An unconventional News Portal.

ಮೀಡಿಯಾ 2.0

ಮೌನೇಶ್ ಪೋತರಾಜ್ ಸಾವಿಗೆ ‘ಮಾಲ್ಗುಡಿ ಟ್ವಿಸ್ಟ್’; ಕ್ರೈಂ ಸೀನ್ ಹುಟ್ಟುಹಾಕಿದ ಆ 7 ಶಂಕೆಗಳು

ಕಳೆದ ಸುಮಾರು ಮೂವತ್ತು ಗಂಟೆಗಳಿಂದ ಪತ್ರಕರ್ತ ಮೌನೇಶ್ ಸಾವು ಮತ್ತು ನಂತರ ಆತನ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

  ...
  ಪತ್ರಿಕೆ

  ‘ನುಡಿದಂತೆ ನಡೆದ’ ಪತ್ರಕರ್ತ ತನ್ನ ಅಂಕಣವನ್ನೇ ಖಾದ್ಯ ಮಾಡಿ ತಿಂದ!

  ಪತ್ರಿಕೋದ್ಯಮ ನೈತಿಕತೆ ಕಳೆದುಕೊಳ್ಳುತ್ತಿದೆ ಎನ್ನುವ ಆಪಾದನೆಗಳ ಹೊತ್ತಲ್ಲಿ, ‘ನುಡಿದಂತೆ ನಡೆದ’ ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಡೇನಾ ಮಿಲ್’ಬ್ಯಾಂಕ್ ಜಾಗತಿಕ ಪತ್ರಿಕೋದ್ಯಮದಲ್ಲಿ ಅಚ್ಚರಿಗೆ ಕಾರಣರಾಗಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾದರೆ ತಾನು ತನ್ನ ಅಂಕಣವನ್ನೇ ತಿನ್ನುತ್ತೇನೆ (ಐ ವಿಲ್ ಈಟ್ ಮೈ ಕಾಲಂ) ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ಕಾಲಮಿಸ್ಟ್ ಡೇನಾ ಮಿಲ್’ಬ್ಯಾಂಕ್ ಅಂಕಣವೊಂದರಲ್ಲಿ ಬರೆದುಕೊಂಡಿದ್ದರು. ಇದೀಗ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುತ್ತಿದ್ದಂತೆ  ತನ್ನ ಮಾತನ್ನು ಉಳಿಸಿಕೊಂಡಿರುವ ಮಿಲ್’ಬ್ಯಾಂಕ್ ತನ್ನ ಅಂಕಣ ಪ್ರಕಟವಾದ..

  May 18, 2016
  ...
  ಪತ್ರಿಕೆ

  ಸುದ್ದಿ ಮಾಡುವವರೇ ಸುದ್ದಿಯಾದ ಕತೆ: ‘ಆಂದೋಲನ’ ಮಾಡಲು ಹೋಗಿ ಮೈಮೇಲೆ ಎಳೆದುಕೊಂಡವರ ವ್ಯಥೆ!

  ಸುದ್ದಿ ಮಾಡುವವರೇ ಸುದ್ದಿಕೇಂದ್ರಕ್ಕೆ ಬಂದ ವಿಚಿತ್ರ ಪ್ರಕರಣವಿದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸ್ಥಳೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಪತ್ರಿಕೆ ‘ಸುದ್ದಿ ಬಿಡುಗಡೆ’ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಪತ್ರಿಕೆ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವ ಭರಾಟೆಯಲ್ಲಿ, ಪರ- ವಿರೋಧದ ಮಧ್ಯದಲ್ಲಿ ಸಿಲುಕಿಕೊಂಡಿದೆ. ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಗುರಿಯಾಗಿದೆ. ಏನಿದು ಘಟನೆ?: ದಕ್ಷಿಣ ಕನ್ನಡದಾದ್ಯಂತ ಬಂದ್ ನಡೆಯುವುದು ಸಾಮಾನ್ಯ ಎಂಬ ಪರಿಸ್ಥಿತಿ ಇದೆ. ಸಂವಿಧಾನ ಕೊಡಮಾಡಿರುವ ಪ್ರತಿಭಟಿಸುವ ಹಕ್ಕನ್ನು ಇಲ್ಲಿನ ಜನ ವಿಪರೀಪವಾಗಿ ಬಳಸಿಕೊಳ್ಳಲು ಹೋಗಿ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ..

  May 16, 2016
  ...
  ಮೀಡಿಯಾ 2.0

  ಕಳೆದ 24 ಗಂಟೆಯಲ್ಲಿ ಇಬ್ಬರು ಪತ್ರಕರ್ತರ ಹತ್ಯೆ: ಭಾರತದಲ್ಲಿ ಪತ್ರಕರ್ತರ ಸುರಕ್ಷತೆ ಕುರಿತು ಚರ್ಚೆ

  ಕಳೆದ 24 ಗಂಟೆಗಳಲ್ಲಿ ನಮ್ಮ ದೇಶದ ಇಬ್ಬರು ಪತ್ರಕರ್ತರ ಹತ್ಯೆ ನಡೆದಿದೆ. ಹಿಂದಿ ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿದ್ದ ರಾಜ್ದೇವ್ ರಂಜನ್ ಬಿಹಾರದ ಸಿವಾನ್’ನಲ್ಲಿ ಹತ್ಯೆಗೀಡಾದರೆ, ಸ್ಥಳೀಯ ಟಿವಿ ಚಾನಲ್ ವರದಿಗಾರ ಅಖಿಲೇಶ್ ಪ್ರತಾಪ್ ಸಿಂಗ್ ಜಾರ್ಖಂಡ್ನಲ್ಲಿ ಅಪರಿಚಿತರ ದಾಳಿಗೆ ಜೀವ ತೆತ್ತಿದ್ದಾರೆ. ಶುಕ್ರವಾರ ಸಂಜೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಹಿಂದಿ ದೈನಿಕ ‘ಹಿಂದೂಸ್ಥಾನ್’ ಬ್ಯೂರೋ ಚೀಫ್ ರಾಜ್ದೇವ್ ರಂಜನ್’ರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಕಳೆದ 20ವರ್ಷಗಳಿಂದ ಪತ್ರಿಕೋದ್ಯಮದಲ್ಲಿರುವ ರಾಜ್ದೇವ್ ಸಿವಾನ್ ರೈಲ್ವೇ ನಿಲ್ದಾಣದ ಬಳಿ ಬರುತ್ತಿದ್ದಾಗ ತುಂಬಾ ಹತ್ತಿರದಿಂದ ಗುಂಡಿಕ್ಕಲಾಗಿದ್ದು, ಒಂದು..

  May 14, 2016
  ...
  ಪತ್ರಿಕೆ

  ‘ವಿಜಯ ಕರ್ನಾಟಕ’ದೊಳಗೆ ವರ್ಗಾವಣೆಗಳ ಪರ್ವ: ಏನಿದರ ಹಿಂದಿನ ಮರ್ಮ?

  ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ದಲ್ಲಿ ನಡೆದ ಬೆಳವಣಿಗೆಯೊಂದರಲ್ಲಿ ದಿಲ್ಲಿ ಬ್ಯುರೋಗೆ ಸುಭಾಷ್ ಹೂಗಾರ್ ಅವರನ್ನು ನೇಮಕ ಮಾಡಲಾಗಿದೆ. ಮೇ ಅಂತ್ಯದೊಳಗೆ ದಿಲ್ಲಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಹುಬ್ಬಳ್ಳಿಯಿಂದ ಬಂದು, ಬೆಂಗಳೂರಿನಲ್ಲಿ ರಾಜಕೀಯ ವಿಭಾಗದ ಹೊಣೆಗಾರಿಕೆ ವಹಿಸಿಕೊಂಡಿದ್ದ ಹೂಗಾರ್ ಅವರಿಗೆ ತಿಳಿಸಲಾಗಿದೆ. ‘ವಿಕ’ದ ದಿಲ್ಲಿ ಪ್ರತಿನಿಧಿಯಾಗಿರುವ ಹಿರಿಯ ಪತ್ರಕರ್ತ ಡಿ. ಉಮಾಪತಿಯವರಿಗೆ ಬೆಂಗಳೂರಿನ ಕೇಂದ್ರ ಸ್ಥಾನಕ್ಕೆ ಬರುವಂತೆ ತಿಳಿಸಲಾಗಿದೆ. ಈ ನಡುವೆ ತಿಮ್ಮಪ್ಪ ಭಟ್ ಗುರುವಾರದಿಂದ ಸುದೀರ್ಘ ರಜೆಯ ಮೇಲೆ ತೆರಳಿದ್ದಾರೆ. ಏನೀ ಬೆಳವಣಿಗಳು?: “ನಮ್ಮಲ್ಲಿ ರಾಜಕೀಯ ವಿಭಾಗದ..

  May 13, 2016
  ...
  ಮೀಡಿಯಾ 2.0

  ‘ಸೊಮಾಲಿಯಾ ಸ್ಪೆಷಲ್’: ಇಲ್ಲಿ ಭಯೋತ್ಪಾದಕರು ಮತ್ತು ಸರಕಾರದ ನಡುವೆ ಪತ್ರಕರ್ತರೇ ಕಾಲ್ಚೆಂಡು!

  ಸೊಮಾಲಿಯಾ… ಪ್ರಧಾನಿ ಮೋದಿ ಅವರಿಂದಾಗಿ ಇವತ್ತು ಚರ್ಚೆಯಲ್ಲಿರುವ ಪದ. ಇದು ಪತ್ರಕರ್ತರ ಪಾಲಿಗೆ ಹಲವು ಒಳನೋಟಗಳನ್ನು ನೀಡುವ ಆಫ್ರಿಕಾ ಖಂಡದ ಪುಟ್ಟ ದೇಶ ಕೂಡ. 1992ರಿಂದ ಈಚೆಗೆ ಇಲ್ಲಿ ನಡೆದ ಪತ್ರಕರ್ತರ ಹತ್ಯೆಗಳಿಂದಾಗಿ ಅಂತರಾಷ್ಟ್ರೀಯ ಮಾಧ್ಯಮ ಸಮೂಹ ಸೊಮಾಲಿಯಾವನ್ನು ‘ಕೆಂಪು ಪಟ್ಟಿ’ಯಲ್ಲಿರುವ ದೇಶ ಎಂದು ತೀರ್ಮಾನಿಸಿದೆ. ಲತಿಶಾ ಬಾಡಾರ್ ಎಂಬ ಮಾನವ ಹಕ್ಕು ಸಂಶೋಧಕಿಯೊಬ್ಬರ ಜೊತೆ ಸ್ಟೆಫಾನಿ ಹಾಂಕಾಕ್ ಎಂಬ ಪತ್ರಕರ್ತೆ ನಡೆಸಿದ ಅನೌಪಚಾರಿಕ ಸಂವಾದವಿದು. ಲತಿಶಾ ಬಾಡಾರ್ ಸೊಮಾಲಿಯಾವನ್ನೇ ಗುರಿಯಾಗಿಸಿ ಸಂಶೋಧನೆ ನಡೆಸುವ ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆಯ..

  May 12, 2016
  ...
  ಟಿವಿ

  ಬರಿಗೈಯಲ್ಲಿ ಬಂದು ಕೋಟ್ಯಾಧಿಪತಿಯಾದ ಪತ್ರಕರ್ತೆ ಓಪ್ರಾಳ ಬದುಕಿನ ಕತೆ

  ನಮ್ಮಲ್ಲಿ ಕಳೆದ ಹತ್ತು ವರ್ಷಗಳ ಅಂತರದಲ್ಲಿ ಪತ್ರಿಕೋದ್ಯಮ ಹುಟ್ಟಿಸಿದ ಕನಸುಗಳ ಪೈಕಿ ನಿರೂಪಕರಾಗಬೇಕು ಎಂಬುದು ಪ್ರಥಮ ಸ್ಥಾನದಲ್ಲಿದೆ. ಈಗಷ್ಟೆ ಕಾಲೇಜು ಮುಗಿಸಿ, ಪತ್ರಿಕೋದ್ಯಮಕ್ಕೆ ಬರುವವರ ಆಸಕ್ತಿ ಏನು ಎಂದು ಕೇಳಿದರೆ, ಆ್ಯಂಕರ್ ಆಗಬೇಕು ಎಂಬುದು. ಕನಸು ಕಾಣುವುದು ತಪ್ಪಲ್ಲ. ಆದರೆ, ಅದರ ಜತೆಗೆ ಅಂತಹ ಕನಸುಗಳನ್ನು ಕಾಣುವಾಗ ವಾಸ್ತವಗಳನ್ನು ಎದುರಿಸುಲೂ ಮನಸ್ಸು ಗಟ್ಟಿಯಾಗಿರಬೇಕು. ಹೀಗಾಗಿಯೇ, ಜಗತ್ತಿನ ಶ್ರೇಷ್ಠ ಅಂತ ಕರೆಯಬಹುದಾದ, ಅದೇ ವೇಳೆ, ಅಷ್ಟೆ ಪ್ರಮಾಣದ ಜನಪ್ರಿಯತೆಯನ್ನೂ ಬೆನ್ನಿಗಿಟ್ಟುಕೊಂಡಿರುವ ಆ್ಯಂಕರ್ ಒಬ್ಬರ ಕತೆಯನ್ನು ಇಲ್ಲಿ ನಿರೂಪಿಸುತ್ತಿದ್ದೇವೆ. ಹೌದು, ಇದು..

  May 11, 2016
  ...
  ಮೀಡಿಯಾ 2.0

  ಲೀಕಾಯ್ತು ಪತ್ರಕರ್ತೆಯ ಟೇಪು: ಚರ್ಚೆಗೆ ಬಂತು ಚುನಾವಣೆ ಸಮಯದಲ್ಲಿ ನಡೆಯುವ ‘ಕಾಸಿಗಾಗಿ ಸುದ್ದಿ’ ವಿಚಾರ!

  ಕೇರಳದಲ್ಲಿ ಚುನಾವಣೆ ಕಾವು ಜೋರಾಗುತ್ತಿರುವಂತೆ ಪತ್ರಕರ್ತೆಯೊಬ್ಬರ ಆಡಿಯೋ ಕ್ಲಿಪ್ ಲೀಕ್ ಆಗಿದ್ದು ಚರ್ಚೆಗೆ ಕಾರಣವಾಗಿದೆ. ಪತ್ರಕರ್ತೆಯೊಬ್ಬರು ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ತನ್ನ ಗಂಡನ ಪರವಾಗಿ ಬೇರೆ ಬೇರೆ ಮಾಧ್ಯಮಗಳ ಪತ್ರಕರ್ತರನ್ನೇ ‘ಬುಕ್’ ಮಾಡಲು ಹೊರಟಿದ್ದರು ಎಂಬ ಗುಲ್ಲು ಹಬ್ಬಿದೆ. ನಡೆದಿದ್ದೇನು? ಲೆಬಿ ಡೆನಿಸ್ ಕೇರಳದ ಪ್ರತಿಷ್ಠಿತ ಮಾತೃಭೂಮಿ ಚಾನಲ್ನ ಕೊಚ್ಚಿ ವಿಭಾಗದ ವಿಶೇಷ ವರದಿಗಾರ್ತಿ. ಈಕೆಯ ಗಂಡ ವಿ ಪಿ ಸಜೀಂದ್ರನ್ ಯುಡಿಎಫ್(ಯುನೈಟೆಡ್ ಡೆಮಕ್ರಾಟಿಕ್ ಫ್ರಂಟ್)ನ  ಕುನ್ನತುನಾಡು ಕ್ಷೇತ್ರದ ಅಭ್ಯರ್ಥಿ. ತನ್ನ ಗಂಡನ ಪರವಾಗಿ ಈಕೆ ಜರ್ನಲಿಸ್ಟ್’ಗಳನ್ನೇ ಖರೀದಿಸಲು..

  May 9, 2016
  ...
  ಟಿವಿ

  ಕನ್ನಡದ ವಾಹಿನಿಗಳಲ್ಲಿ ವಲಸೆ, ಸ್ಥಾನ ಪಲ್ಲಟ: ಜನಶ್ರೀ ಕಾಯಕಲ್ಪದ ವಿಚಾರದಲ್ಲಿ ರೆಡ್ಡಿ ನಿಲುವು ಸ್ಪಷ್ಟ!

  ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ತಯಾರಿಯ ಭಾಗವಾಗಿ, ರಾಜ್ಯದ ಮಾಧ್ಯಮಗಳಲ್ಲಿ ಮತ್ತೊಂದು ಸುತ್ತಿನ ವಲಸೆ, ಪಲ್ಲಟಗಳು ನಡೆಯಲಿವೆ. ಇದಕ್ಕೆ ಕಾರಣ, ತಮ್ಮ ಜನಶ್ರೀ ಸುದ್ದಿವಾಹಿನಿಗೆ ಹೊಸತಾಗಿ ಕಾಯಕಲ್ಪ ನೀಡಲು ಗಣಿಧಣಿ ಜನಾರ್ಧನ ರೆಡ್ಡಿ ತೆಗೆದುಕೊಂಡಿರುವ ತೀರ್ಮಾನ. ಇದನ್ನು ಅವರ ಕುಟುಂಬದ ಮೂಲಗಳು ‘ಸಮಾಚಾರ’ಕ್ಕೆ ಖಚಿತಪಡಿಸಿವೆ. “ಸದ್ಯ ಜನಶ್ರೀ ಟಿವಿಯನ್ನು ಮತ್ತೆ ಒಂದು ಹಂತಕ್ಕೆ ತೆಗೆದುಕೊಂಡು ಬರಲು ಯೋಚಿಸಿದ್ದೇವೆ. ಇದಕ್ಕಾಗಿ ಈಗಾಗಲೇ ನಾಲ್ವರು ಹೂಡಿಕೆದಾರರು ಮುಂದೆ ಬಂದಿದ್ದಾರೆ. ಚಾನಲ್ಗೆ ಒಂದು ಮಟ್ಟಿನ ಕಾಯಕಲ್ಪ ಸಿಕ್ಕ ನಂತರ ನಾವೇ ಅದನ್ನು..

  May 8, 2016
  ...
  ಟಿವಿ

  ಮತ್ತೂರು ಸೋಮಯಾಗ ಪ್ರಕರಣ: ಬೆಟ್ಟ ಅಗೆದು ‘ಮೇಕೆ’ ಹಿಡಿದ TV9!

  ಪಿಕೆ ಸಿನಿಮಾದಲ್ಲಿ ಅನುಷ್ಕಾ ಶರ್ಮ ಸುದ್ದಿ ವಾಹಿನಿಯೊಂದರ ಸ್ಟುಡಿಯೋದೊಳಗೆ ನಾಯಿಮರಿ ಹಿಡಿದುಕೊಂಡು ನಿರೂಪಣೆ ಮಾಡಿದ್ದನ್ನು ನೋಡಿದ್ದ ಪ್ರೇಕ್ಷಕರು, ಕನ್ನಡದಲ್ಲಿ ಇಂಥದನ್ನೆಲ್ಲಾ ನೋಡುವುದು ಯಾವಾಗ ಎನ್ನುವ ನಿರೀಕ್ಷೆಯಲ್ಲಿದ್ದರು. ಅವರ ನಿರೀಕ್ಷೆಯನ್ನು ಕನ್ನಡದ ನಂಬರ್ 1 ಸುದ್ದಿ ವಾಹಿನಿ ನಿನ್ನೆ ಪೂರೈಸಿದ್ದು, ಸ್ಟುಡಿಯೋದಲ್ಲಿ ಪ್ರೇಕ್ಷಕರಿಗೆ ಮೇಕೆ ದರ್ಶನ ಮಾಡಿಸಿದೆ. ಮೇಕೆಗೆ ಸ್ವಾಗತ: ಈ ಬಾರಿ ಕರ್ನಾಟಕದಲ್ಲಿ ಬರಗಾಲ. ಕನ್ನಡ ಸುದ್ದಿ ವಾಹಿನಿಗಳಿಗೂ ಸುದ್ದಿ ಬರ. ಇದೇ ಸಮಯಕ್ಕೆ ಪ್ರಜಾವಾಣಿ ಎರಡು ದಿನಗಳ ಹಿಂದೆ ಶಿವಮೊಗ್ಗ ಹೊರವಲಯದ ಮತ್ತೂರಿನಲ್ಲಿ ಸಂಕೇತಿ ಬ್ರಾಹ್ಮಣರು..

  May 6, 2016
  ...
  ಮೀಡಿಯಾ 2.0

  ಪಿಆರ್ ವರ್ಸಸ್ ಮೀಡಿಯಾ: ಮಾಹಿತಿ ಪ್ರಸಾರಕ್ಕೆ ‘ಕೂಪನ್’ ಆಮಿಷ, ಐಡಿಯಾ!

  ಅದು ಬೆಂಗಳೂರಿನ ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್. ಅದರ ಬ್ಯಾಂಕ್ವೆಟ್ ಹಾಲೊಂದರಲ್ಲಿ ಪ್ರತಿಷ್ಠಿತ ಕಾರ್ಪೋರೇಟ್ ಕಂಪೆನಿಯೊಂದರ ಉತ್ಪನ್ನ ಬಿಡುಗಡೆಯ ಕಾರ್ಯಕ್ರಮ. ಆಹ್ವಾನಿತ ಪತ್ರಕರ್ತರು, ಅಹ್ವಾನವನ್ನು ಅವಹಾಯಿಸಿಕೊಂಡು ಬಂದ ಪತ್ರಕರ್ತರು, ಹೀಗೆ ಹೆಚ್ಚು ಕಡಿಮೆ 50ರ ಆಸುಪಾಸಿನಲ್ಲಿರುವ ಸಂಖ್ಯೆ. ಜತೆಗೆ, ಟಿವಿ ಕ್ಯಾಮೆರಾಮೆನ್ಗಳು ಹಾಗೂ ಪತ್ರಿಕೆಗಳ ಛಾಯಾಚಿತ್ರಕಾರರು. ಅಂದುಕೊಂಡ ಸಮಯಕ್ಕಿಂತ ಕೊಂಚ ತಡವಾಗಿಯೇ ಪತ್ರಿಕಾಗೋಷ್ಠಿ ಆರಂಭವಾಗುತ್ತದೆ. ದೂರದ ಮುಂಬೈನಿಂದ ಬಂದ ನಟಿ, ಉತ್ಪನ್ನವನ್ನು ಬಿಡುಗಡೆ ಮಾಡುತ್ತಾಳೆ. “ಮೇಡಂ, ಸ್ವಲ್ಪ ಹಿಂಗೆ… ಮೇಡಂ, ಸ್ವಲ್ಪ ಈ ಕಡೆ… ಸಾರ್, ಸ್ವಲ್ಪ ಸೈಡಿಗೆ ಬನ್ನಿ…”. ಕ್ಲಿಕ್.. ಕ್ಲಿಕ್….

  May 6, 2016

FOOT PRINT

Top