An unconventional News Portal.

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ವಿಶ್ವದ ದೊಡ್ಡಣ್ಣನ ಸರಕಾರವೇ ಸ್ಥಗಿತ!

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

  ...
  ರಾಜ್ಯ

  ಅಧಿಕಾರ ಇದ್ದಾಗ ಜಿದ್ದಾಜಿದ್ದಿ; ಇಲ್ಲದಿರುವಾಗ ದೋಸ್ತಿ: ಒಕ್ಕಲಿಗರ ವೇದಿಕೆಯಲ್ಲಿ ದೇವೇಗೌಡ- ಕೃಷ್ಣ ಅರಳು ಮರಳು!

  ಇತ್ತೀಚೆಗೆ ಮೈಸೂರು ಜಿಲ್ಲೆಯ ಕೆ ಆರ್ ನಗರದಲ್ಲಿ ನಡೆದ ತಾಲೂಕು ಒಕ್ಕಲಿಗರ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವೇದಿಕೆ ಹಂಚಿಕೊಂಡಿದ್ದಾರೆ. ಜತೆಗೆ, ಒಕ್ಕಲಿಗ ಸಮಾಜದ ಕುರಿತು ತಮ್ಮ ಕಕ್ಕುಲಾತಿಗೆ ಮಾತಿನ ಅಭಿವ್ಯಕ್ತಿ ನೀಡಿದ್ದಾರೆ. ಹೆಚ್ಚು ಕಡಿಮೆ ಒಂದೇ ವಯೋಮಾನದ ಇಬ್ಬರು ನಾಯಕರು, ಹಿಂದೆ ಅಧಿಕಾರದಲ್ಲಿದ್ದಾಗ ಪರಸ್ಪರ ಜಿದ್ದಿಗೆ ಬಿದ್ದವರಂತೆ ಪರಸ್ಪರ ಕತ್ತಿ ಮಸೆಯುತ್ತಿದ್ದವರು. ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದೇವೇಗೌಡರು ಸರಣಿ ‘ಪ್ರೇಮ ಪತ್ರ’ಗಳನ್ನು ಬರೆಯುವ..

  April 27, 2016
  ...
  ರಾಜ್ಯ

  ‘ಅಹಿಂದ ನಾಯಕ’ನನ್ನೂ ಬಿಡದ ಡಿ-ನೋಟಿಫಿಕೇಶನ್ ಮಾಯೆ!: ಸಿಎಂ ವಿರುದ್ಧ ಮತ್ತೊಂದು ದೂರು

  ಅತ್ತ ಬರ ಪ್ರವಾಸದಲ್ಲಿ ಸಿಎಂ ಸಿದ್ದರಾಮಯ್ಯ ಇರುವಾಗಲೇ, ಇತ್ತ ಬೆಂಗಳೂರಿನಲ್ಲಿ ಅವರ ವಿರುದ್ಧ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ)ದಲ್ಲಿ ದೂರೊಂದು ಮಂಗಳವಾರ ದಾಖಲಾಗಿದೆ. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ, ಬಿಡಿಎ ಸ್ವಾಧೀನದಲ್ಲಿದ್ದ 1. 31 ಎಕರೆ ಭೂಮಿಯನ್ನು ಡಿ- ನೋಟಿಫೈ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ಯಾಮ್ ಭಟ್, ಮತ್ತಿತರ ಅಧಿಕಾರಿಗಳ ವಿರುದ್ಧ ವಕೀಲ ನಟರಾಜ್ ಶರ್ಮಾ ಎಂಬುವವರು ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಅವರ ಸೂಚನೆಯಂತೆ, ಸದರಿ ಡಿ- ನೋಟಿಫಿಕೇಶನ್..

  April 26, 2016
  ...
  ರಾಜ್ಯ

  ರಿಯಲ್ ಎಸ್ಟೇಟ್ ಎಂಬ ‘ನಾಯಿಸಂತೆ’: ಕೂಸು ಹುಟ್ಟುವ ಮುನ್ನವೇ ‘Online ಕುಲಾವಿ’!

  ಮನೆ ಕಟ್ಟಬೇಕು ಎಂಬ ನಗರ ಪ್ರದೇಶದ ಜನರ ಕನಸುಗಳನ್ನೇ ಬಂಡವಾಳ ಮಾಡಿಕೊಂಡು, ಬೃಹತ್ ಪ್ರಮಾಣದ ಆನ್ಲೈನ್ ಉದ್ಯಮವೊಂದು ಸದ್ದಿಲ್ಲದೆ ಬೆಳೆದು ನಿಂತಿದೆ. ಭಿನ್ನ ಪ್ರಚಾರ ತಂತ್ರ, ತಂತ್ರಜ್ಞಾನದ ಬಳಕೆ, ಜನರನ್ನು ನಂಬಿಸಲು ಕಸರತ್ತುಗಳು, ದೊಡ್ಡ ಮಟ್ಟದ ಆದಾಯ ಹಾಗೂ ಯುವಕರೇ ತುಂಬಿಕೊಂಡಿರುವ  ವಿಚಿತ್ರ ಸಂಕರಗಳಿರುವ ಹೊಸ ಕಾಲದ ಉದ್ಯಮವಿದು. ಇಲ್ಲಿಯೂ ಪೈಪೋಟಿ ಇದೆ, ಮೋಸವಿದೆ, ವಂಚನೆ ಇದೆ, ಗಾಸಿಪ್ ಇದೆ, ತನ್ನದೇ ಜಾಲವಿದೆ, ಒಳಸುಳಿಗಳಿವೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಸಮಸ್ತ ಜಾತಕ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ತೋಳ್ಬಲಕ್ಕಿಂತ ಯುಕ್ತಿಯನ್ನು ನಂಬಿಕೊಂಡು..

  April 25, 2016
  ...
  ರಾಜ್ಯ

  ‘ಬೆಂಕಿ ಬಿದ್ದ ಮನೆ’ಯಲ್ಲಿ ಚಳಿ ಕಾಯಿಸಿಕೊಳ್ಳಲು ಹೊರಟವರು!

  ಇದು ‘ಬೆಂಕಿ ಬಿದ್ದ ಮನೆಯಲ್ಲಿ ಚಳಿ ಕಾಯಿಸಿಕೊಂಡರು’ ಎಂಬ ಗಾದೆಯನ್ನು ನೆನಪಿಸುವ ಪ್ರಸಂಗ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಗಾರ್ಮೆಂಟ್ಸ್ ಮಹಿಳೆಯರ ಬೃಹತ್ ಪ್ರತಿಭಟನೆಯ ಲಾಭ ಪಡೆಯುವ ಕಸರತ್ತುಗಳು ಶುರುವಾಗಿವೆ. ಬೊಮ್ಮನಹಳ್ಳಿಯ ಮುಖ್ಯ ರಸ್ತೆ ಹಾಗೂ ಗಲ್ಲಿಗಳಲ್ಲಿ ‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಮಿಕ ಬಂಧುಗಳಿಗಾಗಿ ಹೊಸ ಪಿಎಫ್ ನೀತಿಯನ್ನು ರದ್ಧುಪಡಿಸಲು ಶ್ರಮಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಅವರಿಗೆ ಧನ್ಯವಾದಗಳು’ ಎಂಬ ದೊಡ್ಡ ದೊಡ್ಡ ಹೋರ್ಡಿಂಗ್ಸ್ ರಾರಾಜಿಸುತ್ತಿವೆ. ಕೆಳಗಡೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿ ಹೆಸರು..

  April 25, 2016
  ...
  ರಾಜ್ಯ

  ಡಿ-ನೋಟಿಫಿಕೇಶನ್ ಮೇಲ್ಮನವಿ: ಯಡ್ಡಿ ಕಣ್ಣಿಗೆ ಸುಣ್ಣ; ಡಿಕೆಶಿ ಕಣ್ಣಿಗೆ ಬೆಣ್ಣೆ?

  ‘ಒಂದು ಕಣ್ಣಿಗೆ ಸುಣ್ಣ; ತನ್ನ ಕಣ್ಣಿಗೆ ಮಾತ್ರ ಬೆಣ್ಣೆ’ ಎಂಬಂತಿದೆ ಡಿ- ನೋಟಿಫಿಕೇಶನ್ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸುತ್ತಿರುವ ರಾಜ್ಯ ಸರಕಾರದ ನಿಲುವು. ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ವಿರುದ್ಧದ ಡಿ- ನೋಟಿಫಿಕೇಶನ್ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಿದ್ದ ಸರಕಾರ, ತನ್ನದೇ ಸಂಪುಟ ಸಚಿವ ಡಿ. ಕೆ. ಶಿವಕುಮಾರ್ ವಿಚಾರದಲ್ಲಿ ಈ ಗಟ್ಟಿತನವನ್ನು ತೋರಿಸಿಲ್ಲ ಎಂಬ ದೂರುಗಳೀಗ ಕೇಳಿ ಬರುತ್ತಿವೆ. ವಿವಾದಕ್ಕೆ ಕಾರಣವಾಗಿದ್ದ ಬೆನ್ನಿಗಾನಹಳ್ಳಿ ಡಿ- ನೋಟಿಫಿಕೇಶನ್ ಪ್ರಕರಣದಲ್ಲಿ ಸಚಿವ ಡಿ. ಕೆ. ಶಿವಕುಮಾರ್ ಹೆಸರು ಕೇಳಿಬಂದಿತ್ತು. ಪ್ರಕರಣವನ್ನು ಲೋಕಾಯುಕ್ತ..

  April 23, 2016
  ...
  ರಾಜ್ಯ

  ಗಾರ್ಮೆಂಟ್ಸ್ ಮಹಿಳೆಯರ ಮೇಲೆ ಪೊಲೀಸ್ ಪ್ರಹಾರ:ಸ್ವತಂತ್ರ ತನಿಖೆಗೆ ಆಮ್ನೆಸ್ಟಿ ಆಗ್ರಹ

  ‘ಗಾರ್ಮೆಂರ್ಟ್ಸ್ ಮಹಿಳೆಯರ ಪ್ರತಿಭಟನೆ’ ವೇಳೆ ಪೊಲೀಸರು ನಡೆಸಿದ ಬಲಪ್ರಯೋಗದ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಒತ್ತಾಯಿಸಿದೆ. ಶನಿವಾರ ಸಂಸ್ಥೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, “ಪೊಲೀಸರು ನಡೆಸಿದ ಲಾಠಿಚಾರ್ಜ್ ಬಗ್ಗೆ ಪ್ರಾಮಾಣಿಕ, ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖೆ ನಡೆಸಬೇಕು,” ಎಂದು ಆಗ್ರಹಿಸಿದೆ. “ಗಾರ್ಮೆಂಟ್ಸ್ ಕಾರ್ಮಿಕರು ಪಿಎಫ್ ನೀತಿಗಳ ಪರಿಷ್ಕರಣೆ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಿ, ಹೋರಾಟಕ್ಕಿಳಿದರು. ಕೆಲವೆಡೆ ಪ್ರತಿಭಟನೆ ನಿಧಾನಕ್ಕೆ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರು ಖಾಸಗಿ ವಾಹನಗಳು ಮತ್ತು ಕಚೇರಿಗಳತ್ತ ಕಲ್ಲು ತೂರಾಟ..

  April 23, 2016
  ...
  ರಾಜ್ಯ

  ‘ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ’: ಈಗ ಜಾಮೀನಿಗಾಗಿ ಹೋರಾಟ!

  ಗಾರ್ಮೆಂಟ್ ಮಹಿಳೆಯರ ಪ್ರತಿಭಟನೆ ವೇಳೆ ನಡೆದ ಹೆಬ್ಬುಗೋಡಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರದ ವೇಳೆಗೆ 54 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ಅನೇಕಲ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಂಧಿತರ ಮೇಲೆ ದೊಂಬಿ ಗಲಾಟೆ, ಸಾರ್ವಜನಿಕ ಆಸ್ತಿ ಹಾನಿ, ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ, ಕೊಲೆ ಹತ್ನ ಸೇರಿದಂತೆ ಒಟ್ಟು 11 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. “ಬಂಧಿತರ ಮೇಲೆ ಐಪಿಸಿ ಸೆಕ್ಷನ್ 120 ಬಿ, 114, 143, 147, 148, 134, 323, 324,..

  April 23, 2016
  ...
  ರಾಜ್ಯ

  ಬರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ, ನೆರವಿಗಾಗಿ ದಿಲ್ಲಿಗೆ ನಿಯೋಗ: ಸಿಎಂ

  ಬರಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬರ ಪರಿಸ್ಥಿತಿ ಕುರಿತು ಶುಕ್ರವಾರ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, “ಬರಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಿದ್ದು, ಅಲ್ಲಿನ ಪರಿಸ್ಥಿತಿ ಅರಿಯಲಾಗಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವು ಭಾಗದಲ್ಲಿ ಭೀಕರ ಬರ ತಲೆದೋರಿದೆ. ಇನ್ನು ಕೆಲ ಕಡೆ ಸಾಧಾರಣ ರೀತಿಯಲ್ಲಿದೆ. ಈ ಎಲ್ಲ..

  April 22, 2016
  ...
  ರಾಜ್ಯ

  ಕಾನೂನು ಸುವ್ಯವಸ್ಥೆ: ಪೊಲೀಸ್ ಅಧಿಕಾರಿಗಳ ನಡೆಗೆ ಗರಂ ಆದ ಪರಂ!

  ‘ಗಾರ್ಮೆಂಟ್ ಮಹಿಳೆಯರ ಪ್ರತಿಭಟನೆ’ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. “ಯಾರೇ ಆದರೂ ಸರಿ, ಕಾನೂನು ಸುವ್ಯವಸ್ಥೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ.ಕಾನೂನು ವ್ಯವಸ್ಥೆಗೆ ದಕ್ಕೆಯಾದರೇ ಹಿರಿಯ ಅಧಿಕಾರಿಗಳೇ ಅದಕ್ಕೆ ಹೊಣೆ,” ಎಂದು ಗೃಹಸಚಿವರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಅಲ್ಲದೆ, “ಕಾನೂನು ಸುವ್ಯವಸ್ಥೆ ಬಗ್ಗೆ ಹಿರಿಯ ಅಧಿಕಾರಿಗಳು ಎಚ್ಚರವಹಿಸಬೇಕು. ನೀವು ಎಚ್ಚರವಹಿಸಿದರೇ ಕಿರಿಯ ಅಧಿಕಾರಿಗಳು ಎಚ್ಚರ ವಹಿಸುತ್ತಾರೆ. ಹಿರಿಯ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯ ನಿರ್ವಹಿಸಲಿ,” ಎಂದು ಹಿರಿಯ ಪೊಲೀಸ್..

  April 22, 2016
  ...
  ರಾಜ್ಯ

  ‘ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ’: ಈಗ ಬೀದಿಗೆ ಇಳಿದಿದ್ದು ಖಾಕಿ ಪಡೆ!

  ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ ತಣ್ಣಗಾದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಬೀದಿಗೆ ಇಳಿದಿದ್ದಾರೆ. ಬೆಂಗಳೂರು ಉತ್ತರ ವಲಯದಲ್ಲಿ ಪೀಣ್ಯ, ಯಶವಂತಪುರ, ಆರ್ ಎಂ ಸಿ ಯಾರ್ಡ್, ರಾಜಗೋಪಾಲನಗರ ಪೊಲೀಸ್ ಠಾಣೆಗಳಲ್ಲಿ, ಬೆಂಗಳೂರು ಆಗ್ನೇಯ ವಲಯದ ಬೊಮ್ಮನಹಳ್ಳಿ, ಪರಪ್ಪನ ಅಗ್ರಹಾರ, ಎಚ್. ಎಸ್. ಆರ್. ಲೇಔಟ್, ಮೈಕೋ ಲೇ ಔಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಠಾಣೆಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬರುವ ಹೆಬ್ಬುಗೋಡಿ ಪೊಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು 50 ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ..

  April 22, 2016

FOOT PRINT

Top