An unconventional News Portal.

ವಿಚಾರ

ಫೇಕ್‌ ನ್ಯೂಸ್‌; ಮಾಧ್ಯಮ ಸಂಸ್ಥೆಗಳ ಮಾಲೀಕ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಪ್ರಕರಣ

ಹಲವು ವರ್ಷಗಳಿಂದ ‘ನೇರ, ದಿಟ್ಟ, ನಿರಂತರ’ ಎಂಬ ಶೀರ್ಷಿಕೆಯಡಿ ಮಾಧ್ಯಮ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿರುವ ಸಂಸದ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಫೇಕ್‌ ನ್ಯೂಸನ್ನು ಟ್ವೀಟ್‌ ಮಾಡಿದ್ದಕ್ಕೆ ದೂರು

    ...
    ವಿಚಾರ

    ‘ತ್ರಿವಳಿ ತಲಾಕ್ ವಿರುದ್ಧ ಹೋರಾಟ, ಮುಸ್ಲಿಂ ಸಮುದಾಯದ ಸುಧಾರಣೆಗೆ ನಡೆಯುತ್ತಿರುವ ಆಂದೋಲನ’: ನಸ್ರೀನ್ ಮಿಠಾಯಿ

    ನಸ್ರೀನ್ ಮಿಠಾಯಿ. ತ್ರಿವಳಿ ತಲಾಕ್ ನಿಷೇಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಮುಸ್ಲಿಂ ಸಮುದಾಯದ ಸುಧಾರಣೆಯ ದೃಷ್ಟಿಯಿಂದ ಅದರಲ್ಲೂ ಮುಸ್ಲಿಂ ಮಹಿಳೆಯರ ದೃಷ್ಟಿಯಿಂದ ಅತ್ಯಂತ ಮಹತ್ವವಾದದ್ದು. ಇಂತಹ ಒಂದು ತೀರ್ಪು ಇದ್ದಕ್ಕಿದ್ದಂತೆ ಆಕಾಶದಿಂದ ಉದುರಿದ್ದಲ್ಲ. ಇದರ ಹಿಂದೆ ಹಲವು ವರ್ಷಗಳ ಕಾಲ ನೊಂದ ಮಹಿಳೆಯರೇ ಮುಂದಾಳತ್ವ ವಹಿಸಿ ನಡೆಸಿದ ಹೋರಾಟವಿದೆ; ಅಪಾರ ಶ್ರಮವಿದೆ. ಪವಿತ್ರ ಖುರಾನ್ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ತಮಗೆ ನ್ಯಾಯವನ್ನು ಕೇಳಿ ಯಶಸ್ವಿಯೂ ಆಗಿದ್ದಾರೆ. ತಾವು ಮತ್ತೆ ಮತ್ತೆ ಅನ್ಯಾಯಕ್ಕೊಳಗಾದಾಗಲೆಲ್ಲ ಮುಸ್ಲಿಂ ವೈಯಕ್ತಿಕ..

    January 2, 2018
    ...
    ವಿಚಾರ

    ‘ಬಾಟಲಿ ಹಳೇದೆ, ಕುಡಿಸಲು ಬಂದವರು ಹೊಸಬರು ಅಷ್ಟೆ’: ಸಂವಿಧಾನ ತಿದ್ದುಪಡಿ ಅಜೆಂಡಾ ಮತ್ತು ಮಾಧ್ಯಮಗಳ ಗಳಗಂಟ!

    “ಡಾ.ಬಿ.ಆರ್.ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮ್ರತಿಯಿಂದ ಏನೂ ಪಡೆದಿಲ್ಲ. ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ.” ಇದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಹೊರಟಿರುವ ಆರ್ಎಸ್‌ಎಸ್ 1949ರಲ್ಲಿ ತನ್ನ ಮುಖವಾಣಿ ಪತ್ರಿಕೆಯಲ್ಲಿ ಬರೆದುಕೊಂಡದ್ದು. “ಹಿಂದೂಗಳಿಗೆ ಪ್ರಜಾಪ್ರಭುತ್ವ ತತ್ವಗಳು ಹೊರಗಿನವು. ಇಡೀ ಮನುಕುಲದ ಅತಿ ಶ್ರೇಷ್ಟ ಮತ್ತು ಮಹಾನ್ ಕಾನೂನು ರಚನೆಕಾರ ಮನು,” ಹೀಗೆ ಬರೆದುಕೊಂಡಿದ್ದು ಸಂಘಪರಿವಾರದ ಗುರೂಜಿ ಗೋಳ್ವಾಲ್ಕರ್. ಹಾಗೆಯೇ, ಸಂಘಪರಿವಾರದ ಮತ್ತೊಬ್ಬ ಸಂಸ್ಥಾಪಕ, ‘ಹಿಂದುತ್ವ’ಪದ ಹುಟ್ಟು ಹಾಕಿದ..

    December 26, 2017
    ...
    ವಿಚಾರ

    ‘ಜಾತ್ರೆಲಿ ಪೀಪಿ; ಸಮ್ಮೇಳನದಲ್ಲಿ ಪುಸ್ತಕ’: ಸಾಹಿತ್ಯದ ಹಬ್ಬ ಬದಲಾಗುವುದು ಯಾವಾಗ?

    83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಮುಗಿಯುವುದರ ಜೊತೆಯಲ್ಲೇ ಅನೇಕ ವಿವಾದ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರತಿ ಬಾರಿಯೂ ಒಂದಿಲ್ಲೊಂದು  ಚರ್ಚೆ, ವಾದ ವಿವಾದ, ಸಂವಾದಗಳು ಸಮ್ಮೇಳನದ ಆರಂಭದಲ್ಲೋ, ಮುಕ್ತಾಯದಲ್ಲೋ ಎದುರಾಗುವುದು ಸಂಪ್ರದಾಯವಾಗುತ್ತಿದೆ. ಚಂಪಾರ ಅಧ್ಯಕ್ಷ ಭಾಷಣದಲ್ಲಿ ‘ಕೋಮುವಾದಿ ಪಕ್ಷಗಳಿಗೆ ಮತ ನೀಡದೆ, ಜಾತ್ಯತೀತರಿಗೆ ಮತ ನೀಡಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.  ಈ ಮಾತು ಬಿಜೆಪಿಗೆ ತನ್ನನ್ನು ತಾನು ಕೋಮುವಾದಿ  ಎಂದು ಅರ್ಥೈಸಿಕೊಳ್ಳುವಂತೆಯೂ, ಜಾತ್ಯತೀತ ಎಂದರೆ ಕಾಂಗ್ರೆಸ್ ಎಂದು ಅರ್ಥೈಸಿಕೊಳ್ಳುವಂತೆಯು ಮಾಧ್ಯಮಗಳು  ಆರೋಪಿಸಿ,  ಚರ್ಚೆಯನ್ನು ವಿವಾದವನ್ನಾಗಿಸಿದವು. ಭಾರತದ ರಾಜಕಾರಣವನ್ನು ಸೋಗಲಾಡಿತನಕ್ಕೆ ದೂಡಿದ ಈ ಜಾತ್ಯಾತೀತ ಮತ್ತು ಕೋಮುವಾದಿ ಎಂಬ ಎರಡು ಪದಕಾರಣಗಳ ಆಳಕ್ಕಿಳಿದು ಚರ್ಚೆಯನ್ನು ಬೆಳೆಸುವಷ್ಟು ಪ್ರಬುದ್ಧತೆಯನ್ನು ಮಾಧ್ಯಮಗಳು ಸೇರಿದಂತೆ ಪಾಲ್ಗೊಂಡವರು ತೋರಿಸಲೇ  ಇಲ್ಲ.  ಅಸೂಕ್ಷ್ಮತೆ,  ಅಪ್ರಬುದ್ಧತೆ ಮತ್ತು ಅರಚಾಟಗಳೇ ನಮ್ಮ ಅಭಿವ್ಯಕ್ತಿಯ ಯುಗಧರ್ಮವಾಗಿ ಬದಲಾಗುತ್ತಿರುವ ಈ..

    November 29, 2017
    ...
    ವಿಚಾರ

    ‘ರೀಲ್’ ಉಪೇಂದ್ರ ‘ರಿಯಲ್’ ಪಾಲಿಟಿಕ್ಸ್: ಸ್ಟಾರ್‌ ನಟನ ರಾಜಕೀಯ ಪ್ರವೇಶದ ಸುತ್ತ…

    ರೀಲ್ ಸಿನಿಮಾಗಳ ಕಾರಣಕ್ಕಾಗಿಯೇ ‘ರಿಯಲ್ ಸ್ಟಾರ್’ ಎಂದು ಕರೆಸಿಕೊಂಡಿರುವ ಉಪೇಂದ್ರ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಪಕ್ಷಕ್ಕೆ ‘ಕರ್ನಾಟಕ’ ಎನ್ನುವ ಪ್ರಾದೇಶಿಕ ಐಡೆಂಟಿಯನ್ನು ಸೇರಿಸಿಕೊಂಡು ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಎನ್ನುವ ಹೆಸರಿನಲ್ಲಿ ರಾಜಕೀಯ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಉಪೇಂದ್ರರಿಗೆ ‘ಕರ್ನಾಟಕ’ ಎನ್ನುವ ಪದ ಭಾವುಕ ಮತ್ತು ಪ್ರಾದೇಶಿಕ ರಾಜಕಾರಣದ ಲೆಕ್ಕಾಚಾರಕ್ಕೆ ಸಹಾಯ ಮಾಡಬಹುದಾದರು, ಈ ಹೆಸರೇ ಚುನಾವಣೆಯಲ್ಲಿ ಮುಖ್ಯವಾಗಲಾರದು. ತೀರ ಇತ್ತೀಚಿನ ಸಿನಿಮಾ ನಟರ ಚುನಾವಣಾ ರಾಜಕಾರಣ ಪ್ರವೇಶಗಳು ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳನ್ನೇನು ತರುತ್ತಿಲ್ಲವಾದರು, ಕರ್ನಾಟಕದ ಸಂದರ್ಭದಲ್ಲಿ ಮಾತ್ರ..

    November 1, 2017
    ...
    ವಿಚಾರ

    ‘ಅರ್ಥ ವ್ಯವಸ್ಥೆಯನ್ನು ಕಟ್ಟಿ ಬೆಳೆಸುವುದಕ್ಕಿಂತ; ಕುಟ್ಟಿ ಬೀಳಿಸುವುದು ಸುಲಭ’: ಯಶವಂತ್ ಸಿನ್ಹಾ

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರ ಬಂದ ನಂತರ ತೆಗೆದುಕೊಂಡ ಆರ್ಥಿಕ ನೀತಿಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಹಿರಿಯ ಬಿಜೆಪಿ ನಾಯಕ, ಆರ್ಥಿಕ ಸಚಿವರೂ ಆಗಿದ್ದ ಯಶವಂತ ಸಿನ್ಹಾ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ಬರೆದ ಅಂಕಣ ಚರ್ಚೆಯನ್ನು ಹೊಸ ಆಯಾಮಕ್ಕೆ ಕೊಂಡೊಯ್ದಿದೆ. ಈ ಹಿನ್ನೆಲೆಯಲ್ಲಿ, ಸಿನ್ಹಾ ಬರೆದ ಅಂಕಣವನ್ನು ಯಥಾವತ್ತಾಗಿ ಅರುಣ ಕಾಸರಗುಪ್ಪೆ ‘ಸಮಾಚಾರ’ ಓದುಗರಿಗಾಗಿ ಕನ್ನಡಕ್ಕೆ ತಂದಿದ್ದಾರೆ. ದೇಶದ ಅರ್ಥವ್ಯವಸ್ಥೆಗೆ ಕೇಂದ್ರ ಹಣಕಾಸು ಸಚಿವರು ತಂದಿಟ್ಟಿರುವ ಸ್ಥಿತಿ ನೋಡಿದ ಮೇಲೂ ಎದ್ದು ನಿಂತು ಸತ್ಯ ನುಡಿಯದಿದ್ದರೆ..

    September 28, 2017
    ...
    ವಿಚಾರ

    ಮೇ ಡೇ ಮತ್ತು ಮೇಕ್ ಇನ್ ಇಂಡಿಯಾ: ವೀರೋಚಿತ ಇತಿಹಾಸವನ್ನು ಮರೆತವರು ಯಾರು?

    ಬಂಡವಾಳಶಾಹಿ ಆಳುವವರ್ಗಗಳು ಸತತ ನಾಲ್ಕು ದಶಕಗಳಿಂದ ಜಗತ್ತಿನಾದ್ಯಂತ ನಡೆಸುತ್ತಿರುವ ದಾಳಿಯಿಂದಾಗಿ ಕಾರ್ಮಿಕ ವರ್ಗವು ತನ್ನ ವೀರೋಚಿತ ಇತಿಹಾಸವನ್ನೇ ಮರೆತುಬಿಡುವಂತೆ ಮಾಡಿಬಿಟ್ಟಿದೆ. ಇಲ್ಲದಿದ್ದರೆ ಮೇ ದಿನದ ಹುಟ್ಟನ್ನು ಕಾರ್ಮಿಕ ವರ್ಗವು ಹೇಗೆ ತಾನೇ ಮರೆಯಲು ಸಾಧ್ಯ? ಪ್ರಾಯಶಃ ಈ ಸಂಕಷ್ಟದ ಕಾಲದಲ್ಲಿ ಕಾರ್ಮಿಕ ಚಳವಳಿಯೊಳಗೂ ಈ ಇತಿಹಾಸವನ್ನು ಹೇಳಿಕೊಡುವುದು ನಿಂತುಹೋಗಿರಬೇಕು. ವಾಸ್ತವವಾಗಿ, ಕಾರ್ಮಿಕ ವರ್ಗವು ತನ್ನ ಸುದೀರ್ಘ ವರ್ಗ ಸಂಘರ್ಷದಲ್ಲಿ  ರೂಢಿಸಿಕೊಂಡ ಪ್ರತಿರೋಧದ ಸಂಸ್ಕೃತಿಯು ಹಿಂದೆಂದಿಗಿಂತಲೂ ಅತ್ಯಗತ್ಯವಾಗಿರುವ ಇಂದಿನ ಸಂದರ್ಭದಲ್ಲೇ ಕಾರ್ಮಿಕ ವರ್ಗದ ಕ್ರಾಂತಿಕಾರಿ ಇತಿಹಾಸದ ನೆನಪಿನ ಮೇಲೆ ದೀರ್ಘ..

    May 1, 2017
    ...
    ವಿಚಾರ

    ‘ಜನಾರೋಗ್ಯದ ಬಿಕ್ಕಟ್ಟು’: ವೈದ್ಯರು ಮತ್ತು ರೋಗಿಗಳ ಸಂಬಂಧ ಯಾಕೆ ರಕ್ತಸಿಕ್ತವಾಗುತ್ತಿದೆ?

      ಕಳಪೆಯಾದ ಸಾರ್ವಜನಿಕ ಆರೋಗ್ಯ ಸೇವಾ ಸೌಲಭ್ಯಗಳು ವೈದ್ಯರು ಮತ್ತು ರೋಗಿಗಳನ್ನು ಪರಸ್ಪರ ಹೊಡೆದಾಟಕ್ಕೆ ಹಚ್ಚುತ್ತಿವೆ.   ವೈದ್ಯರು ಆತಂಕದಲ್ಲಿದ್ದಾರೆ; ರೋಗಿಗಳು ದುಃಖದಲ್ಲಿದ್ದಾರೆ. ಇದೀಗ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚೂ ಕಡಿಮೆ ಇದೇ ವಾತಾವರಣವೇ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಂತೂ ಇತ್ತಿಚೆಗೆ ಐದು ಪ್ರತ್ಯೇಕ ಪ್ರಕರಣಗಳಲ್ಲಿ ರೋಗಿಯ  ಬಗ್ಗೆ ನಿರ್ಲಕ್ಶ್ಯ ತೋರಿದರೆಂದು ಆರೋಪಿಸಿ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ರೀತಿಯ ಪ್ರಕರಣಗಳು ದೆಹಲಿ, ಸೂರತ್, ಅಹಮದಾಬಾದ್, ಬುಲಂದ್‌ಶಹರ್ ಮತ್ತು ಚೆನ್ನೈಗಳಿಂದಲೂ ವರದಿಯಾಗಿದೆ. ಹಾಗೆ..

    April 4, 2017
    ...
    ವಿಚಾರ

    ‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು?

    ಉತ್ತರಪ್ರದೇಶದ ಶಾಸನ ಸಭಾ ಚುನಾವಣೆಗಳ ಫಲಿತಾಂಶವು ಭಾರತದ ರಾಜಕಾರಣದ ಭವಿಷ್ಯದ ಮೇಲೆ ನಿರ್ಣಾಯಕ ಪ್ರಭಾವನ್ನು ಬೀರಲಿದೆ. ಪ್ರತಿ ಆರು ಭಾರತೀಯರಲ್ಲಿ ಒಬ್ಬರು ಉತ್ತರ ಪ್ರದೇಶದಲ್ಲಿ ವಾಸಿಸುತ್ತಾರೆ ಎಂಬುದೂ ಮತ್ತು ಅದು ಪ್ರತ್ಯೇಕ ರಾಷ್ಟ್ರವಾಗಿದ್ದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಐದನೇ ರಾಷ್ಟ್ರವಾಗಿರುತ್ತಿತ್ತೆಂಬುದೇ ಅದರ ಮಹತ್ವವನ್ನು ಹೇಳುತ್ತದೆ. ಆದರೆ ಇತಿಹಾಸದಲ್ಲಿ ಒಮ್ಮೊಮ್ಮೆ ಉತ್ತರ ಪ್ರದೇಶದ ಚುನಾವಣೆಗಳಿಗೆ ಅದರ ಬೃಹತ್ ಗಾತ್ರಕ್ಕೂ ಮಿಗಿಲಾದ ಮಹತ್ವವಿರುವ ಗಳಿಗೆಯು ಬರುತ್ತದೆ. ಈ ಚುನಾವಣೆಯ ನಡೆಯುತ್ತಿರುವ ಸಂದರ್ಭ ಮತ್ತು ಸಮಯದ ಕಾರಣದಿಂದ ಅಂತಹ..

    February 20, 2017
    ...
    ವಿಚಾರ

    ಟ್ರಂಪ್ ಆಳ್ವಿಕೆಗೆ 100 ನೂರು ದಿನ: ಪರಿಸರಕ್ಕೆ ಮಾರಕವಾದ ವೈಟ್‌ ಹೌಸ್ ತೀರ್ಮಾನಗಳು

    ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇರಾಕ್, ಇರಾನ್, ಲಿಬಿಯಾ, ಸೋಮಾಲಿಯ, ಸೂಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ನಾಗರಿಕರು 90/120 ದಿನಗಳ ಕಾಲ ಅಮೆರಿಕವನ್ನು ಪ್ರವೇಶಿಸದಂತೆ ಹೊರಡಿಸಿದ ಜನವರಿ 27 ರ “ಮುಸ್ಲಿಂ ಪ್ರತಿಬಂಧ” ಆಡಳಿತಾತ್ಮಕ ಆದೇಶದ ಮೇಲೆಯೇ ಜಗತ್ತಿನ ಗಮನ ಕೇಂದ್ರೀಕರಣವಾಗಿದ್ದರಿಂದ, ಪರಿಸರ ನಿಯಂತ್ರಣ ಸಂಬಂಧಿ ವಿಷಯಗಳ ಮೇಲೆ ಗಾಢವಾದ ಪ್ರಭಾವ ಮಾಡುವ ಅವರ ಇತರ ಆಡಳಿತಾತ್ಮಕ ಆದೇಶಗಳು ಜನರ ಗಮನವನ್ನು ತಪ್ಪಿಸಿಕೊಂಡುಬಿಟ್ಟವು. ಯಾವ ರೀತಿ ವೀಸಾ ಬ್ಯಾನ್ ಎಂಬುದು ಪ್ರಪಂಚಾದ್ಯಂತ ತನ್ನ ಪರಿಣಾಮವನ್ನು..

    February 18, 2017
    ...
    ವಿಚಾರ

    ‘ಬಜೆಟ್ ವಿಶ್ಲೇಷಣೆ’: ಜೇಟ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ‘ಸಾರಕ್ಕಿಂತ ಅಬ್ಬರವೇ ಜಾಸ್ತಿ’

    (ಈ ಬಾರಿ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಕುರಿತು ಏಕತಾನತೆಯ ವರದಿಗಳನ್ನು ಮಾಧ್ಯಮಗಳು ಮುಂದಿಟ್ಟಿವೆ. ಜನಪ್ರಿಯತೆಗೆ ಒತ್ತು ನೀಡದೆ ದೂರದೃಷ್ಟಿಯನ್ನು ಪ್ರದರ್ಶಿಸಿದ ‘ಪ್ರಗತಿಪರ’ ಬಜೆಟ್ ಇದು ಎಂದು ಅವು ಹಾಡಿ ಹೊಗಳಿದೆ. ಜೇಟ್ಲಿ ಮಂಡಿಸಿದ ಮುಂಗಡ ಪತ್ರದ ಕುರಿತು ಆರ್ಥಿಕ ವಿಶ್ಲೇಷಣೆಗಳಿಗೆ ಹೆಸರಾದ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ (EPW) ನಿಖರ ಒಳನೋಟಗಳನ್ನು ಒಳಗೊಂಡ ಸಂಪಾದಕೀಯವನ್ನು ಬರೆದಿದೆ. ಅದು ನಾಳೆ-ಶನಿವಾರ- ಪ್ರಕಟವಾಗಲಿದೆ. ಅದರ ಕನ್ನಡಾನುವಾದ ಇಲ್ಲಿದೆ) ಕನ್ನಡಕ್ಕೆ: ಶಿವಸುಂದರ್    ಕೇಂದ್ರ ಸರ್ಕಾರದ 2017-18ನೇ ಸಾಲಿನ ಬಜೆಟ್ಟನ್ನು ನಿರೀಕ್ಷಿಯಂತೆಯೇ ಬಹಳಷ್ಟು ಮಾಧ್ಯಮಗಳು..

    February 3, 2017

FOOT PRINT

Top