An unconventional News Portal.

    ...
    PU-board-exam-paper
    ರಾಜ್ಯ

    ಮತ್ತೆ ಮಿಸ್ ಹೊಡೆದ ಪಿಯು ಬೋರ್ಡ್ ‘ಕೆಮಿಸ್ಟ್ರಿ’; ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಬಹಿರಂಗ

    ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಗುರುವಾರ ಮತ್ತೊಮ್ಮೆ ಸೋರಿಕೆಯಾಗುವ ಮೂಲಕ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಮಾ. 21ರಂದು ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಪಿಯು ಮಂಡಳಿ ಮರು ಪರೀಕ್ಷೆಯನ್ನು ಮಾ. 30ಕ್ಕೆ ಮುಂದೂಡಿತ್ತು. ರಾಜ್ಯಾದ್ಯಂತ ಸುಮಾರು 1. 45 ಲಕ್ಷ ವಿದ್ಯಾರ್ಥಿಗಳು ರಸಾಯನ ಶಾಸ್ತ್ರ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಪರೀಕ್ಷೆ ಆರಂಭಕ್ಕೂ ಮುನ್ನವೇ ಮಧ್ಯರಾತ್ರಿ ಮೂರು ಗಂಟೆ ವೇಳೆಗೆ ಬೆಂಗಳೂರು, ತುಮಕೂರುಗಳಲ್ಲಿ ಕೈ ಬರಹದಲ್ಲಿ ಬರೆದ ಪ್ರಶ್ನೆ ಪತ್ರಿಕೆ ಹರಿದಾಡಲಾರಂಭಿಸಿತು. ಬೆಳಗೆ ನಸಕು ಹರಿಯುವ..

    March 31, 2016
    ...
    ಬಿಬಿಎಂಪಿ ಕೇಂದ್ರ ಕಟ್ಟಡ (ಚಿತ್ರ: ದಿ ಹಿಂದೂ)
    ರಾಜ್ಯ

    ಬಜೆಟ್ ಮಂಡನೆ ಶಾಸ್ತ್ರ ಮುಗಿಸಿದ ಬಿಬಿಎಂಪಿ; ಆದಾಯಕ್ಕೆ ರಾಜ್ಯ ಸರಕಾರವೇ ಆಸರೆ, ವೆಚ್ಚದಲ್ಲಿ ಇಲ್ಲದ ಭರವಸೆ!

    2016-17 ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ಶಾಸ್ತ್ರವನ್ನು ಸೋಮವಾರ ಮುಗಿಸಲಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಪರವಾಗಿ ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಿವರಾಜು ಆಯವ್ಯಯವನ್ನು ಮಂಡಿಸಿದರು. ದಿವಾಳಿ ಸ್ಥಿತಿ ತಲುಪಿದ್ದ, ಆದಾಯ ಮತ್ತು ಖರ್ಚಿನ ನಡುವೆ ಬ್ಯಾಲೆನ್ಸ್ ಕಳೆದುಕೊಂಡಿದ್ದ ಬಿಬಿಎಂಪಿ, ಹಲವು ವರ್ಷಗಳ ನಂತರ ಮೊದಲ ಬಾರಿಗೆ ಆದಾಯ ಮತ್ತು ವಿನಿಯೋಗದಲ್ಲಿ ಸಮತೋಲನ ಕಾಯ್ದುಕೊಂಡಿರುವುದು ಇದರ ಹೈಲೈಟ್ಸ್. ಇದನ್ನು ಬಿಟ್ಟರೆ, 8, 994. 41 ಕೋಟಿ ರೂಪಾಯಿ ಗಾತ್ರದ..

    March 28, 2016
    ...
    bjp_jds_local_bodies
    ರಾಜ್ಯ

    ಹಳೇ ದೋಸ್ತಿಗಳ ಹೊಸ ಮೈತ್ರಿ: ಅತಂತ್ರ ಸ್ಥಳೀಯ ಸಂಸ್ಥೆಗಳ ಅಧಿಕಾರ ಖಾತ್ರಿ!

    ಹಳೇ ದೋಸ್ತಿಗಳು ಮತ್ತೊಂದು ಸುತ್ತಿನ ಮೈತ್ರಿಗೆ ಮುಂದಾಗುತ್ತಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹೊಂದಾಣಿಕೆ ಮಾಡಿಕೊಳ್ಳಲಿವೆ. ಇದಕ್ಕಾಗಿ ಬಿಜೆಪಿ ಮುಖಂಡರ ರಹಸ್ಯ ಸಭೆಯೊಂದು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜತೆ ಔಪಚಾರಿಕ ಮಾತುಕತೆಯ ಹೊಣೆಯನ್ನು ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ವಹಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಫಲಿತಾಂಶ ಬಂದ ನಂತರ, ಸ್ಥಳೀಯ ನಾಯಕರ ವಿವೇಚನೆಗೆ ಹೊಂದಾಣಿಕೆ ವಿಚಾರವನ್ನು ಬಿಡಲಾಗಿತ್ತು. ಆದರೆ, ಕಳೆದ ಕೆಲವು..

    March 25, 2016

Top