An unconventional News Portal.

ಮೀಡಿಯಾ 2.0ಪತ್ರಿಕೆ
    ...

    ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

    ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ ವರದಿಗಳಿಗೆ ಮಾತ್ರ ಪ್ರತಿಕ್ರಿಯಿಸುವುದಲ್ಲ, ಬದಲಿಗೆ ವರದಿ ಮಾಡುವ ಮಾಧ್ಯಮಗಳ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ನೆನಪಿಸಲು ಹೊರಟಂತಾಗಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ಮಾಧ್ಯಮ ಸಂಸ್ಥೆಗಳಿಗೆ ಸರಕಾರ ಪಾಠ ಹೇಳಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿಯ ಅನ್ವಯ ಸರಕಾರ ಕಳೆದ ಆರ್ಥಿಕ ವರ್ಷದಲ್ಲಿ […]

    January 19, 2018
    ...

    ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’: ಕರ್ನಾಟಕ ಪತ್ರಿಕೋದ್ಯಮದ ಐತಿಹಾಸಿಕ ಹೆಜ್ಜೆಗಳು

    ಕನ್ನಡದ ಮೊದಲ ಪತ್ರಿಕೆಯ ಹೆಸರು ‘ಮಂಗಳೂರು ಸಮಾಚಾರ’’. ಇದು ಪ್ರಾರಂಭವಾಗಿದ್ದು 1843ರ ಜುಲೈ1 ರಂದು. ಜುಲೈ 1ರಂದೇ ಕರ್ನಾಟಕದಲ್ಲಿ ‘ಪತ್ರಿಕಾ ದಿನ’ವನ್ನಾಗಿ ಆಚರಿಸುತ್ತಾರೆ. ರೆವರೆಂಡ್‌ ಹರ್ಮನ್‌ ಮೊಗ್ಲಿಂಗ್ ಈ ಪತ್ರಿಕೆ ಪ್ರಾರಂಭಿಸುವ ಮೂಲಕ ‘ಕನ್ನಡ ಪತ್ರಿಕೋದ್ಯಮದ ಜನಕ ‘ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಈ ಮೂಲಕ ಕನ್ನಡ ಪತ್ರಿಕೋದ್ಯಮ ಆರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಮಂಗಳೂರು ಸಮಾಚಾರಕ್ಕೆ ಮುಂಬರುವ ಜುಲೈ 1 ರಂದು 175 ವರ್ಷಗಳಾಗಲಿವೆ. ಮಂಗಳೂರು ಸಮಾಚಾರ ಪ್ರಕಟಗೊಳ್ಳುತ್ತಿದ್ದು ಪ್ರತಿ ಹದಿನೈದು ದಿನಗಳಿಗೊಮ್ಮೆ; ಅದು ಪಾಕ್ಷಿಕ ಪತ್ರಿಕೆಯಾಗಿತ್ತು. […]

    January 18, 2018
    ...

    ಪತ್ರಕರ್ತರ ಓದಿಗಾಗಿ: ಇದು ರಿಲಯನ್ಸ್‌ ಕಂಪನಿಯ ಪಿಆರ್‌ ಮ್ಯಾನೇಜ್‌ಮೆಂಟ್‌ ಚರಿತ್ರೆ!

      ಹಿರಿಯ ಪತ್ರಕರ್ತ ಅಜಿತ್‌ ಪಿಳ್ಳೈ ಅವರ ಲೇಖನಗಳ ಕನ್ನಡಾನುವಾದ ಇತ್ತೀಚೆಗೆ ‘ಇದು ಯಾವ ಸೀಮೆಯ ಚರಿತ್ರೆ?’ ಹೆಸರಿನಲ್ಲಿ ಶಿವಮೊಗ್ಗ ಮೂಲದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಪತ್ರಕರ್ತರು ಓದಲೇಬೇಕಾದ ಪುಸ್ತಕ ಇದು. ‘ದಿ ಹಿಂದೂ’ ಪತ್ರಿಕೆಯಲ್ಲಿ ಹಾಸನ ಜಿಲ್ಲಾ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿರುವ ಸತೀಶ್ ಜಿ. ಟಿ, ಅಜಿತ್‌ ಪಿಳ್ಳೈ ಅವರ  ‘Off the Record’ ಪುಸ್ತಕದ ಹಾಗೂ ಇತರೆ ಹಲವು ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅದರ ಒಂದು ಭಾಗವನ್ನು ‘ಸಮಾಚಾರ’ ಇಲ್ಲಿ ಪ್ರಕಟಿಸುತ್ತಿದೆ. ಆಸಕ್ತಿ ಮೂಡಿಸುವ ಲೇಖನಗಳನ್ನು ಓದಲು […]

    July 21, 2017
    ...

    ಆಕ್ರಮಿಸಿಕೊಂಡ ದೇಶದೊಳಗೆ ಸತ್ಯ ಹೇಳುತ್ತಿರುವ ಪತ್ರಕರ್ತ; ಇಸ್ರೇಲಿನ ಗಿಡಾನ್ ಲೆವಿ!

    ‘ಕಳೆದ ಮೂರು ದಶಕಗಳಿಂದ ಬರಹಗಾರ, ಪತ್ರಕರ್ತ ಗಿಡಾನ್ ಲೆವಿ ತಮ್ಮ ಕ್ಷೀಣದನಿಯಲ್ಲಿ ಭಯೋತ್ಪಾದಕರು ಆವರಿಸಿಕೊಂಡ ಪ್ರದೇಶದ ಕತೆಯನ್ನು ತಮ್ಮ ಓದುಗರಿಗೆ ಹೇಳಿಕೊಂಡು ಬರುತ್ತಿದ್ದಾರೆ…’; ಎಂದು ಬರೆಯುತ್ತಾನೆ ಇನ್ನೊಬ್ಬ ಪತ್ರಕರ್ತ ಜಾನ್ ಹರಿ. ಇಸ್ರೇಲ್ ದೇಶದ ಭಿನ್ನ ದನಿಯಾಗಿ ಗುರುತಿಸಿಕೊಂಡಿರುವ ಪತ್ರಕರ್ತ ಗಿಡಾನ್, ‘ದಿ ಇಂಡಿಪಂಡೆಂಟ್’ ಪತ್ರಿಕೆಗೆ 2010ರಲ್ಲಿ ನೀಡಿದ ಸಂದರ್ಶನಕ್ಕೆ ಬರೆದ ಮುನ್ನುಡಿಯಲ್ಲಿರುವ ವಾಕ್ಯಗಳಿವು. ಒಬ್ಬ ಪತ್ರಕರ್ತ ಇನ್ನೊಬ್ಬ ಪತ್ರಕರ್ತನ ಬಗ್ಗೆ ಬರೆಯಬೇಕಾದ ಅನಿವಾರ್ಯತೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಗಿಡಾನ್ ಲೆವಿ ತರಹರ ವ್ಯಕ್ತಿ ಪರಿಚಯಗಳನ್ನು ಮಾಡಿಸುವ […]

    July 5, 2017
    ...

    ರಾಜ್ಯ ಮಟ್ಟದ ಪತ್ರಿಕೆ ಆರಂಭಿಸಲು ಜಾರಕಿಹೋಳಿ ತಯಾರಿ: ಡಿಸೆಂಬರ್‌ಗೆ ‘ಉದಯನಾಡು’?

    “ನಾವು ಕಾಲೇಜಿನ ದಿನಗಳಲ್ಲಿ ಮುಖಕ್ಕೆ ಪೌಡರ್ ಹಚ್ಚಿಕೊಳ್ಳುತ್ತಿದ್ದೆವು. ಆದರೆ ಮತ್ತೆ ಯಾವತ್ತೂ ಹಚ್ಚಲಿಲ್ಲ. ಈಗ ಟಿವಿಗಾಗಿ ಪೌಡರ್ ಹಚ್ಚಿಕೊಂಡಿರುವುದು ವಿಶೇಷ. ಹಳೆಯ ನೆನಪುಗಳನ್ನು ಟಿವಿ ವಾಹಿನಿ ಮಾಡಿಕೊಟ್ಟಿತು…” ಹೀಗಂತ ಸುಮಾರು 7 ವರ್ಷಗಳ ಹಿಂದೆ, 2010ರ ಜೂನ್ ತಿಂಗಳಿನಲ್ಲಿ ಸಮಯ ಸುದ್ದಿ ವಾಹಿನಿಯನ್ನು ಉದ್ಘಾಟಿಸಿ  ‘ಸತೀಶ್ ಶುಗರ್ಸ್ ಪ್ರೈ. ಲಿ.’ ಮಾಲೀಕ, ರಾಜಕಾರಣಿ ಸತೀಶ್ ಜಾರಕಿಹೊಳಿ ಹೇಳಿದ್ದರು. ಆದರೆ ಅವರ ಕನಸು ನನಸಾಗುವ ಮುನ್ನವೇ ಅವರು ಸಮಯ ಟಿವಿಯಿಂದ ಹೊರ ನಡೆದರು. ಇದೀಗ, ಸತೀಶ್ ಜಾರಕಿಹೊಳಿ ‘ಉದಯನಾಡು’ […]

    May 5, 2017
    ...

    ಅನಾಣ್ಯೀಕರಣಕ್ಕೆ 3 ತಿಂಗಳು: ಮಾಧ್ಯಮ ಸಂಸ್ಥೆಗಳ ಮೇಲೆ ಬೀರಿರುವ ಪರಿಣಾಮಗಳು

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಗೆ ನಾಳೆಗೆ ಮೂರು ತಿಂಗಳು ತುಂಬುತ್ತಿದೆ. ಆರಂಭದ ಮೂರು ತಿಂಗಳು ದೇಶವಾಸಿಗಳು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ, ಚಿಲ್ಲರೆಗಾಗಿ ಪರದಾಡಿದ್ದ ದೃಶ್ಯಗಳು ದೇಶಾದ್ಯಂತ ವರದಿಯಾಗಿದ್ದವು. ಜತೆಗೆ, ಐಟಿ ದಾಳಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಇದೀಗ, ಅಂತಹ ಮುಖ್ಯವಾಹಿನಿಯ ಬೆಳವಣಿಗೆಗಳು ತೆರೆಮರೆಗೆ ಸರಿದಿವೆ. ಆದರೆ, ಹಿನ್ನೆಲೆಯಲ್ಲಿ ಅನಾಣ್ಯೀಕರಣದ ಪರಿಣಾಮಗಳು ನಿಧಾನವಾಗಿ ಬೀರಲಾರಂಭಿಸಿವೆ; ಇದಕ್ಕೆ ಮಾಧ್ಯಮ ಕ್ಷೇತ್ರ ಕೂಡ ಹೊರತಾಗಿಲ್ಲ. ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ನೇಮಕಾತಿ ನಿಂತು […]

    February 7, 2017
    ...

    ತೋರಿಕೆಯ ಗಾಂಧಿ ಹೋಲಿಕೆಗಳು ಮತ್ತು ‘ಇಂಡಿಯನ್ ಒಪಿನಿಯನ್’

     ಗಾಂಧಿ ಮತ್ತು ಅವರ ಹೋಲಿಕೆಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಸಮಯ ಇದು. ಮೋಹನ್ ದಾಸ್ ಕರಮಚಂದ್ ಗಾಂಧಿ, ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಸತ್ಯಾಗ್ರಹವನ್ನು ಮುನ್ನಡೆಸುತ್ತಿದ್ದ ಸಮಯದಲ್ಲಿ ‘ಇಂಡಿಯನ್ ಒಪಿನಿಯನ್’ ಎಂಬ ಪತ್ರಿಕೆಯನ್ನು ಹೊರತರುತ್ತಿದ್ದರು. ಆ ಮೂಲಕ ಅವರೊಬ್ಬ ಅಪರೂಪದ ಪತ್ರಿಕೋದ್ಯಮಿಯೂ ಆಗಿದ್ದರು ಎಂಬುದನ್ನು ನಿರೂಪಿಸಿದ್ದಾರೆ. ಅಂದಹಾಗೆ, ‘ಇಂಡಿಯನ್ ಒಪಿನಿಯನ್’ ಹೊರಬರುತ್ತಿದ್ದ ರೀತಿ ಮತ್ತು ದಿನದಿಂದ ದಿನಕ್ಕೆ ಅದು ದಕ್ಷಿಣ ಆಫ್ರಿಕಾ ಹಾಗೂ ಹೊರಗಿದ್ದ ಭಾರತೀಯ ಮುಖವಾಣಿಯಾಗಿ ಬೆಳೆದ ಬಗೆಯೇ ರೋಚಕ ಮತ್ತು ಅಪರೂಪದ ಮಾದರಿ. […]

    January 16, 2017
    ...

    ‘ಥ್ಯಾಂಕ್ಸ್ ಟು ರಾಜೀವ್ ಚಂದ್ರಶೇಖರ್’: ಕನ್ನಡ ಪ್ರಭ, ಸುವರ್ಣಗಳಲ್ಲಿ ಬದಲಾವಣೆ ಮಾತ್ರವೇ ಶಾಶ್ವತ!

    “ಸ೦ಪಾದಕರನ್ನು ಅತ್ಯ೦ತ ನಿದ೯ಯವಾಗಿ, ಹೇಯವಾಗಿ ಹೇಗೆ ಕೆಲಸದಿ೦ದ ತೆಗೆದುಹಾಕಬಹುದು ಎ೦ಬುದನ್ನು ಒ೦ದು ಕಲೆಯಾಗಿ ಕರಗತ ಮಾಡಿಕೊ೦ಡ ಶ್ರೇಯಸ್ಸು ರಾಜೀವ ಚ೦ದ್ರಶೇಖರ್ ಅವರದ್ದು…” ಹೀಗಂತ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ‘ಸುವರ್ಣ ನ್ಯೂಸ್’ ಮತ್ತು ಕನ್ನಡ ಪ್ರಭ ಪತ್ರಿಕೆಗಳಿಗೆ ಪ್ರಧಾನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ನಂತರದ ದಿನಗಳಲ್ಲಿ ತಮ್ಮ ಅಂಕಣವೊಂದರಲ್ಲಿ ಪ್ರಸ್ತಾಪಿಸಿದ್ದರು. ಇವರ ಮಾತುಗಳಿಗೆ ಪೂರಕವಾಗಿ ಉದ್ಯಮಿ, ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಸಂಸದ ರಾಜೀವ್ ಚಂದ್ರಶೇಖರ್ ತಮ್ಮ ಮಾಲೀಕತ್ವದ ಕನ್ನಡದ ಮಾಧ್ಯಮ ಸಂಸ್ಥೆಗಳಿಗೆ ಹೊಸ ಸಂಪಾದಕರನ್ನು ಕರೆತರಲು ಹೊರಟಿದ್ದಾರೆ. ಹೊಸ ವರ್ಷ2017ಕ್ಕೆ ‘ಸುವರ್ಣ ನ್ಯೂಸ್’ […]

    December 30, 2016
    ...

    ‘ಸ್ನೇಹ- ಸೈದ್ಧಾಂತಿಕ ಸಂಘರ್ಷ’: ರಾಜೀವ್ ಚಂದ್ರಶೇಖರ್ ಮಾಧ್ಯಮ ಸಂಸ್ಥೆಗೆ ಸುಗತ ರಾಜೀನಾಮೆ

    ಕನ್ನಡ ಪತ್ರಿಕೋದ್ಯಮದಿಂದ ‘ಇಂಗ್ಲಿಷ್ ಪತ್ರಕರ್ತ’ರೊಬ್ಬರ ನಿರ್ಗಮನಕ್ಕೆ ದಿನಗಣನೆ ಆರಂಭವಾಗಿದೆ. ಮುಂದಿನ ತಿಂಗಳು ಡಿ. 31ಕ್ಕೆ ಸುಗತ ಶ್ರೀನಿವಾಸ ರಾಜು ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. (ANNPL)ನ ಸಂಪಾದಕೀಯ ನಿರ್ದೇಶಕನ ಸ್ಥಾನದಿಂದ ಕೆಳಕ್ಕಿಳಿಯಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಸದ್ಯ ಒಂದು ತಿಂಗಳ ಮಟ್ಟಿಗೆ ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ., ಕನ್ನಡದಲ್ಲಿ ‘ಸುವರ್ಣ ನ್ಯೂಸ್’ ಸುದ್ದಿ ವಾಹಿನಿ ಹಾಗೂ ಕನ್ನಡ ಪ್ರಭ ದಿನಪತ್ರಿಕೆಯನ್ನು ಹೊರತರುತ್ತಿದೆ. ಸುಗತ ಶ್ರೀನಿವಾಸರಾಜು, ಹಿರಿಯ ಸಾಹಿತಿ ಶ್ರೀನಿವಾಸರಾಜು […]

    November 28, 2016
    ...

    ‘ಕೋರ್ಟ್ ಬೀಟ್’ ವರದಿಗಾರರಿಗೆ ಕಾನೂನು ಪದವಿ ಕಡ್ಡಾಯ: ಕೇರಳ ಹೈಕೋರ್ಟ್ ಹೊಸ ನಿಯಮ

    ಕೇರಳ ಹೈಕೋರ್ಟಿನ ವಕೀಲರು ಮತ್ತು ಪತ್ರಕರ್ತರ ನಡುವಿನ ಮುಸುಕಿನ ಗುದ್ದಾಟ ಹೊಸ ನಿಯಮದೊಂದಿಗೆ ಅಂತ್ಯವಾಗಿದೆ. ಕೇರಳ ಹೈಕೋರ್ಟಿನ ವಿಚಾರಣೆಗಳನ್ನು ವರದಿ ಮಾಡಲು ತೆರಳುವ ಪತ್ರಕರ್ತರಿಗೆ ಕಾನೂನು ಪದವಿಯನ್ನು ಕೋರ್ಟ್ ಕಡ್ಡಾಯಗೊಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹೈಕೋರ್ಟ್ ಈ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕೋರ್ಟ್ ಬೆಳವಣಿಗೆಗಳನ್ನು ವರದಿ ಮಾಡುವ ಪತ್ರಕರ್ತರು ‘ಲೀಗಲ್ ಕರೆಸ್ಪಾಂಡೆಂಟ್’ ಮಾನ್ಯತೆ ಪಡೆದುಕೊಳ್ಳಲು ಲಾ ಪದವಿ ಹೊಂದುವುದು ಅನಿವಾರ್ಯವಾಗಿದೆ. ಹೊಸ ನಿಯಮಗಳ ಪ್ರಕಾರ, ವರದಿಗಾರರಿಗೆ ಎರಡು ಪ್ರಕಾರದ ಮಾನ್ಯತೆಗಳನ್ನು ಕೋರ್ಟ್ ನೀಡುತ್ತದೆ. ಸಾಮಾನ್ಯ ಮತ್ತು ತಾತ್ಕಾಲಿಕ […]

    November 18, 2016

Top