An unconventional News Portal.

COVER STORY
  ...
  jayanth-patil-justice-hc
  COVER STORY

  ‘ಗುಜರಾತ್ ನಕಲಿ ಎನ್‌ಕೌಂಟರ್‌’ ಪ್ರಕರಣವನ್ನು ಸಿಬಿಐಗೆ ನೀಡಿದ್ದ ಹಿರಿಯ ನ್ಯಾ. ಪಟೇಲ್ ರಾಜೀನಾಮೆ ನೀಡಿದ್ದೇಕೆ?

  ಕರ್ನಾಟಕದ ಹೈಕೋರ್ಟ್‌ನಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಹಿರಿಯ ನ್ಯಾಯಾಧೀಶ, ಗುಜರಾತ್‌ ಮೂಲದ ಜಯಂತ್ ಪಟೇಲ್ ರಾಜೀನಾಮೆ ಸಲ್ಲಿಸಿದ್ದಾರೆ. ನ್ಯಾ. ಪಟೇಲ್‌ ಅವರ ರಾಜೀನಾಮೆಯನ್ನು ಸುಪ್ರಿಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಅಂಗೀಕರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಹಿರಿತನದ ಆಧಾರದ ಮೇಲೆ ಈ ಹಿಂದೆಯೇ ನ್ಯಾ. ಜಯಂತ್ ಪಟೇಲ್‌ ಗುಜರಾತ್‌ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಅವರನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತಾದರೂ, 2016ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಎಸ್‌. ಕೆ. ಮುಖರ್ಜಿ ಅಕ್ಟೋಬರ್‌..

  September 26, 2017
  ...
  kashmir-voilence-1
  COVER STORY

  ಕಲ್ಲು ತೂರುವ ಕಾಶ್ಮೀರಿಗಳ ಕೈಗೆ ಬಂದೂಕು ಸಿಗುವ ಮುನ್ನ ದಿಲ್ಲಿ ಆಡಳಿತ ಎಚ್ಚೆತ್ತುಕೊಳ್ಳಲಿ

  ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ರಕ್ತದ ಕೋಡಿ ಹರಿದಿದೆ. ಮತದಾನದ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಎಂದಿನಂತೆ ಕಾಶ್ಮೀರಿಗರ ಕಡೆಯಿಂದ ಕಲ್ಲು ತೂರಾಟ ನಡೆದಿದ್ದರೆ; ಭದ್ರತಾ ಪಡೆಗಳು ಗುಂಡಿನ ಮಳೆಗೆರೆದಿದ್ದಾರೆ. ಪರಿಣಾಮ 20 ರ ಆಸುಪಾಸಿನ 8 ಜನ ಯುವಕರು ಸಾವನ್ನಪ್ಪಿದ್ದಾರೆ. ಸುಮಾರು 300 ನಾಗರಿಕರು, 100 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ಹಿನ್ನಲೆ ಹಾಗೂ ದೇಶದ ‘ಗಣತಂತ್ರ‘ ಬಗೆಗಿನ ಅಲ್ಲಿನ ಜನರ ಆಕ್ರೋಶ ಮತ್ತು ಅಸಡ್ಡೆಯ ಪ್ರತಿರೂಪ ಎಂಬಂತೆ ಕೇವಲ ಶೇಕಡಾ 7.14 ರಷ್ಟು ಮತದಾನವಾಗಿದೆ. ಆತಂಕದ ಬೆಳವಣಿಗೆ ಏನೆಂದರೆ,..

  April 10, 2017
  ...
  v-shanmuganathan-gov
  COVER STORY

  ರಾಜ್ಯಪಾಲರ ಬೆಡ್ ರೂಮಿಗೆ ಮುಕ್ತ ಪ್ರವೇಶ: ಈ ‘ಬಿಳಿಯಾನೆ’ಗಳ ಖರ್ಚಿಗೆ ಬೇಕಿದೆ ಅಂಕುಶ!

  ಈಶಾನ್ಯ ಭಾರತದ ಪುಟ್ಟ ರಾಜ್ಯ ಮೇಘಾಲಯದ ರಾಜಭವನದೊಳಗೆ ನಡೆದ ಕರ್ಮಕಾಂಡದ ವರದಿ ಹೊರಬಿದ್ದಿದೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಿಗೆ ತಮಿಳುನಾಡು ಮೂಲದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯ ವಿ. ಷಣ್ಮಗನಾಥನ್ ಗುರಿಯಾಗಿದ್ದಾರೆ. ಅವರ ವಿರುದ್ಧ ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 90 ನೌಕರರು ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದರು. ಮಹಿಳೆಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದದ್ದು, ಕೆಲವು ಮಹಿಳೆಯರಿಗೆ ಅವರ ಬೆಡ್ ರೂಮಿಗೆ ಮುಕ್ತ ಪ್ರವೇಶವಿದ್ದದ್ದು ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ ಆರೋಪಗಳ ಪಟ್ಟಿಯು ಪತ್ರದಲ್ಲಿವೆ…

  January 28, 2017
  ...
  russia-plane-missing-1
  COVER STORY

  ಕಪ್ಪು ಸಮುದ್ರದಲ್ಲಿ ರಷ್ಯಾ ವಿಮಾನ ಪತನ: ಕ್ರಿಸ್ಮಸ್ ಆಚರಣೆಗೆ ಹೊರಟವರ 92 ಜನ ದುರಂತ ಅಂತ್ಯ

  ಎಲ್ಲವೂ ಅಂದುಕೊಂಡಂತೆ ನಡೆದು ಹೋಗಿದ್ದರೆ, ಇಷ್ಟೊತ್ತಿಗೆ 8 ಮಂದಿ ವಿಮಾನ ಸಿಬ್ಬಂದಿಗಳೂ ಸೇರಿದಂತೆ 84 ಪ್ರಯಾಣಿಕರು ರಷ್ಯಾದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುತ್ತಿದ್ದರು; ಆದರೆ ವಿಧಿಯಾಟ ಬೇರೆಯದೇ ಇತ್ತು. ಸದ್ಯ ಈವರೆಗಿನ ಪ್ರಾಥಮಿಕ ಮಾಹಿತಿ ಪ್ರಕಾರ, ಶನಿವಾರ ಸೋಚಿ ವಿಮಾನ ನಿಲ್ದಾಣದಿಂದ ಹೊರಟಿದ್ದ ಟ್ವಿಪಲೇವ್ ನಾಗರೀಕ ವಿಮಾನ ಕಪ್ಪು ಸಮುದ್ರದಲ್ಲಿ ಪತನವಾಗಿದೆ. ಅದರಲ್ಲಿದ್ದ ಎಲ್ಲಾ 92 ಜನ ಸಾವನ್ನಪ್ಪಿದ್ದಾರೆ. ವಿಮಾನ ಪತನದ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನಿಖೆಗೆ ಆದೇಶಿದ್ದಾರೆ. ದುರಂತ ಅಂತ್ಯ ಕಂಡಿರುವ ವಿಮಾನದಲ್ಲಿ ‘ಅಲೆಗ್ಝಾಂಡರ್ ಎನ್ಸೇಂಬಲ್’..

  December 25, 2016

Top