An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ಟಿವಿ

    ‘ರಿಪಬ್ಲಿಕ್ ಟಿವಿ= ಪ್ಯಾನಲ್ ಚರ್ಚೆ’: ಅರ್ನಾಬ್ ಹಿಂದೆ ಬಿದ್ದ ಜಾಹೀರಾತು ಕಂಪನಿಗಳು!

    ಅರ್ನಾಬ್ ಗೋಸ್ವಾಮಿ ಯಾವತ್ತಿದ್ದರೂ ದೇಶದ ದೊಡ್ಡ ಕಾರ್ಪೊರೇಟ್ ಕಂಪನಿಗಳ ಪಾಲಿಗೆ ‘ಚಿನ್ನದ ಮೊಟ್ಟೆ’ ಎಂಬುದು ಮತ್ತೊಮ್ಮೆ ನಿಜವಾಗುವ ಎಲ್ಲಾ ಸಾಧ್ಯತೆಗಳಿವೆ. ಮೇ. 6ರಂದು ತೆರೆಗೆ ಬರಲಿದೆ ಎನ್ನಲಾದ ಅರ್ನಾಬ್ ನೇತೃತ್ವದ ‘ರಿಪಬ್ಲಿಕ್ ಟಿವಿ’ಗೆ ಈಗಾಗಲೇ ಜಾಹೀರಾತುಗಳ ಸುರಿಮಳೆ ಶುರುವಾಗಿದೆ. ವೀವೋ, ರಿಲಯನ್ಸ್ ಜಿಯೋ, ಎಸ್‌ ಬ್ಯಾಂಕ್, ಓಲಾ, ಹೈಕ್ ಸೇರಿದಂತೆ ಸುಮಾರು ಹತ್ತು ಕಂಪನಿಗಳು ‘ರಿಪಬ್ಲಿಕ್ ಟಿವಿ’ಗೆ ಜಾಹೀರಾತು ನೀಡಲು ಆರಂಭಿಕ ಹಂತದಲ್ಲಿಯೇ ಮುಂದೆ ಬಂದಿವೆ. ಸುದ್ದಿ ಮಾಧ್ಯಮಗಳ ವಿಚಾರದಲ್ಲಿ, ಅವುಗಳು ನೀಡುವ ‘ಕಂಟೆಂಟ್’ ಎಷ್ಟು ಮುಖ್ಯವೋ, ಅವುಗಳು..

    May 4, 2017
    ...
    ಟಿವಿ

    ಉಳಿದಿರುವುದು 4 ದಿನ: ಕಿರುತೆರೆಗೆ ಅಪ್ಪಳಿಸಲಿರುವ ‘ಗೋಸ್ವಾಮಿ ರಿಪಬ್ಲಿಕ್’ ಹೇಗಿರಲಿದೆ?

    ಇನ್ನು ಉಳಿದಿರುವುದು ನಾಲ್ಕು ದಿನಗಳು ಅಷ್ಟೆ. ದೇಶದ ಇಂಗ್ಲಿಷ್ ಸುದ್ದಿ ವಾಹಿನಿಗಳ ಸಾಲಿಗೆ ಹೊಸ ‘ಅಬ್ಬರ’ವೊಂದು ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಕಳೆದ ವರ್ಷ ಅಕ್ಟೋಬರ್ ಹೊತ್ತಿಗೆ ‘ಟೈಮ್ಸ್ ನೌ’ ವಾಹಿನಿಯಲ್ಲಿ ‘ನೇಷನ್ ವಾಂಟ್ಸ್ ಟು ನೋ’ ಅನ್ನುತ್ತಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ, ಈಗ ‘ರಿಪಬ್ಲಿಕ್’ ಟಿವಿಯಲ್ಲಿ ‘ನೇಷನ್ ಸ್ಟಿಲ್ ವಾಂಟ್ಸ್‌ ಟು ನೋ’ ಎನ್ನಲು ರೆಡಿಯಾಗಿದ್ದಾರೆ. ಮೇ. 6ಕ್ಕೆ ಅರ್ನಾಬ್ ಗೋಸ್ವಾಮಿ ನೇತೃತ್ವದ ‘ರಿಪಬ್ಲಿಕ್’ ಕಿರುತೆರೆಗೆ ಅಪ್ಪಳಿಸಲಿದೆ. ಈ ಗೋಸ್ವಾಮಿ ‘ರಿಪಬ್ಲಿಕ್’ ಟಿವಿ ಹೇಗಿರಲಿದೆ ಎಂಬುದಕ್ಕೆ ಕಳೆದ ತಿಂಗಳು ‘ಮ್ಯಾನ್ಸ್ ವರ್ಲ್ಡ್‌’..

    May 2, 2017
    ...
    ಟಿವಿ

    ‘ವೀಕೆಂಡ್‌ ವಿತ್‌ ರಮೇಶ್’ನಲ್ಲಿ ದೊರೆಸ್ವಾಮಿ ಯಾಕೆ ‘ಸಾಧಕ’ರ ಸಾಲಿನಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ?

    ಸಾಮಾನ್ಯವಾಗಿ ರಿಯಾಲಿಟಿ ಕಾರ್ಯಕ್ರಮಗಳು; ರಿಯಾಲಿಟಿ ಮತ್ತು ಕಣ್ಕಟ್ಟುಗಳ ಸಮ್ಮಿಶ್ರಣ. ಅಂದರೆ, ರಿಯಾಲಿಟಿ ಕಾರ್ಯಕ್ರಮಗಳಲ್ಲಿ ತೋರಿಸುವ ಅಷ್ಟೂ ಸತ್ಯವೂ ಅಲ್ಲ; ಹಾಗಂತ ಸಂಪೂರ್ಣ ಸುಳ್ಳೂ ಅಲ್ಲ. ಅವು ಜನ ಮತ್ತು ಸಮಾಜದ ಮೇಲೆ ಬೀರುವ ಪರಿಣಾಮ ದೊಡ್ಡದು. ಅದಕ್ಕೆ ನಮ್ಮೆದುರಿಗೆ ಇರುವ ಸಾಕ್ಷಿ, ನ್ಯೂಯಾರ್ಕ್‌ ನಗರದಲ್ಲಿ ಟ್ಯಾಬ್ಲಾಯ್ಡ್‌ ಪತ್ರಿಕೆಗಳಿಗೆ ಆಹಾರವಾಗಿದ್ದ ಡೊನಾಲ್ಡ್‌ ಟ್ರಂಪ್‌ ಎಂಬ ಉದ್ಯಮಿ ಅಮೆರಿಕಾದ ಅಧ್ಯಕ್ಷರಾಗಿರುವುದು. 2004ರಲ್ಲಿ ಡೊನಾಲ್ಡ್‌ ಟ್ರಂಪ್‌ ಬದುಕಿಗೆ ತಿರುವುದು ನೀಡಿದ್ದು ‘ದಿ ಅಪ್ರೈಂಟಿಸ್’ ಎಂಬ ರಿಯಾಲಿಟಿ ಶೋ. ಒಂದು ರಿಯಾಲಿಟಿ ಕಾರ್ಯಕ್ರಮದ..

    May 1, 2017
    ...
    ಟಿವಿ

    ‘ಹತ್ಯೆಯಾದ ಯುವತಿಯ ಚಾರಿತ್ರ್ಯ ಹರಣ’: ಪಾತಕ ಕಾರ್ಯಕ್ರಮಗಳ ನಿರ್ಮಾಪಕರಿಗೆ ಒಂದು ಪತ್ರ!

    ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳಂಬೆಳಗ್ಗೆಯೇ ಯುವತಿಯೊಬ್ಬಳ ಹತ್ಯೆ ನಡೆಯಿತು. ಅದಾದ ಎರಡು ಗಂಟೆಗಳ ಅಂತರದಲ್ಲಿ ಪೊಲೀಸರು, “ಕೊಲೆಗೀಡಾದ ಶೋಭಾಗೆ ಇನ್ನೊಬ್ಬ ವ್ಯಕ್ತಿಯ ಜತೆ ಸಂಬಂಧ ಇತ್ತು. ಆಕೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆಯಿತು,” ಎಂದು ಹೇಳಿಕೆ ನೀಡಿದರು. ರಾಜಧಾನಿ ಬೆಂಗಳೂರಿನಲ್ಲಿ ನಡೆದ ಯುವತಿಯ ಹತ್ಯೆ ಎಂಬ ಕಾರಣಕ್ಕೆ ಸುದ್ದಿ ವಾಹಿನಿಗಳಲ್ಲಿ ಆ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿತು. ಗಂಟೆ ಗಟ್ಟಲೆ ಕ್ರೈಂ ಎಪಿಸೋಡ್ ಪ್ರಸಾರವಾದವು. ಇದು ಕನ್ನಡದ ಅಷ್ಟೂ ಸುದ್ದಿವಾಹಿನಿಗಳಲ್ಲಿ ದಿನಕ್ಕೆ ಅರ್ಧ ಗಂಟೆ ಲೆಕ್ಕದಲ್ಲಿ ಪ್ರಸಾರವಾಗುವ ‘ಅಪರಾಧ..

    April 21, 2017
    ...
    ಟಿವಿ

    ‘ಬ್ಲಾಕ್‌ಮೇಲ್’ ಬೆನ್ನಲ್ಲೇ ಅನುಮಾನ ಮೂಡಿಸಿದ ಜನಶ್ರೀ ಅಕೌಂಟೆಂಟ್ ಸಾವಿನ ಪ್ರಕರಣ

    ಜನಶ್ರೀ ಸುದ್ದಿ ವಾಹಿನಿಯ ‘ಬ್ಲಾಕ್‌ ಮೇಲ್’ ಪ್ರಕರಣ ಹೊರಬಿದ್ದ ಬೆನ್ನಲ್ಲೇ, ಅದರ ಅಕೌಂಟೆಂಟ್ ಒಬ್ಬರ ಸಾವಿನ ಸುತ್ತ ಈತ ದಟ್ಟ ಅನುಮಾನ ಹೊಗೆಯಾಡುತ್ತಿದೆ. ವಾಹಿನಿಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಕಾರ್ತಿಕ ಲಾರೆನ್ಸ್‌ ಕಳೆದ ಗುರುವಾರ ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಐಸಿಯುನಲ್ಲಿ ಸಾವನ್ನಪ್ಪಿದ್ದರು. ಸದ್ಯ ಪ್ರಕರಣ ಹೆಬ್ಬಾಳ ಟ್ರಾಫಿಕ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಮರಣೊತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಆದರೆ ಕಾರ್ತಿಕ್ ಸಾವಿನ ಹಿನ್ನೆಲೆಯನ್ನು ಗಮನಿಸಿದರೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುವ ಅಂಶಗಳು ಬೆಳಕಿಗೆ ಬರುತ್ತವೆ. ಏನಿದು ಪ್ರಕರಣ?:..

    April 17, 2017
    ...
    ಟಿವಿ

    ಗಣಿ ಧಣಿಯ ಜನಮನದಲ್ಲಿ ‘ಬ್ಲಾಕ್ ಮೇಲ್’ ಅಬ್ಬರ: ಜನಶ್ರೀ ಸಿಇಓ ಬಂಧನದ ಸುತ್ತ…

    ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ಇದೊಂದು ಬಾಕಿ ಇತ್ತು. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಕೆಲವು ಪತ್ರಕರ್ತರ ಹಾಗೂ ವಾಹಿನಿಗಳ ‘ಬ್ಲಾಕ್‌ ಮೇಲ್‌’ ದಂಧೆಗೆ ಈ ಅಧಿಕೃತ ಮುದ್ರೆ ಬಿದ್ದಿದೆ. ಜನಶ್ರೀ ಸುದ್ದಿವಾಹಿನಿಯ ಸಿಇಓ ಲಕ್ಷ್ಮೀಪ್ರಸಾದ್ ವಾಜಪೇಯಿ ಬಂಧನವಾಗಿದೆ. ಕೋರಮಂಗಲ ಪೊಲೀಸರು ಆತ ಸೇರಿದಂತೆ ಇಬ್ಬರನ್ನು ಶುಕ್ರವಾರ ರಾತ್ರಿ ಚಾನಲ್‌ ಕಚೇರಿಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ನೈತಿಕವಾಗಿ ಅಧಃಪತನಗೊಳ್ಳುತ್ತಿರುವ ಸುದ್ದಿ ವಾಹಿನಿಗಳ ಅಂತರಾಳದ ದರ್ಶನವಾದಂತಾಗಿದೆ. ಏನಿದು ಬೆಳವಣಿಗೆ?:  ಜನಶ್ರೀ ವಾಹಿನಿ ಅತ್ಯಂತ ಕೆಟ್ಟ..

    April 15, 2017
    ...
    ಟಿವಿ

    ‘ಸದನ ಸಮಿತಿ’ ಎಂಬ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಾಯಿತು; ಮುಂದೇನು?

      ನಮ್ಮ ದೇಶದಲ್ಲಿ ‘ಟ್ಯಾಬೂ’ ಅಂತ ಅನ್ನಿಸಿಕೊಳ್ಳುವ ಹಲವು ನಿಷಿದ್ಧ ವಿಚಾರಗಳಿವೆ. ಅವುಗಳಲ್ಲಿ ಪ್ರಮುಖವಾದುದು ‘ಮಾಧ್ಯಮಗಳಿಗೆ ನೀತಿ ಸಂಹಿತೆ’ ಅಥವಾ ‘ಮಾಧ್ಯಮಗಳಿಗೆ ಕಡಿವಾಣ ಹಾಕಬೇಕು’ ಎಂಬದು ಒಂದು. ಸ್ವಾತಂತ್ರ್ಯ ನಂತರ, ದೇಶದಲ್ಲಿ ನಡೆದ ಹಲವು ವಿಫಲ ಚರ್ಚೆಗಳಲ್ಲಿ ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು ಎಂಬ ಕುರಿತು ನಡೆದ ವಾಗ್ವಾದಗಳೂ ಸೇರಿವೆ. ಸದ್ಯ ದಕ್ಷಿಣ ಭಾರತ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲಿ ಮಾಧ್ಯಮ ಮತ್ತು ಅವುಗಳಿಗೆ ಇರಬೇಕಾದ ನೈತಿಕ ಚೌಕಟ್ಟುಗಳ ಚರ್ಚೆ ನಡೆಯುತ್ತಿದೆ. ಈ ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವ..

    April 4, 2017
    ...
    ಟಿವಿ

    ‘ಪ್ರಥಮ ಚುಂಬನ…’: ತಾನೇ ತೋಡಿದ ಖೆಡ್ಡಾಕ್ಕೆ ಎಡವಿ ಬಿದ್ದ ಸುದ್ದಿ ವಾಹಿನಿ!

    ಕಿಕ್ಕಿರಿದು ತುಂಬಿರುವ ಭಾರತದ ಸುದ್ದಿ ವಾಹಿನಿಗಳ ಮಾರುಕಟ್ಟೆಗೆ ಹೊಸತಾಗಿ ಲಗ್ಗೆ ಇಡುವುದು ಸುಲಭದ ಮಾತಲ್ಲ. ಬೇರೂರಿರುವ ಚಾನಲ್‌ಗಳ ನಡುವೆ ಹೊಸ ಚಾನಲ್‌ ‘ಲಾಂಚ್‌’ ಮಾಡಿ, ಅದಕ್ಕೊಂದು ‘ಬ್ರಾಂಡ್‌ ನೇಮ್’ ತಂದುಕೊಟ್ಟು, ಜನ ನೋಡುವಂತೆ ಮಾಡಿ, ಟಿಆರ್‌ಪಿ ಗಳಿಸುವುದು ಸಾಹಸದ ಕೆಲಸ. ಇಂತಹದೊಂದು ಸಾಹಸಕ್ಕೆ ಅಣಿಯಾದ ಕೇರಳದ ಹೊಸ ಸುದ್ದಿ ವಾಹಿನಿಯೊಂದು ತನ್ನ ಮೊದಲ ಸ್ಟೋರಿಯ ಕಾರಣಕ್ಕೆ ನ್ಯಾಯಾಂಗ ತನಿಖೆಯನ್ನು ಮೈಮೇಲೆ ಎಳೆದುಕೊಂಡಿದೆ. ಆರಂಭಗೊಂಡ 24 ಗಂಟೆಗಳ ಒಳಗೆ ಕ್ಷಮಾಪಣೆ ಕೋರಿದೆ. ಈ ಮೂಲಕ ಭಾರತದ ಸುದ್ದಿ ವಾಹಿನಿಗಳ ಮೇಲಿರುವ ಮಾರುಕಟ್ಟೆಯ..

    April 1, 2017
    ...
    ಟಿವಿ

    ‘ವಂಚನೆಯ ಪಾಲುದಾರರು’: ಕೋಟಿ ಕೋಟಿ ಜಾಹೀರಾತು ಮತ್ತು ‘ಸುವರ್ಣ ಟಿವಿ’ಯ ನಿರಂತರ ಸುದ್ದಿ

    ಬೆಂಗಳೂರಿನ ಜನರಿಗೆ ವಂಚಿಸಿದ ಆರೋಪದ ಮೇಲೆ ಸುದ್ದಿಯಾದ ಸಚಿನ್ ನಾಯಕ್ ಕುರಿತು ಉದ್ಯಮಿ ರಾಜೀವ್ ಚಂದ್ರಶೇಖರ್ ಒಡೆತನದ ಸುವರ್ಣ ಸುದ್ದಿ ವಾಹಿನಿ ನಿರಂತರ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ, ಆತನ ಸಂಸ್ಥೆಯಿಂದ ವಾಹಿನಿ ಪಡೆದ ಜಾಹೀರಾತು ರೂಪದ ಹಣದ ದಾಖಲೆಗಳು ಹೊರಬಿದ್ದಿವೆ. ಕಳೆದ ಐದಾರು ವರ್ಷಗಳ ಅಂತರದಲ್ಲಿ ರಾಜ್ದಯ ಮುಖ್ಯವಾಹಿನಿಯ ವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದ ಡ್ರೀಮ್ಸ್ ಜಿಕೆ, ಟಿಜಿಎಸ್ ಕಂಪನಿಗಳ ಹಿಂದಿದ್ದ ಸಚಿನ್ ನಾಯಕ್ ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದ. ಈತನ ವಿರುದ್ಧ ಬೆಂಗಳೂರಿನ ನಾನಾ ಪೊಲೀಸ್ ಠಾಣೆಗಳಲ್ಲಿ ನೂರಾರು ಜನ..

    January 13, 2017
    ...
    ಟಿವಿ

    ಫೇಸ್ ಬುಕ್ V/S ಪಬ್ಲಿಕ್ ಟಿವಿ: ಟೀಕೆ ಎಂಬ ಟಿಆರ್ಪಿಯೂ; ‘ದರಿದ್ರ’ ತಂದೊಡ್ಡಿದ ಫಜೀತಿಯೂ…

    “ರಚನಾತ್ಮಕ ಟೀಕೆಗಳಿಂದ ಸಮಸ್ಯೆ ಇಲ್ಲ. ಆದರೆ ಸೊಂಟದ ಕೆಳಗಿನ ಭಾಷೆಯದ್ದೇ ತೊಂದರೆ. ಅಸಹ್ಯ ಟೀಕೆಗಳು ಮಾನಸಿಕವಾಗಿ ಪರಿಣಾಮ ಬೀರುತ್ತವೆ. ಇದರಿಂದ ಏಕಾಗ್ರತೆಗೆ ಭಂಗವಾಗಿದೆ,” ಹೀಗಂದವರು ಪಬ್ಲಿಕ್ ಟಿವಿಯ ಮುಖ್ಯ ನಿರೂಪಕಿ ರಾಧಾ ಹಿರೇಗೌಡರ್. ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಕ್ ಟಿವಿ ಮತ್ತು ಅವರ ವಿರುದ್ಧ ನಡೆಯುತ್ತಿರುವ ಟೀಕೆಗಳ ಹಿನ್ನಲೆಯಲ್ಲಿ ಅವರು ‘ಸಮಾಚಾರ’ದ ಜತೆಗಿನ ಮಾತುಕತೆಯಲ್ಲಿ ಹೇಳಿದ್ದು ಹೀಗೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಚರ್ಚೆಗೆ ಗುರಿಯಾದ ಚಾನಲ್  ಪಬ್ಲಿಕ್ ಟಿವಿ; ನಿರೂಪಕರ ವಿಚಾರಕ್ಕೆ ಬಂದಾಗ ಬಹುಶಃ ಅದು..

    January 10, 2017

FOOT PRINT

Top