An unconventional News Portal.

‘ದಿ ವೆಜಿಟೇರಿಯನ್’: ಭಿನ್ನ ಆಲೋಚನೆಯ ಕಾದಂಬರಿಗೆ ಮ್ಯಾನ್ ಬೂಕರ್ ಪ್ರಶಸ್ತಿ ಗರಿ!

‘ದಿ ವೆಜಿಟೇರಿಯನ್’: ಭಿನ್ನ ಆಲೋಚನೆಯ ಕಾದಂಬರಿಗೆ ಮ್ಯಾನ್ ಬೂಕರ್ ಪ್ರಶಸ್ತಿ ಗರಿ!

the-vegitarian-novel-1ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ‘ಮ್ಯಾನ್ ಬೂಕರ್’ ಈ ಬಾರಿ ದಕ್ಷಿಣ ಕೋರಿಯಾದ ಲೇಖಕಿ ಹಾನ್ ಕಾನ್ ಪಾಲಾಗಿದೆ.

ಸುಮಾರು 72 ಸಾವಿರ ಡಾಲರ್ ಮೌಲ್ಯದ ಪ್ರಶಸ್ತಿಗೆ ಅವರ ಇಂಗ್ಲಿಷ್ಗೆ ತರ್ಜುಮೆಗೊಂಡ ‘ದಿ ವೆಜಿಟೇರಿಯನ್’ ಕೃತಿ ಪಾತ್ರವಾಗಿದೆ. ಕೃತಿಯ ಅನುವಾದಕಿ ಜತೆ ಅವರು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

45ರ ಹರೆಯದ ಹಾನ್ ಕಾನ್ ಕ್ರೀಯಾಶೀಲ ಬರವಣಿಗೆಯನ್ನು ಪಾಠ ಮಾಡುವ ಶಿಕ್ಷಕಿಯಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಇವರ ಬರಹಗಳಿಗೆ ದಕ್ಷಿಣ ಕೋರಿಯಾದಲ್ಲಿ ದೊಡ್ಡ ಓದುಗ ಬಳಗವಿದೆ. “ನನಗೆ ಸಿಕ್ಕ ಬಹುದೊಡ್ಡ ಗೌರವ ಇದು,” ಎಂದು ಕಾನ್ ಪ್ರಶಸ್ತಿ ಸ್ವೀಕರಿಸಿದ ನಂತರ ಎ.ಎಫ್.ಪಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

‘ದಿ ವೆಜಿಟೇರಿಯನ್’ ಕೃತಿ ವಿಚಿತ್ರ ಕಥಾ ಹಂದರವನ್ನು ಹೊಂದಿರುವ ಕಾದಂಬರಿ. ಇದರ ಮುಖ್ಯ ಪಾತ್ರ ‘ತಾನು ಗಿಡವಾಗಬೇಕು’ ಎಂದು ಬಯಸುವ ಕಥಾ ಹಂದರವನ್ನು ಒಳಗೊಂಡಿದೆ. ಮನುಷ್ಯನಾಗಿ ಹುಟ್ಟಿದ್ದಕ್ಕೆ ಪಶ್ಚಾತಾಪ ಪಟ್ಟುಕೊಂಡು ನಿಸರ್ಗದ ಜತೆ ಒಂದಾಗುವ ಬಯಕೆಯನ್ನು ಇಡೀ ಕಾದಂಬರಿ ವರ್ಣಿಸುತ್ತ ಹೋಗುತ್ತದೆ.

“ಇದೊಂದು ಅತಿರೇಕದ ಆಲೋಚನೆ. ನಿರೂಪಿಸುತ್ತಾ ಹೋಗುವಾಗ ನನ್ನೊಳಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಮನುಷ್ಯನಾಗಿ ಬದುಕುವುದಕ್ಕೆ ಇರುವ ಸವಾಲುಗಳು ಕಣ್ಮುಂದೆ ತೇಲಿ ಹೋಗುತ್ತಿದ್ದವು,” ಎಂದು ಕಾದಂಬರಿಗಾರ್ತಿ ಮೆಲುಕು ಹಾಕಿದ್ದಾರೆ.

ದಕ್ಷಿಣ ಕೊರಿಯಾದ ಮೊದಲ ಬೂಕರ್ ಪ್ರಶಸ್ತಿ ವಿಜೇತೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಇದೇ ಮೊಲದ ಬಾರಿಗೆ ಬೂಕರ್ ಪ್ರಶಸ್ತಿ ಆಯ್ಕೆ ಸಮಿತಿ ಅನುವಾದವನ್ನು ಗಣನೆಗೆ ತೆಗೆದುಕೊಂಡಿದೆ. ಹಾನ್ ಕಾನ್ ಪುಸ್ತಕದ ಅನುವಾದಕಿ ಡಿಬೋರಾ ಸ್ಮಿತ್ ಕೂಡ ಪ್ರಶಸ್ತಿಯಲ್ಲಿ ಪಾಲು ಪಡೆದುಕೊಂಡಿದ್ದಾರೆ. ಅವರು ಮೂರು ವರ್ಷಗಳ ಹಿಂದಷ್ಟೆ ಕೊರಿಯಾ ಭಾಷೆಯನ್ನು ಕಲಿಯಲು ಪ್ರಾರಂಭಿಸಿದ್ದರು ಎಂಬುದು ಗಮನಾರ್ಹ.

“ನಾನು ಅನುವಾದ ಮಾಡಿದ ಮೊದಲ ಕೃತಿ ಇದು. ಯಾವುದೇ ಅನುವಾದಕರಿಗೆ ಸಲ್ಲಬಹುದಾದ ಬಹುದೊಡ್ಡ ಗೌರವ ನನಗೀಗ ಸಿಕ್ಕಿದೆ,” ಎಂದು ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ.

“ನಾನು ಕೊರಿಯಾ ಭಾಷೆಯನ್ನು ಕಲಿಯಲು ಶುರು ಮಾಡಿದ್ದು, ಇಂಗ್ಲಿಷ್ ಆಚೆಗೆ ಇರುವ ಜಗತ್ತನ್ನು ಅರ್ಥ ಮಾಡಿಕೊಳ್ಳಲು. ಅನುವಾದಗೊಂಡಿದ್ದ ಕೃತಿಗಳನ್ನು ಓದುತ್ತಿದ್ದೆ. ಆ ಸಮಯದಲ್ಲಿ ಇಂಗ್ಲಿಷ್ ಆಚೆಗೆ ಭಿನ್ನ ಆಲೋಚನೆಯ ಜಗತ್ತು ಇದೆ ಎಂಬುದು ಅರ್ಥವಾಗುತ್ತಿತ್ತು,” ಎಂಬುದು ಅವರ ಮಾತುಗಳು.

Leave a comment

Top