An unconventional News Portal.

100 ವರ್ಷ ಕಳೆದ ಮೇಲೆ ಬೈಕುಗಳ ಹೇಗಿರುತ್ತವೆ?: ಸುಂದರ ಕಲ್ಪನೆ ಕಟ್ಟಿಕೊಟ್ಟ ಬಿಎಂಡಬ್ಲ್ಯೂ!

100 ವರ್ಷ ಕಳೆದ ಮೇಲೆ ಬೈಕುಗಳ ಹೇಗಿರುತ್ತವೆ?: ಸುಂದರ ಕಲ್ಪನೆ ಕಟ್ಟಿಕೊಟ್ಟ ಬಿಎಂಡಬ್ಲ್ಯೂ!

ಭವಿಷ್ಯದ ಬೈಕ್ ಹೇಗಿರಲಿದೆ? ಹೇಗಿರಬೇಕು? ಹೀಗೊಂದು ಪ್ರಶ್ನೆ ಇಟ್ಟುಕೊಂಡು ಸಂಶೋಧನೆಗೆ ಇಳಿದ ಕಾರು ಕಂಪೆನಿ ಬಿಎಂಡಬ್ಲ್ಯೂ ಸೂಪರ್ ಬೈಕ್ ಒಂದರ ಪರಿಕಲ್ಪನೆಯನ್ನು ಬಿಡುಗಡೆ ಮಾಡಿದೆ. ಸಾಮಾನ್ಯಕ್ಕಿಂತ ಭಿನ್ನವಾದ, ನೋಡಲು ಅತ್ಯಾಕರ್ಷಕವಾಗಿರುವ ಈ ವಿಶೇಷ ತಂತ್ರಜ್ಞಾನಗಳ ಬೈಕ್ನ ಕಲ್ಪನೆಯೇ ಮೋಡಿ ಮಾಡುತ್ತಿದೆ.

ಬಿಎಂಡಬ್ಲ್ಯೂ ತಯಾರಿಸಲು ಹೊರಟಿರುವ ಬೈಕ್ ಇನ್ನೂ ಪ್ಲಾನಿಂಗ್ ಹಂತದಲ್ಲಿದೆ. ಈ ಸೊಗಸಾದ ಕಲ್ಪನೆಗೆ ‘ವಿಷನ್ ನೆಕ್ಸ್ಟ್ 100’ ಎಂದು ಹೆಸರಿಟ್ಟಿರುವ ಬಿಎಂಡಬ್ಲ್ಯೂ ಮುಂದಿನ ನೂರು ವರ್ಷಗಳಲ್ಲಿ ಈ ರೀತಿಯ ಬೈಕಗಳು ರಸ್ತೆಗಿಳಿಯಲಿವೆ ಎಂದು ಸಾರಿದೆ.

ಕಲ್ಪನೆಗೆ ತಂತ್ರಜ್ಞಾನದ ಸ್ಪರ್ಷ

bmw-motorrad-vision-next-100ಬಿಎಂಡಬ್ಲ್ಯೂನ ಕನಸಿನ ಯೋಜನೆಯಲ್ಲಿ ಹಲವು ವಿಶೇಷತೆಗಳಿವೆ. ಮೊದಲಿಗೆ ಇಲ್ಲಿ ಹೆಲ್ಮೆಟ್ ಹಾಗೂ ಸುರಕ್ಷತಾ ಬಟ್ಟೆಗಳನ್ನು ಧರಿಸದೇ ಪ್ರಯಾಣ ಮಾಡುವುದಕ್ಕೆ ಅನುಕೂಲವಾಗುವಂತ ಬೈಕಿನ ವಿನ್ಯಾಸಕ್ಕೆ ಒತ್ತು ನೀಡಲಾಗಿದೆ. ಇದೆಲ್ಲಾ ಸಾಧ್ಯವಾಗುವುದು ಹೇಗೆ?

ಬೈಕಿನಲ್ಲಿ ಅತ್ಯಾಧುನಿಕ ಸೆನ್ಸಾರುಗಳೂ ಇರಲಿವೆ. ಈ ಸೆನ್ಸಾರುಗಳು ಇತರ ವಾಹನಗಳೊಂದಿಗೆ ಸಂವಹನ ನಡೆಸಲಿವೆ. ಈ ಮೂಲಕ ಸಂಭವಿಸಬಹುದಾದ ಅಪಘಾತಗಳನ್ನು, ಅವಘಡಗಳನ್ನು ತಪ್ಪಿಸಲಿವೆ. ಇದಿಷ್ಟೇ ಅಲ್ಲದ ಬೈಕ್ ಸಾಗುವ ದಾರಿ, ರಸ್ತೆಯಲ್ಲಿರುವ ಹೊಂಡ, ಡಿವೈಡರ್ಗಳ ಮಾಹಿತಿಯನ್ನೂ ಇವು ರವಾನಿಸಲಿವೆ. ತಲೆ ಮತ್ತು ಕಣ್ಣಿನ ಚಲನೆಯನ್ನು ಆಧರಿಸಿ ಕನ್ನಡಕದಂತಿರುವ ಪರದೆಯಲ್ಲಿ ಈ ಮಾಹಿತಿಗಳನ್ನು ನೋಡಿ ಚಾಲಕ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಬೈಕಿನ ಇನ್ನೊಂದು ವಿಶೇಷವೆಂದರೆ ಇದು ಯಾವುದೇ ಕಾಲಕ್ಕೂ ಬೀಳುವುದಿಲ್ಲ. ಸ್ಟ್ಯಾ<ಡ್ ಇಲ್ಲದೆಯೂ ನೆಟ್ಟಗೆ ನಿಂತುಕೊಳ್ಳಲು ಸಮತೋಲನ ಕಾಪಾಡುವಂಥಹ ಚಕ್ರಗಳು ಇದರಲ್ಲಿರಲಿವೆ. ಹೀಗಾಗಿ ಬೈಕ್ ನಿಲ್ಲಿಸಿದಾಗ ಚಾಲಕ ನೆಲಕ್ಕೆ ಕಾಲೂರಬೇಕೆಂದೇನೂ ಇಲ್ಲ.

ಇದೊಂದು ಪರಿಸರ ಸ್ನೇಹಿ ಬೈಕ್ ಅನ್ನುವುದು ಇನ್ನೊಂದು ವಿಶೇಷ. ಇಂಗಾಲದ ಡೈ ಆಕ್ಸೈಡನ್ನು ಈ ಬಿಎಂಡಬ್ಲ್ಯೂನ ಬೈಕ್ ಗಾಳಿಗೆ ಬಿಡುವುದಿಲ್ಲ.

ಭವಿಷ್ಯವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಹೊಸದಾಗಿ ಈ ಅತ್ಯಾಧುನಿಕ, ಐಶಾರಾಮಿ ಬೈಕನ್ನು ತಯಾರಿಸಲಾಗುತ್ತಿದೆ. ಹೀಗಿದ್ದೂ ಇದರ ವಿನ್ಯಾಸವನ್ನು ಈಗಾಗಲೇ ಬಳಕೆಯಲ್ಲಿರವ ಬೈಕುಗಳಿಂದಲೇ ಎರವಲು ಪಡೆಯಲಾಗಿದೆ. ಬೈಕಿನ ದೇಹದ ವಿನ್ಯಾಸವನ್ನು ಸುಂದರವಾಗಿ ತಯಾರು ಮಾಡಲಾಗುತ್ತದೆ.

ಸೆನ್ಸಾರ್ ಇರುವ ಕನ್ನಡಕಗಳು

ಸೆನ್ಸಾರ್ ಇರುವ ಕನ್ನಡಕಗಳು

ಸದ್ಯಕ್ಕೆ ಇದಿನ್ನೂ ಕಲ್ಪನೆಯ ಹಂತದಲ್ಲೇ ಇದೆ. ಹಾಗಾಗಿ ಈಗಲೇ ಇದರ ಬಗ್ಗೆ ಸಿನಿಕರಾಗಬೇಕಾಗಿಲ್ಲ.

‘ವಿಷನ್ ನೆಕ್ಸ್ಟ್ 100’ ಎಂಬುದು ಬಿಎಂಡಬ್ಲ್ಯೂನ ಕನಸಿನ ಕೂಸಾಗಿದ್ದು ಇದಕ್ಕೂ ಮೊದಲು ವಿಚಿತ್ರವಾಗಿರುವ ಕಾರಿನ ಕಲ್ಪನೆಯನ್ನು ಇದೇ ಬಿಎಂಡಬ್ಲ್ಯೂ ನೀಡಿತ್ತು. ಇದೀಗ ಬೈಕಿನ ಸರಣಿ.

ತನ್ನ ವಿಶೇಷ ಬೈಕಿನ ಬಗ್ಗೆ ಸ್ವತಃ ಬಿಎಂಡಬ್ಲ್ಯೂ ತಯಾರಿಸಿರುವ ವೀಡಿಯೋ ಇಲ್ಲಿದೆ..

 

Top