An unconventional News Portal.

ಮೀಡಿಯಾ 2.0ಪತ್ರಿಕೆ
  ...
  yusuf-nalabandh-terror-story
  ಪತ್ರಿಕೆ

  ಮಾಧ್ಯಮ, ಭಯೋತ್ಪಾದನೆ ಮತ್ತು ಒಂದು ‘ಸಂಚಿನ ಪ್ರಕರಣ’!

  ಪಿಎಚ್ ಅದು 2012ರ ಅಕ್ಟೋಬರ್ ತಿಂಗಳು. ಗಾಂಧಿ ಜಯಂತಿಯನ್ನು ಮುಗಿಸಿ ಇನ್ನೂ ಹತ್ತು ದಿನಗಳು ಕಳೆದಿದ್ದವು ಅಷ್ಟೆ. ನಾನಾಗ ಕನ್ನಡದ ನಂಬರ್ 1 ದೈನಿಕವೊಂದರಲ್ಲಿ ಹಿರಿಯ ವರದಿಗಾರ. ಎಂದಿನಂತೆ ದಿನದ ಸುದ್ದಿಗಳನ್ನು ಅರಸಲು ಹೊರಟವನಿಗೆ ಹೊಸ ಸುದ್ದಿಯೊಂದು ಕಿವಿಗೆ ಬಿದ್ದಿತ್ತು. ಅದು ಇಂಗ್ಲಿಷ್ ದೈನಿಕವೊಂದರಲ್ಲಿ ವರದಿಗಾರನಾಗಿದ್ದ ಯುವಕನೊಬ್ಬ ‘ಇಂಡಿಯನ್ ಮುಜಾಹಿದೀನ್’ (ಅವತ್ತಿಗೆ ‘ಐಸಿಸ್’ ಇಷ್ಟು ಫೇಮಸ್ ಆಗಿರಲಿಲ್ಲ) ಸಂಘಟನೆ ಜತೆ ಇದ್ದನಂತೆ; ಆತನನ್ನು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ ಎಂಬ ವಿಚಾರವಾಗಿತ್ತು. ಅವತ್ತಿಗೆ ಪತ್ರಕರ್ತರಲ್ಲಿಯೇ ಒಬ್ಬ, ಮುಸ್ಲಿಂ ಭಯೋತ್ಪಾದಕ ಸಂಘಟನೆ ಜತೆ..

  September 15, 2016
  ...
  Cauvery coverage
  ಕಾವೇರಿ ವಿವಾದ

  ಭಾವನೆಗಳಿಗೆ ಬೆಲೆ; ಜನರ ಆಕ್ರೋಶಕ್ಕೆ ಮಣೆ: ಇದು ದಿನಪತ್ರಿಕೆಗಳ ‘ಕಾವೇರಿ ಕವರೇಜ್’!

  ‘ಮತ್ತೆ ಭಾವನೆಗಳನ್ನು ಕೆಣಕಿದ ಕಾವೇರಿ’, ‘ಕೆಂಡವಾದ ಕಾವೇರಿ’, ‘ತಮಿಳ್ನಾಡಿಗೆ ಹರಿದ ಕಣ್ಣೀರು’, ‘ಆದೇಶ ಮಾರ್ಪಾಡು: ಅರ್ಜಿ ಸಲ್ಲಿಕೆಗೆ ನಿರ್ಧಾರ’, ‘ಕಾದಿದೆ ಕಾವೇರಿ ಗಂಡಾಂತರ’!, ‘ಆಕ್ರೋಶದ ನಡುವೆಯೂ ಹರಿದ ಕಾವೇರಿ’, ‘ಮತ್ತೆ ಬೆಂಕಿಯಾದ ನೀರು’… ಇವು ಕನ್ನಡ ಪ್ರಮುಖ ದಿನಪತ್ರಿಕೆಗಳು ಕಾವೇರಿ ವಿಚಾರದಲ್ಲಿ ಬುಧವಾರ ತಮ್ಮ ಮೊದಲ ಪುಟದಲ್ಲಿ ಪ್ರಕಟಿಸಿದ ತಲೆ ಬರಹಗಳು. ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು ಸೋಮವಾರ. ಅಂದು ಹಬ್ಬದ ನಿಮಿತ್ತ ಮುದ್ರಣ ಮಾಧ್ಯಮಗಳು ರಜೆ ತೆಗೆದುಕೊಂಡಿದ್ದವು. ಪತ್ರಿಕಾ ಕಚೇರಿಗಳು ಕೆಲಸ..

  September 7, 2016
  ...
  Suvarna News Sugata
  ಟಿವಿ

  ‘ಕನ್ನಡ ಪ್ರಭ’ದಿಂದ ಸುಗತ ಹೊರಕ್ಕೆ: ಗಾಳಿ ಸುದ್ದಿ ಮತ್ತು ಕಾನ್ವೆಂಟ್ ಶಾಲೆ ಮಕ್ಕಳ ಅತಂತ್ರತೆ!

  ”ಇದು ಶ್ರೀಮಂತರ ಮನೆಯಲ್ಲಿ ಹುಟ್ಟಿದ ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಬಿಟ್ಟು ಓದಿಸುತ್ತಾರಲ್ಲ- ಸವಲತ್ತು ಹೇರಳವಾಗಿರುತ್ತದೆ, ಆದರೆ ಪ್ರೀತಿ ಮಾತ್ರ ಇರುವುದಿಲ್ಲ- ಹಾಗೆ ಇದು,” ಎಂದು ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡ ಪ್ರಭ’ ಪತ್ರಿಕೆಯ ಇವತ್ತಿನ ಸ್ಥಿತಿಯನ್ನು ಬಣ್ಣಿಸುತ್ತಾರೆ ಹಿರಿಯ ಪತ್ರಕರ್ತರೊಬ್ಬರು. ಉದ್ಯಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಸುದ್ದಿ ವಾಹಿನಿ ಮತ್ತು ದಿನಪತ್ರಿಕೆಯ ಒಳಗೆ ಇವತ್ತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಅವರು ವ್ಯಕ್ತಪಡಿಸಿದ ಒನ್ ಲೈನ್ ಅಭಿಪ್ರಾಯ ಇದು. ಹಾಗೆ ನೋಡಿದರೆ, ಸುವರ್ಣ ವಾಹಿನಿಯನ್ನು ಮುನ್ನಡೆಸಿಕೊಂಡು ಬಂದಿರುವ..

  September 2, 2016
  ...
  Ramya pak media
  ಪತ್ರಿಕೆ

  ಪಾಕಿಸ್ತಾನ ಮಾಧ್ಯಮಗಳಲ್ಲಿ ‘ರಮ್ಯಾ ವಿವಾದ ದರ್ಶನ’; Thanks to ಸಂಘಪರಿವಾರ!

  ಪ್ರಚಾರ; ಅದು ನೆಗೆಟಿವ್ ಅಥವಾ ಪಾಸಿಟಿವ್, ಯಾವುದೇ ಇರಲಿ. ಪ್ರಚಾರ ಪ್ರಚಾರನೇ ಎಂದುಕೊಳ್ಳುವವರು ರಾಜಕಾರಣಿಗಳು. ಇತ್ತೀಚೆಗೆ ಸಿನೆಮಾ ರಂಗದಿಂದ ರಾಜಕೀಯ ಅಖಾಡಕ್ಕಿಳಿದ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನ ಹಲವು ದಿನಗಳ ನಂತರ ಜಾಗತಿಕ ಸುದ್ದಿಕೇಂದ್ರಕ್ಕೆ ಬಂದು ನಿಂತಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ ಪ್ರತಿಹೇಳಿಕೆ ನೀಡುವ ಮೂಲಕ ಅವರ ನಿರೀಕ್ಷೆ ಮೀರಿ ಪಬ್ಲಿಸಿಟಿ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ಪಾಕಿಸ್ತಾನ ಮಾಧ್ಯಮಗಳಲ್ಲೂ ಕಳೆದ ಎರಡು ದಿನಗಳಿಂದ ರಮ್ಯಾ ಸುತ್ತ ವರದಿಗಳು ಅಚ್ಚಾಗುವ ಮೂಲಕ, ಕರ್ನಾಟಕದ ಮಾಜಿ ಸಿನೆಮಾ ತಾರೆ ಕಮ್ ರಾಜಕಾರಣಿ..

  August 24, 2016
  ...
  journalism-technology-1
  ಪತ್ರಿಕೆ

  ಪತ್ರಿಕೋದ್ಯಮ ಮತ್ತು ತಂತ್ರಜ್ಞಾನದ ನಡುವಿನ ಹಗ್ಗಜಗ್ಗಾಟಕ್ಕೆ ‘ಸ್ನಾಪ್’ ಉತ್ತರ!

  ಪತ್ರಿಕೋದ್ಯಮ ಮತ್ತು ತಂತ್ರಜ್ಞಾನ ಒಂದಕ್ಕೊಂದು ಸಮಾನಾಂತರವಾಗಿ ಬೆಳೆಯದ ಹಿನ್ನೆಲೆಯಲ್ಲಿ ಹಲವು ಸಮಸ್ಯೆಗಳನ್ನು ಕ್ಷೇತ್ರ ಎದುರಿಸುತ್ತಿದೆ ಎಂಬ ಮಾತಿದೆ. ಇದು ನ್ಯೂಸ್ ರೂಮ್ ಅಂತರಾಳವನ್ನು ಬಲ್ಲವರಿಗೆ ಸರಿಯಾಗಿ ಅರ್ಥವಾಗಿರುತ್ತದೆ. ಹೀಗಾಗಿಯೇ, ‘ಲಾಸ್ ಏಂಜಲೀಸ್ ಟೈಮ್ಸ್’ ತನ್ನ ಪತ್ರಕರ್ತರ ಬರವಣಿಗೆಗೆ ಅನುಕೂಲವಾಗುವಂತಹ ಪ್ರತ್ಯೇಕ ಸಾಫ್ಟ್ವೇರ್ ಒಂದನ್ನು ಪರಿಚಯಿಸಿದೆ. ವಿಶೇಷ ಎಂದರೆ, ಟೈಮ್ಸ್ ಒಳಗಿನ ಒಬ್ಬರು ಸಿಬ್ಬಂದಿಯೂ ಸೇರಿ ರೂಪಿಸಿರುವ ಈ ಸಾಫ್ಟ್ವೇರ್, ಪತ್ರಕರ್ತರ ಬರವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಕುರಿತು ಇನ್ನಷ್ಟು ಆಳಕ್ಕಿಳಿಯುವ ಮುನ್ನ ಸಿಎಂಎಸ್ ಎಂದರೇನು ಎಂಬುದನ್ನು ಮೊದಲ..

  August 11, 2016
  ...
  manikanth-new-book-release
  ಪತ್ರಿಕೆ

  ‘ಮನಸು ಮಾತಾಡಿತು’: ಸಿಂಪಲ್ಲಾಗೊಂದು ಬರಹಗಾರ ಕಮ್ ಪ್ರಕಾಶಕರ ಸ್ಟೋರಿ!

  ಇವತ್ತು ಪತ್ರಕರ್ತರು, ಬರಹಗಾರರಾಗುವ ದಿನಗಳ ಕಳೆದು ಹೋಗಿವೆ ಎಂಬಂತಿರುವ ಪರಿಸ್ಥಿತಿ. ಕರ್ನಾಟಕದಲ್ಲಿ ವಿಶೇಷವಾಗಿ  24 ಗಂಟೆ ನ್ಯೂಸ್ ಚಾನಲ್ಗಳು ಶುರುವಾದ ನಂತರ ಪತ್ರಕರ್ತರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡು ಬಂದಿದೆ. ಕಳೆದ ಒಂದು ದಶಕಗಳ ಅಂತರದಲ್ಲಿ ರಾಜ್ಯ ಹಳ್ಳಿ ಹಳ್ಳಿಗಳಿಂದ, ನಾನಾ ಹಿನ್ನೆಲೆಗಳಿಂದ ಬಂದ ಹಲವರು ಪತ್ರಕರ್ತರಾಗಿದ್ದಾರೆ. ಆದರೆ, ಅವರಲ್ಲಿ ಪತ್ರಿಕೋದ್ಯಮದ ಜತೆಗೇ; ಬರಗರಾರರೋ, ಬರಹಗಾರ್ತಿಯೋ ಆದವರ ಸಂಖ್ಯೆ ಬೆರಳೆಣಿಯಷ್ಟಿದೆ. ಇಂತಹ ಸಮಯದಲ್ಲಿ ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಕೆಲಸ ಮಾಡಿದ, ಮಾಡುತ್ತಿರುವ ಆರ್. ಮಣಿಕಾಂತ್ ನಮ್ಮ ನಡುವೆ..

  July 26, 2016
  ...
  13096199_1131281666922658_8171963303374800231_n
  ಪತ್ರಿಕೆ

  ಜೈಲು ಸೇರ್ತಾರಾ ರವಿ ಬೆಳೆಗೆರೆ?: ಹಕ್ಕುಚ್ಯುತಿ ಕಾನೂನಿನ ಬಗ್ಗೆ ಒಂದಿಷ್ಟು ಮಾಹಿತಿ…

  ಪತ್ರಕರ್ತ, ಖ್ಯಾತ ಲೇಖಕ ರವಿ ಬೆಳೆಗೆರೆ ಜೈಲಿಗೆ ಹೋಗಲಿದ್ದಾರಾ? ಹೀಗೊಂದು ಸುದ್ದಿ ಸೋಮವಾರವಿಡೀ ಓಡಾಡಿತು. ಸಚಿವ ಜಾರ್ಜ್ ರಾಜೀನಾಮೆ ಸುದ್ದಿ ಹೊರಬೀಳುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ, ಒಂದೆರಡು ನ್ಯೂಸ್ ಪೋರ್ಟಲ್ಗಳಲ್ಲಿ ರವಿ ಬೆಳೆಗರೆ ವಿರುದ್ಧ ಹಕ್ಕು ಬಾಧ್ಯತಾ ಸಮಿತಿ ಜೈಲು ಶಿಕ್ಷೆಯನ್ನು ಆದೇಶಿಸಿದೆ ಎಂದು ಸುದ್ದಿಯಾಯಿತು. ಆದೇಶ ನೀಡಲು ಹಕ್ಕು ಬಾಧ್ಯತಾ ಸಮಿತಿ ಏನು ನ್ಯಾಯಾಲಯನಾ? ಸರಕಾರನಾ? ಅದಕ್ಕೆ ಹಕ್ಕಿದೆಯಾ? ಇಷ್ಟಕ್ಕೂ ಹಕ್ಕು ಚ್ಯುತಿ ಅಂದರೇನು? ಈ ಎಲ್ಲಾ ಪ್ರಶ್ನೆಗಳಿಗಿಲ್ಲಿ ಉತ್ತರ ಇದೆ. ಶಾಸಕರೊಬ್ಬರ ವಿರುದ್ದ ರವಿ..

  July 19, 2016
  ...
  big-type-war-yellow-kids
  ಪತ್ರಿಕೆ

  ಎಲ್ಲವೂ ಹಳದಿಮಯವಾಗಿರುವ ಈ ಹೊತ್ತಲ್ಲಿ ‘ಯಲ್ಲೋ ಕಿಡ್’ನಿಂದ ಹುಟ್ಟಿದ ‘ಪೀತ ಪತ್ರಿಕೋದ್ಯಮ’ದ ಕತೆ!

  ‘ಯಲ್ಲೋ ಜರ್ನಲಿಸಂ’ ಅಥವಾ ‘ಪೀತ ಪತ್ರಿಕೋದ್ಯಮ’…ಹಾಗೆಂದರೇನು? ಅದೇನು ಬೈಗುಳನಾ? ಪತ್ರಿಕೋದ್ಯಮದ ಕೆಟ್ಟ ಉದಾಹರಣೆಗಳಿಗೆ, ಅನಿಷ್ಟಗಳನ್ನು ಹೇಳಲು ಬಳಸುವ ಈ ಪದದ ಮೂಲವನ್ನು ಹುಡುಕಿಕೊಂಡು ಹೊರಟರೆ ಶತಮಾನಗಳ ಹಿಂದೆ ಅಮೆರಿಕಾದ ಪತ್ರಿಕೋದ್ಯಮದ ಅನೈತಿಕ ಪೈಪೋಟಿಗೆ ಸಾಕ್ಷಿಯಾದ ಹಳದಿ ಅಂಗಿಯ ಪುಟ್ಟ ಬಾಲಕನೊಬ್ಬ ಸಿಗುತ್ತಾರೆ. ಆತನೇ ಯಲ್ಲೋ ಕಿಡ್, ಯಲ್ಲೋ ಪತ್ರಿಕೋದ್ಯಮ ಎಂಬ ಪದದ ಮೂಲಧಾತು. ಯಲ್ಲೋ ಕಿಡ್ ಒಂದು ಕಾರ್ಟೂನ್ ಕ್ಯಾರೆಕ್ಟರ್. ಈ ಹಿಂದೆ ‘ಸಮಾಚಾರ’ ಸರಣಿಯ ಪತ್ರಿಕೋದ್ಯಮಿ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿದ್ದೆವು. ಶತಮಾನಗಳ ಹಿಂದೆಯೇ ಪತ್ರಿಕೆಗಳ..

  July 7, 2016
  ...
  J Day
  ಪತ್ರಿಕೆ

  ‘ಹಾಯ್ ಬೆಂಗಳೂರು’ ಕಚೇರಿಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಅಪರೂಪದ ಪತ್ರಕರ್ತನ ನೆನಪು ಮಾಡಿಕೊಟ್ಟರು!

  ಬೆಂಗಳೂರಿನ ಪದ್ಮನಾಭನಗರದಲ್ಲಿರುವ ‘ಹಾಯ್ ಬೆಂಗಳೂರು’ ಪತ್ರಿಕಾ ಕಚೇರಿಗೆ ಸೋಮವಾರ ಸಿಬಿಐ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಮುಂಬೈನಲ್ಲಿ ಐದು ವರ್ಷಗಳ ಹಿಂದೆ ನಡೆದ ತನಿಖಾ ಪತ್ರಕರ್ತ ಜ್ಯೋತಿರ್ಮೊಯ್ ಡೇ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಅವರಿಂದ ಮಾಹಿತಿ ಪಡೆದುಕೊಂಡರು. ಈ ಕುರಿತು ಅವರೇ ತಮ್ಮ ವೆಬ್ ಸೈಟಿನಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಕೊಲೆಯಾಗಿ ಹೋದ ಅಪರರೂಪ ಪತ್ರಕರ್ತರೊಬ್ಬರ ನೆನಪು ಮಾಡಿಕೊಳ್ಳುವ ಸನ್ನಿವೇಶ ಇದೀಗ ಎದುರಾಗಿದೆ. ಮುಂಬೈನ ‘ಮಿಡ್ ಡೇ’ ಪತ್ರಿಕೆಯಲ್ಲಿ ತನಿಖಾ ವರದಿಗಳ..

  July 5, 2016
  ...
  12924376_10154018780480692_7699217253194751731_n
  ಪತ್ರಿಕೆ

  ವಿಶ್ವೇಶ್ವರ ಭಟ್ಟರ ‘ಸುದ್ದಿ ಮನೆ’ಯಿಂದ ಹೊರಬಿದ್ದ ಭಡ್ತಿ: ಆಟದ ನಡುವೆಯೇ ಮತ್ತೊಂದು ವಿಕೆಟ್ ಔಟ್!

  ವಿಶ್ವೇಶ್ವರ ಭಟ್ಟರ ‘ಸುದ್ದಿ ಮನೆ’ಯಿಂದ ನಿರೀಕ್ಷಿತ ಸುದ್ದಿಯೊಂದು ಹೊರಬಿದ್ದಿದೆ. ಭಟ್ಟರ ಒಡನಾಡಿ, ಅವರ ಹೊಸ ಪತ್ರಿಕೆ ‘ವಿಶ್ವವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕ ರಾಧಾಕೃಷ್ಣ ಭಡ್ತಿ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಿಶ್ವೇಶ್ವರ ಭಟ್ಟರ ನಿಕಟ ವಲಯದಲ್ಲಿ ಗುರುತಿಸಿಕೊಂಡವರಲ್ಲಿ ರಾಧಾಕೃಷ್ಣ ಭಡ್ತಿ ಕೂಡಾ ಒಬ್ಬರು. ಕೆಲವು ಪುಸ್ತಕಗಳನ್ನೂ ಬರೆದಿರುವ ರಾಧಾಕೃಷ್ಣ ಭಡ್ತಿ ಒಂದು ಕಾಲದಲ್ಲಿ ‘ವಿಜಯ ಕರ್ನಾಟಕ’ದಲ್ಲಿ ಹೆಸರು ಮಾಡಿದವರು. ‘ವಿಜಯ ಕರ್ನಾಟಕ’ದಿಂದ ವಿಶ್ವೇಶ್ವರ ಭಟ್ ಆಂಡ್ ಟೀಮ್ ಹೊರ ಬಿದ್ದಾಗ ಅದರಲ್ಲಿ ಭಡ್ತಿ ಕೂಡಾ ಇದ್ದರು…

  June 9, 2016

Top