An unconventional News Portal.

ಮೌನೇಶ್ ಪೋತರಾಜ್ ಸಾವಿಗೆ ‘ಮಾಲ್ಗುಡಿ ಟ್ವಿಸ್ಟ್’; ಕ್ರೈಂ ಸೀನ್ ಹುಟ್ಟುಹಾಕಿದ ಆ 7 ಶಂಕೆಗಳು

ಕಳೆದ ಸುಮಾರು ಮೂವತ್ತು ಗಂಟೆಗಳಿಂದ ಪತ್ರಕರ್ತ ಮೌನೇಶ್ ಸಾವು ಮತ್ತು ನಂತರ ಆತನ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

  ...
  ವಿದೇಶ

  ‘ಮೊದಲು ಅಮೆರಿಕ’ ನೀತಿಗೆ ಜೋತು ಬಿದ್ದ ಟ್ರಂಪ್; ಮಧ್ಯಮ ವರ್ಗದ ಅನಿವಾಸಿ ಭಾರತೀಯರದಲ್ಲಿ ಶುರುವಾಗಿದೆ ನಡುಕ

  ಇದು ಸುಮಾರು ಒಂದು ವರ್ಷದ ಹಿಂದಿನ ಮಾತು. 2016 ಅಂತ್ಯ ಹಾಗೂ 2017ರ ಆರಂಭದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಎನ್ನುವ ಅಮೆರಿಕದ ಉದ್ಯಮಿಯ ಹೆಸರು ವಿಶ್ವವನ್ನು ನಿಧಾನವಾಗಿ ಆವರಿಸಲು ಆರಂಭಿಸಿತ್ತು. ಸಪ್ತಸಾಗರಗಳಾಚೆ ಚುನಾವಣೆಗೆ ನಿಂತಿದ್ದ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ದೊಡ್ಡ ಸದ್ದು ಮಾಡಿದ್ದರು. ಅದಕ್ಕೆ ಕಾರಣವೂ ಇತ್ತು. ‘ನಾನು ಹಿಂದೂ ಧರ್ಮದ ದೊಡ್ಡ ಅಭಿಮಾನಿ’ ಮತ್ತು ‘ನಾನು ಭಾರತದ ದೊಡ್ಡ ಅಭಿಮಾನಿ’ ಎನ್ನುವ ಮಾತುಗಳು ಟ್ರಂಪ್ ಬಾಯಿಯಿಂದ ಹೊರಬೀಳುತ್ತಿದ್ದಂತೆ ಭಾರತದ ಮದ್ಯಮ ವರ್ಗ ಕುಣಿದು ಕುಪ್ಪಳಿಸಿತ್ತು. ಆದರೆ ಈಗ, ಟ್ರಂಪ್ ಹೆಸರು ಕೇಳುತ್ತಲೇ ಅದೇ ವರ್ಗ..

  January 5, 2018
  ...
  ವಿದೇಶ

  ಹಣ ದುಬ್ಬರ, ಬೆಲೆ ಏರಿಕೆ, ದುಬಾರಿಯಾದ ಆರ್ಥಿಕ ನೀತಿಗಳು, ನಿರುದ್ಯೋಗ: ಇರಾನ್‌ನಲ್ಲಿ ಬುಗಿಲೆದ್ದ ಜನಾಕ್ರೋಶ

  ಇರಾನ್ ಸರಕಾರದ ವಿರುದ್ಧ ಸ್ಫೋಟಗೊಂಡಿರುವ ಜನರ ಆಕ್ರೋಶ ದೇಶದ ನಾನಾ ನಗರಗಳಲ್ಲಿ ಬುಧವಾರ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಈವರೆಗೆ ಸುಮಾರು 21 ಮಂದಿ ಬಲಿಯಾಗಿದ್ದಾರೆ.  ದಶಕಗಳ ಕಾಲ ದೇಶದಲ್ಲಿ ತಲೆದೋರಿದ್ದ ಆರ್ಥಿಕ ಸಮಸ್ಯೆಗಳು, ಹೆಚ್ಚುತ್ತಿರುವ ನಿತ್ಯ ಬದುಕಿನ ಖರ್ಚುಗಳು ಹಾಗೂ ನಿರುದ್ಯೋಗಗಳ ಸಮಸ್ಯೆಗಳೀಗ ಸರಕಾರದ ಬುಡವನ್ನೇ ಅಲ್ಲಾಡಿಸುವ ಪ್ರತಿಭಟನೆಗೆ ಕಾರಣವಾಗಿದೆ. ಇದರ ಜತೆಗೆ. ಸರಕಾರ ಆರ್ಥಿಕ ನೀತಿಗಳಲ್ಲಿ ದೊಡ್ಡ ಬದಲಾವಣೆಗಾಗಿ ಆಗ್ರಹಗಳಿಗೆ ಈಗ ಸಾಂಘಿಕ ರೂಪವೂ ಸಿಕ್ಕಿದೆ. ಅರಬ್‌ ಪ್ರಾಂಥ್ಯದಲ್ಲಿ ಬರುವ ಇರಾನ್‌ ಇವತ್ತಿಗೂ ಕಚ್ಚಾ ತೈಲ ನಿಕ್ಷೇಪವನ್ನು..

  January 3, 2018
  ...
  ವಿದೇಶ

  ನಿಗೂಢ ದೇಶದ ಕಿರಿಯ ನಾಯಕ ಕಿಮ್ ಜಾಂಗ್ ಉನ್: ಅಣ್ವಸ್ತ್ರ ಬೆದರಿಕೆಯೂ; ಯುದ್ದೋನ್ಮಾದವೂ…

  “ಉತ್ತರ ಕೊರಿಯಾ ಬಳಿ ಅಣ್ವಸ್ತ್ರದ ದಾಸ್ತಾನಿದೆ. ಅಮೇರಿಕದ ಬಹುತೇಕ ಪ್ರದೇಶಗಳನ್ನು ತಲುಪುವ ಸಾಮರ್ಥ್ಯ ನಮ್ಮಲ್ಲಿದೆ. ಈ ಅಣ್ವಸ್ತ್ರದ ಬಟನ್ ಸದಾ ನನ್ನ ಮೇಜಿನ ಮೇಲೆಯೇ ಇರುತ್ತದೆ. ಇದು ಕೇವಲ ಬೆದರಿಯಲ್ಲ, ವಾಸ್ತವ,” 2018ರ ಆರಂಭದಲ್ಲಿಯೇ ಈ ಮಾತುಗಳು ಹೊರಬಂದಿದ್ದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್‌ರಿಂದ. ತಮ್ಮ ದೇಶವನ್ನುದ್ದೇಶಿಸಿ ಮಾಡಿದ ವಾರ್ಷಿಕ ಭಾಷಣದಲ್ಲಿ ಹೀಗೆ ಹೇಳಿದ್ದಾರೆ. ಈ ಮೂಲಕ ವರ್ಷದ ಸಂದೇಶದಲ್ಲಿ ಅವರು ಅಮೇರಿಕಕ್ಕೆ ನೀಡಿದ ಎಚ್ಚರಿಕೆ ಇದಾಗಿದೆ.  ಅಣ್ವಸ್ತ್ರ ಮತ್ತು ಕ್ಷಿಪಣಿಗಳ ಉತ್ಪಾದನೆ ಹೆಚ್ಚು ಒತ್ತು ಕೊಡುವಂತೆ..

  January 3, 2018
  ...
  ವಿದೇಶ

  ‘ಪ್ಯಾರಡೈಸ್‌ ಪೇಪರ್ಸ್‌’: ಭಾರಿ ಕುಳಗಳ ಅವ್ಯವಹಾರದ ಮಾಹಿತಿ ಬಿಚ್ಚಿಟ್ಟ ತನಿಖೆ ಒಳಗೆ ಏನೇನಿದೆ?

  ‘ತೆರಿಗೆದಾರರ ಸ್ವರ್ಗ’ ಎಂದು ಕರೆಸಿಕೊಳ್ಳುವ ದ್ವೀಪ ರಾಷ್ಟ್ರಗಳಲ್ಲಿ ಹಣಕಾಸಿನ ಅವ್ಯವಹಾರಕ್ಕಿಳಿದ ಇನ್ನಷ್ಟು ಕುಳಗಳ ಮಾಹಿತಿಯನ್ನು ‘ಪ್ಯಾರಡೈಸ್ ಪೇಪರ್ಸ್‌’ ಹೊರಹಾಕಿವೆ. ಕಳೆದ ವರ್ಷ ‘ಪನಾಮಾ ಪೇಪರ್ಸ್‌’ ಹೆಸರಿನಲ್ಲಿ ಬೇನಾಮಿ ಕಂಪನಿಗಳನ್ನು ಸೃಷ್ಟಿಸಿ ಹಣ ಹೂಡಿಕೆ ಮಾಡುವ ಮೂಲಕ ತೆರಿಗೆ ವಂಚನೆಗೆ ಮುಂದಾಗಿದ್ದ ಕಂಪನಿಗಳು ಹಾಗೂ ಶ್ರೀಮಂತರ ಹೆಸರುಗಳನ್ನು ‘ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ’ (ಐಸಿಐಜೆ) ಹೊರಹಾಕಿತ್ತು. ಪಾಕಿಸ್ತಾನ ಮಾಜಿ ಪ್ರಧಾನಿ ನವಾಝ್‌ ಷರೀಪ್‌ ಪದಚ್ಯುತಿಗೊಂಡು ಜೈಲು ಪಾಲಾಗಲು ಇದು ಕಾರಣವಾಗಿತ್ತು. ಹಲವು ದೇಶಗಳಲ್ಲಿ ಪನಾಮ ಪೇಪರ್ಸ್‌ಗಳಿಂದ ಹೊರಬಿದ್ದ ಮಾಹಿತಿ ಅಲ್ಲಿನ..

  November 6, 2017
  ...
  ವಿದೇಶ

  ಚಿನ್ನ ಲೇಪಿತ ಬೆಳ್ಳಿಯ ಶವಪೆಟ್ಟಿಗೆಯಲ್ಲಿ ವರ್ಷಪೂರ್ತಿ ಕೊಳೆತ ಥಾಯ್‌ ದೊರೆಯ ದೇಹಕ್ಕೆ ಇಂದು ಅಂತ್ಯಕ್ರಿಯೆ!

  ವರ್ಷದ ಹಿಂದೆ ನಿಧನರಾಗಿದ್ದ ಥಾಯ್ಲೆಂಡ್‌ನ ದೊರೆ ಭೂಮಿಬೋಲ್‌ ಅದುಲ್ಯದೇಜ್‌ ಕಳೇಬರದ ಅಂತ್ಯಕ್ರಿಯೆಗೆ ಪ್ರಕ್ರಿಯೆಗಳು ಆರಂಭಗೊಂಡಿವೆ. ಜಗತ್ತಿನಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಜ ಎಂಬ ಖ್ಯಾತಿಗೆ ಒಳಗಾಗಿದ್ದ ಅದುಲ್ಯದೇಜ್‌ ತಮ್ಮ 88ನೇ ಇಳೀವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದರು. ಅಲ್ಲಿನ ಜನರ ಪಾಲಿಗೆ ‘ದೇವಮಾನವ’ರಾಗಿದ್ದ ಅವರು ಚಕ್ರಿ ಸಾಮ್ರಾಜ್ಯದ 9ನೇ ಸಾಮ್ರಾಟರಾಗಿ ಸುದೀರ್ಘ ಆಡಳಿತ ನಡೆಸಿದ್ದರು. 1946ರಲ್ಲಿ ಪಟ್ಟಕ್ಕೇರಿದ್ದ ಅವರ ಕಳೇಬರವನ್ನು ವರ್ಷದಿಂದ ಕಾಪಿಟ್ಟುಕೊಂಡ ದೇಶ ಒಂದು ವರ್ಷದ ಶೋಕಾಚರಣೆ ನಡೆಸಿತ್ತು. ಈಗಾಗಲೇ ಥಾಯ್ಲೆಂಡ್‌ನಲ್ಲಿ ಅಂತ್ಯಕ್ರಿಯೆ ಸಂಪ್ರದಾಯಗಳು ಆರಂಭಗೊಂಡಿವೆ. ಇಲ್ಲಿನ ಅರಮನೆಯಲ್ಲಿ ಬೌದ್ಧ ಧರ್ಮದ..

  October 26, 2017
  ...
  ವಿದೇಶ

  ಅಖಂಡತೆಯ ಅಳಿವು: ಕ್ಯಾಟಲೋನಿಯ ಜನರ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಅಸ್ತು ಎಂದ ಜನಾಭಿಪ್ರಾಯ

  ಗೊಂದಲ, ಘರ್ಷಣೆಗಳ ನಡುವೆ ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ ಕೊನೆಗೂ ‘ಕ್ಯಾಟಲೋನಿಯ’ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಜನ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಸ್ಪೇನ್‌ ದೇಶದ ಸುಮಾರು 75 ಲಕ್ಷ ಜನಸಂಖ್ಯೆ ಇರುವ ಕ್ಯಾಟಲೋನಿಯ ಸಮುದಾಯ ಪ್ರತ್ಯೇಕ ದೇಶವೊಂದನ್ನು ಹೊಂದಲು ಪ್ರಕ್ರಿಯೆಗಳು ಆರಂಭವಾಗಿವೆ. ಯುರೋಪ್‌ ಖಂಡದ ಪುಟ್ಟ ದೇಶ ಸ್ಪೇನ್‌ನ ಈಶಾನ್ಯ ಭಾಗದ ಸಣ್ಣ ಪ್ರದೇಶವೇ ಕ್ಯಾಟಲೋನಿಯ. ನಮ್ಮ ದೇಶದಲ್ಲಿ ‘ಸಪ್ತ ಸಹೋದರಿಯರು’ ಎಂದು ಕರೆಯುವ ಈಶಾನ್ಯ ಭಾರತದ ಪುಟ್ಟ ರಾಜ್ಯಗಳಂತೆ ಇಲ್ಲಿನ ಜನ ತಮ್ಮದೇ ಆದ ಅಸ್ಮಿತೆಗಳಿಗಾಗಿ ಹೋರಾಟ ಮಾಡಿಕೊಂಡು ಬಂದವರು…

  October 2, 2017
  ...
  ವಿದೇಶ

  32 ವರ್ಷಗಳ ಹಿಂದಿನ ಕಹಿನೆನಪು ಮರುಕಳಿಸಿದಾಗ; ಕುಸಿದ ಕಟ್ಟಡಗಳು, ಪ್ರಾಣತೆತ್ತ ಮಕ್ಕಳು

  ಅಲ್ಲೀಗ ಎಲ್ಲಿ ನೋಡಿದರೂ ಕುಸಿದು ಬಿದ್ದ ಕಟ್ಟಡಗಳು, ಸಾಲು ಸಾಲು ಹೆಣಗಳು…ಹೆಚ್ಚು ಕಡಿಮೆ 32 ವರ್ಷಗಳ ಹಿಂದಿನ ಕಹಿ ನೆನಪನ್ನು ಮರುಕಳಿಸಿದ ದೃಶ್ಯಾವಳಿಗಳು… ಇದು ಮೆಕ್ಸಿಕೋದಲ್ಲಿ ಕೆಲವೇ ಹೊತ್ತಿನ ಮುಂಚೆ ದಾಖಲಾದ ಪ್ರಬಲ ಭೂಕಂಪನದ ಪರಿಣಾಮಗಳು. ಈವರೆಗೆ ಸುಮಾರು 149 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಸ್ಥಳೀಯ ಕಾಲಮಾನ ಮಂಗಳವಾರ ಶಾಲೆಗೆ ತೆರಳಿದ್ದ ಮಕ್ಕಳನ್ನೂ ಕೂಡ ಪ್ರಕೃತಿಯ ವಿಕೋಪ ಸುಮ್ಮನೆ ಬಿಡಲಿಲ್ಲ. ಈವರೆಗೆ ಸುಮಾರು 22 ಮಕ್ಕಳು..

  September 20, 2017
  ...
  ವಿದೇಶ

  ‘ಬಾಂಬ್ ಸಮಾಚಾರ’: ಉತ್ತರ ಕೊರಿಯದ ‘ಪ್ರಬಲ ಕಂಪನ’ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತಾ?

  ಯುದ್ಧವನ್ನು ಮೈಮೇಲೆ ಎಳೆದುಕೊಂಡಿರುವ ಅಣ್ಣ; ಅದನ್ನು ಪಕ್ಕದಲ್ಲಿ ಆತಂಕದಿಂದಲೇ ಗಮನಿಸುತ್ತಿರುವ, ಅದೇ ವೇಳೆ ಏನೂ ಸಮಸ್ಯೆಯಾಗಲ್ಲ ಎಂಬ ಭರವಸೆಯನ್ನು ಉಳಿಸಿಕೊಂಡಿರುವ ತಮ್ಮ. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ಬೇರ್ಪಡೆಗೊಂಡ, ಇವತ್ತು ಒಂದಾಗುವ ಮುಂಚೆಯೇ ಮೂರನೇ ವಿಶ್ವಯುದ್ಧ ಆರಂಭಕ್ಕೆ ನಾಂದಿ ಹಾಡಲು ಹೊರಟು ನಿಂತಿರುವ ಎರಡು ಅವಳಿ ದೇಶಗಳ ಕತೆ. ಒಂದು ನಾರ್ತ್ ಕೊರಿಯಾ/ ಉತ್ತರ ಕೊರಿಯ ಎಂದು ಜನಪ್ರಿಯವಾಗಿ ಗುರುತಿಸುವ ಡೆಮಾಕ್ರಟಿಕ್ ಪೀಪಲ್ ರಿಪಬ್ಲಿಕ್ ಆಫ್ ಕೊರಿಯ. ಮತ್ತೊಂದು ದಕ್ಷಿಣ ಕೊರಿಯ ಅಥವಾ ಅಧಿಕೃತ ಹೆಸರು ರಿಪಬ್ಲಿಕ್..

  September 5, 2017
  ...
  ವಿದೇಶ

  ಪಾಕ್ ಗೆಲುವಿನ ನೆರಳಿನಲ್ಲಿ ಅರಳಿದ ಅಮೀರ್: ಇದು ಅವಮಾನಗಳನ್ನು ಮೀರಿದ ಬದುಕಿನ ಕತೆ!

  “ಜೈಲು ಎಂದರೆ ಏನು ಎಂಬುದು ಎಲ್ಲರಿಗೂ ಗೊತ್ತು. ಜೈಲಿನಲ್ಲಿ ಇದ್ದು ಬಂದವನು ಎಂದರೆ ಯಾರೂ ಕೂಡ ಗೌರವ ಕೊಡುವುದಿಲ್ಲ. ಆದರೂ ಈ ಸಮಯದಲ್ಲಿ ಹೇಳಬೇಕು, ನಾನು ಜೈಲಿನಲ್ಲಿ ಇದ್ದಷ್ಟು ದಿನ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು…” ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಹೆಸರು ಮಾಡಿ, ಅಷ್ಟೇ ವೇಗವಾಗಿ ಅಡ್ಡದಾರಿಯನ್ನೂ ತುಳಿದು, ‘ಸ್ಪಾಟ್ ಫಿಕ್ಸಿಂಗ್‌’ ಅಪರಾಧ ಪ್ರಕರಣದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ ಹೊರಬಂದ ಮಹಮದ್ ಅಮೀರ್ ‘ಸ್ಕೈ ಸ್ಪೂರ್ಟ್ಸ್‌’ ವಾಹಿನಿಗೆ ನೀಡಿದ ಸಂದರ್ಶನದ ಆರಂಭದಲ್ಲಿ ಹೇಳಿದ ಮಾತಿದು. ಭಾನುವಾರ ಲಂಡನ್‌ನ..

  June 19, 2017
  ...
  ವಿದೇಶ

  ಪೋಷಕರೇ ಎಚ್ಚರ; ಅಂತರ್ಜಾಲದಲ್ಲಿ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ ‘ಸ್ಯೂಸೈಡ್ ಗೇಮ್’!

  ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಕ್ಕಳನ್ನು ಗುರಿಯಾಗಿಸಿಕೊಂಡು ‘ಸಾವಿನ ಆಟ’ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಇಲ್ಯಾ ಸಿಡೊರೊವ್ ಬಂಧಿತ ಆರೋಪಿಯಾಗಿದ್ದು, ಈವರೆಗೆ ಸುಮಾರು 130 ಮಕ್ಕಳು ಈತನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ‘ಬ್ಯೂ ವೇಲ್’ (ನೀಲಿ ತಿಮಿಂಗಿಲ) ಹೆಸರಿನಲ್ಲಿ ಅಂತರ್ಜಾಲದಲ್ಲಿ ಆಟವೊಂದು ಜಾರಿಯಲ್ಲಿದ್ದ ಬಗ್ಗೆ ಈ ಹಿಂದೆಯೇ ಬಹಿರಂಗವಾಗಿತ್ತು. ವಿಶೇಷವಾಗಿ ರಷ್ಯಾದಲ್ಲಿ ನವೆಂಬರ್‌ 2015 ರಿಂದ ಏಪ್ರಿಲ್ 2016ರ ನಡುವೆ ನೂರಕ್ಕೂ ಹೆಚ್ಚು ಹದಿಹರೆಯದ ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರೆಲ್ಲರ ಸಾವು, ಅಂತರ್ಜಾಲದಲ್ಲಿ..

  June 12, 2017

FOOT PRINT

Top