An unconventional News Portal.

    ...
    kd-5
    ಟಿವಿ

    ಕೊಹಿನೂರ್ ಶಾಪಕ್ಕೆ ‘ಉತ್ತಮ ಸಮಾಜ’ ಬಲಿ: ಟಿವಿ9 ರಲ್ಲಿ ಘೋರ ಚರ್ಚೆ!

    “ಇದು ಎಲ್ಲಾ ರಾಜ್ಯಗಳಿಗೂ ಹೋಗಿ ಬಂದಿದೆ. ಇಲ್ಲಿಂದ ಅಲ್ಲಿಗೆ ಹೋಗಿದೆ, ಅಲ್ಲಿಂದ ಇಲ್ಲಿಗೆ ಹೋಗಿದೆ. ಮುಸ್ಲಿಂ ರಾಷ್ಟ್ರಗಳಿಗೂ ಹೋಗಿದೆ. ಮುಸ್ಲಿಂ ರಾಜರು ಸೌಮ್ಯವಾಗಿರೋಲ್ಲ. ಎಲ್ಲರೂ ಅಂತಲ್ಲ. ಆದರೆ ಬಹುತೇಕರು ಸೌಮ್ಯವಾಗಿರೋಲ್ಲ. ಅದು ಮಾನಸಿಕ ಸ್ಥಿತಿ. ನಮ್ಮದು ಚಿಕ್ಕದಾಯ್ತು. ಇನ್ನೂ ದೊಡ್ಡದು ಮಾಡ್ಕೋಬೇಕು ಅಂತ ಮಾನಸಿಕ ಸ್ಥಿತಿ…” ಮೇಲಿನ ಮಾತುಗಳಲ್ಲಿ ನಿಮಗೇನಾದರೂ ಅರ್ಥವಾಯ್ತಾ? ನಮಗೂ ಆಗಲಿಲ್ಲ. ಗುರುವಾರ ಬೆಳಗ್ಗೆ ಬೆಳಗ್ಗೆ ರಾಜ್ಯದ ನಂ1 ಸುದ್ದಿ ವಾಹಿನಿ ‘ಟಿವಿ9’ರಲ್ಲಿ ನಡೆಯುತ್ತಿದ್ದ ಚರ್ಚೆಯ ತುಣುಕು ಇದು. ಹೀಗೆ ತಲೆಬುಡ ಇಲ್ಲದ ವಾದ ಮಂಡನೆ..

    April 21, 2016
    ...
    Janasri
    ಟಿವಿ

    ಜನಶ್ರೀಗೆ ಮರುಹುಟ್ಟು: ಹಳೇ ದೋಣಿಗೆ ಅನಂತ ಚಿನಿವಾರ್ ಹುಟ್ಟು!

    ಕನ್ನಡ ಪತ್ರಿಕೋದ್ಯಮದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಶನಿವಾರ ಜನಶ್ರೀ ಸುದ್ದಿ ವಾಹಿನಿಯ ಹಿರಿಯ ಸಂಪಾದಕರಾಗಿ ಅನಂತ ಚಿನಿವಾರ್ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಜನಶ್ರೀ ವಾಹಿನಿಯನ್ನು ಕಟ್ಟಿ, ಸುದ್ದಿ ವಾಹಿನಿಗಳ ಕಾರ್ಯಕ್ರಮಗಳ ವಿಚಾರದಲ್ಲಿ ಬ್ರಾಂಡ್ ಇಮೇಜ್ ತಂದಿದ್ದವರು ಅನಂತ ಚಿನಿವಾರ್. ನಂತರದ ದಿನಗಳಲ್ಲಿ ನಡೆದ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಾಹಿನಿಯಿಂದ ತಮ್ಮ ತಂಡದ ಜತೆ 2013ರ ಮಧ್ಯಭಾಗದಲ್ಲಿ ನಿರ್ಗಮಿಸಿದ್ದರು. ಇದೀಗ ಎರಡೂವರೆ ವರ್ಷಗಳ ನಂತರ, ಮತ್ತೆ ಜನಶ್ರೀ ಪರಿವಾರಕ್ಕೆ ಅನಂತ ಚಿನಿವಾರ್ ಮರಳಿದ್ದಾರೆ. ಪ್ರಬುದ್ಧ ಸಂಪಾದಕ: ..

    April 18, 2016
    ...
    Rehman hassan
    ಟಿವಿ

    ಬಿಟ್ಟರೂ ಬಿಡದ ನ್ಯೂಸ್ ಮೀಡಿಯಾ ಮಾಯೆ!: ರೆಹಮಾನ್ ಜತೆ ಸಮಾಚಾರ ಸಂದರ್ಶನ

    ಸದ್ಯ ಇಲ್ಲಿ ಖುಷಿ ಇದೆ; ಮುಂದೊಂದಿನ ಮತ್ತೆ ಸುದ್ದಿ ಓದುವ ಮನಸ್ಸೂ ಇದೆ. ಒಬ್ಬ ಪತ್ರಕರ್ತನಾಗಿಯೇ ನಿವೃತ್ತನಾಗಬೇಕು ಅಂದುಕೊಂಡಿದ್ದೀನಿ… ಇದು ಸುದ್ದಿ ನಿರೂಪಣೆಯಿಂದ ಮನೋರಂಜನೆ ಎಡೆಗೆ ಸಾಗಿದ ಜನಪ್ರಿಯ ಮುಖ ರೆಹಮಾನ್ ಹಸ್ಸನ್ ಸದ್ಯದ ಮನಸ್ಥಿತಿ. ಟಿವಿ 9 ಕರ್ನಾಟಕದ ಪರದೆಯನ್ನು ಹೆಚ್ಚು ಕಡಿಮೆ ಒಂದು ದಶಕಗಳ ಕಾಲ ಆವರಿಸಿಕೊಂಡಿದ್ದ ರೆಹಮಾನ್, ಇದ್ದಕ್ಕಿದ್ದ ಹಾಗೆ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುವ ಮೂಲಕ ಅಚ್ಚರಿ ಮೂಡಿಸಿದವರು. ಗಟ್ಟಿತನವಿದ್ದ ನಿರೂಪಕ ಯಾಕೆ ಇಂತಹ ನಿರ್ಧಾರ ತೆಗೆದುಕೊಂಡ ಎಂಬ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡಿದವರು…

    April 14, 2016
    ...
    Arnab_G
    ಟಿವಿ

    ‘ದಿ ರೈಸ್ ಅಂಡ್ ಫಾಲ್’ ಆಫ್ ಅರ್ನಾಬ್ ಗೋಸ್ವಾಮಿ!

    ಅದು 1990ರ ದಶಕ… ಭಾರತದಲ್ಲಿ ಇನ್ನೂ 24/7 ಸುದ್ದಿ ವಾಹಿನಿಗಳ ಮೊಗ್ಗು ಬಿಡುತ್ತಿದ್ದ ಕಾಲ. ಅದು ರಾಜದೀಪ್ ಸರ್ದೇಸಾಯಿ ಎಂಬ ‘ಟೈಮ್ಸ್ ಆಫ್ ಇಂಡಿಯಾ’ದ ಪತ್ರಕರ್ತ ಟಿವಿ ಮಾಧ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಸಮಯ ಕೂಡ. ಅದಾಗಲೇ, ಆರಂಭವಾಗಿ ಎರಡು ವರ್ಷವಾಗಿದ್ದ ನ್ಯೂಡೆಲ್ಲಿ ಟೆಲಿವಿಷನ್ (NDTV)ಗೆ ಕಾಲಿಟ್ಟಿದ್ದರು ರಾಜದೀಪ್. ಇಸವಿ 1994; ಆಗ ರಾಜದೀಪ್ ಮನೆಗೆ ಜೋಬರ್ ಅಂತ ಅನ್ನಿಸುವ, ಉದ್ದ ಕೂದಲಿನ ಹುಡುಗನೊಬ್ಬ ಬರುತ್ತಿದ್ದ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಮಾನವಿಕ ಶಾಸ್ತ್ರ ವಿಭಾಗದಲ್ಲಿ ಆತ ಉನ್ನತ ವ್ಯಾಸಾಂಗ ಮಾಡಿದ್ದ. ಮೂಗಿನ ತುದಿಯಲ್ಲಿ..

    April 11, 2016
    ...
    Untitled-1 copy
    ಟಿವಿ

    ಟ್ಯಾಗ್ ಲೈನ್ ಎಂಬ ಪ್ರಚಾರ ತಂತ್ರ ಮತ್ತು ಅಡಿಬರಹದ ಹಿಂದಿರುವ ಆಶಯ!

    ಟ್ಯಾಗ್ ಲೈನ್ ಅಥವಾ ಸ್ಲೋಗನ್ಸ್… ಯಾವುದೇ ಸಂಸ್ಥೆ ಜನರನ್ನು ತನ್ನತ್ತ ಸೆಳೆಯಲು ಬಳಸುವ ಆಕರ್ಷಕರ ವಾಕ್ಯಗಳು. ಜನರ ಮನಸ್ಸನ್ನು ಗೆಲ್ಲಬೇಕು ಎಂದುಕೊಂಡ ಎಲ್ಲಾ ಕಂಪೆನಿಗಳು ಇದನ್ನು ಬಳಸಿಯೇ ಬಳಸುತ್ತವೆ. ಇವತ್ತಿನ ಮುಕ್ತ ಮಾರುಕಟ್ಟೆಯ ಓಘದಲ್ಲಿ ಟ್ಯಾಗ್ ಲೈನ್ಸ್ ಅಗತ್ಯವಾಗಿರುವ ಮಾರುಕಟ್ಟೆಯ ತಂತ್ರ ಕೂಡ. ಕೆಲವೊಮ್ಮೆ ಕಂಪೆನಿಗಳಿಗಿಂತ ಟ್ಯಾಗ್ ಲೈನ್ ಗಳೇ ಜನಪ್ರಿಯತೆ ಗಳಿಸಿರುವ ಉದಾಹರಣೆಗಳೂ ಇವೆ. ಕೆಲವೊಮ್ಮೆ ಇದೇ ಅಡಿಬರಹಗಳು ನಗೆಪಾಟಲಿಗೆ ಈಡಾಗಿದ್ದೂ ಇದೆ. ಇದು ಹೆಚ್ಚು ಕಡಿಮೆ ಎಲ್ಲಾ ಉದ್ಯಮಗಳಿಗೆ ಅನ್ವಯಿಸುವ ಮಾತು. ಆದರೆ ಮಾಧ್ಯಮ ಸಂಸ್ಥೆಗಳ..

    April 6, 2016
    ...
    Public
    ಟಿವಿ

    ಪತ್ರಕರ್ತರಿಗೆ ರಾಜಧಾನಿಯಲ್ಲಿ ಹೊಡೆತ ಬಿದ್ರೆ ಮಾತ್ರ ಅನ್ಯಾಯನಾ ರಂಗಣ್ಣ?

    ಮಾಧ್ಯಮಗಳ ಜತೆ ಸಂಬಂಧ ಹಳಸಿದರೆ ಏನಾಗಬಹುದು ಎಂಬುದರ ಹೊಸ ಸ್ಯಾಂಪಲ್ ಒಂದು ಶುಕ್ರವಾರ ರಾತ್ರಿ ಕರ್ನಾಟಕದ ಜನರಿಗೆ ಪರಿಚಯಿಸಲಾಯಿತು. ಈ ಬಾರಿ ಸುದ್ದಿಕೇಂದ್ರದಲ್ಲಿ ಇರುವವರು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್. ರಂಗನಾಥ್ ಹಾಗೂ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ. ರಂಗಣ್ಣ ನೇತೃತ್ವದ ಪಬ್ಲಿಕ್ ಟಿವಿ ಮತ್ತು ರಾಘವೇಶ್ವರ ಸ್ವಾಮಿ ನಡುವೆ ಎರಡು ವರ್ಷಗಳಿಂದ ನಡೆಯುತ್ತಿದ್ದ ಶೀತಲ ಸಮರ ತಾರಕ್ಕೇರಿದೆ. ಇದಕ್ಕೆ ಕಾರಣ ಗುರುವಾರ ಸೆಷನ್ಸ್ ಕೋರ್ಟ್ ರಾಘವೇಶ್ವರ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನೀಡಿದ ಆದೇಶ. ಸ್ವಾಮಿ ವಿರುದ್ಧ..

    April 1, 2016
    ...
    Sameekshe-tv-viewers-samachara
    ಟಿವಿ

    ಸಮಾಚಾರ ಸಮೀಕ್ಷೆ: ನ್ಯೂಸ್ ಚಾನಲ್ ವೀಕ್ಷಕರೇ ಕೊಟ್ಟ TRP ಎಷ್ಟು?

    ಕನ್ನಡದ ಮಾಧ್ಯಮ ಪಾಲಿಗೆ ಇದೊಂದು ವಿಭಿನ್ನ ಪ್ರಯೋಗ. ಕರ್ನಾಟಕದಲ್ಲಿ ಸುದ್ದಿ ವಾಹಿನಿಗಳು ಚಾಲಾವಣೆಗೆ ಬಂದು ದಶಕದ ನಂತರ ಇದೇ ಮೊದಲ ಬಾರಿಗೆ ವೀಕ್ಷಕರ ಮನಸ್ಥಿತಿಯನ್ನು ಚೌಕಟ್ಟಿನಾಚೆಗೆ ಅರಿಯುವ ಪ್ರಯತ್ನವನ್ನು ‘ಸಮಾಚಾರ’ ಮಾಡಿದೆ. ಇದೊಂತರ ‘ಲವ್ ಅಂಡ್ ಹೇಟ್ರೆಡ್’ ಸಂಬಂಧ! ಕನ್ನಡದ ಸುದ್ದಿ ವಾಹಿನಿಗಳು ಹಾಗೂ ಅಂತರ್ಜಾಲದ ಮೂಲಕ ಜಗತ್ತು ಅರಿಯುತ್ತಿರುವ ಹೊಸ ತಲೆಮಾರಿನ ವೀಕ್ಷಕರ ನಡುವಿನ ಸಂಬಂಧವನ್ನು ಹೀಗೆ ಮಾತ್ರವೇ ವಿವರಿಸಬಹುದೇನೋ? ಬ್ರೇಕಿಂಗ್ ನ್ಯೂಸಿನಿಂದ ಆರಂಭಗೊಂಡು ಮಲಗುವ ಮುನ್ನ ಭಿತ್ತರಿಸುವ ಅಪರಾಧ ಜಗತ್ತಿನ ಸುದ್ದಿಗಳವರೆಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ..

    February 3, 2016

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top