An unconventional News Portal.

ಕಾವೇರಿ ವಿವಾದ
  ...

  ಕಾವೇರಿ ಕಣದಿಂದ ಜಿ. ಮಾದೇಗೌಡ ಮಾಯ: ಪುತ್ರ ವ್ಯಾಮೋಹಕ್ಕೆ ಬಲಿಯಾದ್ರಾ ‘ಮಂಡ್ಯದ ಗಾಂಧಿ’?

  ಜಿ. ಮಾದೇಗೌಡ ಎಂಬ ಹೆಸರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಕರ್ನಾಟಕ ರಾಜಕೀಯದಲ್ಲಿ ಚಿರಪರಿಚಿತ ಹೆಸರು. ಕಾವೇರಿ ವಿಚಾರ ಬಂದರೆ ಮಂಡ್ಯದ ಬೀದಿಗಳಲ್ಲಿ ಪ್ರತ್ಯಕ್ಷವಾಗುವ ‘ಮಂಡ್ಯದ ಗಾಂಧಿ’, ನೇರ, ನಿಷ್ಟುರ ಪಾರದರ್ಶಕ ಹೋರಾಟಗಾರ ಎಂಬ ಬಿರುದುಗಳ ಭಾರ ಹೊತ್ತವರು ಇವರು. ನಿಜವಾಗಿಯೂ ಮಾದೇಗೌಡ ಪಾರದರ್ಶಕರೇ? ಗಾಂಧಿ ತತ್ವ ಪಾಲಿಸುವವರೇ? ಈ ವಿಚಾರಗಳ ಬೆನ್ನತ್ತಿ ಹೋದರೆ ಸ್ವಂತಕ್ಕಾಗಿ ಈ ‘ಗಾಂಧಿ’ ಮಾಡಿಕೊಂಡಿದ್ದೇನು? ಎಂಬ ಮಾಹಿತಿಗಳು ಸಿಗುತ್ತವೆ. ಕಾವೇರಿ ವಿಚಾರದಲ್ಲಿ ಮಂಡ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಮಾದೇಗೌಡರು ಏಕಾಏಕಿ ತಮ್ಮ ಧರಣಿ ನಿಲ್ಲಿಸಲು ಕಾರಣ ಪುತ್ರ […]

  October 6, 2016
  ...

  ‘ಸುಪ್ರಿಂ ಕೋರ್ಟ್ v/s ಕರ್ನಾಟಕ’: ಸಾಂವಿಧಾನಿಕ ಬಿಕ್ಕಟ್ಟಿನತ್ತ ಕಾವೇರಿ ನೀರು ಹಂಚಿಕೆ ವಿವಾದ!

  ಪಕ್ಷಭೇದವನ್ನು ಮರೆತ ರಾಜಕೀಯ ಪಕ್ಷಗಳು, ಯಾವುದೇ ಕಾರಣಕ್ಕೂ ಕಾವೇರಿ ನೀರು ಹರಿಸದಿರಲು ಒಗ್ಗಟ್ಟಿನ ಮಂತ್ರ, ನಿರ್ವಹಣಾ ಮಂಡಳಿಗೆ ಸಹಜ ವಿರೋಧ, ನಾರಿಮನ್ ಕುರಿತು ಚರ್ಚೆ… ಇವು ಶನಿವಾರ ಮಧ್ಯಾಹ್ನದ ನಂತರ ವಿಧಾನಸೌಧದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯ ಕೊನೆಯಲ್ಲಿ ಹೊರಬಿದ್ದ ತೀರ್ಮಾನಗಳು. ಈ ಬೆಳವಣಿಗೆಗಳು ದೇಶದಲ್ಲಿ ಈ ಕಾಲಘಟ್ಟದ ಸಾಂವಿಧಾನಿಕ ಬಿಕ್ಕಟ್ಟೊಂದು ಸೃಷ್ಟಿಸುವ ಸಾಧ್ಯತೆಗಳನ್ನು ಮುಂದಿಟ್ಟಿವೆ. ಶುಕ್ರವಾರ ಕೊಂಚ ‘ಗರಂ’ ಆಗಿಯೇ ತೀರ್ಪು ನೀಡಿದ ಸುಪ್ರಿಂ ಕೋರ್ಟ್ “ಕರ್ನಾಟಕ ಕೂಡ ದೇಶದ ಒಂದು ರಾಜ್ಯ. ಸುಪ್ರಿಂ ಕೋರ್ಟ್ ನೀಡಿದ […]

  October 2, 2016
  ...

  ‘ಕಾವೇರಿ ಕವರೇಜ್’: ಸರ್ವ ಪಕ್ಷ ಸಭೆ ಆರಂಭ; ದೇವೇಗೌಡ ಉಪವಾಸ; ಬಿಜೆಪಿ ವಿರುದ್ಧ ಉಗ್ರಪ್ಪ ಆಕ್ರೋಶ

  ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರಿಂ ಕೋರ್ಟ್ ನೀಡಿದ ‘ಗರಂ’ ಆದೇಶದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸರ್ವ ಪಕ್ಷ ಸಭೆ ಆರಂಭವಾಗಿದೆ. ಸುಪ್ರಿಂ ಕೋರ್ಟ್ ಶುಕ್ರವಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ಸರಕಾರ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಸಭೆಯನ್ನು ಕರೆದಿದೆ. ತಮಿಳುನಾಡಿಗೆ ನೀರು ಹರಿಸುವ ಹಾಗೂ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧಪಟ್ಟಂತೆ ಸಭೆಯಲ್ಲಿ ಚರ್ಚೆ ನಡೆಸಲಿದೆ. ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಖಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಸದಾನಂದ […]

  October 1, 2016
  ...

  ‘ಗಾಯದ ಮೇಲೆ ಬರೆ’: 36 ಸಾವಿರ ಕ್ಯೂಸೆಕ್ಸ್ ನೀರು, ನಿರ್ವಹಣೆಗೆ ಮಂಡಳಿ ರಚನೆ; ಸುಪ್ರಿಂ ಕೋರ್ಟ್ ‘ಗರಂ’ ಆದೇಶ

  ಮತ್ತೆ ಸುಪ್ರಿಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಶುಕ್ರವಾರ ಆದೇಶ ನೀಡಿದೆ. ಆದೇಶ ಪಾಲಿಸದೆ ಇರುವ ರಾಜ್ಯಸರ್ಕಾರದತ್ತ ಚಾಟಿ ಬೀಸಿರುವ ಸುಪ್ರೀಂಕೋರ್ಟ್, ಮೂರು ದಿನಗಳೊಳಗೆ ‘ನೀರು ನಿರ್ವಹಣಾ ಮಂಡಳಿ’ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಅ.1 ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್‍ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು. ಯು. ಲಲಿತ್ ನ್ಯಾಯಪೀಠ ಆದೇಶ ನೀಡಿದೆ. ಸೆ.20 ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್ […]

  September 30, 2016
  ...

  ಕೇಂದ್ರ ಕರೆದ ಸಭೆಯ ನಂತರವೇ ತಮಿಳುನಾಡಿಗೆ ನೀರು: ಸಿಎಂ ಸಿದ್ದರಾಮಯ್ಯ

  ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಸಭೆಯ ನಂತರವೇ ತಮಿಳುನಾಡಿಗೆ ನೀರು ಹರಿಸುವ ಕುರಿತು ಆಲೋಚನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರಕಾರ ಮುಂದಿನ ನಡೆಯ ಕುರಿತು ಚರ್ಚೆಗಳನ್ನು ನಡೆಸಿತ್ತು. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಪ್ರಸ್ತುತ ನಮ್ಮ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರು ಕುಡಿಯಲು ಮಾತ್ರ ಎಂದು ಸೆಪ್ಟೆಂಬರ್ 23ರಂದು ಸದನದಲ್ಲಿ […]

  September 28, 2016
  ...

  ಕಾವೇರಿ ವಿಚಾರದಲ್ಲಿ ಬದಲಾಗದ ‘ಸುಪ್ರಿಂ ನ್ಯಾಯ’: 6,000 ಕ್ಯೂಸೆಕ್ಸ್ ನೀರು ಹರಿಸಲು ಸೂಚನೆ

  ಮೇಲಿಂದ ಮೇಲೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡುತ್ತಿರುವ ಸುಪ್ರಿಂ ಕೋರ್ಟ್, ಮಂಗಳವಾರದ ತನ್ನ ತೀರ್ಪಿನಲ್ಲಿಯೂ 6, 000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿದೆ. ಇಂದಿನಿಂದ ಮೂರು ದಿನಗಳ ಕಾಲಾವಧಿಯಲ್ಲಿ 6,000 ಕ್ಯೂಸೆಕ್ಸ್ ತಮಿಳುನಾಡಿಗೆ ನೀರು ಬಿಡಲು ಕರ್ನಾಟಕಕ್ಕೆ ಹೇಳಿದೆ. ಇದರ ನಡುವೆ ಕೇಂದ್ರ ಸರಕಾರ ವಿವಾದಕ್ಕೆ ಅಂತ್ಯಹಾಡಲು ಮಧ್ಯಪ್ರವೇಶಿಸುವುದಾಗಿ ಸುಪ್ರಿಂ ಕೋರ್ಟಿಗೆ ತಿಳಿಸಿದೆ. ಸೆ. 23ರಂದು ವಿಶೇಷ ಅಧಿವೇಶನ ಕರೆದು ಶಾಸಕಾಂಗದ ಅಧಿಕಾರವನ್ನು ಬಳಸಿದ್ದ ರಾಜ್ಯದ ನಡೆಯ ಬೆನ್ನಲ್ಲೇ ಸುಪ್ರಿಂ ಕೋರ್ಟ್ ತೀರ್ಮಾನ ಹೊರಬಿದ್ದಿದೆ. […]

  September 27, 2016
  ...

  ‘ಕಾವೇರಿ ಕಣಿವೆಯಿಂದ’: ಬರಡು ಬೀಳುತ್ತಿರುವ ಕೃಷಿ ಭೂಮಿ ಮತ್ತು ಭವಿಷ್ಯದ ಬಿಕ್ಕಟ್ಟು!

  “ಹನ್ನೊಂದನೇ ದಿನ ಸೋಮವಾರ ಬಿತ್ತು. ಹಂಗಾಗಿ ಮಂಗಳವಾರ ಇಟ್ಕೊಳಿ ಅಂದ್ರು. ಸುಮಾರ್ 60 ಸಾವ್ರ ಖರ್ಚಾಗುತ್ತಿದೆ. ಎಲ್ಲಾ ಮುಗಿದ ಮೇಲೆ ಸಾಲ ವಾಪಾಸ್ ಕೊಡ್ತೀರೋ ಇಲ್ವೋ ಅನ್ನೋ ಬೈಗುಳನೂ ಕೇಳಬೇಕು,” ಎಂದು ತುಂಬಿದ ಕಣ್ಣುಗಳಲ್ಲಿ ನೋವಿನ ಕತೆಯನ್ನು ಶುರುಮಾಡಿದರು ಗಾಯತ್ರಿ. ಮಂಡ್ಯ ಜಿಲ್ಲೆಯ ಹೆಮ್ಮಿಗೆ ಗ್ರಾಮದ ದಲಿತ ಕಾಲೋನಿಯ ಅಂಚಿನಲ್ಲಿರುವ ಮನೆಯ ಮುಂದೆ ಅವರು ಕುಳಿತಿದ್ದರು. ಕಾವೇರಿ ವಿಚಾರದಲ್ಲಿ ವಿಶೇಷ ಅಧಿವೇಶನದ ನಿರ್ಣಯ ಹೊರಬಿದ್ದ ದಿನ ಅವರ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರ ಬಂದಾಗಲೆಲ್ಲಾ ಮಂಡ್ಯ […]

  September 26, 2016
  ...

  ‘ಕಾವೇರಿ ಕಣಿವೆಯಿಂದ’: 19 ದಿನಗಳ ಹೋರಾಟ; ಸ್ಥಗಿತ ಮತ್ತು ತಳಮಟ್ಟದ ವಾಸ್ತವಗಳು!

  ಎಂದಿನಂತೆಯೇ ಆರಂಭವಾಗುವ ದಿನಚರಿ, ಹಗಲು ಹೊತ್ತಿನಲ್ಲಿ ನಾನಾ ಬ್ಯಾನರ್ ಅಡಿಯಲ್ಲಿ ನಡೆಯುವ ಕಾವೇರಿಯ ಹೋರಾಟಗಳು, ರುಧ್ರಭೂಮಿಯಂತಾಗಿರುವ ನಗರದ ಪ್ರಮುಖ ವೃತ್ತ, ಹಳ್ಳಿಗಳಿಗೆ ಕಾಲಿಟ್ಟರೆ ನೀರಿಲ್ಲದೆ ಒಣಗಿ ನಿಂತಿರುವ ಜಮೀನುಗಳು; ನಾಲೆಗಳು. ಪ್ರತಿ ರೈತನ ಒಡಲೊಳಗೆ ಹುದುಗಿರುವ ಭವಿಷ್ಯದ ಕುರಿತಾದ ಭಯ ಮತ್ತು ಢಾಳಾಗಿ ಕಾಣುವ ‘ಕಾವೇರಿದ ರಾಜಕಾರಣ’ದ ಛಾಯೆ… ಇದು ಕಾವೇರಿ ಕೊಳ್ಳದ ಪ್ರಮುಖ ಜಿಲ್ಲೆ ಮಂಡ್ಯದಲ್ಲಿ ಶನಿವಾರ ‘ಸಮಚಾರ’ದ ಸುತ್ತಾಟದಲ್ಲಿ ಕಂಡು ಬಂದ ಚದುರಿದ ಚಿತ್ರಗಳು. “ಈ ವರ್ಷವಂತೂ ಬಿಡಿ ಮುಗಿದು ಹೋಯಿತು. ಮುಂದಿನ ಜೂನ್, ಜುಲೈ (2017)ರ ಹೊತ್ತಿಗೆ […]

  September 25, 2016
  ...

  ‘ಗೌಡರ ಬದುಕಿನ ಅದೊಂದು ದಿನ’: ಧೂಳಿನಿಂದ ಎದ್ದು ಬರುತ್ತೀನಿ ಅಂದವರು; ಬಂದೇ ಬಿಟ್ಟರು!

  ”ನಾನು ನೋವನ್ನು ಉಂಡಿದ್ದೀನಿ. ಧೂಳಿನಿಂದ ಎದ್ದು ಬರುತ್ತೀನಿ,” ಹೀಗಂತ ಹೇಳಿದ್ದವರು ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ. ಅವತ್ತು 2015 ರ ಫೆಬ್ರವರಿ 15ನೇ ತಾರೀಖು; ಭಾನುವಾರ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಅಂಚಿನಲ್ಲಿದ್ದ ಜೆಡಿಎಸ್ ಕಚೇರಿಯನ್ನು ಸುಪ್ರಿಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸ್ಥಳಾಂತರಿಸುವ ಕೆಲಸ ಆರಂಭವಾಗಿತ್ತು. ಬೆಳಗ್ಗೆ ಶುರುವಾದ ಕೆಲಸ ಮುಗಿದದ್ದು ಮಧ್ಯರಾತ್ರಿ 1. 45 ರ ಸುಮಾರಿಗೆ. ಹೆಚ್ಚು ಕಡಿಮೆ ಅಷ್ಟೂ ಅವಧಿಯನ್ನು ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗೌಡ, ಕಚೇರಿಯ ಮುಂದೆ ಫೈಬರ್ ಕುರ್ಚಿಯೊಂದರ ಮೇಲೆ ಕುಳಿತುಕೊಂಡು, […]

  September 23, 2016
  ...

  ‘ಕಷ್ಟದಲ್ಲಿದ್ದೇವೆ; ನೀರು ಬಿಡುವುದಿಲ್ಲ’: ಸುಪ್ರಿಂ ತೀರ್ಪಿಗೆ ಸೆಡ್ಡು ಹೊಡೆದ ಶಾಸಕಾಂಗ!

  ‘ಕುಡಿಯುವ ನೀರು ಬಿಟ್ಟು, ಬೇರೆ ಯಾವುದೇ ಕಾರಣಕ್ಕೂ ನೀರು ಒದಗಿಸಲು ಸಾಧ್ಯವಿಲ್ಲ’  ಹೀಗೊಂದು ದೃಢ ನಿರ್ಧಾರವನ್ನು ರಾಜ್ಯದ ಪರವಾಗಿ ವಿಧಾನ ಪರಿಷತ್ತು ಮತ್ತು ವಿಧಾನಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಮೊದಲಿಗೆ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ರವಿ ನಿರ್ಣಯ ಮಂಡಿಸಿದರು. ಇದನ್ನು ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಅನುಮೋದಿಸಿದರು. ಈ ನಿರ್ಣಯವನ್ನು ಸ್ಪೀಕರ್ ಡಿ.ಎಚ್. ಶಂಕರಮೂರ್ತಿ ಅಂಗೀಕರಿಸಿ, ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ. ಇನ್ನು ವಿಧಾನ ಸಭೆಯಲ್ಲಿ ಮೊದಲೇ ತೀರ್ಮಾನಿಸಿದಂತೆ, ವಿಧಾನಸಭೆ ಕಾರ್ಯಕಲಾಪಗಳ ನಿಯಮ 159ರ ಅಡಿಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ […]

  September 23, 2016

Top