An unconventional News Portal.

ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹೆಣ್ಣು ಮಕ್ಕಳು: ‘ಹರಾಮಿ’ ಆಚರಣೆ ವರದಿಯಲ್ಲಿ ಬಹಿರಂಗ

ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹೆಣ್ಣು ಮಕ್ಕಳು: ‘ಹರಾಮಿ’ ಆಚರಣೆ ವರದಿಯಲ್ಲಿ ಬಹಿರಂಗ

ಕಳೆದ ಒಂದುವರೆ ವರ್ಷಗಳಲ್ಲಿ ನೈಜೀರಿಯಾ ಮೂಲದ ಮುಸ್ಲಿಂ ಭಯೋತ್ಪಾದಕ ಸಂಘಟನೆ ‘ಬೋಕೊ ಹರಾಮ್’ ಮಕ್ಕಳನ್ನು ಆತ್ಮಹತ್ಯಾ ಬಾಂಬ್ ದಾಳಿಗೆ ಬಳಸಿಕೊಳ್ಳುತ್ತಿರುವ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ನೈಜೀರಿಯಾದ ಚಿಕೋಬ್ ಎಂಬಲ್ಲಿ ವಸತಿ ಶಾಲೆಯಿಂದ ಸುಮಾರು 200 ಹೆಣ್ಣು ಮಕ್ಕಳನ್ನು ಬೋಕೊ ಹರಾಮ್ ಸಂಘಟನೆ ಅಪಹರಣ ನಡೆಸಿದ ಘಟನೆಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವಿಶ್ವಸಂಸ್ಥೆ ‘ಬಿಯಾಂಡ್ ಚಿಬೋಕ್’ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ 2014 ಹಾಗೂ 2015ರಲ್ಲಿ ಬೋಕೊ ಹರಾಮ್ ಸಂಘಟನೆ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಗಳು ಹಾಗೂ ಅದರಲ್ಲಿ ಬಳಕೆಯಾದ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಆತಂಕಕಾರಿ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ.

“2015ರಲ್ಲಿ ಬೋಕೊ ಹರಾಮ್ 151 ಆತ್ಮಹತ್ಯಾ ದಾಳಿಗಳನ್ನು ನೈಜೀರಿಯಾ, ಛಾಡ್ ಪ್ರದೇಶಗಳಲ್ಲಿ ನಡೆಸಿದೆ. ಪ್ರತಿ ಐದು ದಾಳಿಗಳಲ್ಲಿ ಒಂದನ್ನು ಮಕ್ಕಳು ಕೈಲಿ ಮಾಡಿಸಲಾಗಿದೆ. ಅದರಲ್ಲೂ ದಾಳಿಗೆ ಬಳಕೆಯಾದ ಮಕ್ಕಳ ಪೈಕಿ ಶೇ. 75ರಷ್ಟು ಹೆಣ್ಣು ಮಕ್ಕಳು. 8 ವರ್ಷದ ಒಳಗಿನ ವಯೋಮಾನದವರು,” ಎಂದರು ವರದಿ ಹೇಳಿದೆ.

2002ರ ಸುಮಾರಿಗೆ ನೈಜೀರಿಯಾವನ್ನು ಕೇಂದ್ರವಾಗಿಟ್ಟುಕೊಂಡು ಹುಟ್ಟಿಕೊಂಡ ಸಂಘಟನೆ ಆರಂಭದಲ್ಲಿ ಪಶ್ಚಿಮ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿತ್ತು. ಸ್ಥಳೀಯ ಭಾಷೆ ‘ಹೌಸ’ದಲ್ಲಿ ಬೋಕೊ ಹರಾಮ್ ಎಂದರೆ- ಪಶ್ಚಿಮ ಶಿಕ್ಷಣ ವ್ಯವಸ್ಥೆಯ ನಿಷೇಧ ಎಂಬ ಅರ್ಥ ಬರುತ್ತದೆ.

2009ರಲ್ಲಿ ಶಸ್ತ್ರಾಸ್ತ್ರ ಹೋರಾಟವನ್ನು ಆರಂಭಿಸಿದ ಬೋಕೊ ಹರಾಮ್ ಇಲ್ಲೀವರೆಗೆ ಸಾವಿರಾರು ಜನರ ಪ್ರಾಣ ಹಾನಿಗೆ ಕಾರಣವಾಗಿದೆ. ನೈಜೀರಿಯಾ, ಛಾಡ್ ದೇಶಗಳ ಕೆಲವು ಭೂ ಭಾಗಗಳನ್ನು ಇದೀಗ ನಿಯಂತ್ರಿಸುತ್ತಿದೆ. ಇತ್ತೀಚೆಗೆ ‘ಇಸ್ಲಾಮಿಕ್ ಸ್ಟೇಟ್’ ಜತೆ ಹೊಂದಾಣಿಗೆ ಮಾಡಿಕೊಂಡಿದೆ. ಸದ್ಯ ಬೋಕೊ ಹರಾಮ್ ಅನ್ನು ‘ಇಸ್ಲಾಮಿಕ್ ಸ್ಟೇಟ್ (ಪಶ್ಚಿಮ ಆಫ್ರಿಕಾ) ಎಂದು ಕರೆಯಲಾಗುತ್ತಿದೆ.

ಕಳೆದ ಎರಡು ವರ್ಷಗಳ ಅಂತರದಲ್ಲಿ ಸುಮಾರು 13 ಲಕ್ಷ ಜನ ಬೋಕೊ ಹರಾಮ್ ಕಾರ್ಯಾಚರಣೆಯಿಂದ ನಲುಗಿ ಹೋಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳನ್ನು ಬೋಕೊ ಹರಾಮ್ ಅಪಹರಿಸುವ ಘಟನೆಗಳು ಈ ಭಾಗದಲ್ಲಿ ಸಾಮಾನ್ಯವಾಗಿದೆ. ಆಮ್ನೆಸ್ಟಿ ಇಂಟರ್ನ್ಯಾಷನಲ್ ಬಿಡುಗಡೆ ಮಾಡಿರುವ ವರದಿಯಲ್ಲಿ, ‘2014ರಿಂದ ಈವರೆಗೆ 2000 ಸಾವಿರ ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಬೋಕೊ ಹರಾಮ್ ಅಪಹರಿಸಿದೆ. ಇವರನ್ನು ತಮ್ಮ ಕ್ಯಾಂಪ್ಗಳಲ್ಲಿ ಅಡುಗೆಗೆ ಹಾಗೂ ಲೈಂಗಿಕ ದಾಸ್ಯಕ್ಕೆ ಬಳಸಿಕೊಳ್ಳುಲಾಗುತ್ತಿದೆ,’ ಎಂದು ಹೇಳಿದೆ.

“ಗಂಡು ಮಕ್ಕಳಿಗೆ ಶಸ್ತ್ರ ನೀಡಿ, ತಮ್ಮದೇ ಕುಟುಂಬದ ಮೇಲೆ ದಾಳಿ ನಡೆಸಲು ಬಿಡಲಾಗುತ್ತದೆ. ಆ ಮೂಲಕ ಅವರ ನಿಷ್ಠೆಯನ್ನು ಸಂಘಟನೆ ಪರೀಕ್ಷಿಸುತ್ತಿದೆ. ಹೆಣ್ಣು ಮಕ್ಕಳಿಗೆ ಮಾದಕ ದ್ರವ್ಯ ನೀಡಿ, ದೇಹಕ್ಕೆ ಬಾಂಬ್ ಕಟ್ಟಿ, ಆತ್ಮಹತ್ಯಾ ದಾಳಿಗಳಿಗೆ ಕಳುಹಿಸಲಾಗುತ್ತಿದೆ. ಕೆಲವರನ್ನು ಒತ್ತಾಯ ಪೂರ್ವಕವಾಗಿ ಲೈಂಗಿಕ ಚಟುವಟಿಗೆಗಳಿಗೆ ಬಳಸಿಕೊಳ್ಳಲಾಗುತ್ತಿದೆ,” ಎಂದು ವಿಶ್ವಸಂಸ್ಥೆಯ ಹೊಸ ವರದಿ ಬಹಿರಂಗಪಡಿಸಿದೆ.

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top