An unconventional News Portal.

  ...
  pv-sindhu-hotstar
  ದೇಶ

  ಒಲಂಪಿಕ್ ‘ಬೆಳ್ಳಿ ಪದಕ’ಕ್ಕೆ ಮುತ್ತಿಕ್ಕಿದ ಪಿ. ವಿ. ಸಿಂಧು; ನೆರವಿಗೆ ಬಾರದ ಮೋದಿ ಸರಕಾರದ ‘ಯುದ್ಧ ಕಾಲದ ಶಸ್ತ್ರಭ್ಯಾಸ’!

  ಒಲಂಪಿಕ್ ಕ್ರೀಡಾಕೂಟದ ಕೊನೆಯ ಕ್ಷಣಗಳಲ್ಲಿ ಭಾರತಕ್ಕೆ ಮತ್ತೊಂದು ‘ಪದಕ’ ಸಿಕ್ಕಿದೆ. ಶಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ, ದಕ್ಷಿಣ ಭಾರತದ ಆಟಗಾರ್ತಿ ಪುಸಾರ್ಲ ವೆಂಕಟ ಸಿಂಧು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಫೈನಲ್ ಪ್ರವೇಶಿಸಿ; ಪದಕ ಗೆಲ್ಲುವುದರೊಂದಿಗೆ ದೇಶದೊಳಗಿನ ಒಲಂಪಿಕ್ ಕನಸಿಗೆ ನೀರೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಸ್ಪೇನಿನ ಕ್ಯಾರೋಲಿನ್ ಮರಿನ್ ವಿರುದ್ಧ ವಿರೋಚಿತ ಸೋಲು ಕಂಡರು. ಮೊದಲ ಸೆಟ್ ನಲ್ಲಿ 21-19ರಿಂದ ಸೆಟ್ ಗೆದ್ದು ಗೆಲುವಿನತ್ತ ಮುಖ ಮಾಡಿದ್ದ ಸಿಂಧು ನಂತರದ ಎರಡೂ ಸೆಟ್ ಗಳಲ್ಲಿ 12-21, 15-21 ರಿಂದ..

  August 19, 2016
  ...
  sakshi malik
  ದೇಶ

  ಹರಿಯಾಣದ ಹಳ್ಳಿ ಹುಡುಗಿ ರಿಯೋ ಅಂಗಳದಲ್ಲಿ ‘ಸಾಧಕಿ’: ಅಜ್ಜನ ಹಾದಿಯಲ್ಲೇ ಸಾಗಿ ಬಂದಾಕೆ ಸಾಕ್ಷಿ!

  ರಿಯೋ ಒಲಂಪಿಕ್ಸಿನಲ್ಲಿ ಭಾರತದ ಹೋರಾಟ ಮುಗಿಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ತುಸು ನೆಮ್ಮದಿಯ ಸುದ್ದಿಯೊಂದು ಹೊರ ಬಿದ್ದಿದೆ. ಹರಿಯಾಣದ ಕುಸ್ತಿ ಪಟು ಸಾಕ್ಷಿ ಮಲಿಕ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಜಯಿಸುವುದರೊಂದಿಗೆ ದೇಶದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ. ಭಾರತೀಯ ಕಾಲಮಾನ ಗುರುವಾರ ಮುಂಜಾನೆಯ ವೇಳೆ ಪೂರ್ಣಗೊಂಡ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಸಾಕ್ಷಿ ಮಲಿಕ್ 58 ಕೆಜಿ ಫ್ರೀಸ್ಟೈಲ್ ರೆಸ್ಲಿಂಗ್ ವಿಭಾಗದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡರು. ಈ ಮೂಲಕ ಕನಿಷ್ಟ ಮರ್ಯಾದೆಗಾಗಿ ಹಾತೊರೆಯುತ್ತಿದ್ದ 120 ಕೋಟಿ ಭಾರತೀಯರ ಪಾಲಿನ ‘ಹೀರೊ’ ಆಗಿ..

  August 18, 2016
  ...
  Kashmir freedom
  ದೇಶ

  ಮರೆತ ಕಾಶ್ಮೀರವನ್ನು, ಜತೆಗೆ ‘ಆಮ್ನೆಸ್ಟಿ’ಯನ್ನೂ ನೆನಪಿಸಿದ ಬೆಂಗಳೂರು ಪ್ರತಿಭಟನೆ…!

  ಸುದ್ದಿಯ ಕೇಂದ್ರ ಸ್ಥಾನದಲ್ಲಿದ್ದ ಕಾಶ್ಮೀರದ ಜಾಗ ಈಗ ಬದಲಾಗಿದೆ. ಮುಖ್ಯವಾಹಿನಿ ಮಾಧ್ಯಮಗಳಾವುವೂ ಕಾಶ್ಮೀರದ ವಿಷಯ ಮುಟ್ಟುತ್ತಿಲ್ಲ. ಹಾಗಾದರೆ ಕಾಶ್ಮೀರ ಶಾಂತವಾಯಿತಾ? ಇಲ್ಲ. ಸೋಮವಾರ ಕೆಂಪುಕೋಟೆಯ ಮೇಲೆ ನಿಂತು ನರೇಂದ್ರ ಮೋದಿ, ನಿಮ್ಮ ಪ್ರೇರಿತ ಭಯೋತ್ಪಾದನೆ ನಿಲ್ಲಿಸಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಬಲೂಚಿಸ್ತಾನದ ಜನತೆಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ ಹೇಳಿದರು. ಅದೇ ಹೊತ್ತಿಗೆ ಇತ್ತ ನೌಹಟ್ಟಾದಲ್ಲಿ ಓರ್ವ ಸಿಆರ್ಪಿಎಫ್ ಅಧಿಕಾರಿಯನ್ನು ಹೊಡೆದುರುಳಿಸಲಾಯಿತು. ಭಾನುವಾರ ಮತ್ತು ಸೋಮವಾರ ಕ್ರಮವಾಗಿ ಪಾಕಿಸ್ತಾನ ಮತ್ತು ಭಾರತದ..

  August 16, 2016
  ...
  Independence-Day-india
  ದೇಶ

  ‘ಸ್ವಾತಂತ್ರ್ಯಕ್ಕೆ 70’: ಇಷ್ಟಕ್ಕೂ ಆಗಸ್ಟ್ 15 ರಂದೇ ಯಾಕೆ ನಮಗೆ ಸ್ವಾತಂತ್ರ್ಯ ಬಂತು?

  ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಇವತ್ತಿಗೆ ಸರಿಯಾಗಿ 70 ವರ್ಷಗಳ ಹಿಂದೆ ಬ್ರಿಟಿಷರಿಗೆ ವಸಹಾತು ದೇಶವಾಗಿದ್ದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಕಳೆದ ಇಷ್ಟು ವರ್ಷಗಳಲ್ಲಿ ಈ ದಿನವನ್ನು ದೇಶದ ಹಲವು ಆಂತರಿಕ ಪಲ್ಲಟಗಳ ಆಚೆಗೂ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಭಾವನೆಗಳನ್ನು ಪಕ್ಕಕ್ಕಿಟ್ಟು, ಆಗಸ್ಟ್ 15 ರಂದೇ ಯಾಕೆ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ? ಒಂದೇ ದಿನ ಸ್ವಾತಂತ್ರ್ಯ ಸಿಕ್ಕರೂ, ಭಾರತ ಆಗಸ್ಟ್ 15ರಂದು; ಪಾಕಿಸ್ತಾನ ಆಗಸ್ಟ್ 14ರಂದು ಯಾಕೆ ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿ ಮುಳುಗುತ್ತಿದೆ? ಇಂತಹ ಕೆಲವು ಪ್ರಶ್ನೆಗಳನ್ನು ಇಟ್ಟುಕೊಂಡು ಇತಿಹಾಸವನ್ನು ಕೆದಕಿದರೆ ಕೆಲವೊಂದಿಷ್ಟು ಕುತೂಹಲಕಾರಿ ಮಾಹಿತಿ ಸಿಗುತ್ತವೆ…

  August 15, 2016
  ...
  Modi Dalit
  ದೇಶ

  ಪ್ರಧಾನಿ ಮೋದಿ ತವರು ರಾಜ್ಯ ಗುಜರಾತಿನ ದಲಿತರು ರೊಚ್ಚಿಗೆದ್ದಿದ್ದು ಯಾಕೆ?

  ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತಿನಲ್ಲಿ ದಲಿತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ ಘಟನೆಗಳು ಕಣ್ಣ ಮುಂದಿವೆ. ಇವೆಲ್ಲದರ ಪರಿಣಾಮ ಎಂಬಂತೆ ಮುಖ್ಯಮಂತ್ರಿ ಆನಂದಿ ಪಟೇಲ್ ರಾಜೀನಾಮೆ ನೀಡಲು ಹೊರಟಿದ್ದಾರೆ. ದಲಿತರ ಮೇಲಿನ ಹಲ್ಲೆ ದೇಶದಾದ್ಯಂತ ಜನರನ್ನು ರೊಚ್ಚಿಗೆಬ್ಬಿಸಿದೆ. ಉತ್ತರ ಪ್ರದೇಶದಲ್ಲಿ ಭಾನುವಾರ ದಲಿತರ ರ್ಯಾಲಿ ಮಾಡಲು ಹೊರಟ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜನರಿಲ್ಲದೇ ವಾಪಾಸಾಗಿದ್ದಾರೆ. ಈ ಸಂದರ್ಭದಲ್ಲಿ ಬಿಬಿಸಿಯ ಸೌತಿಕ್ ಬಿಸ್ವಾಸ್ ದಲಿತರ ಮೇಲಿನ ದೌರ್ಜನ್ಯಗಳನ್ನು ವಿವರವಾಗಿ ವಿಶ್ಲೇಷಣೆ ನಡೆಸಿದ್ದಾರೆ. ಅದರ ಕನ್ನಡ ರೂಪಾಂತರನ್ನು ‘ಸಮಾಚಾರ’..

  August 2, 2016
  ...
  irom-sharmila-1
  ದೇಶ

  ಚುನಾವಣಾ ಅಖಾಡಕ್ಕೆ ಶರ್ಮಿಳಾ: 16 ವರ್ಷಗಳ ಉಪವಾಸಕ್ಕೆ ಅಂತ್ಯ ಹಾಡಿದ ‘ಉಕ್ಕಿನ ಮಹಿಳೆ’!

  ಹರ್ಷಕುಮಾರ್ ಕುಗ್ವೆ ಮಣಿಪುರದ ‘ಐರನ್ ಲೇಡಿ’ ಎಂದೇ ಕರೆಯಲಾಗುವ ಇರೋಮ್ ಶರ್ಮಿಳಾ ಇದೇ ಆಗಸ್ಟ್ 9 ರಂದು ತನ್ನ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾಳೆ. ಇದು ದೇಶದಲ್ಲಿ; ವಿಶೇಷವಾಗಿ ಮಣಿಪುರದಲ್ಲಿ ಸಂಚಲನ ಮೂಡಿಸಿದೆ. ಯಾಕೆಂದರೆ ತನ್ನ ಈ ಉಪವಾಸದ ಕಾರಣದಿಂದಾಗಿಯೇ ಜಗತ್ತಿನ ಜನರ ಗಮನ ಸೆಳೆದಾಕೆ ಇರೋಮ್ ಶರ್ಮಿಳಾ. ತಾನು ನಡೆಸಿಕೊಂಡು ಬಂದಿದ್ದ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮೊದಲೇ ಉಪವಾಸ ಸತ್ಯಾಗ್ರಹ ಕೈ ಬಿಡುವ ನಿರ್ಧಾರ ಕೈಗೊಂಡಿರುವುದು ಹಲವರ ಹುಬ್ಬೇರಲು ಕಾರಣವಾಗಿದೆ. ತನ್ನ ಉಪವಾಸ..

  July 27, 2016
  ...
  Flipkart
  ದೇಶ

  ಆನ್ಲೈನ್ ಶಾಪಿಂಗ್: 470 ಕೋಟಿಗೆ ಫ್ಲಿಪ್ ಕಾರ್ಟ್ ಪಾಲಾದ ಜಬಾಂಗ್

  ಆನ್ಲೈನ್ ಶಾಪಿಂಗ್ ತಾಣ ‘ಫ್ಲಿಪ್ ಕಾರ್ಟ್’ ಒಡೆತನಕ್ಕೆ ಸೇರಿದ ‘ಮಿಂತ್ರಾ ಡಾಟ್ ಕಾಂ’, ತಾನು ‘ಜಬಾಂಗ್ ಡಾಟ್ ಕಾಂ’ ಖರೀದಿಸಿರುವುದಾಗಿ ಹೇಳಿಕೊಂಡಿದೆ. ಸುಮಾರು 470 ಕೋಟಿಗೆ ಆನ್ಲೈನ್ ಫ್ಯಾಶನ್ ಶಾಪಿಂಗ್ ತಾಣ ಜಬಾಂಗ್ ಮಿಂತ್ರಾ ತೆಕ್ಕೆ ಸೇರಲಿದೆ. ಜಾಬಾಂಗ್ ಕಳೆದ ಆರ್ಥಿಕ ವರ್ಷದಲ್ಲಿ ಭಾರೀ ನಷ್ಟಕ್ಕೆ ಗುರಿಯಾಗಿತ್ತು. ಆಡಳಿತ ಮಂಡಳಿಯಲ್ಲಿ ಆದ ಬದಲಾವಣೆಗಳು ಮತ್ತು ಮಾರಾಟದಲ್ಲಾದ ಕುಸಿತ ಈ ನಷ್ಟಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಳ್ಳುವ ಸತತ ಪ್ರಯತ್ನಗಳು ವಿಫಲವಾಗಿದ್ದವು. ಇದೀಗ ನಷ್ಟಕ್ಕೆ ಗುರಿಯಾಗಿದ್ದ ಕಂಪೆನಿಯನ್ನು ಸರಿಯಾದ ಸಮಯ ನೋಡಿ..

  July 26, 2016
  ...
  Gujrat Protest
  ದೇಶ

  ಗುಜರಾತ್ ದಲಿತರ ಮೇಲಿನ ಹಲ್ಲೆ ಪ್ರಕರಣ: ಟೀಕೆಗೆ ಒಳಗಾದ ಪ್ರಧಾನಿ ‘ಮೋದಿ ಮೌನ’!

  ಗುಜಾರಾತಿನಲ್ಲಿ ದಲಿತರ ಮೇಲೆ ಗೋ ರಕ್ಷಕರು ನಡೆಸಿದ ಹಲ್ಲೆ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆ. ದೇಶಾದ್ಯಂತ ವ್ಯಾಪಕ ಖಂಡಿನೆಗೆ ಒಳಗಾಗಿದೆ. ಹೀಗಿದ್ದೂ ಪ್ರಧಾನಿ ಮೋದಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಈ ವಿದ್ಯಮಾನಕ್ಕೆ ಈವರೆಗೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಗುಜರಾತಿನ ಉನಾದಲ್ಲಿ ನಾಲ್ವರು ದಲಿತ ಯುವಕರ ಮೇಲೆ ಹಲ್ಲೆ ನಡೆದು ಎರಡು ವಾರವಾಗುತ್ತಾ ಬಂದಿದೆ. ಒಂದು ಕಾಲಕ್ಕೆ ಗುಜರಾತ್ ರಾಜ್ಯವನ್ನು ಇಟ್ಟುಕೊಂಡು ಪ್ರಧಾನಿ ಮೋದಿ ಇಡೀ ದೇಶಕ್ಕೆ ‘ಮಾದರಿ..

  July 23, 2016
  ...
  airforce-AN32
  ದೇಶ

  ಕಾಣೆಯಾದ ಭಾರತೀಯ ವಾಯು ಸೇನೆ ವಿಮಾನ: ‘ಹುಡುಕಾಟ’ದ ಹಿಂದಿನ ಇಂಟರೆಸ್ಟಿಂಗ್ ಕತೆಗಳು!

  ವಾಯು ಸೇನೆಗೆ ಸೇರಿದ ಎಎನ್-32 ವಿಮಾನ ಶುಕ್ರವಾರ ಬೆಳಗ್ಗೆಯಿಂದ ನಾಪತ್ತೆಯಾಗಿದೆ. ನಾಪತ್ತೆಯಾಗುವ ಮೊದಲು ಈ ವಿಮಾನ ಬಂಗಾಳಕೊಲ್ಲಿಯ ಮೇಲೆ ಹಾರಾಡುತ್ತಿತ್ತು. ಎಲ್ಲಾ ವಿಮಾನಗಳು ನಾಪತ್ತೆಯಾದಾಗಲೂ ಚಾಲ್ತಿಗೆ ಬರುವಂತೆ ಇಲ್ಲೂ ಊಹಾಪೋಹ ಅನುಮಾನಗಳು ಚಾಲ್ತಿಗೆ ಬಂದಿವೆ. ಚೆನ್ನೈನಿಂದ ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್’ಗೆ 4 ಅಧಿಕಾರಿಗಳು ಹಾಗೂ 29 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಎನ್-32 ವಿಮಾನ ಬಂಗಾಳ ಕೊಲ್ಲಿ ಸಮುದ್ರದ ಮೇಲೆ ಹಾರಾಡುತ್ತಿದ್ದಾಗ ಸಂಪರ್ಕ ತಪ್ಪಿ ಕಣ್ಮರೆಯಾಗಿದೆ. ಸದ್ಯ ಇಲ್ಲಿವರೆಗೆ ಇದರ ಹಣೆಬರಹ ವರದಿಯಾಗಿಲ್ಲ. ಹಾರಾಟದ ವೇಳೆಯಲ್ಲಿಯೇ ತಂತ್ರಜ್ಞಾನದ ಸಂಪರ್ಕಗಳನ್ನು ಮೀರಿ..

  July 23, 2016
  ...
  rajini-kabali-flight
  ದೇಶ

  ಕನ್ನಡದ ಶಿವಾಜಿ ಮತ್ತು ಕಾರ್ಪೊರೇಟ್ ಕಬಾಲಿ!

  ತಮಿಳುನಾಡಿನಲ್ಲಿ ಎದ್ದಿರುವ ಸುನಾಮಿಯೊಂದು ಈಗ ದೇಶ, ವಿದೇಶಗಳ ಗಡಿಯನ್ನು ದಾಟಿ ಅಪ್ಪಳಿಸುತ್ತಿದೆ; ವಿಮಾನಗಳ ಹೊರಮೈ ಬಣ್ಣವನ್ನು ಬದಲಿಸಿದೆ; ಕಾರ್ಪೊರೇಟ್ ಸಂಸ್ಥೆಗಳಿಗೆ ರಜೆಯನ್ನು ಘೋಷಿಸುವಂತೆ ಮಾಡಿದೆ; ಟೀ ಶರ್ಟ್ಗಳ ಪ್ರಿಂಟ್ ಶೈಲಿಯನ್ನು ಮಾರ್ಪಡಿಸಿದೆ; ಸಾಮಾಜಿಕ ಜಾಲತಾಣಗಳಲ್ಲೂ ಅಲೆಗಳನ್ನು ಎಬ್ಬಿಸಿದೆ; ಅಷ್ಟೇಕೆ, ನಮ್ಮದೇ ‘ತಿಥಿ’ ಸಿನೆಮಾದ ಗಡ್ಡಪ್ಪನನ್ನೂ ರೂಪಾಂತರಿಸಿದೆ… ಅಂದಹಾಗೆ ಆ ಸುನಾಮಿಯ ಹೆಸರು ‘ಕಬಾಲಿ’ ಕೇರ್ ಆಫ್ ರಜನಿಕಾಂತ್! ಜುಲೈ 22ರಂದು ರಜನಿಕಾಂತ್ ಅಭಿನಯದ ಕಬಾಲಿ ಸಿನೆಮಾ ತೆರೆಗೆ ಬರುತ್ತಿದೆ; ಅಥವಾ ನ್ಯೂಸ್ ಚಾನಲ್ಗಳ ಭಾಷೆಯಲ್ಲಿ ಹೇಳುವುದಾದರೆ ಅಪ್ಪಳಿಸಲಿದೆ…

  July 21, 2016

Top