An unconventional News Portal.

ಮೀಡಿಯಾ 2.0
    ...
    BTV-priyakrishna-mix
    ಟಿವಿ

    BTV ವಿರುದ್ಧ ಮಾನನಷ್ಟ ಪ್ರಕರಣ: ನಡೆದರೆ ಸಂಧಾನ; ಮಿಸ್ಸಾದ್ರೆ ಕದನ!

    ಬಿಟಿವಿ ಸುದ್ದಿ ವಾಹಿನಿಯ ಮೇಲೆ ಶಾಸಕ ಪ್ರಿಯಾಕೃಷ್ಣ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಏ. 30ರಂದು (ಇಂದು) ನಿರ್ಣಾಯಕ ತಿರುವು ತೆಗೆದುಕೊಳ್ಳಲಿದೆ. ಕನ್ನಡ ಪತ್ರಿಕೋದ್ಯಮದ ಅಪರೂಪದ ಮಾನನಷ್ಟ ಪ್ರಕರಣವಿದು. ನ್ಯೂಸ್ ಚಾನಲ್ ಒಂದು ಭಿತ್ತರಿಸಿದ ಸುದ್ದಿಯಿಂದ ಮಾನಹಾನಿಗೆ ಒಳಗಾಗಿದ್ದೇನೆ ಎಂದು ಆರೋಪಿಸಿ ಶಾಸಕರೊಬ್ಬರು ಬರೋಬ್ಬರಿ 100 ಕೋಟಿ ರೂಪಾಯಿ ಪರಿಹಾರವನ್ನು ಕೇಳಿದ್ದಾರೆ. ಇದರ ನ್ಯಾಯಾಲಯದ ಶುಲ್ಕ ಸುಮಾರು 52 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಾವತಿಸಿದ್ದಾರೆ. ಹೀಗಾಗಿ, ಮಾಧ್ಯಮಗಳ ಮೇಲೆ ಹೂಡುವ ಇತರೆ ಮಾನಹಾನಿ ಪ್ರಕರಣಗಳಿಗಿಂತ ಇದು ಗಂಭೀರವಾಗಿದ್ದು..

    April 29, 2016
    ...
    hearst-final-1
    SPECIAL SERIES

    ಪತ್ರಿಕೋದ್ಯಮ ಸರಣಿ-5: ಕೊನೆಗೆ ಎಲ್ಲವನ್ನೂ ಬಿಟ್ಟು ಹೋದವನು ಉಳಿಸಿದ ಪಾಠಗಳು!

    ಐದು ದಿನಗಳ ಹಿಂದೆ, ‘ಸಮಾಚಾರ’ ಇದೊಂದು ಸರಣಿಯನ್ನು ಕೊಂಚ ಅಳುಕಿನಿಂದಲೇ ಶುರುಮಾಡಿತು ಎಂಬುದನ್ನು ಇಲ್ಲಿ ಒಪ್ಪಿಕೊಳ್ಳಬೇಕಿದೆ. ಮಾಧ್ಯಮ ಎಂಬುದು ಎಷ್ಟೇ ಕುತೂಹಲದ ಕ್ಷೇತ್ರವಾದರೂ, ಇತಿಹಾಸ ಎಲ್ಲರಿಗೂ ರುಚಿಸುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ. ಹೀಗಿರುವಾಗ, ಮಾಧ್ಯಮ ಕ್ಷೇತ್ರವನ್ನು 120 ವರ್ಷಗಳ ಹಿಂದಕ್ಕೆ ಹೋಗಿ, ಅಲ್ಲಿನ ಕತೆಗಳನ್ನು ಎತ್ತಿಕೊಂಡು ಬಂದರೆ ಓದುಗರು ಹೇಗೆ ಸ್ವೀಕರಿಸಬಹುದು ಎಂಬ ಸಣ್ಣ ಅಳುಕು ನಮ್ಮ ತಂಡದಲ್ಲಿತ್ತು. ಆದರೆ, ಮೊದಲ ನಾಲ್ಕು ಸರಣಿ ಲೇಖನಗಳಿಗೆ ನೀವು ತೋರಿಸಿದ ಪ್ರತಿಕ್ರಿಯೆ ನಮಗೆ ಕನ್ನಡದ ಆನ್ ಲೈನ್ ಓದುಗ ವಲಯ ವಿಸ್ತಾರಗೊಳ್ಳುತ್ತಿರುವ,..

    April 28, 2016
    ...
    hearst-death-copy
    SPECIAL SERIES

    ಪತ್ರಿಕೋದ್ಯಮ ಸರಣಿ-4: ಏಳು ಬೀಳುಗಳನ್ನು ಕಂಡವನು ಸತ್ತಾಗಲೂ ಮೀಸೆ ಮಾತ್ರ ಮಣ್ಣಾಗಿರಲಿಲ್ಲ!

    (ಭಾಗ- 4) ಜೀವನದಲ್ಲಿ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ವಿಪರೀತ ಮಹತ್ವಾಕಾಂಕ್ಷಿಯಾಗಿದ್ದ. ಯಶಸ್ವಿ ಪತ್ರಿಕೆಗಳ ಮಾಲೀಕನ ಆಸಕ್ತಿಗಳು ಕ್ರಮೇಣ ರಾಜಕೀಯದ ಕಡೆಗೂ ವಾಲತೊಡಗಿದವು. ಎರಡು ಬಾರಿ ಅಲ್ಲಿನ ಸಂಸತ್ತಿಗೆ ಡೆಮಾಕ್ರಾಟಿಕ್ ಪಕ್ಷದಿಂದ ಸದಸ್ಯನಾಗಿ ಆಯ್ಕೆಯೂ ಆದ. ಆದರೆ ಸದಸ್ಯ ಮಾತ್ರ ಸಾಕಾಗಿರಲಿಲ್ಲ. ಅದಕ್ಕಿಂತ ಆಚೆಯೂ ಅಧಿಕಾರಕ್ಕಾಗಿ ಆತ ಹಂಬಲಿಸುತ್ತಿದ್ದ. ಕನಿಷ್ಟ ಪಕ್ಷ ನ್ಯೂಯಾರ್ಕ್ ಮೇಯರ್ ಆಗುವ ಕನಸು ಇಟ್ಟುಕೊಂಡಿದ್ದ. ಆದರೆ, ಎರಡೂ ಬಾರಿ ಮೇಯರ್ ಚುನಾವಣೆಯಲ್ಲಿ ಸೋತು ಹೋದ. ಕೊನೆಗೆ ಗವರ್ನರ್ ಆಗಲು ಹೊರಟ. ಆಗಲು ಸೋಲು ಆತನನ್ನು ಹಿಂಬಾಲಿಸಿತು. ಮುಂದೆ ನ್ಯೂಯಾರ್ಕ್..

    April 27, 2016
    ...
    william-randolph-hearst-1
    SPECIAL SERIES

    ಪತ್ರಿಕೋದ್ಯಮ ಸರಣಿ-3: ಯುದ್ಧಭೂಮಿ ವರದಿಗಾರಿಕೆಯಲ್ಲಿ ಸತ್ಯ ಬರೆದರೆ ನಂಬುವವರೇ ಇರಲಿಲ್ಲ!

    (ಭಾಗ-3) ನ್ಯೂಯಾರ್ಕ್ ನಗರದ ಪತ್ರಿಕೋದ್ಯಮ ಸಮರದಲ್ಲಿ ಗೆದ್ದ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ವಿರಮಿಸಲಿಲ್ಲ. ಅಮೆರಿಕಾದ ದೊಡ್ಡ ದೊಡ್ಡ ನಗರಗಳಿಗೆಲ್ಲಾ ತನ್ನ ಪತ್ರಿಕೆಯನ್ನು ವಿಸ್ತರಿಸುತ್ತಾ ಹೋದ. 30 ನಗರಗಳಲ್ಲಿ ಪತ್ರಿಕೆಯ ಪ್ರಕಟಣೆ ಆರಂಭಿಸಿದ. 120 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಇವತ್ತಿಗೂ 30 ಆವೃತ್ತಿಗಳಿರುವ ಯಾವುದೇ ಪತ್ರಿಕೆಗಳಿಲ್ಲ. 120 ವರ್ಷಗಳ ಹಿಂದೆ ಹರ್ಸ್ಟ್ ಹೀಗೊಂದು ಸಾಹಸಕ್ಕೆ ಕೈ ಹಾಕಿದ್ದ ಎಂದರೆ, ಆತನ ಮನಸ್ಥಿತಿ ಹೇಗಿದ್ದೀತು?. ಒಮ್ಮೆ ಪತ್ರಿಕೆಗಳನ್ನು ಸ್ಥಾಪಿಸುತ್ತ ಹೋದವನ ಮುಂದೆ ಭಾರಿ ಸವಾಲೊಂದು ಕಾದಿತ್ತು. ಅದು ಓದುಗರನ್ನು ಸೆಳೆಯುವುದಾಗಿತ್ತು…

    April 26, 2016
    ...
    william-randolph-hearst-1
    SPECIAL SERIES

    ಪತ್ರಿಕೋದ್ಯಮ ಸರಣಿ-2: ‘ದರ ಸಮರ’ ಹುಟ್ಟುಹಾಕಿದವನು ಗೆದ್ದ ಮೇಲೂ ವಿರಾಮ ಘೋಷಿಸಲಿಲ್ಲ!

    (ಭಾಗ-2) ಅವತ್ತು ಅಮೆರಿಕಾದ ಪತ್ರಿಕೋದ್ಯಮ ಪ್ರಪಂಚ ಹಿಂದೆಂದೂ ಕಾಣದ ಪೈಪೋಟಿಗೆ ಸಾಕ್ಷಿಯಾಗಲು ಕೆಲವು ದಿನಗಳಷ್ಟೆ ಬಾಕಿ ಇತ್ತು. ‘ಸ್ಯಾನ್ ಫ್ರಾನ್ಸಿಸ್ಕೋ ಎಗ್ಸಾಮಿನರ್’ ಪತ್ರಿಕೆ ಒಂದು ಮಟ್ಟಿಗೆ ಯಶಸ್ಸು ಕಾಣುತ್ತಲೇ, ಆಗಷ್ಟೆ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ತಲೆಯಲ್ಲಿ ಹೊಸ ಕನಸುಗಳು ಮೊಳೆತು ನಿಂತಿದ್ದವು. ಪತ್ರಿಕೋದ್ಯಮವನ್ನು ಆವರಿಸಿಕೊಂಡಿದ್ದ ಜೋಸೆಫ್ ಪುಲಿಟ್ಜರ್ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಲು ಅವನು ಕಾರ್ಯತಂತ್ರಗಳನ್ನು ಹೆಣಿಯಲಾರಂಭಿಸಿದ್ದ. ಇದರ ಭಾಗವಾಗಿಯೇ ಹರ್ಸ್ಟ್ ನ್ಯೂಯಾರ್ಕ್ ಮಾಧ್ಯಮ ಲೋಕದಲ್ಲಿ ಖಾತೆಯನ್ನು ತೆರೆಯುವ ಅಗತ್ಯವಿತ್ತು. ಅವತ್ತಿಗೆ ಅಮೆರಿಕಾದಲ್ಲಿ ನ್ಯೂಯಾರ್ಕ್ ಆಯಕಟ್ಟಿನ..

    April 25, 2016
    ...
    heasrst-1
    SPECIAL SERIES

    ಪತ್ರಿಕೋದ್ಯಮ ಸರಣಿ-1: ‘ಪೀತ ಪತ್ರಿಕೋದ್ಯಮಿ’ಯೊಬ್ಬನ ಬದುಕಿನ ಪುಟಗಳಿಂದ…

    ಕಾಲೇಜು ಅರ್ಧಕ್ಕೆ ಬಿಟ್ಟವನಿಗೆ ಸಿಕ್ಕಿದ ಆ ಯಶಸ್ಸು ಪತ್ರಿಕೋದ್ಯಮ ಚಹರೆಯನ್ನೇ ಬದಲಿಸಿತು! (ಭಾಗ-1) ಜಾಗತಿಕ ಪತ್ರಿಕೋದ್ಯಮದ ಇತಿಹಾಸದ ಪುಟಗಳನ್ನು ತೆರೆದರೆ ಮತ್ತೆ ಮತ್ತೆ ಕಾಡುವ ಹೆಸರು ವಿಲಿಯಂ ರಾಂಡೋಲ್ಫ್ ಹರ್ಸ್ಟ್. ಪತ್ರಿಕೆಗಳು ಹೇಗಿರಬಾರದು? ಪತ್ರಿಕೋದ್ಯಮ ಯಾವ ಮಟ್ಟಕ್ಕೆ ಇಳಿಯಬಾರದು? ಎಂಬುದಕ್ಕೆ ಈತನ ಬದುಕು ಅತ್ಯುತ್ತಮ ಪಾಠ. ಶತಮಾನದ ಹಿಂದೆಯೇ ದರ ಸಮರ, ಅತಿ ರಂಜಕ ಸುದ್ದಿಗಳು ಹಾಗೂ ಪತ್ರಿಕೋದ್ಯಮವನ್ನು ಅಸಹ್ಯಕರ ಉದ್ಯಮವನ್ನಾಗಿ ಪರಿವರ್ತಿಸಿದ ಕುಖ್ಯಾತಿ ಈತನಿಗೇ ಸಲ್ಲುತ್ತದೆ. ಇಲ್ಲಿರುವ ಆತನ ಸುದೀರ್ಘ ಕತೆಯನ್ನು, ಸರಣಿ ರೂಪದಲ್ಲಿ ನಿಮ್ಮೆದುರಿಗೆ ಇಡಲಿದ್ದೇವೆ. ಈ ಮೂಲಕ..

    April 24, 2016
    ...
    samaya-tv-01
    ಟಿವಿ

    ‘ಸಮಯ’ಕ್ಕೊಂದು ಒಳ್ಳೆ ಸಮಯದ ನಿರೀಕ್ಷೆಯಲ್ಲಿ…

    ಎಲ್ಲವೂ ಅಂದುಕೊಂಡಂತೆ, ಕೊಟ್ಟ ಮಾತಿನಂತೆ ನಡೆದಿದ್ದರೆ ಶನಿವಾರ ಸಂಜೆ ವೇಳೆಗೆ ‘ಸಮಯ’ ಸುದ್ದಿ ವಾಹಿನಿಯ ಪತ್ರಕರ್ತರು, ಸಿಬ್ಬಂದಿಗಳಿಗೆ ಬಾಕಿ ಇರುವ ಸಂಬಳವಾಗಬೇಕಿತ್ತು. ಅವರಲ್ಲಿ ಬಹುತೇಕರು ಪಡುತ್ತಿರುವ ಆರ್ಥಿಕ ಸಂಕಷ್ಟಗಳು ತೀರಿ ಹೋಗಬೇಕಿತ್ತು. ಆದರೆ, ಹಾಗೆ ಆಗಲಿಲ್ಲ ಎಂಬ ಕಾರಣಕ್ಕಾಗಿಯೇ ‘ಸಮಾಚಾರ’ ಈ ವರದಿಯನ್ನು ಪ್ರಕಟಿಸುತ್ತಿದೆ. ಕಳೆದ 15 ದಿನಗಳಿಂದ ‘ಸಮಯ’ದೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ದಿನದಿಂದ ದಿನಕ್ಕೆ ವಾಹಿನಿಯ ಆರೋಗ್ಯ ಹದಗೆಡುತ್ತಿದೆ. ಅದರ ಮಾಲೀಕ ವಿಜಯ್ ಟಾಟಾ ಅವರ ಆರ್ಥಿಕ ಬಿಕ್ಕಟ್ಟು, ಉದ್ಯೋಗಿಗಳ ಆರ್ಥಿಕ ಮುಗ್ಗಟ್ಟಾಗಿ ಪರಿವರ್ತನೆಗೊಂಡಿದೆ. ವಾರದ..

    April 23, 2016
    ...
    anas-4
    ಮೀಡಿಯಾ 2.0

    ಅಪರೂಪದ ಪತ್ರಕರ್ತನ ಪರಿಚಯ ಅಷ್ಟೆ; ಮುಖ ನೋಡಿದವರೇ ಇಲ್ಲ!

    ಇತ್ತೀಚೆಗೆ ಆಫ್ರಿಕಾ ಖಂಡದ ಪುಟ್ಟ ದೇಶ ಘಾನವನ್ನು ತುದಿಗಾಲ ಮೇಲೆ ನಿಲ್ಲಿಸಿದ ಪತ್ರಕರ್ತ ಈತ- ಅನಾಸ್ ಅರೆಮಿಯೋ ಅನಾಸ್. ಆಫ್ರಿಕನ್ ದೇಶದ ನ್ಯಾಯಾಂಗ ವ್ಯವಸ್ಥೆಒಳಗಿನ ಹುಳುಕುಗಳನ್ನು ಅಡಿಯಿಂದ ಮುಡಿವರೆಗೆ ಜನರ ಎದುರಿಗೆ ತೆರೆದಿಟ್ಟ ಈತನ ತನಿಖಾ ವರದಿ ವಿಶ್ವದಾದ್ಯಂತ ಭಾರಿ ಸದ್ದು ಮಾಡಿತ್ತು. ಪತ್ರಕರ್ತರಿಗೆ ಪತ್ರಕರ್ತರು ಮಾತ್ರವೇ ಮಾದರಿಯಾಗುವುದು ಸಾಮಾನ್ಯ. ವೃತ್ತಿಯೊಳಗೆ ಎಷ್ಟೇ ಮತ್ಸರಗಳಿದ್ದರೂ, ಅಸೂಯೆಗಳಿದ್ದರೂ, ಪತ್ರಕರ್ತರು ತನ್ನ ಸಹೋದ್ಯೋಗಿಯನ್ನು ಗೊತ್ತೇ ಇಲ್ಲದಂತೆ ಅನುಸರಿಸುತ್ತಿರುತ್ತಾರೆ. ಅದನ್ನು ಆತ ಅಥವಾ ಆಕೆ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ, ಮನಸ್ಥೈರ್ಯವನ್ನು ಉಳಿಸಿಕೊಳ್ಳಲು ಇದು ಅನಿವಾರ್ಯ ಕೂಡ. ಹೀಗಾಗಿಯೇ, ಕನ್ನಡ ಪತ್ರಿಕೋದ್ಯಮ ಹಲವು..

    April 22, 2016
    ...
    kd-5
    ಟಿವಿ

    ಕೊಹಿನೂರ್ ಶಾಪಕ್ಕೆ ‘ಉತ್ತಮ ಸಮಾಜ’ ಬಲಿ: ಟಿವಿ9 ರಲ್ಲಿ ಘೋರ ಚರ್ಚೆ!

    “ಇದು ಎಲ್ಲಾ ರಾಜ್ಯಗಳಿಗೂ ಹೋಗಿ ಬಂದಿದೆ. ಇಲ್ಲಿಂದ ಅಲ್ಲಿಗೆ ಹೋಗಿದೆ, ಅಲ್ಲಿಂದ ಇಲ್ಲಿಗೆ ಹೋಗಿದೆ. ಮುಸ್ಲಿಂ ರಾಷ್ಟ್ರಗಳಿಗೂ ಹೋಗಿದೆ. ಮುಸ್ಲಿಂ ರಾಜರು ಸೌಮ್ಯವಾಗಿರೋಲ್ಲ. ಎಲ್ಲರೂ ಅಂತಲ್ಲ. ಆದರೆ ಬಹುತೇಕರು ಸೌಮ್ಯವಾಗಿರೋಲ್ಲ. ಅದು ಮಾನಸಿಕ ಸ್ಥಿತಿ. ನಮ್ಮದು ಚಿಕ್ಕದಾಯ್ತು. ಇನ್ನೂ ದೊಡ್ಡದು ಮಾಡ್ಕೋಬೇಕು ಅಂತ ಮಾನಸಿಕ ಸ್ಥಿತಿ…” ಮೇಲಿನ ಮಾತುಗಳಲ್ಲಿ ನಿಮಗೇನಾದರೂ ಅರ್ಥವಾಯ್ತಾ? ನಮಗೂ ಆಗಲಿಲ್ಲ. ಗುರುವಾರ ಬೆಳಗ್ಗೆ ಬೆಳಗ್ಗೆ ರಾಜ್ಯದ ನಂ1 ಸುದ್ದಿ ವಾಹಿನಿ ‘ಟಿವಿ9’ರಲ್ಲಿ ನಡೆಯುತ್ತಿದ್ದ ಚರ್ಚೆಯ ತುಣುಕು ಇದು. ಹೀಗೆ ತಲೆಬುಡ ಇಲ್ಲದ ವಾದ ಮಂಡನೆ..

    April 21, 2016
    ...
    PF-papers-headlines
    ಮೀಡಿಯಾ 2.0

    ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ: ಕರ್ನಾಟಕ ಮಾಧ್ಯಮಗಳು ಎಡವಿದ್ದೆಲ್ಲಿ?

    ನಿರೀಕ್ಷೆಯಂತೆಯೇ ‘ಪಿಎಫ್’ ಹೆಸರಿನಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಂಡ ಪ್ರತಿಭಟನೆ ಬೆಂಗಳೂರಿಗೆ ಸೀಮಿತಗೊಂಡು, ಬುಧವಾರದ ಹೊತ್ತಿಗೆ ಗರ್ಭಪಾತವಾಗಿ ಹೋಗಿದೆ. ಸೋಮವಾರ ಬೆಳಗ್ಗೆ ಬೊಮ್ಮನಹಳ್ಳಿಯಿಂದ ಶುರುವಾದ ಬೆಳವಣಿಗೆ, ಮುಂದಿನ 72 ಗಂಟೆಗಳಲ್ಲಿ ತೆಗೆದುಕೊಂಡ ತಿರುವುಗಳು ಹಾಗೂ ಅದನ್ನು ಕರ್ನಾಟಕದ ಮಾಧ್ಯಮಗಳು- ಪತ್ರಿಕೆ, ಟಿವಿ- ವೆಬ್- ಗ್ರಹಿಸಿದ ರೀತಿ ಈಗ ಚರ್ಚೆಯ ವಸ್ತುವಾಗಿವೆ. ರಾಜ್ಯದ ಇತಿಹಾಸದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಹಿಂದೆಂದೂ ನಡೆಯದ ಇಂತಹ ಘಟನೆಯನ್ನು ಅದರ ಅಂತರಾಳದಿಂದ ಅರ್ಥಮಾಡಿಕೊಳ್ಳುವಲ್ಲಿಯೇ ಬಹುತೇಕರು ಸೋತಿರುವುದು ಎದ್ದು ಕಾಣಿಸುತ್ತಿದೆ. ಹೀಗಾಗಿಯೇ, 2011ರಲ್ಲಿ ನಡೆದ ‘ಅರಬ್ ಸ್ಪಿಂಗ್’ ಎಂಬ ಬಂಡಾಯ ಸ್ವರೂಪದ ನಾಗರಿಕ ಪ್ರತಿಭಟನೆ..

    April 20, 2016

Top