An unconventional News Portal.

ಕೊಲಂಬಿಯಾ ವಿಮಾನ ಪತನಕ್ಕೆ 76 ಬಲಿ; ಮೃತರಲ್ಲಿ ಬ್ರೆಜಿಲ್ ಫುಟ್ಬಾಲ್ ಆಟಗಾರರು

ಕೊಲಂಬಿಯಾ ವಿಮಾನ ಪತನಕ್ಕೆ 76 ಬಲಿ; ಮೃತರಲ್ಲಿ ಬ್ರೆಜಿಲ್ ಫುಟ್ಬಾಲ್ ಆಟಗಾರರು

ಬ್ರೆಜಿಲ್ ಫುಟ್ಬಾಲ್ ಕ್ಲಬ್ ನ ಆಟಗಾರರೂ ಸೇರಿ 81 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಕೊಲಾಂಬಿಯಾದಲ್ಲಿ ಪತನವಾಗಿದೆ. ವಿಮಾನವು ಬೊಲಿವಿಯಾದಿಂದ ಕೊಲಾಂಬಿಯಾದ ಮೆಡಿಲಿನ್ ನಗರಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.

ವಿಮಾನದಲ್ಲಿದ್ದ 76 ಪ್ರಯಾಣಿಕರು ಸಾವನ್ನಪ್ಪಿದ್ದು, 5 ಜನ ಬದುಕುಳಿದಿದ್ದಾರೆ ಎಂದು ವರದಿಗಳು ಬರುತ್ತಿವೆ.

‘ಕೋಪಾ ಸೂಡಮೆರಕನ್ ಫುಟ್ಬಾಲ್ ಚಾಂಪಿಯನ್ಶಿಪ್’ನ ಫೈನಲ್ ಪಂದ್ಯದಲ್ಲಿ ಆಟವಾಡಲು ಬ್ರೆಜಿಲ್ನ್ ಶೆಪೆಕೋ ನಗರದ ಶೆಪಕೊಯಿನ್ಸ್ ಕ್ಲಬ್ ತಂಡ ಪ್ರಯಾಣ ಬೆಳೆಸುತ್ತಿತ್ತು. ಮೆಡಿಲಿನ್’ನ ಅಟ್ಲೆಂಟಿಕೊ ನಾಷನಲ್ ತಂಡದ ವಿರುದ್ಧ ಬುಧವಾರ ಫೈನಲ್ ಪಂದ್ಯ ಏರ್ಪಾಡಾಗಿತ್ತು. ಆದರೆ ಅದಕ್ಕೂ ಮೊದಲು ಈ ದುರ್ಘಟನೆ ನಡೆದಿದೆ.

ಶೆಪೆಕೊಯಿನ್ಸ್ ತಂಡ 2014ರಲ್ಲಿ ಪ್ರಥಮ ದರ್ಜೆ ತಂಡವಾಗಿ ಭಡ್ತಿ ಪಡೆದಿತ್ತು. ಕಳೆದ ವಾರ ಅರ್ಜೆಂಟಿನಾದ ಸಾನ್ ಲೋರೆಂಜೋ ತಂಡದ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತ್ತು. ಅಂದುಕೊಂಡಂತೆ ನಡೆದಿದ್ದರೆ ಆಟಗಾರರೆಲ್ಲಾ ಬುಧವಾರ ಮೈದಾನದಲ್ಲಿ ಕಾಲ್ಚೆಂಡು ಒದೆಯುತ್ತಿರಬೇಕಾಗಿತ್ತು. ಆದರೆ ಈಗ ಅವರೆಲ್ಲಾ ಸ್ಮಶಾನ ಯಾತ್ರೆ ಹೊರಡುವಂತಾಗಿದೆ.

plane-crass-columbiaಘಟನೆ ಹಿನ್ನಲೆಯಲ್ಲಿ ಬುಧವಾರ ನಡೆಯಬೇಕಾಗಿದ್ದ ದಕ್ಷಿಣಾ ಅಮೆರಿಕಾದ ಖ್ಯಾತ ಸುಡಮೆರಕನ್ ಫುಟ್ಬಾಲ್ ಚಾಂಪಿಯನ್ ಫೈನಲ್ ಪಂದ್ಯವನ್ನು ರದ್ದು ಮಾಡಲಾಗಿದೆ

ವರದಿಗಳ ಪ್ರಕಾರ ಬೊಲಿವಿಯಾದ ‘ಲಾಮಿಯಾ’ ಕಂಪೆನಿಗೆ ಸೇರಿದ ‘ಬ್ರಿಟಿಷ್ ಏರೋಸ್ಪೇಸ್ 146’ ಸಣ್ಣ ವಿಮಾನವಾಗಿದ್ದು, 72 ಪ್ರಯಾಣಿಕರು ಮತ್ತು 9 ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು. ಸ್ಥಳೀಯ ಕಾಲಮಾನ ಮಧ್ಯರಾತ್ರಿ ಕೊಲಂಬಿಯಾದ ಸೆರ್ರೊ ಗಾರ್ಡೊ ಪ್ರದೇಶದಲ್ಲಿ ಪತನವಾಗಿದ್ದು, ಫುಟ್ಬಾಲ್ ತಂಡದ ಮೂವರು ಆಟಗಾರರು ಮಾತ್ರ ಬದುಕುಳಿದಿದ್ದಾರೆ.

ಸಮೀಪದ ವಿಮಾನ ನಿಲ್ದಾಣದ ವರದಿಗಳ ಪ್ರಕಾರ ಎಲೆಕ್ಟ್ರಿಕ್ ಸಮಸ್ಯೆಯಾಗಿರುವುದಾಗಿ ನಿಲ್ದಾಣಕ್ಕೆ ಮಾಹಿತಿ ಬಂದಿತ್ತು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ವಿಮಾನ ಪತನವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೆಟ್ಟಗುಡ್ಡ ಪ್ರದೇಶದಲ್ಲಿ ಈ ಅಪಘಾತ ನಡೆದಿರುವುದರಿಂದ ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆ ಕಷ್ಟವಾಗಿದೆ. ಇನ್ನೂ ಪರಿಹಾರ ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ಜನ ಬದುಕುಳಿದರಬಹುದು ಎಂದು ನಿರೀಕ್ಷಿಸಲಾಗಿದೆ.

Leave a comment

Top