An unconventional News Portal.

ಸುದ್ದಿ ಸಾಗರ

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ರಾಜ್ಯ

  ಪ್ರಜಾತಂತ್ರವನ್ನ ಪಾತಾಳಕ್ಕೆ ತಳ್ಳುತ್ತಿದೆಯೇ ಚುನಾವಣಾ ಚಾಣಾಕ್ಷ ‘ಶಾ’ ತಂತ್ರಗಾರಿಕೆ?

  2018 ಹಾಗೂ 2019 ಚುನಾವಣೆಯ ಪರ್ವಕಾಲ. ಈ ವರ್ಷ ದೊಡ್ಡ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 8 ರಾಜ್ಯಗಳ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ. ಪ್ರಜಾಧಿಕಾರದ ಪಡೆಯುವ ಪ್ರಕ್ರಿಯೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಗೆಲುವು-ಸೋಲಿನ ಲೆಕ್ಕಾಚಾರದೊಂದಿಗೆ ರಾಜಕೀಯ ಪಕ್ಷಗಳು ರಟ್ಟೆಯರಳಿಸಿ ಪ್ರಚಾರದ ಕಣಕ್ಕೆ ಇಳಿದಿವೆ. ಪ್ರಮುಖ ಮೂರು ಪಕ್ಷಗಳ ಚುನಾವಣಾ ಪ್ರಚಾರದ ವೈಖರಿಗಳ ಪೈಕಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಾಗೂ 19 ರಾಜ್ಯಗಳ ಚುಕ್ಕಾಣಿ ಹಿಡಿದಿರುವ ಬಿಜೆಪಿ ರೂಪಿಸುತ್ತಿರುವ ಚುನಾವಣಾ ತಂತ್ರಗಾರಿಕೆ, ದೇಶದ ಚುನಾವಣಾ..

  January 3, 2018
  ...
  ದೇಶ

  ‘ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ-2017’: ಐಎಂಎ ವಿರೋಧ; ವೈದ್ಯರಿಗೆ ಇರುವ ಆಕ್ಷೇಪಗಳೇನು?

  ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಇಂದು (ಮಂಗಳವಾರ) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇಶದ ಎಲ್ಲಾ ಹೊರ ರೋಗಿ ವಿಭಾಗ(ಓಪಿಡಿ)ಗಳನ್ನು ಬಂದ್ ಮಾಡಲು ಸೂಚಿಸಲಾಗಿತ್ತು. ಈ ಹಿಂದೆ ರಾಜ್ಯ ಸರಕಾರದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣದ ವಿಧೇಯಕದ ವಿರುದ್ಧ ವೈದ್ಯಕೀಯ ಸಂಘ ವಿರೋಧ ವ್ಯಕ್ತಪಡಿಸಿ ಸುದ್ದಿಯ ಕೇಂದ್ರಬಿಂದುವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಕೇಂದ್ರದ ವಿರುದ್ಧ ವೈದ್ಯರು ಒಮದು ದಿನ ಮುಷ್ಕರ ನಡೆಸಿದ್ದಾರೆ.  ಕೇಂದ್ರ ಸರಕಾರ ಮಂಡಿಸಿರುವ ‘ರಾಷ್ಟ್ರೀಯ..

  January 2, 2018
  ...
  ರಾಜ್ಯ

  ಜನವರಿ 1ರಂದೇ ಯಾಕೆ ಹೊಸ ವರ್ಷ?: ಉಗಾದಿ ನೆನಪಿಸಿಕೊಳ್ಳುವ ಮುನ್ನ ‘ಗ್ರೊಗೋರಿಯನ್ ಕ್ಯಾಲೆಂಡರ್’ ಕುರಿತು ಓದಿ ಬಿಡಿ!

  ಇದು 2018ರ ಮೊದಲ ದಿನ, ರಾತ್ರಿ 12ಗಂಟೆಗೆ ಹೊಸ ವರ್ಷವನ್ನು ಬರಮಾಡಿಕೊಂಡಿರುವ ಜಗತ್ತಿನ ಜನತೆ, ಇಂದು ಹೊಸ ವರ್ಷದ ಪಾರ್ಟಿ, ಸೆಲೆಬ್ರೇಷನ್, ವಿಷಸ್‌ಗಳಲ್ಲಿಯೇ ಕಾಲ ದೂಡಿಬಿಡುತ್ತದೆ. ಜನವರಿ 1ರಂದೇ ಯಾಕೆ ಹೊಸಾ ವರ್ಷ? ಬೇರೆ ದಿನಗಳಲ್ಲಿ ಆದರೆ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿರಲು ಸಾಧ್ಯ. ಭಾರತದಲ್ಲಿ ಉಗಾದಿ ದಿನವೇ ಹೊಸ ವರ್ಷದ ಮೊದಲ ದಿನ ಎಂಬ ನಂಬಿಕೆಯೂ ಇದೆ. ಆದರೆ, ಸರಕಾರ ದಾಖಲೆಗಳ ಪ್ರಕಾರ ಹಾಗೂ ಜಗತ್ತಿನ ಮೂರು ದೇಶಗಳನ್ನು ಹೊರತಿಪಡಿಸಿದರೆ, ಎಲ್ಲಾ ಕಡೆಗಳಲ್ಲೂ ಜನವರಿ ಒಂದನೇ ತಾರೀಖನ್ನೇ ಹೊಸ..

  January 1, 2018
  ...
  ದೇಶ

  ‘ರಗ್ಬಿ ತರಬೇತಿ’ಗಾಗಿ ವಿದೇಶಕ್ಕೆ ಹೋದ ಮಕ್ಕಳು: ಕರ್ನಾಟಕದಲ್ಲಿ ಮಾನವ ಕಳ್ಳಸಾಗಣೆಯ ಬೇರುಗಳು

  ವರ್ಷದ ಕೊನೆಯಲ್ಲಿ ಉತ್ತರ ಭಾರತದಿಂದ ಮಕ್ಕಳ ಕಳ್ಳಸಾಗಣೆ ಜಾಲದ ಕುರಿತು ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಭಾರತದಿಂದ 25 ಮಕ್ಕಳನ್ನು ಕ್ರೀಡಾಕೂಟದ ನೆಪದಲ್ಲಿ ಫ್ರಾನ್ಸ್‌ಗೆ ಕರೆಸಿಕೊಂಡು, ಅಲ್ಲಿ ಮಾರಾಟಕ್ಕಿಟ್ಟ ತಂಡವನ್ನು ಪತ್ತೆಹಚ್ಚಲಾಗಿದೆ. ಫ್ರಾನ್ಸ್ ದೇಶದ  ಪೊಲೀಸ್ ಇಂಟರ್ ಪೋಲ್‌ನಿಂದ ಮಾಹಿತಿ ಪಡೆದ ಸಿಬಿಐ ಭಾರತದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.  ಲಲಿತ್ ಡೇವಿಡ್ ಡೀನ್, ಸಂಜೀವ್ ರಾಜ್ ಮತ್ತು ವರುಣ್ ಚೌಧರಿ ವಶದಲ್ಲಿರುವ ಆರೋಪಿಗಳು. ಇವರುಗಳು ದೆಹಲಿ, ಫರೀಯಾಬಾದ್ ಮೂಲದವರು ಎನ್ನಲಾಗಿದೆ. ಆರೋಪಿಗಳ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಮಾನವ ಕಳ್ಳಸಾಗಾಣಿಕೆಗೆ..

  December 30, 2017
  ...
  ರಾಜ್ಯ

  ‘ಕವಿಶೈಲ ನೆನಪಿಸಿದ ಡೂಡಲ್’: ಕುವೆಂಪು ಗೂಗಲ್‌ ಲೋಗೋ ವಿನ್ಯಾಸಕ್ಕೆ ಅನುಮತಿ ನೀಡಿದ್ದು ಮಗಳು ತಾರಿಣಿ!

  ರಾಷ್ಟ್ರಕವಿ ಕುವೆಂಪು 113ನೇ ಜನ್ಮದಿನಕ್ಕೆ ಗೂಗಲ್ ಸರ್ಚ್‌ ಎಂಜಿನ್‌ ಅಚ್ಚರಿಯ ಡೂಡಲ್ ನೀಡಿದೆ. ಬಂಡೆಗಲ್ಲಿನ ಮೇಲೆ ಕುಳಿತು ಬರೆಯುತ್ತಿರುವ ಕುವೆಂಪು, ಮಲೆನಾಡಿನ ಪರಿಸರ, ಕಾಜಾಣ ಹಾಗೂ ಕವಿಶೈಲವನ್ನು ಹೋಲುವ ಚಿತ್ರದಲ್ಲಿ ಕನ್ನಡದಲ್ಲಿ ಬರೆದ ‘ಗೂಗಲ್’ ಅಕ್ಷರಗಳು ಗಮನ ಶುಕ್ರವಾರ ಗಮನ ಸೆಳೆದಿವೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಕಾದಂಬರಿಕಾರ ಎಂಬ ಪರಿಚಯ ಲೇಖನಗಳ ಜತೆಗೆ, ಸದರಿ ಡೂಡಲ್ ಹಿನ್ನೆಲೆಯಲ್ಲಿ ಒಂದಷ್ಟು ಸುದ್ದಿಗಳೂ ಸಿಗುತ್ತವೆ. ಒಟ್ಟಾರೆ, ಕಳೆದ 17 ವರ್ಷಗಳಿಂದ ಕುವೆಂಪು ಅವರ ಮೂಲ..

  December 29, 2017
  ...
  ರಾಜ್ಯ

  ಬುದ್ದಿಜೀವಿಗಳು ಗಂಜಿ ಗಿರಾಕಿಗಳು, ಮಾಧ್ಯಮ ಪ್ರೆಸ್ಟಿಟ್ಯೂಟ್ಸ್‌, ಸಂವಿಧಾನ- ಡೋಂಟ್‌ ಟಚ್‌!

  ಒಬ್ಬಂಟಿಯಾದ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ಕೊನೆಗೂ ದೇಶದ ಕ್ಷಮೆ ಕೇಳಿದ್ದಾರೆ. ಜಾತ್ಯಾತೀತರ ರಕ್ತ ಹಾಗೂ ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿಕೆ ನೀಡಿದ್ದ ಹೆಗಡೆ ವಿರುದ್ಧ ಸಂಸತ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಪ್ರತಿಭಟನೆ, ದೂರು ದಾಖಲು ಪ್ರಕ್ರಿಯೆಗಳಿಗೂ ನಾಂದಿ ಹಾಡಿತ್ತು. ಇದಕ್ಕೆ ಸ್ವ ಪಕ್ಷೀಯ ರಾಜ್ಯ ನಾಯಕರಿಂದ ಬೆಂಬಲ ಸಿಗದೆ, ಅತ್ತ ಕೇಂದ್ರ ನಾಯಕರೂ ಜತೆಗೆ ನಿಲ್ಲದೆ ಹೋದ ಸ್ಥಿತಿಯಲ್ಲಿ ಹೆಗಡೆ ಸಂಸತ್‌ನಲ್ಲಿಯೇ ತಮ್ಮ ಹೇಳಿಕೆಗೆ ಗುರುವಾರ..

  December 29, 2017
  ...
  ರಾಜ್ಯ

  ‘ಒಪ್ಪಿತ ಸಂಬಂಧ; ತುಪ್ಪದ ಹೋಮ’: ಕೇಸು ಖುಲಾಸೆಗೊಂಡರೂ ನಿಲ್ಲದ ಕಂಪನ; ಹವ್ಯಕರ ಬಂಧನ!

  ಇದೊಂದು ಅಧಿಕಾರ ಕೇಂದ್ರಕ್ಕೆ ಹತ್ತಿರದಲ್ಲಿರುವ ಜನಪ್ರಿಯ ಮಠ, ತುಪ್ಪದಲ್ಲಿ ಹೋಮ ಮಾಡುವ ಮೂಲಕ ವಾತಾವರಣದ ಆಮ್ಲಜನಕವನ್ನು ಹೆಚ್ಚಿಸುತ್ತೀವಿ ಎಂದು ಪ್ರಚಾರ ಪಡೆದವರು. ಮಲೆನಾಡಿನ ಗಿಡ್ಡ ತಳಿಯ ಹಸುಗಳ ಸಾಕಾಣಿಕೆಯ ಮೂಲಕ ‘ಗೋ ಸಂರಕ್ಷಣೆ’ಯ ಮಹತ್ವವನ್ನು ಹಂಚುತ್ತಿದ್ದವರು. ಹೀಗಿರುವಾಗಲೇ ಮಠದ ಉತ್ತರಾಧಿಕಾರಿಯಾಗಿ ಬಂದ ಯುವ ಸ್ವಾಮೀಜಿಯ ‘ಒಪ್ಪಿತ ಲೈಂಗಿಕ ಸಂಬಂಧ’ ಜಗಜ್ಜಾಹೀರಾಯಿತು. ಮೂರು ವರ್ಷಗಳ ಅಂತರದಲ್ಲಿ ದೂರು, ತನಿಖೆ, ವಿಚಾರಣೆಗಳೆಲ್ಲಾ ನಡೆದು ಹೋದವು. ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಗೊಂಡಿತು. ಮಳೆ ನಿಂತ ಮೇಲೂ ಹನಿಗಳು ಉದುರುವಂತೆ; ನ್ಯಾಯಾಲಯದಲ್ಲಿ ಪರಿಹಾರ ಕಂಡ ಪ್ರಕರಣ,..

  December 29, 2017
  ...
  ರಾಜ್ಯ

  ಕಾವೇರಿ ವಿಚಾರದಲ್ಲಿ ಒಕ್ಕಟ್ಟು; ಮಹದಾಯಿ ವಿಚಾರದಲ್ಲಿ ಬಿಕ್ಕಟ್ಟು: ಇದ್ಯಾವ ಸೀಮೆ ‘ನೀರಿನ ರಾಜಕೀಯ’?

  ಮೂರು ದಶಕಗಳ ನೀರು ಹಂಚಿಕೆ ವಿವಾದಕ್ಕೆ ಮೂರು ದಿನಗಳಲ್ಲಿ ಪರಿಹಾರ ಸಿಗದಿದ್ದರೂ; ಚುನಾವಣಾ ಹಿನ್ನಲೆಯಲ್ಲಿ ರಾಜ್ಯದ ಎರಡು ಪ್ರಮುಖ ಪಕ್ಷಗಳಿಗೆ ಮಹಾದಾಯಿ ವಿಚಾರ ದಾಳವಾಗಿ ಬಳಕೆಯಾಗಿದೆ. ಕಾವೇರಿ ವಿಚಾರದಲ್ಲಿ ದೇವರಾಜ್‌ ಅರಸು ಸರಕಾರದಿಂದ ಹಿಡಿದು ಮೊನ್ನೆಮೊನ್ನೆವರೆಗೂ ಪಕ್ಷಾತೀತವಾಗಿ ದನಿ ಎತ್ತಿದ ರಾಜಕಾರಣಿಗಳೀಗ, ಮಹದಾಯಿ ನೀರಿಗಾಗಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಬೆಂಗಳೂರಿಗೆ ಬಂದ ರೈತರನ್ನು ಬೀದಿ ಬೀದಿ ಸುತ್ತಿಸುವ ‘ಹೀನ ರಾಜಕೀಯ’ವನ್ನು ಯಶಸ್ವಿಯಾಗಿ ಮಾಡಿಮುಗಿಸಿದ್ದಾರೆ. ಈ ಮೂಲಕ ಕಾವೇರಿಯಲ್ಲಿ ಒಗ್ಗಟ್ಟು, ಚುನಾವಣೆ ಹತ್ತಿರ ಬಂದಾಗ ಮಹಾದಾಯಿ ಬಿಕ್ಕಟ್ಟು ಎಂದು ಬಿಂಬಿಸುವ ಪ್ರಯತ್ನಕ್ಕೆ..

  December 27, 2017
  ...
  ರಾಜ್ಯ

  ‘ಅಂಬೇಡ್ಕರ್ ಬದುಕಿದ್ದರೆ ದಲಿತರ ಕೈಗೆ ಬಂದೂಕು ಕೊಡಿ ಅನ್ನುತ್ತಿದ್ದರು’: ಕೋಟಿಗಾನಹಳ್ಳಿ ರಾಮಯ್ಯ ಸಂದರ್ಶನ

  ಮೊದಲಿದ್ದ ಖದರ್‌ನ್ನು ಕಳೆದುಕೊಂಡಿದ್ದು ದೇಹ ಮಾತ್ರ. ಅದೇ ಹಳೆ ಹೋರಾಟದ ದಿನಗಳನ್ನು ನೆನಪಿಸುವ ದನಿ, ಘೋಷಣೆಗಳು ಹಾಗೂ ಕಾಲಕ್ಕಿಂತ ಮುಂದಿರುವ ಆಲೋಚನೆಗಳು. ‘ನನ್ನ ಕೈಗೊಂದು ಬಂದೂಕು ಕೊಡಿ, 1000 ಬುಲೆಟ್ ಕೊಡಿ, ಅದ್ಯಾವನು ದಲಿತ ಹೆಣ್ಣು ಮಕ್ಕಳ ಮೈ ಮೊಟ್ಟುತ್ತಾರೋ ನೋಡೊಣ..’ ಎಂದರು ಕೋಟಗಾನಹಳ್ಳಿ ರಾಮಯ್ಯ.  ಬಿಳಿ ಅಂಗಿ, ಕಾಟನ್ ಪ್ಯಾಂಟ್‌, ಮೇಲೊಂದು ನೀಲಿ ಬಣ್ಣದ ಜರ್ಕಿನ್ ತೊಟ್ಟಿದ್ದ ಕೆ. ರಾಮಯ್ಯ ಮಾತನಾಡತೊಡಗಿದರು. ಕೋಲಾರದ ಬೆಟ್ಟದ ಬುಡದಲ್ಲೀಗ ಅವರೊಂದು ತಾತ್ಕಾಲಿಕ ಕಚೇರಿ ನಿರ್ಮಿಸಿಕೊಂಡಿದ್ದಾರೆ. ಇತ್ತೀಚೆಗೆ ಕೋಲಾರದ ಜಿಲ್ಲಾಧಿಕಾರಿಗೆ ‘ನನಗೊಂದು ಬಂದೂಕು..

  December 27, 2017
  ...
  ರಾಜ್ಯ

  ‘ಒಂದು ಪದ; ನಾನಾ ವ್ಯಾಖ್ಯಾನ’: ವಿವಾದ ಪಕ್ಕಕ್ಕಿಡಿ, ಇಷ್ಟಕ್ಕೂ ‘ಜಾತ್ಯಾತೀತ’ ಎಂದರೆ ಏನರ್ಥ ನೋಡಿ!

  ಏನೇ ಹೇಳಿ, ಚುನಾವಣೆ ಹತ್ತಿರ ಬಂದಾಗ ವಿವಾದಿತ ಹೇಳಿಕೆಗಳು, ಬೆಂಕಿ ಹಚ್ಚುವ ಮಾತುಗಳು, ಉದ್ರೇಕಕಾರಿ ಅಜೆಂಡಾಗಳು ಮುನ್ನೆಲೆಗೆ ಬರುವುದು ಸಾಮಾನ್ಯ. ಕೆಲವು ದಿನಗಳ ಹಿಂದೆ, ರಾಜಕಾರಣಿಗಳ ಪರಸ್ಪರ ಏಕ ವಚನ ಪ್ರಯೋಗವೇ ಸುದ್ದಿಯಲ್ಲಿತ್ತು. ರಾಜಕೀಯದಲ್ಲಿರುವವರು ನಾಲಿಗೆ ಹರಿಯ ಬಿಡಬಾರದು ಎಂದು ಕಿವಿಮಾತುಗಳು ಕೇಳಿಬಂದಿದ್ದವು. ಇದೀಗ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ‘ಜಾತ್ಯಾತೀತ’ ಎಂಬ ಪದವನ್ನು ಎಳೆದು ತಂದಿದ್ದಾರೆ. ಇಷ್ಟಕ್ಕೂ ಈ ಜ್ಯಾತ್ಯಾತೀತ ಎಂದರೇನು? ಇದೊಂದನ್ನು ಬಿಟ್ಟು ಉಳಿದೆಲ್ಲಾ ಚರ್ಚೆಗಳು ಅದರ ಸುತ್ತ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಸಂವಿಧಾನದ ಮೊದಲ..

  December 26, 2017

FOOT PRINT

Top