An unconventional News Portal.

ಮೀಡಿಯಾ 2.0ಪತ್ರಿಕೆ
    ...
    Vishwavani
    ಪತ್ರಿಕೆ

    ‘ವಿಶ್ವವಾಣಿ’ಯ ಮಿಸ್ಸಿಂಗ್ ಲಿಂಕ್ ಹಾಗೂ ಹೈಕಮಾಂಡ್ ತಲುಪಿದ ನಂಜುಂಡಿ ‘ಹೊಸ ಸಾಹಸ’!

    2015 ಮೇ.. ವಿಶ್ವೇಶ್ವರ ಭಟ್ಟರು ‘ಕನ್ನಡ ಪ್ರಭ’ ಹಾಗೂ ‘ಸುವರ್ಣ ನ್ಯೂಸ್’ ನಡೆಸುತ್ತಿರುವ ಏಷಿಯಾನೆಟ್ ಸಂಸ್ಥೆಯಿಂದ ಹೊರ ಬಿದ್ದಿದ್ದರು. ‘ವಿಜಯ ಕರ್ನಾಟಕ’ದ ಆಡಳಿತ ಮಂಡಳಿಯೊಂದಿಗೆ ಕಹಿ ನೆನಪುಗಳನ್ನು ಹೊತ್ತು ಹೊರ ಬಂದಿದ್ದ ಭಟ್ಟರು ಮತ್ತು ತಂಡ ಹೊಸ ಹುಮ್ಮಸ್ಸಿನೊಂದಿಗೆ ರಾಜೀವ್ ಚಂದ್ರಶೇಖರ್ ಅವರ ಸಂಸ್ಥೆ ಕಟ್ಟುವ ಕೆಲಸಕ್ಕೆ ತೊಡಗಿಕೊಂಡಿದ್ದರು. ಆದರೆ, ಅಲ್ಲಿದ್ದಷ್ಟು ದಿನ ಒಂದಷ್ಟು ಭರವಸೆ, ತಮ್ಮ ಸುತ್ತಮುತ್ತಲಿನವರಿಗೆ ಕೆಲಸ ಕೊಡಿಸಿದ್ದು ಬಿಟ್ಟರೆ, ಪತ್ರಿಕೋದ್ಯಮದಲ್ಲಿ ಹಿಂದೆ ತಂದ ಸಂಚಲವನ್ನು ಮೂಡಿಸುವಲ್ಲಿ ಭಟ್ಟರು ಸೋತು ಹೋಗಿದ್ದರು. ಆದರೂ, ಪ್ರಯತ್ನಗಳು ಜಾರಿಯಲ್ಲಿತ್ತು. ಒಂದು ದಿನ..

    April 12, 2016
    ...
    Edward-Snowden-Wikileaks-ICIJ
    ಪತ್ರಿಕೆ

    ‘ಪನಾಮ ಪೇಪರ್ಸ್’: ಸುದ್ದಿಯಾಗದೇ ಉಳಿದ ಸುದ್ದಿ ಆಚೆಗಿರುವ ಸಾಧ್ಯತೆಗಳು!

    ಕಳೆದ ವಾರ ಜಗತ್ತಿನಾದ್ಯಂತ ಭಾರಿ ಸದ್ದು ಮಾಡಿದ್ದ ‘ಪನಾಮ ಪೇಪರ್ಸ್’ ಸುತ್ತ ಹೊಸ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಅವುಗಳಲ್ಲಿ ಪ್ರಮುಖವಾದುದ್ದು, ‘ಪನಾಮ ಪೇಪರ್ಸ್’ ಮೂಲಕ ಬಹಿರಂಗಪಡಿಸಿದ್ದ ಸುದ್ದಿಗಳಿಗಿಂತ, ಸುದ್ದಿಯಾಗದೇ ಉಳಿದ ದಾಖಲೆಗಳ ಬಗ್ಗೆ ಹಲವರ ಟೀಕೆಗಳು ವ್ಯಕ್ತವಾಗುತ್ತಿರುವುದು. ಇಂದು ಮಾಹಿತಿ ತಂತ್ರಜ್ಞಾನ ಬೆಳೆದು ನಿಂತಿದ್ದು, ಪತ್ರಿಕೋದ್ಯಮ ಮತ್ತು ತಂತ್ರಜ್ಞಾನ ಒಂದಾದರೆ ಏನೇನು ಮಾಡಬಹುದು, ಏನೆಲ್ಲಾ ಘಟಿಸುತ್ತವೆ ಎಂಬುದಕ್ಕೆ ಕಳೆದ ಆರು ವರ್ಷಗಳಲ್ಲಿ ಹೊರಬಂದ ದೊಡ್ಡ ‘ಸ್ಟೋರಿ’ಗಳೇ ಸಾಕ್ಷಿ. ಸರಕಾರಗಳ ಅಥವಾ ಕಂಪನಿಗಳ ದಾಖಲೆಗಳನ್ನು ದೊಡ್ಡ ಮಟ್ಟದಲ್ಲಿ ಸೋರಿಕೆ ಮಾಡುವ..

    April 11, 2016
    ...
    Unaoil media
    ಪತ್ರಿಕೆ

    ‘ಪನಾಮ ಪೇಪರ್ಸ್’ ಹವಾದಲ್ಲಿ ಕೊಚ್ಚಿಹೋಯಿತು ಯುವ ಪತ್ರಕರ್ತನ ತನಿಖಾ ವರದಿ!

    ಅನ್ಆಯಿಲ್… ಉದ್ಯಮ ಜಗತ್ತಿನಲ್ಲಿ ಅಪರಿಚಿತವಾಗಿರುವ, ಅಗೋಚರ ಕಂಪನಿಯ ಹೆಸರಿದು. ಸದ್ಯ ಇದು ಲಕ್ಷಾಂತರ ಕೋಟಿ ಬೆಲೆಬಾಳುತ್ತದೆ. ಮೊನಾಕೋದಲ್ಲಿ ತನ್ನ ಕೇಂದ್ರ ಸ್ಥಾನವನ್ನು ಹೊಂದಿದೆ. ತೈಲ ನಿಕ್ಷೇಪವನ್ನು ಹೊಂದಿರುವ ದೇಶಗಳಾದ ಇರಾಕ್, ಕುವೈಟ್, ಯುಎಇ, ಅಲ್ಜೀರಿಯಾ, ಅಜರ್ ಬೈಜಾನ್, ಕಜಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಕಂಪನಿ ತನ್ನ ಕಾರ್ಯಚರಣೆ ನಡೆಸುತ್ತಿದೆ. ಅನ್ಆಯಿಲ್ ಕಂಪನಿಯ ಒಳಮರ್ಮ ಇಷ್ಟೆ. ರೋಲ್ಸ್ ರಾಯ್ಸ್, ಸ್ಯಾಮ್ಸಂಗ್, ಹಲಿಬರ್ಡನ್, ಹುಂಡೈ, ಲೈಟನ್ ಹೋಲ್ಡಿಂಗ್ಸ್ ನಂಥ ಕಂಪೆನಿಗಳಿಗೆ ಆಯಿಲ್ ಕಾಂಟ್ರಾಕ್ಟ್ ಗಳನ್ನು ಇದು ಎತ್ತಿಕೊಡುತ್ತದೆ. ಇದರಲ್ಲಿ ಭಾರತದ ಎಲ್ ಆಂಡ್..

    April 8, 2016
    ...
    Untitled-1 copy
    ಟಿವಿ

    ಟ್ಯಾಗ್ ಲೈನ್ ಎಂಬ ಪ್ರಚಾರ ತಂತ್ರ ಮತ್ತು ಅಡಿಬರಹದ ಹಿಂದಿರುವ ಆಶಯ!

    ಟ್ಯಾಗ್ ಲೈನ್ ಅಥವಾ ಸ್ಲೋಗನ್ಸ್… ಯಾವುದೇ ಸಂಸ್ಥೆ ಜನರನ್ನು ತನ್ನತ್ತ ಸೆಳೆಯಲು ಬಳಸುವ ಆಕರ್ಷಕರ ವಾಕ್ಯಗಳು. ಜನರ ಮನಸ್ಸನ್ನು ಗೆಲ್ಲಬೇಕು ಎಂದುಕೊಂಡ ಎಲ್ಲಾ ಕಂಪೆನಿಗಳು ಇದನ್ನು ಬಳಸಿಯೇ ಬಳಸುತ್ತವೆ. ಇವತ್ತಿನ ಮುಕ್ತ ಮಾರುಕಟ್ಟೆಯ ಓಘದಲ್ಲಿ ಟ್ಯಾಗ್ ಲೈನ್ಸ್ ಅಗತ್ಯವಾಗಿರುವ ಮಾರುಕಟ್ಟೆಯ ತಂತ್ರ ಕೂಡ. ಕೆಲವೊಮ್ಮೆ ಕಂಪೆನಿಗಳಿಗಿಂತ ಟ್ಯಾಗ್ ಲೈನ್ ಗಳೇ ಜನಪ್ರಿಯತೆ ಗಳಿಸಿರುವ ಉದಾಹರಣೆಗಳೂ ಇವೆ. ಕೆಲವೊಮ್ಮೆ ಇದೇ ಅಡಿಬರಹಗಳು ನಗೆಪಾಟಲಿಗೆ ಈಡಾಗಿದ್ದೂ ಇದೆ. ಇದು ಹೆಚ್ಚು ಕಡಿಮೆ ಎಲ್ಲಾ ಉದ್ಯಮಗಳಿಗೆ ಅನ್ವಯಿಸುವ ಮಾತು. ಆದರೆ ಮಾಧ್ಯಮ ಸಂಸ್ಥೆಗಳ..

    April 6, 2016
    ...
    vijayavani 5
    ಪತ್ರಿಕೆ

    ಒಬ್ಬರಿಗೆ ಇನಾಮು; ಇನ್ನೊಬ್ಬರಿಗೆ ವರ್ಗಾವಣೆ: ಇದು ವಿಜಯವಾಣಿಯ ‘ಸಾಮಾಜಿಕ ನ್ಯಾಯ’!

    ಇದು ಒಂದೇ ಸಂಸ್ಥೆಗೆ ಸೇರಿದ ಇಬ್ಬರು ಪತ್ರಕರ್ತರ ವಿಭಿನ್ನ ಕತೆ. ಒಬ್ಬರು ಅಜ್ಜಮಾಡು ಕುಟ್ಟಪ್ಪ; ವಿಜಯವಾಣಿ ಪತ್ರಿಕೆಯ ಮಡಿಕೇರಿ ವರದಿಗಾರ. ಮತ್ತೊಬ್ಬರು ವಿಜಯ ಕುಮಾರ್ ಸಿಗರನಹಳ್ಳಿ; ಅದೇ ಪತ್ರಿಕೆಯ ಹಾಸನ ವರದಿಗಾರರಾಗಿದ್ದವರು. ಪ್ರಲೋಭನೆಗೆ ಒಳಗಾಗದೆ ಪ್ರಾಮಾಣಿಕವಾಗಿ ಉಳಿದು ವಸ್ತುನಿಷ್ಟ ವರದಿ ಮಾಡಿದ್ದಕ್ಕೆ ಕುಟ್ಟಪ್ಪರಿಗೆ ಪತ್ರಿಕೆ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುತ್ತದೆ. ತನ್ನೂರಿನಲ್ಲಿ ದಲಿತರು ಅನುಭವಿಸುತ್ತಿದ್ದ ಅಸ್ಪೃಶ್ಯತೆ ಬಗ್ಗೆ ಬರೆದು ಪ್ರಬಲ ಶಕ್ತಿಗಳ ವಿರೋಧ ಕಟ್ಟಿಕೊಂಡ ವಿಜಯಕುಮಾರನನ್ನು ಅದೇ ಪತ್ರಿಕೆ ದೂರದ ಗಂಗಾವತಿಗೆ ವರ್ಗಾವಣೆ ಮಾಡುತ್ತದೆ. ಒಂದೇ..

    April 4, 2016
    ...
    playboy_samachara_journalism_kannada-1
    ಪತ್ರಿಕೆ

    ‘ಪ್ಲೇ ಬಾಯ್’ ಪತ್ರಕರ್ತನ ರೊಮ್ಯಾಂಟಿಕ್ ಬಂಗಲೆ ಮತ್ತು ಅದರೊಳಗಿನ ಕತೆಗಳು!

    ಅಮೆರಿಕಾದ ಲಾಸ್ ಆಂಜಲೀಸ್ನಲ್ಲಿರುವ ಹೋಂಬಿ ಹಿಲ್ಸ್ ಬಳಿ ಮನೆಯೊಂದು ಮಾರಾಟಕ್ಕಿದೆ. ಬೆಲೆ 20 ಕೋಟಿ ರೂಪಾಯಿಗಳು. 20 ಸಾವಿರ ಚದರ ಅಡಿಗಳಿಗೆ ಹರಡಿಕೊಂಡಿರುವ ಈ ಬೃಹತ್ ಬಂಗಲೆಯಲ್ಲಿ 29 ಕೊಠಡಿಗಳಿವೆ. ಅತಿಥಿಗಳಿಗಾಗಿ ನಾಲ್ಕು ಪ್ರತ್ಯೇಕ ರೂಮುಗಳಿವೆ. ಖಾಸಗಿ ಪ್ರಾಣಿ ಸಂಗ್ರಹಾಲಯಕ್ಕೆ ವಿಶೇಷ ಅನುಮತಿಯೂ ಇದೆ. ಇವತ್ತು ಅಮೆರಿಕಾದ ರಿಯಲ್ ಎಸ್ಟೇಟ್ ವಲಯದಲ್ಲಿ ಮಾರಾಟಕ್ಕಿರುವ ದುಬಾರಿ ಮನೆಯಿದು. ನಿಮಗೆ, ಹೀಗೆ ಹೇಳುವುದಕ್ಕಿಂತ ಈ ಮನೆಯನ್ನು ‘ಪ್ಲೇ ಬಾಯ್ ಮ್ಯಾನ್ಶನ್’ ಎಂದು ಕರೆಯುತ್ತಾರೆ ಎಂದು ಹೇಳುವುದೇ ಸೂಕ್ತ. ನಿಜ, ಇದು..

    February 19, 2016

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top