An unconventional News Portal.

    ...
    man-booker-winner-1
    ವಿದೇಶ

    ‘ದಿ ವೆಜಿಟೇರಿಯನ್’: ಭಿನ್ನ ಆಲೋಚನೆಯ ಕಾದಂಬರಿಗೆ ಮ್ಯಾನ್ ಬೂಕರ್ ಪ್ರಶಸ್ತಿ ಗರಿ!

    ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ‘ಮ್ಯಾನ್ ಬೂಕರ್’ ಈ ಬಾರಿ ದಕ್ಷಿಣ ಕೋರಿಯಾದ ಲೇಖಕಿ ಹಾನ್ ಕಾನ್ ಪಾಲಾಗಿದೆ. ಸುಮಾರು 72 ಸಾವಿರ ಡಾಲರ್ ಮೌಲ್ಯದ ಪ್ರಶಸ್ತಿಗೆ ಅವರ ಇಂಗ್ಲಿಷ್ಗೆ ತರ್ಜುಮೆಗೊಂಡ ‘ದಿ ವೆಜಿಟೇರಿಯನ್’ ಕೃತಿ ಪಾತ್ರವಾಗಿದೆ. ಕೃತಿಯ ಅನುವಾದಕಿ ಜತೆ ಅವರು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. 45ರ ಹರೆಯದ ಹಾನ್ ಕಾನ್ ಕ್ರೀಯಾಶೀಲ ಬರವಣಿಗೆಯನ್ನು ಪಾಠ ಮಾಡುವ ಶಿಕ್ಷಕಿಯಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಇವರ ಬರಹಗಳಿಗೆ ದಕ್ಷಿಣ ಕೋರಿಯಾದಲ್ಲಿ ದೊಡ್ಡ ಓದುಗ ಬಳಗವಿದೆ. “ನನಗೆ ಸಿಕ್ಕ ಬಹುದೊಡ್ಡ..

    May 17, 2016
    ...
    london-mayor-sadiq-khan
    ವಿದೇಶ

    ಥೇಮ್ಸ್ ದಂಡೆಯ ನಗರದಲ್ಲಿ ರಾಜಕೀಯ ಪಲ್ಲಟ: ಬಸ್ ಡ್ರೈವರ್ ಮಗ ಈಗ ಮೇಯರ್!

    ಜಗತ್ತಿನ ಅತೀ ದೊಡ್ಡ ಬಜೆಟ್ ಹೊಂದಿರುವ ನಗರ ಲಂಡನ್’ನ ನೂತನ ಮೇಯರ್ ಆಗಿ ಪಾಕಿಸ್ತಾನ ಮೂಲದ ಸಾದಿಕ್ ಖಾನ್ ಅಧಿಕಾರ ವಹಿಸಿಕೊಂಡಿದ್ದಾರೆ. ಒಟ್ಟು 1700 ಕೋಟಿ ಬಜೆಟ್ ಹೊಂಡಿರುವ ಲಂಡನ್ ನಗರಾಡಳಿತದ ಚುಕ್ಕಾಣಿಯನ್ನು ಬಸ್ ಡ್ರೈವರ್ ಮಗ, ಭಿನ್ನ ಹಿನ್ನೆಲೆಯಿಂದ ಬಂದಿರುವ ಖಾನ್ ಹಿಡಿದಿರುವುದು ಜಾಗತಿಕ ರಾಜಕೀಯ ವಿಸ್ಮಯಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ. “ತನ್ನ ರಾಜಕೀಯ ಬೆಳವಣಿಗಾಗಿ, ಎಲ್ಲಾ ರೀತಿಯ ರಾಜಕೀಯ ತಂತ್ರಗಾರಿಗಳನ್ನು ಹೆಣೆದ ಆರೋಪವೂ ಸಾದಿಕ್ ಖಾನ್ ಮೇಲಿದೆ. ಮುಂದಿನ ಕೆಲವು ದಿನಗಳಲ್ಲಿ ಅವರ ಆಡಳಿತದ ಸ್ವರೂಪ ಜನರಿಗೆ ಅರ್ಥವಾಗಲಿದೆ,”..

    May 7, 2016
    ...
    jandj-cancer-1
    ವಿದೇಶ

    ‘ಜಾನ್ಸನ್ ಬೇಬಿ ಪೌಡರ್’ನಿಂದ ಕ್ಯಾನ್ಸರ್: ಕಂಪನಿಗೆ 7.2 ಕೋಟಿ ಡಾಲರ್ ದಂಡ!

    ಮಕ್ಕಳ ಸೌಂದರ್ಯ ವರ್ಧಕ ಉತ್ಪಾದನೆಯ ಮೂಲಕ ವಿಶ್ವದ ಮನೆಮಾತಾಗಿರುವ ‘ಜಾನ್ಸನ್ ಅಂಡ್ ಜಾನ್ಸನ್’ ಸಂಸ್ಥೆಗೆ ಅಮೆರಿಕಾದ ನ್ಯಾಯಾಲಯವೊಂದು 7. 20 ಕೋಟಿ ಡಾಲರ್ ದಂಡ ವಿಧಿಸಿ, ಸೋಮವಾರ ಸಂಜೆ ತೀರ್ಪು ಹೊರಡಿಸಿದೆ. ಅಲಬಾಮ ಮೂಲದ ಮಹಿಳೆಯೊಬ್ಬರು ಸದರಿ ಸಂಸ್ಥೆಯ ಬೇಬಿ ಪೌಡರ್ ಹಾಗೂ ‘ಶವರ್ ಎಂಡ್ ಶವರ್’ ಶಾಂಪುಗಳ ಬಳಕೆಯಿಂದ ಗರ್ಭಕೋಶದ ಕ್ಯಾನ್ಸರ್ಗೆ ತುತ್ತಾಗಿದ್ದರು. ಈ ಕುರಿತು ಮಿಸೋರಿ ರಾಜ್ಯ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಸೋಮವಾರ ಸಂಜೆ ವೇಳೆಗೆ, ಪ್ರಕರಣದ ಕುರಿತು ತೀರ್ಪು ನೀಡಿದ ಜ್ಯೂರಿಗಳು, ದೂರು ನೀಡಿದ ಜಾಕ್ವೆಲಿನ್..

    May 3, 2016
    ...
    dawood-1
    ವಿದೇಶ

    ‘ಮೋಸ್ಟ್ ವಾಂಟೆಡ್’ ದಾವೂದ್ ಕಾಲಿಗೆ ಗ್ಯಾಂಗ್ರಿನ್: ಕರಾಚಿಯಲ್ಲಿ ಶಸ್ತ್ರ ಚಿಕಿತ್ಸೆ?

    ಭಾರತದ ‘ಮೋಸ್ಟ್ ವಾಂಟೆಡ್’ ಕ್ರಿಮಿನಲ್, ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಆರೋಗ್ಯದ ಸುತ್ತ ಇದೀಗ ಗುಲ್ಲೆದ್ದಿದೆ. “ಕರಾಚಿಯಲ್ಲಿರುವ ದಾವೂದ್ ಸ್ವಗೃಹದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನಿಗೆ ಕಾಲಿನ ಗಾಯ, ಗ್ಯಾಂಗ್ರಿನ್ ಆಗಿ ಪರಿವರ್ತನೆಗೊಂಡಿದೆ. ಲಿಯಾಖತ್ ರಾಷ್ಟ್ರೀಯ ಆಸ್ಪತ್ರೆ ಹಾಗೂ ಮಿಲಿಟರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ,” ಎಂದು ಸಿಎನ್ಎನ್ ನೂಸ್-18 ವರದಿ ಮಾಡಿದೆ. ದಾವೂದ್ ರಕ್ತದ ಒತ್ತಡ ಹೆಚ್ಚಾಗಿದ್ದು ಸಕ್ಕರೆ ಕಾಯಿಲೆಯೂ ಸೇರಿಕೊಂಡಿದೆ. ಹೀಗಾಗಿ ಕಾಲಿನಲ್ಲಿ ಗ್ಯಾಂಗ್ರಿನ್ ಆಗಿದ್ದು, ಆ ಭಾಗವನ್ನು ತೆಗೆದು ಹಾಕಬೇಕು ಎಂಬ ವೈದ್ಯರ ಹೇಳಿಕೆಯೂ..

    April 26, 2016
    ...
    ಮೆಕ್ಸಿಕೋ ಅಮೆರಿಕಾ ನಡುವೆ ಡ್ರಗ್ ಕಾರ್ಟಲ್ಗಳು ಕೊರೆದ ಸುಂಗರ ಮಾರ್ಗ.
    ವಿದೇಶ

    ಇದು ರಂಗೋಲಿ ಕೆಳಗಿದ್ದ ಸುರಂಗ: ಡ್ರಗ್ ಮಾಫಿಯಾ ವಿರುದ್ಧ ಯುಎಸ್ ಯುದ್ಧ

    ಅಮೆರಿಕಾ- ಮೆಕ್ಸಿಕೋ ಗಡಿಭಾಗದಲ್ಲಿ ಮತ್ತೊಂದು ಸುರಂಗ ಮಾರ್ಗವನ್ನು ಯುಎಸ್ ಅಧಿಕಾರಿಗಳು ಬುಧವಾರ ಪತ್ತೆಹಚ್ಚಿದ್ದಾರೆ. ರೈಲ್ವೆ ಹಳಿಗಳನ್ನು ಅಳಡಿಸಿದ್ದ ಈ ಸುರಂಗವು ಮೆಕ್ಸಿಕೋದಿಂದ ಸ್ಯಾಂಡಿಯಾಗೋ ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತಿತ್ತು. 874 ಮೀಟರ್ ಉದ್ದದ ಸುರಂಗದಲ್ಲಿ ಈವರೆಗೆ ನೂರಾರು ಟನ್ ಕೊಕೇನ್ ಹಾಗೂ ಮರಿಜುವಾನವನ್ನು ಸಾಗಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸುರಂಗದ ಕೊನೆ ಮುಟ್ಟುವ ಸ್ಯಾಂಡಿಯಾಗೋ ನಗರದ ಗೋಡೋನ್ ಒಂದಕ್ಕೆ ಲಿಫ್ಟ್ ಕೂಡ ಅಳವಡಿಸಲಾಗಿತ್ತು. 2006ರಿಂದ ಈಚೆಗೆ ಪತ್ತೆಯಾದ 13ನೇ ಸುರಂಗ ಮಾರ್ಗ ಇದಾಗಿದೆ. ಸುರಂಗ ಮಾರ್ಗವು 3..

    April 21, 2016
    ...
    opec-oil-petrol-prices
    ವಿದೇಶ

    ಕಚ್ಚಾ ತೈಲ ದರ ಇನ್ನಷ್ಟು ಇಳಿಕೆ ಸಾಧ್ಯತೆ: ನಿಜಕ್ಕೂ ಪೆಟ್ರೋಲ್ ಬೆಲೆ ಎಷ್ಟಾಗಬೇಕು ಗೊತ್ತಾ?

    ಕತಾರ್ ರಾಜಧಾನಿ ದೋಹಾದಲ್ಲಿ ಭಾನುವಾರ ನಡೆದ ಒಪೆಕ್ (ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ) ಮಾತುಕತೆ ಮುರಿದು ಬಿದ್ದಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ಗೆ ಇನ್ನಷ್ಟು ಕುಸಿಯುವ ಲಕ್ಷಣಗಳು ಗೋಚರಿಸಿವೆ. ಕಚ್ಚಾ ತೈಲದ ಉತ್ಪಾದನೆಯ ಮೇಲೆ ಕಡಿವಾಣ ಹಾಕುವ ಕುರಿತು ಕಳೆದ ಹಲವು ತಿಂಗಳುಗಳಿಂದ ಕಸರತ್ತುಗಳು ಮುಂದುವರಿದಿವೆ. ಅಣ್ವಸ್ತ್ರ ನಿಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇರಾನ್ ಕಚ್ಚಾ ತೈಲ ಉತ್ಪಾದನೆಗೆ ಇದ್ದ ಕಡಿವಾಣಗಳು ಕಳಚಿಹೋಗಿವೆ. ಇದೇ ವೇಳೆ, ಸೌದಿ..

    April 18, 2016
    ...
    gallery-1453808217-mark-max-zuckerberg-swim
    ವಿದೇಶ

    ಹೆಸರಲ್ಲೇನಿದೆ ಎಂದುಕೊಂಡಿದ್ದ ಝುಕರ್ ಬರ್ಗ್ ತೆತ್ತ ದಂಡ ಹಾಗೂ ಅದರಾಚೆಯ ಸತ್ಯಗಳು!

    ಅಂತರ್ಜಾಲ ಬೆಳೆದಂತೆ ಹೊಸ ಹೊಸ ಉದ್ಯಮಗಳು ಸೃಷ್ಟಿಯಾಗುತ್ತಿವೆ. ಆನ್ಲೈನ್ ಯುಗದಲ್ಲಿ ಪುಸ್ತಕಗಳಿಂದ ಶುರುಮಾಡಿ, ಸೊಪ್ಪು ತರಕಾರಿ, ಆಹಾರವನ್ನೂ ನಿಮ್ಮ ಮನೆ ಬಾಗಿಲಿಗೆ ತಂದು ಕೊಡುವ ಸಾಧ್ಯತೆಗಳೇ ಇಂದು ದೊಡ್ಡ ಮಟ್ಟದ ವಹಿವಾಟು ನಡೆಸು ಕ್ಷೇತ್ರಗಳಾಗಿ ಪರಿವರ್ತನೆಗೊಂಡಿವೆ. ಈ ಸಾಲಿನಲ್ಲಿ ‘ಡೊಮೈನ್’ ಮಾರಾಟ ಕೂಡ ಸೇರ್ಪಡೆಗೊಂಡಿದೆ. ಸಾಮಾನ್ಯವಾಗಿ ಈ ‘ಡೊಮೈನ್’ ಎಂದರೆ ಹೆಚ್ಚಿನ ಜನರಿಗೆ ಗೊತ್ತಾಗುವುದಿಲ್ಲ. ಅದನ್ನೇ ವೆಬ್ಸೈಟ್ ಹೆಸರು ಎಂದರೆ ನಿಮಗೆ ಸುಲಭವಾಗಿ ಗೊತ್ತಾಗುತ್ತದೆ. ನೀವು ವೆಬ್ಸೈಟ್ ಶುರು ಮಾಡಬೇಕು ಎಂದರೆ ಮೊದಲು ಇರುವ ಸವಾಲು ನಿಮ್ಮ ಬಯಕೆಯ ಹೆಸರನ್ನು ನೋಂದಣಿ..

    April 17, 2016
    ...
    us-report-human-rights
    ವಿದೇಶ

    ಆರಕ್ಷಕರಿಂದ ಮಾನವ ಹಕ್ಕುಗಳ ದಮನ: ಅಮೆರಿಕಾ ವರದಿಯಲ್ಲಿ ಗುಜರಾತ್ ಪ್ರಸ್ತಾಪ

    ಪೊಲೀಸರು ಹಾಗೂ ಸೈನಿಕರ ದೌರ್ಜನ್ಯದಿಂದ ಭಾರತದಲ್ಲಿ ಮಾನವ ಹಕ್ಕುಗಳ ದಮನವಾಗುತ್ತಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಗಂಭೀರ ಆರೋಪವನ್ನು ಮಾಡಿದೆ. “ಕಾನೂನು ಬಾಹಿರ ಕೊಲೆಗಳು, ಥಳಿಸುವುದು, ಅತ್ಯಾಚಾರ ಹಾಗೂ ಭ್ರಷ್ಟಾಚಾರಗಳು ಭಾರತದ ಸೇನೆ ಹಾಗೂ ಪೊಲೀಸರ ಕಾರ್ಯಾಚರಣೆಯ ಭಾಗವಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಮತ್ತು ಮುಡಕಟ್ಟು ಜನರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ,” ಎಂದು 2015ರ ಮಾನವ ಹಕ್ಕುಗಳ ಕುರಿತಾದ ವಾರ್ಷಿಕ ವರದಿಯಲ್ಲಿ ಭಾರತದ ಪರಿಸ್ಥಿತಿಯನ್ನು ಪ್ರಸ್ತಾಪಿಸಲಾಗಿದೆ. ವಾಷಿಂಗ್ಟನ್ನಲ್ಲಿರುವ ಸ್ಟೇಟ್ ಡಿಪಾರ್ಟ್ಮೆಂಟ್..

    April 14, 2016
    ...
    boko haram-child-bombers
    ವಿದೇಶ

    ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹೆಣ್ಣು ಮಕ್ಕಳು: ‘ಹರಾಮಿ’ ಆಚರಣೆ ವರದಿಯಲ್ಲಿ ಬಹಿರಂಗ

    ಕಳೆದ ಒಂದುವರೆ ವರ್ಷಗಳಲ್ಲಿ ನೈಜೀರಿಯಾ ಮೂಲದ ಮುಸ್ಲಿಂ ಭಯೋತ್ಪಾದಕ ಸಂಘಟನೆ ‘ಬೋಕೊ ಹರಾಮ್’ ಮಕ್ಕಳನ್ನು ಆತ್ಮಹತ್ಯಾ ಬಾಂಬ್ ದಾಳಿಗೆ ಬಳಸಿಕೊಳ್ಳುತ್ತಿರುವ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ನೈಜೀರಿಯಾದ ಚಿಕೋಬ್ ಎಂಬಲ್ಲಿ ವಸತಿ ಶಾಲೆಯಿಂದ ಸುಮಾರು 200 ಹೆಣ್ಣು ಮಕ್ಕಳನ್ನು ಬೋಕೊ ಹರಾಮ್ ಸಂಘಟನೆ ಅಪಹರಣ ನಡೆಸಿದ ಘಟನೆಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವಿಶ್ವಸಂಸ್ಥೆ ‘ಬಿಯಾಂಡ್ ಚಿಬೋಕ್’ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ 2014 ಹಾಗೂ 2015ರಲ್ಲಿ ಬೋಕೊ ಹರಾಮ್ ಸಂಘಟನೆ ನಡೆಸಿದ ಆತ್ಮಹತ್ಯಾ ಬಾಂಬ್..

    April 13, 2016
    ...
    Red-Sea-Coral-Reef
    ವಿದೇಶ

    ಅರಬರ ಅದ್ದೂರಿಗೆ ಇನ್ನೊಂದು ಸಾಕ್ಷಿ: ‘ಕೆಂಪು ಸಮುದ್ರ’ಕ್ಕೇ ಸೇತುವೆ ನಿರ್ಮಾಣ

    ಏಷಿಯಾ ಹಾಗೂ ಆಫ್ರಿಕಾ ಖಂಡಗಳ ನಡುವೆ ಸಂಪರ್ಕ ಕಲ್ಪಿಸುವ ‘ಕೆಂಪು ಸಮುದ್ರ’ ಅಥವಾ ‘ರೆಡ್ ಸೀ’ಗೆ ಸೇತುವೆ ನಿರ್ಮಿಸುವುದಾಗಿ ಸೌದಿ ಅರೇಬಿಯಾ ದೊರೆ ಸಲ್ಮಾನ್ ಶುಕ್ರವಾರ ಘೋಷಿಸಿದ್ದಾರೆ. ತನ್ನ 5 ದಿನಗಳ ಭೇಟಿಗಾಗಿ ಈಜಿಪ್ಟ್ ದೇಶಕ್ಕೆ ಬಂದಿಳಿದ 80 ವರ್ಷದ ದೊರೆ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್- ಸಿಸಿ ಜತೆಗಿನ ಸ್ನೇಹ ಸಂಬಂಧದ ದ್ಯೋತಕವಾಗಿ ಈ ಬೃಹತ್ ಕಾಮಗಾರಿ ಕೃಗೆತ್ತಿಕೊಳ್ಳುವುದಾಗಿ ತಿಳಿಸಿದರು. 2013ರಿಂದ ಈಜಿಪ್ಟ್ ಒಳಗೆ ನಡೆದ ಆಂತರಿಕ ಬದಲಾವಣೆಗಳಿಗೂ ಮುಂಚಿನಿಂದಲೂ ಸೌದಿ ಉತ್ತಮ ಸಂಬಂಧವನ್ನು..

    April 9, 2016

Top