An unconventional News Portal.

    ...
    donald-trump_4
    ವಿದೇಶ

    ‘ಟ್ರಂಪಣ್ಣ ಹುಚ್ಚಾಟ’: ಆದೇಶ ತಿರಸ್ಕರಿಸಿದ ಅಟಾರ್ನಿ ಜನರಲ್ ಸಲ್ಲಿಗೆ ಗೇಟ್ ಪಾಸ್

    ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತದಲ್ಲಿ ಕ್ಷಣಕ್ಕೊಂದು ಬದಲಾವಣೆಗಳಾಗುತ್ತಿದ್ದು, ಕೆಲವು ಗಂಟೆಗಳ ಮುಂಚೆಯಷ್ಟೆ ದೇಶದ ಅಟಾರ್ನಿ ಜನರಲ್ ಸಲ್ಲಿ ಯೇಟ್ಸ್ ಅವರನ್ನು ಸ್ಥಾನದಿಂದ ಕಿತ್ತು ಹಾಕಲಾಗಿದೆ. ಸದ್ಯ ವಿವಾದಕ್ಕೆ ಕಾರಣವಾಗಿರುವ ಆಯ್ದ ಮುಸ್ಲಿಂ ದೇಶಗಳ ವಲಸಿಗರ ಮೇಲಿನ ನಿರ್ಬಂಧ ಆದೇಶವನ್ನು ಯೇಟ್ಸ್ ತಳ್ಳಿಹಾಕಿದ್ದರು. ಸೋಮವಾರ ಸಂಜೆ ವೇಳೆಗೆ (ಅಮೆರಿಕಾ ಕಾಲಮಾನ) ಕಾನೂನು ಇಲಾಖೆಯ ವಕೀಲರಿಗೆ ಅಧ್ಯಕ್ಷ ಟ್ರಂಪ್ ಆದೇಶವನ್ನು ಪುರಸ್ಕರಿಸದಂತೆ ಅವರು ಆದೇಶ ಹೊರಡಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಸಲ್ಲಿ ಯೇಟ್ಸ್ ಅವರನ್ನು ಅಟಾರ್ನಿ ಜನರಲ್ ಸ್ಥಾನದಿಂದ ಕಿತ್ತು ಹಾಕಿ..

    January 31, 2017
    ...
    Denzel Washington Visits "Late Show With David Letterman"
    ವಿದೇಶ

    ಈ ಬಾರಿ ‘ಆಸ್ಕರ್ ನಾಟ್ ಸೋ ವೈಟ್’: ಪ್ರಶಸ್ತಿ ರೇಸಿನಲ್ಲಿ ಡೆನ್ಸಿಲ್ ವಾಷಿಂಗ್ಟನ್, ದೇವ್ ಪಟೇಲ್

    ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಗಾಲೋಟ ಆರಂಭವಾಗಿದೆ. ಗುರುವಾರ ಬಿಡುಗಡೆಗೊಂಡಿರುವ ಪಟ್ಟಿ, ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲಾ ಜನಾಂಗಗಳಿಗೂ, ಭಿನ್ನ ಹಿನ್ನೆಲೆಯ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ನೀಡಿದೆ. ಕಳೆದ ವರ್ಷ ಕೇಳಿಬಂದ ಟೀಕೆಗಳಿಗೆ ಅಕಾಡೆಮಿ ತಲೆಬಾಗಿದಂತೆ ಕಾಣಿಸುತ್ತಿದೆ. 89ನೇ ಅಕಾಡೆಮಿ ಪ್ರಶಸ್ತಿಗಾಗಿ ಸಿದ್ಧಗೊಂಡಿರುವ ಪಟ್ಟಿಯಲ್ಲಿ ಬಿಳಿಯ ಜನಾಂಗದ ನಟರು ಹಾಗೂ ನಿರ್ದೇಶಕರನ್ನು ಹೊರತು ಪಡಿಸಿ, ಈ ಬಾರಿ ಹಲವರು ಸ್ಥಾನ ಪಡೆದುಕೊಂಡಿದ್ದಾರೆ. ಅಭಿನಯದ ವಿಭಾಗದಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 20 ಜನರಲ್ಲಿ 9 ಬಿಳಿಯ ವರ್ಣದವರಲ್ಲ..

    January 25, 2017
    ...
    silicon_valley_corporation
    ವಿದೇಶ

    ಭಾರತದ ಐಟಿ ಇಂಡಸ್ಟ್ರಿಗೆ ಟ್ರಂಪ್ ಮಾರಕ: ‘ಸಿಲಿಕಾನ್ ವ್ಯಾಲಿ’ಯಿಂದ ಭಾರತೀಯರ ಗುಳೇ?

    ಕಳೆದ ಶುಕ್ರವಾರ ಅಮೆರಿಕಾದ ವಾಷಿಂಗ್ಟನ್ ಶ್ವೇತಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್, “ಅಮೆರಿಕ ಉತ್ಪನ್ನಗಳನ್ನು ಕೊಳ್ಳಿರಿ; ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿಕೊಳ್ಳಿ” ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಮುಂದಿನ ಕೆಲವು ದಿನಗಳಲ್ಲಿ ಅಮೆರಿಕಾದ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವ ವಿದೇಶಿ ಕಂಪನಿಗಳಿಗೆ ಹಾಗೂ ವಲಸಿಗರಾಗಿ ಕೆಲಸ ಮಾಡುತ್ತಿರುವ ವಿದೇಶಿಗರಿಗೆ ಇನ್ನು ಮುಂದೆ ಅಮೆರಿಕಾದ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಪಾಲು ದಕ್ಕುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಚೈನಾ ‘ತನ್ನ ದೇಶದ ಕಂಪನಿಗಳ ಹಾಗೂ ಕಾರ್ಮಿಕರ..

    January 23, 2017
    ...
    modi-and-trump-1
    ವಿದೇಶ

    ಡೋನಾಲ್ಡ್ ಟ್ರಂಪ್- ನರೇಂದ್ರ ಮೋದಿ: ಇಬ್ಬರ ಭಾಷಣದಲ್ಲಿ ಅದೆಷ್ಟು ಸಾಮ್ಯತೆಗಳು!

    ಅಮೆರಿಕಾದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಡೋನಾಲ್ಡ್ ಟ್ರಂಪ್ ಭಾಷಣಕ್ಕೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಈವರೆಗಿನ ಭಾಷಣಗಳಿಗೂ ಹಲವು ಸಾಮ್ಯತೆಗಳು ಗೋಚರಿಸುತ್ತಿದೆ. ಅಮೆರಿಕಾ ಕಾಲಮಾನ ಶುಕ್ರವಾರ ಶ್ವೇತಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಟ್ರಂಪ್, ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದ್ದ ಮಾತುಗಳನ್ನೇ ಇನ್ನಷ್ಟು ಸ್ಪಷ್ಟವಾಗಿ ಜಗತ್ತಿನ ಮುಂದಿಟ್ಟರು. ಈ ಮೂಲಕ ಅವರೊಳಗಿರುವ ‘ರಾಷ್ಟ್ರೀಯ ವಾದ’ದ ಆಲೋಚನೆಯನ್ನು ಮತ್ತೊಮ್ಮೆ ಸ್ಪಷ್ಟಗೊಳಿಸಿದರು. ಅವರ 20 ನಿಮಿಷಗಳ ಪುಟ್ಟ ಭಾಷಣದಲ್ಲಿ ಪ್ರಸ್ತಾಪಿಸಿದ ಹಲವು ಅಂಶಗಳನ್ನು 2013ರಿಂದ ಈಚೆಗೆ ಪ್ರಧಾನಿ..

    January 21, 2017
    ...
    ಅಮೆರಿಕಾದ 45ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ ವಚನ.
    ವಿದೇಶ

    45ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ ವಚನ: ನೂತನ ಅಧ್ಯಕ್ಷರ ‘ಗುರಿ ತಪ್ಪದ’ ಭಾ‍ಷಣ

    ಅಮೆರಿಕಾದ 45ನೇ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಿಗೆ ಹೋಲಿಸಿದರೆ, ಕಡಿಮೆ ಸಂಖ್ಯೆಯಲ್ಲಿ ಸೇರಿದ್ದ ಜನರ ಸಮ್ಮುಖದಲ್ಲಿ ಜಗತ್ತಿನ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಿತು. 70 ವರ್ಷದ ಟ್ರಂಪ್ ಅವರಿಗೆ ಮುಖ್ಯನ್ಯಾಯಮೂರ್ತಿ ಜಾನ್ ಜಿ. ರಾಬರ್ಟ್ ಜ್ಯೂನಿಯರ್ ಪ್ರಮಾಣ ವಚನ ಬೋಧಿಸಿದರು. ಈ ಸಮಯದಲ್ಲಿ ಪತ್ನಿ ಮೆಲಿನಾ ಟ್ರಂಪ್ ಪಕ್ಕದಲ್ಲಿಯೇ ನಿಂತಿದ್ದರು. ಪ್ರಮಾಣ ವಚನ ಸಮಾರಂಭಕ್ಕೆ ಟ್ರಂಪ್ ತಾಯಿ 1955ರಲ್ಲಿ ನೀಡಿದ್ದ..

    January 21, 2017
    ...
    el-chapo-guzman-mexico
    ವಿದೇಶ

    ಅಮೆರಿಕಾಕ್ಕೆ ‘ಡ್ರಗ್ ಲಾರ್ಡ್’ ಹಸ್ತಾಂತರ: ಮೆಕ್ಸಿಕೋ ಮಾದಕ ಲೋಕದ ಅಂತರಂಗದ ಕತೆ

    ನಿರೀಕ್ಷೆಯಂತೆಯೇ ಮಾದಕ ಲೋಕದ ಕಿಂಗ್, ಡ್ರಗ್ ಲಾರ್ಡ್, ಅಮೆರಿಕಾದ ನಂ. 1 ಶತ್ರು ಎಲ್ ಚಾಪೋ ಗುಸ್ಮಾನ್’ನನ್ನು ಅಮೆರಿಕಾದ ವಶಕ್ಕೆ ಮೆಕ್ಸಿಕೋ  ಒಪ್ಪಿಸಿದೆ. ಗುರುವಾರ ತಡರಾತ್ರಿ ನಡೆದಿರುವ ನಾಟಕೀಯ ಬೆಳವಣಿಗೆಯಲ್ಲಿ ಎಲ್ ಚಾಪೋವನ್ನು ನ್ಯೂಯಾರ್ಕ್ನ ಜೈಲಿಗೆ ಸ್ಥಳಾಂತರಿಸಲಾಯಿತು. ಎರಡೆರಡು ಬಾರಿ ಬಂಧನದಿಂದ ತಪ್ಪಿಸಿಕೊಳ್ಳುವ ಮೂಲಕ ಎಲ್ ಚಾಪೋ ಮೆಕ್ಸಿಕನ್ ದೇಶದ ಆಡಳಿತಕ್ಕೆ ಮುಖಭಂಗ ಮಾಡಿದ್ದ. ಹೀಗಾಗಿ, ಈ ಬಾರಿಯೂ ಅಂತಹ ಸಾಧ್ಯತೆಯನ್ನು ಮುಂದಿಟ್ಟ ಸ್ಥಳೀಯ ಆಡಳಿತ ಎಲ್ ಚಾಪೋನನ್ನು ಅಮೆರಿಕಾಕ್ಕೆ ಹಸ್ತಾಂತರಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡಿತ್ತು. ಅಮೆರಿಕಾ ಸೇರಿದಂತೆ..

    January 20, 2017
    ...
    manning-1
    ವಿದೇಶ

    ‘ಬಂಧಿಸುವಾಗ ಗಂಡು- ಜೈಲಿನಲ್ಲಿ ಹೆಣ್ಣು’: ವಿಕಿಲೀಕ್ಸ್ ಸೋರಿಕೆ ಪ್ರಕರಣದ ಚೆಲ್ಸಿಯಾಗೆ ಕ್ಷಮಾದಾನ

    ಜ್ಯೂಲಿಯನ್ ಅಸಾಂಜೆ ನೇತೃತ್ವದ ‘ವಿಕಿಲೀಕ್ಸ್’ಗೆ ಸುಮಾರು 7 ಲಕ್ಷ ಸೇನಾ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ 35 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಚೆಲ್ಸಿಯಾ ಮ್ಯಾನಿಂಗ್ ಕೆಲವೇ ದಿನಗಳಲ್ಲಿ ಹೊರಬರಲಿದ್ದಾಳೆ. ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆಡಳಿತಾವಧಿಯನ್ನು ಕೊನೆಗೊಳಿಸುವ ಮೊದಲು ಚೆಲ್ಸಿಯಾ ಸೇರಿದಂತೆ ಸುಮಾರು 209 ಜನರ ಜೈಲು ಶಿಕ್ಷೆಯನ್ನು ಮೊಟಕುಗೊಳುಸುವ ಅಚ್ಚರಿಯ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಹೀಗಾಗಿ, ಅಮೆರಿಕಾ ಇತಿಹಾಸದಲ್ಲಿಯೇ ಅತಿ ದೊಡ್ಡ ಮಾಹಿತಿ ಸೋರಿಕೆ ಎಂದು ಕರೆಸಿಕೊಂಡಿದ್ದ ಪ್ರಕರಣದ ಆರೋಪಿಗೆ ಕ್ಷಮಾದಾನ ದೊರಕಿದಂತಾಗಿದೆ…

    January 18, 2017
    ...
    Spicejet_Boeing_737_800
    ವಿದೇಶ

    ಕರ್ನಾಟಕ ಬಜೆಟ್ ಮೀರಿಸಿದ ‘ಸ್ಪೈಸ್ ಜೆಟ್’ ಡೀಲ್: 150 ವಿಮಾನ ಖರೀದಿಗೆ ಎಷ್ಟಾಯ್ತು ಗೊತ್ತಾ?

    ನಾಗರಿಕ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್, ಅಮೆರಿಕಾ ಮೂಲದ ವಿಮಾನ ತಯಾರಿಕಾ ಕಂಪೆನಿ ಬೋಯಿಂಗ್ ಜತೆ 1.5 ಲಕ್ಷ ಕೋಟಿಯ ಒಪ್ಪಂದ ಮಾಡಿಕೊಂಡಿದೆ. 150 ಹೊಸ ಬೋಯಿಂಗ್ ವಿಮಾನಗಳ ಖರೀದಿಗೆ ಸ್ಪೈಸ್ ಜೆಟ್ ಮುಂದಾಗಿದ್ದು ಸರಿ ಸುಮಾರು ಕರ್ನಾಟಕ ಸರಕಾರದ ವರ್ಷದ ಬಜೆಟ್ಟಿನಷ್ಟು ಮೊತ್ತವನ್ನು ಪಾವತಿ ಮಾಡಲಿದೆ. ಇದು ಭಾರತದ ವಿಮಾನಯಾನ ಕ್ಷೇತ್ರದಲ್ಲಿ ನಡೆದಿರುವ ಅತೀ ದೊಡ್ಡ ಮೊತ್ತದ ಡೀಲ್ ಆಗಿದೆ. ಬೋಯಿಂಗ್ 737-8 ಮ್ಯಾಕ್ಸ್ ಮಾದರಿಯ 100 ವಿಮಾನಗಳ ಖರೀದಿಗೆ ಸ್ಪೈಸ್ ಜೆಟ್ ಆರ್ಡರ್ ನೀಡಿದ್ದರೆ..

    January 14, 2017
    ...
    isreal-soldier-azaria
    ವಿದೇಶ

    ಐತಿಹಾಸಿಕ ಬೆಳವಣಿಗೆ: ಪ್ಯಾಲೆಸ್ತೀನ್ ‘ಭಯೋತ್ಪಾದಕ’ನನ್ನು ಕೊಂದ ಇಸ್ರೇಲ್ ಸೈನಿಕನಿಗೆ ಜೈಲು ಶಿಕ್ಷೆ

    ಆತನಿಗಿನ್ನೂ 20 ಹರೆಯ. 20 ವರ್ಷಗಳ ಜೈಲು ಶಿಕ್ಷೆಗೆ ತಯಾರಾಗಬೇಕಾಗಿದೆ. ಇದಕ್ಕೆ ಕಾರಣ ಆತ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದಿದ್ದು. ಇಷ್ಟೇ ಆಗಿದ್ದರೆ ಈ ಸುದ್ದಿ ಅಂತರಾಷ್ಟ್ರೀಯ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ಕೊಂದಾತ ಮತ್ಯಾರೂ ಅಲ್ಲ; ಆತನೊಬ್ಬ ಇಸ್ರೇಲ್ ಸೈನಿಕ. ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಇಸ್ರೇಲಿನ ಸೈನಿಕ ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ಅಪರೂಪದ ಪ್ರಕರಣ ಇದು. ಅದೂ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದ ಕಾರಣಕ್ಕೆ ಎಂಬುದು ಮತ್ತೊಂದು ವಿಶೇಷ. ಇಸ್ರೇಲ್ ರಾಜಧಾನಿ ಟೆಲ್ ಅವಿವ್..

    January 5, 2017
    ...
    junaid_jamshed-1
    ವಿದೇಶ

    ‘ಸಂಗೀತದಿಂದ ಧರ್ಮದೆಡೆಗೆ’: ಪಾಕ್ ವಿಮಾನ ಅಪಘಾತದಲ್ಲಿ ಸಾವಿಗೀಡಾದವರ ಪೈಕಿ ಬಹುಮುಖ ಪ್ರತಿಭೆ ಜುನೈದ್

    ಪಾಕಿಸ್ತಾನದ ಉತ್ತರ ಭಾಗದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಎಲ್ಲಾ 48 ಪ್ರಯಾಣಿಕರೂ ಸಾವಿಗೀಡಾಗಿದ್ದಾರೆ ಎಂದು ಪಾಕ್ ಏರ್ಲೈನ್ಸ್ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ. ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ)ಗೆ ಸೇರಿದ ಪಿಕೆ 661 ಸ್ಥಳೀಯ ನಾಗರಿಕ ವಿಮಾನ ಚಿತ್ರಾಲ್ ನಗರದಿಂದ ಇಸ್ಲಾಮಾಬಾದ್ ಕಡೆಗೆ ಹೊರಟಿತ್ತು. ಖೈಬರ್ ಪ್ರಾಂಥ್ಯದ ಹವಾಲಿಯನ್ ನಗರದ ಸಮೀಪ ಬರುತ್ತಿದ್ದಂತೆ ವಿಮಾನ ಮಾರ್ಗಮಧ್ಯದಲ್ಲಿಯೇ ಪತನವಾಯಿತು. ಪಾಕಿಸ್ತಾನದಲ್ಲಿ ಪ್ರತಿ ವಿಮಾನವೂ 500 ಗಂಟೆಗಳ ಹಾರಾಟ ನಡೆಸಿದ ನಂತರ ತಪಾಸಣೆಗೆ ಒಳಗಾಗಬೇಕು ಎಂಬ ನಿಯಮವಿದೆ. ದುರಂತ ಅಂತ್ಯ ಕಂಡ ವಿಮಾನ..

    December 8, 2016

Top