An unconventional News Portal.

  ...
  Rate hike
  ರಾಜ್ಯ

  ಬೆಲೆ ಏರಿಕೆ ನಾಗಾಲೋಟಕ್ಕೆ ಗ್ರಾಹಕ ಸುಸ್ತು; ದಾಖಲೆಯ ದರ ಹೆಚ್ಚಳಕ್ಕೆ ಕಾರಣವೇನು? ಪರಿಹಾರಗಳೇನು?

  ಕಳೆದ ಕೆಲವು ದಿನಗಳಿಂದ ಮಳೆ ಹನಿಗಳು ಬಾಯಾರಿದ ಇಳೆಯ ದಾಹ ನೀಗಿಸುತ್ತಿವೆ. ಆದರೆ ವ್ಯಾಪಾರಿಗಳ ಲಾಭದ ದಾಹ, ಸರಕಾರಗಳ ತೆರಿಗೆ ದಾಹ ಮಾತ್ರ ಸದ್ಯಕ್ಕೆ ತೀರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪರಿಣಾಮ ನಿತ್ಯ ಜೀವನಕ್ಕೆ ಬೇಕಾಗುವ ಪದಾರ್ಥಗಳ ಬೆಲೆ ಏರಿಕೆ. ರಾಜ್ಯದಲ್ಲಷ್ಟೇ ಅಲ್ಲ ದೇಶಾದ್ಯಂತ ಕಳೆದೆರಡು ತಿಂಗಳಿನಿಂದ ಕಂಡು ಕೇಳರಿಯದ ರೀತಿಯಲ್ಲಿ ಬೆಲೆಗಳು ಏರಿಕೆಯಾಗುತ್ತಲೇ ಇವೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕೊಳ್ಳುವವರ ಜೇಬು ಖಾಲಿಯಾಗುತ್ತಿದೆ. ತರಕಾರಿ, ಕಾಯಿ ಪಲ್ಲೆ, ಮೊಟ್ಟೆ, ಮೀನು, ಮಾಂಸ ಮತ್ತು ದಿನಸಿ ವಸ್ತುಗಳ ಬೆಲೆಗಳು..

  June 10, 2016
  ...
  kpsc-kagodu-1
  KPSC NEWS

  ಕೆಪಿಎಸ್ಸಿ ಅದ್ಯಕ್ಷ ಸ್ಥಾನಕ್ಕೆ ಕಳಂಕಿತ ಅಧಿಕಾರಿ ಶಾಮ್ ಭಟ್: ಸರಕಾರದ ನಡೆಗೆ ಸ್ಪೀಕರ್ ಕಾಗೋಡು ಗರಂ

  ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಅಧ್ಯಕ್ಷ ಸ್ಥಾನಕ್ಕೆ ಬಿಡಿಎ ಆಯುಕ್ತ ಶಾಮ್‍ ಭಟ್ ಅವರ ಹೆಸರನ್ನು ಶಿಫಾರಸು ಮಾಡಿರುವ ಸರ್ಕಾರದ ಕ್ರಮಕ್ಕೆ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, “ಕಳಂಕವನ್ನು ಹೊತ್ತುಕೊಂಡಿರುವ ಅಧಿಕಾರಿ ಶಾಮ್‍ ಭಟ್ ಹೆಸರನ್ನು ಶಿಫಾರಸು ಮಾಡಿರುವ ಕ್ರಮ ಸರಿಯಲ್ಲ,” ಎಂದು ಗರಂ ಆಗಿ ನುಡಿದರು. “ರಾಜ್ಯಪಾಲರು ಅವರ ಹೆಸರನ್ನು ಅಂಗೀಕರಿಸುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇವರ ಹೆಸರನ್ನು ಶಿಫಾರಸು..

  June 8, 2016
  ...
  shrinivas-hasana-1
  ರಾಜ್ಯ

  ‘ಪರ್ಯಾಯದ ಹುಡುಕಾಟ’: ಪೊಲೀಸ್ ಇಲಾಖೆಯಿಂದ ಬೇಸತ್ತು ಚುನಾವಣೆ ನಿಂತಾತ ಈಗ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ!

  ಅರಕಲಗೂಡು ಜಯಕುಮಾರ್ ಪೊಲೀಸ್ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿಗಳು ಪ್ರತಿಭಟನೆಗೆ ಮುಂದಾದ ಬೆಳವಣಿಗೆ ಹಸಿರಾಗಿದೆ. ಇದರ ನಡುವೆಯೇ, ಅದೇ ಪೊಲೀಸ್ ಇಲಾಖೆಯ ಒತ್ತಡದ ಕೆಲಸ, ಅಗೌರವಯುತ ಜೀವನದಿಂದ ಬೇಸತ್ತು ಹೊರಬಂದು ರಾಜಕೀಯ ಅಖಾಡಕ್ಕೆ ಇಳಿದವರನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಇವರು ರಾಜಕೀಯ ಅಖಾಡಕ್ಕೆ ಇಳಿದದ್ದು ಮಾತ್ರವಲ್ಲ, ಪ್ರಾಮಾಣಿಕರು ಎಂಬ ಹೆಸರನ್ನು ಉಳಿಸಿಕೊಂಡಿರುವ ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಅವರ ಮಾರ್ಗದರ್ಶನದಲ್ಲಿ ಚುನಾವಣೆಯನ್ನೂ ಗೆದ್ದು ಬಂದಿದ್ದಾರೆ. ಹಾಸನ ಜಿಲ್ಲಾ ಪಂಚಾಯ್ತಿಯ ಹಾಲಿ ಉಪಾಧ್ಯಕ್ಷ ಶ್ರೀನಿವಾಸ್ ಹಿಂದೊಮ್ಮೆ ಪೊಲೀಸ್ ಸಿಬ್ಬಂದಿಯಾಗಿದ್ದವರು. 17..

  June 7, 2016
  ...
  KNP
  ರಾಜ್ಯ

  ಮಳೆ ನಿಂತು ಹೋದ ಮೇಲೆ; ಸಿಎಂ ಸಿದ್ದರಾಮಯ್ಯ ಬೀದಿಗೆ ಇಳಿಯಲಿ: ನಗರವಾಸಿಗಳ ಸಂಕಟ ಅರಿಯಲಿ!

  ಮಳೆಗಾಲ… ರಾಜ್ಯದ ಯಾವ ಭಾಗದಲ್ಲೂ ಸೃಷ್ಟಿಸದ ನರಕವೊಂದು ಮಹಾನಗರ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿಸುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ತಾಪಮಾನದಿಂದ ಕಂಗೆಡುವ ಇಲ್ಲಿನ ಜನ ಒಂದು ದೊಡ್ಡ ಮಳೆಗೆ ಹೈರಾಣಾಗಿ ಹೋಗುತ್ತಾರೆ. ಅದಕ್ಕೆ ಇಲ್ಲಿನ ಟ್ರಾಫಿಕ್ ಸಮಸ್ಯೆ, ಕಸದ ಸಮಸ್ಯೆ, ನೀರಿನ ಸಮಸ್ಯೆ ಜತೆಗೆ ಮಳೆ ನಿರ್ವಹಣೆಯಲ್ಲೂ ಸ್ಥಳೀಯ ಆಡಳಿತದ ಹೊಣೆಗೇಡಿತನಗಳು ಸೃಷ್ಟಿಸಿರುವ ಸಮಸ್ಯೆ ಕಾರಣ. ಸೋಮವಾರ ಸಂಜೆ ವೇಳೆಗೆ ಬೆಂಗಳೂರು ನಗರ ಭಾರೀ ಮಳೆಗೆ ಸಾಕ್ಷಿಯಾಯ್ತು. ಇಳಿಜಾರಿನ ಪ್ರದೇಶಗಳಲ್ಲಿ ಪ್ರವಾಹದಂತೆ ನೀರು ನುಗ್ಗಿತು…

  June 7, 2016
  ...
  eknath-khadse-bjp-2
  ರಾಜ್ಯ

  ಮಹಾರಾಷ್ಟ್ರ ಬಿಜೆಪಿಯಲ್ಲಿ ಮತ್ತೊಂದು ಓಬಿಸಿ ನಾಯಕನ ತಲೆದಂಡ: ಸಚಿವ ಸ್ಥಾನಕ್ಕೆ ಏಕನಾಥ ಖಡ್ಸೆ ರಾಜೀನಾಮೆ

  ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರ ನಡುವೆ ನಡೆಯುತ್ತಿದ್ದ ಹಗ್ಗ- ಜಗ್ಗಾಟದಲ್ಲಿ ಕೊನೆಗೂ ಸಚಿವ ಏಕನಾಥ ಖಡ್ಸೆ ತಲೆದಂಡವಾಗಿದೆ. ಶನಿವಾರ ಖಡ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಖಡ್ಸೆ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಹಾಗೂ ಭೂಗತ ಪಾತಕಿ ದಾವೂದ್ ಜತೆ ಸಂಪರ್ಕ ಹೊಂದಿರುವ ಬಗ್ಗೆ ವಿಸ್ತೃತ ವರದಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಎರಡು ವರ್ಷಗಳ..

  June 4, 2016
  ...
  siddaramayya-police-1
  ರಾಜ್ಯ

  ಸಾಮ, ದಾನ, ಬೇಧ, ದಂಡ: ಪೊಲೀಸ್ ಪ್ರತಿಭಟನೆ ತಡೆಯುವ ಸರಕಾರದ ಪ್ರಯತ್ನ ಫಲ ನೀಡುತ್ತಾ?

  ರಾಜ್ಯದ ಪೊಲೀಸ್ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾಮೂಹಿಕ ರಜೆ ಹಾಕುವ ಮೂಲಕ ಕರೆ ನೀಡಿದ್ದ ಶನಿವಾರದ ಪ್ರತಿಭಟನೆಯ ಫಲಿತಾಂಶ ಏನಾಗಬಹುದು ಎಂಬ ಕುತೂಹಲಕ್ಕೆ ಕೆಲವು ಗಂಟೆಗಳಲ್ಲಿ ತೆರೆ ಬೀಳಲಿದೆ. ಕಳೆದ ಒಂದು ವಾರದಿಂದ ಪೊಲೀಸರ ಪ್ರತಿಭಟನೆಯನ್ನು ತಡೆಯಲು ಸರಕಾರ ಹಾಗೂ ಹಿರಿಯ ಅಧಿಕಾರಿಗಳು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳ ಮೊರೆ ಹೋಗಿದ್ದಾರೆ. ಪೊಲೀಸರು ಮಾತ್ರವಲ್ಲ, ಅವರ ಕುಟುಂಬದವರು ಹಾಗೂ ಪ್ರತಿಭಟನೆಯನ್ನು ಬೆಂಬಲಿಸುವ ಸಂಘಟನೆಗಳನ್ನೂ ಶನಿವಾರ ಬೀದಿಗೆ ಇಳಿಯದಂತೆ ತಡೆಯುವ ಪ್ರಯತ್ನಗಳು ನಡೆದಿವೆ. ಗೃಹ ಸಚಿವರ ಮೆಸೇಜ್: ಶುಕ್ರವಾರ..

  June 3, 2016
  ...
  shashidhar-venugopal-new-1
  ರಾಜ್ಯ

  ಪೊಲೀಸರ ಪ್ರತಿಭಟನೆ ಮೇಲೆ ಮೊದಲ ‘ಮಹಾ ಪ್ರಹಾರ’: ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಬಂಧನ

  ಪೊಲೀಸರ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ‘ಎಸ್ಮಾ’ ಜಾರಿಯಾದ 24 ಗಂಟೆಯೊಳಗೆ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಧ್ಯರಾತ್ರಿ 12.30ರ ಸುಮಾರಿಗೆ ಯಲಹಂಕ ನ್ಯೂಟೌನ್ ಆರ್ಟಿಒ ಕಛೇರಿ ಹಿಂಭಾಗದಲ್ಲಿರುವ ಮನೆಯಿಂದ ಶಶಿಧರ್ ಅವರನ್ನು ಸುಮಾರು 30 ಮಂದಿ ಇದ್ದ ಪೊಲೀಸರ ತಂಡ ಕರೆದುಕೊಂಡು ಹೋಗಿದೆ. ಘಟನೆ ನಡೆಯುತ್ತಿದ್ದಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ಶಶಿಧರ್ ಮಗ ‘ತಂದೆಯ ಬಂಧನವಾಗಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾನೆ. ‘ಏನೇ ಆಗಲಿ, ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಕೈ..

  June 2, 2016
  ...
  Karnataka_emblem-1
  ರಾಜ್ಯ

  ವೇತನ ಹೆಚ್ಚಳ ಆಗ್ರಹಕ್ಕೆ ಕೂಡ ಬಂದ ಕಾಲ: ಸಾಂಕೇತಿಕ ಪ್ರತಿಭಟನೆಗೆ ಮುಂದಾದ ಸರಕಾರಿ ನೌಕರರು

  ಹೆಚ್ಚುತ್ತಿರುವ ಅಕ್ಕಿ, ಬೇಳೆಕಾಳು, ಸೊಪ್ಪು- ತರಕಾರಿ, ಪೆಟ್ರೋಲ್- ಡೀಸೆಲ್- ಅಡುಗೆ ಅನಿಲ ಮತ್ತಿತರ ಅಗತ್ಯ ವಸ್ತುಗಳ ಬೆಲೆಗಳು ನಿತ್ಯ ಬದುಕನ್ನು ಹೈರಾಣಾಗಿಸುತ್ತಿವೆ. ದುಡಿಮೆ ಹಾಗೂ ಖರ್ಚಿನ ನಡುವೆ ಅಂತರ ಕಡಿಮೆಯಾಗುತ್ತಿದೆ, ಇಲ್ಲದೇ ದುಡಿಮೆಗಿಂತಲೂ ಖರ್ಚು ಹೆಚ್ಚುತ್ತಿದೆ. ನೆಮ್ಮದಿಯಿಂದ ಬದುಕುವುದು ಕಷ್ಟ ಎನ್ನಿಸುತ್ತಿದೆ, ಮಕ್ಕಳಿಗೆ ಇಷ್ಟಪಟ್ಟ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗುತ್ತಿಲ್ಲ… ಹೀಗೆ ಸಮಸ್ಯೆಗಳ ಪಟ್ಟಿಯನ್ನು ಮುಂದಿಡುತ್ತಿರುವವರು ಕೊಳಗೇರಿಗಳ ಜನರಲ್ಲ, ರೈತರಲ್ಲ, ಬದಲಿಗೆ ಸರಕಾರಿ ನೌಕರರು. ಈ ವರ್ಷದ ಆರಂಭದಲ್ಲಿ ಹೈಸ್ಕೂಲು ಮತ್ತು ಪಿಯು ಉಪನ್ಯಾಸಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅಲ್ಲಿಂದ..

  June 2, 2016
  ...
  police-karnataka-constabels
  ರಾಜ್ಯ

  ‘ಎಸ್ಮಾ’ ಎಂಬ ಚಾಪೆ ಕೆಳಗೆ ಮೌನ ಪ್ರತಿಭಟನೆಯ ರಂಗೋಲಿ: ಹೊಸ ತಿರುವು ಪಡೆದುಕೊಳ್ಳುತ್ತಾ ಪೊಲೀಸರ ಚಳವಳಿ?

  ‘ಎಸ್ಮಾ’ ಜಾರಿ ಹಿನ್ನೆಲೆಯಲ್ಲಿ ಜೂನ್ 4ರಂದು ಪೊಲೀಸರು ನಡೆಸಲು ತೀರ್ಮಾನಿಸಿದ್ದ ‘ರಜೆ ಚಳವಳಿ’ ಹೊಸ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿವೆ. 31 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಇಳಿದಿರುವ ಕರ್ನಾಟಕ ರಾಜ್ಯ ಪೊಲೀಸ್ ಸಂಘ ಹಾಗೂ ಮಹಾ ಸಂಘಗಳ ಅಡಿಯಲ್ಲಿ ರಾಜ್ಯವ್ಯಾಪಿ ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಕೋರಿ ಅರ್ಜಿಯನ್ನು ಸಲ್ಲಿಸಲು ಶುರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಒಳಾಡಳಿತ ಇಲಾಖೆ ಅಧೀನ ಕಾರ್ಯದರ್ಶಿ ಮೂಲಕ ಪೊಲೀಸರನ್ನೂ ‘ಅತ್ಯಾವಶ್ಯಕ ಸೇವೆ’ಗಳ ಅಡಿಯಲ್ಲಿ ತರುವ  ಮೂಲಕ ಎಸ್ಮಾ..

  June 2, 2016
  ...
  vidhan-soudha-1
  ರಾಜ್ಯ

  ಮೇಲ್ಮನೆಗೆ ನಾಮನಿರ್ದೇಶನ ಕಸರತ್ತು: ಸಾಹಿತಿಗಳನ್ನು ಹೊರಗಿಟ್ಟು ರಾಜಕಾರಣಿಗಳಿಗೆ ಅವಕಾಶ?

  ಮೂವರ ಹೆಸರುಗಳನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಇಕ್ಕಿಟ್ಟಿಗೆ ಸಿಲುಕಿದ್ದು, ಕೊನೆಯ ಕ್ಷಣಗಳಲ್ಲಿ ಸಾಹಿತಿಗಳನ್ನು ಪಟ್ಟಿಯಿಂದ ಹೊರಗಿಡುವ ಸಾಧ್ಯತೆ ಇದೆ. ಹೀಗೊಂದು ಮಾಹಿತಿ ಇದೀಗ ಲಭ್ಯವಾಗಿದ್ದು, ಕೊನೆಯ ಕ್ಷಣದಲ್ಲಿ ಮೂರು ನಾಮನಿರ್ದೇಶನ ಸ್ಥಾನಗಳ ಪೈಕಿ ಸಾಹಿತಿಗಳ ಹೆಸರು ಇಲ್ಲದೆ ಹೋಗಬಹುದು ಎಂದು ಮೂಲಗಳು ತಿಳಿಸಿವೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಹೆಸರನ್ನು ಸರಕಾರ ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡಲಿದೆ ಎಂಬ ಸುದ್ದಿ ಕಳೆದ ವಾರ ಹೊರಬಿದ್ದಿತ್ತು. ಆದರೆ, ಆಕಾಂಕ್ಷಿಗಳ ದಂಡು ಹೆಚ್ಚಿದ್ದು, ಕಾಂಗ್ರೆಸ್..

  June 1, 2016

Top