An unconventional News Portal.

    ...
    wire-rajeev-controversy-final
    ಮೀಡಿಯಾ 2.0

    ಉದ್ಯಮಿಯ ‘ಘನತೆಗೆ ಧಕ್ಕೆ’: ‘ದಿ ವೈರ್’ ವರದಿಗಳಿಗೆ ನ್ಯಾಯಾಲಯದ ತಡೆಯಾಜ್ಞೆ

    ದೇಶದ ಟಿಜಿಟಲ್ ಪತ್ರಿಕೋದ್ಯಮದಲ್ಲಿ ‘ಸ್ವತಂತ್ರ’ ಮಾಧ್ಯಮವಾಗಿ ದಾಪುಗಾಲಿಡುತ್ತಿರುವ ‘ದಿ ವೈರ್ ಡಾಟ್ ಇನ್‌’ ಪ್ರಕಟಿಸಿದ ಎರಡು ವರದಿಗಳಿಗೆ ಬೆಂಗಳೂರಿನ ನ್ಯಾಯಾಲಯವೊಂದು ಅನೀಕ್ಷಿತ ನಡೆಯಲ್ಲಿ ತಡೆಯಾಜ್ಷೆ ನೀಡಿದೆ. ಇದೇ ತಿಂಗಳ ಕೊನೆಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಸಂಸದ, ಉದ್ಯಮಿ ರಾಜೀವ್‌ ಚಂದ್ರಶೇಖರ್ ಬೆಂಗಳೂರಿನ 40ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾ. 2 ರಂದು ‘ಘನತೆಗೆ ಧಕ್ಕೆ ಮಾಡುವ’ ವರದಿಗಳ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿನರಲ್ಕರ್ ಭೀಮರಾವ್ ಲಗಮಪ್ಪ..

    March 13, 2017
    ...
    shivrajkumar-banumati
    ಮೀಡಿಯಾ 2.0

    ‘ರಾಜ್ ಲೀಲಾ ವಿನೋದ’: ಶಿವರಾಜ್ ಕುಮಾರ್ ಮುಂದೆ ಪತ್ರಕರ್ತೆ ಪ್ರಶ್ನೆ ಮುಂದಿಟ್ಟಾಗ…

    ಇತ್ತೀಚೆಗೆ ಬಿಡುಗಡೆಗೊಂಡ ನಟ ರಾಜ್ ಕುಮಾರ್ ಹಾಗೂ ನಟಿ ಲೀಲಾವತಿ ಅವರ ವೈಯಕ್ತಿಕ ಸಂಬಂಧದ ಮಾಹಿತಿಗಳನ್ನೊಳಗೊಂಡ ಪುಸ್ತಕದ ಕುರಿತು ನಟ ಶಿವರಾಜ್ ಕುಮಾರ್ ಅವರಿಗೆ ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಸಂಜೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶಿವರಾಜ್ ಕುಮಾರ್ ಅಭಿನಯದ ‘ಶ್ರೀಕಂಠ’ ಸಿನೆಮಾದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಗೋಷ್ಠಿಯ ನಂತರ ‘ಸಿನಿ ಅಡ್ಡ’ ವೆಬ್ ತಾಣದ ಪತ್ರಕರ್ತೆ ಬಿ. ಸಿ. ಭಾನುಮತಿ, ಶಿವರಾಜ್ ಕುಮಾರ್ ಸಂದರ್ಶನ ನಡೆಸಿದ್ದಾರೆ. ಈ ಸಮಯದಲ್ಲಿ ಪತ್ರಕರ್ತೆ ನಟ ಶಿವರಾಜ್ ಕುಮಾರ್ ಮುಂದೆ, ರವಿ..

    January 3, 2017
    ...
    One india and daily hunt
    ಮೀಡಿಯಾ 2.0

    ‘ಒನ್ ಇಂಡಿಯಾ’ದಲ್ಲಿ ‘ಡೈಲಿಹಂಟ್’ ಹೂಡಿಕೆ: ಏನಿದು ಆನ್ಲೈನ್ ಲೆಕ್ಕಾಚಾರ?

    ದೇಶದಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ದಿಗ್ಗಜ ಕಂಪೆನಿಗಳೆರಡು ಕೈ ಜೋಡಿಸಿವೆ. ಆ್ಯಪ್ಗಳಲ್ಲಿ ಸುದ್ದಿ ನೀಡುವಲ್ಲಿ ನಿಸ್ಸೀಮವಾಗಿರುವ ಡೈಲಿಹಂಟ್, ಕರ್ನಾಟಕ ಮೂಲದ ಆನ್‌ಲೈನ್‌ ಲೀಡಿಂಗ್ ಕಂಪೆನಿ ‘ಒನ್ ಇಂಡಿಯಾ’ದಲ್ಲಿ ಹೂಡಿಕೆ ಮಾಡಿದೆ. ಸದ್ಯ ಆನ್‌ಲೈನಿನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಕನ್ನಡ ಸೇರಿದಂತೆ ಭಾರತದ ಪತ್ರಿಕೋದ್ಯಮ ಭವಿಷ್ಯದ ಬಗ್ಗೆ ಮುನ್ನೋಟ ನೀಡುತ್ತಿವೆ. ಕಳೆದೊಂದು ವರ್ಷದಿಂದ ದೇಶದಲ್ಲಿ ಹೊಸ ಹೊಸ ನ್ಯೂಸ್ ಪೋರ್ಟಲ್ಗಳು ಯಶಸ್ಸಿನತ್ತ ಮುನ್ನಡೆಯುತ್ತಿವೆ. ಈ ಕುರಿತು ರಾಯಟರ್ಸ್ ನಡೆಸಿದ ಸಂಶೋಧನೆ ಕುರಿತಾದ ಲೇಖನವೊಂದನ್ನು ಈ ಹಿಂದೆ ‘ಸಮಾಚಾರ’ ಪ್ರಕಟಿಸಿತ್ತು…

    July 23, 2016
    ...
    Samachara online
    ಮೀಡಿಯಾ 2.0

    ಭಾರತ, ಡಿಜಿಟಲ್ ಪತ್ರಿಕೋದ್ಯಮ ಮತ್ತು ಸಂಚಲನ ಮೂಡಿಸುತ್ತಿರುವ ಸ್ಟಾರ್ಟ್ ಅಪ್ಸ್!

    ‘ರಾಯಟರ್ಸ್ ಇನ್ಸಿಟ್ಯೂಟ್  ಫಾರ್ ದಿ ಸ್ಟಡಿ ಆಫ್ ಜರ್ನಲಿಸಂ’ ಇತ್ತೀಚೆಗೆ ‘ಡಿಜಿಟಲ್ ಜರ್ನಲಿಸಂ ಸ್ಟಾರ್ಟ್ ಅಪ್ಸ್ ಇನ್ ಇಂಡಿಯಾ’ (Digital Journalism Startups in India) ಎಂಬ ವಿಷಯದ ಕುರಿತು ಅಧ್ಯಯನ ವರದಿಯೊಂದನ್ನು ಹೊರತಂದಿದೆ. ಸಾಕಷ್ಟು ಒಳನೋಟಗಳನ್ನು ತೆರೆದಿಡುವ ವರದಿಯ ಆಯ್ದ ಭಾಗಗಳು ಇಲ್ಲಿವೆ. ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಇಂಡಿಯಾ ಟುಡೇ ವಿಶ್ವದಲ್ಲೇ ವೇಗವಾಗಿ ಅಂತರ್ಜಾಲ ಬಳಕೆದಾರರನ್ನು ಪಡೆಯುತ್ತಿರುವ ಮಾಧ್ಯಮಗಳಲ್ಲಿ ಮೊದಲ ಸಾಲಿನಲ್ಲಿದೆ ಎಂದು ವರದಿ ಹೇಳಿದೆ. ಇದಕ್ಕೆ ಅದು ಕಾರಣಗಳನ್ನೂ..

    June 2, 2016
    ...
    press-reporters
    ಮೀಡಿಯಾ 2.0

    ಸುದ್ದಿ ಸಂಸ್ಥೆಯ ಸ್ವರೂಪದಲ್ಲೇ ಬದಲಾವಣೆ: ಇಲ್ಲಿ ವರದಿಗಾರರಿಗೇ ಹೆಚ್ಚಿನ ಮನ್ನಣೆ!

    ಎಲ್ಲಾ ಕ್ಷೇತ್ರಗಳಂತೆ ಪತ್ರಿಕೋದ್ಯಮದಲ್ಲೂ ಹೊಸತನದ ತುಡಿತ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅದರ ಮುಂದುವರಿದ ಭಾಗವೇ 101reporters.com. ಇದೊಂದು ಸ್ವತಂತ್ರ ನ್ಯೂಸ್ ಏಜೆನ್ಸಿ. ಆದರೆ ಇಲ್ಲಿ ವರದಿಗಾರರಿಗೇ ಮೊದಲ ಪ್ರಾಶಸ್ತ್ಯ, ಪ್ರಕಾಶಕರಿಗೆ ಏನಿದ್ದರೂ ನಂತರದ ಸ್ಥಾನ. ಇನ್ನೇನು ಚಾಲನೆ ಸಿಗಬೇಕಾಗಿರುವ 101reporters.com ಬೆಂಗಳೂರು ಮೂಲದ ಸಂಸ್ಥೆ. ಇದರ ಉದ್ದೇಶ ಎಲ್ಲೋ ಇರುವ ವರದಿಗಾರರು ಮತ್ತು ಪ್ರಕಾಶಕರನ್ನು ತಂತ್ರಜ್ಞಾನದ ಮೂಲಕ ಒಂದೇ ಸೂರಿನಡಿ ತರುವುದು. ಇಬ್ಬರಿಗೂ ಸಮಾನ ಅವಕಾಶಗಳಿರುವ ವೇದಿಕೆಯನ್ನು ನಿರ್ಮಾಣ ಮಾಡುವುದು ಈ ಸುದ್ದಿ ಸಂಸ್ಥೆಯ ಆಶಯ. ನಡುವಿನ ಕೊಂಡಿ:  ಇವತ್ತು ಪತ್ರಿಕೋದ್ಯಮದಲ್ಲಿ ಪ್ರಕಾಶಕರು..

    May 2, 2016
    ...
    56167fe9bec95-graphics-labels-edit-56167db879bfe
    ಮೀಡಿಯಾ 2.0

    ‘ಲೈಕಿ’ಗೊಂದು ಭಾವ ಬೆರೆಸಿ; ಈತ ಪಕ್ಕಾ ವ್ಯಾಪಾರಿ ಕಂಡ್ರಿ!

    ಜಗತ್ತಿನ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್. ತನ್ನ ವಿಶಿಷ್ಟ, ಸರಳ ವ್ಯವಸ್ಥೆಯಿಂದಾಗಿ ಬಲುಬೇಗ ಬಳಕೆದಾರರನ್ನು ಸೆಳೆದದ್ದು ಇದರ ಹೆಗ್ಗಳಿಕೆ. ಇತ್ತೀಚಿನವರೆಗೂ ಫೇಸ್ ಬುಕ್ ನಲ್ಲಿ ಯಾವುದೇ ಪೋಸ್ಟ್ ಗೆ ಲೈಕ್ ಮತ್ತು ಕಮೆಂಟ್ ಮಾಡುವ ಅವಕಾಶ ಮಾತ್ರ ಇತ್ತು. ಆದರೆ ಈಗ ಇದಕ್ಕೆ ಇನ್ನೂ ಒಂದಷ್ಟು ಆಯ್ಕೆಗಳನ್ನು ಸೇರಿಸಿದೆ ಫೇಸ್ ಬುಕ್. ಲೈಕ್ ಜೊತೆಗೆ ನಿಮ್ಮ ಭಾವನೆಗಳನ್ನೂ ವ್ಯಕ್ತಪಡಿಸಲು ಐದು ಆಯ್ಕೆಗಳನ್ನು ನೀಡಿದೆ. ಅಲ್ಲಿ ನೀವು ಫೊಸ್ಟ್ ಗಳ ಮೇಲೆ ಆಕ್ರೋಷ..

    April 7, 2016
    ...
    Live-Video.jpg
    ಮೀಡಿಯಾ 2.0

    ಫೇಸ್ ಬುಕ್ ನೇರ ಪ್ರಸಾರ: ಯಾರಿಗೆಷ್ಟು ಲಾಭ?

    ತಂತ್ರಜ್ಞಾನದ ಏಣಿ ಹತ್ತಿ ಮಾಧ್ಯಮಗಳು ಯಶಸ್ಸಿನ ಬೆನ್ನೇರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೇಳಿ ಕೇಳಿ ತಂತ್ರಜ್ಞಾನ ಮಾಧ್ಯಮಗಳ ಬೆನ್ನೆಲುಬು. ತಂತ್ರಜ್ಞಾನದ ಸಹಾಯವಿಲ್ಲದೇ ಮಾಧ್ಯಮಗಳನ್ನು ನಡೆಸುವುದು ಅಸಾಧ್ಯದ ಮಾತು. ಇನ್ನೊಂದು ಕಡೆ ತಂತ್ರಜ್ಞಾನಕ್ಕೆ ಮಾಧ್ಯಮ ರಂಗದ ದಿಕ್ಕನ್ನೇ ಬದಲಿಸಿ ಹಾಕುವ ತಾಕತ್ತಿದೆ. ಕೆಲವು ವರ್ಷಗಳ ಹಿಂದೆ ಆನ್ ಲೈನ್ ಜರ್ನಲಿಸಂನ ಕಲ್ಪನೆಯೇ ಇರಲಿಲ್ಲ. ಇಂಟರ್ನೆಟ್ ನಲ್ಲಿ ಟಿವಿ ಬರುತ್ತೆ ಅಂತ ಯಾರೂ ಅಂದುಕೊಂಡಿರಲೇ ಇಲ್ಲ. ಆದ್ರೆ ಇವತ್ತು ಯೂಟ್ಯೂಬ್, ಹಾಟ್ ಸ್ಟಾರ್ ನಂಥ ಸೈಟ್ ಗಳಲ್ಲಿ ಲೈವ್ ಟಿವಿಗಳು ಬರುತ್ತವೆ…

    April 5, 2016
    ...
    Nyusu3
    ಮೀಡಿಯಾ 2.0

    ಸುದ್ದಿಗಳಿಗೆ ವಿಡಿಯೋ ಉಡುಗೆ; ಪೋಡ್ಕಾಸ್ಟ್ ಪತ್ರಿಕೋದ್ಯಮದ ಕಡೆಗೆ ಹೊಸ ನಡಿಗೆ!

    ಮೊಬೈಲ್ ಬಳಕೆಯ ಮಾದರಿಯನ್ನೇ ಬದಲಾಯಿಸಿದ್ದು ಸ್ಮಾರ್ಟ್ ಫೋನ್ ಗಳು. ಇವು ಮಾರುಕಟ್ಟೆಗೆ ಲಗ್ಗೆಇಟ್ಟ ಮೇಲೆ ನಿತ್ಯದ ಬದುಕೇ ಬದಲಾಗಿದೆ. ಇದರ ಪರಿಣಾಮ ಎಲ್ಲಾ ರಂಗಗಳಲ್ಲೂ ಆಗಿದೆ, ಆಗುತ್ತಿದೆ. ಇದಕ್ಕೆ ಪತ್ರಿಕೋದ್ಯಮ ಕೂಡ ಹೊರತಾಗಿಲ್ಲ. ಅಂತರ್ಜಾಲದಿಂದಾಗಿ ಪ್ರಮುಖ ವೃತ್ತಪತ್ರಿಕೆಗಳು, ಸುದ್ದಿ ವಾಹಿನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ. ಕಳೆದುಹೋದ ಗ್ರಾಹಕರನ್ನು ಮಾಧ್ಯಮಗಳು ಆ್ಯಪ್ಗಳಲ್ಲಿ ಹುಡುಕುತ್ತಿವೆ. ಇಂದು ಮುಖ್ಯವಾಹಿನಿಯ ಮಾಧ್ಯಮಗಳು ನಿರಂತರ ಮತ್ತು ಕ್ಷಿಪ್ರವಾಗಿ ಜನರಿಗೆ ಸುದ್ದಿ ತಲುಪಿಸಲು ಆ್ಯಪ್ ಮೊರೆ ಹೋಗಿವೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಸುದ್ದಿ ನೀಡಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಈ ದಿಸೆಯಲ್ಲೇ ಮೂಡಿ ಬಂದಿರುವ ‘ನ್ಯೂಸು’..

    April 3, 2016
    ...
    Rajdeep
    ಮೀಡಿಯಾ 2.0

    ಪೊಲೀಸ್ ಠಾಣೆ ಮೆಟ್ಟಿಲೇರಿದ ರಾಷ್ಟ್ರೀಯ ಪತ್ರಕರ್ತರ ‘ಸಾಮಾಜಿಕ ಅವಹೇಳನ’

    ಹಿರಿಯ ಪತ್ರಕರ್ತ, ಇಂಡಿಯಾ ಟುಡೇ ಗ್ರೂಪ್ ಸಂಪಾದಕೀಯ ಸಲಹೆಗಾರ ರಾಜ್ ದೀಪ್ ಸರ್ದೇಸಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಮೊಬೈಲ್ ನಂಬರನ್ನು ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಲಾಗಿದೆ ಎಂದು  ಚಂದನ್ ಪಟಿಹಾಸ್ಟ್ ಎಂಬಾತನ ವಿರುದ್ಧ ಪೊಲೀಸ್ ಗೆ ದೂರು ನೀಡಿದ್ದಾರೆ. ಈತ ಹಿಂದೂ ಪರ ಸಂಘಟನೆ ಸದಸ್ಯನಾಗಿದ್ದು, ಎಎಪಿಯ ಹೆಸರಿನಲ್ಲಿ ಪೇಸ್ ಬುಕ್ ಅಕೌಂಟ್ ಹೊಂದಿದ್ದ ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ. ಅದು ಮಾರ್ಚ್ 23 ರಾತ್ರಿ. ದೆಹಲಿಯಲ್ಲಿ ದಂತವೈದ್ಯ ಡಾ ಪಂಕಜ್ ನಾರಂಗ್ ರನ್ನು ಮನೆಯಿಂದ ಹೊರಗೆಳೆದ ಗುಂಪೊಂದು,..

    April 2, 2016

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top