An unconventional News Portal.

  ...
  tomoto-3
  ರಾಜ್ಯ

  ‘ರೆಡ್ ಅಲರ್ಟ್‌’: ಮಾರುಕಟ್ಟೆಯಲ್ಲಿ ಟೊಮೊಟೊ ಬೆಲೆ ಶೇ. 700 ಪಟ್ಟು ಹೆಚ್ಚಳ; ಲಾಭ ಯಾರಿಗೆ?

  ಈರುಳ್ಳಿಗೆ ಇರುವ ‘ರಾಜಕೀಯ ಸ್ಥಾನಮಾನ’ ಟೊಮೊಟೊಗೂ ಇದ್ದಿದ್ದರೆ ಇಷ್ಟೊತ್ತಿಗೆ -ವಿರೋಧ ಪಕ್ಷಗಳಿಂದ ಹಿಡಿದು, ಸಾಮಾಜಿಕ ಜಾಲತಾಣಗಳವರೆಗೆ- ಚರ್ಚೆಯ ಕೇಂದ್ರದಲ್ಲಿ ಕೆಂಪು ಬಣ್ಣದ ಆಹಾರ ಬೆಳೆ ಇರುತ್ತಿತ್ತು. ಮಾರುಕಟ್ಟೆಯಲ್ಲಿ ಟೊಮೊಟೊ ಬೆಲೆ ಶೇ. 700 ಪಟ್ಟು ಹೆಚ್ಚಾಗಿದೆ. ಇದು ಸಾಮಾನ್ಯವಾಗಿ ಪ್ರತಿ ವರ್ಷ ಈ ಹೊತ್ತಿನಲ್ಲಿ ಏರಿಕೆಯಾಗುತ್ತಿದ್ದ ಬೆಲೆಗೆ ಹೋಲಿಸಿದರೆ ನೂರಾಟು ಪಟ್ಟು ಹೆಚ್ಚಿದೆ. ಸದ್ಯ ದೇಶಾದ್ಯಂತ ಒಂದು ಕೆ.ಜಿ ಟೊಮೊಟೊ 80- 120 ರೂಗೆ ಬಿಕರಿಯಾಗುತ್ತಿದೆ. ಯಾಕೆ? ಟೊಮೊಟೊ ಬೆಲೆ ಹೆಚ್ಚಳಕ್ಕೆ ಕಾರಣಗಳೇನಿವೆ? ಇದಕ್ಕಾಗಿ ಸರಕಾರ ಏನು ಮಾಡುತ್ತಿದೆ?..

  July 20, 2017
  ...
  roopa-prison-kranti
  ರಾಜ್ಯ

  ಜೈಲು ಸುಧಾರಣೆ ಮರೀಚಿಕೆ: ಕಾರಾಗೃಹ ಕ್ರಾಂತಿಯ ಸ್ವ’ರೂಪ’ ಮಕಾಡೆ ಮಲಗಿದ್ದು ಯಾಕೆ?

  ಆಗಸ್ಟ್‌ 31, 2013; ಶನಿವಾರ. ಬೆಂಗಳೂರಿನ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿಯೊಬ್ಬರು ನಿವೃತ್ತರಾದ ದಿನ. ಅವತ್ತು ಜೈಲಿನ ಒಳಗಡೆಯೇ ‘ಪಾರ್ಟಿ’ಯೊಂದು ತಡರಾತ್ರಿವರೆಗೂ ನಡೆದಿತ್ತು. ಸಿಬ್ಬಂದಿಗಳು, ಕೈದಿಗಳು ಬೀಳ್ಕೊಡಿಗೆ ಮುಗಿಸಿ ತಮ್ಮ ಮನೆಗಳಿಗೆ, ಬ್ಯಾರಕ್‌ಗಳಿಗೆ ತೆರಳಿದ ನಂತರ ಸೈಕೋ ಕಿಲ್ಲರ್‌ ಎಂಬ ಆರೋಪಕ್ಕೆ ಗುರಿಯಾಗಿದ್ದ ಜೈ ಶಂಕರ್ ಜೈಲಿನಿಂದ ತಪ್ಪಿಸಿಕೊಂಡಿದ್ದ. ಮಾರನೇ ದಿನ ಸೆ. 1ರಂದು ಅದು ರಾಜ್ಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅವತ್ತಿನ ಸರಕಾರಕ್ಕೆ ಭಾರಿ ಮುಖಭಂಗವನ್ನೂ ಉಂಟು ಮಾಡಿತ್ತು. ಜತೆಗೆ, ಜೈಲಿನಲ್ಲಿ..

  July 18, 2017
  ...
  rss-pradeep-int-final
  ರಾಜ್ಯ

  ಆರ್‌ಎಸ್‌ಎಸ್‌ ಸಂದರ್ಶನ: ‘ಗೋ ರಕ್ಷಣೆಗೆ ದಾಳಿಗಳು; ಆತ್ಮ ರಕ್ಷಣೆಗಾಗಿ ನಡೆಯುತ್ತಿರುವ ಘಟನೆಗಳು’

  “ಗೋ ರಕ್ಷಣೆ ಮಾಡುವವರು ಎಲ್ಲರೂ ಆರ್‌ಎಸ್‌ಎಸ್‌ ಎಂಬ ಗ್ರಹಿಕೆ ಇದೆ. ಭಾರತದಲ್ಲಿ ಇವತ್ತು ಆರ್‌ಎಸ್‌ಎಸ್‌ ಹೊರತಾಗಿಯೂ ಗೋವಿನ ರಕ್ಷಣೆ ಮಾಡುವವರು ಇದ್ದಾರೆ. ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕ್ರಿಮಿನಲ್ ಚಟುವಟಿಕೆಗಳಿಗೂ, ಆರ್‌ಎಸ್‌ಎಸ್‌ಗೂ ಸಂಬಂಧ ಇಲ್ಲ. ಗೋ ರಕ್ಷಣೆ ಹೆಸರಿನಲ್ಲಿ ಹೊರಗಡೆ ನಡೆಯುತ್ತಿರುವುದು ‘ಆತ್ಮರಕ್ಷಣೆ’ಗಾಗಿ ನಡೆಯುತ್ತಿರುವ ಘಟನೆಗಳು…” ಇವತ್ತು ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಮುಸ್ಲಿಂರ ಮೇಲಿನ ಹಲ್ಲೆಗಳು, ಸಾಮೂಹಿಕ ದಾಳಿಗಳು, ಕೊಲೆಗಳ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)..

  July 15, 2017
  ...
  PARAPPANA AGRAHARA
  ರಾಜ್ಯ

  ಶಶಿಕಲಾ, ತೆಲಗಿ ಆಚೆಗೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ ರೂಪ ಪತ್ರ

  ರಾಜ್ಯದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಂತರಿಕ ಪರಿಸ್ಥಿತಿಯ ಕುರಿತು ಡಿಐಜಿ ರೂಪಾ ತಮ್ಮ ಮೇಲಾಧಿಕಾರಿಗೆ ಬರೆದ ಪತ್ರ ಈಗ ಚರ್ಚೆಗೆ ಗ್ರಾಸವಾಗಿದೆ. ಪತ್ರದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕರೀಂ ಲಾಲ್ ತೆಲಗಿ ಹೆಸರೂ ಇರುವುದರಿಂದ ಸುದ್ದಿಗೆ ರಾಷ್ಟ್ರೀಯ ಆಯಾಮಯೂ ದೊರಕಿದೆ. ಒಟ್ಟು ನಾಲ್ಕು ಪುಟಗಳ ಪತ್ರದ ಜತೆಗೆ 6 ಪುಟಗಳ ಜೈಲಿನ ವೈದ್ಯಾಧಿಕಾರಿಗಳ ಪತ್ರವನ್ನೂ ಮೇಲಾಧಿಕಾರಿಗೆ ಸಲ್ಲಿಸಿದ್ದಾರೆ ಡಿಐಜಿ ರೂಪಾ. ವಿಶೇಷ ಅಂದರೆ ಪತ್ರದಲ್ಲಿ..

  July 13, 2017
  ...
  kalaburagi-daal-mill-gst
  ರಾಜ್ಯ

  ಜಿಎಸ್‌ಟಿ ಹೊಡೆತಕ್ಕೆ ‘ಬ್ರಾಂಡೆಡ್‌ ಗರಿ’ ಕಳೆದುಕೊಂಡ ಕಲಬುರ್ಗಿಯ ಗುಣಮಟ್ಟದ ತೊಗರಿ ಬೇಳೆ

  ಕೇಂದ್ರ ಸರಕಾರ ‘ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತಂದ ನಂತರ ನಿರೀಕ್ಷೆಯಂತೆಯೇ ತಳಮಟ್ಟದ ತಲ್ಲಣಗಳು ಕಾಣಿಸಿಕೊಂಡಿವೆ. ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಗುಜರಾತ್‌ನ ಸೂರತ್‌ನಲ್ಲಿ ವರ್ತಕರು ಪ್ರತಿಭಟನೆ ನಡೆಸುತ್ತಿದ್ದರೆ, ರಾಜ್ಯದ ಕಲಬುರ್ಗಿ ಜಿಲ್ಲೆಯ ತೊಗರಿಬೇಳೆ ವರ್ತಕರು ತಮ್ಮ ‘ಟ್ರೇಡ್‌ ಮಾರ್ಕ್‌’ ಪರವಾನಿಗೆಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಇಲ್ಲಿನ ತಳಮಟ್ಟದಲ್ಲಿ ಸಿಗುತ್ತಿರುವ ಮಾಹಿತಿ ಪ್ರಕಾರ, ಈಗಾಗಲೇ ಶೇ. 95ರಷ್ಟು ವರ್ತಕರು ‘ಬ್ರಾಂಡೆಡ್‌’ ತೊಗರಿ ಬೇಳೆ ಮಾರಾಟಕ್ಕೆ ಪಡೆದುಕೊಂಡಿದ್ದ ಪರವಾನಿಗೆಯನ್ನು ಹಿಂಪಡೆದಿದ್ದಾರೆ. ಮುಂದಿನ ಒಂದು ವಾರದಲ್ಲಿ ಕಲಬುರ್ಗಿಯಲ್ಲಿರುವ ಸುಮಾರು..

  July 12, 2017
  ...
  bgs-mlc-final
  ರಾಜ್ಯ

  ಕೊನೆಗೂ, ಮೃತದೇಹ ಆಸ್ಪತ್ರೆಯಿಂದ ಹೊರಬಂದಾಗ ಮಡುಗಟ್ಟಿದ ದುಃಖದ ಕಟ್ಟೆ ಒಡೆಯಿತು…

  “ಬಡವರಿಗೆ ಕಾಯಿಲೆ ಬರಬಾರದು. ಬಂದರೂ ಸಾವು ಬರಬಾರದು. ಸತ್ತರೂ ಇಂತಹ ಆಸ್ಪತ್ರೆಗಳಲ್ಲಿ ಸಾಯಬಾರದು…” ಹೀಗಂತ ಹೇಳುತ್ತಲೇ ಕಣ್ಣಿನಲ್ಲಿ ನೀರು ತುಂಬಿಕೊಳ್ಳಲು ಪ್ರಯತ್ನಿಸಿದರು ಕಂಪ್ಲಿ ಮೂಲದ ಮೆಹಬೂಬ್. ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಕಚೇರಿಯ ಮುಂದೆ ನಿಂತಿದ್ದ ಅವರಲ್ಲಿ ಭಾವನೆಗಳೇ ಸತ್ತು ಹೋದಂತಿತ್ತು.  ಸತತ 40ಕ್ಕೂ ಹೆಚ್ಚು ಗಂಟೆಗಳ ಕಾಲ ಆಸ್ಪತ್ರೆ, ಪೊಲೀಸ್‌ ಠಾಣೆ ಸುತ್ತಾಟದಲ್ಲಿ ಮೃತಪಟ್ಟ ಪತ್ನಿಗಾಗಿ ಕಣ್ಣೀರು ಸುರಿಸಲು ಅವರ ಬಳಿ ಸಮಯ ಕೂಡ ಇರಲಿಲ್ಲ; ವಾತಾವರಣವೂ ಇರಲಿಲ್ಲ. ಆದರೂ..

  July 10, 2017
  ...
  bgs-global-hospital-bangalore-1
  ರಾಜ್ಯ

  ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ತಾಯಿ ಶವಕ್ಕಾಗಿ 36 ಗಂಟೆಗಳಿಂದ ಕಾಯುತ್ತಿದೆ ಕಂಪ್ಲಿಯ ಬಡ ಕುಟುಂಬ

  ಕ್ಯಾನ್ಸರ್‌ ಕಾಯಿಲೆಯಿಂದ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಪಡೆಯಲು ಕಂಪ್ಲಿ ಮೂಲದ ಕುಟುಂಬವೊಂದು ಸುಮಾರು 36 ಗಂಟೆಗಳಿಂದ ಪರದಾಡುತ್ತಿರುವ ಸನ್ನಿವೇಶ ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ಈಗ ಜಾರಿಯಲ್ಲಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕ್ಯಾನ್ಸರ್‌ನಂತಹ ಕಾಯಿಲೆಗಳ ಚಿಕಿತ್ಸೆಗಾಗಿ ಸರಕಾರದ ವಿಮಾ ಯೋಜನೆ ಧನ ಸಹಾಯ ನೀಡುತ್ತದೆ. ಖಾಸಗಿ ಆಸ್ಪತ್ರೆಗಳ ಮೂಲಕ ಸರಕಾರದ ವಿಮೆ ಹಣದಲ್ಲಿ ಆರೋಗ್ಯ ಸೇವೆಯನ್ನು ಈ ಕುಟುಂಬಗಳು ಪಡೆದುಕೊಳ್ಳುತ್ತವೆ. ಆದರೆ ಅಂತಿಮ ಹಂತದಲ್ಲಿ ಆಸ್ಪತ್ರೆಗಳು ‘ವಿನಾಕಾರಣ’ ಸೃಷ್ಟಿಸುವ ಸನ್ನಿವೇಶಗಳು ಹೇಗೆ ಶವವನ್ನು ಪಡೆಯಲು ಒಂದೂವರೆ ದಿನಗಳಿಂದ..

  July 9, 2017
  ...
  metro-maramari-final
  ರಾಜ್ಯ

  ‘ನಮ್ಮ ಮೆಟ್ರೊ’ ಸ್ಥಗಿತ: ಬಿಎಂಆರ್‌ಸಿಎಲ್‌ ಸಿಬ್ಬಂದಿ ಕಾನೂನನ್ನು ಏಕೆ ಕೈಗೆತ್ತಿಕೊಂಡರು?

  ಮೊನ್ನೆಮೊನ್ನೆಯಷ್ಟೆ ಮೊದಲ ಹಂತದ ಅದ್ಧೂರಿ ಉದ್ಘಾಟನೆಗೆ ಸಾಕ್ಷಿಯಾಗಿದ್ದ, ಅನಾವಶ್ಯಕವಾಗಿ ಹಿಂದಿ ಫಲಕಗಳನ್ನು ಬಳಸಿ ಸುದ್ದಿಯಲ್ಲಿದ್ದ ‘ನಮ್ಮ ಮೆಟ್ರೊ’ದ ರೈಲುಗಳ ಸೇವೆ ಶುಕ್ರವಾರ ಮುಂಜಾನೆ ಸ್ಥಗಿತಗೊಂಡಿದೆ. ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ನಡೆದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ಹಾಗೂ ಮೆಟ್ರೊ ಸಿಬ್ಬಂದಿ ನಡುವಿನ ಮಾರಾಮಾರಿ ಹಾಗೂ ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ನಿರ್ಲಕ್ಷ್ಯತನವನ್ನು ವಿರೋಧಿಸಿ ಸಿಬ್ಬಂದಿಗಳು ರೈಲು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಮೇಲ್ನೋಟಕ್ಕೆ ಇದು ಕೆಎಸ್ಐಎಸ್‌ಎಫ್‌ ಹಾಗೂ ಮೆಟ್ರೊ ಸಿಬ್ಬಂದಿಗಳ..

  July 7, 2017
  ...
  lecturers-apt-final
  ರಾಜ್ಯ

  ‘ನಿಧಾನ ಸೌಧ’ಕ್ಕೆ ತಲುಪಿದ ಅಂತಿಮ ಪಟ್ಟಿ: ಸಹಾಯಕ ಪ್ರಾಧ್ಯಾಪಕರ ನೇಮಕ ಯಾವಾಗ?

  “ನಮ್ಮ ಕಡೆಯಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಸಂಬಂಧ ದಾಖಲೆಗಳ ಪರಿಶೀಲನೆ ನಡೆದು ಸರಕಾರಕ್ಕೆ ಕಳುಹಿಸಿದ್ದೇವೆ. ಇನ್ನೊಂದು ವಾರದೊಳಗೆ ಕೌನ್ಸಿಲಿಂಗ್ ನಡೆಸಲು ದಿನಾಂಕ ನಿಗದಿಯಾಗಲಿದೆ,” ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಅಜಯ್‌ ನಾಗಭೂಷಣ್ ತಿಳಿದರು. ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಸುಮಾರು 2 ಸಾವಿರ ಉದ್ಯೋಗ ಆಕಾಂಕ್ಷಿಗಳು ಮತ್ತೊಮ್ಮೆ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ‘ಸಮಾಚಾರ’ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಿದ ಅವರು, “ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ. ಇನ್ನೂ 213 ಅಭ್ಯರ್ಥಿಗಳಿಂದ ಪೂರ್ಣ ಪ್ರಮಾಣದ ದಾಖಲೆಗಳನ್ನು ನಿರೀಕ್ಷೆ..

  July 5, 2017
  ...
  nijagunananda-swamy-final
  ರಾಜ್ಯ

  ಬ್ರಾಹ್ಮಣ್ಯದಿಂದ ಬಸವತತ್ವದೆಡೆಗೆ: ‘ನಿಷ್ಠೂರವಾದಿ ನಿಜಗುಣಾನಂದ’ ಸ್ವಾಮಿ ನಿಜಕ್ಕೂ ಯಾರು?

  ನೀವು ದೇವರನ್ನು ಪೂಜೆ ಮಾಡುವ ಮೊದಲು; ತಂದೆ ತಾಯಿಗಳನ್ನು ಪೂಜೆ ಮಾಡಿ… ಗುರು ಹೇಳುವ ಎಲ್ಲಾ ಮಾತುಗಳನ್ನು ನಂಬಬೇಡಿ… ಮೂಢ ನಂಬಿಕೆಗಳನ್ನು ಆಹಾರ ಮಾಡಿಕೊಂಡ ಪಂಚಾಂಗ ಹೇಳುವವರನ್ನು ವಿರೋಧಿಸಿ, ಅಪ್ಲಿಕೇಶನ್ ಹಾಕಿಕೊಂಡು ಯಾರೂ ಜಾತಿಯಲ್ಲಿ ಹುಟ್ಟುವುದಿಲ್ಲ; ಅಷ್ಟಕ್ಕೂ ಜಾತಿ ಪದ್ಧತಿ ಎಂಬುದೇ ಇಲ್ಲ… ಜನಿವಾರ ಹಾಕಿದಾಕ್ಷಣ ಬ್ರಾಹ್ಮಣ ಆಗುವುದಿಲ್ಲ…ಈ ದೇಶದ ಸಮಸ್ಯೆಗಳಿಗೆ ತುಪ್ಪ ತಿನ್ನುವವರೇ ಕಾರಣ…ನನ್ನನ್ನು ಸ್ವಾಮಿ ಎಂದು ಯಾರೂ ಕರೆಯುವುದಿಲ್ಲ; ಯಾಕೆಂದರೆ ನಾನು ಗುಡಿ- ಗುಂಡಾರ, ಪಾದಪೂಜೆಗಳನ್ನು ನಂಬುವವನಲ್ಲ… ವಯಸ್ಸು 60ರ ಸಮೀಪದಲ್ಲಿದ್ದೂ ಆರೋಗ್ಯಪೂರ್ಣವಾಗಿರುವ ದೇಹ,..

  July 3, 2017

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top