An unconventional News Portal.

    ...
    Balochistan
    ವಿದೇಶ

    ಪಾಕಿಸ್ತಾನದ ಪಾಲಿನ ‘ಕಾಶ್ಮೀರ’: ಆಝಾದಿ ಘೋಷಣೆ ಮೊಳಗಿಸುತ್ತಿರುವ ಬಲೂಚಿಸ್ತಾನ ನಿಜಕ್ಕೂ ಏನು?

    ಭಾರತಕ್ಕೆ ಕಾಶ್ಮೀರದ ತಲೆನೋವಾದರೆ ಪಾಕಿಸ್ತಾನಕ್ಕೆ ಬಲೂಚಿಸ್ತಾನದ ಚಿಂತೆ. ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರ ಮತ್ತು ಬಲೂಚಿಸ್ತಾನ ಒಂದೇ ನಾಣ್ಯದ ಎರಡು ಮುಖಗಳಂತೆ ಕಾಣಿಸುತ್ತವೆ. ಬಲೂಚಿಸ್ತಾನದ ಬಂಡುಕೋರರು, ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂಬ ಭಾರತದ ಮೇಲಿನ ಆಪಾದನೆಗಳು, ಹಿಂಸಾಚಾರ, ರಕ್ತಪಾತ ಹೀಗೆ ಇಲ್ಲಿನ ಕೊರಕಲು ಬೆಟ್ಟ, ಗುಡ್ಡಗಳಲ್ಲಿ ಹುದುಗಿರುವ ಕತೆಗಳು ನೂರಾರು. ಎಲ್ಲಾ ದೇಶಗಳ ಆಂತರಿಕ ಸಂಘರ್ಷಗಳಂತೆ ಇಲ್ಲೂ ಬಲಿಯಾಗುತ್ತಿರುವವರು ಸಾಮಾನ್ಯ ಜನ. ಅವರ ನೋವು ನರಳಾಟಗಳಿಗೆ ಮಾತ್ರ ಬೆಲೆಯೇ ಇಲ್ಲ. ಇವುಗಳ ಜತೆಗೆ, ಬಲೂಚಿಸ್ತಾನ ಮತ್ತು ಅದು ಸಾಗಿ ಬಂದ..

    August 31, 2016
    ...
    Proxima b
    ವಿದೇಶ

    ಖಗೋಳ ಹುಡುಕಾಟದಲ್ಲಿ ಕುತೂಹಲ ಮೂಡಿಸಿದ ಹೊಸ ಸಂಶೋಧನೆ: ಭೂಮಿಯನ್ನು ಹೋಲುವ ಗ್ರಹ ಪತ್ತೆ!

    ಖಗೋಳ ವಿಜ್ಞಾನಿಗಳು ಭೂಮಿ ರೀತಿಯ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ. ವಿಶೇಷ ಅಂದರೆ ಭೂಮಿಗೆ ತೀರಾ ಸಮೀಪದಲ್ಲಿಯೇ ಈ ಗ್ರಹವಿದೆ. ಈ ಮೂಲಕ ಭೂಮಿ ಹೊರಗಿನ ಜೀವಿಗಳ ಹುಡುಕಾಟದಲ್ಲಿ ಮತ್ತೊಂದು ಕುತೂಹಲದ ಅಧ್ಯಾಯ ತೆರೆದುಕೊಂಡಿದೆ. ಭೂಮಿಯನ್ನು ಹೊರತುಪಡಿಸಿ, ನಮ್ಮಂತೆಯೇ ಇರುವ ಜೀವಿಗಳು ಇದ್ದಾರಾ? ಹೀಗೊಂದು ಪ್ರಶ್ನೆ ಇಟ್ಟುಕೊಂಡು ವಿಜ್ಞಾನಿಗಳ ಬಹಳ ಹಿಂದಿನಿಂದಲೂ ಜೀವಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅತ್ಯಾಧುನಿಕ ಉಪಕರಣ, ದೂರದರ್ಶಕಗಳನ್ನು ಇಟ್ಟುಕೊಂಡು ಆಕಾಶ ಪೂರ್ತಿ ಜಾಲಾಡುತ್ತಲೇ ಇದ್ದಾರೆ. ಇದೀಗ ವಿಜ್ಞಾನಿಗಳು ಭೂಮಿಯಷ್ಟೇ ಗಾತ್ರದ, ಭೂಮಿಯಂತೆಯೇ ಸೂರ್ಯನ ಸುತ್ತಾ ಪರಿಭ್ರಮಿಸುವ ಗ್ರಹವೊಂದನ್ನು ಪತ್ತೆ..

    August 25, 2016
    ...
    Rio Olympics
    ವಿದೇಶ

    ಒಲಂಪಿಕ್ಸ್‌ನಿಂದ ಹೊರಬಿದ್ದ ಘಟಾನುಘಟಿಗಳು: ಭಾರತದ ನೀರಸ ಪ್ರದರ್ಶನಕ್ಕೆ ಚೀನಾ ನೀಡಿದ ಕಾರಣಗಳಿವು!

    ರಿಯೋ ಒಲಂಪಿಕ್ಸ್‌ನಲ್ಲೂ ಭಾರತೀಯರ ನೀರಸ ಪ್ರದರ್ಶನ ಮುಂದುವರಿದಿದೆ. ಗುರುವಾರ ದೇಶದ ಘಟಾನುಘಟಿ ಆಟಗಾರರು ಸೋಲನುಭಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಲಂಪಿಕ್ಸ್‌ನಲ್ಲಿ ಭಾರತದ ನೀರಸ ಪ್ರದರ್ಶನಕ್ಕೆ ಕಾರಣಗಳೇನು ಎಂದು ಚೀನಾದ ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ. ಒಲಂಪಿಕ್ಸ್ನಲ್ಲಿ ಗುರುವಾರ ಭಾರತದ ಪಾಲಿಗೆ ಸೋಲಿನ ದಿನ. ದೇಶದ ಭರವಸೆಯ ಆಟಗಾರರು ತಮ್ಮ ಒಲಂಪಿಕ್ಸ್ ಯಾತ್ರೆ ಮುಗಿಸಿದ್ದಾರೆ. ಮಹಿಳೆಯರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಜ್ವಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ, ಪುರಷರ ಡಬಲ್ಸ್ ಬ್ಯಾಟ್ಮಿಂಟನಿನಲ್ಲಿ ಮನು ಅತ್ರಿ ಮತ್ತು ಬಿ. ಸುಮಿತ್ ರೆಡ್ಡಿ ಸೋಲನುಭವಿಸಿದ್ದಾರೆ. ಪಿ. ವಿ…

    August 11, 2016
    ...
    kabul attack
    ವಿದೇಶ

    ‘ಪ್ರತಿಭಟನೆಯಿಂದ ಮಸಣಕ್ಕೆ’: ಬಾಂಬ್ ದಾಳಿಗೆ ಗುರಿಯಾದ ನತದೃಷ್ಟ ಅಲ್ಪಸಂಖ್ಯಾತರು

    ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಶನಿವಾರ ನಡೆದ ಐಸಿಲ್ ಉಗ್ರರ ದಾಳಿಗೆ 80ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ‘ಹಜಾರಾ’ ಸಮುದಾಯದ ಜನರ ಪ್ರತಿಭಟನೆ ಮೇಲೆ ಈ ದಾಳಿ ನಡೆದಿದೆ. ಭಯೋತ್ಪಾದನೆಯ ಕರಾಳ ಇತಿಹಾಸದಿಂದ ನಿಧಾನಕ್ಕೆ ಹೊರಬರುತ್ತಿದ್ದ ಅಫ್ಘಾನಿಸ್ತಾನದಲ್ಲಿ ಈ ಘಟನೆ ಆಘಾತ ಮೂಡಿಸಿದೆ. ಕಾಬೂಲಿನಲ್ಲಿ ಶನಿವಾರ ಸಾಂಪ್ರದಾಯಿಕ ‘ಹಜಾರಾ’ ಅಲ್ಪಸಂಖ್ಯಾತ ಗುಂಪಿಗೆ ಸೇರಿದ ಜನರು ರಾಜಧಾನಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ತಾವು ವಾಸಿಸುವ ಪ್ರದೇಶದಲ್ಲಿ ಹಾದು ಹೋಗುಲಿರುವ ವಿದ್ಯುತ್ ಲೈನಿನ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು..

    July 24, 2016
    ...
    quandeel balooch
    ವಿದೇಶ

    ಮುಕ್ತ ಸಮಾಜದ ಕನಸು ಕಂಡಿದ್ದ ಈಕೆ ಪಾಲಿಗೆ ಧರ್ಮಾಂಧ ಅಣ್ಣನೇ ಕಂಟಕನಾದ!

    ಪಾಕಿಸ್ತಾನದಲ್ಲಿ ಭಾರಿ ವಿವಾದ ಹುಟ್ಟು ಹಾಕಿದ್ದ ಸೆಲೆಬ್ರಿಟಿ ಕ್ವಾಂಡಿಲ್ ಬಲೋಚ್ ದುರಂತ ಅಂತ್ಯ ಕಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪೋಸ್ಟ್ ಗಳು ಮತ್ತು ಹಸಿಬಿಸಿ ಚಿತ್ರಗಳಿಂದಲೇ ಸುದ್ದಿಯಾಗಿದ್ದ ಆಕೆಯನ್ನು ಶುಕ್ರವಾರ ರಾತ್ರಿ ಕೊಲೆ ಮಾಡಲಾಗಿದೆ. ‘ಕ್ವಾಂಡಿಲ್ ಬಲೋಚ್ರನ್ನು ಆಕೆಯ ಸಹೋದರನೇ ಕೊಲೆ ಮಾಡಿದ್ದಾನೆ. ಇದೊಂದು ‘ಮರ್ಯಾದಾ ಹತ್ಯೆ’ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. 26 ವರ್ಷದ ಕ್ವಾಂಡಿಲ್ ಬಲೋಚ್ ತನ್ನ ಪೋಸ್ಟ್ ಗಳು ಮತ್ತು ಗಮನ ಸೆಳೆಯುವ ಚಿತ್ರಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಿದ್ದಾಕೆ. ಕಳೆದ ಟಿ-20 ವಿಶ್ವಕಪ್ ವೇಳೆ..

    July 16, 2016
    ...
    dallas-1-759
    ವಿದೇಶ

    ಜಗತ್ತಿನ ಬಲಿಷ್ಠ ಪೊಲೀಸ್ ಪಡೆಯ ಸಿಬ್ಬಂದಿಯನ್ನು ಹೊಡೆದುರುಳಿಸಿದಾತ ಮಿಲಿಟರಿ ಸ್ನೈಪರ್ ಆಗಿದ್ದ!

    ಗುರುವಾರ ಅಮೆರಿಕಾ ಪೊಲೀಸರ ಪಾಲಿನ ಕರಾಳ ದಿನ. ವಿಶ್ವದಲ್ಲೇ ಬಲಿಷ್ಠ ಪೊಲೀಸ್ ಪಡೆ ಬೆಚ್ಚಿ ಬಿದ್ದ ದಿನ. ತಮ್ಮನ್ನು ಯಾರು ಮುಟ್ಟಲಾರರು ಎಂದುಕೊಂಡಿದ್ದ ಪೊಲೀಸರಿಗೆ ಒಂದು ಕಡೆ ಅಘಾತ; ಇನ್ನೊಂದು ಕಡೆ ಮರ್ಯಾದೆಯ ಪ್ರಶ್ನೆ. ಗುರುವಾರ ರಾತ್ರಿ ಅಮೆರಿಕಾದ ದಲ್ಲಾಸ್ ನಗರದಲ್ಲಿ ಕರಿಯ ಜನಾಂಗದವರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇತ್ತೀಚೆಗೆ ಕಪ್ಪು ಜನಾಂಗದವರನ್ನು ಪೊಲೀಸರು ಹತ್ಯೆ ಮಾಡಿದ್ದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭ ಸ್ನೈಪರ್ಸ್ಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಟ್ಟು ಐವರು ಪೊಲೀಸರು..

    July 9, 2016
    ...
    Stars and stripes on gun
    ವಿದೇಶ

    ಕೋಟ್ಯಾಂತರ ಡಾಲರ್ ವಹಿವಾಟು ನಡೆಸುವ ‘ಗನ್ ಲಾಬಿ’ ಒಬಾಮ ಕಣ್ಣೀರಿಗೂ ಮಣಿದಿರಲಿಲ್ಲ!

    ಅಮೆರಿಕಾದಲ್ಲಿ ಗುಂಡಿನ ದಾಳಿಗಳು ಹೊಸದಲ್ಲ. ಒಂದಿಲ್ಲೊಂದು ಶೂಟೌಟ್‍ಗಳು ದೇಶದಲ್ಲಿ ದಿನನಿತ್ಯ ಜರುಗುತ್ತಿರುತ್ತವೆ. ಕಳೆದ 5-6 ವರ್ಷಗಳ ಅಂತರದಲ್ಲಿ ಪ್ರತಿ ವರ್ಷ ಮುನ್ನೂರಕ್ಕೂ ಹೆಚ್ಚು ಜನ ಗುಂಡಿನ ದಾಳಿಗೆ ಇಲ್ಲಿ ಸಾವನ್ನಪ್ಪಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು. ಕಳೆದೆರಡು ವರ್ಷಗಳಲ್ಲಿ ಈ ಸಂಖ್ಯೆ 500 ದಾಟಿದ್ದು ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಅದರಲ್ಲೂ ಈ ವರ್ಷ ಸರಣಿ ಗುಂಡಿನ ದಾಳಿಗಳಿಗೆ ಅಮೆರಿಕಾ ಸಾಕ್ಷಿಯಾಗಿದೆ. ಮಾದರಿ ಎನಿಸಿಕೊಂಡ ದೇಶದಲ್ಲಿ ನಡೆಯುತ್ತಿರುವ ಈ ಘಟನೆಗಳು ಅಚ್ಚರಿಗೆ ದೂಡುತ್ತವೆ. ಅಮೆರಿಕಾದಲ್ಲಿ ಕಾನೂನು, ಸುರಕ್ಷತೆ ಬಿಗಿಯಾಗಿದೆ. ಆದರೆ..

    June 15, 2016
    ...
    gautam-adani-1
    ವಿದೇಶ

    ಅದಾನಿ ಕಂಪನಿಗೆ ಪರಿಸರ ಸಂಘಟನೆಗಳ ಲಾತ: 1600 ಕೋಟಿ ಕಲ್ಲಿದ್ದಲ ಗಣಿ ಯೋಜನೆ ಕೈ ಬಿಟ್ಟ ‘ಮೋದಿ ಸ್ನೇಹಿತ’!

    ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಪ್ರದೇಶದಲ್ಲಿ ಉದ್ದೇಶಿತ 1600 ಕೋಟಿ ಕಲ್ಲಿದ್ದಲ ಗಣಿಗಾರಿಕೆ ಯೋಜನೆಯಿಂದ ಭಾರತ ಮೂಲದ ಉದ್ಯಮಿ ಗೌತಮ್ ಅದಾನಿ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಈ ಮೂಲಕ ಅದಾನಿ ಕಂಪನಿ ಯೋಜನೆಗಳ ವಿರುದ್ಧ ಭಾರಿ ಹೋರಾಟವನ್ನು ಸಂಘಟಿಸಿದ್ದ ಪರಿಸರ ಸಂಘಟನೆಗಳಿಗೆ ಮೊದಲ ಹಂತದ ಜಯ ಲಭಿಸಿದಂತಾಗಿದೆ. ಕಂಪನಿಯ ಯೋಜನೆ ಪರಿಸರಕ್ಕೆ ಮಾರಕ ಎಂದು ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಹಿನ್ನೆಲೆಯಲ್ಲಿ ಉದ್ದೇಶಿತ ಕಲ್ಲಿದ್ದಲ ಗಣಿಗಾರಿಕೆ ಯೋಜನೆ ಆರಂಭಕ್ಕೆ ಮುನ್ನವೇ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿತ್ತು…

    June 5, 2016
    ...
    muhammad-ali
    ವಿದೇಶ

    ‘ಬಾಕ್ಸಿಂಗ್ ರಿಂಗ್’ ಹೊರಗೆ ಔಷಧಿ ಇಲ್ಲದ ಖಾಯಿಲೆ ವಿರುದ್ಧ ಹೋರಾಡುತ್ತಲೇ ಇದ್ದ ಅಪರೂಪದ ಕ್ರೀಡಾಪಟು ಮಹಮದ್ ಅಲಿ ಇನ್ನಿಲ್ಲ

    ಜಗತ್ತು ಕಂಡು ಅಪರೂಪದ ಕ್ರೀಡಾಪಟು, ವ್ಯವಸ್ಥೆ ಜತೆ ರಾಜೀ ಮಾಡಿಕೊಳ್ಳದ ಹೋರಾಟಗಾರ, ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ಮಾತುಗಾರ, ಔಷಧಿ ಇಲ್ಲದ ನರರೋಗದ ವಿರುದ್ಧ ನಾಲ್ಕು ದಶಕಗಳ ಕಾಲ ಒಳಗೆ ಬಡಿದಾಡುತ್ತಲೇ, ಸಾಮಾಜಿಕವಾಗಿ ಜಾಗೃತಿ ಮೂಡಿಸಿದ್ದ ‘ದಿ ಗ್ರೆಟೆಸ್ಟ್’ ಬಾಕ್ಸರ್ ಮಹಮದ್ ಅಲಿ ಇನ್ನಿಲ್ಲ. ಅಮೆರಿಕಾ ಕಾಲಮಾನ ಶುಕ್ರವಾರ ರಾತ್ರಿ ಫೀನಿಕ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಅಲಿಗೆ 74 ವರ್ಷ ವಯಸ್ಸಾಗಿತ್ತು. 1960ರಲ್ಲಿ ಬಾಕ್ಸಿಂಗ್ ಅಖಾಡಕ್ಕಿಳಿದ ಅಲಿ, ತನ್ನ ಬದುಕಿನುದ್ದಕ್ಕೂ ಗಳಿಸಿದ ಕೀರ್ತಿ, ಅನುಭವಿಸಿದ ಅವಮಾನಗಳು ಹಾಗೂ ಎಲ್ಲವನ್ನೂ..

    June 4, 2016
    ...
    baby-champ-1
    ವಿದೇಶ

    ಶ್ರೀಮಂತರ ಹೊಸ ಖಯಾಲಿಗೆ ಚಿಂಪಾಂಜಿಗಳ ಬಲಿ: ಜಾಗತಿಕ ಸಮಸ್ಯೆಯಾಗಿ ಬದಲಾದ ‘ಬೇಬಿ ಚಾಂಪ್ಸ್’ ಕಳ್ಳಸಾಗಣೆ

    ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ‘ಬೇಬಿ ಚಿಂಪಾಂಜಿ’ಗಳ ಕಳ್ಳಸಾಗಣೆ ವಿರುದ್ಧ ಜಾಗತಿಕ ಹೋರಾಟಕ್ಕೆ ನೈರೋಬಿಯಲ್ಲಿರುವ ವಿಶ್ವ ಸಂಸ್ಥೆಯ ಎನ್ವಿರಾನ್ಮೆಂಟ್ ಅಸೆಂಬ್ಲಿ (ಯುಎಸ್ಎಪಿ) ಕರೆ ನೀಡಿದೆ. ಬುಧವಾರ ‘ಬೇಬಿ ಚಿಂಪಾಂಜಿ’ಗಳ ರಕ್ಷಣೆಗಾಗಿ ವಿಶೇಷ ಆಂದೋಲನವನ್ನು ಶುರುಮಾಡಿರುವ ಯುಎಎಸ್ಎಪಿ, ಅರಣ್ಯ ಅಪರಾಧಗಳ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಪುಟಾಣಿ ಚಿಂಪಾಂಜಿಗಳ ಕಳ್ಳಸಾಗಣೆ ತಡೆಯಲು ಜಗತ್ತು ಒಂದಾಗಬೇಕಿದೆ ಎಂದು ಹೇಳಿದೆ. ಕಳೆದ ಐದಾರು ವರ್ಷಗಳ ಅಂತರದಲ್ಲಿ ಆಫ್ರಿಕಾ ಮತ್ತು ಏಷಿಯಾದ ಕಾಡುಗಳಿಂದ ಪುಟಾಣಿ ಚಿಂಪಾಂಜಿಗಳನ್ನುಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ದೊಡ್ಡ ಜಾಲವೊಂದು ನಿರ್ಮಾಣವಾಗಿದೆ. ಮಾಟ- ಮಂತ್ರಗಳಿಗೆ,..

    May 27, 2016

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top