An unconventional News Portal.

KPSC NEWS
    ...
    kpsc-bangalore-1
    KPSC NEWS

    ‘ಕೆಎಟಿ’ಯಿಂದ ‘ಕೆಪಿಎಸ್‌ಸಿ’ ನೇಮಕಾತಿ ರದ್ದು ಆದೇಶ ವಜಾ; 362 ಜನ ಅಭ್ಯರ್ಥಿಗಳಿಗೆ ಎರಡು ತಿಂಗಳಲ್ಲೇ ಉದ್ಯೋಗ!

    362 ಗೆಜೆಟೆಡ್‌ ಪ್ರೊಬೇಷ­ನರಿ ಹುದ್ದೆಗಳ ಭರ್ತಿಗಾಗಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರಾಜ್ಯ ಸರ್ಕಾರ 2014ರಲ್ಲಿ ರದ್ದುಗಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಇದೀಗ ವಜಾಗೊಳಿಸಿದ್ದು, 362 ಉದ್ಯೋಗಾರ್ಥಿಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸಿದ ಗೆಜೆಟೆಡ್‌ ಪ್ರೊಬೇಷ­ನರಿ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ 2011ರಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡು­ವಂತೆ ಸರಕಾರ ಹೊರಡಿಸಿದ್ದ 4..

    October 19, 2016
    ...
    kpsc-bangalore-1
    KPSC NEWS

    ವೇಳಾಪಟ್ಟಿ ಸಹಿತ ಅಧಿಸೂಚನೆ: ಏನಿದು ಕೆಪಿಎಸ್ಸಿ ಒಳಗಿನ ಹೊಸ ಬೆಳವಣಿಗೆ?

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಸೂಚನೆ ಜೊತೆಗೆ ಪರೀಕ್ಷೆಯ ದಿನಾಂಕವನ್ನೂ ಘೋಷಿಸಲಾಗಿದೆ. 159 ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಹೊರಡಿಸಿರುವ ಇತ್ತೀಚಿನ ಅಧಿಸೂಚನೆಯಲ್ಲಿ ಪರೀಕ್ಷಾ ದಿನಾಂಕವೂ ನಮೂದಿಲಾಗಿದೆ. ಈ ಮೂಲಕ ಅಭ್ಯರ್ಥಿಗಳಿಗೆ ಮೊದಲ ಹಂತದ ಪಾರದರ್ಶಕತೆ ಕಾಣಿಸಿದೆ. ಅಧಿಸೂಚನೆ ನಂತರ ಪರೀಕ್ಷೆ ದಿನಾಂಕಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುವುದು ತಪ್ಪಿದೆ. ಈ ಹಿಂದೆ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲಿಯೇ ಕೆಪಿಎಸ್ಸಿ ಪರೀಕ್ಷೆಗಳನ್ನು ನಡೆಸಲು ಆಯೋಗ ತೀರ್ಮಾನಿಸಿದೆ ಎಂಬುದನ್ನು ‘ಸಮಾಚಾರ’ ವರದಿ ಮಾಡಿತ್ತು. ಇದೀಗ ಕೆಪಿಎಸ್ಸಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸುವ..

    August 26, 2016
    ...
    KPSC Sham Bhat
    KPSC NEWS

    ‘ಕೆಪಿಎಸ್ಸಿ’ [KPSC] ಗೆ ಶಾಮ್ ಭಟ್ ಅಧ್ಯಕ್ಷ: ರೋಗಗ್ರಸ್ಥ ಆಯೋಗಕ್ಕೆ ಮೂವರ ಮದ್ದೇ ಭೀಕರ!

    ಒಂದು ಕಾಲದಲ್ಲಿ ಕರ್ನಾಟಕದ ಮನೆ ಮನೆಗಳಿಂದ ಉದ್ಯೋಗ ಸೃಷ್ಟಿಸಿ, ಬಿಸಿ ರಕ್ತದ ಯುವಕ- ಯುವತಿಯರನ್ನು ಬಡಿದೆಬ್ಬಿಸಿಕೊಂಡು ಕರೆತಂದು ಸರಕಾರದ ಸೇವೆಗೆ ಸೇರಿಸಿಕೊಂಡ ‘ಆಯೋಗ’ದಲ್ಲಿ ಇನ್ನು ಮುಂದೆ ಶಿಕ್ಷಣ ವ್ಯವಸ್ಥೆ- ಪರೀಕ್ಷಾ ಮಾದರಿಯೊಂದು ಜಾರಿಗೆ ಬರಲಿದೆ. ಕೆಪಿಎಸ್ಸಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, “ಕೆಪಿಎಸ್ಸಿಯಲ್ಲಿ ಈವರೆಗೂ ಒಂದು ಶಿಸ್ತು ಎಂಬುದೇ ಬಂದಿಲ್ಲ. ಯಾವಾಗ ಪರೀಕ್ಷೆಗಳು ನಡೆಯುತ್ತವೆ, ಯಾವಾಗ ನಡೆಯುವುದಿಲ್ಲ, ಫಲಿತಾಂಶದ ಪ್ರಕಟಣೆ ಯಾವಾಗ, ಹೀಗೆ ಹಲವು ಸಂಗತಿಗಳಿಗೆ ಇಲ್ಲಿ ವೇಳಾಪಟ್ಟಿಯೇ ಇಲ್ಲ. ಹೀಗಾಗಿ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲಿಯೇ ಕೆಪಿಎಸ್ಸಿ..

    August 10, 2016
    ...
    kpsc-1
    KPSC NEWS

    FDA ಮರುಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ವಿಚಾರ: ಆಕ್ರೋಶ, ಅಭಿವ್ಯಕ್ತಿ ಹಾಗೂ ಭ್ರಮನಿರಸನ!

    ಎಫ್ಡಿಎ ಮರುಪರೀಕ್ಷೆಗೆ ಆಗ್ರಹಿಸಿ ಆರಂಭಗೊಂಡಿದ್ದ ಪ್ರತಿಭಟನೆ ತಾರ್ಕಿಕ ಅಂತ್ಯಕ್ಕೆ ಮುನ್ನವೇ ಭ್ರಮನಿರಸನವನ್ನು ಹುಟ್ಟು ಹಾಕಿದೆ. ಸಹಜ ಆಕ್ರೋಶದ ಅಭಿವ್ಯಕ್ತಿಯ ರೂಪವಾಗಿ ಸಾಮಾಜಿಕ ಜಾಲತಾಣದಲ್ಲಿ ಮೊಳಕೆಯೊಡೆದಿದ್ದ ಪ್ರತಿಭಟನೆ ಮೂರು ಹಂತಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಕಾವನ್ನು ಕಾಯ್ದುಕೊಂಡಿತ್ತು. ಮೊದಲು ‘ಕೆಪಿಎಸ್ಸಿ ಚಲೋ’ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆ, ನಂತರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನಕ್ಕೆ ಕಾಲಿಟ್ಟಿತ್ತು. ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಜೂ. 9ರಂದು ನಡೆಸಲು ಕೆಲವು ಅಭ್ಯರ್ಥಿಗಳು ಮುಂದಾಗಿದ್ದರು ಕೂಡ. ಆದರೆ, ಪ್ರತಿಭಟನೆಗೆ ಒಂದು ದಿನ ಅನುಮತಿ ನೀಡಿದ್ದ ಪೊಲೀಸರು,..

    June 11, 2016
    ...
    kpsc-hunger-strike-1
    KPSC NEWS

    ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ FDA ಅಭ್ಯರ್ಥಿಗಳು: ಮರು ಪರೀಕ್ಷೆ ಆಗ್ರಹ ಮುಂದಿಟ್ಟ ಪ್ರತಿಭಟನಾಕಾರರು

    ಎಫ್ಡಿಎ ಮರು ಪರೀಕ್ಷೆಗೆ ಆಗ್ರಹಿಸಿ ಹಾಗೂ ಅರ್ಹತಾ ಪಟ್ಟಿಯ ಆಯ್ಕೆ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಬುಧವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಭ್ಯರ್ಥಿಗಳು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸರಕಾರ ಎಫ್ಡಿಎ ಮರುಪರೀಕ್ಷೆ ಸಂಬಂಧ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹ ಮುಂದಿಟ್ಟಿದ್ದಾರೆ. ಈ ಹಿಂದೆ ಇದೇ ಅಭ್ಯರ್ಥಿಗಳು ಒಂದು ದಿನ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಸಿಎಂ ಎಫ್ಡಿಎ..

    June 8, 2016
    ...
    kpsc-kagodu-1
    KPSC NEWS

    ಕೆಪಿಎಸ್ಸಿ ಅದ್ಯಕ್ಷ ಸ್ಥಾನಕ್ಕೆ ಕಳಂಕಿತ ಅಧಿಕಾರಿ ಶಾಮ್ ಭಟ್: ಸರಕಾರದ ನಡೆಗೆ ಸ್ಪೀಕರ್ ಕಾಗೋಡು ಗರಂ

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಅಧ್ಯಕ್ಷ ಸ್ಥಾನಕ್ಕೆ ಬಿಡಿಎ ಆಯುಕ್ತ ಶಾಮ್‍ ಭಟ್ ಅವರ ಹೆಸರನ್ನು ಶಿಫಾರಸು ಮಾಡಿರುವ ಸರ್ಕಾರದ ಕ್ರಮಕ್ಕೆ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, “ಕಳಂಕವನ್ನು ಹೊತ್ತುಕೊಂಡಿರುವ ಅಧಿಕಾರಿ ಶಾಮ್‍ ಭಟ್ ಹೆಸರನ್ನು ಶಿಫಾರಸು ಮಾಡಿರುವ ಕ್ರಮ ಸರಿಯಲ್ಲ,” ಎಂದು ಗರಂ ಆಗಿ ನುಡಿದರು. “ರಾಜ್ಯಪಾಲರು ಅವರ ಹೆಸರನ್ನು ಅಂಗೀಕರಿಸುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇವರ ಹೆಸರನ್ನು ಶಿಫಾರಸು..

    June 8, 2016
    ...
    kpsc-bangalore-1
    KPSC NEWS

    FDA ಮರುಪರೀಕ್ಷೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ: ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ದಾಖಲೆಗಳಿಲ್ಲಎಂದ ಕೆಪಿಎಸ್ಸಿ

    ವಿವಾದಕ್ಕೆ ಕಾರಣವಾಗಿರುವ FDA ಮರು ಪರೀಕ್ಷೆಗೆ ಆಗ್ರಹಿಸಿ ಜೂ. 8ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಅಭ್ಯರ್ಥಿಗಳು ತೀರ್ಮಾನಿಸಿದ್ದಾರೆ. ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಮನವಿಯನ್ನು ಸ್ವೀಕರಿಸಿದ್ದರು. ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸೂಕ್ತ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಕಳೆದ ತಿಂಗಳು ಹೇಳಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ,” ಎಂದು ಮಾಹಿತಿ ನೀಡಿದರು. ಈ..

    June 6, 2016
    ...
    kpsc-bangalore-1
    KPSC NEWS

    6 ಸಾವಿರ ಹುದ್ದೆ ನೇಮಕಾತಿ ಸಮಯದಲ್ಲಿ KPSCಗೆ ಕಳಂಕಿತ ಅಧ್ಯಕ್ಷರು ಬೇಡ: ರಾಜ್ಯಪಾಲರಿಗೆ ನೀಡಿದ ದೂರಿನ 5 ಪ್ರಮುಖ ಅಂಶಗಳು

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಕ್ಕೆ ಅಧ್ಯಕ್ಷರನ್ನಾಗಿ ಸರಕಾರ ಶಿಫಾರಸು ಮಾಡಿರುವ ಅಧಿಕಾರಿ ಶಾಮ್ ಭಟ್ ಹೆಸರನ್ನು ಅಂಗೀಕರಿಸಬಾರದು ಎಂದು ಬೆಂಗಳೂರು ಮೂಲದ ವಕೀಲರೊಬ್ಬರು ಗುರುವಾರ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ನಟರಾಜ್ ಶರ್ಮಾ ಎಂಬ ವಕೀಲರು ಸುಪ್ರಿಂ ಕೋರ್ಟ್ ಆದೇಶ, ಪತ್ರಿಕೆಗಳಲ್ಲಿ ಬಿಡಿಎ ಆಯುಕ್ತರಾಗಿರುವ ಅಧಿಕಾರಿ ಶಾಮ್ ಭಟ್ ಬಗ್ಗೆ ಬಂದಿರುವ ಪತ್ರಿಕಾ ಪ್ರಕಟಣೆಗಳ ಅಡಕವನ್ನು ಹೊಂದಿರುವ ದೂರನ್ನು ರಾಜಭವನದಲ್ಲಿ ದಾಖಲಿಸಿದ್ದಾರೆ. ಅದರ ಪ್ರಮುಖಾಂಶಗಳು ಇಲ್ಲಿವೆ. ಈ ರಾಜ್ಯದ ಜವಾಬ್ದಾರಿಯುತ ಪ್ರಜೆಯಾಗಿ ಕೆಪಿಎಸ್ಸಿಗೆ ಬಿಡಿಎ ಆಯುಕ್ತರಾಗಿರುವ ಶಾಮ್ ಭಟ್..

    May 27, 2016
    ...
    waju-bhayi-wala-1
    KPSC NEWS

    ಮೊಸರಲ್ಲಿ ಕಲ್ಲು ಹುಡುಕುತ್ತಿದ್ದವರು ವಾಲಾ: ಕೆಪಿಎಸ್ಸಿ ಶಿಫಾರಸ್ಸಿಗೆ ಅಂಕಿತ ಹಾಕ್ತಾರಾ?

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷರ ಶಿಫಾರಸು ಚೆಂಡು ಈಗ ರಾಜಭವನದ ಅಂಗಳಕ್ಕೆ ಬಂದು ಬಿದ್ದಿದೆ. ಆರಂಭದಿಂದಲೂ ರಾಜ್ಯ ಸರಕಾರದ ಶಿಫಾರಸ್ಸುಗಳಿಗೆ ಅಂಕಿತ ಹಾಕುವಲ್ಲಿ ತಕರಾರು ತೆಗೆಯುತ್ತಲೇ ಬಂದಿದ್ದ ರಾಜ್ಯಪಾಲ ವಾಜುಭಾಯಿ ವಾಲಾ, ಈ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಒಂದು ವೇಳೆ ಕಳಂಕಿತ ಅಧಿಕಾರಿ ಶಾಮ್ ಭಟ್ ಅವರ ಹೆಸರನ್ನು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಸರಕಾರ ಮಾಡಿರುವ ಶಿಫಾರಸಿಗೆ ಅಂಕಿತ ಹಾಕಿದ್ದೇ ಆದರೆ, ರಾಜ್ಯಪಾಲರ ನಡೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಮಾಡಿರುವ ಆರೋಪಕ್ಕೆ..

    May 25, 2016
    ...
    kpsc-1
    KPSC NEWS

    FDA ಅಭ್ಯರ್ಥಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆ: ಅತ್ತ ಕೆಪಿಎಸ್ಸಿ ಕಾಯಕಲ್ಪ ಕಡೆಗಣನೆ!

    FDA ಅಭ್ಯರ್ಥಿಗಳ ಹೋರಾಟ ನಿರ್ಣಾಯಕ ತಿರುವಿಗೆ ಬಂದು ಬಂದು ನಿಂತಿದೆ. ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಕ್ಕೂ ಅಧಿಕ ಸರಕಾರಿ ಉದ್ಯೋಗ ಆಕಾಂಕ್ಷಿಗಳು ಕೆಪಿಎಸ್ಸಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ FDA ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಆಮ್ ಆದ್ಮಿ ಪಕ್ಷದ ರಾಜ್ಯ ಸಹಸಂಚಾಲಕ ರವಿಕೃಷ್ಣಾ ರೆಡ್ಡಿ, ಎಐಡಿಎಸ್ಓ ಸಂಘಟನೆಯ ಹರೀಶ್ ಮತ್ತಿತರರು ಪಾಲ್ಗೊಂಡು ಪ್ರತಿಭಟನಾನಿರತರಿಗೆ ಬೆಂಬಲ ಸೂಚಿಸಿದರು. ಸಿಎಂ ಸ್ಪಂದನೆ: ಪ್ರತಿಭಟನಾಕಾರರನ್ನು ಸಿಎಂ ಸಿದ್ದರಾಮಯ್ಯ..

    May 24, 2016
  • 1
  • 2

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top