An unconventional News Portal.

    ...
    bsy-power-transfer
    ರಾಜ್ಯ

    ‘ಝಂಡಾ’ ಕೈಗೆತ್ತಿಕೊಂಡ ಬಿಎಸ್ವೈ: ಒಗ್ಗಟ್ಟಿನ ಮಂತ್ರಕ್ಕೆ ಸಾಕ್ಷಿಯಾದ ಅರಮನೆ ಮೈದಾನ

    ರಾಜ್ಯ ಬಿಜೆಪಿಯ ಉನ್ನತ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇಮಕ ಪ್ರಕ್ರಿಯೆಗೆ ಗುರುವಾರ ಬೆಂಗಳೂರಿನ ಅರಮನೆ ಮೈದಾನ ಸಾಕ್ಷಿಯಾಯಿತು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೊದಲ ಬಾರಿಗೆ ಅಧಿಕಾರದ ಸವಿ ನೀಡಿದ್ದ ಕರ್ನಾಟಕದಲ್ಲಿ ಮತ್ತೆ ಕೇಸರಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ಯಡಿಯೂರಪ್ಪ ಆದಿಯಾಗಿ ಪಕ್ಷದ ಹಿರಿಯ ನಾಯಕರು ಜನರ ಸಮ್ಮುಖದಲ್ಲಿ ಶಪಥ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರ ಕರತಾಡನ, ಘೋಷಣೆಗಳ ನಡುವೆ, ಯಡಿಯೂರಪ್ಪ ಪಕ್ಷದ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ಇದನ್ನು ಅನುಮೋದಿಸುವಂತೆ, ಪಕ್ಷದ ಉಳಿದ ನಾಯಕರು ಭಾಷಣ..

    April 14, 2016
    ...
    protest-pu-freedom park
    ರಾಜ್ಯ

    ಪಿಯುಸಿ ಮೌಲ್ಯಮಾಪನಕ್ಕೆ ಪರ್ಯಾಯದ ಆಟ: ಎಂಎಲ್ಸಿಗಳ ಮೇಲೆ ಚಪ್ಪಲಿ ತೂರಾಟ

    ಪಿಯುಸಿ ಉಪನ್ಯಾಸಕರ ಪ್ರತಿಭಟನೆಯಿಂದಾಗಿ ವಿಳಂಬವಾಗಿದ್ದ ಪಿಯು ಮೌಲ್ಯಮಾಪನ ಪ್ರಕ್ರಿಯೆ ಏ.16 ರಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಪಿಯು ಮಂಡಳಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಮೇ ಮೊದಲ ವಾರ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ನಡುವೆ ವೇತನ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ’ಕುಮಾರ್ ನಾಯಕ್ ವರದಿ’ ಜಾರಿಗೆ ಆಗ್ರಹಿಸಿ ಉಪನ್ಯಾಸಕರು ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಕಳೆದ 12 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಬಹಿಷ್ಕಾರಕ್ಕೆ ಬಗ್ಗದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ..

    April 14, 2016
    ...
    pmssy-website-grab-1
    ರಾಜ್ಯ

    ಹೊರಗೆ ತಳುಕು, ಒಳಗೆ ಒಂದಿಷ್ಟು ಹುಳುಕು: PMSSY ಆಸ್ಪತ್ರೆಯ ‘ಸ್ಪೆಷಲ್’ ಕರ್ಮಕಾಂಡ!

    ‘ಪಿಎಂಎಸ್ಎಸ್ ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯ ರೋಗಿಗಳ ಸಂಕಷ್ಟಗಳು ಇದೀಗ ಒಂದೊಂದಾಗಿ ಹೊರಗೆ ಬರಲಾರಂಭಿಸಿವೆ. ಸಿಎಂ ಸಿದ್ದರಾಮಯ್ಯ ಪುತ್ರ ನಿರ್ದೇಶಕರಾಗಿರುವ ಸಂಸ್ಥೆಗೆ ಟೆಂಡರ್ ನೀಡುವ ಮೂಲಕ ಆಸ್ಪತ್ರೆ ಹೆಸರು ಎಲ್ಲೆಡೆ ಚಲಾವಣೆಯಲ್ಲಿದೆ. ಕಾನೂನನ್ನು ಮುಂದಿಟ್ಟುಕೊಂಡು, ರಾಜಧರ್ಮವನ್ನು ಮರೆತ ಮುಖ್ಯಮಂತ್ರಿ ನೀಡಿದ ಸಮಜಾಯಿಷಿ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಪಾಲನೆಯಾಗಿದೆ ಎಂಬ ಆಸ್ಪತ್ರೆ ಹೇಳಿಕೆಗಳ ಹೊರತಾಗಿ ಈ ವಿಚಾರದಲ್ಲಿ ಹೆಚ್ಚಿನದ್ದೇನನ್ನೂ ನಿರೀಕ್ಷಿಸುವುದು ಕಷ್ಟ. ಆದರೆ, ಅದೇ ವೇಳೆ ಜನರಿಗೆ ಗುಣಮಟ್ಟದ ವೈದ್ಯಕೀಯ ಸೌಲ್ಯಭ್ಯಗಳನ್ನು ನೀಡುವ ಗುರಿಯೊಂದಿಗೆ ಸ್ಥಾಪನೆಗೊಂಡ, 100 ಕೋಟಿ ರೂಪಾಯಿ ಅನುದಾನದಲ್ಲಿ ಸ್ಥಾಪನೆಗೊಂಡ..

    April 14, 2016
    ...
    bsy-bjp-karmataka
    ರಾಜ್ಯ

    ಹೋದ್ಯಾ ಪಿಶಾಚಿ ಅಂದ್ರೆ, ಗವಾಕ್ಷಿಲಿ ಬಂತು ಡಿ- ನೋಟಿಫಿಕೇಶನ್!

    ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಅಖಾಡಕ್ಕಿಳಿದ ಬಿ. ಎಸ್. ಯಡಿಯೂರಪ್ಪ ಅವರಿಗೆ ಕಾನೂನಿನ ತೊಡಕುಗಳು ಸುಲಭಕ್ಕೆ ಬಗೆಹರಿಯುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲೇ ಯಡಿಯೂರಪ್ಪ ವಿರುದ್ಧದ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿದೆ. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲಾಗಿದ್ದ 15 ಡಿನೋಟಿಫಿಕೇಶನ್ ಪ್ರಕರಣಗಳನ್ನ ಹೈಕೋರ್ಟ್ ರದ್ದುಗೊಳಿಸಿತು. ಇದೂ ಕೂಡ ಅವರನ್ನು ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವ ಸಮಯದಲ್ಲಿ ಮಹತ್ವದ ಪಾತ್ರ ವಹಿಸಿತ್ತು…

    April 13, 2016
    ...
    Congress general secretary Digvijaya Singh at Kumara Krupa Guest House during his visit to Bangalore on Jan.5, 2014. (Photo: IANS)
    ರಾಜ್ಯ

    ಕುರ್ಚಿ ಬಿಕ್ಕಟ್ಟನ್ನು ಪಾರು ಮಾಡಿತು ಬರ; ಸಮಾನ ಮನಸ್ಕರರಿಗೆ ಸಿಗಲಿಲ್ಲ ವರ!

    ಬುಧವಾರ ಮುಂಜಾನೆಯಿಂದ ಬೆಂಗಳೂರಿನ ಹೃದಯ ಭಾಗದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಸಂಜೆ ಹೊತ್ತಿಗೆ ಸ್ಪಷ್ಟಗೊಂಡಿವೆ. ರಾಜ್ಯಾಡಳಿತದ ಉನ್ನತ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ ಪಕ್ಷದೊಳಗಿನ ಆಂತರಿಕ ಬೆಳವಣಿಗೆಗಳನ್ನು ಮೀರಿ ಇನ್ನಷ್ಟು ದಿನ ತಮ್ಮ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರಿಯಲಿದ್ದಾರೆ. ಆದರೆ ತಲೆಯ ಮೇಲೆ ‘ನಾವು ಕರೆಯುವವರೆಗೂ ದಿಲ್ಲಿಯ ಕಡೆ ತಲೆ ಹಾಕಬೇಡಿ’ ಎಂಬ ಹೈಕಮಾಂಡ್ ಸಂದೇಶದ ತೂಗುಗತ್ತಿ ನೇತಾಡಲು ಶುರುವಾಗಿದೆ. ‘ಸಮಾನ ಮನಸ್ಕರು’ ಎಂಬ ಬ್ಯಾನರ್ ಅಡಿಯಲ್ಲಿ ಸಂಘಟಿತರಾಗಿದ್ದ ಶಾಸಕರ ಒಳಗುದಿ ಮುಂದಿವರಿಯಲಿದೆ. ಎಂಎಲ್ಸಿಗಳಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ, ಬೇಡಿಕೆಯಾಗಿಯೇ ಉಳಿಯಲಿದೆ…

    April 13, 2016
    ...
    twitter trend
    ರಾಜ್ಯ

    ಟ್ವಿಟರ್ ಕಟ್ಟೆ ಏರಿದ ಮಹದಾಯಿ; ಬರ: ಭಾರತದಲ್ಲಿ #DyingForADrop ಟ್ರೆಂಡಿಗ್

    ರಾಜ್ಯದ ಬರ ಪರಿಸ್ಥಿತಿ, ರಾಜಕಾರಣಿಗಳ ಹೊಣೆಗೇಡಿತನ ಹಾಗೂ ಮಹದಾಯಿ ನೀರಿನ ನಿರೀಕ್ಷೆಯಲ್ಲಿರುವ ರೈತರ ಪರ ದನಿಗಳು ಬುಧವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿವೆ. ಕಳೆದ ಹಲವು ದಿನಗಳಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರ ಕಾಣಿಸಿಕೊಂಡಿದೆ. ಬರ ಪರಿಹಾರಕ್ಕಾಗಿ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಡೆಸಿತ್ತು. ಇಂದಿನಿಂದ ಸಿಎಂ ಸಿದ್ದರಾಮಯ್ಯ ಕೂಡ ಬರ ಜಿಲ್ಲೆಗಳ ಪ್ರವಾಸ ಆರಂಭಿಸಿದ್ದಾರೆ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಬರ ಪರಿಹಾರದ ವಿಚಾರದಲ್ಲಿ..

    April 13, 2016
    ...
    JDS- BJP
    ರಾಜ್ಯ

    ದೇವೇಗೌಡ ಕುಟುಂಬದ ಬಿಕ್ಕಟ್ಟಿನ ಲಾಭ: ಯಡಿಯೂರಪ್ಪ ಹಾದಿ ಇನ್ನಷ್ಟು ಸುಲಭ

    ಕರ್ನಾಟಕದ ವಿಧಾನಸಭೆ ಚುನಾವಣೆಗೆ ಎರಡು ವರ್ಷವಿದೆ ಎನ್ನುವಾಗಲೇ ಭಾರತೀಯ ಜನತಾ ಪಕ್ಷ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿದೆ. ಮಾಜಿ ಮುಖ್ಯಮಂತ್ರಿ, ಹಳೇ ಹುಲಿ ಯಡಿಯೂರಪ್ಪರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತರುವ ಮೂಲಕ; ಪ್ರತಿಪಕ್ಷವಾಗಿ ಬಿಜೆಪಿ ಜೀವಂತವಾಗಿದೆ ಎಂಬ ಸಂದೇಶವನ್ನೂ, ಮುಂದಿನ ಚುನಾವಣೆಯಲ್ಲಿ ಸಶಕ್ತ ಪರ್ಯಾಯವೊಂದನ್ನು ನೀಡಬಲ್ಲೆವು ಎಂಬ ಭರವಸೆಯನ್ನು ಏಕಕಾಲಕ್ಕೆ ರವಾನಿಸುವ ಕೆಲಸ ಮಾಡಿದೆ ರಾಷ್ಟ್ರೀಯ ಪಕ್ಷ. ಬಿಜೆಪಿ ಇಂತಹದೊಂದು ತೀರ್ಮಾನ ತೆಗೆದುಕೊಳ್ಳುವ ಕಾಲಕ್ಕೆ ಸರಿಯಾಗಿ ರಾಜ್ಯದ ಸಿದ್ದರಾಮಯ್ಯ ಸರಕಾರ ತನ್ನ ಮೇಲಿದ್ದ ಭರವಸೆಗಳನ್ನು ಕಳೆದುಕೊಂಡಿದೆ. ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲವು ಯೋಜನೆಗಳನ್ನು ಹೊರತು ಪಡಿಸಿದರೆ,..

    April 12, 2016
    ...
    social-survey-karnataka-4
    ರಾಜ್ಯ

    ರಾಜ್ಯದಲ್ಲಿ ಸಂಚಲನ ಮೂಡಿಸಲಿದೆ ‘ಜಾತಿ ಸಮೀಕ್ಷೆ’: ವಾಟ್ಸಾಪ್ ಮೆಸೇಜ್ ಮರ್ಮ ಏನು?

    ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ‘ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ- ಕರ್ನಾಟಕ’ ಸದ್ಯದಲ್ಲಿಯೇ ಭಾರಿ ಸುದ್ದಿ ಮಾಡುವ ಸಾಧ್ಯತೆ ಇದೆ. ವರ್ಷದ ಹಿಂದೆ, 2015ರ ಏಪ್ರಿಲ್ 11 ರಂದು ಕರ್ನಾಟಕ ಸರಕಾರ ‘ಜಾತಿವಾರು ಸಮೀಕ್ಷೆ’ಗೆ ಚಾಲನೆ ನೀಡಿತ್ತು. ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಲಾದ ಈ ಸಮೀಕ್ಷೆ 1.25 ಕೋಟಿ ಕುಟುಂಬಗಳನ್ನು ತಲುಪುವ ಗುರಿಯನ್ನು ಹೊಂದಿತ್ತು. ಇದಕ್ಕಾಗಿ ಸರಕಾರ ಸುಮಾರು 170 ಕೋಟಿ ರೂಪಾಯಿ ಎತ್ತಿಟ್ಟಿತ್ತು. ರಾಜ್ಯದ ಪ್ರತಿ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಅರಿಯುವುದು ಸಮೀಕ್ಷೆಯ ಉದ್ದೇಶವಾಗಿತ್ತು…

    April 11, 2016
    ...
    Bhavush agarval
    ರಾಜ್ಯ

    ಕನಸಿನ ಕಂಪನಿ ಓಲಾ ಸಾಗಿ ಬಂದ ಹಾದಿ; ಬದಲಾದ ಮನಸ್ಸು

    ಆಗಿನ್ನೂ 2010. ದೇಶದಲ್ಲಿ 3ಜಿ ಸೇವೆ ಆರಂಭವಾಗಿದ್ದ ದಿನಗಳು. ಆನ್ ಲೈನ್ ಮಾರಾಟದ ತಾಣಗಳು, ಆ್ಯಪ್ ಆಧಾರಿತ ಸೇವೆಗಳೆಲ್ಲಾ ಒಂದೊಂದಾಗಿ ಕಾಣಿಸಿಕೊಳ್ಳುತ್ತಿದ್ದ ಕಾಲಮಾನವದು. 2011, ಡಿಸೆಂಬರ್ 17ರಂದು ‘ಇ-ಸ್ಪಾರ್ಕ್ಸ್’ ಎಂಬ ಮೇಳವೊಂದು ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು. ದೇಶದಲ್ಲಿ ಇ-ಕಾಮರ್ಸ್ ಸ್ಟಾರ್ಟ್ ಅಪ್ ಗಳಿಗೆ ಬಂಡವಾಳ ಒದಗಿಸಿಕೊಡುವ ವೇದಿಕೆ ಅದು. ಎಲ್ಲರೂ ಒಬ್ಬೊಬ್ಬರಾಗಿ ಬಂದು ತಮ್ಮ ಆಲೋಚನೆ, ಯೋಜನೆಗಳನ್ನು ನೆರೆದಿದ್ದ ಉದ್ಯಮಿಗಳ ಮುಂದೆ ತೆರೆದಿಡುತ್ತಿದ್ದರು. ಕೊನೆಗೆ ಆ ಹುಡುಗನ ಸರದಿ ಬಂತು. ಎಲ್ಲರಂತೆ ಆತ ವೇದಿಕೆ ಹತ್ತಿ ಪವರ್ ಪಾಯಿಂಟ್..

    April 11, 2016
    ...
    ola_650x400_51446651541
    ರಾಜ್ಯ

    ನಿಯಂತ್ರಣಕ್ಕೆ ಸಿಗದ ‘ಓಲಾ ಸುಲಿಗೆ’: ಕ್ಯಾಬ್ ಸೇವೆಯ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ

    ಆ್ಯಪ್ ಆಧಾರಿತ ಟಾಕ್ಸಿ ಸೇವೆ ನೀಡುವ ಬೆಂಗಳೂರು ಮೂಲದ ಓಲಾ ಗ್ರಾಹಕರಿಂದ ಯದ್ವಾತದ್ವಾ ಸುಲಿಗೆಗೆ ಇಳಿದಿದೆ. ಪೀಕ್ ಅವರ್ (ಬೇಡಿಕೆ ಗರಿಷ್ಠವಿರುವ ಅವಧಿ) ಗಳಲ್ಲಿ ಬೆಲೆಯನ್ನು ಒಂದೂವರೆ ಪಟ್ಟು, ದುಪ್ಪಟ್ಟು ಏರಿಸಿ ಗ್ರಾಹಕರಿಗೆ ಓಲಾ ಬರೆ ಹಾಕುತ್ತಿದೆ. ಜಾಹೀರಾತುಗಳಲ್ಲಿ ಒಂದು, ಗ್ರಾಹಕರಿಗೆ ಬಿಲ್ ನೀಡುವಾಗ ಇನ್ನೊಂದು ದರಪಟ್ಟಿ, ಓಲಾ ಸುಲಿಗೆಯ ಮತ್ತೊಂದು ವಿಧಾನ. ಜತೆಗೆ, ಪ್ರಯಾಣದ ಅವಧಿಗೆ ಪ್ರತಿ ನಿಮಿಷಕ್ಕೆ 1 ರೂಪಾಯಿ ಗ್ರಾಹಕರಿಂದ ವಸೂಲಿ ಮಾಡುತ್ತಿದೆ. ವಿಶೇಷ ಅಂದರೆ, ನಗರ ಸಾರಿಗೆ ವ್ಯವಸ್ಥೆಯಲ್ಲಿ ಗ್ರಾಹರಿಗೆ ಸುಲಿಗೆಯಾಗುತ್ತಿದೆ, ಇದನ್ನು..

    April 11, 2016

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top