An unconventional News Portal.

ಮೌನೇಶ್ ಪೋತರಾಜ್ ಸಾವಿಗೆ ‘ಮಾಲ್ಗುಡಿ ಟ್ವಿಸ್ಟ್’; ಕ್ರೈಂ ಸೀನ್ ಹುಟ್ಟುಹಾಕಿದ ಆ 7 ಶಂಕೆಗಳು

ಕಳೆದ ಸುಮಾರು ಮೂವತ್ತು ಗಂಟೆಗಳಿಂದ ಪತ್ರಕರ್ತ ಮೌನೇಶ್ ಸಾವು ಮತ್ತು ನಂತರ ಆತನ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

  ...
  ದೇಶ

  ‘ರೈಟ್‌ ಮ್ಯಾನ್‌ ಇನ್‌ ದಿ ರಾಂಗ್‌ ಪಾರ್ಟಿ’; ಅಟಲ್‌ ಬಿಹಾರಿ ವಾಜಪೇಯಿ ಈಗ ಹೇಗಿದ್ದಾರೆ…?

  ಮೊನ್ನೆ ಡಿಸೆಂಬರ್ 25; ಭಾರತದ ಮಾಜಿ ಪ್ರಧಾನಿ, ಶ್ರೇಷ್ಠ ವಾಘ್ಮಿ, ಕವಿ ಹೃದಯಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ. ಅಂದು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸಣ್ಣದಾಗಿ ಸುದ್ದಿಯಾಗಿ ಕಾಣಿಸಿಕೊಳ್ಳುವ ವಾಜಪೇಯಿ ನಿಜಕ್ಕೂ ಹೇಗಿದ್ದಾರೆ? ಅವರ ಆರೋಗ್ಯದಲ್ಲಿ ಏನಾಗಿದೆ? ಅವರ ಕುರಿತು ಬೇರೆಯವರು ಹೋಗಲಿ, ಸ್ವತಃ ಬಿಜೆಪಿಯವರೇ ಹೆಚ್ಚು ಮಾತನಾಡುತ್ತಿಲ್ಲ. ಅವರ ಹುಟ್ಟುಹಬ್ಬದಂದು ಮಾತ್ರ ನೆನಪಿಸಿಕೊಳ್ಳುವ ಮಟ್ಟಕ್ಕೆ ಕೇಸರಿ ಪಕ್ಷದ ಮತ್ಸದ್ಧಿ ರಾಜಕಾರಣಿ ಎಂದು ಬಿಂಬಿಸಲ್ಪಟ್ಟ ನೇತಾರರೊಬ್ಬರ ಸ್ಥಿತಿ ಬಂದು ಬಿಟ್ಟಿದೆ. ವಾಜಿಪೇಯಿ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಗೊತ್ತು. 2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ..

  January 3, 2018
  ...
  ದೇಶ

  ‘ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ-2017’: ಐಎಂಎ ವಿರೋಧ; ವೈದ್ಯರಿಗೆ ಇರುವ ಆಕ್ಷೇಪಗಳೇನು?

  ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಇಂದು (ಮಂಗಳವಾರ) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇಶದ ಎಲ್ಲಾ ಹೊರ ರೋಗಿ ವಿಭಾಗ(ಓಪಿಡಿ)ಗಳನ್ನು ಬಂದ್ ಮಾಡಲು ಸೂಚಿಸಲಾಗಿತ್ತು. ಈ ಹಿಂದೆ ರಾಜ್ಯ ಸರಕಾರದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣದ ವಿಧೇಯಕದ ವಿರುದ್ಧ ವೈದ್ಯಕೀಯ ಸಂಘ ವಿರೋಧ ವ್ಯಕ್ತಪಡಿಸಿ ಸುದ್ದಿಯ ಕೇಂದ್ರಬಿಂದುವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಕೇಂದ್ರದ ವಿರುದ್ಧ ವೈದ್ಯರು ಒಮದು ದಿನ ಮುಷ್ಕರ ನಡೆಸಿದ್ದಾರೆ.  ಕೇಂದ್ರ ಸರಕಾರ ಮಂಡಿಸಿರುವ ‘ರಾಷ್ಟ್ರೀಯ..

  January 2, 2018
  ...
  ದೇಶ

  ‘ರಗ್ಬಿ ತರಬೇತಿ’ಗಾಗಿ ವಿದೇಶಕ್ಕೆ ಹೋದ ಮಕ್ಕಳು: ಕರ್ನಾಟಕದಲ್ಲಿ ಮಾನವ ಕಳ್ಳಸಾಗಣೆಯ ಬೇರುಗಳು

  ವರ್ಷದ ಕೊನೆಯಲ್ಲಿ ಉತ್ತರ ಭಾರತದಿಂದ ಮಕ್ಕಳ ಕಳ್ಳಸಾಗಣೆ ಜಾಲದ ಕುರಿತು ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಭಾರತದಿಂದ 25 ಮಕ್ಕಳನ್ನು ಕ್ರೀಡಾಕೂಟದ ನೆಪದಲ್ಲಿ ಫ್ರಾನ್ಸ್‌ಗೆ ಕರೆಸಿಕೊಂಡು, ಅಲ್ಲಿ ಮಾರಾಟಕ್ಕಿಟ್ಟ ತಂಡವನ್ನು ಪತ್ತೆಹಚ್ಚಲಾಗಿದೆ. ಫ್ರಾನ್ಸ್ ದೇಶದ  ಪೊಲೀಸ್ ಇಂಟರ್ ಪೋಲ್‌ನಿಂದ ಮಾಹಿತಿ ಪಡೆದ ಸಿಬಿಐ ಭಾರತದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.  ಲಲಿತ್ ಡೇವಿಡ್ ಡೀನ್, ಸಂಜೀವ್ ರಾಜ್ ಮತ್ತು ವರುಣ್ ಚೌಧರಿ ವಶದಲ್ಲಿರುವ ಆರೋಪಿಗಳು. ಇವರುಗಳು ದೆಹಲಿ, ಫರೀಯಾಬಾದ್ ಮೂಲದವರು ಎನ್ನಲಾಗಿದೆ. ಆರೋಪಿಗಳ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಮಾನವ ಕಳ್ಳಸಾಗಾಣಿಕೆಗೆ..

  December 30, 2017
  ...
  ದೇಶ

  ಬಹುಕೋಟಿ ಮೇವು ತಿಂದು ಜೈಲು ಪಾಲಾದ ಲಾಲೂ; ಶಿಕ್ಷೆಯಲ್ಲೂ ಅನುಕಂಪ ಗಿಟ್ಟಿಸ್ತಾರಾ ‘ಮಾಸ್ ಲೀಡರ್’?

  ರಾಷ್ಟ್ರೀಯ ಜನತಾ ದಳ (ಆರ್.ಜೆ.ಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತೆ ಜೈಲು ಪಾಲಾಗಿದ್ದಾರೆ. ಪ್ರಖ್ಯಾತ ಮೇವು ಹಗರಣದಲ್ಲಿ ಲಾಲೂ ದೋಷಿ ಎಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಲಾಲೂ ಪ್ರಸಾದ್ ಯಾದವ್ ಸೇರಿ 15 ಜನರು ದೋಷಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಆದೇಶ ನೀಡಿದ್ದಾರೆ. ಆದರೆ ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್ ಮಿಶ್ರಾ ಸೇರಿ 7ಜನರನ್ನು ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದೆ. ಅಪರಾಧಿಗಳಿಗೆ 2018ರ ಜನವರಿ 3ರಂದು..

  December 23, 2017
  ...
  ದೇಶ

  ‘ಚೆನ್ನೈ ಸಂಗಮಮಂ’: ಕರುಣಾನಿಧಿ ಪುತ್ರಿ ಕನಿಮೋಳಿಯ ಎರಡು ಮುಖಗಳು ಮತ್ತು 2ಜಿ ಹಗರಣದ ತೀರ್ಪು!

  ಬಹುನಿರೀಕ್ಷಿತ 2ಜಿ ಸ್ಪೆಕ್ಟ್ರಂ ಹಗರಣದ ತೀರ್ಪು ಹೊರಬಿದ್ದಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಡಿಎಂಕೆ ಸಂಸದೆ ಕನಿಮೋಳಿ ನಿರ್ದೋಷಿಗಳು ಎಂದು ಪಟಿಯಾಲಾದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ 15 ಜನರು ಹಾಗೂ ಮೂರು ಕಂಪೆನಿಗಳನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪಿತ್ತಿದೆ. ಮಾಜಿ ದೂರ ಸಂಪರ್ಕ ಇಲಾಖೆ ಕಾರ್ಯದರ್ಶಿ ಸಿದ್ಧಾರ್ಥ್ ಬಹುರಾ, ರಾಜಾ ಖಾಸಗಿ ಕಾರ್ಯದರ್ಶಿ ಆರ್.ಕೆ. ಚಂಡೋಲಿಯಾ, ಸ್ವಾನ್ ಟೆಲಿಕಾಂ ಮಾಲಿಕ ಶಾಹಿದ್ ಉಸ್ಮಾನ್..

  December 21, 2017
  ...
  ದೇಶ

  ಬಾಪೂ ನಾಡಿನಲ್ಲಿ ಬಿಜೆಪಿ ಪ್ರಯಾಸದ ಗೆಲುವು: ಫಲಿತಾಂಶದ ಅಂತರಾಳ; ಬದಲಾವಣೆ ತುಡಿತಕ್ಕೆ ಅಸ್ತು ಅಂದ ಮತದಾರ!

  ಗುಜರಾತ್ ಗದ್ದುಗೆಗೆ ಬಿಜೆಪಿ ಮರಳಿದೆ. ಆದರೆ ನಿರೀಕ್ಷೆ ಇಟ್ಟಷ್ಟು ಸೀಟುಗಳನ್ನು ಪಡೆಯುವಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ತವರು ನೆಲದಲ್ಲಿಯೇ ವಿಫಲರಾಗಿದ್ದಾರೆ. ಕಾಂಗ್ರೆಸ್ ಊಹೆಗೂ ಮೀರಿ ಸ್ಪರ್ದೆ ನೀಡಿದೆ. ಅದಕ್ಕಿಂತ ಹೆಚ್ಚಾಗಿ, ಗುಜರಾತಿಗರು ಇಬ್ಬರು ಹೋರಾಟಗಾರರನ್ನು ವಿಧಾನಸಭೆಗೆ ಕಳುಹಿಸಿದ್ದಾರೆ; ಪರ್ಯಾಯ ರಾಜಕಾರಣದ ಕನಸಿಗೆ ನೀರೆರಿದ್ದಾರೆ. ಮೇಲ್ನೋಟಕ್ಕೆ ಗುಜರಾತ್ ಚುನಾವಣಾ ಫಲಿತಾಂಶ ಮತಗಟ್ಟೆಗಳ ಸಮೀಕ್ಷೆಗೆ ಹತ್ತಿರವಿದ್ದರೂ, ಅಂತರಾಳದಲ್ಲಿ ಆಲೋಚನೆಗೆ ದೂಡುವಂತಹ ಆಯಾಮಗಳನ್ನು ಹೊಂದಿದೆ ಎಂಬುದು ಗಮನಾರ್ಹ. ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಗೆ, 2014ರಿಂದ..

  December 18, 2017
  ...
  ದೇಶ

  ಬಿಜೆಪಿ ತೆಕ್ಕೆಗೆ ಹಿಮಾಚಲ ಪ್ರದೇಶ: ಉತ್ತರ ಭಾರತ ಈಗ ಇನ್ನಷ್ಟು ಕೇಸರಿಮಯ

  ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಸ್ಪಷ್ಟ ಬಹುಮತವನ್ನು ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಸೋತಿದ್ದಾರೆ. 68  ಕ್ಷೇತ್ರಗಳ ಪೈಕಿ  ಬಿಜೆಪಿ 44, ಕಾಂಗ್ರೆಸ್ 21, ಹಾಗೂ 3 ಕ್ಷೇತ್ರಗಳು ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿವೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಕಳೆದ 6 ಬಾರಿ ಸತತವಾಗಿ ಗೆಲುವು ದಾಖಲಿಸಿತ್ತು.  ಸದ್ಯ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದ ಬೆರಳೆಣಿಕೆಯ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶವೂ ಒಂದಾಗಿತ್ತು. 2012ರಲ್ಲಿ ಇಲ್ಲ್ಲಿ..

  December 18, 2017
  ...
  ದೇಶ

  ‘ಇನ್‌ಸೈಡರ್ ಅಕೌಂಟ್’: ಹೋರಾಟಗಾರ ಜಿಗ್ನೇಶ್ ಮೇವಾನಿ ಗೆಲುವು ಸಾಧ್ಯವಾಗಿದ್ದು ಹೇಗೆ?

  ಗುಜರಾತ್ ರಾಜ್ಯದಲ್ಲಿ ಡಿಸೆಂಬರ್ 8 ಮತ್ತು 14ರಂದು ಎರಡು ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ನಡೆದು ಇಂದು ಫಲಿತಾಂಶ ಪ್ರಕಟವಾಗುತ್ತಿದೆ. ಗುಜರಾತ್ ರಾಜ್ಯದ ವಿಧಾನ ಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಮೂಡಿಸಿ, ಇಡೀ ದೇಶದ ಗಮನ ಸೆಳೆದಿರುವ ಕೆಲವು ಕ್ಷೇತ್ರಗಳಲ್ಲಿ ವಡಗಾಮ್ ಕ್ಷೇತ್ರವೂ ಒಂದು. ಕಳೆದ 20 ವರ್ಷಗಳಿಂದ ಗುಜರಾತಿನಲ್ಲಿ ತಡೆರಹಿತವಾಗಿ ಭಾರತೀಯ ಜನತಾ ಪಕ್ಷವೇ ಜಯಭೇರಿ ಬಾರಿಸುತ್ತಿತ್ತು. ಆದರೆ ಈ ಸಲದ ಚುನಾವಣೆಯಲ್ಲಿ ಬಲವಾದ ತಡೆ ನೀಡಿದವರೆಂದರೆ ಪಾಟೀದಾರ ಸಮುದಾಯದ 24ರ..

  December 18, 2017
  ...
  ದೇಶ

  ‘ಗುಜರಾತ್ ಫಲಿತಾಂಶ’: ಕೈಕೊಟ್ಟ ಸಮೀಕ್ಷೆಗಳು; ‘ಕೈ’ಹಿಡಿಯದ ಯೋಗೇಂದ್ರ ಯಾದವ್ ಊಹೆಗಳು!

  ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗಮನ ಸೆಳೆದ ಹಲವು ವಿಚಾರಗಳಲ್ಲಿ ಯೋಗೇಂದ್ರ ಯಾದವ್ ನುಡಿದ ‘ಭವಿಷ್ಯ’ ಕೂಡ ಒಂದು. ದೇಶದ ಬಹುತೇಕ ಸರ್ವೆ ಏಜೆನ್ಸಿಗಳು, ಮಾಧ್ಯಮಗಳು ಪ್ರಧಾನಿ ಮೋದಿ ತವರು ರಾಜ್ಯ ಬಿಜೆಪಿಗೆ ಅನಾಯಾಸ ತುತ್ತಾಗಲಿದೆ ಎನ್ನುತ್ತಿದ್ದವು. ಅದೇ ವೇಳೆಯಲ್ಲಿ, ಚುನಾವಣಾ ವಿಶ್ಲೇಷಕರೂ ಆಗಿರುವ ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್ ಭಿನ್ನ ನೆಲೆಯ ಸಾಧ್ಯತೆಗಳನ್ನು ಜನರ ಮುಂದಿಟ್ಟರು. ಯೋಗೇಂದ್ರ ಯಾದವ್ ಸ್ವತಃ ಸೆಫಾಲಜಿಸ್ಟ್; ಚುನಾವಣೆಗಳ ವಿಶ್ಲೇಷಕರು. ಹಿಂದೆ ಆಮ್‌ ಆದ್ಮಿ ಪಕ್ಷದಲ್ಲಿದ್ದಾಗ, ದಿಲ್ಲಿಯ 2014 ಚುನಾವಣೆ ವೇಳೆಯಲ್ಲಿ ಎಎಪಿ..

  December 18, 2017
  ...
  ದೇಶ

  ಜಿಗ್ನೇಶ್ ಮೇವಾನಿ ಸಂದರ್ಶನ: ‘ಗುಜರಾತ್ ಚುನಾವಣೆಗಿಂತ 2019ರ ಲೋಕಸಭೆ ಚುನಾವಣೆ ಮುಖ್ಯ’

  ಹಿಂದೊಮ್ಮೆ ಭೂಕಂಪನಕ್ಕೆ ಹೆಸರಾಗಿದ್ದ ಗುಜರಾತಿನಲ್ಲಿ ಈಗ ಯುವಕಂಪನಗಳದ್ದೇ ಸುದ್ದಿ. ಜಿಗ್ನೇಶ್, ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್ ಎಂಬ ಈ ಮೂವರು ಯುವ ನಾಯಕರು ಬಜೆಪಿಗೆ ಎಂತಹ ಮರ್ಮಾಘಾತ ನೀಡಿದ್ದಾರೆಂದರೆ, 1995ರಿಂದಲೂ ಗೆಲುವಿನ ನಾಗಾಲೋಟದಲ್ಲಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ದಿಡೀರ್ ಆಘಾತವನ್ನೆದುರಿಸಿದೆ. ನಾಳೆ ಗುಜರಾತ್ ಚುನಾವಣೆಗಳ ಮತ ಎಣಿಕೆಯಿದೆ. ಮತಗಟ್ಟೆ ಸಮೀಕ್ಷೆಗಳೆಲ್ಲಾ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದರೂ ಗುಜರಾತಿನ ಯಾವೊಬ್ಬ ಬಿಜೆಪಿ ನಾಯಕನ ಮುಖದಲ್ಲೂ ನಂಬಿಕೆಯ ಕಳೆಯಿಲ್ಲ. ಸ್ವತಃ ಬಿಜೆಪಿಯ ಸಂಸದರೇ ಈ ಸಲ ಬೆಜೆಪಿ..

  December 17, 2017

FOOT PRINT

Top