An unconventional News Portal.

    ...
    tgs-suvarna-final-cover
    ಟಿವಿ

    ‘ವಂಚನೆಯ ಪಾಲುದಾರರು’: ಕೋಟಿ ಕೋಟಿ ಜಾಹೀರಾತು ಮತ್ತು ‘ಸುವರ್ಣ ಟಿವಿ’ಯ ನಿರಂತರ ಸುದ್ದಿ

    ಬೆಂಗಳೂರಿನ ಜನರಿಗೆ ವಂಚಿಸಿದ ಆರೋಪದ ಮೇಲೆ ಸುದ್ದಿಯಾದ ಸಚಿನ್ ನಾಯಕ್ ಕುರಿತು ಉದ್ಯಮಿ ರಾಜೀವ್ ಚಂದ್ರಶೇಖರ್ ಒಡೆತನದ ಸುವರ್ಣ ಸುದ್ದಿ ವಾಹಿನಿ ನಿರಂತರ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ, ಆತನ ಸಂಸ್ಥೆಯಿಂದ ವಾಹಿನಿ ಪಡೆದ ಜಾಹೀರಾತು ರೂಪದ ಹಣದ ದಾಖಲೆಗಳು ಹೊರಬಿದ್ದಿವೆ. ಕಳೆದ ಐದಾರು ವರ್ಷಗಳ ಅಂತರದಲ್ಲಿ ರಾಜ್ದಯ ಮುಖ್ಯವಾಹಿನಿಯ ವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದ ಡ್ರೀಮ್ಸ್ ಜಿಕೆ, ಟಿಜಿಎಸ್ ಕಂಪನಿಗಳ ಹಿಂದಿದ್ದ ಸಚಿನ್ ನಾಯಕ್ ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದ. ಈತನ ವಿರುದ್ಧ ಬೆಂಗಳೂರಿನ ನಾನಾ ಪೊಲೀಸ್ ಠಾಣೆಗಳಲ್ಲಿ ನೂರಾರು ಜನ..

    January 13, 2017
    ...
    public-tv-vs-facebook
    ಟಿವಿ

    ಫೇಸ್ ಬುಕ್ V/S ಪಬ್ಲಿಕ್ ಟಿವಿ: ಟೀಕೆ ಎಂಬ ಟಿಆರ್ಪಿಯೂ; ‘ದರಿದ್ರ’ ತಂದೊಡ್ಡಿದ ಫಜೀತಿಯೂ…

    “ರಚನಾತ್ಮಕ ಟೀಕೆಗಳಿಂದ ಸಮಸ್ಯೆ ಇಲ್ಲ. ಆದರೆ ಸೊಂಟದ ಕೆಳಗಿನ ಭಾಷೆಯದ್ದೇ ತೊಂದರೆ. ಅಸಹ್ಯ ಟೀಕೆಗಳು ಮಾನಸಿಕವಾಗಿ ಪರಿಣಾಮ ಬೀರುತ್ತವೆ. ಇದರಿಂದ ಏಕಾಗ್ರತೆಗೆ ಭಂಗವಾಗಿದೆ,” ಹೀಗಂದವರು ಪಬ್ಲಿಕ್ ಟಿವಿಯ ಮುಖ್ಯ ನಿರೂಪಕಿ ರಾಧಾ ಹಿರೇಗೌಡರ್. ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಕ್ ಟಿವಿ ಮತ್ತು ಅವರ ವಿರುದ್ಧ ನಡೆಯುತ್ತಿರುವ ಟೀಕೆಗಳ ಹಿನ್ನಲೆಯಲ್ಲಿ ಅವರು ‘ಸಮಾಚಾರ’ದ ಜತೆಗಿನ ಮಾತುಕತೆಯಲ್ಲಿ ಹೇಳಿದ್ದು ಹೀಗೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಚರ್ಚೆಗೆ ಗುರಿಯಾದ ಚಾನಲ್  ಪಬ್ಲಿಕ್ ಟಿವಿ; ನಿರೂಪಕರ ವಿಚಾರಕ್ಕೆ ಬಂದಾಗ ಬಹುಶಃ ಅದು..

    January 10, 2017
    ...
    hy-meti-1
    ಟಿವಿ

    ಮೇಟಿ ‘ಸಿಡಿ ಪುರಾಣಂ’: ಸುದ್ದಿಯ ಹಪಾಹಪಿಯಲ್ಲಿ ವಾಹಿನಿಗಳು ದಿಕ್ಕು ತಪ್ಪಿದ್ದೆಲ್ಲಿ?

    ನಿದ್ದೆಯಲ್ಲಿ ಇರುವವರನ್ನು ಎಬ್ಬಿಸಬಹುದು. ಆದರೆ, ನಿದ್ದೆ ಮಾಡುವವರಂತೆ ನಟಿಸುವವರನ್ನು ಎಬ್ಬಿಸುವುದು ಕಷ್ಟ… ಇದು ಕನ್ನಡದ ಕೆಲವು ಸುದ್ದಿ ವಾಹಿನಿಗಳು ಸಚಿವ ಎಚ್. ವೈ. ಮೇಟಿ ವಿಚಾರದಲ್ಲಿ ನಡೆದುಕೊಂಡ ರೀತಿಗೆ ಒಪ್ಪುವ ಮಾತು. ಎಲ್ಲವೂ ಅಂದುಕೊಂಡಂತೆ ನಡೆದು ಹೋಗಿದ್ದರೆ ಇಷ್ಟೊತ್ತಿಗೆ ಅಬಕಾರಿ ಸಚಿವ ಎಚ್. ವೈ. ಮೇಟಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯಗಳನ್ನು ರಾಜ್ಯದ ಮನೆ ಮಂದಿಗೆ ನಮ್ಮ ಸುದ್ದಿ ವಾಹಿನಿಗಳು ತಲುಪಿಸಿಬಿಟ್ಟಿರುತ್ತಿದ್ದವು. ಸಚಿವರ ರಾಜೀನಾಮೆಗೆ ಒತ್ತಾಯಗಳು ಕೇಳಿ ಬರುತ್ತಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ಗಣಿ ನಾಡು..

    December 13, 2016
    ...
    h-d-kumaraswamy-with-anitha
    ಟಿವಿ

    ಕುಮಾರಣ್ಣ, ಕಸ್ತೂರಿ ಸುದ್ದಿ ವಾಹಿನಿಯ ಸಿಬ್ಬಂದಿಗಳಿಗೇಕೆ ಸಂಬಳ ನೀಡುತ್ತಿಲ್ಲ?

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಡೆತನದ ಸುದ್ದಿ ವಾಹಿನಿ ‘ಕಸ್ತೂರಿ ನ್ಯೂಸ್- 24’ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಾ? ವಾಹಿನಿಯೊಳಗೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಹೀಗೊಂದು ಅನುಮಾನವನ್ನು ಹುಟ್ಟುಹಾಕಿವೆ. ಕಳೆದ 2 ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸಂಬಳವನ್ನು ಆಡಳಿತ ಮಂಡಳಿ ನೀಡಿಲ್ಲ. ಜತೆಗೆ, ವಾಹಿನಿಯಿಂದ ಒಂದಷ್ಟು ಜನ ಪತ್ರಕರ್ತರನ್ನು ಹೊರಗೆ ಹಾಕುವ ಪ್ರಕ್ರಿಯೆಗಳು ತೆರೆಮರೆಯಲ್ಲಿ ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ. ಒಂದು ಕಾಲದಲ್ಲಿ ಅಚ್ಚ ಕನ್ನಡದ ವಾಹಿನಿ ಎಂದು ತೆರೆಗೆ ಬಂದಿದ್ದ ಕಸ್ತೂರಿ ಟಿವಿ ಇತ್ತೀಚಿಗೆ ಆರಕ್ಕೂ..

    November 29, 2016
    ...
    barc-rating-copy
    ಟಿವಿ

    ಬ್ಯಾಂಡ್ ಬಾಜಾ ಬಾರ್ಕ್ ರೇಟಿಂಗ್: ಟಿವಿ9, ವಿ6, ಇಂಡಿಯಾ ನ್ಯೂಸ್ ವಾಹಿನಿಗಳ ಮೇಲೆ ಗುರುತರ ಆರೋಪ

    ಪ್ರಾದೇಶಿಕ ಭಾಷೆಯ ಸುದ್ದಿ ವಾಹಿನಿಗಳ ಮೇಲೆ ವೀಕ್ಷಕರನ್ನು ಅಳೆಯುವ ಏಜೆನ್ಸಿ ಬಾರ್ಕ್ ತನಿಖೆ ಆರಂಭಿಸಿದೆ. ತೆಲುಗಿನ ಎರಡು ಜನಪ್ರಿಯ ವಾಹಿನಿಗಳಾದ ‘ಟಿವಿ9’ ಮತ್ತು ‘ವಿ6’ ಹಾಗೂ ಹಿಂದಿ ಭಾ‍ಷೆಯಲ್ಲಿ ಸುದ್ದಿಯನ್ನು ಭಿತ್ತರಿಸುತ್ತಿರುವ ‘ಇಂಡಿಯಾ ನ್ಯೂಸ್’ ಮೇಲೆ ಗುರುತರ ಆರೋಪ ಕೇಳಿಬಂದಿದೆ. ಟಿವಿಗಳ ರೇಟಿಂಗ್ ನೀಡುವ ‘ಬಾರ್ಕ್ ಇಂಡಿಯಾ’ (ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ – BARC) ರೇಟಿಂಗನ್ನು ತಿರುಚಲು ‘ದುರುದ್ದೇಶ ಪೂರಿತ ಚಟುವಟಿಕೆಯಲ್ಲಿ’ ತೊಡಗಿದ ಆರೋಪದ ಹಿನ್ನೆಲೆಯಲ್ಲಿ ದೂರುಗಳು ಕೇಳಿಬಂದಿದ್ದವು. ಈಗಾಗಲೇ ತನಿಖೆ ಜಾರಿಯಲ್ಲಿದ್ದು ನಾಲ್ಕು ವಾರಗಳ ಕಾಲ ಮೂರೂ ಚಾನಲ್ಲುಗಳನ್ನು ಆಳತೆಯ..

    November 25, 2016
    ...
    keral-highcourt
    ಟಿವಿ

    ‘ಕೋರ್ಟ್ ಬೀಟ್’ ವರದಿಗಾರರಿಗೆ ಕಾನೂನು ಪದವಿ ಕಡ್ಡಾಯ: ಕೇರಳ ಹೈಕೋರ್ಟ್ ಹೊಸ ನಿಯಮ

    ಕೇರಳ ಹೈಕೋರ್ಟಿನ ವಕೀಲರು ಮತ್ತು ಪತ್ರಕರ್ತರ ನಡುವಿನ ಮುಸುಕಿನ ಗುದ್ದಾಟ ಹೊಸ ನಿಯಮದೊಂದಿಗೆ ಅಂತ್ಯವಾಗಿದೆ. ಕೇರಳ ಹೈಕೋರ್ಟಿನ ವಿಚಾರಣೆಗಳನ್ನು ವರದಿ ಮಾಡಲು ತೆರಳುವ ಪತ್ರಕರ್ತರಿಗೆ ಕಾನೂನು ಪದವಿಯನ್ನು ಕೋರ್ಟ್ ಕಡ್ಡಾಯಗೊಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹೈಕೋರ್ಟ್ ಈ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕೋರ್ಟ್ ಬೆಳವಣಿಗೆಗಳನ್ನು ವರದಿ ಮಾಡುವ ಪತ್ರಕರ್ತರು ‘ಲೀಗಲ್ ಕರೆಸ್ಪಾಂಡೆಂಟ್’ ಮಾನ್ಯತೆ ಪಡೆದುಕೊಳ್ಳಲು ಲಾ ಪದವಿ ಹೊಂದುವುದು ಅನಿವಾರ್ಯವಾಗಿದೆ. ಹೊಸ ನಿಯಮಗಳ ಪ್ರಕಾರ, ವರದಿಗಾರರಿಗೆ ಎರಡು ಪ್ರಕಾರದ ಮಾನ್ಯತೆಗಳನ್ನು ಕೋರ್ಟ್ ನೀಡುತ್ತದೆ. ಸಾಮಾನ್ಯ ಮತ್ತು ತಾತ್ಕಾಲಿಕ..

    November 18, 2016
    ...
    p-d-sathish
    ಟಿವಿ

    ಈ ಟಿವಿ ನ್ಯೂಸ್ ಕನ್ನಡಕ್ಕೆ ಹೊಸ ಸಾರಥಿ: ಹೊರಬೀಳ್ತಾರಾ ರಂಗನಾಥ್ ಭಾರಧ್ವಾಜ್?

    ಈ ಟಿವಿ ನ್ಯೂಸ್ ಕನ್ನಡ ವಾಹಿನಿಯ ಸಾರಥ್ಯ ಗುರುವಾರ ಬದಲಾಗಿದೆ. ‘ಈಟಿವಿ ನ್ಯೂಸ್ ಕನ್ನಡ’ ವಾಹಿನಿಯ ಮುಖ್ಯಸ್ಥರ ಸ್ಥಾನಕ್ಕೆ ಕರ್ನಾಟಕದವರೇ ಆದ ಡಿ. ಪಿ. ಸತೀಶ್ ರನ್ನು ದೆಹಲಿಯಿಂದ ಕರೆ ತರಲಾಗಿದೆ. ರಂಗನಾಥ್ ಭಾರಧ್ವಾಜ್ ಸಂಪಾದಕ ಸ್ಥಾನದ ಮೇಲಿನ ಕುರ್ಚಿಯಲ್ಲಿ ಸತೀಶ್ ಆಸೀನರಾಗಿದ್ದಾರೆ. ಈಟಿವಿ ವಾಹಿನಿಯ ಡೆಸ್ಕ್ ನಲ್ಲಿ ಅನೌಪಚಾರಿಕವಾಗಿ ಮಾತನಾಡಿರುವ ‘ನೆಟ್ವರ್ಕ್-18’ ಸಂಸ್ಥೆಯ ‘ನ್ಯೂಸ್ ಸಿಇಒ ಮತ್ತು ಗ್ರೂಪ್ ಎಡಿಟರ್ ಇನ್ ಚೀಫ್’ ರಾಹುಲ್ ಜೋಶಿ ಡಿ. ಪಿ. ಸತೀಶ್ ರನ್ನು ಸಿಬ್ಬಂದಿಗಳಿಗೆ ಪರಿಚಯಿಸಿದ್ದಾರೆ. “ಸದ್ಯ ಉತ್ತರ ಪ್ರದೇಶ..

    November 18, 2016
    ...
    collage-brahmani-maduve
    ಟಿವಿ

    ನರಕದಲ್ಲಿ ಸ್ವರ್ಗ ತೋರಿಸಿದ ರೆಡ್ಡಿ ಕುಟುಂಬ: ‘ಪಾದ ಪೂಜೆ’ಗೆ ವಾಹಿನಿಗಳು ತೆಗೆದುಕೊಂಡ ಪ್ಯಾಕೇಜ್ ಎಷ್ಟು?

    “ಇಲ್ಲಿ ಏನೇನಿದೆ ಎಂದು ನೀವು ನೋಡಬಹುದು. ಮದ್ದೂರು ವಡೆ ಇದೆ. ಪಕ್ಕದಲ್ಲಿ ಚಿರೋಟಿ ಇದೆ. ಪಾಯಸ ಇದೆ. ಬೆಳಗ್ಗೆ 10. 30ರಿಂದಲೇ ಶುರುವಾಗಿದೆ. ಹಪ್ಪಳ, ಸಂಡಿಗೆ, ಐದಾರು ಬಗೆಯ ಸಿಹಿ ತಿಂಡಿಗಳು, ಲಾಡು ಎಲ್ಲಾ ಇದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಬಗೆಬಗೆಯ ತಿಂಡಿ ತಿನಿಸುಗಳಿವೆ. ಬಂದಿರುವ ಎಲ್ಲರಿಗೂ ಊಟ ನೀಡಲು ಬೋಂಡ ಕರಿಯುತ್ತಿದ್ದಾರೆ…” ಹೀಗೆ ಬುಧವಾರ ಬೆಳಗ್ಗೆಯಿಂದ ಕನ್ನಡದ ಸುದ್ದಿ ವಾಹಿನಿಗಳಲ್ಲಿ ನಿರಂತರವಾಗಿ ಮೂಡಿ ಬರುತ್ತಿರುವ ಲೈವ್ ಕಮೆಂಟರಿಗೆ ನಾಡು ಸಾಕ್ಷಿಯಾಗಿದೆ. ಗಣಿ ಧಣಿ,..

    November 16, 2016
    ...
    pratidin-assam-ban
    ಟಿವಿ

    ‘ಎನ್‌ಡಿಟಿವಿ’ ಆಯ್ತು ಈಗ ‘ಪ್ರತಿದಿನ್ ಟೈಮ್ಸ್’ ಸರದಿ; ಮಾಧ್ಯಮಗಳ ಬುಡಕ್ಕೆ ಮೋದಿ ಕೊಡಲಿ ಏಟು!

    ‘ಎನ್‌ಡಿಟಿವಿ ಇಂಡಿಯಾ’ ನಂತರ ಇದೀಗ ‘ಪ್ರತಿದಿನ್ ಟೈಮ್ಸ್’ ಬುಡಕ್ಕೆ ಮೋದಿ ಸರಕಾರ ಕೈ ಹಾಕಿದೆ. ನವೆಂಬರ್ 9 ರಂದೇ ಅಸ್ಸಾಂನ ಪ್ರಮುಖ ವಾಹಿನಿ ‘ಪ್ರತಿದಿನ್ ಟೈಮ್ಸ್ (ಹಿಂದಿನ ‘ನ್ಯೂಸ್ ಟೈಮ್ ಅಸ್ಸಾಂ’) ಚಾನಲ್ ಪ್ರಸಾರಕ್ಕೆ ಮಾಹಿತಿ ಮತ್ತು ಪ್ರಸಾರ ಮಂತ್ರಾಲಯ ನಿಷೇಧ ಹೇರಿದೆ. ಇದಕ್ಕೆ ‘ಪ್ರೊಗ್ರಾಮಿಂಗ್ ನಿಯಮಾವಳಿ’ಗಳನ್ನು ಉಲ್ಲಂಘಿಸಿದ ಕಾರಣವನ್ನು ಸರಕಾರ ಮುಂದಿಟ್ಟಿದೆ. ವಾಹಿನಿಯು ಮನೆ ಕೆಲಸಕ್ಕಿದ್ದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದ ಕ್ರೂರ ಹಲ್ಲೆಯ ದೃಶ್ಯ ಪ್ರಸಾರ ಮಾಡಿತ್ತು. ಈ..

    November 6, 2016
    ...
    ndtv-india-logo
    ಟಿವಿ

    NDTV ಇಂಡಿಯಾ ಸ್ಥಗಿತಕ್ಕೆ ಶಿಫಾರಸು: ಅಸೂಕ್ಷ್ಮ ವರದಿ ಭಿತ್ತರ ಆರೋಪ

    ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ವೇಳೆಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಸುದ್ದಿಯನ್ನು ಭಿತ್ತರಿಸಿದ ಆರೋಪದ ಮೇಲೆ ಎನ್ ಡಿಟಿವಿ ಸಮೂಹದ ಹಿಂದಿ ಸುದ್ದಿ ವಾಹಿನಿ, ಎನ್ಡಿಟಿವಿ ಇಂಡಿಯಾ ವಿರುದ್ಧ ಕೇಂದ್ರ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ಹೀಗಂತ, ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ‘ನ್ಯೂಸ್ ಮಿನಿಟ್’ ವರದಿ ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನ. 9ನೇ ತಾರೀಖು ಎನ್ಡಿಟಿವಿ ಇಂಡಿಯಾ ಒಂದು ದಿನ ಮಟ್ಟಿಗೆ ‘ಆನ್..

    November 3, 2016

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top