An unconventional News Portal.

    ...

    ಪಾಸ್ಪೋರ್ಟ್ ಮುಟ್ಟುಗೋಲಿಗೆ ಇಡಿ ಪತ್ರ: ಮಲ್ಯ ಸುತ್ತ ಬಿಗಿಯಾಗುತ್ತಿವ ಬಲೆ

    ಸಾಲ ತೀರಿಸಲಾಗದೆ ದೇಶ ಬಿಟ್ಟು ಲಂಡನ್ ಸೇರಿಕೊಂಡಿರುವ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಪತ್ರ ಬರೆದಿದೆ. ಐಡಿಬಿಐ ಬ್ಯಾಂಕ್ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ, ವಿದೇಶಾಂಗ ಇಲಾಖೆಗೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯ (ಇಡಿ), ಪಾರ್ಸ್ಪೋರ್ಟ್ ಕಾಯ್ದೆ, 1967ರ ಅನ್ವಯ, ಮಲ್ಯ ದಾಖಲೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿದೆ. ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಇಡಿ ಪತ್ರದಲ್ಲಿ ತಿಳಿಸಿದೆ. ಸಾಲ ಮರುಪಾವತಿ ಪ್ರಕರಣ […]

    April 13, 2016
    ...

    ಸಾಲ ವಸೂಲಾತಿಯಲ್ಲಿ ತಾರತಮ್ಯ: ರಿಸರ್ವ್ ಬ್ಯಾಂಕ್ಗೆ ಸುಪ್ರಿಂ ಕೋರ್ಟ್ ತರಾಟೆ

    ಸಾಲ ಬಾಕಿದಾರರ ಮಾಹಿತಿ ಬಹಿರಂಗಕ್ಕೆ ಒಪ್ಪದ ರಿಸರ್ವ್ ಬ್ಯಾಂಕ್ಗೆ ಸುಪ್ರಿಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು. ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ, “ನೀವು ವಾಚ್ಡಾಗ್, ನಿಯಂತ್ರಕ ಸಂಸ್ಥೆ. ಒಂದು ಕಡೆ ಜನರು ಸಾವಿರಾರು ಕೋಟಿ ಸಾಲಗಳನ್ನು ತೆಗೆದುಕೊಂಡು ಸಾಮ್ರಾಜ್ಯಗಳನ್ನು ನಡೆಸಿ ದಿವಾಳಿಯಾಗುತ್ತಾರೆ. ಅಂತಹ ವಿಚಾರಗಳು ಇತ್ಯರ್ಥವಾಗದೇ ಉಳಿದು ಹೋಗುತ್ತವೆ. ಇನ್ನೊಂದು ಕಡೆ, ರೈತರು ಕೆಲವೇ ಸಾವಿರ ರೂ. ಸಾಲ ತೆಗೆದುಕೊಂಡು ಸಾಲ ಮರುಪಾವತಿಗೆ ವಿಫಲರಾದರೆ, ಅವರ ಆಸ್ತಿಯನ್ನು ಮುಟ್ಟುಗೋಲು […]

    April 12, 2016
    ...

    ಕೊಲ್ಲಂ ಪಟಾಕಿ ದುರಂತ: ಸ್ಪರ್ಧೆಗೆ ಅನುಮತಿ ನಿರಾಕರಿಸಿದ್ದಕ್ಕೆ ‘ಧರ್ಮ’ದ ಬಣ್ಣ

    ಭಾನುವಾರ ಕೊಲ್ಲಂನ ಪುತ್ತಿಂಗಳ್ ದೇವಳದಲ್ಲಿ ನಡೆದ ಅಗ್ನಿದುರಂತದ ಬೆನ್ನಲ್ಲೇ ಜಿಲ್ಲಾಡಳಿತದ ಕಾರ್ಯವೈಖರಿಗೆ ರಾಜಕಾರಣಿಗಳು ಹಸ್ತಕ್ಷೇಪ ಮಾಡಿದ ಮಾಹಿತಿ ಹೊರಬಿದ್ದಿದೆ. ದೇಗುಲದಲ್ಲಿ ಪಟಾಕಿ ಸಿಡಿಸಲು ಅನುಮತಿ ನಿರಾಕರಿಸಿದ ಜಿಲ್ಲಾಡಳಿತದ ವಿರುದ್ಧ ಕೆಲವು ರಾಜಕಾರಣಿಗಳು ಒತ್ತಡ ಹೇರುವ ಪ್ರಯತ್ನವನ್ನು ನಡೆಸಿದ್ದರು ಎಂದು ಸೋಮವಾರ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆ ವರದಿ ಮಾಡಿದೆ. ಇದಕ್ಕೆ ಕಾರಣವಾಗಿದ್ದು ‘ಧರ್ಮ’ದ ಹಿನ್ನೆಲೆ ಎಂದು ವರದಿ ಹೇಳಿದೆ. ಪುತ್ತಿಂಗಳ್ ದೇವಳದ ಹದಿನಾರು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸಂಪ್ರದಾಯದಂತೆ ನಡೆದು ಬಂದಿರುವ ಸುಡುಮದ್ದು ಪ್ರದರ್ಶನಕ್ಕೆ ಈ ಬಾರಿ ಜಿಲ್ಲಾಡಳಿತ ಅನುಮತಿ […]

    April 11, 2016
    ...

    ‘ಇದು ದೇವರು ಮನುಷ್ಯನ ಮೇಲೆ ಹೂಡಿದ ಯುದ್ಧ’: ಕೊಲ್ಲಂನಿಂದ ‘ನೇರಪ್ರಸಾರ’!

    (ರವಿವಾರ ನಸುಕಿನ ಜಾವ ಕೇರಳದ ಕೊಲ್ಲಂ ಜಿಲ್ಲೆಯ ದೇವಾಲಯದಲ್ಲಿ ಸಂಭವಿಸಿದ ಘೋರ ದುರಂತ ನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಸಮಯದಲ್ಲಿ, ಕೊಲ್ಲಂನ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ನಮ್ಮ ಪ್ರತಿನಿಧಿ ಶೃತಿ ತೋಟುಪುರಂ ಕಟ್ಟಿಕೊಟ್ಟ ಚಿತ್ರಣ ಇಲ್ಲಿದೆ) ಕೇರಳದ 14 ಜಿಲ್ಲೆಗಳ ಪೈಕಿ ಕೊಲ್ಲಂಗೆ ವಿಶಿಷ್ಟ ಸ್ಥಾನವಿದೆ. ಭಾರತದ ತುತ್ತತುದಿಯಲ್ಲಿರುವ ತಿರುವನಂತಪುರಂನಿಂದ ಕೊಂಚ ಮೇಲಕ್ಕೆ, ಹೆಚ್ಚು ಕಡಿಮೆ ಒಂದೇ ರೀತಿಯ ಬೌಗೋಳಿಕ ಪರಿಸರವನ್ನು ಹೊಂದಿರುವ ಜಿಲ್ಲೆ ಇದು. ಹೆಚ್ಚು ಕಡಿಮೆ ನಮ್ಮ ಕಡಲತಡಿಯ ಊರು ಮಂಗಳೂರಿನ ಹೋಲಿಕೆ […]

    April 10, 2016
    ...

    ಪಟಾಕಿ ಸಿಡಿಸುವ ಆಚರಣೆ ದುರಂತಕ್ಕೆ ಕಾರಣ: ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕ್ರಮ

    ನವ ವಸಂತವನ್ನು ಸ್ವಾಗತಿಸಲೆಂದು ದೇವಸ್ಥಾನಕ್ಕೆ ಬಂದ 102 ಜನ ಅಗ್ನಿ ದುರಂತದಲ್ಲಿ ಸಾವನ್ನಪ್ಪಿ, 350ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಭಾನುವಾರ ಕೇರಳದಲ್ಲಿ ನಡೆದಿದೆ. ಇಲ್ಲಿನ ಕೊಲ್ಲಂನ ಪರವೂರ್ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ಇಂದು ಮುಂಜಾನೆ ಭೀಕರ ದುರಂತ ಸಂಭವಿಸಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ದೇವಸ್ಥಾನದಲ್ಲಿ ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಇದೇ ಘಟನೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ. ನಿನ್ನೆ ಮಧ್ಯರಾತ್ರಿ 10 ಸಾವಿರಕ್ಕೂ ಅಧಿಕ ಭಕ್ತ ಜನ ಪುಟ್ಟಿಂಗಲ್ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸುಡುಮದ್ದು ಪ್ರದರ್ಶನ […]

    April 10, 2016
    ...

    ದೇವಸ್ಥಾನಗಳಲ್ಲಿ ಕಾಲ್ತುಳಿತ; ಅಗ್ನಿ ದುರಂತ: ನ್ಯಾಷನಲ್ ರೌಂಡಪ್

    ದೇವರ ದರ್ಶನಕ್ಕೆ ಹೋದವರು ಮಸಣ ಸೇರುವ ಘಟನೆಗಳು ದೇಶದ ನಾನಾ ಭಾಗಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇವೆ. ಭಾನುವಾರ ಕೇರಳದಲ್ಲಿ ಸಂಭವಿಸಿದ ಘೋರ ದುರಂತದ ಸಮಯದಲ್ಲಿ ಇಂತಹದ್ದೇ ಒಂದಷ್ಟು ಹಳೆಯ ಘಟನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ: ಅ. 13, 2013: ಮಧ್ಯಪ್ರದೇಶದ ರತ್ನಾಘರ್ ಜಿಲ್ಲೆಯ ದಾಟಿಯಾ ಎಂಬಲ್ಲಿ ದುರ್ಗಾ ಮಾತೆ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ಸಮಯದಲ್ಲಿ ಸುಮಾರು 60 ಜನ ಮೃತಪಟ್ಟಿದ್ದರು. ದೇವಸ್ಥಾನಕ್ಕೆ ಸರತಿಯಲ್ಲಿ ನಿಂತಿದ್ದ ಜನರ ನಡುವೆ ನೂಕು ನುಗ್ಗಲು ಶುರುವಾಗಿತ್ತು. ಈ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಿಸಲು […]

    April 10, 2016
    ...

    ಪತ್ನಿ ಮಕ್ಕಳ ಆಸ್ತಿ ವಿವರವನ್ನೂ ಸಲ್ಲಿಸುವಂತೆ ಮಲ್ಯಗೆ ಸುಪ್ರಿಂ ಸೂಚನೆ

    ಪತ್ನಿ ಮತ್ತು ಮಕ್ಕಳೂ ಸೇರಿದಂತೆ ತಮ್ಮ ಹೆಸರಿನಲ್ಲಿ ಇರುವ ಸಂಪೂರ್ಣ ಆಸ್ತಿಪಾಸ್ತಿ ವಿವರಗಳನ್ನು ಏಪ್ರಿಲ್ 21ಕ್ಕೆ ಮುನ್ನ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಮದ್ಯ ಉದ್ಯಮಿ ವಿಜಯ್ ಮಲ್ಯಗೆ ನಿರ್ದೇಶನ ನೀಡಿದೆ. ವಿಜಯ್ ಮಲ್ಯ ಹಾಗೂ ಈಗ ಅಸ್ತಿತ್ವದಲ್ಲಿಲ್ಲದ ‘ಕಿಂಗ್ ಫಿಶರ್ ಏರ್ ಲೈನ್ಸ್’ನ ಆಸ್ತಿ ಪಾಸ್ತಿ ವಿವರಗಳನ್ನು ಘೋಷಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದೇ ವೇಳೆ, ನಾಲ್ಕು ಸಾವಿರ ಕೋಟಿ ರೂ. ಪಾವತಿಸುವ ಲಿಕ್ಕರ್ ಉದ್ಯಮ ದೊರೆ ವಿಜಯ್ ಮಲ್ಯ ಅವರ ಪ್ರಸ್ತಾವವನ್ನು ಬ್ಯಾಂಕುಗಳು ತಿರಸ್ಕರಿಸಿವೆ. ‘ನಮಗೆ […]

    April 7, 2016
    ...

    ಸೇನೆಗಾಗಿ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ಟಾಪ್ 15!

    ಜಗತ್ತಿನಾದ್ಯಂತ ಸೇನೆಗಾಗಿ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ಟಾಪ್ 15ನೇ ಸ್ಥಾನಕ್ಕೇರಿದೆ. ‘ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ (SIPRI) ಬಿಡುಗಡೆ ಮಾಡಿರುವ ವಾರ್ಷಿಕ ವರದಿ ಪ್ರಕಾರ, ಜಗತ್ತಿನಾದ್ಯಂತ ಸೇನೆಗಾಗಿ ಅತೀ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿರುವ ಮೊದಲ 15 ದೇಶಗಳ ಪೈಕಿ ಭಾರತದ ಪಾಲೇ ಶೇ. 3.1ರಷ್ಟಿದೆ. ಏಷಿಯಾ ಮತ್ತು ಆಸ್ಟ್ರೇಲಿಯಾ ಭೂಭಾಗದಲ್ಲಿ ಸೇನೆಗಾಗಿ ಮಾಡುತ್ತಿರುವ ಖರ್ಚಿನ ಪ್ರಮಾಣ 2015ರ ನಂತರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ, ಶೇ. 5.4ರಷ್ಟು ಹೆಚ್ಚಳ ಕಂಡು ಬಂದಿದೆ. 2015- […]

    April 7, 2016
    ...

    ಪತಿ ಪ್ರಧಾನಿಯಾಗುವ ಕನಸನ್ನು ಹಿಂದೆಯೇ ಬಿಟ್ಟು ಹೋದರು ಕಮಲಾ ಅದ್ವಾನಿ

    ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅದ್ವಾನಿ ಅವರ ಪತ್ನಿ ಕಮಲಾ ಅದ್ವಾನಿ ಹೃದಯಾಘಾತದಿಂದ ಬುಧವಾರ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. “ಹೃದಯಾಘಾತಕ್ಕೆ ಒಳಗಾದ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ಅಸುನೀಗಿದರು,” ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ವಯೋ ಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಹಿಂದೆಯೂ ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಪತಿ […]

    April 6, 2016
    ...

    ಮುಂಬೈ ಸ್ಫೋಟ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸಿದ ವಿಶೇಷ ನ್ಯಾಯಾಲಯ

    ಮುಂಬೈ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ ಶಿಕ್ಷೆ ಪ್ರಮಾಣವನ್ನು ಮುಂಬೈ ವಿಶೇಷ ‘ಪೋಟಾ’ ನ್ಯಾಯಾಲಯ ಪ್ರಕಟಿಸಿದೆ. ಪ್ರಕರಣದ ಆರೋಪಿಗಳಾದ ಸಾಖಿಬ್ ನಚಾನ್, ಅತೀಫ್ ಮುಲ್ಲಾ ಹಾಗೂ ಹಸೀಬ್ ಮುಲ್ಲಾಗೆ 10 ವರ್ಷಗಳ ಸಜೆ ವಿಧಿಸಿ ನ್ಯಾಯಾಧೀಶ ಪಿ. ಅರ್. ದೇಶ್ಮುಖ್ ಆದೇಶ ಹೊರಡಿಸಿದ್ದಾರೆ. ಪ್ರಮುಖ ಆರೋಪಿ ಮುಝಾಮಿಲ್ ಅನ್ಸಾರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ. ಜತೆಗೆ, ವಾಹಿದ್ ಅನ್ಸಾರಿ ಹಾಗೂ ಫರಾನ್ ಖೋಟ್ ಅವರುಗಳನ್ನೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಿಲಾಗಿದೆ. ಪ್ರಕರಣದ ಉಳಿದ ಆರೋಪಿಗಳು ಶಿಕ್ಷಾ ಅವಧಿಯನ್ನು ಈಗಾಗಲೇ […]

    April 6, 2016

Top