An unconventional News Portal.

  ...
  kpsc-bangalore-1
  KPSC NEWS

  ಐವರು ಕಳಂಕಿತರಿಂದ ಕೆಪಿಎಸ್ಸಿ ಸಂದರ್ಶನ: ಶುರುವಾಗಲಿದೆ ಮತ್ತೊಂದು ಸುತ್ತಿನ ಅದ್ವಾನ!

  ರಾಜ್ಯದಲ್ಲಿ ಮತ್ತೊಮ್ಮೆ ಕೆಪಿಎಸ್ಸಿ ನೇಮಕಾತಿಯಲ್ಲಿ ಅದ್ವಾನಗಳು ಮರುಕಳಿಸುವ ಸಾಧ್ಯತೆಗಳು ಕಾಣಿಸುತ್ತಿವೆ. ಗೆಜೆಟೆಡ್ ಪ್ರೊಬೇಷನರ್ಸ್ 464 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದ್ದು, ಅಧ್ಯಕ್ಷರು ಹಾಗೂ ಪೂರ್ಣ ಪ್ರಮಾಣದ ಸದಸ್ಯರಿಲ್ಲದ ಕೆಪಿಎಸ್ಸಿ, ನೇಮಕಾತಿ ಪೂರ್ವ ಸಂದರ್ಶನ ನಡೆಸಲು ಮುಂದಾಗಿದೆ. ಈವರೆಗೆ ಸುಮಾರು 1389 ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೇ. 16ರಂದು ಸಂದರ್ಶನಕ್ಕೆ ಆಯ್ಕೆಯಾದವರ ದಾಖಲಾತಿಗಳ ಪರಿಶೀಲನೆ ನಡೆಯಲಿದೆ. ಸಂದರ್ಶನ ದಿನಾಂಕವನ್ನು ಕೆಪಿಎಸ್ಸಿ ಇನ್ನೂ ಪ್ರಕಟಿಸಬೇಕಿದೆ. ಆರೋಪಿಗಳಿಂದ ಸಂದರ್ಶನ: 2011, 2014ರ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಎಸ್‍ಸಿಯ ಐವರು ಸದಸ್ಯರ ಮೇಲೆ..

  May 7, 2016
  ...
  siddaramaiah
  ರಾಜ್ಯ

  ಸರ್ಕಾರಿ ನೌಕರರಿಗೂ ತಟ್ಟಿದ ಬರದ ಬಿಸಿ: ಆರಂಭವಾಗದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ

  ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ತೀವ್ರ ಬರಗಾಲ ಇದೆ ಎಂಬ ಕಾರಣವನ್ನು ನೀಡಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಬರಗಾಲದ ಬಿಸಿ ಸರ್ಕಾರಿ ನೌಕರರನ್ನೂ ಕಾಡುವುದು ನಿಚ್ಚಳವಾಗಿದೆ. ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗ ಸೂಚಿ ಪ್ರಕಾರ ಮೇ ಹಾಗೂ ಜೂನ್ ತಿಂಗಳಿನಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜೂನ್ 30 ರ ನಂತರ ವರ್ಗಾವಣೆ ಮಾಡಬೇಕಿದ್ದರೆ ಮುಖ್ಯಮಂತ್ರಿಗಳ ಪೂರ್ವಾನುಮತಿ ಕಡ್ಡಾಯ. ಆದರೆ ಈ ಬಾರಿ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು..

  May 5, 2016
  ...
  bangalore-clouds
  ರಾಜ್ಯ

  ಬಿಸಿಲಿಗೆ ಬೆಂಡಾದ ಊರಿನಲ್ಲಿ ತಂಪುಗಾಳಿ: ವಾಡಿಕೆ ಮಳೆಯ ಮುನ್ಸೂಚನೆ

  ತೀವ್ರ ಬರ ಮತ್ತು ನೀರಿನ ಅಭಾವದಿಂದ ಕಂಗೆಟ್ಟಿರುವ ರಾಜ್ಯಕ್ಕೆ ವಾಡಿಕೆಯಂತೆ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಪ್ರವೇಶವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿರೀಕ್ಷೆಯಂತೆಯೇ ನಿಗದಿತ ಸಮಯದಲ್ಲೇ ಮುಂಗಾರು ಪ್ರವೇಶ ಮಾಡಲಿದ್ದು, ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ಕೇಂದ್ರ ಹವಾಮಾನ ಇಲಾಖೆಯ ಮೂಲಗಳ ಪ್ರಕಾರ, ಸಾಮಾನ್ಯಕ್ಕಿಂತ ಈ ಬಾರಿ ಶೇ.4ರಷ್ಟು ಹೆಚ್ಚು ಮಳೆಯಾಗಲಿದ್ದು, ಕರ್ನಾಟಕದಲ್ಲಿ 865 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ 900..

  May 5, 2016
  ...
  kempayya-cover-1
  ರಾಜ್ಯ

  ನೀವು ಬ್ಲಾಕ್ ಮೇಲರ್ಸ್, ಸತ್ಯವನ್ನು ನೇಣು ಹಾಕುವವರು: ‘ಡೋಂಟ್ ಟಾಕ್ ರಬ್ಬಿಶ್’ ಕೆಂಪಯ್ಯ!

  ರಾಜ್ಯ ಗೃಹ ಇಲಾಖೆಯ ಭದ್ರತಾ ಸಲಹೆಗಾರ ಕೆಂಪಯ್ಯ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಘಟನೆಗೆ ಬುಧವಾರ ಸಂಜೆ ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯ ಆವರಣ ಸಾಕ್ಷಿಯಾಯಿತು. ಅರ್ಕಾವತಿ ಡಿ- ನೋಟಿಫಿಕೇಶನ್ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆಯು ಕೆಂಪಯ್ಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಸಂಬಂಧ ಕೆಂಪಯ್ಯ ಬುಧವಾರ ಸಂಜೆ 5. 30ರ ಸುಮಾರಿಗೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಗೆ ಆಗಮಿಸಿದ್ದರು. ಸುದ್ದಿ ತಿಳಿದ ಮಾಧ್ಯಮಗಳು ಹೊರಗೆ ಕಾಯುತ್ತಿದ್ದವು. ರಾತ್ರಿ 8.30ರ ಸುಮಾರಿಗೆ..

  May 4, 2016
  ...
  govt-cars-karnataka-1
  ರಾಜ್ಯ

  ಸರಕಾರದ ಕಾರು ಖರೀದಿ ಖಯಾಲಿಗೆ 30 ಕೋಟಿ ತೆರಿಗೆ ಹಣ ವೆಚ್ಚ!

  ರಾಜ್ಯದಲ್ಲಿ ಉಪನ್ಯಾಸಕರಿಗೆ ಸಂಬಳ ಹಚ್ಚಿಸಲು ಹಣವಿಲ್ಲ, ಬರ ಪರಿಹಾರಕ್ಕೆ ಬೊಕ್ಕಸದಲ್ಲಿ ಕಾಸಿಲ್ಲ. ಆದರೆ, ಜನಪ್ರತಿನಿಧಿಗಳ ಶೋಕಿಗಾಗಿ ಕಾರುಗಳ ಖರೀದಿಗೆ ಮಾತ್ರ ತೆರಿಗೆ ಹಣದಲ್ಲಿ ಯಾವುದೇ ವ್ಯತ್ಯಯವಿಲ್ಲ. ಇದು ಕಳೆದ 6 ವರ್ಷಗಳ ಅಂತರದಲ್ಲಿ ರಾಜ್ಯ ಸರಕಾರ ವಾಹನಗಳ ಮೇಲೆ ಮಾಡಿರುವ ವೆಚ್ಚದ ವಿವರಗಳ ಹಿನ್ನೆಲೆಯಲ್ಲಿ ಗಮನಿಸಬೇಕಿರುವ ಅಂಶ. 2009ರಿಂದ 2015ರ ನಡುವೆ ಸರಕಾರ ಒಟ್ಟು 217 ಕಾರುಗಳನ್ನು ಖರೀದಿಸಿದೆ. ಆರ್ಥಿಕ ಇಲಾಖೆ ಅನುಮೋದನೆ ಮೇರೆಗೆ, ಆಡಳಿತ ಹಾಗೂ ಸುಧಾರಣೆ ಇಲಾಖೆ ನಡೆಸಿರುವ ಈ ವ್ಯವಹಾರದ ಮಾಹಿತಿ ಇದೀಗ ಬಹಿರಂಗವಾಗಿದೆ…

  May 4, 2016
  ...
  Girl writing exam paper
  ರಾಜ್ಯ

  ಇಂದಿನಿಂದ ಸಿಇಟಿ ಪರೀಕ್ಷೆ: ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ

  ಹಲವು ಗೊಂದಲಗಳ ನಡುವೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬುಧವಾರ (ಇಂದು)ದಿಂದ ಆರಂಭವಾಗಲಿದೆ. ಸುಮಾರು 1,78,346 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ 391 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿ 82 ಕೇಂದ್ರಗಳಲ್ಲಿ 42,963 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದಾರೆ. ಗಡಿನಾಡು ಮತ್ತು ಹೊರನಾಡು ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಮೇ 6ರಂದು ನಡೆಯಲಿದ್ದು, 2,560 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಸಂಬಂಧ ಇಲ್ಲಾ ವಿಧವಾದ ಸಿದ್ಧತೆ, ಭದ್ರತಾ ವ್ಯವಸ್ಥೆ ಮಾಡಲಾಗಿದೆ…

  May 3, 2016
  ...
  ಆರೋಪಿ ಶಿವಕುಮಾರ್
  ರಾಜ್ಯ

  ‘ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ’: ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ನಿಂತ ಸಿಐಡಿ!

  ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವಕುಮಾರ್ ಅಲಿಯಾಸ್ ಶಿವಕುಮಾರ ಸ್ವಾಮಿಯನ್ನು ಬಂಧಿಸಿರುವುದಾಗಿ ಮಂಗಳವಾರ ಸಿಐಡಿ ಪ್ರಕಟಿಸಿದೆ. ಈ ಮೂಲಕ ಒಟ್ಟು 14 ಜನರನ್ನು ಬಂಧಿಸಿದಂತಾಗಿದೆ. ಕಳೆದ ತಿಂಗಳು ಆರಂಭದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕರಣದಲ್ಲಿ ಸಿಐಡಿ ಆರಂಭದಿಂದಲೇ ಕಾರ್ಯಾಚರಣೆಗೆ ಇಳಿದಿತ್ತು. ಹಿಂದೆ ರಾಜ್ಯದಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯನ್ನು ದಾಟಿ, ಸಿಐಡಿ ಈ ಬಾರಿ ತನಿಖೆಯಲ್ಲಿ ಆಳಕ್ಕೆ ಇಳಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮಂಗಳವಾರ ಸಿಐಡಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಮತ್ತು..

  May 3, 2016
  ...
  ms-1
  ರಾಜ್ಯ

  ಓಂ ನಮಃ ಶಿವಾಯ…: ಈ ಅಲೆಮಾರಿಯ ಪಾಲಿಗೆ ಪ್ರಕೃತಿಯೇ ಆಲಯ!

  ನಾವು ಅಂದುಕೊಂಡಂತೆ ಬದುಕುತ್ತಿದ್ದೇವೆ ಎಂದು ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ‘ನಾವು ಅಂದುಕೊಂಡಿದ್ದು’ ಏನು? ಅದು ಹಾಗೆ ಅನ್ನಿಸಲು ಕಾರಣಗಳೇನು ಎಂದು ಹುಡುಕಲು ಹೊರಟಾಗ ಗೊಂದಲ ಶುರುವಾಗುತ್ತದೆ. ನಿಜಕ್ಕೂ, ನಾನು ಬದುಕುತ್ತಿರುವ ಬದುಕು, ನಮ್ಮದೇನಾ? ಅನ್ನಿಸಲು ಶುರುವಾಗುತ್ತದೆ. ಯಾಕೆ ಈಗ ಈ ಪೀಠಿಕೆ ಎಂದರೆ, ಕಳೆದ 20 ವರ್ಷಗಳಿಂದ ತಮ್ಮನ್ನು ತಾವು, ಅಂದುಕೊಂಡ ಹಾದಿಯಲ್ಲಿಯೇ ನಡೆಸಿಕೊಂಡು ಬಂದು, ಇವತ್ತು ಸಾಗಿ ಬಂದ ಹಾದಿಯನ್ನು ಹಿಂತಿರುಗಿ ನೋಡಬೇಕು ಎಂಬ ಮನಸ್ಥಿತಿಯಲ್ಲಿರುವ ಒಬ್ಬರ ಪರಿಚಯವನ್ನು ನಿಮಗೆ ಮಾಡಿಸಬೇಕಿದೆ. ಅವರು ಮಂಜುನಾಥ್ ಸುಳ್ಳೊಳ್ಳಿ…

  May 3, 2016
  ...
  KPN photo
  ರಾಜ್ಯ

  ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’; ಯಡಿಯೂರಪ್ಪ ಕಣ್ಣೀರು ಹಾಕುವುದು ಮರೆಯಲಿಲ್ಲ!

  ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತೆ ಕಣ್ಣೀರು ಹಾಕಿದ್ದಾರೆ. ಈ ಬಾರಿ ಅವರು ಕಣ್ಣೀರು ಹಾಕಲು ಆಯ್ಕೆ ಮಾಡಿಕೊಂಡ ಸ್ಥಳ, ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಸಿಬಿಐ ವಿಶೇಷ ನ್ಯಾಯಾಲಯ. ಸೋಮವಾರ ಹಳೆಯ ಪ್ರಕರಣರವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ಅವರು, ವಿಶೇಷ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ. ಕೆ. ನಾಯಕ್ ಅವರ ಮುಂದೆಯೇ ದುಃಖತಪ್ತರಾಗಿದ್ದಾರೆ. ಮೂಲಗಳ ಪ್ರಕಾರ, ನ್ಯಾಯಾಧೀಶರು ವಿಚಾರಣೆಯ ಭಾಗವಾಗಿ ಸಿದ್ಧಪಡಿಸಲಾಗಿದ್ದ ಸುಮಾರು 473 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇವೆಲ್ಲವಕ್ಕೂ ಒಂದೊಂದಾಗಿ, ತಾಳ್ಮೆಯಿಂದಲೇ..

  May 2, 2016
  ...
  DGP
  ರಾಜ್ಯ

  ಹುಷಾರ್… ಪುತ್ರನ ವಿರುದ್ಧ ದೂರು ನೀಡೋಕೆ ಬಂದರೆ, ಜೈಲಿಗೆ ಅಟ್ತಾರೆ ಡಿಜಿಪಿ ಓಂಪ್ರಕಾಶ್!

  ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಮೇಲೆ ಪುತ್ರ ವ್ಯಾಮೋಹಕ್ಕೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಶನಿವಾರ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಚಿಕ್ಕಮಗಳೂರು ಮೂಲದ ಯುವತಿಯನ್ನು ಭಾನುವಾರ ಸಂಜೆ ವೇಳೆಗೆ ರಾಜಾಜಿನಗರದ ಮನೆಯಲ್ಲಿ ಬಂಧಿಸಲಾಗಿದೆ. ಆಕೆಯ ವಿರುದ್ಧ ಶನಿವಾರ ಕನಕಪುರ ನಗರ ಠಾಣೆಯಲ್ಲಿ ದಾಖಲಾದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಕಾರ್ಯಚರಣೆಯನ್ನು ನಡೆಸಲಾಗಿದೆ. ಈ ಮೂಲಕ, ಡಿಜಿಪಿ ಪುತ್ರ ಕಾರ್ತಿಕೇಶ ಹಾಗೂ ಆತನ ಸ್ನೇಹಿತ ಎಂದು ಗುರುತಿಸುತ್ತಿರುವ ರವಿಶಂಕರ್ ಎಂಬಾತನ ವಿರುದ್ಧ ದೂರು..

  May 1, 2016

Top