An unconventional News Portal.

ಆ ಹೃದಯ ಬಡಿತ ನಿಲ್ಲಿಸಿದ್ದು ನಿಮಗಾಗಿ..!

ಆ ಹೃದಯ ಬಡಿತ ನಿಲ್ಲಿಸಿದ್ದು ನಿಮಗಾಗಿ..!

ಲೆದರ್ ಬ್ಯಾಗ್, ಲೆದರ್ ಬೆಲ್ಟ್, ಲೆದರ್ ಜಾಕೇಟ್, ಶೂಸ್ ಹೀಗೆ ಚರ್ಮದಿಂದ ತಯಾರಿಸಿರುವ ವಸ್ತುಗಳೆಂದರೆ ಯಾರಿಗೆ ತಾನೆ ಇಷ್ಟವಾಗಲ್ಲ. ಅದರಲ್ಲೂ ಇತ್ತೀಚೆಗಂತೂ ಚರ್ಮದ ವಸ್ತುಗಳೆಂದರೆ ಒಂದು ರೀತಿಯ ಟ್ರೆಂಡ್ ಆಗಿ ಬಿಟ್ಟಿದೆ. ಹೀಗಾಗಿ ಮಾರುಕಟ್ಟೆಯಲ್ಲೂ ಈ ರೀತಿಯ ಚರ್ಮದಿಂದ ತಯಾರಿಸಿರುವ ವಸ್ತುಗಳಿಗೆ ಭಾರಿ ಬೇಡಿಕೆ ಇದೆ.

 

ಚರ್ಮದಿಂದ ತಯಾರಿಸಿರುವ ವಸ್ತುಗಳಿಗೆ ಬೇಡಿಕೇನೋ ಇರುವುದು ನಿಜ. ಆದರೆ ಆ ಸುಂದರವಾದ ಬ್ಯಾಗುಗಳು, ಬೆಲ್ಟ್’ಗಳು ತಯಾರಾಗುವ ಬಗೆಯನ್ನು ನಾವು ಯೋಚನೆ ಮಾಡುವುದಿಲ್ಲ. ಯಾಕೆಂದರೆ ನಮ್ಮ ಸೌಂದರ್ಯಕ್ಕೆ ಭೂಷಣವಾಗುವ ಈ ಎಲ್ಲಾ ವಸ್ತುಗಳಿಗಾಗಿ ಮುಗ್ದ ಜೀವವೊಂದು ಪ್ರಾಣತ್ಯಾಗ ಮಾಡಿರುತ್ತದೆ. ಅರಿವೇ ಇಲ್ಲದೆ ನಮಗಾಗಿ ನಮ್ಮ ಬಾಹ್ಯ ಸೌದರ್ಯಕ್ಕಾಗಿ ಬಲಿದಾನ ನಡೆದು ಹೋಗಿರುತ್ತದೆ.

ಹೀಗೆ ಪ್ರಾಣಿಗಳ ಚರ್ಮದಿಂದ ತಯಾರಿಸಿರುವ ಉತ್ಪನ್ನಗಳನ್ನು ಕೊಳ್ಳಬೇಕಾದರೆ ನಮಗೆ ಯಾವುದೇ ರೀತಿಯ ಕೀಳರಿಮೆಯಾಗಲಿ, ಅಂಜಿಕೆಯಾಗಲಿ ಅಥವಾ ಕನಿಷ್ಟ ಪಕ್ಷ ಪಾಪ ಪ್ರಜ್ಞೆಯಾಗಲಿ ಇರುವುದೇ ಇಲ್ಲ. ನನ್ನ ದುಡ್ಡು ನನ್ನ ಹಕ್ಕು ಎಂಬ ದರ್ಪವನ್ನು ತೋರಿಸುತ್ತೇವೆ. ಹಾಗಾಗಿ ಮನುಷ್ಯನ ಈ ರೀತಿಯ ಭಾವನೆಗೆ ಕಡಿವಾಣ ಹಾಕಲು ಓಗಿಲ್ವೇ, ಮದರ್ ಎಡ್ವರ್ಟೈಸಿಂಗ್ ಬ್ಯಾಂಕಾಕ್ ಮತ್ತು ಏಷ್ಯಾ ಪ್ರಾಣಿ ದಯಾ ಸಂಘವಾದ ‘ಪೇಟಾ’ ಹೊಸ ವಿಧಾನವೊಂದನ್ನು ಕಂಡುಕೊಂಡಿವೆ.

ಈ ಮೂರೂ ಸಂಘಟನೆಗಳು ಯಾವ ರೀತಿಯಲ್ಲಿ ಮನುಷ್ಯರ ಸಂವೇದನೆಗಳಿಗೆ ತಾಕಲು ಹೊರಟಿವೆ ಎಂದರೆ ನಿಮಗೆ ಆಶ್ಚರ್ಯವಾದೀತು.  ಚೀನಾದ ಕೆಲ ಪ್ರತಿಷ್ಟಿತ ಮಾಲ್ಗಳಲ್ಲಿ ಲೆದರ್ ನಿಂದ ತಯಾರಿಸಿರುವ ಬ್ಯಾಗ್ ಗಳನ್ನು ಪ್ರದರ್ಶನಕ್ಕೆ ಇಡುತ್ತಾರೆ. ಆದರೆ ಈ ಚರ್ಮದ ಉತ್ಪನ್ನಗಳು ನೋಡಲು ಸಾಮಾನ್ಯ ಲೆದರ್ ಉತ್ಪನ್ನಗಳಂತೆ ಕಂಡರೂ ಅದನ್ನು ಬಿಚ್ಚ ನೋಡದವರು ಮಾತ್ರ ಖಂಡಿತಾ ಬೆಚ್ಚಿ ಬೀಳುತ್ತಾರೆ. ಇದಕ್ಕೆ ಕಾರಣ ಯಾವ ಪ್ರಾಣಿಯಿಂದ ಉತ್ಪನ್ನಗಳನ್ನು ತಯಾರಿಸಿರುತ್ತಾರೋ ಅದೇ ಪ್ರಾಣಿಯ ಹೃದಯ ಆ ಬ್ಯಾಗ್, ಜಾಕೇಟ್ ಅಥವಾ ಪರ್ಸ್ ನ ಒಳಗೆ ಬಡಿಯುತ್ತಿರುವ ಹಾಗೆ ಕಲೆಯನ್ನು ನಿರ್ಮಿಸಲಾಗಿತ್ತು.

ಈ ರೀತಿಯ ಪ್ರಯತ್ನದಿಂದಾಗಿ ಅಲ್ಲಿನ ಜನರ ವರ್ತನೆಯೇ ಬದಲಾಗಿ ಹೋಯಿತು. ಅವರೊಳಗಿನ ಪ್ರಜ್ಞೆ ಜಾಗೃತಿಗೊಂಡಿತ್ತು. ಮತ್ತೊಮ್ಮೆ ಚರ್ಮದ ಬ್ಯಾಗ್ ಗಳನ್ನು ಕೊಳ್ಳಲು ಯೋಚಿಸುವ ಮುನ್ನ ಅವರ ಮನಸ್ಸನ್ನು ಎಚ್ಚರಿಸುವ ಕೆಲಸ ಮಾಡುವಂತೆ ಆಯಿತು ಎನ್ನುತ್ತಾರೆ ಆಯೋಜಕರು. ಅದರ ಕೆಲವೊಂದು ಚಿತ್ರಗಳು ಇಲ್ಲಿವೆ.

insta1

behind-leather-bag-anti-animal-cruelty-campaign-peta-asia-9

Top