An unconventional News Portal.

BALIGA FILES
  ...
  baliga-files
  BALIGA FILES

  ‘ಬಾಳಿಗ ಫೈಲ್ಸ್’: ಅನಧಿಕೃತ ಪಾರ್ಕಿಂಗ್ ವಿಚಾರವನ್ನು ಬೆನ್ನತ್ತಿದ್ದ ಬಾಳಿಗ ಬಲಾಢ್ಯರ ಅಕ್ರಮಗಳನ್ನು ಬಯಲಿಗೆಳೆಯುವ ಹಾದಿಯಲ್ಲಿದ್ದರು!

  ಮಂಗಳೂರಿನಲ್ಲಿ ಹತ್ಯೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ್ ಬಾಳಿಗ ಅವರ ಆಸಕ್ತಿ ಮತ್ತು ಹೋರಾಟದ ವ್ಯಾಪ್ತಿ ಕೇವಲ ವೆಂಕಟರಮಣ ದೇವಸ್ಥಾನ ಮತ್ತು ಕಾಶಿ ಮಠಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ. ಯಾಕೆ ಎಂದರೆ, ನಾಲ್ಕು ವರ್ಷಗಳ ಹಿಂದೆ ಬಾಳಿಗ ತಮ್ಮ ಕೋಡಿಯಾಲ್ ಬೈಲ್ ಮನೆ ಹಾದಿಯನ್ನು ಸಂಪರ್ಕಿಸುವ ರಸ್ತೆಗಳಲ್ಲಿರುವ ಶಿಕ್ಷಣ ಸಂಸ್ಥೆಗಳು, ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಸಮುದಾಯ ಭವನಗಳ ವಿರುದ್ಧ ಸಮರವನ್ನು ಶುರು ಮಾಡಿದ್ದರು. ಅಲ್ಲಿ ನಡೆಯುತ್ತಿದ್ದ ಅಕ್ರಮ ಪಾರ್ಕಿಂಗ್ ಪ್ರಶ್ನೆ ಮಾಡಲು ಹೋಗಿ ಹಲವು ಅಕ್ರಮಗಳನ್ನು ಬಯಲಿಗೆಳೆಯುವ ಹಂತದಲ್ಲಿ ಅವರಿದ್ದರು ಎನ್ನುತ್ತವೆ..

  July 16, 2016
  ...
  1
  BALIGA FILES

  ‘ಬಾಳಿಗ ಫೈಲ್ಸ್’: ಆರೋಪಿ ನರೇಶ್ ಶೆಣೈಗೆ ಸಂಯಮೀಂದ್ರ ತೀರ್ಥರ ಕೃಪಾರ್ಶಿವಾದ ಇತ್ತಾ?

  ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ, ‘ನಮೋ ಬ್ರಿಗೇಡ್’ ಸಂಸ್ಥಾಪಕ ನರೇಶ್ ಶೆಣೈಗೆ ಕಾಶಿ ಮಠದ ಸಂಯಮೀಂದ್ರ ತೀರ್ಥ ಸ್ವಾಮಿಯ ಕೃಪಾರ್ಶೀವಾದ ಇತ್ತಾ? ಹೀಗೊಂದು ಬಲವಾದ ಅನುಮಾನಗಳಿಗೆ ‘ಬಾಳಿಗ ಫೈಲ್ಸ್’ ಎಡೆ ಮಾಡಿಕೊಡುತ್ತಿದೆ. ಮಂಗಳೂರಿನ ರಥಬೀದಿಯಲ್ಲಿರುವ, ಕಾಶಿ ಮಠದ ಸುಪರ್ದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯಿಂದ ಹೊರಗಿದ್ದ ನರೇಶ್ ಶೆಣೈ, ಪ್ರಮುಖ ಪ್ರಕರಣವೊಂದರಲ್ಲಿ ಮಠಕ್ಕೆ ಸಹಾಯ ಮಾಡಿರುವ ಕುರಿತು ಸಾಕ್ಷಿಯೊಂದು ಈಗ ಮೇಲೆದ್ದು ಬಂದಿದೆ. ದೇವಸ್ಥಾನ ಒಳಗೆ 2012ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗೆ ನರೇಶ್ ಶೆಣೈ 50..

  July 12, 2016
  ...
  BALIGA-FILES-1
  BALIGA FILES

  ‘ಬಾಳಿಗ ಫೈಲ್ಸ್’: ಹತ್ಯೆಯಾದ ಮಾಹಿತಿ ಹಕ್ಕು ಹೋರಾಟಗಾರನ ಕಣಜದಿಂದ ಸ್ಫೋಟಕ ದಾಖಲೆಗಳ ಬಹಿರಂಗ!

  ವಿನಾಯಕ ಪಾಂಡುರಂಗ ಬಾಳಿಗ… ಮಾರ್ಚ್ 21, 2016ರ ಮುಂಜಾನೆ ಮಂಗಳೂರಿನ ಕೋಡಿಯಾಲ್ ಬೈಲಿನಲ್ಲಿರುವ ತಮ್ಮ ಮನೆಯ ಬಳಿಯೇ ಕೊಲೆಯಾಗಿ ಹೋದ ನಂತರ ಹೊರಜಗತ್ತಿಗೆ ಪರಿಚಿತವಾದ ಹೆಸರು. ಅವರ ಐಡೆಂಟಿಟಿ ಇರುವುದೇ ಮಾಹಿತಿ ಹಕ್ಕು ಕಾಯ್ದೆಯನ್ನು ಭ್ರಷ್ಟಾಚಾರದ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದ ರೀತಿಯಲ್ಲಿ. ಅವರ ಕೊಲೆ ನಡೆದ ನಂತರ ಮಂಗಳೂರಿನ ಬರ್ಕೆ ಪೊಲೀಸರು ಅವರ ಮನೆಯಲ್ಲಿದ್ದ ಸಾವಿರಾರು ಪುಟಗಳ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಸುಮಾರು 7 ಸಾವಿರ ಪುಟಗಳಿರಬಹುದು ಎಂಬುದು ಒಂದು ಅಂದಾಜು. ಅವುಗಳಲ್ಲಿ ಸುಮಾರು ಒಂದು ದಶಕಗಳ ಕಾಲ ಬಾಳಿಗ..

  July 11, 2016

Top