An unconventional News Portal.

INVESTIGATIONGAURI LANKESH FILES
    ...
    People hold placards and candles during a vigil for Gauri Lankesh, a senior Indian journalist who according to police was shot dead outside her home on Tuesday by unidentified assailants in southern city of Bengaluru, in Ahmedabad
    GAURI LANKESH FILES

    ಮೂರು ದಿನಕ್ಕೆ ‘ಮೂವತ್ತಾರು ಥಿಯರಿ’: ಗೌರಿ ಲಂಕೇಶ್ ಹತ್ಯೆ ಪ್ರಕರಣ ಇನ್ನೂ ಮಿಸ್ಟರಿ!

    ರಾಜ್ಯದ ರಾಜಧಾನಿಯಲ್ಲಿ ನಡೆದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನ ಕಳೆದಂತೆ ನಿಗೂಢತೆಗೆ ಹೆಚ್ಚು ಸುತ್ತಿಕೊಳ್ಳುತ್ತಿದೆ. 13 ದಿನಗಳ ಹಿಂದೆ ರಾಜರಾಜೇಶ್ವರಿನಗರದ ತಮ್ಮ ಮನೆಯ ಮುಂದೆ ಗೌರಿ ಗುಂಡೇಟಿಗೆ ಬಲಿಯಾಗಿದ್ದರು. ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ರಾಜ್ಯ ಸರಕಾರ ಕುಟುಂಬದವರ ಒತ್ತಾಯದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿತ್ತು. ಸುಮಾರು 100 ಜನರ ತಂಡ ಕಳೆದ 12 ದಿನಗಳಲ್ಲಿ ನಾನಾ ಜಾಡು ಹಿಡಿದು ತನಿಖೆ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆನ್ಸೇಷನ್ ಹುಟ್ಟುಹಾಕಿರುವ, ನ್ಯೂಸ್‌..

    September 18, 2017
    ...
    iamgauri-transgenders-bangalore
    GAURI LANKESH FILES

    ಪತ್ರಕರ್ತೆಯ ಮಾನವೀಯ ಮುಖ: ‘ನಾನೂ ಗೌರಿ’ ಎಂದ ಬೆಂಗಳೂರಿನ ಲೈಂಗಿಕ ಅಲ್ಪಸಂಖ್ಯಾತರು!

    ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು ವಾರದ ನಂತರ ಬೆಂಗಳೂರಿನಲ್ಲಿ ನಡೆದ ‘ಪ್ರತಿರೋಧ ಸಮಾವೇಶ’ದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಭಾಗೀದಾರಿಕೆ ಎದ್ದು ಕಾಣುವಂತಿತ್ತು. ಅಷ್ಟೆ ಅಲ್ಲ; ಸಮಾವೇಶಕ್ಕಾಗಿ ಇದೇ ಸಮುದಾಯ ಭಿಕ್ಷೆ ಬೇಡಿ 2,351 ರೂಪಾಯಿಗಳ ದೇಣಿಗೆಯನ್ನೂ ನೀಡಿತು. ಸಮಾಜದಲ್ಲಿ ಬೇರೂರಿರುವ ಲೈಂಗಿಕತೆ ಬಗೆಗಿನ ‘ನಿಷಿದ್ಧ’ಗಳ ನಡುವೆಯೂ, ಲೈಂಗಿಕ ಅಲ್ಪಸಂಖ್ಯಾತರು ಗೌರಿ ಸಾವಿಗೆ ಕಂಬನಿಯನ್ನೇಕೆ ಮಿಡಿದರು? ಈ ಕುರಿತು ಇನ್ನಷ್ಟು ಆಳಕ್ಕಿಳಿದ ‘ಸಮಾಚಾರ’ಕ್ಕೆ ಕುತೂಹಲಕಾರಿ ಮಾಹಿತಿ ಲಭ್ಯವಾಯಿತು. ಕೆಲವೇ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಹಿಜ್ರಾಗಳು ಎಂದರೆ ದರೋಡೆಕೋರರು,..

    September 14, 2017
    ...
    gauri-4-bullets-fsl-final
    GAURI LANKESH FILES

    ಸಾವಿಗೆ ಪ್ರತಿಕ್ರಿಯೆ ಮತ್ತು ಗೌರಿ ಲಂಕೇಶ್ ಹತ್ಯೆಯ ‘ಕ್ರೈಂ ಸೀನ್‌’ ನೀಡಿದ ಮಹತ್ವದ ಸುಳಿವು

    ತಮ್ಮನ್ನು ತಾವು ಪತ್ರಕರ್ತೆ- ಹೋರಾಟಗಾರ್ತಿ ಎಂದು ಟ್ವಿಟರ್‌ನ ಬಯೋನಲ್ಲಿ ಬರೆದುಕೊಂಡಿದ್ದ ಗೌರಿ ಲಂಕೇಶ್ ಹತ್ಯೆ ನಡೆದು ವಾರ ಕಳೆದಿದೆ. ಈ ಸಮಯದಲ್ಲಿ ಮೊದಲ ಬಾರಿಗೆ ಮಹತ್ವ ಸುಳಿವೊಂದು ಲಭ್ಯವಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ. ‘ಸಮಾಚಾರ’ಕ್ಕೆ ಲಭ್ಯವಾಗಿರುವ ಖಚಿತ ಮಾಹಿತಿ ಪ್ರಕಾರ, ಘಟನಾ ಸ್ಥಳದಲ್ಲಿ ಪೊಲೀಸರಿಗೆ ಸಿಕ್ಕಿರುವುದು ನಾಲ್ಕು ಕಾಡತೂಸುಗಳು(ಕ್ಯಾಟ್ರಿಡ್ಜ್‌ಗಳು) . ಇವುಗಳನ್ನು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಶನಿವಾರ ಕಳುಹಿಸಲಾಗಿತ್ತು. ಇವೂ ಸೇರಿದಂತೆ ಪ್ರಕರಣದ ಹತ್ಯೆ ನಡೆದ ಸ್ಥಳ, ಸನ್ನಿವೇಶ, ಗುಂಡು ಹಾರಿದ ರೀತಿ,..

    September 13, 2017
    ...
    death-of-journalist-25years-ago
    GAURI LANKESH FILES

    ಗೌರಿ ಸಾವಿನ ಸುತ್ತ…: ‘ಲಂಕೇಶ್ ಪತ್ರಿಕೆ’ಯ ಮತ್ತೊಬ್ಬ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ 25 ವರ್ಷ

    ಹುಟ್ಟು ಮತ್ತು ಸಾವು ಸಹಜವೇ ಆದರೂ, ಮನುಷ್ಯನೂ ಒಳಗೊಂಡಂತೆ ಎಲ್ಲಾ ಜೀವ ಪ್ರಬೇಧಗಳು ಹುಟ್ಟಿಗೆ ಸಂಭ್ರಮ ಪಡುತ್ತವೆ; ಸಾವಿಗೆ ಮರುಗುತ್ತವೆ. ಅದೇ ಸಾವು ಅಸಹಜವಾದರೆ ಸಹಜ ಆಕ್ರೋಶವೂ ಹುಟ್ಟುತ್ತದೆ. ಬೆಂಗಳೂರು ಮೂಲದ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿಯೂ ಇದೇ ಆಗಿದೆ. ಹತ್ಯೆ ನಡೆದ ನಾಲ್ಕು ದಿನಗಳು ಕಳೆಯುತ್ತಿರುವ ಈ ವೇಳೆಯಲ್ಲಿ, ಗೌರಿ ಲಂಕೇಶ್ ಸಾವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿರೋಧವೊಂದು ವ್ಯಕ್ತವಾಗಿದೆ. ಸೆ. 7ರಂದು ಪ್ರಕಟಗೊಂಡ ‘ಮರ್ಡರ್‌ ಆಫ್‌ ಆನ್ ಇಂಡಿಯನ್ ಜರ್ನಲಿಸ್ಟ್’ ಎಂಬ ‘ದಿ..

    September 9, 2017
    ...
    prathiroda-samavesha-1
    GAURI LANKESH FILES

    ‘ಪ್ರತಿರೋಧಗಳ ಪ್ರಖರತೆ’; ಗೌರಿ ಸಾವಿನ ಸಂಚು ಭೇದಿಸಲು ತನಿಖೆಗೆ ಇಳಿದವರ ‘ಶಂಕೆ’ಗಳು!

    ಸಾವಿನಲ್ಲಿ ‘ತಂದೆಯನ್ನು ಮೀರಿಸಿದ ಮಗಳ’ ಹತ್ಯೆ ನಡೆದು ಇವತ್ತಿಗೆ ಮೂರು ದಿನದ ಮುಕ್ತಾಯವಾಗುತ್ತಿದೆ. ತಮ್ಮ 56ನೇ ವಯಸ್ಸಿನಲ್ಲಿ ಪತ್ರಕರ್ತೆ, ಹೋರಾಟಗಾರ್ತಿ, ಒಂಟಿ ಮಹಿಳೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಗೌರಿ ಲಂಕೇಶ್ ಗುಂಡೇಟಿಗೆ ಬಲಿಯಾಗಿದ್ದು ಮಂಗಳವಾರ ರಾತ್ರಿ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದ ‘ಪತ್ರಕರ್ತರ ಮೊಟ್ಟ ಮೊದಲ ಹತ್ಯೆ ಪ್ರಕರಣ’ ಇದು. ಸ್ವಾತಂತ್ರ್ಯ ನಂತರದ ಸುದೀರ್ಘ ಅವಧಿಯ ನಾನಾ ಪಕ್ಷಗಳ ಆಳ್ವಿಕೆಯಲ್ಲಿ ಇಂತಹದೊಂದು ಘಟನೆಗೆ ಕರ್ನಾಟಕದ ರಾಜಧಾನಿ ಸಾಕ್ಷಿಯಾಗಿರಲಿಲ್ಲ. ನಾನಾ ಕಾರಣಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿರುವ ಈ ಪ್ರಕರಣದ..

    September 8, 2017
    ...
    gauri-home-police-bangalore
    GAURI LANKESH FILES

    ಬಿಜೆಪಿ ಬೈಕ್ ರ‍್ಯಾಲಿ ಮತ್ತು ಬೆಂಗಳೂರಿನ ‘ಕುಬೇರ ಮೂಲೆ’: ಗೌರಿ ಲಂಕೇಶ್ ಹತ್ಯೆಗೆ ಸಾಕ್ಷಿಯಾದ ಆ ಕರಾಳ ರಾತ್ರಿ…

    ಅವತ್ತು ಮಂಗಳವಾರ. ರಾಜಧಾನಿ ಬೆಂಗಳೂರು ಮುಂಜಾನೆಯಿಂದ ನಡೆದ ಬಿಜೆಪಿ ‘ಬೈಕ್ ರ‍್ಯಾಲಿ’ ಅಬ್ಬರ ಮುಗಿಸಿ ರಾತ್ರಿಗೆ ಹೊರಳಿಕೊಳ್ಳುತ್ತಿತ್ತು. ಪೊಲೀಸರು ತಮ್ಮ ಕೆಲಸ ಮುಗಿಸಿ ಮನೆಗಳಿಗೆ ತೆರಳಲು ಆರಂಭಿಸಿದ್ದರು. ಆಗ ಸಮಯ ಸುಮಾರು 7.45. ಅದೇ ಸಮಯಕ್ಕೆ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಐಡಿಯಲ್‌ಹೋಮ್ ಟೌನ್‌ಶಿಪ್‌ನ ಮನೆ ನಂಬರ್ 476 A ಮುಂಭಾಗ ಗುಂಡಿನ ದಾಳಿ ನಡೆಯಿತು. ಈ ಪ್ರದೇಶ ಬೆಂಗಳೂರಿನ ಪಾಲಿಗೆ ಹೊಸ ತಲೆಮಾರಿನ..

    September 7, 2017
    ...
    gauiri-naxal-saketh-final
    GAURI LANKESH FILES

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಕ್ಸಲೀಯರ ಸುತ್ತ ಅನುಮಾನದ ಹುತ್ತ ಬೆಳೀತಾ ಇರೋದು ಯಾಕೆ?

    ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ. ಗೌರಿ ದೇಹ ಬೆಂಗಳೂರಿನ ಚಾಮರಾಜಪೇಟೆಯ ಸ್ಮಶಾನದಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವ ಹೊತ್ತಿಗೇ, ಹತ್ಯೆ ಸುತ್ತ ಹಲವು ಅನುಮಾನಗಳ ಮುಳ್ಳು ನೆಟ್ಟಿದೆ. ಒಂದು ಕಡೆ ಗೌರಿ ಲಂಕೇಶ್ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ರಾಷ್ಟ್ರ ಮಟ್ಟದ ಬೃಹತ್ ಹೋರಾಟದ ರೂಪುರೇಷೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ, ರಾಜ್ಯ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ‘ವಿಶೇಷ ತನಿಖಾ ತಂಡ'(ಎಸ್‌ಐಟಿ) ವನ್ನು ರಚಿಸಿದೆ. ಎಸ್‌ಐಟಿ ತನಿಖೆಯ ಜಾಡನ್ನು ನಿರ್ಧಾರ ಮಾಡಬೇಕಿದೆ…

    September 7, 2017
    ...
    gauri-1
    GAURI LANKESH FILES

    ಮಣ್ಣಲ್ಲಿ ಮಣ್ಣಾದ ಗೌರಿ ದೇಹ: ‘ಹತ್ಯೆ ಮಾಡಿದವರು ತರಬೇತಿ ಹೊಂದಿದವರೇ ಆಗಿರಬೇಕಿಲ್ಲ’; ಎಫ್‌ಎಸ್ಎಲ್ ಮಾಹಿತಿ

    ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ಸಿಕ್ಕಿರುವ ‘ನಾಲ್ಕು ಕಾಟ್ರಿಡ್ಜ್‌’ಗಳು ಪ್ರಮುಖ ಸುಳಿವು ನೀಡುವ ಸಾಧ್ಯತೆ ಇದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್)ದ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ. ಮಂಗಳವಾರ ಬೆಂಗಳೂರಿನ ರಾಜರಾಜೇಶ್ವರಿನಗರದ ಮನೆಯ ಮುಂದೆಯೇ ಗೌರಿ ಲಂಕೇಶರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 24 ಗಂಟೆಗಳ ಅವಧಿಯಲ್ಲಿ ಇದು ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಗೌರಿ ಹತ್ಯೆ ಖಂಡಿಸಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ರಾಜಕೀಯ ಚರ್ಚೆಗೆ ನಾಂದಿ ಹಾಡಿವೆ. ಆದರೆ, ಅದನ್ನೂ ಮೀರಿ ಈ ಪ್ರಕರಣದಲ್ಲಿ..

    September 6, 2017
    ...
    gauri-lankesh-1
    GAURI LANKESH FILES

    ‘Killers of ಗೌರಿ ಲಂಕೇಶ್’: ಈ ಬಾರಿ ಸುಳಿವು ಬಿಟ್ಟು ಕೊಡಲಿದೆಯಾ ಸಿಸಿಟಿವಿ?

    ಕರ್ನಾಟಕದಲ್ಲಿ ಮತ್ತೊಬ್ಬ ‘ಬುದ್ಧಿಜೀವಿ’ಯ ಹತ್ಯೆ ನಡೆದು ಹೋಗಿದೆ. ವಿದ್ವಾಂಸ ಎಂ. ಎಂ. ಕಲ್ಬುರ್ಗಿ ಹತ್ಯೆ ನಡೆದು 2 ವರ್ಷ ಒಂದು ವಾರದ ಅಂತರದಲ್ಲಿ ಪತ್ರಕರ್ತೆ, ಹೋರಾಟಗಾರ್ತಿ, ಬಲಪಂಥೀಯ ವಿಚಾರಗಳ ವಿಮರ್ಶಕಿ, ರಾಜ್ಯದಲ್ಲಿ ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೌರಿ ಲಂಕೇಶ್ ತಮ್ಮ ಮನೆಯ ಮುಂದೆಯೇ ಗುಂಡೇಟಿಗೆ ಬಲಿಯಾಗಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಕಚೇರಿಯಿಂದ ಮನೆಗೆ ಮರಳಿದ ಗೌರಿ ಕಾರು ನಿಲ್ಲಿಸಿ ಗೇಟು ದಾಟಿ ಒಳ ಪ್ರವೇಶಿದ ನಂತರ ಅವರ ಮೇಲೆ ದಾಳಿ..

    September 6, 2017

Top