಂಪನಿಯು ಒಂದು ವರ್ಷದಲ್ಲಿ ಎಷ್ಟು ಲಾಭ ಗಳಿಸಬೇಕು. ಇದಕ್ಕಾಗಿ ಯಾವೆಲ್ಲಾ ಮಾರ್ಗಗಳನ್ನು ಅನುಸರಿಸಬೇಕು ಎಂದು ಮಾರ್ಗದರ್ಶಿ ಸೂತ್ರವನ್ನು ಹಾಕಿಕೊಂಡಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಯಗಳು ಉಂಟಾದ ಹಿನ್ನಲೆಯಲ್ಲಿ ಇನ್ಫೋಸಿಸ್ ವರ್ಷದ ಮಧ್ಯದಲ್ಲಿಯೇ ತನ್ನ ಮಾರ್ಗದರ್ಶಿ ಸೂತ್ರಗಳನ್ನು ಬದಲಾಯಿಸಿದೆ. “ಕಂಪೆನಿಯ […]

  October 15, 2016
  ...

  ಸೌರ ವಿದ್ಯುತ್ ಕಡೆಗೆ ಮುಖಮಾಡಿದ ಆಪಲ್, ಗೂಗಲ್: ಇಂಧನ ಕ್ಷೇತ್ರಕ್ಕೆ ಟೆಕ್ ಕಂಪನಿಗಳೇಕೆ ಲಗ್ಗೆ ಇಡುತ್ತಿವೆ?

  ಈವರೆಗೂ ಸ್ಮಾರ್ಟ್ ಫೋನ್, ಕಂಪ್ಯೂಟರ್ ಹಾಗೂ ಅಂತರ್ಜಾಲ ಸೇವೆಗೆ ಸೀಮಿತವಾಗಿದ್ದ ಕಂಪನಿಗಳು ಹೊಸ ಉದ್ಯಮದತ್ತ ಮುಖ ಮಾಡಿವೆ. ನವೀಕರಿಸಬಹುದಾದ ಇಂಧನ (ಪವನ ವಿದ್ಯುತ್, ಸೌರ ವಿದ್ಯುತ್) ಮೂಲಗಳನ್ನು ಅವು ನಿರ್ಮಿಸುವತ್ತ ದಾಪುಗಾಲು ಇಡುತ್ತಿವೆ. ಇದು ಪ್ರಪಂಚದಾದ್ಯಂತ ಹೊಸ ಅಲೆಯನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಹೆಚ್ಚುತ್ತಿರುವ ಇಂಧನದ ಬೇಡಿಕೆ, ಬರಿದಾಗುತ್ತಿರುವ ಇಂಧನ ಮೂಲಗಳು ಹಾಗೂ ಅದರಿಂದಾಗುತ್ತಿರುವ ವಾಯು ಮಾಲಿನ್ಯದ ನಿಟ್ಟಿನಲ್ಲಿ ಜಗತ್ತಿನಲ್ಲಿ ಬಹಳ ಹಿಂದಿನಿಂದಲೇ ನವೀಕರಿಸಬಹುದಾದ ಮೂಲಗಳ ಅನ್ವೇಷಣೆ ನಡೆಯುತ್ತಿತ್ತು. ಆದರೆ, ಅದಕ್ಕಾಗಿ ದುಬಾರಿ ವೆಚ್ಚವನ್ನು ಮಾಡಬೇಕಾಗಿದ್ದ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಇಂಧನ […]

  October 14, 2016

Top