An unconventional News Portal.

    ...
    CID Exclusive
    ರಾಜ್ಯ

    ‘ಜುಗಾರಿ ಕ್ರಾಸ್’ಗೆ ಬಂದು ನಿಂತ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಯಾರು ಆ ‘ಬಾಸ್’?

    ವಿಧಾನಸೌಧದಿಂದ ಅನತಿ ದೂರದಲ್ಲಿರುವ ಸಿಐಡಿಯ ಬಿಳಿ ಬಣ್ಣದ ಭವ್ಯ ಕಟ್ಟಡದೊಳಗೆ ದೊಡ್ಡ ಮಟ್ಟದ ಸಂಚಲನ ಶುರುವಾಗಿದೆ. ಪಿಯುಸಿ ‘ರಸಾಯನ ಶಾಸ್ತ್ರ’ದ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ಮಹತ್ವದ ಸುಳಿವು ಲಭ್ಯವಾಗಿದೆ. ಅದು ‘ಬಾಸ್’ ಅಲಿಯಾಸ್ ‘ಚೀಫ್’ ಎಂಬ ಅನಾಮಧೇಯ ವ್ಯಕ್ತಿಯ ಬಗೆಗಿನ ಸ್ಫೋಟಕ ಮಾಹಿತಿ. ಈ ಬಾರಿ ಇದು, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ‘ಶಿವಕುಮಾರ್  ಎಂಬ ಕಿಂಗ್ ಪಿನ್’ಗೆ ಮಾತ್ರವೇ ಸೀಮಿತಗೊಳ್ಳುವ ‘ಹಗರಣ’ ಇದಲ್ಲ ಎಂಬುದು ತನಿಖೆಯನ್ನು ಮುನ್ನಡೆಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಆದಂತಿದೆ. ಆದರೂ,..

    April 6, 2016
    ...
    baliga-mangalore-police-1
    ರಾಜ್ಯ

    ವಿನಾಯಕ್ ಬಾಳಿಗ ಕೊಲೆ ಪ್ರಕರಣ: ತನಿಖೆ ದಿಕ್ಕು ತಪ್ಪಿಸಲು ಅಖಾಡಕ್ಕಿಳಿದ ‘ಸ್ವಾಮೀಜಿ’!

    ಮಾಹಿತಿ ಹಕ್ಕು ಕಾರ್ಯಕರ್ತ, ಭಾರತೀಯ ಜನತಾ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತ ಮಂಗಳೂರು ಮೂಲದ ವಿನಾಯಕ್ ಬಾಳಿಗ ಕೊಲೆ ಪ್ರಕರಣ ತನಿಖೆ ಹಾದಿ ತಪ್ಪಿಸುವ ಪ್ರಯತ್ನಗಳಿಗೆ ಬೆಂಗಳೂರು ಮೂಲದ ಲಾಬಿಗಳು ಚಾಲನೆ ನೀಡಿವೆ. ದಕ್ಷಿಣ ಕನ್ನಡದ ಮೂಲ್ಕಿಯಿಂದ ಬಂದು ಸದ್ಯ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ ಸ್ವಾಮೀಜಿಯೊಬ್ಬರು ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸಲು ಸಕಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ‘ಸಮಾಚಾರ’ಕ್ಕೆ ಲಭ್ಯವಾಗಿದೆ. ಗೃಹ ಇಲಾಖೆಯ ಮೂಲಗಳ ಪ್ರಕಾರ, ಮೈಸೂರಿನ ಕಾಂಗ್ರೆಸ್ ನಾಯಕರೊಬ್ಬರ ಮೂಲಕ ಈ ಸ್ವಾಮೀಜಿ, ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ‘ಹೇಳಿಸುವ’..

    April 5, 2016
    ...
    pu-cm-meet-bangalore
    ರಾಜ್ಯ

    ಪಿಯುಸಿ ಮೌಲ್ಯಮಾಪನ ಡೋಲಾಯಮಾನ: ಸರಕಾರದ ಬಳಿ ಇರುವ ಕೊನೆಯ ಅಸ್ತ್ರ ‘ಎಸ್ಮಾ’?

    ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೌಲ್ಯಮಾಪನ ಬಹಿಷ್ಕರಿಸಿರುವ ಪ್ರತಿಭಟನಾನಿರತ ಪಿಯು ಉಪನ್ಯಾಸಕರ ಮೇಲೆ ಎಸ್ಮಾ(ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ) ಮಂಗಳವಾರ ಜಾರಿಯಾಗುವ ಸಾಧ್ಯತೆ ಇದೆ. ವೇತನ ತಾರತಮ್ಯ ನಿವಾರಣೆ ಹಿನ್ನೆಲೆಯಲ್ಲಿ ‘ಕುಮಾರ್ ನಾಯಕ್ ವರದಿ’ ಜಾರಿಗೆ ಆಗ್ರಹಿಸಿ ಪಿಯು ಉಪನ್ಯಾಸಕರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಕ, ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ 2011ರಲ್ಲಿ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿದ್ದ ಕುಮಾರ್ ನಾಯಕ್ ಸರಕಾರಕ್ಕೆ ವರದಿ ನೀಡಿದ್ದರು. ವರದಿ ಜಾರಿಯಾದರೆ ಸರಕಾರಕ್ಕೆ ಹೆಚ್ಚುವರಿ..

    April 4, 2016
    ...
    cid_bangalore_office_1
    ರಾಜ್ಯ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಚಿವರ ಆಪ್ತ ಸೇರಿ ಮೂವರ ಬಂಧನ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರರಕಣದಲ್ಲಿ ಸಚಿವರ ಆಪ್ತ ಸಹಾಯಕ ಸೇರಿದಂತೆ ಸೋಮವಾರ ಮೂವರ ಬಂಧನವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಈ ಸಂಬಂಧ ಮಧ್ಯಾಹ್ನದ ವೇಳೆಗೆ ಮಾಹಿತಿ ಹೊರಗೆಡವಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಜತೆ ವಿಶೇಷಾಧಿಕಾರಿಯಾಗಿದ್ದ ಓಬಳರಾಜು ಎಂಬಾತನನ್ನು ಬಂಧಿಸಲಾಗಿದೆ.  ವಿಜಯ ನಗರದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ದೈಹಿಕ ಶಿಕ್ಷಕ ಮಂಜುನಾಥ್ ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿ ನಿರ್ವಾಹಕ ರುದ್ರಪ್ಪ ಉಳಿದ ಬಂಧಿತರು. ಶಿಕ್ಷನ ಮಂಜುನಾಥ್ ಮತ್ತೊಬ್ಬ ಆರೋಪಿಯಿಂದ ಪ್ರಶ್ನೆ ಪತ್ರಿಕೆ..

    April 4, 2016
    ...
    Bike case  2
    ರಾಜ್ಯ

    ಪೊಲೀಸರ ಪ್ರತಿಷ್ಠೆಗೆ ಬೇಸತ್ತು ‘ಬೈಕ್ ದೇಣಿಗೆ’ ಕೊಡಲು ಮುಂದಾದ ಕಾಲೇಜು ವಿದ್ಯಾರ್ಥಿ!

    ಅಣ್ಣ ಮಾಡಿದ ತಪ್ಪಿಗೆ ತಮ್ಮನೊಬ್ಬ ಪೊಲೀಸ್ ಠಾಣೆ ಕಟ್ಟೆ ಕಾದು ಕಾದು ಸಾಕಾಗಿ, ಕೊನೆಗೆ ಬೈಕನ್ನು ‘ನೀವೇ ಇಟ್ಟಿಕೊಳ್ಳಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಎಸ್ಎಂಎಸ್ ಕಳಿಸಿದ ವಿಲಕ್ಷಣ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ತೀರ್ಥಹಳ್ಳಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಕ್ಷೇತ್ರ. ತೀರ್ಥಹಳ್ಳಿಯಿಂದ ಕುಪ್ಪಳ್ಳಿ ಮಾರ್ಗದಲ್ಲಿ ಸಿಗುವ ದೇವಂಗಿ ಸಮೀಪದ ಹಳ್ಳಿಯ ಶಶಾಂಕ್ ಎಂಬಾತ ಈ ಕತೆಯ ಕೇಂದ್ರಬಿಂದು. ಈತನ ಸಹೋದರ ಅಭಿಷೇಕ್ ಭಾರತೀಯ ಸೇನೆಯಲ್ಲಿ ಯೋಧ…

    April 2, 2016
    ...
    tumkur- 2
    ರಾಜ್ಯ

    ಕನ್ನಯ್ಯ ಪರ ಕರಪತ್ರ ಹಂಚಿದ್ದಕ್ಕೆ ಕರ್ನಾಟಕ ಪೊಲೀಸರಿಂದ ‘ರಾಜದ್ರೋಹ’ದ ಪ್ರಕರಣ ದಾಖಲು

    ‘ಆಝಾದಿ’ ಘೋಷಣೆ ಕೂಗಿದ್ದಕ್ಕೆ ಅಲ್ಲಿ ದಿಲ್ಲಿಯಲ್ಲಿ ವಿದ್ಯಾರ್ಥಿ ಕನ್ನಯ್ಯ ವಿರುದ್ಧ ‘ರಾಜದ್ರೋಹ’ ದಾಖಲಿಸಿದ ವಿವಾದಿತ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಕೇಸೊಂದನ್ನು ಗೃಹಸಚಿವ ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ದಾಖಲಿಸಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ವಿದ್ಯೋದಯ ಕಾನೂನು ಶಾಲೆಯ ವಿದ್ಯಾರ್ಥಿನಿ ಜ್ಯೋತಿ ಹಾಗೂ ಸಾಮಾಜಿಕ ಕಾರ್ಯಕರ್ತ ಚಿನ್ನಪ್ಪ ‘ರಾಜ ದ್ರೋಹ’ ಆರೋಪಕ್ಕೆ ಗುರಿಯಾದವರು. ಇವರ ವಿರುದ್ಧ ಮಾ. 31ರಂದು ಮಧ್ಯಾಹ್ನ 12 ಗಂಟೆಗೆ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ಎಂಬ ಶಿಕ್ಷಕರು ದೂರು ದಾಖಲಿಸಿದ್ದರು. ‘ಮಾ. 30ರಂದು..

    April 2, 2016
    ...
    ಕುಪ್ಪಳ್ಳಿಯ 'ಕವಿಮನೆ'. (ಚಿತ್ರ: kishusworld.blogspot.com)
    INVESTIGATION

    ‘ಕವಿಮನೆ ಕಳ್ಳತನ ಪ್ರಕರಣ’: ಆತುರಕ್ಕೆ ಬಿದ್ದ ಶಿವಮೊಗ್ಗ ಪೊಲೀಸರು ತನಿಖೆಯನ್ನು ಹಳ್ಳ ಹಿಡಿಸಿದರಾ?

    ರಾಷ್ಟ್ರಕವಿ ಕುವೆಂಪು ಅವರ ‘ಕವಿ ಮನೆ’ ಕಳ್ಳತನ ಪ್ರಕರಣದಲ್ಲಿ ಆತುರಕ್ಕೆ ಬಿದ್ದ ಪೊಲೀಸರು ತನಿಖೆಯನ್ನು ಅರ್ಧದಲ್ಲಿಯೇ ಹಾದಿ ತಪ್ಪಿಸಿದರಾ? ಹೀಗೊಂದು ಅನುಮಾನ ಈಗ ವ್ಯಕ್ತವಾಗುತ್ತಿವೆ. ಕಳೆದ ನವೆಂಬರ್ 23ನೇ ತಾರೀಖು ರಾತ್ರಿ ವೇಳೆ ಕುಪ್ಪಳ್ಳಿಯ ಮನೆಯಲ್ಲಿ ಕಳ್ಳತನವಾಗಿತ್ತು. ಕುವೆಂಪು ಅವರಿಗೆ ಬಂದಿದ್ದ ಪದ್ಮಭೂಷಣ ಸೇರಿದಂತೆ ನಾಲ್ಕು ಪದಕಗಳನ್ನು ಕದ್ದೊಯ್ಯಲಾಗಿತ್ತು.  ಜತೆಗೆ, ‘ಕವಿಮನೆ’ಯಲ್ಲಿದ್ದ ಹಣ ಪೆಟ್ಟಿಗೆ ಹಾಗೂ ಗಾಜುಗಳನ್ನು ಒಡೆಯಲಾಗಿತ್ತು. ಮಾರನೇ ದಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಅಷ್ಟೇ ವೇಗವಾಗಿ ಕಾರ್ಯಚರಣೆಗೆ ಇಳಿದ ಶಿವಮೊಗ್ಗ ಪೊಲೀಸರು..

    April 2, 2016
    ...
    ಪ್ರಕರಣದ ಎರಡನೇ ಆರೋಪಿ ಆಂಜನಪ್ಪ.
    ರಾಜ್ಯ

    ‘ಅದು ಅನ್ನ ನೀಡುವ ಮನೆ; ಕನ್ನ ಹಾಕುವ ಜಾಗ ಅಲ್ಲ…’: ಆರೋಪಿ ಆಂಜನಪ್ಪ ಹೇಳಿದ್ದೇನು?

    ಮಲೆನಾಡಿನ ಸುಡು ಬಿಸಿಲಿನ ದಿನದ ಒಂದು ಮುಂಜಾನೆ ನಿಧಾನಕ್ಕೆ ತೆರೆದುಕೊಳ್ಳುತ್ತಿತ್ತು. ಬೆಳಗ್ಗೆ 7 ಗಂಟೆಯ ಸಮಯ. ರಾಷ್ಟ್ರಕವಿ ಕುವೆಂಪು ಅವರ ಊರು ಕುಪ್ಪಳ್ಳಿಯಿಂದ ಕೆಲವೇ ಮೀಟರುಗಳ ಅಂತರದಲ್ಲಿರುವ ಗಡಿಕಲ್ಲಿನಲ್ಲಿ ಆಂಜನಪ್ಪ ಎಂದಿನಂತೆ ಅಂಗಡಿಯಿಂದ ಹಾಲು ತೆಗೆದುಕೊಂಡು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದ. ಆತ ಜೈಲಿನಿಂದ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಕೆಲವೇ ದಿನಗಳಾಗಿದ್ದವು…ಭಾರಿ ಸದ್ದು ಮಾಡಿದ್ದ ಮೇರು ಕವಿಯ ಪದಕ ಕಳವು ಪ್ರಕರಣದ ಎರಡನೇ ಆರೋಪಿ ಈತ. ಪರಿಸರದ ಕತೆ ‘ಆಂಜನಪ್ಪ‘! ಆಂಜನಪ್ಪ ಮೂಲತಃ ದಾವಣಗೆರೆಯವನು. ಆದರೆ..

    April 2, 2016
    ...
    Flyover collapses in Kolkata
    ರಾಜ್ಯ

    ಕೋಲ್ಕತ್ತಾದಲ್ಲಿ ಮೇಲ್ಸೇತುವೆ; ಬೆಂಗಳೂರಲ್ಲಿ ಮೆಟ್ರೋ ನಿಲ್ದಾಣ: IVRCL ಎಂಬ ವಂಚಕ ಕಂಪನಿಯ ಹಿಂದೆ ರಾಜಶೇಖರ್ ರೆಡ್ಡಿ ಕುಟುಂಬದ ‘ಕೈ’!

    ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಗುರುವಾರ ಕುಸಿದು ಬೀಳುವ ಮೂಲಕ ‘ಐವಿಆರ್ ಸಿಎಲ್’ ಎಂಬ ಹೈದ್ರಾಬಾದ್ ಮೂಲದ ವಂಚಕ ಕಂಪನಿಯ ವಂಚನೆಗಳು ಒಂದೊಂದಾಗಿ ಹೊರ ಬರತೊಡಗಿವೆ. ಇಲ್ಲಿನ ಬುರ್ರಾ ಬಝಾರ್ ಏರಿಯಾದ ವಿವೇಕಾನಂದ ರಸ್ತೆಯಲ್ಲಿ2.2 ಕಿ. ಮೀ ಮೇಲ್ಸೇತುವೆಯ ನಿರ್ಮಾಣದ ಗುತ್ತಿಗೆಯನ್ನು ಕಂಪನಿ ಪಡೆದಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ 250 ಮೀಟರ್ ಉದ್ದದ ಕಾಂಕ್ರಿಟ್ ಸೇತುವೆ ಕುಸಿದು ಬಿದ್ದು 24 ಜನ ಮೃತಪಟ್ಟರು. ಕಂಪನಿಯು, “ಇದು ದೇವರ ಕೆಲಸ,” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿತ್ತು. ಸದ್ಯ ಪಶ್ಚಿಮ ಬಂಗಾಳದಲ್ಲಿ..

    April 2, 2016
    ...
    cid_bangalore_office_1
    ರಾಜ್ಯ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಬೇಟೆ ಆರಂಭಿಸಿದ ಸಿಐಡಿ

    ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯಲ್ಲಿ ಕೊನೆಗೂ ಸಿಐಡಿ ಪೊಲೀಸರು ಬೇಟೆ ಆರಂಭಿಸಿದ್ದಾರೆ. ‘ಶಿಕ್ಷಣ ಕ್ಷೇತ್ರದ ಮಾಫಿಯಾಗಳ ತವರುಮನೆ’, ಬೆಂಗಳೂರಿನ ರಾಜಾಜಿನಗರದಿಂದ ಇಬ್ಬರು ಉಪನ್ಯಾಸಕರು ಹಾಗೂ ಓಬಳೇಶ್ ಎಂಬಾತನನ್ನು ಶುಕ್ರವಾರ ರಾತ್ರಿ 10. 30ರ ಸುಮಾರಿಗೆ ವಿಚಾರಣೆಗಾಗಿ ಕರೆತಂದಿದ್ದಾರೆ. ಸಿಐಡಿ ಗುರುತಿಸಿರುವ ಆರೋಪಿ ಕಿರಣ್ ಸಹಚರ ಎನ್ನಲಾಗುತ್ತಿರುವ ಓಬಳೇಶ್ ಎಂಬಾತನ್ನು ಸಿಐಡಿ ಕೇಂದ್ರ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ಮುಂದುವರಿದ ವಿಚಾರಣೆ: ರಾಜಾಜಿನಗರದ ಕಿರಣ್ ಎಂಬಾತ ಹಿಂದಿನಿಂದಲೂ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ದಂಧೆ ನಡೆಸುತ್ತಿದ್ದ..

    April 1, 2016

Top