An unconventional News Portal.

    ...
    Suvarna News Sugata
    ಟಿವಿ

    ‘ಕನ್ನಡ ಪ್ರಭ’ದಿಂದ ಸುಗತ ಹೊರಕ್ಕೆ: ಗಾಳಿ ಸುದ್ದಿ ಮತ್ತು ಕಾನ್ವೆಂಟ್ ಶಾಲೆ ಮಕ್ಕಳ ಅತಂತ್ರತೆ!

    ”ಇದು ಶ್ರೀಮಂತರ ಮನೆಯಲ್ಲಿ ಹುಟ್ಟಿದ ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಬಿಟ್ಟು ಓದಿಸುತ್ತಾರಲ್ಲ- ಸವಲತ್ತು ಹೇರಳವಾಗಿರುತ್ತದೆ, ಆದರೆ ಪ್ರೀತಿ ಮಾತ್ರ ಇರುವುದಿಲ್ಲ- ಹಾಗೆ ಇದು,” ಎಂದು ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡ ಪ್ರಭ’ ಪತ್ರಿಕೆಯ ಇವತ್ತಿನ ಸ್ಥಿತಿಯನ್ನು ಬಣ್ಣಿಸುತ್ತಾರೆ ಹಿರಿಯ ಪತ್ರಕರ್ತರೊಬ್ಬರು. ಉದ್ಯಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಸುದ್ದಿ ವಾಹಿನಿ ಮತ್ತು ದಿನಪತ್ರಿಕೆಯ ಒಳಗೆ ಇವತ್ತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಅವರು ವ್ಯಕ್ತಪಡಿಸಿದ ಒನ್ ಲೈನ್ ಅಭಿಪ್ರಾಯ ಇದು. ಹಾಗೆ ನೋಡಿದರೆ, ಸುವರ್ಣ ವಾಹಿನಿಯನ್ನು ಮುನ್ನಡೆಸಿಕೊಂಡು ಬಂದಿರುವ..

    September 2, 2016
    ...
    BTV Crow
    ಟಿವಿ

    ‘ಬಿಳಿ ಕಾಗೆ’ ನೆಪದಲ್ಲಿ ಭಯಾನಕ ಭವಿಷ್ಯ ಮತ್ತು ಜನರಲ್ಲಿ ಭಯ ಹುಟ್ಟುಹಾಕಿದ ಸ್ವಾಮಿ!

    ‘ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಸ್ಫೋಟಕ ಸುದ್ದಿ. ರಾಜ್ಯದ ಭವಿಷ್ಯ ನುಡಿದ ಅಂತಾರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ. ಕಳೆದ ಜುಲೈ 4 ರಂದು ಶ್ರೀರಂಗಪಟ್ಟಣದ, ಕಾವೇರಿ ಪುಣ್ಯ ಕ್ಷೇತ್ರದಲ್ಲಿ ಚಂದ್ರಶೇಖರ್ ಸ್ವಾಮೀಜಿಗೆ ಬಿಳಿಕಾಗೆ ದರ್ಶನ. 5 ದಿನಗಳ ಹಿಂದಷ್ಟೇ ತಮಿಳುನಾಡಿನ ಕೊಯಮತ್ತೂರಲ್ಲಿ ಕಾಣಿಸಿಕೊಂಡಿದ್ದ ಬಿಳಿ ಕಾಗೆ…’. ತಪ್ಪಾಗಿ ಭಾವಿಸಬೇಡಿ; ಮೇಲಿನ 34 ಪದಗಳು ನಮ್ಮವಲ್ಲ. ಮಂಗಳವಾರ ಮಧ್ಯಾಹ್ನದ ವೇಳೆಗೆ ಭಿತ್ತರಗೊಂಡ ಭಯಾನಕ, ಸ್ಫೋಟಕ, ‘ಬೆಚ್ಚಿ ಬೀಳುಸುವಂತಹ’ ಸುದ್ದಿಯೊಂದಕ್ಕೆ ‘ಬಿಟಿವಿ’ ಸುದ್ದಿ ವಾಹಿನಿ ನೀಡಿದ ಟಿಪ್ಪಣಿಯಲ್ಲಿನ ಪದಗಳು ಇವು. ಇದನ್ನು ನೋಡುತ್ತಿದ್ದಂತೆ ಜನ ಯಾವ..

    August 30, 2016
    ...
    suvarna-latest-final
    ಟಿವಿ

    ಚರ್ಚೆಯೊಂದರ ಮರುಪ್ರಸಾರ ಮತ್ತು ಸುವರ್ಣ ವಾಹಿನಿಯ ‘ರೇಟಿಂಗ್’ ಅನಿವಾರ್ಯತೆಗಳು!

    ‘ಆಜಾದಿ ವರ್ಸಸ್ ಸ್ವಾತಂತ್ರ್ಯ’ ನೆಪದಲ್ಲಿ ಸುವರ್ಣ ಸುದ್ದಿ ವಾಹಿನಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಗರಿಗೆದರಿರುವ ಸಮಯದಲ್ಲಿಯೇ, ಸಂಸ್ಥೆಯಿಂದ ಮಾನವ ಸಂಪನ್ಮೂಲ ಅಧಿಕಾರಿ ಹೊರಬೀಳುವ ಮಾಹಿತಿ ಲಭ್ಯವಾಗಿದೆ. ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ವಿಶೇಷವಾಗಿ ಪೇಸ್ಬುಕ್ನಲ್ಲಿ ಸುವರ್ಣ ಸುದ್ದಿ ವಾಹಿನಿ ನಡೆಸಿಕೊಟ್ಟ ಚರ್ಚೆಯ ಸುತ್ತ ವಾದ ವಿವಾದಗಳು ಆರಂಭವಾಗಿವೆ. ಪರಿಣಾಮ; ವಾಹಿನಿ, ಚರ್ಚೆಯನ್ನು ಯಾವುದೇ ಕತ್ತರಿ ಪ್ರಯೋಗಿಸದೆ ಮರು ಪ್ರಸಾರ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಸಾಮಾಜಿಕ ಜಾಲತಾಣವೊಂದು ಮೊದಲ ಬಾರಿಗೆ ಮುಖ್ಯವಾಹಿನಿಯ ಮಾಧ್ಯಮವೊಂದರ..

    August 20, 2016
    ...
    ETV kannada suicid attempt
    ಟಿವಿ

    ಯುವ ಪತ್ರಕರ್ತೆಯ ‘ಮಾತ್ರೆ ಸೇವನೆ’ ಮತ್ತು ‘ಈ ಟಿವಿ’ ನ್ಯೂಸ್ ಸುತ್ತ ನಡೆದ ಬೆಳವಣಿಗೆಗಳು!

    ದೇಶದ ಅತಿದೊಡ್ಡ ಉದ್ಯಮಿಯ ಒಡೆತನಕ್ಕೆ ಇತ್ತೀಚೆಗೆ ಒಳಗಾಗಿರುವ ‘ಈಟಿವಿ ನ್ಯೂಸ್ ಕನ್ನಡ’ (ಪ್ರದೇಶ್ 18) ವಾಹಿನಿಯ ಪತ್ರಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಗುರುವಾರ ಮಾಧ್ಯಮ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಯಿತು. ಅದರಲ್ಲೂ ಕಳೆದ ಕೆಲವು ದಿನಗಳಿಂದ ಅಧಿಕಾರಿಗಳ ಆತ್ಮಹತ್ಯೆ ಕುರಿತಾದ ನಿರಂತರ ಸುದ್ದಿಗಳನ್ನು ನೀಡುತ್ತಿದ್ದ ಸುದ್ದಿ ಮಾಧ್ಯಮಗಳ ವಲಯದೊಳಗೇ ನಡೆದ ಈ ಬೆಳವಣಿಗೆ ಸಹಜ ಕುತೂಹಲಕ್ಕೆ, ಆತುರದಲ್ಲಿ ಹುಟ್ಟಿಕೊಳ್ಳುವ ಊಹಾಪೋಹಗಳಿಗೆ ಕಾರಣವಾಯಿತು. ಇದರ ಜತೆಗೆ, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾದ ಪತ್ರಕರ್ತೆಯ ಫೊಟೋ, ಅರ್ಧಂಬರ್ಧ  ಮಾಹಿತಿಯನ್ನು..

    August 5, 2016
    ...
    Ajith Vishwani
    ಟಿವಿ

    ಭಟ್ಟರ ‘ಸುದ್ದಿಮನೆ’ಯಿಂದ ಅಜಿತ್ ಹೊರಕ್ಕೆ: ಬದಲಾವಣೆ ಪರ್ವಕ್ಕೆ ಹೊಸ ಸೇರ್ಪಡೆ

    “ಪತ್ರಕರ್ತರಿಗೆ ವೆಕೇಷನ್ (ಬಿಡುವು) ಗಳಿಲ್ಲ. ಒಂದು ಸಂಸ್ಥೆ ಬಿಟ್ಟು ಮತ್ತೊಂದು ಸಂಸ್ಥೆ ಸೇರುವಾಗ ಸಿಗುವ ಮಧ್ಯದ ಒಂದಷ್ಟು ದಿನಗಳೇ ಅವರ ಪಾಲಿನ ಬಿಡುವು,” ಎಂಬುದಾಗಿ ಹಿಂದೊಮ್ಮೆ ‘ಸಮಾಚಾರ’ ಜೊತೆಗಿನ ಸಂದರ್ಶನದಲ್ಲಿ ಕನ್ನಡದ ಹಿರಿಯ ಪತ್ರಕರ್ತ ರವಿಕುಮಾರ್ ಹೇಳಿದ್ದರು. ಸದ್ಯ ಇವರು ‘ಕಲರ್ಸ್ ಕನ್ನಡ’ದ ‘ಮನೆ ದೇವ್ರು’ ಧಾರವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಹುಶಃ ಇದೇ ರೀತಿಯ ಬಿಡುವು ಹುಡುಕಿಕೊಂಡು, ವೃತ್ತಿ ಬದುಕಿನಲ್ಲಿ ಮತ್ತೊಂದು ಪಲ್ಲಟಕ್ಕೆ ಕೈ ಹಾಕಿದ್ದಾರೆ ಅಜಿತ್ ಹನುಮಕ್ಕನವರ್. ವಿಶ್ವವಾಣಿಯ ಸಹಾಯ ಸಂಪಾದಕರಾಗಿದ್ದ ಅವರು ಶನಿವಾರ ರಾಜೀನಾಮೆ..

    August 1, 2016
    ...
    Geo pakistan
    ಟಿವಿ

    ‘ಗೋ ಸಂದರ್ಶನ’ಕ್ಕೆ ಮುಂದಾದ ಪಾಕಿಸ್ತಾನದ ಪತ್ರಕರ್ತ: ಅಪರೂಪದ ವರದಿಯನ್ನು ಮಿಸ್ ಮಾಡದೆ ನೋಡಿ!

    ಟಿವಿ ಪತ್ರಕರ್ತನಿಗೆ ಸಂದರ್ಶನ ನೀಡಿದ ಗೋವು.. ತನ್ನ ಬ್ಯುಸಿ ಶೆಡ್ಯೂಲ್ ಮಧ್ಯೆ ಸಂದರ್ಶನಕ್ಕಾಗಿ ಬಿಡುವು ಮಾಡಿಕೊಂಡ ದನ… ಹೀಗೊಂದು ಬ್ರೇಕಿಂಗ್ ನ್ಯೂಸ್ ನಿಮ್ಮ ಟಿವಿಯಲ್ಲಿ ಬಂದರೆ ಹೌಹಾರಿ ಬಿಡುತ್ತೀರಿ ಅಲ್ವಾ? ಆದರೆ, ನಮ್ಮ ಪಕ್ಕದ ಪಾಕಿಸ್ತಾನದಲ್ಲಿ ಹೀಗೊಂದು ಸಾಧ್ಯತೆಯನ್ನು ಟಿವಿ ಪತ್ರಕರ್ತರೊಬ್ಬರು ಅನ್ವೇಷಣೆ ಮಾಡಿದ್ದಾರೆ. ಅಕ್ಷರಶಃ ದನಕ್ಕೆ ಮೈಕ್ ಹಿಡಿದು ಅದರ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ಈ ಮೂಲಕ ಲಾಹೋರಿನ ಹೆದ್ದಾರಿಯನ್ನು ದಾಡಲು ದಿನಾಲೂ ಜಾನುವಾರುಗಳು ಪಡುತ್ತಿರುವ ಕಷ್ಟದ ಕುರಿತು ಸ್ಟೋರಿಯೊಂದನ್ನು ತೆರೆದಿಟ್ಟಿದ್ದಾರೆ. ಇತ್ತಿಚಿನ ದಿನಗಳಲ್ಲಿ ಜಗತ್ತಿನ ಗಮನ..

    July 31, 2016
    ...
    Public Tv
    ಟಿವಿ

    ‘ಮಹದಾಯಿ ಹೋರಾಟ’ದ ವರದಿಗೆ ಮೇಲ್ಪಂಕ್ತಿ ಹಾಕಿದ ಪಬ್ಲಿಕ್ ಟಿವಿ: ‘ಚಾಂಪಿಯನ್ ಡಾನ್ಸ್’ ಮಾಡುತ್ತಿದ್ದವರು ಎಚ್ಚರಾದರು!

    ಉತ್ತರ ಕರ್ನಾಟಕದ ವಾತಾವರಣ ಬಿಗಿಯಾಗಿದೆ. ಜನ ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದೆ. ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ಎಂದು ಹೇಳಿಕೊಂಡು ನರಗುಂದ-ನವಲಗುಂದ ಸುತ್ತ ಮುತ್ತ ಪೊಲೀಸರು ಸಿಕ್ಕ ಸಿಕ್ಕ ಮನೆಗಳಿಗೆ ನುಗ್ಗಿ, ಊರಿನ ಪುರುಷರನ್ನೆಲ್ಲಾ ಬಂಧಿಸುತ್ತಿದ್ದಾರೆ. ಹೆಂಗಸರು ಮೈ ಮೇಲೆ ಲಾಠಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ತಳಮಟ್ಟಕ್ಕೆ ಇಳಿದು, ಪ್ರತ್ಯಕ್ಷ ವರದಿಯನ್ನು ನೀಡುವ ಮೂಲಕ ‘ಪಬ್ಲಿಕ್ ಟಿವಿ’ ಒಟ್ಟಾರೆ ಮಹದಾಯಿ ಹೋರಾಟದ ವರದಿಗಳಿಗಳಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿದೆ. ಶುಕ್ರವಾರ ನವಲಗುಂದದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಯಮನೂರಿನಲ್ಲಿ ಸಂಚರಿಸುತ್ತಿದ್ದ ಪೊಲೀಸ್ ಜೀಪ್..

    July 30, 2016
    ...
    13681049_1704017076529063_7672560418485994980_n
    ಟಿವಿ

    ಸಾವಿಗೂ ಮುನ್ನ ಡಿವೈಎಸ್ಪಿ ಗಣಪತಿ ನೀಡಿದ Exclusive ಟಿವಿ ಸಂದರ್ಶನದ ‘ಮಿಸ್ಟರಿ’ ಬಯಲು!

    ”ಯಾವುದಾದರೂ ಒಂದು ಒಳ್ಳೆ ಟಿವಿ ಚಾನಲ್ ಕಚೇರಿಗೆ ಕರೆದುಕೊಂಡು ಹೋಗು…” ಇದು ಡಿವೈಎಸ್ಪಿ ಎಂ. ಕೆ. ಗಣಪತಿ ಆತ್ಮಹತ್ಯೆಗೂ ಮುನ್ನ ಮಡಿಕೇರಿಯ ವಿನಾಯಕ ಲಾಡ್ಜ್ ಮುಂಭಾಗ ಹತ್ತಿದ ಆಟೋ ಚಾಲಕನಿಗೆ ಹೇಳಿದ ಮಾತು. ಹೀಗೆ, ಗಣಪತಿ ತಮ್ಮ ‘ಡೈಯಿಂಗ್ ಡಿಕ್ಲರೇಶನ್’ ದಾಖಲಿಸಲು ಆಯ್ಕೆ ಮಾಡಿಕೊಂಡ ‘ಟಿವಿ ವನ್’ ಕಚೇರಿಗೆ ತಲುಪಿದರು. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇವತ್ತಿಗೂ ಹಲವು ಪ್ರಶ್ನೆಗಳು ಉಳಿದು ಹೋಗಿವೆ. ಅವುಗಳಲ್ಲಿ ಒಂದು, ಗಣಪತಿ ಸಾವಿಗೂ ಮುನ್ನ ಸಂದರ್ಶನ ನೀಡಲು, ತಮ್ಮೊಳಗಿನ ಒತ್ತಡಗಳನ್ನು ಬಿಚ್ಚಿಡಲು ಸ್ಥಳೀಯ ವಾಹಿನಿಯನ್ನು..

    July 16, 2016
    ...
    crime-line-1
    ಟಿವಿ

    ‘ಕ್ರೈಂ ಸ್ಟೋರಿ’ಯಲ್ಲಿ ರಕ್ತಪಾತ ನೋಡಿಯೇ ಮಲಗುತ್ತಿದ್ದ ವೀಕ್ಷಕರೆಲ್ಲಾ ಎಲ್ಲಿ ಮಾಯವಾದರು?

    ಕೆಲವು ವರ್ಷಗಳ ಹಿಂದಿನ ನಮ್ಮಲ್ಲಿ ಕತ್ತಲಾಗುತ್ತಿದ್ದಂತೆ ಮನೆ ಮನೆಗಳ ಟಿವಿ ಪರದೆಗಳ ಮೇಲೆ ರಕ್ತ ಚಿಮ್ಮುತ್ತಿತ್ತು. ಗಡುಸಾದ ಗಂಡು ದನಿಗಳು ಯಾರನ್ನು ಹೇಗೆ ಎಲ್ಲಿ ಕೊಚ್ಚಿದರು ಎಂದು ಕಾವ್ಯಾತ್ಮಕವಾಗಿ ವಿವರಿಸುತ್ತಿದ್ದವು. ಅದರ ಹಿನ್ನೆಲೆಯಲ್ಲಿ ಮೂಡಿ ಬರುತ್ತಿದ್ದ ಸಂಗೀತ ಕಿವಿಯ ತಮಟೆಗಳನ್ನು ಅಪ್ಪಳಿಸಿ, ರಕ್ತ ಬಿಸಿಯಾಗುವಂತೆ ಮಾಡುತ್ತಿತ್ತು. ‘ಇನ್ನಾದರೂ ಪೊಲೀಸರು ಬಳೆ ಕಳಚಿಟ್ಟು ಗಂಡಸರಾಗಲಿ’ ಎಂಬ ಅಭಿರುಚಿಗಳಿಂದ ಕೂಡಿರುವ, ಅನೂಹ್ಯವಾದ ಸಂದೇಶವನ್ನು ಸಾರುವ ಬರವಣಿಗೆ ಅಡುಗೆ ಮನೆಯಿಂದ ಹಿಡಿದು, ಕಚೇರಿಯ ಟೇಬಲ್ಲುಗಳವರೆಗೆ ಚರ್ಚೆಯ ವಸ್ತುವಾಗಿರುತ್ತಿತ್ತು. ಸೀನ್ ಕಟ್ ಮಾಡಿ..

    July 9, 2016
    ...
    Img copy
    ಟಿವಿ

    ಗಂಡ ಹೆಂಡತಿಯ ‘ಪಬ್ಲಿಕ್’ ಜಗಳದಲ್ಲಿ ಏರಿದ್ದು ಟಿಆರ್ಪಿ; ಬಡವಾಗಿದ್ದು ‘ಉತ್ತಮ ಸಮಾಜ’!

    ಇದೊಂದು ವಿಷ ಚಕ್ರ. ಹತ್ತು ವರ್ಷಗಳ ಹಿಂದೆ ಕಾರಣವಿಲ್ಲದೆ ಟಿವಿ ಚಾನಲ್ ಒಂದು ನಡೆಸಿದ ಪ್ರಯೋಗದ ಯಶಸ್ಸು ತಂದಿಟ್ಟ ಫಜೀತಿ ಇದು. ಇವತ್ತು ಉಗುಳಿದರೆ ಟಿಆರ್ಪಿ ಎಂಬ ತುಪ್ಪ ಹೋಗುತ್ತದೆ, ನುಂಗಿದರೆ ಜನರ ಛೀಮಾರಿಯಿಂದ ಗಂಟಲು ಸುಡುತ್ತಿದೆ. ಒಟ್ಟಿನಲ್ಲಿ, ಇದು ಸೆರಗಿನಲ್ಲಿ ಕಟ್ಟಿಕೊಂಡಿರುವ ಕೆಂಡ. ಇವತ್ತಲ್ಲ ನಾಳೆ ಉಟ್ಟುಕೊಂಡಿರುವ ಸೀರೆ ಸುಟ್ಟು, ಬೆತ್ತಲಾಗುವುದರಲ್ಲಿ ಅನುಮಾನವಿಲ್ಲ. ಅಂದಾಗೆ, ಇದೇನಿದು ಸ್ವಗತ ಅಂತ ಆಲೋಚನೆ ಮಾಡುತ್ತಿದ್ದೀರಾ? ನಾವು ಹೇಳಲು ಹೊರಟಿರುವ ವಿಚಾರ ಈ ಸುದ್ದಿ ವಾಹಿನಿಗಳಲ್ಲಿ, ಮನೋರಂಜನೆ ವಾಹಿನಿಗಳಲ್ಲಿ ಬರುವ..

    June 7, 2016

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top