An unconventional News Portal.

  ...
  modi-walking-1
  ದೇಶ

  ‘#PoMoneಮೋದಿ’ ಸೊಮಾಲಿಯಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಚಾರಗಳು!

  ಕೇರಳದ ಬುಡಕಟ್ಟು ಜನರ ಕುರಿತು ಮಾತನಾಡುವ ಭರಾಟೆಯಲ್ಲಿ ರಾಜ್ಯವನ್ನು ಸೊಮಾಲಿಯಾಗೆ ಹೋಲಿಸುವ ಮೂಲಕ ಪ್ರಧಾನಿ ಮೋದಿ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ಮೋದಿ ಚುನಾವಣಾ ಪ್ರಚಾರ ಸಮಯದಲ್ಲಿ ಆಡಿದ ಮಾತುಗಳ ಕುರಿತು ಪರ- ವಿರೋಧದ ಚರ್ಚೆಗಳು ಶುರುವಾಗಿವೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಶ್ವದಲ್ಲಿಯೇ ‘ಅತ್ಯುತ್ತಮ’ ಸ್ಥಾನದಲ್ಲಿರುವ ಕೇರಳವನ್ನು ಸೊಮಾಲಿಯಾಗೆ ಹೋಲಿಸಿರುವುದು ತಪ್ಪು ಎಂದು ಮೋದಿ ಬಗ್ಗೆ ನಿರೀಕ್ಷೆ ಇಟ್ಟುಕೊಂಡವರೂ ಹೇಳುವ ಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ, ಕೇರಳದ ಅತ್ಯುತ್ತಮ ಸಾಮಾಜಿಕ ಸನ್ನಿವೇಶಗಳು ಎಂಬುದಕ್ಕಿಂತ, ಸೊಮಾಲಿಯಾ ಭೀಕರ ಚಿತ್ರಣ. ಈ ಹಿನ್ನೆಲೆಯಲ್ಲಿ ‘ಸಮಾಚಾರ’ ಸೊಮಾಲಿಯಾ..

  May 11, 2016
  ...
  harish-rawath-cong-1
  ದೇಶ

  ಚುನಾಯಿತ ಸರಕಾರದ ತೆಕ್ಕೆಗೆ ಮರಳಿದ ಉತ್ತರಖಾಂಡ್: ರಾಷ್ಟ್ರಪತಿ ಆಳ್ವಿಕೆ ಹಿಂತೆಗೆಯಲು ಸುಪ್ರೀಂ ಸೂಚನೆ

  ಉತ್ತರಖಾಂಡ್ ಎಂಬ ಪುಟ್ಟ ರಾಜ್ಯದಲ್ಲಿ ಮತ್ತೆ ಚುನಾಯಿತ ಸರಕಾರದ ಆಳ್ವಿಕೆ ಶುರುವಾಗಲಿದೆ. ವಿಶ್ವಾಸ ಮತ ಯಾಚನೆಯಲ್ಲಿ ಕಾಂಗ್ರೆಸ್ ಪಕ್ಷದ ಹರೀಶ್ ರಾವತ್ ಸರಕಾರ ಅಗತ್ಯ ಬಹುಮತ ಗಳಿಸಿದೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಬುಧವಾರ ಸಂಜೆಯೊಳಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸುವಂತೆ ಸೂಚಿಸಿದೆ. ಕಳೆದ ಕೆಲವು ದಿನಗಳಿಂದ ಉತ್ತರಖಾಂಡ್ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳು ಈ ಮೂಲಕ ತಾರ್ಕಿಕ ಅಂತ್ಯ ಕಾಣುವಂತಾಗಿವೆ. ಕೇಂದ್ರ ಸರಕಾರಕ್ಕೆ ಇದು ಭಾರಿ ಮುಖಭಂಗ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ..

  May 11, 2016
  ...
  modi-kejriwal-1
  ದೇಶ

  ‘ನರೇಂದ್ರಭಾಯಿ ಎಂಎ’: ಎಎಪಿ ನಿರ್ದೇಶನದ ಸಿನೆಮಾ ಹಿಟ್ ಆಗೋಕೆ ಅಮಿತ್ ಶಾ ಒಬ್ಬರು ಬೇಕಿತ್ತು!

  ಕಳೆದ ಕೆಲವು ದಿನಗಳಿಂದ ದೇಶದ ಪ್ರಧಾನಿ ನರೇಂದ್ರ ದಾಮೋದರ್ ಮೋದಿ ವಿದ್ಯಾರ್ಹತೆ ಸುತ್ತ ಎದ್ದಿದ್ದ ಕಿಚ್ಚಿಗೆ ಸ್ವತಃ ಭಾರತೀಯ ಜನತಾ ಪಕ್ಷ ತುಪ್ಪ ಸುರಿದಿದೆ. ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿ ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಮೋದಿ ಶಿಕ್ಷಣ ಪ್ರಮಾಣ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೇ ಕಾಯುತ್ತಿದ್ದ ಆಮ್ ಆದ್ಮಿ ಪಕ್ಷ, ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದ ಅಸ್ತ್ರಗಳನ್ನು ಪಕ್ಷದ ವಕ್ತಾರ ಅಶುತೋಶ್ ಮೂಲಕ ಪ್ರಯೋಗಿಸಿದೆ. ಒಟ್ಟಾರೆ, ದೇಶದ ಆಡಳಿತದ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರ..

  May 9, 2016
  ...
  bombay-high-court
  ದೇಶ

  ಗೋಹತ್ಯೆ ನಿಷೇಧ ಓಕೆ; ಮಾಂಸ ತಿನ್ನೋಕೆ ತಡೆ ಏಕೆ?: ಬಾಂಬೆ ಹೈಕೋರ್ಟ್ ಆದೇಶ

  ಮಹಾರಾಷ್ಟ್ರ ಸರ್ಕಾರದ ಗೋಹತ್ಯೆ ನಿಷೇಧ ಕಾನೂನನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಹೊರಗಿನಿಂದ ಗೋಮಾಂಸ ಖರೀದಿಸಿ  ಸಂಗ್ರಹಿಸಿಡುವುದನ್ನು ಕಾನೂನಿನ ಪರಿಧಿಯಿಂದ ಹೊರಗಿಡುವಂತೆ ಸೂಚಿಸಿ ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ. ಮಹಾರಾಷ್ಟ್ರದಲ್ಲಿ ಹೇರಲಾಗಿರುವ ಗೋಮಾಂಸ ಮೇಲಿನ ನಿಷೇಧಕ್ಕಿರುವ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ಬಾಂಬೆ ಹೈಕೋರ್ಟ್ ಈ ತೀರ್ಮಾನವನ್ನು ಪ್ರಕಟಿಸಿದೆ. ವಿಭಾಗೀಯ ಪೀಠವು ಈ ವರ್ಷ ಜನವರಿಯಲ್ಲಿ ತನ್ನ ತೀರ್ಪನ್ನು ಕಾದಿರಿಸಿತ್ತು. ಅಂತಿಮವಾಗಿ ಶುಕ್ರವಾರ ತೀರ್ಪನ್ನು ಪ್ರಕಟಿಸಿದೆ. ಗೋಮಾಂಸ ಖರೀದಿಯನ್ನು(ಸಂಗ್ರಹ) ಅಪರಾಧದ ಪರಿಧಿಯಿಂದ ಹೊರಗಿಟ್ಟ..

  May 6, 2016
  ...
  con-vs-bjp-1
  ದೇಶ

  ಕಾಂಗ್ರೆಸ್ v/s ಬಿಜೆಪಿ: ‘ಸೇವ್ ಡೆಮಾಕ್ರಸಿ’ ಅಬ್ಬರದಲ್ಲಿ ಬಚಾವಾಗಿದ್ದು ಮಾತ್ರ ಆಗಸ್ಟಾ, ಫಿನ್ಮೆಸಾನಿಕಾ!

  ದಿಲ್ಲಿಯ ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಬೀದಿ ಹೋರಾಟಕ್ಕೆ ಇಳಿಯುವ ಮೂಲಕ ತಮ್ಮ ಅಸ್ಥಿತ್ವವನ್ನು ದೇಶಕ್ಕೆ ಸಾರುವ ಪ್ರಯತ್ನವನ್ನು ಶುಕ್ರವಾರ ಪ್ರದರ್ಶಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕಳೆದ ಎರಡೂವರೆ ವರ್ಷಗಳ ಅಂತರದಲ್ಲಿ ಲೋಕಸಭೆಯ ಒಳಗೆ ಹಾಗೂ ಹೊರಗೆ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಅದರ ನಾಯಕರನ್ನು ಮೂಲೆಗುಂಪು ಮಾಡುತ್ತಲೇ ಬಂದಿತ್ತು. ಪ್ರತಿ ಬಾರಿ ಅಧಿವೇಶನ ಶುರುವಾಗುತ್ತಿದ್ದಂತೆ, ಪ್ರತಿಪಕ್ಷದ ಒಂದಿಲ್ಲೊಂದು ಹಗರಣವನ್ನು ಮುಂದಿಟ್ಟು, ಆಡಳಿತ ಪಕ್ಷವೇ ಒಂದು ಹೆಜ್ಜೆ ಮುಂದೆ ಹೋಗಿ..

  May 6, 2016
  ...
  jayalalithaa-rally-1
  ದೇಶ

  ಎಐಎಡಿಎಂಕೆ ಪ್ರಣಾಳಿಕೆ: ಮಕ್ಕಳ ಅಗತ್ಯವೇನು ಎಂದು ಅರ್ಥ ಮಾಡಿಕೊಂಡವರ ಹೆಸರು ‘ಅಮ್ಮ’!

  ತಮಿಳುನಾಡಿನಲ್ಲಿ ಮಾನ್ಸೂನ್ ಮೋಡಗಳ ಜತೆಜತೆಗೇ ಹೊರಬಿದ್ದಿದೆ ಜೆ. ಜಯಲಲಿತಾ ಅವರ ಎಐಎಡಿಎಂಕೆ ಪಕ್ಷದ ಪ್ರಣಾಳಿಕೆ. ಎರಡು ತಿಂಗಳಿಗೆ ನೂರು ಯೂನಿಟ್ ಉಚಿತ ಗೃಹ ಬಳಕೆಯ ವಿದ್ಯುತ್, ಮಹಿಳೆಯರು ಖರೀದಿಸುವ ಸ್ಕೂಟರ್ ಮೇಲೆ ಶೇ. 50ರಷ್ಟು ಸಬ್ಸಿಡಿ, ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಹಾಗೂ ಇಂಟರ್ ನೆಟ್, ಮದುವೆಯಾಗುವ ಯುವತಿಯರಿಗೆ 8 ಗ್ರಾಂ ಉಚಿತ ಚಿನ್ನ, ರೇಷನ್ ಕಾರ್ಡ್ ಹೊಂದಿದವರಿಗೆ ಉಚಿತ ಮೊಬೈಲ್ ಸಂಪರ್ಕ, ಬಾಣಂತನಕ್ಕೆ 18 ಸಾವಿರ ಸಹಾಯ ಧನ ಹಾಗೂ 9 ತಿಂಗಳ ರಜೆ, 2016-21ರ ಆರ್ಥಿಕ..

  May 6, 2016
  ...
  sonkar-cover-1
  ದೇಶ

  ಮಂಚ ಏರಿದ ಐಎಎಸ್ ಅಧಿಕಾರಿ ಕಾಲು: ಹಿಂದೆಯೇ ಬಂತು ಟೀಕೆಗಳ ಸಾಲು!

  ಛತ್ತೀಸಗಢದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಆಸ್ಪತ್ರೆಯ ಮಂಚದ ಮೇಲೆ ತನ್ನ ಶೂ ಧರಿಸಿದ್ದ ಕಾಲನ್ನು ಇಟ್ಟಿರುವ ಫೊಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದವನ್ನು ಹುಟ್ಟಿಹಾಕಿದೆ. ಸ್ವತಃ ಎಂಬಿಬಿಎಸ್ ವೈದ್ಯರಾಗಿರುವ, 2013ನೇ ಬ್ಯಾಚ್ ಅಧಿಕಾರಿ ಜಗದೀಶ್ ಸೋಂಕರ್ ತಮ್ಮ ವಿಚಿತ್ರ ನಡೆಯಿಂದ ಸಾರ್ವಜನಿಕ ಟೀಕೆಗೆ ಗುರಿಯಾದ ಅಧಿಕಾರಿ. ‘ಇದು ಅಧಿಕಾರಿ ರೋಗಿಗಳಿಗೆ ಅಗೌರವ ಸೂಚಿಸುವ ನಡೆ ಮಾತ್ರವಲ್ಲ, ಬದಲಿಗೆ ಆಸ್ಪತ್ರೆಯ ಸ್ವಚ್ಚತೆ ದೃಷ್ಟಿಯಿಂದಲೂ ಈ ನಡವಳಿಕೆ ಸರಿಯಲ್ಲ’ ಎಂದು ಟೀಕೆಗಳು ಆರಂಭವಾಗಿವೆ. ಅಧಿಕಾರಿ ಸೋಂಕರ್, ಸರಕಾರ ನಡೆಸುತ್ತಿರುವ ಅಪೌಷ್ಠಿಕತೆ ನಿವಾರಣಾ ಕೇಂದ್ರಕ್ಕೆ..

  May 5, 2016
  ...
  mamata-banerjee-1
  ದೇಶ

  56 ದಿನಗಳಲ್ಲಿ 200 ಭಾಷಣ: ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿರುವ ‘ಅಗ್ನಿ ದೇವತೆ’!

  ಪಶ್ಚಿಮ ಬಂಗಾಳ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರಕ್ಕೆ ಮುಕ್ತಾಯಗೊಳ್ಳಲಿದೆ. ಕಳೆದ 56 ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಭಾರಿ ಚುನಾವಣಾ ಪ್ರಚಾರ ಸಭೆಗಳ ಪೈಕಿ ಸ್ಟಾರ್ ಕ್ಯಾಂಪೇನರ್ ಆಗಿ ಮಿಂಚುತ್ತಿದ್ದಾರೆ ಮಮತಾ ಬ್ಯಾನರ್ಜಿ. ಕಾಂಗ್ರೆಸ್ ಪಕ್ಷದಿಂದ ಸಿಡುದು ಬಂದು, ಸ್ವತಂತ್ರವಾಗಿ ಪಕ್ಷವನ್ನು ಕಟ್ಟಿ, 36 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಭದ್ರಕೋಟೆಯನ್ನು ಒಡೆದು, ಕಳೆದ ಬಾರಿ ರಾಜ್ಯದ ಚುಕ್ಕಾಣಿಯನ್ನು ಹಿಡಿದ ಹಠಯೋಗಿ ರಾಜಕಾರಣಿ ಮಮತಾ. ಇಂಡಿಯಾ ಟುಡೇ ಹಾಗೂ ಸಿ- ವೋಟರ್ ಜಂಟಿ ಸಮೀಕ್ಷೆ, ಈ ಬಾರಿಯೂ ಮಮತಾ..

  May 4, 2016
  ...
  Modi
  ದೇಶ

  ಸಂಸದರಿಗೆ ವೇತನ ಹೆಚ್ಚಳ ಪ್ರಸ್ತಾಪ: ಮೋದಿಗೆ ಮತ್ತೊಂದು ಸತ್ವ ಪರೀಕ್ಷೆ, ಪಾಪ!

  ಸಂಸದರ ವೇತನ ಹೆಚ್ಚಳ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಸುತ್ತಿನ ಸತ್ವ ಪರೀಕ್ಷೆಗೆ ಗುರಿಯಾಗುವ ಸಾಧ್ಯತೆಗಳು ಕಾಣಿಸುತ್ತಿವೆ. ಮಂಗಳವಾರ ನಡೆದ ಬೆಳವಣಿಗೆಯೊಂದರಲ್ಲಿ, ಸಂಸದರ ಸಂಬಳ ಮತ್ತು ಭತ್ಯೆ ಹೆಚ್ಚಳ ಪ್ರಸ್ತಾಪಕ್ಕೆ ಪ್ರಧಾನಿ ಮೋದಿ ವೈಯುಕ್ತಿಕವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹೊರಗೆಡವಿದೆ. ಈಗಿರುವ ಮಾಸಿಕ 50 ಸಾವಿರ ಮೂಲ ವೇತನವನ್ನು 1 ಲಕ್ಷಕ್ಕೆ ಏರಿಸುವಂತೆ ಸಂಸದರು ಒತ್ತಾಯಿಸುತ್ತಿದ್ದಾರೆ. ಜತೆಗೆ, ಭತ್ಯೆ ವಿಚಾರದಲ್ಲಿ ಹೆಚ್ಚಳ ಬಯಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದರೆ, ವಾರ್ಷಿಕ 250 ಕೋಟಿ ರೂಪಾಯಿ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳಲಿದೆ…

  May 4, 2016
  ...
  uttakhand-forest-fire-1
  ದೇಶ

  ಉತ್ತರಖಾಂಡ್ ಕಾಡ್ಗಿಚ್ಚು: ಟಿಂಬರ್ ಮಾಫಿಯಾ ಸುತ್ತ ಅನುಮಾನದ ಹುತ್ತ!

  ಉತ್ತರಾಖಾಂಡ್ ರಾಜ್ಯದಲ್ಲಿ ಕಾಣಿಸಿಕೊಂಡ ಭಾರಿ ಕಾಡ್ಗಿಚ್ಚು ಈಗ ಹತೋಟಿಗೆ ಬರುತ್ತಿದೆ. 2000 ಹೆಕ್ಟೇರ್ ಅರಣ್ಯ ಅಗ್ನಿಗಾಹುತಿಯಾಗಿದೆ. ಒಣಹವೆಯಿಂದಾಗಿ ಮರಗಳ ನಡುವೆ ಘರ್ಷಣೆಯಿಂದ ಕಾಳ್ಗಿಚ್ಚು ಹಬ್ಬಿರಬಹುದೆಂದು ಮೊದಲು ಶಂಕಿಸಲಾಗಿತ್ತು. ಈಗ ಬೆಂಕಿಯ ಹಿಂದೆ ದುಷ್ಕರ್ಮಿಗಳ ಕೈವಾಡವಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಿರುವುದಾಗಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. “ಪ್ರಕರಣದ ತನಿಖೆ ನಡೆಯುತ್ತಿದ್ದು, ಸಂಚುಕೋರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ,” ಜಾವಡೇಕರ್ ಹೇಳಿದ್ದಾರೆ. 6000ಕ್ಕೂ ಅಧಿಕ ಮಂದಿ ಬೆಂಕಿ ನಂದಿಸುವಲ್ಲಿ ನಿರತವಾಗಿದ್ದು, ಶೇ.70ರಷ್ಟು ಬೆಂಕಿ ಹತೋಟಿಗೆ..

  May 2, 2016

Top